Wednesday, 10 December 2025

ಪಾಕಿಸ್ತಾನದ ಭವಿಷ್ಯ ನಿರ್ಧರಿಸಲಿರುವ ಗಲಭೆ


ನೆರೆಯ ಪಾಕಿಸ್ತಾನದಲ್ಲಿ ಒಂದಾದ ಮೇಲೊಂದರಂತೆ ಗಲಭೆಗಳು ನಡೆಯುತ್ತಿವೆ. ಅದರಲ್ಲೂ ಅಲ್ಲಿನ ಆಡಳಿತದಿಂದ ಮುಕ್ತಿ ಪಡೆಯಲು ಇವೆಲ್ಲ ಆಗುತ್ತಿರುವುದು ಅಲ್ಲಿನ ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸುತ್ತದೆ. ಸರ್ಕಾರ ನಡೆಸುವುದೆಂದರೆ ತಮ್ಮ ಧರ್ಮವನ್ನು ಎತ್ತಿಹಿಡಿಯಲು ಉಗ್ರರನ್ನು ತಯಾರಿಸಿ ಜನರನ್ನು ಬೆದರಿಸಿ ಹಿಡಿತದಲ್ಲಿಟ್ಟೊಕೊಳ್ಳುವುದು ಎಂಬ ಭ್ರಮೆಯಲ್ಲಿ ಆ ರಾಷ್ಟ್ರ ಇಷ್ಟು ವರ್ಷ ಕಳೆಯಿತು. ಆದರೆ ಈಗ ಜಗತ್ತು ಬದಲಾದಂತೆ ಪಾಕಿಸ್ತಾನದ ಜನತೆ ಕೂಡ ಬದಲಾಗಿದ್ದಾರೆ, ತಮ್ಮ ಮೂಗಿಗೆ ತುಪ್ಪ ಹಚ್ಚಲಾಗುತ್ತಿದೆ ಎಂಬುದು ಅವರಿಗೆ ಅರ್ಥವಾದ್ದರಿಂದ ಪಾಕಿಸ್ತಾನದ ನಾಲ್ಕೂ ದಿಕ್ಕುಗಳಲ್ಲಿ ಸ್ವಾತಂತ್ರ್ಯದ ಕೂಗು ದೊಡ್ಡದಾಗಿ ಕೇಳಿಸತೊಡಗಿದೆ.

ಇದುವರೆಗೆ ಬಲೂಚಿಸ್ತಾನ್ ಪಂಜಾಬ್ ಗಲಾಟೆಗಳು ಆದವು, ಅದು ತಣ್ಣಗಾಯ್ತು ಅನ್ನುವಷ್ಟರಲ್ಲಿ ಇದೀಗ ದೊಡ್ಡಪ್ರಮಾಣದಲ್ಲಿ ಸಿಂಧ್ ಪ್ರದೇಶದಲ್ಲಿ ಇದೇ ಕಾರಣಕ್ಕೆ ಗಲಾಟೆ ಶುರುವಾಗಿದೆ. ಸಿಂಧ್ ನಲ್ಲಿ ನಡೆಯುತ್ತಿರುವ ಗಲಾಟೆಗೆ ಹಲವು ಆಯಾಮಗಳಿವೆ. ಆರ್ಥಿಕ ಹಿಂದುಳಿದಿರುವಿಕೆ, ರಾಜಕೀಯ ನಿರ್ಲಕ್ಷ್ಯ, ನಿರುದ್ಯೋಗ ಮತ್ತು ಅಧಿಕಾರಿಗಳ ದಬ್ಬಾಳಿಕೆಗಳು ಇವುಗಳಲ್ಲಿ ಮುಖ್ಯವಾದವು. ಅದರಲ್ಲೂ ಜಲಮೂಲದ ಗಲಭೆ ಅತ್ಯಂತ ಮುಖ್ಯವಾಗಿದೆ. ಪಾಕಿಸ್ತಾನದ ಅಗತ್ಯದ ಮುಕ್ಕಾಲು ಪಾಲು ನೀರಿನ ಮೂಲ ಸಿಂಧ್ ಪ್ರಾಂತ್ಯದಿಂದ ಪೂರೈಕೆಯಾಗುತ್ತದೆ. ಕೃಷಿಗೂ ಇದೇ ಪ್ರಮುಖ ಮೂಲ, ಈ ಪ್ರದೇಶಕ್ಕೆ ರಾಜಕೀಯ ಕಾರಣಕ್ಕೆ ಪಂಜಾಬ್ ಪ್ರದೇಶವನ್ನು ಸೇರಿಸಿದ್ದು, ತಮಗೆ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬುದು ಸಿಂಧ್ ಜನರ ಬಹುಕಾಲದ ಆರೋಪ. ಇದಕ್ಕೆ ಪೂರಕವಾಗಿ ಸಿಂಧ್ ಪ್ರಾಂತ್ಯದ ಜನ ಸ್ವಂತಂತ್ರ ಗ್ರೇಟರ್ ಸಿಂಧ್ ದೇಶಕ್ಕಾಗಿ ಹೋರಾಟಮಾಡುತ್ತಲೇ ಇದ್ದಾರೆ. ಆದರೆ ಈ ಬಾರಿ ಈ ಗಲಭೆ ಅಲ್ಲಿನ ಸರ್ಕಾರದ ಯಾವ ನಿಯಂತ್ರಣಕ್ಕೂ ಸಿಗುತ್ತಿಲ್ಲ. ಅಲ್ಲಿನ ಜನ ಮುನೀರ್ ನೇತೃತ್ವದಲ್ಲಿ ದೊಡ್ಡಪ್ರಮಾಣದಲ್ಲಿ ಹೋರಾಟಕ್ಕಿಳಿದಿದ್ದಾರೆ. ತಮಗೆ ಈ ಬಾರಿ ಪ್ರತ್ಯೇಕತೆ ಕೊಡಬೇಕು, ಅದೂ ಅಹಿಂಸಾತ್ಮಕವಾಗಿ, ಗೌರವಯುತವಾಗಿ ಎಂದು ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದಲ್ಲಿ ತಮ್ಮ ಹೋರಾಟ ನಿಮ್ಮ ನಿರೀಕ್ಷೆ ಮೀರಿಹೋಗುತ್ತದೆಂದು ಎಚ್ಚರಿಸಿದ್ದಾರೆ. ಸಾಲದ್ದಕ್ಕೆ ಅವರು ಮೋದಿ ಸರ್ಕಾರದ ನೆರವು ಕೋರಿದ್ದಾರೆ, ಆದರೆ ಪಾಕಿಸ್ತಾನದ ಕಷ್ಟ ಏನೆಂದರೆ ಸಿಂಧ್ ಬೇಡಿಕೆ ಈಡೇರಿಸಿದರೆ ಅತ್ತ ಬಲೂಚಿಗಳು, ವಾಯವ್ಯ ಭಾಗದ ಪಾಕಿಸ್ತಾನದ ಬೇಡಿಕೆ, ಈಗಾಗಲೇ ಈಜನ ತಮ್ಮನ್ನು ತಾವು ಸಿಂಧೂ ದೇಶದವರೆಂದು ಕರೆದುಕೊಂಡು, ಭಾರತ ಮತ್ತು ವಿಶ್ವಸಂಸ್ಥೆಗಳ ನೆರವು ಪಡೆಯಲು ಮೊರೆಹೋಗಿದ್ದಾರೆ.

ಭಾರತದ ಪಾಲಿಗೆ ಇದು ಬಯಸಿದ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ ಅನಿಸಿದರೂ ಸದ್ಯ ಪಾಕಿಸ್ತಾನದ ಯಾವ ಭಾಗವನ್ನೂ ಭಾರತ ತನ್ನ ಒಡಲಲ್ಲಿ ಸೇರಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಸದ್ಯದ ಇಡೀ ಪಾಕಿಸ್ತಾನ ಕೊಳಕುಮಂಡಲ ಹಾವಿನಂತಾಗಿದೆ. ಅದೇ ಹಠಮಾಡಿ ಭಾರತಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತೇವೆಂದರೂ ಅದನ್ನು ಭಾರತ ಮಾತ್ರವಲ್ಲ, ಪ್ರಪಂಚದಲ್ಲಿ ಚೀನಾ ಸೇರಿದಂತೆ ಯಾರೊಬ್ಬರೂ ಸ್ವೀಕರಿಸುವ ಸ್ಥಿತಿಯಲ್ಲಿಲ್ಲದಷ್ಟು ಅದು ಹಾಳಾಗಿಹೋಗಿದೆ. ಅಲ್ಲಿನ ಆರ್ಥಿಕ ಸ್ಥಿತಿಯನ್ನು ಪ್ರಪಂಚದ ಯಾವ ಅರ್ಥಶಾಸ್ತ್ರಜ್ಞ ಕೂಡ ಸರಿಪಡಿಸಲಾರ. ಸಾಮಾಜಿಕ ಸ್ಥಿತಿ ಯಾರಿಗೂ ಬೇಡ, ಇನ್ನು ರಾಜಕೀಯ ಉಗ್ರರ ಅಥವಾ ಅವರು ಬೆಂಲಿಸುವ ಸೇನೆಯ ಕೈಲಿದೆ. ಇಂಥ ಅಸಂಬದ್ಧ ದೇಶವನ್ನು ಯಾರು ಬಯಸುತ್ತಾರೆ? ಇಂದಿನ ಹೋರಾಟಕ್ಕೆ ಬಲವಾದ ಕಾರಣ ಒದಗಿಸಿದ್ದು ಸಿಂಧ್ ನೀರನ್ನು ಬಳಸಿಕೊಂಡು ಪಂಜಾಬ್ ಪ್ರದೇಶ ಯಾಂತ್ರಿಕ ರೀತಿಯಲ್ಲಿ ಉತ್ಪನ್ನ ಪಡೆಯುತ್ತಿದ್ದು ಸಂಪೂರ್ಣ ಉದ್ಯಮ ಸ್ವರೂಪ ಪಡೆದು ನ್ಯಾಯವಾಗಿ ಸಿಂಧ್ ಜನರಿಗೆ ದೊರೆಯಬೇಕಿದ್ದ ನೀರು ಸಿಗದಂತೆ ಸೇನಾ ಬೆಂಲದೊಂದಿಗೆ ಕಾಲುವೆ ಮೂಲಕ ಪಂಜಾಬ್ ಕಡೆ ತಿರುಗಿಸಿಕೊಂಡಿದ್ದಾಗಿದೆ.

ಇವೆಲ್ಲದರ ಜೊತೆಗೆ ಈ ಪ್ರದೇಶದಲ್ಲಿ ನಿರಂತರ ಮಾನವಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು ಈಜನರನ್ನು ಶೋಷಣೆಗೆ ಗುರಿ ಮಾಡಲಾಗುತ್ತಿದೆ, ಮಕ್ಕಳು ಮಹಿಳೆಯರು, ಮುದುಕರೆಂದು ನೋಡದೇ ದೌರ್ಜನ್ಯ ಮಾಡಲಾಗುತ್ತಿದೆ, ಇವೆಲ್ಲದರಿಂದ ಬೇಸತ್ತ ಅಲ್ಲಿನ ಜನ ಈ ಬಾರಿ ನಿರ್ಣಯಾತ್ನಕ ಹೋರಾಟಕ್ಕೆ ಇಳಿದಿದ್ದಾರೆ. ಸಿಂಧ್ ಹೋರಾಟಗಾರರು ಮತ್ತು ಮಾನವ ಹಕ್ಕು ಕಾರ್ಯಕರ್ತರನ್ನು ಹೀನಾಯವಾಗಿ ಕೊಲ್ಲಲಾಗುತ್ತಿದೆ. ಮುಖ್ಯವಾಗಿ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳು ನಿಂತಿವೆ, ದಿನ ಬಳಕೆಗೂ ನೀರಿಲ್ಲದಂತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಳೆಯ ವಯಸ್ಸಿನ ಬಾಲಕಿಯರ ಮೇಲೆ ಮದುವೆ ಹೆಸರಲ್ಲಿ ಭೀಕರ ದೌರ್ಜನ್ಯ ನಡೆಯುತ್ತಿದೆ. ಅದರಲ್ಲೂ ಅಲ್ಪ ಸಂಖ್ಯಾತ ಸಮುದಾಯಗಳ ಹೆಣ್ಣುಮಕ್ಕಳನ್ನು ಮೃಗೀಯವಾಗಿ ಕಾಣಲಾಗುತ್ತಿದೆ. ಈ ಭಾಗದಲ್ಲಿ ಪ್ರಕೃತಿ ವಿಕೋಪಗಳೂ ಹೆಚ್ಚಿದ್ದು ಸರ್ಕಾರ ಏನೂ ಮಾಡಲಾಗದೇ ಕುಳಿತಿದೆ.ತಿನ್ನಲು ಗತಿ ಲ್ಲದೇ ಭಿಕ್ಷೆ ಬೇಡಲೂ ಶಕ್ತಿ ಇಲ್ಲದಷ್ಟು ಇಡೀ ದೇಶಸೊರಗಿದೆ, ಜನರಲ್ಲಿ ಅಪೌಷ್ಟಿಕತೆ, ಬಡತನ ಮೇರೆ ಮೀರಿದೆ. ಅಗತ್ಯ ಆಹಾರ ವಸ್ತುಗಳ ಬೆಲೆ ಅನೂಹ್ಯ ಪ್ರಮಾಣದಲ್ಲಿ ಏರಿದೆ. ಟೊಮ್ಯಾಟೋ ಕೆಜಿಗೆ ಅಲ್ಲ, ಒಂದು ಬಿಡಿ ಹಣ್ಣಿನ ಬೆಲೆ ೭೫ ರೂಗಳಷ್ಟಾಗಿದೆ.  ಗೋದಿ ಹಿಟ್ಟಿನ ಬೆಲೆ ಕೆಜಿಗೆ ೧೦೦ ರೂ ದಾಟಿದೆ, ಅಕ್ಕಿಯ ಬೆಲೆ ೨೦೦ ರೂ ದಾಟಿದ್ದು ಈ ರುಳ್ಳಿ ಬೆಲೆ ೨೬೦ ರೂಗಳಷ್ಟಾಗಿದೆ. ಯಾವ ಪದಾರ್ಥವೂ ೧೫೦ರ ಒಳಗೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲ ಕಾರಣಕ್ಕೆ ಬೇಸತ್ತ ಇಲ್ಲಿನ ಜನತೆ ಪ್ರತ್ಯೇಕತೆಯ ಹೋರಾಟಕ್ಕಿಳಿದಿದ್ದಾರೆ.

ಸಾರ್ವಜನಿಕ ಆರೋಗ್ಯವಂತೂ ಸಂಪೂರ್ಣ ಹದಗೆಟ್ಟಿದ್ದು ಎಚ್ ಐವಿ ಪ್ರಕರಣಗಳು ಮೇರೆ ಮೀರುತ್ತಿವೆ, ಎಲ್ಲಿಯೂ ಆರೋಗ್ಯ ಮೂಲಸೌಕರ್ಯಳಿಲ್ಲವೆನ್ನಲಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಬದುಕಿದ್ದ ಸಿಂಧೂ ಜನತೆ ಈಗ ಮಾತ್ರ ಸಿಡಿದೆದ್ದಿದ್ದಾರೆ, ಈಗಿನ ಬೆಳವಣಿಗೆ ನೋಡಿದರೆ ಈ ಗಲಭೆ ಇನ್ನೂ ವೇಗವಾಗಿ ಹಬ್ಬುತ್ತದೆಯೇ ವಿನಾ ನಿಲ್ಲುವ ಲಕ್ಷಣಗಳಿಲ್ಲ, ಇನ್ನೊಂದು ವಾರದಲ್ಲಿ ಪಾಕಿಸ್ತಾನದ ಹಣೆಬರೆಹವನ್ನು ಇದು ನಿರ್ಧರಿಸಲಿದೆ. ನೆರೆಯ ಪಾಕಿಸ್ತಾನ ಭಾರತದ ವೈರಿ ಆಗಿದ್ದರೂ ಅದು ನಾಶವಾದರೆ ನಮಗೆ ಸಂತೋಷವೇನೂ ಇಲ್ಲ, ಏಕೆಂದರೆ  ನೆರೆಹೊರೆ ಚೆನ್ನಾಗಿದ್ದರೆ ಮಾತ್ರ ನಾವು ಕೂಡ ಸುಖವಾಗಿರಬಹುದು. ಇದು ನಮ್ಮ ಧೋರಣೆ, ಆದರೆ ಪಾಕಿಸ್ತಾನಕ್ಕೆ ಬುದ್ಧಿ ಯಾವಾಗ ಬರುತ್ತದೋ ಅವರ ದೇವನೇ ಬಲ್ಲ.



 


No comments:

Post a Comment