Saturday, 13 December 2025

ಸೊಕ್ಕಿನ ಅಮೆರಿಕಕ್ಕೆ ಬುದ್ಧಿ ಕಲಿಯುವ ಸಮಯ

ಅಮೆರಿಕದ ಡಾಲರ್ ಪಾತಾಳಕ್ಕೆ ಕುzಸಿದಿದೆ, ಇದೀಗ ೧೦.೧ ಪಾಯಿಂಟ್ ಅದರ ಬೆಲೆ ಕುಸಿದು ಬಿದ್ದಿದೆ. ಕಳೆದ ೭೨ ಗಂಟೆಗಳಲ್ಲಿ  ೫ ಲಕ್ಷ ಕೋಟಿ ಡಾಲರ್ ಕಳೆದುಕೊಂಡಿದೆ. ೧೯೭೦ರ ದಶಕದಲ್ಲಿ ಒಮ್ಮೆ ಇಂಥ ಹೀನಾಯ ಸ್ಥಿತಿ ಬಂದಿತ್ತಾದರೂ   ಈ ಬಾರಿ ಅದು ದಾಖಲೆ ಮಾಡಿದೆ ಡಾಲರ್ ನಂಬಿ ಹೂಡಿಕೆ ಮಾಡಿದವರು ತಲೆ ಮೇಲೆ ಕೈಹೊತ್ತು ಕುಳಿದಿದ್ದಾರೆ, ಅಮೆರಿಕದ ವಿತ್ತೀಯ ಕೊರತೆ ಒಂದಕ್ಕೆ ಎರಡರಷ್ಟಾಗಿದೆ, ಅವರ ಆದಾಯಕ್ಕೆ ಹೋಲಿಸಿದರೆ ಸಾಲದ ಪ್ರಮಾಣ ದುಪ್ಪಟ್ಟಾಗಿದೆ, ಇಷ್ಟಾದರೂ ಅದರ ಸಾಲ ಮಾಡಿ ಶೋಕಿ ಮಾಡುವ ಗುಣಕ್ಕೆ ಯಾವ ಧಕ್ಕೆಯೂ ಆಗಿಲ್ಲ. ಅಮೆರಿಕದ ಸದ್ಯದ ಪರಿಸ್ಥಿತಿಗೆ ಹುಚ್ಚುದೊರೆ ಟ್ರಂಪ್‌ನ ತಿಕ್ಕಲು ನಿರ್ಧಾರಗಳು ಕಾರಣ. ಸಾಲದ್ದಕ್ಕೆ ರಷ್ಯಾ ಮತ್ತು ಭಾರತಗಳ ನೇತೃತ್ವದಲ್ಲಿ ಒಗ್ಗೂಡಿದ ರಷ್ಯಾ, ಭಾರತ, ಚೀನಾ, ಬ್ರೆಜಿಲ್ ದಕ್ಷಿಣ ಆಫ್ರಿಕಾ, ಈಜಿಪ್ಟ್, ಇತಿಯೋಪಿಯಾ, ಇರಾನ್, ಇಂಡೋನೇಷ್ಯಾ ಮತ್ತು ಅರಬ್ ಎಮಿರೇಟ್ಸ್ ನ ಬ್ರಿಕ್ಸ್ ದೇಶಗಳು ತಮ್ಮ ಅಂತಾರಾಷ್ಟಿçÃಯ ವ್ಯವಹಾರಕ್ಕೆ ಅಮೆರಿಕದ ಡಾಲರ್ ಬದಿಗಿಟ್ಟು ತಮ್ಮದೇ ಕರೆನ್ಸಿ ಚಾಲ್ತಿಗೆ ತರುವ ಒರಯತ್ನದಲ್ಲಿ ಪರ್ಯಾಯ ಹಣ ವಿನಿಮಯಕ್ಕೆ ಮುಂದಾಗಿ ಡಾಲರ್ ಗೆ ದೊಡ್ಡ ಹೊಡೆತಕೊಟ್ಟವು.

ಇಷ್ಟು ವರ್ಷಗಳ ಕಾಲ ಪ್ರಪಂಚದ ಎಲ್ಲ ಸಣ್ಣ ಪುಟ್ಟ ದೇಶಗಳ ಮೇಲೆ ತೆರಿಗೆ ವಿಧಿಸುತ್ತಾ ಜಾಗತಿಕ ಸಾಮಾನ್ಯ ಹಣವಾಗಿ ಚಿನ್ನ ಬಿಟ್ಟರೆ ತಮ್ಮ ಡಾಲರ್ ಮಾತ್ರ ಎಂಬ ವ್ಯವಸ್ಥೆಯನ್ನು ಬಲಾತ್ಕಾರದಿಂದ ಜಾರಿ ಮಾಡಿಕೊಂಡು ಬೇರೆ ಯಾವ ಕರೆನ್ಸಿಯೂ ಈ ಸ್ಥಾನಕ್ಕೆ ಬರದಂತೆ ತಡೆದು ಆರಾಮವಾಗಿ ಕುಳಿತು ಉಣ್ಣುತ್ತಿತ್ತು. ಜಗತ್ತಿನ ಇತರೆ ದೇಶಗಳು ಅಮೆರಿಕದ ಯಾವ ಮಧ್ಯಪ್ರವೇಶ ಅಥವಾ ನೆರವು ಇಲ್ಲದಿದ್ದರೂ ತಮ್ಮ ಅಂತಾರಾಷ್ಟಿçÃಯ ವ್ಯವಹಾರವನ್ನು ಅಮೆರಿಕದ ಕರೆನ್ಸಿಯಲ್ಲಿ ಮಾಡಿದ ತಪ್ಪಿಗಾಗಿ ಅಥವಾ ಅನಿವಾರ್ಯತೆಗಾಗಿ ಅಮೆರಿಕಕ್ಕೆ ವೃಥಾ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದವು, ಈ ಬಿಟ್ಟಿ ಹಣ ಸಂದಾಯದ ಕಾರಣಕ್ಕೆ ಅಮೆರಿಕ ಇದುವರೆಗೆ ಹಾಯಾಗಿತ್ತು, ಆದರೆ ಬದಲಾದ ಜಾಗತಿಕ ಸಂಬAಧಗಳು ಮತ್ತು ಬದಲಾದ ವಿದ್ಯಮಾನಗಳ ಪರಿಣಾಮದಿಂದ ಬಹುತೇಕ ದೇಶಗಳು ತಮ್ಮ ವ್ಯವಹಾರಕ್ಕಾಗಿ ಅಮೆರಿಕದ ಕರೆನ್ಸಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಂಡವು, ತಮ್ಮ ತಮ್ಮಲ್ಲೇ ತಮ್ಮ ಕರೆನ್ಸಿಯನ್ನು ಪರಸ್ಪರ ಮಾನ್ಯ ಮಾಡಿಕೊಳ್ಳುವ ಮೂಲಕ ಅಮೆರಿಕದ ಡಾಲರ್ ಅನ್ನು ಮೂಲೆಗೆ ತಳ್ಳತೊಡಗಿದವು, ಶುರುವಿನಲ್ಲಿ ಈ ವಿದ್ಯಮಾನವನ್ನು ಅಲಕ್ಷ್ಯಿಸಿದ ಅಮೆರಿಕ ತನಗೆ ಇದರಿಂದ ಏನೂ ಹಾನಿಯಾಗುವುದಿಲ್ಲ ಎಂಬ ಭ್ರಮೆಯಲ್ಲಿ ಕಾಲ ಕಳೆಯಿತು, ಅದರ ಫಲವನ್ನು ಅದು ಈಗ ಅನುಭವಿಸತೊಡಗಿದೆ.

ಅಮೆರಿಕದ ವಿವೇಕಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ಆಗಸ್ಟ್ನಲ್ಲಿ ಭಾರತದ ಮೇಲೆ ಹಾಕಿದ್ದ ಶೇ೫೦ ಮತ್ತು ಹೆಚ್ಚುವರಿ ಶೇ೨೫ ತೆರಿಗೆಯ ಹೊಡೆತವನ್ನು ಸ್ವತಃ ಸಹಿಸಿಕೊಳ್ಳಲಾಗದೇ ಇದೀಗ ಈ ತೆರಿಗೆಯನ್ನು ಮರುಪರಿಶೀಲಿಸಿ ಮೊದಲಿನಂತೆ ಮಾಡುವುದಾಗಿ ಘೋಷಿಸಿದ್ದಾನೆ, ದರ ಪರಿಣಾಮ ಹೀಗೆ ಆಗುತ್ತದೆ. ಅಮೆರಿಕವೇ ಇದರ ಭಾರ ತಡೆಯಲಾಗದು, ಬಾಹ್ಯ ನೋಟದಲ್ಲಿ ಇದು ಭಾರತದ ಮೇಲೆ ವಿಧಿಸಿದ ತೆರಿಗೆ ಅನಿಸಿದರೂ ಹೆಚ್ಚು ನೋವು ಉಂಟಾಗುವುದು ಅಮೆರಿಕಕ್ಕೇ ಆದ್ದರಿಂದ ಹೆಚ್ಚುಕಾಲ ಈ ನೀತಿ ಇರಲಾರದೆಂಬ ನಿರೀಕ್ಷೆ ಮಾಡಲಾಗಿತ್ತು, ಹಾಗೆಯೇ ಆಗಿದೆ. ಇದು ದೊಡ್ಡಣ್ಣನ ವಿರಿದ್ಧ ಭಾರತದ ಆರ್ಥಿಕ ವಿಜಯ. ತಮಾಷೆಯ ಸಂಗತಿ ಎಂದರೆ ಅಮೆರಿಕ ಭಾರತದ ವಿರುದ್ಧ ತೆರಿಗೆ ಏರಿಸಿದ ಬೆನ್ನಲ್ಲಿ ಭಾರತ ಕೂಡ ಅಮೆರಿಕ ವಿರುದ್ಧ ಅದೇ ಪ್ರಮಾಣದಲ್ಲಿ ತೆರಿಗೆ ಹೆಚ್ಚಿಸಿತ್ತು. ಇದರ ಪರಿಣಾಮ ಮನಗಂಡ ಎರಡೂ ದೇಶಗಳ ಕಂಪನಿಗಳು ತಮ್ಮ ದೇಶಗಳ ಮೇಲೆ ಒತ್ತಡ ಹಾಕಿದ ಪರಿಣಾವಾಗಿ ಎರಡೂ ದೇಶಗಳು ಡಬಲ್ ಟ್ಯಾಕ್ಸೇಶನ್ ಅವಾಯ್ಡನ್ಸ್ ಆಕ್ಟ್ (ಡಿಟಿಎಎ) ಎಂಬ ಎರಡೂ ದೇಶಗಳು ಕಟ್ಟಬೇಕಿದ್ದ ಡಬಲ್ ಟ್ಯಾಕ್ಸೇಶನ್ ತಪ್ಪಿಸುವ ಒಪ್ಪಂದ ಮಾಡಿಕೊಂಡಿದ್ದವು, ಹೀಗಾಗಿ ಅಮೆರಿಕ ತೆರಿಗೆ ಹೆಚ್ಚಿಸಿದರೂ ಅಂದಿನಿAದ ಅಮೆರಿಕಕ್ಕೆ ಭಾರತ ಯಾವುದೇ ತೆರಿಗೆ ಕಟ್ಟುವ ಪ್ರಶ್ನೆಯೇ ಬರಲಿಲ್ಲ, ಹೀಗಾಗಿ ಈ ಟ್ರಂಪ್ ಮಾಡಿದ ಭಾರತದ ವಿರುದ್ಧದ ತೆರಿಗೆ ಹೆಚ್ಚಳ ಕಾಯ್ದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸಪ್ಪೆ ಮುಖ ಹೊತ್ತು ವಾಪಸಾಯಿತು.ಇದಕ್ಕೇ ಹೇಳುವುದು ಟ್ರಂಪ್ ಒಬ್ಬ ಅವಿವೇಕಿ ಎಂದು.

ಅಮೆರಿಕ ಕೈಗೊಂಡಿದ್ದ ಈ ಪರಿಷ್ಕರಣೆಯ ಹಿಂದೆ ಕೇವಲ ಅಮೆರಿಕದ ಸ್ವಾರ್ಥವಿತ್ತು. ಅವರ ದುಷ್ಟ ಕೃಷಿ ತಳಿ ಬೀಜಗಳನ್ನು ಭಾರತ ಖರೀದಿಸಬೇಕು, ಸವರ ಹೈನು ಉತ್ಪನ್ನ ಪಡೆಯಬೇಕು ಎಂದಾಗಿತ್ತು, ಇವೆರಡೂ ಭಾರತದ ರೈತರ ಹಿತಾಸಕ್ತಿಗೆ ವಿರುದ್ಧವಾದ್ದರಿಂದ ಪ್ರಧಾನಿ ಮೋದಿ ಯಾವ ಒತ್ತಡಕ್ಕೂ ಮಣಿಯದೇ ಅಮೆರಿಕದ ತೆರಿಗೆ ಹೆಚ್ಚಳಕ್ಕೆ ಕ್ಯಾರೆ ಅನ್ನದೇ ಕುಳಿತಿದ್ದರು. ಈಗ ಅದರ ಫಲ ಲಭಿಸಿದೆ. ತನ್ನ ನಿಲುವಿನಿಂದ ಅಮೆರಿಕ ಜನರ ವಿರೋಧವನ್ನು ಟ್ರಂಪ್ ಎದುರಿಸಬೇಕಾಯ್ತು, ಅಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದೊಡ್ಡ ಹೊಡೆತ ತಿನ್ನಬೇಕಾಯ್ತು, ತನ್ನ ದೇಶದ ಜನತೆ ಮತ್ತು ವ್ಯಾಪಾರಿ ಕಂಪನಿಗಳಿAದ ಬೈಗುಳ ಎದುರಿಸಬೇಕಾಯ್ತು, ಇವೆಲ್ಲದರ ಪರಿಣಾಮದಿಂದ ಅಧ್ಯಕ್ಷ ಟ್ರಂಪ್ ತೆರಿಗೆಯನ್ನು ಹೇಗೆ ಹೆಚ್ಚಿಸಿದ್ದನೋ ಹಾಗೆಯೇ ಇಳಿಸಲು ತೀರ್ಮಾನಿಸಿದ್ದಾಗಿದೆ.

ಹಾಗೆ ನೋಡಿದರೆ ಅಮೆರಿಕ ತೆರಿಗೆ ಹೆಚ್ಚಿಸಿದ್ದಕ್ಕೆ ಭಾರತ ಪ್ರತಿ ತೆರಿಗೆ ವಿಧಿಸಿದ್ದರಿಂದ ಅಮೆರಿಕ ಕಂಪನಿಗಳಿಂದ ಭಾರತಕ್ಕೆ ಹೆಚ್ಚು ಲಾಭವಾಗಿ ಭಾರತದ ವಿದೇಶೀ ಕಾದಿಟ್ಟ ನಿಧಿ ಅನಿರೀಕ್ಷಿತ ಮಟ್ಟಕ್ಕೇರಿ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ಶ್ರೇಣಿ ಮೇಲಕ್ಕೆ ಬರುವಂತಾಯ್ತು. ಅಧ್ಯಕ್ಷನಾಗಿ ಅಮೆರಿಕದ ಪರವೇ ಆಗಿದ್ದರೂ ಆತ ಕೈಗೊಳ್ಳುತ್ತಿರುವ ನಿರ್ಧಾರಗಳೆಲ್ಲ, ಅವನಿಗೆ ಮುಳುವಾಗುತ್ತಿವೆ, ಇದು ಬಹುಶಃ ಆತನ ಕಡೆಯ ಮುಳುಗು.
 
ಅಮೆರಿಕದ ಡಾಲರ್ ಗೆ ಶಾಶ್ವತ ಮಾನ್ಯತೆ ಇರಲೇಬೇಕು ಎಂಬ ಶಾಸವೇನೂ ಇಲ್ಲ, ತಮ್ಮ ಪರಿಶ್ರಮವನ್ನು ಬಳಸಿಕೊಂಡು ಸುಖವಾಗಿರುವ ಅಮೆರಿಕ ಸಾಲದ್ದಕ್ಕೆ ತಮ್ಮ ಮೇಲೆ ವೃಥಾ ತೆರಿಗೆ ಹೊರೆಯನ್ನೂ ಹೆಚ್ಚಿಸುತ್ತಿರುವುದನ್ನು ಸಹಿಸಲಾಗದೇ ಇದೀಗ ತಿರುಗಿಬಿದ್ದಿವೆ.ಹೇಗಾದರೂ ಮಾಡಿ ಪ್ರಪಂಚ ತನ್ನ ಮಾತಿನಂತೆ ನಡೆಯಬೇಕು, ಹಾಗೆ ಮಾಡಲು ಅಗತ್ಯ ತಂತ್ರಗಳನ್ನು ಬಳಸಿತು. ಈಗಿನ ಅಧ್ಯಕ್ಷ ಟ್ರಂಪ್ ಬಂದ ಮೇಲೆ ಈ ವಿದ್ಯಮಾನ ಮತ್ತಷ್ಟು ಹೆಚ್ಚಾಗಿ ಅವನ ಉನ್ಮಾದ ವೇರಿತು. ಒಂದೋ ಹೇಳಿದ್ದು ಕೇಳಬೇಕು ಅಥವಾ ಬೇರೆಯವರಯವರು ಹೇಳಿದ್ದು ಕೇಳಬೇಕು, ಅವಿವೇಕಿ ಟ್ರಂಪ್‌ಎರಡರಲ್ಲಿ ಯಾವುದನ್ನೂ ಮಾಡದೇ ಇಡೀ ಅಮೆರಿಕವನ್ನು ಹಳ್ಳ ಹಿಡಿಸಿದ. ಪ್ರಪಂಚ ಹೇಗೆ ಬದಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕನಿಷ್ಠ ಕೆಲಸವನ್ನೂ ಆತ ಮಾಡಲಿಲ್ಲ, ಒಂದು ಬಾಳೆ ಹಣ್ಣು ಬೆಳೆದುಕೊಳ್ಳಲಾಗದ ದೇಶ ಅದು, ಎಲ್ಲ ಆಹಾರಕ್ಕೂ ಉಷ್ಣ ವಲಯದ ದೇಶಗಳನ್ನು ಅವಲಂಬಿಸಿದೆ, ಅಂಥಾದ್ದರಲ್ಲಿ ಅಂಥ ದೇಶಗಳ ಮೇಲೆ ರ‍್ರಾಬರ‍್ರಿ ತೆರಿಗೆ ಏರಿಸಿ ಕುಳಿತರೆ ಪರಿಸ್ಥಿತಿ ಏನಾಗುತ್ತದೆ ಎಂಬ ಅರಿವೂ ಇಲ್ಲದ ಅವಿವೇಕಿ ಅಧ್ಯಕ್ಷ ಆತ, ಅಷ್ಟಕ್ಕೂ ತಮ್ಮ ವ್ಯವಹಾರಕ್ಕೆ ಕೇವಲ ಅಮೆರಿಕ ನಂಬಿದರೆ ಅಪಾಯಕಾರಿ ಎಂಬುದನ್ನು ಅರಿತ ದೇಶಗಳು ದಶಕಗಳ ಹಿಂದೆಯೇ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದವು, ಹೀಗಾಗಿ ಅವು ಅಮೆರಿಕಕ್ಕೆ ಸಲಾಂ ಮಾಡಿಕೊಂಡು ಕೂರಲಿಲ್ಲ, ಅಮೆರಿಕವನ್ನು ಕ್ಯಾರೇ ಅನ್ನದ ಅವು ತಮ್ಮ ಪಾಡಿಗೆ ತಾವು ಉಳಿದವು, ಭಾರತವಿರಲಿ, ಟರ್ಕಿಯಂಥ ದೇಶ ಕೂಡ ಅಮೆರಿಕಕ್ಕೆ ಸೊಪ್ಪು ಹಾಕಲಿಲ್ಲ, ಅಮೆರಿಕಕ್ಕೆ ತಾಳ ಹಾಕಿದ್ದು ದರಿದ್ರ ಎದ್ದು ಹೋದ ಪಾಕಿಸ್ತಾನ ಮಾತ್ರ. ಮೊದಲೇ ತಿನ್ನಲು ತನಗೇ ಗತಿ ಇಲ್ಲದ ಅದು ಅಮೆರಿಕಕ್ಕೆ ಏನು ಮಾಡೀತು? ಅಮೆರಿಕ ಬಿಸಾಡುತ್ತಿದ್ದ ಬಿಸ್ಕಟ್ಟಿಗೆ ಬಾಯಿ ತೆಗೆದು ಕುಳಿತಿದ್ದ ಅದು ಸೋತ ಅಮೆರಿಕದ ಕಡೆ ಆಸೆಯಿಂದ ನೋಡಿತೇ ವಿನಾ ಅದನ್ನು ಕಟ್ಟಿಕೊಂಡ ಅಮೆರಿಕ ಮತ್ತಷ್ಟು ಗತಿ ಗೆಟ್ಟಿತು. ಅದು ಈಗ ಒಂದು ಅಂತ್ಯಕ್ಕೆ ಬಂದಿದೆ. ಪರಿಸ್ಥಿತಿ ಈಗ ಹೇಗಿದೆ ಅಂದರೆ ಅಮೆರಿಕ ಭಾರತದ ಮಾತು ಕೇಳಲು ಮಂಡಿಯೂರಿ ಕುಳಿತಿದೆ. ಭಾರತ ಅಮೆರಿಕ ಮತ್ತಷ್ಟು ಬಾಗಲಿ ಎಂದು ಅದಕ್ಕೆ ನಯ ವಿನಯ ಕಲಿಸಲು ಕಾಯುತ್ತಿದೆ. ಆದರೆ ಈಗ ಇಷ್ಟಾಗಿರುವುದೇ ಅಮೆರಿಕದ ಸೊಕ್ಕು ಮುರಿದಿದೆ. ಅಹಂಕಾರಕ್ಕೆ ಪೆಟ್ಟು ಬಿದ್ದಿದೆ. ಯಾವಾಗಲೂ ಹೀಗೇ ಅಲ್ಲವೇ? ಅಹಂಕಾರದಲ್ಲಿ ಮೆರೆಯುತ್ತಿದ್ದ ಜನಕ್ಕೆ ಸಣ್ಣ ಅಪಮಾನವಾದರೂ ಅದನ್ನು ತಡೆಯುವ ಶಕ್ತಿ ಇರುವುದಿಲ್ಲ, ಆಗ ಅಂಥವರಿಗೆ ಇರುವ ದಾರಿ ಪಲಾಯನ ಮತ್ತು ಆತ್ಮಹತ್ಯೆ ಮಾತ್ರ, ಈಗ ಅಮೆರಿಕಕ್ಕೆ ಉಳಿದಿರುವ ದಾರಿ ಎರಡನೆಯದು ಮಾತ್ರ. ಏಕೆಂದರೆ ಗತಿಗೆಟ್ಟ ಪಾಕಿಸ್ತಾನ ಬಿಟ್ಟರೆ  ಪ್ರಪಂಚದ ಯಾವ ದೇಶವೂ ಅದರ ನೆರವಿಗೆ ಬರುತ್ತಿಲ್ಲ, ಎಲ್ಲ ದೇಶಗಳೂ ಈಗ ಅಮೆರಿಕಕ್ಕೆ ಸರಿಯಾಯ್ತು ಎಂದೇ ಹೇಳುತ್ತಿವೆ, ಅಂಥ ಸ್ಥಿತಿಯನ್ನು ಅದು ತಂದುಕೊಂಡಿದೆ, ಮುಂದೇನಾಗುತ್ತದೆಂದು ಕಾದು ನೋಡಬೇಕಿದೆ. ಇದಕ್ಕೆ ಹೆಚ್ಚು ಕಾಯಬೇಕಿಲ್ಲ, ಕೆಲವೇ ನಾರಗಳಲ್ಲಿ ಇದರಫಲಿತಾಂಶ ಸಿಗಲಿದೆ. ಇಡೀ ಪ್ರಪಂಚ ಇದಕ್ಕಾಗಿ ಕಾಯುತ್ತಿದೆ. ಇದು ಅಮೆರಿಕ ಬದಲಾಗಲು ದೊರೆತ ಉತ್ತಮ ಕ್ಷಣ. ಇದನ್ನು ಅದು ಹೇಗೆ ಬಳಸಿಕೊಳ್ಳುತ್ತದೆ ಎಂಬುದೇ ಮುಂದಿನ ಪ್ರಶ್ನೆ. 
 
 


No comments:

Post a Comment