ಅಚ್ಚರಿ ಎಂಬಂತೆ ಇ ಅಣ್ಣಾಮಲೈ ಅವರ ಮ್ಯಾನೇಜಿಂಗ್ ಮಲ್ಟಿಲಿಂಗ್ಯುಅಲಿಸಂ ಇನ್ ಇಂಡಿಯ ಎಂಬ ಕೃತಿಗೆ ಮುನ್ನುಡಿ ಬರೆದ ಪ್ರಬಲ್ ದಾಸ್ಗುಪ್ತಾ ಹಾಗೂ ಭಾಷಾಂತರ ಕುರಿತು ಬರೆದ ಜರ್ಮನಿಯ ಮಾರ್ಕ್ಸ್ವಾದಿ ಸಾಹಿತ್ಯ ವಿಮರ್ಶಕ ವಾಲ್ಟರ್ ಬೆಂಜಮಿನ್ ಅವರ ಚಿಂತನೆ ಮತ್ತು ವಾದಗಳ ನಡುವೆ ಕೆಲವು ಸಾಮ್ಯಗಳಿವೆ. ಒಬ್ಬರ ಕೃತಿ ಭಾಷಾಶಾಸ್ತ್ರದಲ್ಲಿ ಕನಿಷ್ಠಪಕ್ಷ ಪ್ರಾಥಮಿಕ ತಿಳಿವಳಿಕೆಯನ್ನು ಬಹುಭಾಷಿಕತ್ವ ನಿರೀಕ್ಷಿಸುವುದರಿಂದ ಹಾಗೂ ಇನ್ನೊಬ್ಬರ ಕೃತಿ ಭಾಷೆಯನ್ನು ಸಾಹಿತ್ಯಕ್ಕೂ ಭಾಷಾಂತರಕ್ಕೂ ಜೋಡಿಸಲು ಯತ್ನಿಸುವುದರಿಂದ ಈ ಎರಡು ವಿಚಾರ ಪಂಥಗಳನ್ನು ಭಿನ್ನವೆಂದು ಪರಿಗಣಿಸಲಾಗಿದೆ. ವಿಚಾರ ಸಂಕಿರಣದ ವಿಷಯ ಬಹುಭಾಷಿಕತ್ವ ಹಾಗೂ ಭಾಷಾಂತರವಾದ ಕಾರಣ ಸಂಬಂಧವಿಲ್ಲದಂತೆ ಅನಿಸುವ ಈ ಎರಡು ಕ್ಷೇತ್ರಗಳನ್ನು ಹೋಲಿಸಿ ವಿಶೇಷವಾಗಿ ಸೈದ್ಧಾಂತಿಕ ದೃಷ್ಟಿಯಿಂದ ಹೇಗೆ ಅವೆರಡು ಪರಸ್ಪರ ಸಂಬಂಧಹೊಂದಿವೆ ಹಾಗೂ ಒಂದಕ್ಕೊಂದು ಹೇಗೆ ಪೂರಕವಾಗಿವೆ ಎಂಬ ಬಗ್ಗೆ ಬೆಳಕು ಚೆಲ್ಲಲು ಇಲ್ಲಿ ಉದ್ದೇಶಿಸಿದ್ದೇನೆ.
“1947ರಲ್ಲಿ ರಾಜಧಾನಿ ನಗರದಿಂದ ಪ್ರಧಾನವಾಗಿ ಭಾರತ ರಾಷ್ಟ್ರೀಯ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿ ಅನಂತರ ಅಪ್ರಧಾನವಾಗಿ ಉಪರಾಷ್ಟ್ರೀಯ ಪ್ರದೇಶಗಳಿಗೂ ಸ್ವಾತಂತ್ರ್ಯ ವ್ಯಾಪಿಸಿತು”[i]
ಎಂದು ಹೇಳುವ ಮೂಲಕ ಪ್ರಬಲ್ ದಾಸ್ಗುಪ್ತಾ ತಮ್ಮ ಮುನ್ನುಡಿಯನ್ನು ಆರಂಭಿಸುತ್ತಾರೆ. ಇಲ್ಲಿ ನಾನು ದಕ್ಷಿಣ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಜನರನ್ನು ಪ್ರಭಾವಿಸಿದ ಚಿಂತಕ ಪೆರಿಯಾರ್ ಹೇಳಿದ-ಭಾರತದ ಸ್ವಾತಂತ್ರ್ಯ ಎಂಬುದು ಮೇಲು ಜಾತಿಯ ಪ್ರಯತ್ನವಾದ್ದರಿಂದ ತಾನು ಭಾರತದ ಕೆಳ ಜಾತಿಗಳ ರಾಜಕೀಯಕ್ಕಾಗಿ ಹೋರಾಡಿದ ಕಾರಣದಿಂದ ಭಾರತದ ಮೇಲು ಜಾತಿ ಮತ್ತು ಕೆಳ ಜಾತಿಗಳ ಯುಗಳ ಸಾಮಾಜಿಕ ವಾಸ್ತವವನ್ನು ಗ್ರಹಿಸಲು ತಮಗೆ ಸಾಧ್ಯವಾಯಿತು-ಎಂಬ ಮಾತನ್ನು ಹೋಲಿಸಲು ಯತ್ನಿಸಿದ್ದೇನೆ. ಭಾಷಿಕ ಸಂಗತಿಯನ್ನು ರಾಜಕೀಯದೊಂದಿಗೆ ತಳಕು ಹಾಕಲು ಈ ಭಾಷಿಕ ವಿದ್ವಾಂಸರು ಸಾಕಷ್ಟು ಒಳನೋಟಗಳನ್ನು ನೀಡಿದ್ದರೂ ಪೆರಿಯಾರ್ರನ್ನು ಅವರು ಗಮನಿಸುವುದಿಲ್ಲ; ಆದರೆ ಇಬ್ಬರ ವಿಚಾರದ ಧಾರೆಯಲ್ಲಿ ಬಳಕೆಯಾದ ಪದಪುಂಜಗಳಲ್ಲಿ ಸಾಮ್ಯವುಳ್ಳ ಧ್ವನಿ ಕೇಳಿಸುತ್ತದೆ. ವಿದ್ವಾಂಸರು, ಅದರಲ್ಲೂ ವಿಶೇಷವಾಗಿ ಪೆರಿಯಾರ್ರನ್ನು ಉಪೇಕ್ಷಿಸಿ ಉಪ ರಾಷ್ಟ್ರೀಯತೆಯ ಗುಂಪುಗಳ ನಡುವೆ ಕೆಲಸ ಮಾಡಿದ ಭಾಷಾಶಾಸ್ತ್ರಜ್ಞರು ಪ್ರಬಲ್ ದಾಸ್ಗುಪ್ತಾ ಅವರ ಶಬ್ದಗಳನ್ನು ಬಳಸಿ ಅವರಿಗೆ ಹೊಸ ಮಾರ್ಗ ರೂಪಿಸಿದರು. ಸ್ವತಃ ಬೀದಿ ಹೋರಾಟಗಾರ ಹಾಗೂ ಚಿಂತಕರಾದ ಪೆರಿಯಾರ್ರನ್ನು ಮೆಚ್ಚುವ ಈ ಬಹುಶ್ರುತ ಭಾಷಾಶಾಸ್ತ್ರಜ್ಞ ನವ ಭಾರತವನ್ನು ದೆಹಲಿಯಲ್ಲಿ ಕುಳಿತು ಭಾಷಿಕ ರಾಜ್ಯಗಳನ್ನು ಚಿತ್ರಿಸಿ, ಅದನ್ನು ಅಪ್ರಧಾನ ರಾಜ್ಯ ರಾಜಧಾನಿಗಳಿಗೆ ವಹಿಸಿದಂತೆ” ವರ್ಣಿಸುತ್ತಾರೆ. ಇನ್ನೂ ಮುಂದುವರೆದು
ಅವರು “ಪ್ರತಿಯೊಂದು ನಿದರ್ಶನದಲ್ಲೂ ಪ್ರಧಾನ ಭಾಷೆ ಹಾಗೂ ಗಣ್ಯರ ನಿಯಂತ್ರಣದಲ್ಲಿ ತನ್ನ ವ್ಯವಹಾರವಿದ್ದು, ಅದು ಪ್ರದೇಶಗಳನ್ನು ನಿರ್ವಹಿಸುತ್ತದೆ ಎಂಬಂತೆ ದೆಹಲಿ ಇತರ ಪ್ರದೇಶಗಳೊಂದಿಗೆ ವರ್ತಿಸುತ್ತದೆ” ಎನ್ನುತ್ತಾರೆ. ಹೀಗಾಗಿ ಬಹುಸಂಸ್ಕೃತಿಯ ನಿರ್ವಹಣೆ ಎನ್ನುವುದು ನಿಸ್ಸಂಶಯವಾಗಿ ಸಣ್ಣ ಉಪ ರಾಷ್ಟ್ರೀಯ ಗುಂಪುಗಳ ಹಾಗೂ ಬುಡಕಟ್ಟುಗಳಂಥ ಇನ್ನೂ ಸಣ್ಣ ಗುಂಪುಗಳಲ್ಲಿನ ಶ್ರೇಣಿ ರಾಜಕೀಯದ ಕುತಂತ್ರವಾಗಿದೆ. ಅನಂತರ ಈ ಪಾಂಡಿತ್ಯಪೂರ್ಣ ಭಾಷಾಶಾಸ್ತ್ರಜ್ಞರು ದೆಹಲಿಯ ಗಣ್ಯರ ಸಂವಾದವನ್ನು ಪ್ರಾದೇಶಿಕ, ಉಪರಾಷ್ಟ್ರೀಯ ಭಾಷೆಗಳಿಂದ ವಿಭಜಿಸಿದ ಪ್ರಮೇಯಗಳನ್ನು ತೋರಿಸಲು ತೊಡಗುತ್ತಾರೆ ಹಾಗೂ ಪ್ರಭಾವೀ ಗಣ್ಯರ ತೊತ್ತು ಎಂಬಂತೆ ಬಹುಳತೆ ಮತ್ತು ಸಾಂಸ್ಕೃತಿಕವಾದಗಳನ್ನು ಹೆಸರಿಸುತ್ತಾರೆ. ಬುಡಕಟ್ಟು ಹಾಗೂ ಲಿಪಿ ಇಲ್ಲದ ಭಾಷೆಗಳು ಅಂತೆಯೇ ಆಳಲು ಮತ್ತು ತಮ್ಮ ಭಾಷೆಯನ್ನು ರಕ್ಷಿಸಿಕೊಳ್ಳಲು ತಮ್ಮದೇ ರಾಜ್ಯವಿಲ್ಲದ ಅಲಕ್ಷಿತ ಭಾಷಾ ಸಮುದಾಯಗಳ ಬಗ್ಗೆ ಚಿಂತಿಸದೇ ಈ ಗಣ್ಯರು ಕೆಲಸಮಾಡುತ್ತಾರೆ. ಹೀಗಾಗಿ ಕೆಲವು ಭಾಷೆಗಳು ರಾಜ್ಯಾಧಿಕಾರದ ಪ್ರಭಾವದೊಂದಿಗೆ ಬುಡಕಟ್ಟು ಮತ್ತು ಇತರೆ ಶೋಷಿತ ಭಾಷೆಗಳನ್ನು ಹತ್ತಿಕ್ಕುವ ಮೂಲಕ ಕಾನೂನು ಸಮ್ಮತಿ ಸಾಧಿಸುತ್ತವೆ; ಅಧಿಕಾರದ ಪರಿಕಲ್ಪನೆ ಎಂದರೆ ಸಣ್ಣಪುಟ್ಟ ಅಸ್ತಿತ್ವಗಳನ್ನು ಹತ್ತಿಕ್ಕುವುದು ಎಂಬಂತೆ ನ್ಯಾಯಸಮ್ಮತಿಯನ್ನು ಇದು ಅರ್ಥೈಸುತ್ತದೆ. ಭಾಷೆ ಮತ್ತು ಸಂಸ್ಕೃತಿಗಳ ಮೇಲು ಕೀಳಿನ ಇಂಥ ಯುಗಳ ವರ್ಗೀಕರಣವನ್ನು ಪೆರಿಯಾರ್ ಬಳಸಿದ್ದರೂ ಅವರ ವರ್ಗೀಕರಣ ವಿಧಾನ ಬೇರೆಯೇ ಆಗಿದೆ-ಅಂದರೆ ಅದು ಹೆಚ್ಚು ಹೋರಾಟಕೇಂದ್ರಿತವೂ ಹೆಚ್ಚು ರಾಜಕೀಯವಾದುದೂ ಆಗಿದೆ: ಅವರು 20ನೆಯ ಶತಮಾನದ ಆರಂಭದಲ್ಲಿ ತಾತ್ತಿಕ ಸಮರವನ್ನೇ ಸಾರಿದರು. ಪೆರಿಯಾರ್ ವಿಚಾರ ಸರಣಿಯ ಮಾತುಗಳಂತೆಯೇ ಪ್ರಬಲ್ ದಾಸ್ಗುಪ್ತಾರ ಮಾತುಗಳು ಅನಂತರ ಬಂದರೂ ಅವು ದೆಹಲಿ ಗಣ್ಯರ ಯಜಮಾನಿಕೆಯ ಭಾಷಾ ಯೋಜನೆಯ ವಿರುದ್ಧ ಹರಡಿಕೊಂಡಿವೆ. ಪೆರಿಯಾರ್ ದೃಷ್ಟಿಯಲ್ಲಿ ಭಾಷೆ ಭಾಷಾಶಾಸ್ತ್ರಜ್ಞನಿಗಿಂತ ಸ್ವಲ್ಪ ಬೇರೆಯಾಗಿದ್ದು ಅದು ಜನರ ಅನನ್ಯತೆ ಮತ್ತು ಹಕ್ಕುಗಳನ್ನು ಗುರುತಿಸುವ ಅಳತೆಗೋಲಾಗಿದೆ. ಭಾರತದ ಬಹುಭಾಷಿಕತೆಯ ಪರ ವಾದಿಸುವ ಶೈಕ್ಷಣಿಕ ಭಾಷಾಶಾಸ್ತ್ರಜ್ಞರೊಬ್ಬರ ಚಿಂತನೆಗಳು ಇಂದಿನ ಭಾರತದಲ್ಲಿನ ಪ್ರಭಾವೀ ಜಾತಿ, ವರ್ಗ ಅಥವಾ ಪ್ರಾದೇಶಿಕ ಅಸಮಾನತೆಗಳಂಥ ಶೋಷಿತ ವ್ಯವಸ್ಥೆಗಳ ಕುರಿತು ಕಾಳಜಿ ಹೊಂದಿದ್ದ ಸಮಾಜ ಸುಧಾರಕರೊಬ್ಬರ ಚಿಂತನೆಗಳ ಜೊತೆ ಸೇರಿಕೊಳ್ಳುವುದು ಅಚ್ಚರಿಯ ಸಂಗತಿ.
ರಾಷ್ಟ್ರೀಯತೆ ಕಲ್ಪಿತವಾದುದು ಎನ್ನುತ್ತ ರಾಷ್ಟಗಳು 'ಕಲಿತ'[ii]
ಯಾಕೆ ಎಂಬ ವಿವರಣೆಯನ್ನು 'ಇಮ್ಯಾಜಿನ್ಸ್ ಕಮ್ಯೂನಿಟೀಸ್' ಎಂಬ ತಮ್ಮ ಪ್ರಸಿದ್ಧ ಕೃತಿಯಲ್ಲಿ ಬೆನೆಡಿಕ್ಟ್ ಆಂಡರ್ಸನ್ ನೀಡುತ್ತಾರೆ. ಅವರು ಹೇಳುತ್ತಾರೆ: 'ಇದು ಕಲ್ಪಿತ ಯಾಕೆಂದರೆ ಅತ್ಯಂತ ಸಣ್ಣ ಸಮುದಾಯದ ಜನ ಕೂಡ ತಮ್ಮ ಸಮುದಾಯದ ಬಹುತೇಕ ಸದಸ್ಯರನ್ನು ತಿಳಿದಿರುವುದಿಲ್ಲ. ಭೇಟಿ ಮಾಡುವುದಿಲ್ಲ ಅಥವಾ ಅವರೊಂದಿಗೆ ಮಾತೂ ಆಡುವುದಿಲ್ಲ, ಆದರೂ ಪ್ರತಿಯೊಬ್ಬರೂ ತಮ್ಮ ಸಮುದಾಯದಲ್ಲಿ ತಮ್ಮ ಬದುಕನ್ನು ಕಲ್ಪಿಸಿಕೊಳ್ಳುತ್ತಾರೆ'. ಬೆನೆಡಿಕ್ಟ್ ಆಂಡರ್ಸನ್ನಂತೆಯೇ ಇನ್ನೊಬ್ಬ ಮಾರ್ಕ್ಸ್ವಾದಿ ವಾಲ್ಟರ್ ಬೆಂಜಮಿನ್ ಕೂಡ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಸಾಹಿತ್ಯ ಕೃತಿಯನ್ನು ಅನುವಾದಿಸಿದಾಗ ಏನಾಗುತ್ತದೆ ಎಂದು ಪರಿಶೀಲಿಸುತ್ತಾನೆ. 'ಭಾಷಾಂತರ ಒಂದು ವಿಧಾನ' ವಾದ್ದರಿಂದ ಅದು ಅವ್ಯವಸ್ಥಿತ ವಿಚಾರ ಸರಣಿಯಲ್ಲಿ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಆತ ಹೇಳುತ್ತಾನೆ. 'ಇಲ್ಯುಮಿನೇಶನ್ಸ್'[iii]
ಎಂಬ ಪ್ರಬಂಧ ಸಂಕಲನದಲ್ಲಿ ಅಡಕವಾದ 'ದಿ ಟಾಸ್ಟ್ ಆಫ್ ದಿ ಟ್ರಾನ್ಸ್ಲೇಟರ್' ಎಂಬ 13 ಪುಟಗಳ ತನ್ನ ಲೇಖನದಲ್ಲಿ ಆತ ಭಾಷಾಂತರ ಕುರಿತ ಅನೇಕ ಚಿಂತನೆಯ ಹಂತಗಳನ್ನು ತಿಳಿಸುತ್ತಾನೆ. ಭಾಷಾಂತರ ಕ್ರಿಯೆ ನಡೆಯುವಾಗಿನ ವಿವಿಧ `ವಿರಚನಾತ್ಮಕ ಶಕ್ತಿಗಳನ್ನು ಎಳೆದು ತರುವ ಮೂಲಕ ಬೆಂಜಮಿನ್, ಉದ್ದಿಷ್ಟ ಭಾಷೆಗಳ ಮೇಲೆ ಮೂಲ ಭಾಷೆ
ಹಿಡಿತ ಸಾಧಿಸಲು ಅವಕಾಶ ಕೊಡದಂತೆ ಪಿರಮಿಡ್ ಆಕಾರದ ಶ್ರೇಣಿ ಸಂರಚನೆಯನ್ನು ತಲೆಕೆಳಗು ಮಾಡುತ್ತಾನೆ.
'ನಾವು ಹಿಂದಿ, ಗ್ರೀಕ್ ಮತ್ತು ಇಂಗ್ಲಿಷ್‌ನಿಂದ ಜರ್ಮನಿಗೆ ಭಾಷಾಂತರಿಸುವಾಗ ಹಿಂದಿ, ಗ್ರೀಕ್ ಇತ್ಯಾದಿಗಳಿಗೆ
ಭಾಷಾಂತರಿಸಲು ಜರ್ಮನಿ ಕಲಿಯುವ ಬದಲಾಗಿ ಹಿಂದಿ, ಗ್ರೀಕ್ ಮತ್ತು ಇಂಗ್ಲಿಷ್ ಕಲಿಯುತ್ತೇವೆ' ಎನ್ನುತ್ತಾನೆ.
“ನಮ್ಮ ಭಾಷಾಂತರಕಾರರು ಅನ್ಯ ಕೃತಿಗಳ ಅಂತಸ್ತತ್ವಕ್ಕಿಂತಲೂ ತಮ್ಮ ಸ್ವಂತ ಭಾಷೆಯ ಬಳಕೆಯ ಬಗ್ಗೆ ಹೆಚ್ಚು
ಅಭಿಮಾನ ಹೊಂದಿದ್ದಾರೆ”[iv]
ಎಂದು ಅಭಿಪ್ರಾಯಪಡುತ್ತಾನೆ. ಭಾಷಾಂತರ ಎಂಬುದು ವಿಮೋಚನೆಯ ಕೆಲಸ ಎಂಬ ಅಂತಿಮ ಚಿಂತನೆಯಲ್ಲಿ ಆಸಕ್ತಿ
ತಾಳುವ ಮಾರ್ಕ್ಸ್‌ವಾದಕ್ಕೆ ವಾಲ್ಟರ್ ಬೆಂಜಮಿನ್ ಒತ್ತು ನೀಡುವುದಿಲ್ಲ. ಜರ್ಮನ್ ಮೂಲದ ಭಾಷಾಂತರಕಾರನಿಗೆ
ಹಿಂದಿ ಅಥವಾ ಗ್ರೀಕ್‌ನಂಥ ಅನ್ಯ ಭಾಷೆಗಳ ಆತನ ಸೂತ್ರೀಕರಣ ಹೆಚ್ಚು ಮುಖ್ಯವಾಗಿದ್ದು, ಆತ ನೀಡುವ ಒಳನೋಟಗಳೊಂದಿಗೆ
ಪ್ರಬಲ್ ದಾಸ್ಗುಪ್ತಾ ಅವರ ಚಿಂತನೆಗಳನ್ನು ನಾನು ಹೋಲಿಸಲು ಬಯಸುತ್ತೇನೆ. ಭಾಷಾಶಾಸ್ತ್ರಜ್ಞರಾಗಿ
ಅಲ್ಪಸಂಖ್ಯಾತ ಪ್ರಾಧಾನ್ಯವುಳ್ಳ ಭಾರತ ಹಾಗೂ ಬಹುಸಂಖ್ಯಾತ ಅಪ್ರಧಾನತೆಯ ಭಾರತ ಎಂಬ ಎರಡು ಭಾರತಗಳ
ರೇಖೆಯಲ್ಲಿ ಬಹುಭಾಷಿಕತ್ವದ ವಿವಿಧ ನೋಟಗಳನ್ನು ಪರಿಶೀಲಿಸುವ ಅವರ ಚಿಂತನೆಗಳಿಗೆ ಗಮನ ನೀಡುವ ಅಗತ್ಯವಿದೆ.
ಪ್ರಬಲ್ ದಾಸ್ಗುಪ್ತಾ ಅವರ ಜನತಾಂತ್ರಿಕ ಬಹುಭಾಷಿಕತ್ವದ ಚಿಂತನೆಗಳು ಭಾರತದ ಗಣ್ಯ ಜನರ ಸಾಂಸ್ಕೃತಿಕ
ಮತ್ತು ಸಾಹಿತ್ಯಕ ಕಾರುಬಾರಿಗೆ ಹೊಡೆತ ನೀಡಿರುವುದು ಬಹಳಷ್ಟು ಸಾಹಿತ್ಯ ಕೇಂದ್ರಿತ ಜನರಿಗೆ ಆಘಾತಕಾರಿಯಾಗಿದೆ.
ಈ ಬೆಳವಣಿಗೆ ಭಾರತದ ಗಣ್ಯರ ಈ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕುತಂತ್ರದ ಮುಖವಾಡ ಭಾರತದ ನಾಲ್ಕೂ
ದಿಕ್ಕಿನಲ್ಲಿ ಹರಡಿಕೊಂಡ ಬಹುತೇಕ ಅನಕ್ಷರಸ್ಥ ಬುಡಕಟ್ಟು ಹಾಗೂ ಗ್ರಾಮೀಣ ಸಮುದಾಯಗಳನ್ನು ದಾಸ್ಯದಲ್ಲಿಡುವುದೇ
ಆಗಿದೆ ಎಂಬುದನ್ನು ಸಮರ್ಥಿಸುತ್ತದೆ.[v] ಗಣ್ಯತೆಯನ್ನು ಕುರಿತ ಈ ಸೂತ್ರೀಕರಣ
ಸಾಂಸ್ಕೃತಿಕವಾದಿಯೂ ಅಲ್ಲದ, ಸಾಹಿತ್ಯಕ ಕನಸುಗಾರನೂ ಅಲ್ಲದ ಪೆರಿಯಾರ್ ಅವರ ಚಿಂತನೆಯತ್ತ ಗಮನ ಸೆಳೆಯಬಹುದು.
ಪ್ರಬಲ್ ಅಥವಾ ಅಣ್ಣಾಮಲೈ ಅವರಂತೆ ಭಾಷಾಶಾಸ್ತ್ರಜ್ಞರೂ ಅಲ್ಲದ ಅವರ ಪ್ರಾಯೋಗಿಕ ಗ್ರಹಿಕೆಗಳನ್ನು ಪ್ರಬಲ್
ಮರುರೂಪಿಸಿದ್ದಾರೆ. ತಮ್ಮ ಆತ್ಯಂತಿಕ ವಿಶ್ಲೇಷಣೆಯಲ್ಲಿ ಪುನರುಜೀವನ ಕಾಲದ ಚಿಂತನೆಗಳನ್ನು ಆಧರಿಸುವ
ಈ ವಿದ್ವಾಂಸರ ಸೈದ್ದಾಂತಿಕ ಒಳನೋಟಗಳು ಯುಗಪ್ರವರ್ತಕ ಪುನರುಜೀವನ ಚಿಂತಕರಾಗಿದ್ದ ಪೆರಿಯಾರ್ ಅವರ
ತತ್ಯಗಳಿಗೆ ಹತ್ತಿರವಾಗಬಲ್ಲವು.[vi]
ಇವರೆಲ್ಲ
ವೈಯಕ್ತಿಕವಾಗಿ ಮಾಡಿದ ಕೆಲಸಗಳಲ್ಲಿರುವ ಸಮಾನ ಸಂಗತಿಗಳನ್ನು ಈ ಚಿಂತಕರ ಹಿನ್ನೆಲೆಯಲ್ಲಿ ಗುರುತಿಸಲು
ಯತ್ನಿಸುತ್ತೇನೆ. ಈಚೆಗೆ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅಶಾಂತಿ ಕಾಣಿಸಿದ ಅನಂತರ ಬಹು ಚರ್ಚೆಗೆ
ಒಳಗಾದ ರಾಷ್ಟತೆಯು ವಿಶ್ಲೇಷಣೆ ಮತ್ತು ಅಧ್ಯಯನ ಸಂಗತಿಯಾಗಿದ್ದು, ಭಾಷಾಂತರ ಸಿದ್ದಾಂತ ಅಂತೆಯೇ ಸಾಮಾಜಿಕ
ಸುಧಾರಣೆಗಳಿಗೆ ಸಂಬಂಧಿಸಿದಂತೆ ಬಹುಭಾಷಿಕತ್ವವನ್ನು ಸೈದ್ಧಾಂತಿಕವಾಗಿ ಎದುರಿಸಿದಾಗ ನಿಸ್ಸಂದೇಹವಾಗಿ
ನಾವು ಪಡೆಯುವ ಉತ್ತರವನ್ನೇ ಸೂಚಿಸುತ್ತದೆ. ರಾಜಕೀಯ ಕಾಳಜಿಗಳನ್ನು ವೈಜ್ಞಾನಿಕ ಪರಿಕಲ್ಪನೆಯಲ್ಲಿ
ಅಳವಡಿಸಿಕೊಳ್ಳಲು ಶೈಕ್ಷಣಿಕ ಮಡಿವಂತಿಕೆಯ ಜನ ಒಪ್ಪದಿರಬಹುದು, ನನ್ನ ಪ್ರಕಾರ ಇದು ಅಪ್ರಸ್ತುತ.
ಪ್ರಭುತ್ವವಿಲ್ಲದ
ಸಣ್ಣ ಭಾಷೆಗಳನ್ನು ಸಾಯಿಸುವ ಆಧಾರದಲ್ಲಿ ಇಂದಿನ ಕಲ್ಪನೆಯ ಭಾರತೀಯ ರಾಷ್ಟ್ರವನ್ನು ರೂಪಿಸುವುದು ಒಂದೆಡೆ
ಹಾಗೂ ಹಿಂದಿ ಮತ್ತು ಇಂಗ್ಲಿಷ್‌ನಂಥ ಯಾಜಮಾನ್ಯ ಭಾಷೆಗಳ ಅಥವಾ ಸರ್ಕಾರದ ಬೆಂಬಲವುಳ್ಳ ಪ್ರಾದೇಶಿಕ
ಭಾಷೆಗಳನ್ನು ಮಾತ್ರ ರಾಜ್ಯ ರಾಜಧಾನಿಗಳಲ್ಲಿ ಉತ್ತೇಜಿಸುವುದು ಇನ್ನೊಂದೆಡೆ ನಡೆಯುತ್ತಿರುವುದರ ವಿಮರ್ಶೆ
ಮೂಲರೂಪದ ಭಾಷಾಶಾಸ್ತ್ರದ ಭಾಗವನ್ನು ರೂಪಿಸುತ್ತದೆಯಲ್ಲದೇ ಸಾಮಾಜಿಕ ಪರಿಶೀಲನೆಯನ್ನೂ ನಡೆಸುತ್ತದೆ.
ಗ್ರಾಮೀಣ ಮತ್ತು ಬುಡಕಟ್ಟು ಸಂಸ್ಕೃತಿಗಳಿಂದ ರೂಪುಗೊಂಡ ಮಾರ್ಗಗಳನ್ನು ಗಮನಿಸದೇ ಭಾಷಾಶಾಸ್ತ್ರಜ್ಞನೊಬ್ಬ
ಸಶಕ್ತ ಭಾಷೆಗಳನ್ನು ಅಥವಾ ಪ್ರಾದೇಶಿಕವಾಗಿ ಪ್ರಬಲವಾದ ಭಾಷೆಗಳನ್ನು ಮಾತ್ರ ಗುಂಪುಗೊಳಿಸಿದಾಗ ಈ ವಿಮರ್ಶೆ
ಕಟುವೆನಿಸುತ್ತದೆ. ಯುನೆಸ್ಕೋದಿಂದ ಉತ್ತೇಜನ ಪಡೆದು ಹಾಗೂ ಭಾರತ ಸರ್ಕಾರ ರಾಯಭಾರ ಕಚೇರಿಗಳ ಮೂಲಕ
ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಪೀಠಗಳನ್ನು ತೆರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದಿಯೊಂದೇ
ಸಶಕ್ತ ಭಾಷೆಯಾಗಲು ಆರಂಭಿಸಿದಾಗ ಬಹುಭಾಷಿಕತ್ವದ ಜನತಾಂತ್ರಿಕ ತತ್ತ್ವವನ್ನು ಅದು ಹೀನಾಯಗೊಳಿಸುತ್ತದೆ.
ಇತರ ಭಾಷೆಗಳ ಮೇಲೆ ಹಿಂದಿಯನ್ನು ಹೇರುವುದು ಹಾಗೂ ಪ್ರಪಂಚದ 12ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ
ಹಿಂದಿಯನ್ನು ಅಧ್ಯಯನ ವಿಷಯವಾಗಿಸುವ ಮೂಲಕ ಒಂದು ಭಾಷೆಯನ್ನು ಅಸಮಾನವಾಗಿ ಪರಿಗಣಿಸುವುದು ವಿವಿಧ ಉಪ
ರಾಷ್ಟ್ರೀಯ ಸಂಸ್ಕೃತಿಗಳ ಶ್ರೇಣೀಕೃತ ಸ್ಥಾನವನ್ನು ಸ್ಥಿರಗೊಳಿಸಲು ನೆರವಾಗುತ್ತದೆ. ಬಹುಭಾಷಿಕತ್ವದ
ಈ ಚಿಂತನೆಯ ಅಳವಡಿಕೆ ಎಲ್ಲ ಭಾಷೆಗಳನ್ನು ಸಮಾನವಾಗಿ ಹಾಗೂ ಜನತಾಂತ್ರಿಕವಾಗಿ ಪರಿಗಣಿಸುವುದು ಎಂದಾದರೆ
ಅದು ಭಾಷೆಗಳ ಮೇಲೆ ಮಾತ್ರವಲ್ಲದೇ ರಾಜಕೀಯ ಹಾಗೂ ಇತರೆ ಸಾಂಸ್ಕೃತಿಕ ಸಂಗತಿಗಳ ಮೇಲೂ ಪರಿಣಾಮ ಬೀರುತ್ತದೆ;
ಕೇವಲ ಶೈಕ್ಷಣಿಕ ಚರ್ಚಾ ವಿಷಯ ಮಾತ್ರವಲ್ಲದೆ ಭಾಷಿಕ ಉದಾರತೆಯ ಹೊಸ ಪರಿಕಲ್ಪನೆಯಾದ ಬಹುಭಾಷಿಕತ್ವದ
ಮರುನಿರ್ದೇಶಿತ ಆದ್ಯತೆ ಇಂದಿನ ಅಗತ್ಯವಾಗಿದೆಯಲ್ಲದೇ ಅದು ಇತರ ಭಾಷೆಗಳ ಮೇಲೆ ಕೆಲವು ಭಾಷೆಗಳು ನಡೆಸುವ
ಯಜಮಾನಿಕೆಯ ವಿಮರ್ಶೆಯಾಗುವ ಮೂಲಕ ಭಾರತದ ಎಲ್ಲ ವಲಯದಲ್ಲೂ ಉಪ ರಾಷ್ಟ್ರೀಯ ಹಾಗೂ ಭಾಷೆಗಳ ಜನತಾಂತ್ರಿಕ
ಪರಿಗಣನೆಗೆ ದಾರಿ ಮಾಡಿಕೊಡಬೇಕು. ಹೀಗಾಗಿ ಇಲ್ಲಿ ಕಣ್ಣಿಗೆ ಕಾಣಿಸದಂತೆ ಭಾರತೀಯ ಭಾಷೆಗಳ ನಡುವೆ ಯುದ್ಧ
ನಡೆಯುತ್ತಿರುವಂತೆ ಅನಿಸುತ್ತದೆಯಲ್ಲದೇ ಗಮನಕ್ಕೆ ಬಾರದ ಈ ಯುದ್ಧದಲ್ಲಿ ಕೆಲವು ಭಾಷೆಗಳು ಸಾಯಲಿವೆ
ಎಂದು ಹೇಳಬಹುದು. ಸಾಮಾಜಿಕ-ಆರ್ಥಿಕ ಕಾರಣಗಳಿಂದ ರಾಜ್ಯ ಭಾಷೆಗಳನ್ನು ಕಲಿಯದೆಯೇ ಶಿಕ್ಷಣ ಪಡೆಯಬಹುದಾದ
ಸಾಧ್ಯತೆ ಇರುವುದರಿಂದ ಕನ್ನಡ, ತಮಿಳು ಅಥವಾ ತೆಲುಗು ಮತ್ತಿತರ ಅಪ್ರಧಾನ ಉಪರಾಷ್ಟ್ರೀಯತೆಯ ಪ್ರಾದೇಶಿಕ
ಬೆಂಬಲಪಡೆದು ಉಳಿಯುವ ಭಾಷೆಗಳಲ್ಲೂ ಸಮರ ಮುಕ್ತಾಯವಾಗುವುದಿಲ್ಲ ಎಂಬುದನ್ನು ಮರೆಯಬಾರದು. ಶ್ರೀಲಂಕ,
ಮಲೇಷ್ಯ ಮತ್ತು ಸಿಂಗಪುರಗಳಲ್ಲಿ ಅಧಿಕೃತ ಮುದ್ರೆ ಪಡೆದ ತಮಿಳಿನಂಥ ಭಾಷೆ ಮಾತನಾಡುವ ಜನ ತಮ್ಮ ತಮ್ಮ
ದೇಶಗಳಲ್ಲಿ ತಮ್ಮ ಭಾಷೆಯನ್ನು ಮೇಲೆತ್ತಲು ಮೂಲ ತಮಿಳು ನೆಲದ ಜನರ ಬೆಂಬಲ ದೊರೆಯುತ್ತದೆಂದು ಭಾವಿಸುತ್ತಾರೆ.
ಹೀಗಾಗಿ ರಾಜ್ಯ ಭಾಷೆಗಳಲ್ಲಿ ಎರಡು ರೀತಿಯ ವಿಂಗಡಣೆ ಕಾಣಿಸುತ್ತದೆ: ಭಿನ್ನ ಸಮಸ್ಯೆ ಎನಿಸಿದ ದಕ್ಷಿಣ
ಏಷ್ಯದ ಇತರೆ ದೇಶಗಳಲ್ಲಿ ಅಧಿಕೃತ ಭಾಷೆ ಎನಿಸಿದ ತಮಿಳಿನಂಥ ಭಾಷೆಗಳು ಒಂದು ವರ್ಗವಾದರೆ, ಭಾರತದ ರಾಜ್ಯಗಳಲ್ಲಿ
ಪ್ರಾಬಲ್ಯ ಹೊಂದುವ ಇನ್ನೊಂದು ಬಗೆಯ ಸಮಸ್ಯೆ ಎನಿಸುವ ಭಾಷೆಗಳ ವರ್ಗ ಮತ್ತೊಂದು. ನಮಗೆ ಮಾನವ ಹಕ್ಕುಗಳು
ಇರುವಂತೆಯೇ 'ಭಾಷಿಕ ಹಕ್ಕು'ಗಳಿವೆ ಎಂದು ಪ್ರಬಲ್ ದಾಸ್‌ಗುಪ್ತಾ ಹೇಳುವ ಮಾತು ಉತ್ತೇಜನಕಾರಿ. ಈ ಮೂಲಕ
ಯಾವುದೇ ಭಾಷೆಯನ್ನು ಸಾಯಲು ಬಿಡುವುದು ಅಥವಾ ಉಪಭಾಷೆಗಳನ್ನು ಸಾಯುವಂತೆ ಮಾಡುವುದು ಮಾನವ ಅಭಿವೃದ್ಧಿಗೆ
ಅಷ್ಟೇ ಅಪಾಯಕಾರಿಯೂ ವಿನಾಶಕಾರಿಯೂ ಆಗಿದೆ ಎಂದು ತಿಳಿಯಬಹುದು. ಇಂದಿನ ದಿನಗಳಲ್ಲಿ ನಮ್ಮಲ್ಲಿ ಪ್ರಾಣಿ
ಹಕ್ಕು'ಗಳು ಹಾಗೂ ಪರಿಸರ ಸಂರಕ್ಷಣಾ ಗುಂಪುಗಳಿವೆಯಾದರೂ ಭಾಷಿಕ ಹಕ್ಕಿನ ನಿಯಮಗಳಿಲ್ಲ. ಹಿಂದಿ ಮತ್ತು
ಇಂಗ್ಲಿಷ್‌ಗಳನ್ನು ಹೊರತುಪಡಿಸಿ ಎಲ್ಲ ಭಾಷೆಗಳು ಇಂದು ಸಣ್ಣ ಭಾಷೆಗಳಿಗೆ, ತುಳು ಮತ್ತು ಕೊಡವದಂಥ
ಲಿಪಿ ಇಲ್ಲದ ಭಾಷೆಗಳಿಗೆ ಅಥವಾ ಧಾರವಾಡ ಕನ್ನಡ ಅಥವಾ ಕನ್ಯಾಕುಮಾರಿ ಅಥವಾ ಕೊಯಮತ್ತೂರು ತಮಿಳು ಉಪಭಾಷೆಗಳಿಗೆ
ಪ್ರತಿಯಾಗಿ ಭಾರತದ ರಾಷ್ಟ್ರೀಯತೆಯ ಹೆಣಿಗೆಯಾಗಿ ಆಕಾರಪಡೆದಿರುವುದರಿಂದ ಈ ಸಂಗತಿಗಳ ಚರ್ಚೆಯೇ ನಡೆದಿಲ್ಲ.
ನಮ್ಮ ಉಪರಾಷ್ಟ್ರೀಯತೆಯ ಕಲ್ಪನೆ ಕೂಡ ಅಷ್ಟೇ ನಿರಂಕುಶವೂ ಯಜಮಾನಿಕೆಯದೂ ಆದ್ದರಿಂದ ಈ ಸಮಸ್ಯೆಯನ್ನು
ಕುರಿತು ಹೇಳುವುದಾದರೆ ತಮಿಳುನಾಡಿನಲ್ಲಿ ಕನ್ನಡವನ್ನೂ ಕರ್ನಾಟಕದಲ್ಲಿ ತಮಿಳನ್ನೂ ಕಾಪಾಡಿಕೊಳ್ಳುವ
ರೀತಿಯಲ್ಲಿ ಇನ್ನೊಂದು ರಾಜ್ಯದ ಗಡಿಯೊಳಗೆ ರಾಜ್ಯ ಭಾಷೆಯನ್ನು ರಕ್ಷಿಸಿಕೊಳ್ಳುವ ಕಾರ್ಯತಂತ್ರ ಕೂಡ
ಅಧ್ಯಯನದ ಮತ್ತು ಕಾಳಜಿಯ ಇನ್ನೊಂದು ಕ್ಷೇತ್ರವಾಗಿದೆ.
ಭಾಷೆಗಳ
ಅಂಕಿಅಂಶಗಳ ಲಕ್ಷಣದ ಅಧ್ಯಯನದಲ್ಲಿ ನಂಬಿಕೆ ಇಡುವುದರಿಂದ ಹಾಗೂ ಯಾವುದೇ ಗುರಿ ಇಲ್ಲದೇ ಆ ಭಾಷೆಗಳು
ಕೆಲಸಮಾಡುವುದರಿಂದ ಔಪಚಾರಿಕ ಭಾಷಿಕ ಸಂರಚನೆಯ ಆಧಾರದಲ್ಲಿ ವ್ಯಾಖ್ಯಾನಿಸುವವರೆಗೂ ಬಹುಭಾಷಿಕತ್ವ ಬಹಳ
ಪರಿಣಾಮಕಾರಿಯಾಗಲಾರದು. ಆದರೆ ಭಾಷಿಕ ಹಕ್ಕನ್ನು ಅಧ್ಯಯನದ ಆಧಾರವಾಗಿ ಹೊಂದಿರುವ ಮಾನವೀಯತೆಯ ಕಾಳಜಿಯ
ಪರಿಕಲ್ಪನೆ ಸಾಹಿತ್ಯಾಧ್ಯಯನ ಮತ್ತು ಸಾಹಿತ್ಯ ಸೃಷ್ಟಿಯ ಕ್ಷೇತ್ರದಿಂದ ಬಂದ ನನ್ನಂಥವರಲ್ಲಿ ಆಸೆಯನ್ನು
ಹುಟ್ಟಿಸುತ್ತದೆ. ಬುಡಕಟ್ಟೇ ಆಗಲಿ, ಯಾವುದೇ ಆಗಿರಲಿ, ಆ ಭಾಷೆಯೊಂದರ ಸಾವು ಮನುಕುಲಕ್ಕೆ ಅಮೂಲ್ಯವಾದ
ಹಾಗೂ ತಿಳಿಯದ ನಷ್ಟವನ್ನು ಉಂಟುಮಾಡುತ್ತದೆ.
ಇಲ್ಲಿಂದ
ಮುಂದೆ ಲೇಖನದ ಆರಂಭದಲ್ಲೇ ಕಾಣಿಸಿದ, ಭಾಷಾಂತರ ಮೂಲಭಾಷೆಗೆ ನಿಷ್ಠೆಯನ್ನು ತೋರಬೇಕೇ ಅಥವಾ ಸ್ವತಂತ್ರವಾಗಿರಬೇಕೇ
ಎಂಬ ವಾದವನ್ನು ಎತ್ತಿಕೊಳ್ಳೋಣ. ಮೂಲಕ್ಕೆ ಅಥವಾ ಭಾಷಾಂತರಿಸಬೇಕಾದ ಮತ್ತೊಂದು ಭಾಷೆಗೆ ನಿಷ್ಠವಾಗಿರಬೇಕೇ
ಅಥವಾ ಇಲ್ಲವೇ ಎಂಬ ಬಗ್ಗೆ ಮಾತನಾಡುತ್ತ ವಾಲ್ಟರ್ ಬೆಂಜಮಿನ್ ಮುಖ್ಯವಾದ ಸಂಗತಿಯೊಂದನ್ನು ಹೇಳುತ್ತ,
“ಎಲ್ಲ ಭಾಷೆ ಮತ್ತು ಭಾಷಿಕ ಸಂರಚನೆಗಳಲ್ಲಿಯೂ ಸಂವಹನ ಮಾಡಲು ಸಾಧ್ಯವೇ ಇಲ್ಲದ ಏನೋ ಒಂದು ಸಂಗತಿ ಹೇಳಬೇಕಾದುದರೊಂದಿಗೆ
ಉಳಿದೇ ಇರುತ್ತದೆ”[vii]
ಎಂದು ಘೋಷಿಸುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗುತ್ತಾನೆ. ಸಂಕೇತ ವಿಜ್ಞಾನ (ಸೀಮಿಯಾಟಿಕ್ಸ್) ಅಥವಾ
ಅಂಥ ಅತ್ಯಾಧುನಿಕ ವಿಧಾನಗಳು ಪ್ರಾಚುರ್ಯವಿಲ್ಲದಿದ್ದ ಆ ಕಾಲದಲ್ಲಿಯೇ ಅಂಥ ಸಂಗತಿಯನ್ನು ಬೆಂಜಮಿನ್
ಯಾವುದನ್ನೋ ಸಂಕೇತಿಸುವ ಮೂಲಕ ಅಥವಾ ಏನನ್ನೋ ಸಂಕೇತಗೊಳಿಸುವ ಮೂಲಕ ಸಂವಹನ ಮಾಡಲಾಗದು ಎಂದು ಹೇಳುತ್ತಾನೆ.
ಸಂವಹನವೇ ಆಗದ ಈ 'ಸಂಕೇತೀಕರಣಗೊಳಿಸುವುದನ್ನು ಅಥವಾ ಸಂಕೇತೀಕರಣಗೊಂಡದ್ದನ್ನು ಮುಂದಿನ ಭಾಷಾಂತರಕಾರ
ಅರ್ಥಮಾಡಿಕೊಳ್ಳಬೇಕಾಗುತ್ತದೆ.[viii] ಭಾಷಾಂತರದ ಈ ವಿಧಾನ, ಗೊತ್ತಿಲ್ಲದ
ಏನನ್ನೋ ಹಿಡಿಯುವ ಅಥವಾ ಭಾಷಾವಿಜ್ಞಾನದ ಹೊಸ ಪಾತಳಿಗೆ ಪ್ರವೇಶಿಸುವ ಮೂಲಕ ಬಹುಭಾಷಿಕತ್ವವನ್ನು ತರುವ
ಕಾರ್ಯಯೋಜನೆಯನ್ನು ಹಾಗೂ ಉತ್ತಮ ನಿಕಟಾನುವಾದದ ಕಳಕಳಿಯನ್ನು ವಿಶದಪಡಿಸುತ್ತದೆ.
ಹೀಗೆ
ತಮ್ಮ ವೈಜ್ಞಾನಿಕತೆಯಿಂದಲ್ಲದೇ ಕೇವಲ ವ್ಯವಸ್ಥಿತ ಯೋಚನಾ ಕ್ರಮದ ಕಳಕಳಿಯಿಂದ ಮಾತ್ರ ಬಹುಭಾಷಿಕತ್ವವನ್ನು
ಅಧ್ಯಯನದ ಮೂಲವಾಗಿ ಪರಿಗಣಿಸುವ ವಿದ್ವಾಂಸರು ಭಾಷೆಗಳ ಘರ್ಷಣೆ ಅಥವಾ ಭಾಷೆಯ ಸಾವನ್ನು ಮೂಕ ಪ್ರೇಕ್ಷಕರಾಗಿ
ನೋಡುತ್ತಾರಲ್ಲದೇ ಅಂತಿಮವಾಗಿ ಮಾನವೀಯತೆಯ ಒತ್ತಾಸೆಯಿಂದ “ಅಭಿವ್ಯಕ್ತಪಡಿಸಲಾಗದ ಏನೋ ಒಂದು”
ಎನ್ನುವ
ಪದಗಳ ಬಳಿಗೆ ಬರಬೇಕಾಗುತ್ತದೆ. ಪರಿಸರ ಹಕ್ಕುಗಳಂತೆಯೇ 'ಭಾಷಿಕ ಹಕ್ಕುಗಳನ್ನು ಅವರು ಪರಿಕಲ್ಪಿಸಿಕೊಂಡಾಗ
ಅದು ಭಾಷಿಕ ಸಮಾನತೆಗಾಗಿ ಹೋರಾಡುವ ಬಹುಭಾಷಿಕತ್ವದ ವಿದ್ವಾಂಸನ ಹಾಗೂ ಮಾನವ ಭಾಷೆ ಮತ್ತು ಸಾಹಿತ್ಯಗಳ
ನಡುವಿನ ಅಭಿವ್ಯಕ್ತಪಡಿಸಲಾಗದ ಸಂಗತಿಯ ಬಗ್ಗೆ ಕಾಳಜಿಯುಳ್ಳ ಭಾಷಾಂತರಕಾರನ ಯತ್ನಗಳನ್ನು ಬಿಡಿಸಿಕೊಳ್ಳಲಾಗದಂತೆ
ಜೋಡಿಸುತ್ತದೆ.
ಮೇಲಿನ
ಪರಿಶೀಲನೆಗಳು ಕೆಲವು ಪ್ರಾಯೋಗಿಕ ತೀರ್ಮಾನಗಳಿಗೆ ಬರುವಂತೆ ಮಾಡುತ್ತವೆ: ಕೇಂದ್ರ ಸರ್ಕಾರದ ಅಪ್ರಧಾನ
ಉಪರಾಷ್ಟ್ರೀಯತೆ- ದೆಹಲಿ ನಿಯಂತ್ರಿತ ರಾಜ್ಯ ವ್ಯವಸ್ಥೆ-ಪ್ರದೇಶ ಮಟ್ಟದಲ್ಲಿ ಉಪಭಾಷೆಗಳ ಹಾಗೂ ಲಿಪೈತರ
ಭಾಷೆಗಳ ನಿಧಾನ ಸಾವನ್ನು ಬಯಸುವ ಅನ್ನೋನ್ಯ ಉಪರಾಷ್ಟ್ರೀಯತೆಯನ್ನು ರೂಪಿಸುತ್ತದೆ. ಸಾಹಿತ್ಯ ಕ್ಷೇತ್ರದಲ್ಲೂ
ನಾವಿಂದು ಅನುಸರಿಸುವ ವಿಧಾನ ಕೂಡ ಅಪ್ರಜ್ಞಾಪೂರ್ವಕವಾಗಿ ಒಡೆಯ-ಗುಲಾಮ ಎಂಬ ಸಂಬಂಧದಲ್ಲೇ ಇರುವುದರಿಂದ
ದೆಹಲಿ ಕೇಂದ್ರಿತ ರಾಜ್ಯ ರಾಷ್ಟ್ರೀಯತೆಯನ್ನೇ ಅನುಕರಿಸುತ್ತಿದೆ. ಗುಲಾಮನಿಗೆ ಯಾವಾಗಲೂ ಕೆಳಗಿನ ಸ್ಥಾನ
ನೀಡುವುದರಿಂದ ಆತ ವಿನಾಶವನ್ನೇ ಯಾವಾಗಲೂ ಎದುರುನೋಡುತ್ತಿರುತ್ತಾನೆ. ರಾಜ್ಯಗಳು ಅನುಸರಿಸುತ್ತಿರುವ
ಈ ಅನುಕರಣಾತ್ಮಕ ಶ್ರೇಣೀಕೃತ ಸಾಹಿತ್ಯಕ ಮಾದರಿ ಭಾಷೆಯೊಂದರ ಉಪಭಾಷೆಗಳನ್ನು ಪಕ್ಕಕ್ಕೆ ತಳ್ಳುತ್ತದೆ
ಹಾಗೂ ಉಪಭಾಷೆಗಳನ್ನು ಒಂದು ದರ್ಜೆಗೆ ಒಳಪಡಿಸುವ ಯತ್ನಕ್ಕೆ ರಾಜ್ಯಭಾಷೆಯನ್ನು ಸಜ್ಜುಗೊಳಿಸುವುದರಿಂದಲೇ
ಕಾದಂಬರಿಗಳು ಸಾಮಾನ್ಯವಾಗಿ ಈ ದರ್ಜೆಗೇರಿದ ಉಪಭಾಷೆಯನ್ನು ಬಳಸುತ್ತವೆ. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ
ಉಪಭಾಷೆಯಲ್ಲೇ ಬರೆಯಲಾದ ದೇವನೂರು ಮಹಾದೇವ ಅವರ ಒಂದು ಕಾದಂಬರಿ ಅಪೂರ್ವವೂ ಇತರ ಭಾಷೆಗಳಿಗೆ ಮಾದರಿಯೂ
ಆಗಿದೆ. ಭಾರತೀಯ ಭಾಷೆಗಳ ವಿವಿಧ ಭಾಷಾ ಸಾಹಿತ್ಯಗಳ ಸ್ವರೂಪ ಮತ್ತು ಸಾರವನ್ನು ಆಳವಾಗಿ ಗಮನಿಸಿದರೆ
ಅವೆಲ್ಲವೂ ತಮ್ಮ ಕಾದಂಬರಿಗಳಲ್ಲಿ 'ಆರಂಭ-ನಿರ್ಣಾಯಕ ಘಟ್ಟ-ಅಂತ್ಯ'ದ ಸಾಂಪ್ರದಾಯಿಕ ಸಂರಚನೆಯನ್ನೇ
ಅನುಸರಿಸಿರುವುದು ಕಂಡುಬರುತ್ತದೆ. ಸಾಹಿತ್ಯಕ ಸೃಷ್ಟಿಯ ಪ್ರಯೋಗಗಳು ಸಾಂಪ್ರದಾಯಿಕ ಸಾಹಿತ್ಯಕ ಮಾದರಿಗಳನ್ನು
ತೊರೆದು ಆಧುನಿಕ ಪ್ರಬಂಧ ಮಾದರಿ ತಂತ್ರ ಅಥವಾ ಕಾದಂಬರಿಗಳ ಬರವಣಿಗೆಯಲ್ಲಿ ಕತ್ತರಿಸಿ ನಕಲಿಸುವ ನಿರೂಪಣಾ
ವಿಧಾನ ಬಳಕೆಯ ಮೂಲಕ ನಿರೂಪಣೆಯ ಹೊಸ ವಿಧಾನಗಳನ್ನು ರೂಪಿಸುತ್ತಿರುವ ಕ್ರಮ ಸರ್ಕಾರಿ ಪ್ರಾಯೋಜಿತ ಭಾಷಾ
ನೀತಿಗಳಂಥ ಸರ್ಕಾರಿ ಪ್ರಾಯೋಜಿತವಾದ ಸದ್ಯದ ಸೀಮಿತ ಸಾಹಿತ್ಯಕ ಶೈಲಿಯನ್ನು ಪ್ರಶ್ನಿಸುವ ನಿಟ್ಟಿನಲ್ಲಿ
ಇನ್ನೂ ಬಹುದೂರ ಸಾಗಬೇಕಿದೆ. ಈ ಪ್ರಾಯೋಗಿಕ ಸಾಹಿತ್ಯಗಳು ತಮ್ಮೊಳಗಿನ ಸತ್ಯದ ಅಭಿವ್ಯಕ್ತಿ ಮತ್ತು
ಸ್ವರೂಪದಲ್ಲಿ ಮಾತ್ರವಲ್ಲದೇ ಭಾರತೀಯ ಭಾಷಾ ಸಾಹಿತ್ಯ ಕ್ಷೇತ್ರ ಅಪರೂಪಕ್ಕೆ ಒಪ್ಪುವ ಮುದ್ರಣ ಪ್ರಕ್ರಿಯೆಯಲ್ಲೂ
ಪ್ರತಿಭಟನಾತ್ಮಕವಾಗಿವೆಯಲ್ಲದೇ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ವಿಸ್ತಾರ ಪಟ್ಟಿಯನ್ನು
ಗಮನಿಸುವ ಮೂಲಕ ಇದನ್ನು ಪರಿಶೀಲಿಸಬಹುದು. ಸತ್ಯ ಮತ್ತು ಸ್ವರೂಪದಲ್ಲಿ ಬಂಡಾಯವಿರುವ ಕೃತಿಗಳನ್ನು
ದೂರವಿಡುವಲ್ಲಿ ಯಾವಾಗಲೂ ಜಾಗೃತರಾಗಿರುವ ಸರ್ಕಾರದ ಪರವಿರುವ ಹಿರಿಯ ಸಾಹಿತ್ಯಕಾರರಿಂದ ಅಂಥ ಕೃತಿಗಳು
ಯಾವಾಗಲೂ ಬಹಿಷ್ಕಾರಕ್ಕೊಳಗಾಗಿವೆ. ಹೀಗಾಗಿ ಭಾಷಾ ಸಂಬಂಧಿಯಾದ ಎಲ್ಲ ಕ್ಷೇತ್ರಗಳಲ್ಲೂ ಬಹಿಷ್ಕಾರದ
ಶ್ರೇಣಿ ಮತ್ತು ತರ್ಕವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಕನ್ನಡ ಮತ್ತು ತುಳು ಅಥವಾ ಕೊಡವ ಅಥವಾ
ತಮಿಳುನಾಡಿನ ತಮಿಳು ಮತ್ತು ತೋಡ ಭಾಷೆಗಳ ನಡುವೆ-ನಿರ್ದಿಷ್ಟ ರಾಜ್ಯವೊಂದರಲ್ಲಿನ ಸಣ್ಣ ಭಾಷೆಗಳ ನಡುವೆ
ಸಾಹಿತ್ಯದ ಭಾಷಾಂತರ ಕೆಲಸ ನಡೆಯುತ್ತಿಲ್ಲ. ಒಂದು ರಾಜ್ಯ (ಕನ್ನಡ) ಭಾಷೆ ಹಾಗೂ ತಮಿಳು ಅಥವಾ ಮಲಯಾಳಂನಂಥ
ಇನ್ನೊಂದು ರಾಜ್ಯ ಭಾಷೆಗಳ ನಡುವಿನ ಜಾನಪದದಲ್ಲೂ ಇದೇ ಕತೆ. ಇದನ್ನು ವಿವಿಧ ಹಂತಗಳಿಗೆ ವಿಸ್ತರಿಸಬಹುದು.
ಬಹುಭಾಷಿಕತ್ವದ
ಚರ್ಚೆಗೆ ಮರಳೋಣ. ಭಾಷಿಕ ಹಾಗೂ ಸಾಹಿತ್ಯಕ ದೃಷ್ಟಿಗಳೆರಡ ದೃಷ್ಟಿಯಿಂದಲೂ ತಮ್ಮ ಗಡಿಯೊಳಗಿನ ಇತರೆ
ಅಶಕ್ತ ಭಾಷೆಗಳನ್ನು ಹದ್ದುಬಸ್ತಿನಲ್ಲಿಡುವ ವಿಷಯದಲ್ಲಿ ನಿಯಂತ್ರಕ ದೆಹಲಿಯನ್ನು ಇತರ ರಾಜ್ಯಗಳು ಅನುಕರಿಸುವ
ಕ್ರಮ ತಮ್ಮ ನೆರೆಯ ಭಾಷೆಗಳೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಮಾಡುವುದರಿಂದ ತಮ್ಮದೇ ರಾಜ್ಯಭಾಷೆಗಳ
ಹಾಗೂ ಅದರ ಸಾಹಿತ್ಯಗಳ ಅಶಕ್ತತೆಗೆ ದಾರಿ ಮಾಡಿಕೊಡುತ್ತದೆ. ತಾವು ಮಾಡುತ್ತಿರುವ ಕೆಲಸದ ಪರಿಣಾಮ ಏನು
ಎಂಬ ಬಗ್ಗೆ ಸ್ಥಳೀಯ ಗಣ್ಯ ಸಮಾಜಕ್ಕೆ ಅರಿವೇ ಆಗದಂತೆ ಇದನ್ನು ಮಾಡಲಾಗುತ್ತಿದೆ. ಸ್ಥಳೀಯ ಗಣ್ಯ ಸಮಾಜಗಳು
ಏನು ಚಿಂತಿಸಬೇಕೆಂದು ನಿರ್ಧರಿಸುವ ಸುಳ್ಳಿನ ಲೋಕಜ್ಞಾನದ ಪರಿಧಿಗೆ ಅಂಟಿಕೊಂಡಿರುವುದರಿಂದ ಅವು ತಮ್ಮ
ಪರಿಸ್ಥಿತಿಯ ಬಗ್ಗೆ ಅರಿವಿಲ್ಲದಂತೆ ಇರುವುದೇ ಇಲ್ಲಿನ ಸಮಸ್ಯೆ, ಭಾಷಿಕ ಹಕ್ಕನ್ನು ಕುರಿತಂತೆ ಬಹುಭಾಷಿಕ
ವಿದ್ವಾಂಸರು ತಮ್ಮ ನಿಲುವಿಗೂ ಭಾಷೆಗಳ ನಡುವೆ ಅಭಿವ್ಯಕ್ತಿಪಡಿಸಲಾಗದ ಸಂಗತಿ ಇರುವುದು ನಿಜ ಎಂಬ ನಿಲುವಿಗೆ
ಭಾಷಾಂತರಕಾರರೂ ಬದ್ದರಾದರೆ ಆಗ ಬುಡಕಟ್ಟು ಅಥವಾ ಅಶಕ್ತ ಭಾಷೆಗಳ ನಿಧಾನ ಸಾವು ಹಾಗೂ ಹತ್ತಿಕ್ಕುವಿಕೆ
ನಿಜಕ್ಕೂ ಮನುಕುಲಕ್ಕೆ ನಷ್ಟ ಎನಿಸುತ್ತವೆಯಲ್ಲದೇ ಇದು ಯಾರ ಗಮನಕ್ಕೂ ಬಾರದೇ ಹೋಗುತ್ತದೆ.
ಭಾಷಾ
ನೀತಿ ಮತ್ತು ಅವುಗಳ ಗುರಿಗೆ ಸಂಬಂಧಿಸಿದಂತೆ ನಾವು ನಮ್ಮ ಇಂದಿನ ಆದ್ಯತೆ ಮತ್ತು ಮೂಲಭೂತ ಕಾರ್ಯತಂತ್ರಗಳನ್ನು
ಪರಿಷ್ಕರಿಸಿಕೊಳ್ಳಬೇಕಿದೆ; ಭಾಷಾನೀತಿಯೊಂದಿಗೆ ಭಾಷಾಂತರ ದೃಷ್ಟಿಕೋನವೂ ಬದಲಾಗುತ್ತದೆ. ಕೆಲವು ಭಾಷಾಂತರ
ಸಂಸ್ಥೆಗಳ ಭಾಷಾಂತರ ಪ್ರಕ್ರಿಯೆಯಲ್ಲಿ ಬದಲಾವಣೆಗಳು ಕಾಣಿಸಿವೆ. ಸಾಹಿತ್ಯ ಕೃತಿಗಳೊಂದಿಗೆ ವೈಜ್ಞಾನಿಕ
ಮತ್ತು ತಾಂತ್ರಿಕ ಲೇಖನಗಳ ಹಾಗೂ ಕೃತಿಗಳ ಭಾಷಾಂತರ ಸೇರಿಸಿಕೊಳ್ಳುವ ಮೂಲಕ ಭಾಷಾಂತರ ಪರಿಕಲ್ಪನೆ ವಿಸ್ತಾರವಾಗಿದೆ.
ಆದರೆ ಬುಡಕಟ್ಟು ಸಾಹಿತ್ಯ ಮತ್ತು ಆದಿವಾಸಿ ಜನಪದ ವೈದ್ಯ ಪದ್ಧತಿಗಳು ಇನ್ನೂ ಭಾಷಾಂತರವಾಗಬೇಕಿದೆ.
ಇಲ್ಲಿರುವ ದೃಷ್ಟಿ ಭಾಷೆಯನ್ನು ಆಧರಿಸಿದ್ದಲ್ಲ. ಬದಲಾಗಿ ಜ್ಞಾನದ ಮೂಲವಾಗಿ ಭಾಷೆಯನ್ನು ಕುರಿತದ್ದು.
ಹೀಗೆ ಇಂಥ ವ್ಯವಹಾರದಲ್ಲಿ ಭಾಷೆಯೊಂದನ್ನು ಜ್ಞಾನ ಮತ್ತು ಸಾಹಿತ್ಯವಾಗಿ ಹಾಗೂ ಭಾಷೆಯಾಗಿ ಪರಸ್ಪರ
ವಿನಿಮಯಕ್ಕೊಳಗಾಗುವಂತೆ ಪರಿಗಣಿಸಲಾಗುತ್ತದೆ.
ಕಾಳಜಿವಹಿಸಬೇಕಾದ
ಮತ್ತೊಂದು ಕ್ಷೇತ್ರವೆಂದರೆ ವಿವಿಧ ರಾಜ್ಯಭಾಷಾ ಸಾಹಿತ್ಯಗಳ ಬೆಳವಣಿಗೆಯ ದಿಕ್ಕಿನೊಂದಿಗೆ ಸೇರಿಕೊಂಡ
ಭಾಷಾಂತರ ನೀತಿಗಳಾಗಿವೆ. ವಿವಿಧ ರಾಜ್ಯ ಭಾಷೆಗಳ ನವೋದಯ ಅಥವಾ ನವ್ಯ ಸಾಹಿತ್ಯಗಳಿಗೆ ಸಂಬಂಧಿಸಿದಂತೆ
ಹೇಳುವುದಾದರೆ ಇವು ವಸಾಹತುಶಾಹಿ ಕಾಲದ ಇಂಗ್ಲೆಂಡಿನ ಸಾಹಿತ್ಯವನ್ನು ಮಾದರಿಯಾಗಿಟ್ಟುಕೊಂಡು ನಮ್ಮ
ಭಾಷಾ ಸಾಹಿತ್ಯದಲ್ಲಿ ನೇರವಾಗಿ ರೂಪುಗೊಂಡವು. ಅನಂತರದ ಇಂಗ್ಲೆಂಡಿನ ಸಾಹಿತ್ಯ ಇತರೆ ಯೂರೋಪಿಯನ್ ಸಾಹಿತ್ಯಕ್ಕೆ
ದಾರಿ ಬಿಟ್ಟುಕೊಟ್ಟಿತು. ಈ ಮೂಲಕ ನಮ್ಮ ರಾಜ್ಯ ಭಾಷಾ ಸಾಹಿತ್ಯಗಳು ಮತ್ತು ಅವುಗಳ ಸಾಹಿತ್ಯಕ ಅಂಶಗಳು
ವಸಾಹತುಶಾಹಿಯೋ ಪಾಶ್ಚಾತ್ಯ ಪ್ರಭಾವವೋ ಒಟ್ಟಿನಲ್ಲಿ ಅನ್ಯ ಕಾಳಜಿಯಿಂದಲೇ ನಿರ್ದೇಶಿತವಾಗಿವೆ, ಆಗುತ್ತಿವೆ.
ಈ ಪ್ರವೃತ್ತಿಗೆ ಪ್ರತಿಕ್ರಿಯೆಯಾಗಿ ಮರಾಠಿಯಂಥ ಕೆಲವು ಭಾಷಾ ಸಾಹಿತ್ಯಗಳು ಭಾರತೀಯ ಸಾಹಿತ್ಯದಲ್ಲಿ
ದೇಸೀಯತೆಯ ವಾದವನ್ನು ಬೆಳೆಸಿದವು ಹಾಗೂ ಅನಂತರ ದಲಿತ ಸಾಹಿತ್ಯ ಅನೇಕ ಭಾರತೀಯ ಭಾಷೆಗೆ ವ್ಯಾಪಿಸಿತು.
ಇಲ್ಲಿಯೂ ವಸಾಹತು ಕಾಲದ ಯಜಮಾನ-ಗುಲಾಮ ಎಂಬ ಪರಿಕಲ್ಪನೆಯ ವ್ಯಾಧಿ ದೇಸೀ ಯಜಮಾನ ಮತ್ತು ಗುಲಾಮ ಎಂಬಂತೆ
ಪರಿವರ್ತನೆ ಕಂಡುಕೊಂಡದ್ದರಿಂದ ಭಾಷಾ ಶ್ರೇಣಿಯ 'ತಲೆಕೆಳಗು ದೃಷ್ಟಿ' ಅನ್ವಯವಾಗುತ್ತದೆ. ಇಲ್ಲಿ ಗುಲಾಮ
ಯಾರಾಗುತ್ತಾರೆ ಎಂದು ಹೇಳುವ ಅಗತ್ಯವಿಲ್ಲ. ಆದರೆ ಆಧುನಿಕ ಸಾಹಿತ್ಯ ಪ್ರಕಾರಗಳು ಗತ ವಸಾಹತು ಕಾಲದ
ಉತ್ಪನ್ನಗಳು ಹಾಗೂ ಸಾಹಿತ್ಯ ಯೂರೋಪಿನ ಪರಿಕಲ್ಪನೆ ಎನ್ನುವ ವಾದದ ಇನ್ನೊಂದು ಮಗ್ಗುಲು ಇರುವುದರಿಂದ
ದೇಸೀಯತೆ ಮತ್ತು ದಲಿತ ದೃಷ್ಟಿಕೋನದ ಈ ಎರಡು ಪ್ರವೃತ್ತಿಗಳು ಸೈದ್ಧಾಂತಿಕವಾಗಿ ಅಷ್ಟೇನೂ ಪರಿಣಾಮಬೀರಿಲ್ಲ.
ಹೀಗಾಗಿ ಶುದ್ಧತೆಯ ಕಟ್ಟುಪಾಡಿಗೆ ಬೀಳುವ ಬದಲಾಗಿಪಾಶ್ಚಾತ್ಯವನ್ನು ಅನುಕರಿಸದೇ ನಮ್ಮ ದೇಸೀ ಲಕ್ಷಣ
ಹಾಗೂ ಭಾಷಿಕ ಜಾಯಮಾನಕ್ಕೆ ತಕ್ಕಂತೆ ಅದನ್ನು ಅಳವಡಿಸಿಕೊಳ್ಳುವುದು ಮುಂದುವರೆಯುವ ಉತ್ತಮ ಮಾರ್ಗ ಎಂಬುದು
ಗಮನಾರ್ಹ.
ಈ
ಪ್ರಬಂಧದ ಸೈದ್ಧಾಂತಿಕ ನಿಲುವಿನಿಂದ ಎಳೆಪಡೆದರೆ, ಅದು ಪ್ರತಿಪಾದಿಸುವ ಬಹುಭಾಷಿಕ ಸಿದ್ಧಾಂತಗಳು ಮತ್ತು
ಭಾಷಾಂತರ ದೃಷ್ಟಿಕೋನಗಳು ತಮ್ಮ ಭಾಷಿಕ ಹಕ್ಕನ್ನು ಎತ್ತಿಹಿಡಿಯಲು ಹೋರಾಡುತ್ತಿರುವ ಸಣ್ಣ ಸಮುದಾಯಗಳ
ಜನರಿಗೆ ಎರವಾಗುವ ಮಟ್ಟಿಗೆ ಜನತಾಂತ್ರಿಕ ನೋಟ ಬೆಳೆಸಲು ನಮ್ಮನ್ನು ಮುನ್ನಡೆಸುತ್ತವೆ. ರಾಜ್ಯದಲ್ಲಿ
ಪ್ರಬಲವಾಗಿರುವ ಅಥವಾ ರಾಜ್ಯವೊಂದರಲ್ಲಿ ಅಲಕ್ಷ್ಯಕ್ಕೊಳಗಾದ ವಿವಿಧ ರಾಜ್ಯ ಭಾಷೆಗಳಲ್ಲಿ ಸ್ವಾತಂತ್ರ್ಯದ
ಅನಂತರ ಭಾರತೀಯ ಸಾಹಿತ್ಯಕತೆ ಹೇಗೆ ಬೆಳೆಯುತ್ತಿದೆ ಎಂಬುದನ್ನು ವಿಶ್ಲೇಷಿಸುವ ನಮ್ಮ ಪೂರಕ ಕಾಳಜಿ
ನಮ್ಮ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ನಮ್ಮ ಸಾಹಿತ್ಯಕತೆಯ ಮಾದರಿ ಮತ್ತು ಶೈಲಿ ನಮ್ಮ ಸಮಾಜದ
ಕೆಳ ಹಂತದ ಶ್ರೀಮಂತ ಜಾನಪದ ಮತ್ತು ಪುರಾಣಗಳಿಂದ ರೂಪಿತವಾದುದಲ್ಲ. ಬದಲಾಗಿ ಪಾಶ್ಚಾತ್ಯ ಪಂಡಿತರು
ಅಥವಾ ಸ್ಥಳೀಯ ಗಣ್ಯರಿಂದ ನಿರ್ಧರಿತವಾಗಿದ್ದು, ಇದನ್ನು ಪ್ರಶ್ನಿಸಬೇಕಿದೆ.
ಅಧ್ಯಯನಗಳ ಪ್ರಕಾರ ನಾವಿಂದು ಅನುಸರಿಸುತ್ತಿರುವ 'ತ್ರಿಭಾಷಾ ಸೂತ್ರ'ದ ಪ್ರಸ್ತುತ ಸನ್ನಿವೇಶದ ಬಹುಭಾಷಿಕತ್ವ ಅಸಂಖ್ಯಾತ ಉಪಭಾಷೆಗಳನ್ನು 'ಪ್ರಮಾಣಕಗೊಳಿಸಲು ಯತ್ನಿಸುತ್ತಿದೆ. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಬುಡಕಟ್ಟು ಮತ್ತು ಇನ್ನಿತರ ಅಶಕ್ತ ಭಾಷೆಗಳ ಮೇಲಿನ ದಬ್ಬಾಳಿಕೆ ಮತ್ತು ಶೋಷಣೆಯನ್ನು ಉತ್ತೇಜಿಸುತ್ತಿದೆಯಲ್ಲದೇ ಪ್ರತೀ ರಾಜ್ಯಭಾಷೆ ಶ್ರೀಮಂತ ಜೀವನಾನುಭವವುಳ್ಳ ಅಸಂಖ್ಯಾತ ನೈಸರ್ಗಿಕ ಮಾತಿನ ವೈವಿಧ್ಯಗಳ ಸೂಕ್ಷ್ಮಗಳನ್ನು ಕೈಬಿಟ್ಟು ಸಂಕುಚಿತ ದೃಷ್ಟಿಯಲ್ಲಿ ಬೆಳೆಯುವಂತೆ ಮಾಡುತ್ತಿದೆ. ಸದ್ಯದ ರಾಜ್ಯ ಸರ್ಕಾರಗಳು ಭಿನ್ನವಾಗಿ ಮಾತನಾಡುವುದರಿಂದ ಅವಕಾಶವಂಚಿತ ಜನ ಮತ್ತು ಅವರ ಭಾಷೆಗಳನ್ನು ತ್ಯಜಿಸಿದ ಅಭಿವೃದ್ಧಿ ಮಾದರಿಯನ್ನು ಅನುಸರಿಸುತ್ತಿವೆ. ಆ ಮೂಲಕ ನಾವು ಈ ಅವಕಾಶವಂಚಿತರ ಮತ್ತು ಬುಡಕಟ್ಟುಗಳ ಜ್ಞಾನವನ್ನು ತ್ಯಜಿಸುತ್ತಿದ್ದೇವೆ. ವಿವಿಧ ಭಾಷಾ ವೈವಿಧ್ಯಗಳ ಸಾವು ಬಡಗಿ, ಕಲ್ಲುಕುಟಿಗ ಮತ್ತಿತರ ಗ್ರಾಮೀಣ ತಂತ್ರಜ್ಞರು ಬಳಸುವ ಅನೇಕ ದೇಸೀ ತಾಂತ್ರಿಕ ಪದಗಳ ವಿನಾಶಕ್ಕೆ ಕಾರಣವಾಗುತ್ತದೆ.
ಒಟ್ಟಾರೆಯಾಗಿ ಭಾಷಾಧಾರಿತ ಸಾಹಿತ್ಯ ಹಾಗೂ ಭಾಷಾ ಹಕ್ಕುಗಳು ಮತ್ತು ಅವುಗಳಿಗೆ ಸಂಬಂಧಿಸಿದ ದೌರ್ಭಾಗ್ಯಪೂರ್ಣ ಎನಿಸಿದ ಭಾಷೆಗಳ ನಿಧಾನ ಸಾವನ್ನು ಕುರಿತ ನಮ್ಮ ತಿಳಿವಳಿಕೆಯನ್ನು ವಿಸ್ತರಿಸುವ ಸಾಧನವಾಗಿ ಬಹುಭಾಷಿಕತ್ವವನ್ನು ಅರಿಯುವುದರ ಉಪಯುಕ್ತತೆಯನ್ನು ನಾವು ಸಮರ್ಥಿಸಬಹುದು.
ಅಡಿಟಿಪ್ಪಣಿಗಳು
[i]
[ii]
[iii]
[iv]
[v]
[vi]
ಸಂಕಲನವನ್ನು
ನೋಡಿ
[vii]
[viii]

No comments:
Post a Comment