ಆದರೆ ಶತ್ರುವಿನ ಶತ್ರು ತನಗೆ ಮಿತ್ರ ಎಂಬಂತೆ ಇವರೆಲ್ಲ ಒಟ್ಟಾಗಿ ಭಾರತದ ವಿರುದ್ಧ ನಿಂತರೆ ನಮ್ಮ ದೇಶದ ಸುತ್ತ ಶತ್ರುಗಳ ಕೋಟೆ ನಿರ್ಮಾಣವಾಗುತ್ತದೆ. ಇದರಿಂದ ಭಾರತ ಪಾರಾಗುವುದು ಕಷ್ಟವಾಗುತ್ತದೆ. ಚೀನಾ ಹೇಳಿ ಕೇಳಿ ಭೂಪ್ರದೇಶವನ್ನು ಕಬಳಿಸುವ ಬುದ್ಧಿಯುಳ್ಳ ದೇಶ. ಪಾಕಿಸ್ತನ ಒಳಗೊಳಗೇ ಮರದ ಕಾಂಡ ಕೊರೆಯುವ ಹುಳವಿದ್ದಂತೆ ಇನ್ನು ಶ್ರೀಲಂಕಾ ಮತ್ತು ಬಾಂಗ್ಲಾಗಳು ಸ್ವತಂತ್ರ ಬಲವಿಲ್ಲದ ಆದರೆ ಅನ್ಯರಿಗೆ ಸಾಕಷ್ಟು ಹನಿ ಮಡುವ ಶಕ್ತಿ ಇರುವ ದೇಶಗಳು. ಈ ಅಪಾಯ ನಮ್ಮ ದೇಶದ ಮುಖಂಡರಿಗೆ ತಿಳಿದಿಲ್ಲವೆಂದಲ್ಲ, ಅದರೆ ಈ ಎಲ್ಲ ನಾಲ್ಕು ದೇಶಗಳು ಒಂದು ಸಂದರ್ಭಕ್ಕಾಗಿ ಕಾಯುತ್ತಿರುವಂತೆ ಕಾಣುತ್ತದೆಯಾದರೂ ಎಲ್ಲರಿಗೂ ಸರಿಹೊಂದುವ ಸಮಾನ ಕಾರಣ ಸಿಗುವುದು ಕಷ್ಟ. ಇವೆಲ್ಲದರ ಮಧ್ಯೆ ಸದ್ಯ ಭಾರತದ ವಿರುದ್ಧ ನೆರೆಯ ಬಾಂಗ್ಲಾ ಮತ್ತು ಮಯನ್ಮಾರ್ ದೇಶಗಳು ಮಾದಕ ದ್ರವ್ಯದ ಮೂಲಕ ಉಪಟಳ ಶುರು ಮಾಡಿವೆ. ಈ ದ್ರವ್ಯದ ಹೆಸರು ಯಾಬಾ. ಇದು ಒಂದು ಬಗೆಯ ಔಷಧ ಎಂಬ ನೆಪದಲ್ಲಿ ಭಾರತದ ಒಳಗೆ ಬರುತ್ತಿದೆ. ಇದನ್ನು ಮತ್ರೆಯ ರೂಪದಲ್ಲಿ ಬಾಯಿ ಮೂಲಕ ಸೇವಿಸಲಾಗುತ್ತದೆ. ಪೆಪ್ಪರ್ಮಿಂಟ್, ಮಾತ್ರೆ, ಚಾಕೋಲೇಟ್ ರೂಪದಲ್ಲಿ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿ ಸಿದ್ಧಪಡಿಸಿ ಭಾರತದೊಳಗೆ ತೋರಿಸಲಾಗುತ್ತಿದೆ. 2022 ರಿಂದ ಇಲ್ಲಿಯವರೆಗೆ ಸಾವಿರಾರು ಲಾಬಾವನ್ನು ಗಡಿ ಭದ್ರತಾಪಡೆ ಹಿಡಿದಿದೆ. ಇದರ ದ್ರವ ರೂಪವನ್ನು ಇಂಜೆಕ್ಷನ್ ರೂಪದಲ್ಲೂ ವ್ಯಸನಿಗಳು ತೆಗೆದುಕೊಳ್ಳುತ್ತರಂತೆ.
ಸಾಮಾನ್ಯವಗಿ ಮೋಜು ಮಸ್ತಿಯ ಹೆಸರಲ್ಲಿ ರೇವ್ ಪಾರ್ಟಿ ಮಾಡುವ ಜನ ಸದ್ಯ ಇದರ ಹಿಂದೆ ಬಿದ್ದಿದ್ದಾರೆನ್ನಲಾಗಿದೆ. ದೆಹಲಿ, ಮುಂಬೈ, ಬೆಂಗಳೂರಿನಂಥ ಮಹಾನಗರಗಳು ಇದರ ಅಡ್ಡೆಗಳಂತೆ. ಇದರ ಒಂದು ಸಾಮಾನ್ಯ ಮಾತ್ರೆ ಗಾತ್ರದ ಯಾಬಾದ ಬೆಲೆ 800 ರಿಂದ ಒಂದು ಸಾವಿರವಂತೆ. ಇದನ್ನು ಭಾರತದ ಎಲ್ಲ ಕಡೆಯ ಗಡಿಗಳ ಮೂಲಕವೂ ತೂರಿಸಲಗುತ್ತಿದೆಯಂತೆ. ಅಂದಹಗೆ ಇದರ ಸೇವನೆಯಿಂದ ತಾತ್ಕಲಿಕ ಭ್ರಮೆ ಆವರಿಸುತ್ತದೆ ಎನ್ನಲಾಗಿದೆ, ತಾತ್ಕಾಲಿಕ ಹುಚ್ಚುತನವೂ ಬರುತ್ತದೆ ಎನ್ನಲಾಗಿದೆ. ಮಾದಕ ದ್ರವ್ಯ ಸೇವಿಸುವವರು ಇಂಥ ಹುಚ್ಚುತನ ಬಯಸುವುದರಿಂದ ಅವರೇ ಇದರ ಪ್ರಮುಖ ಗಿರಾಕಿಗಳು. ಸಾಮಾನ್ಯವಾಗಿ ಸಿನಿಮಾ ಕಿರುತೆರೆಯ ಜನ ಇದರ ಹಿಂದಿರುವ ಹಣವಂತ ಕುಳಗಳು. ಈ ಮಾತ್ರೆ ರೂಪದ ದ್ರವ್ಯ ನಮ್ಮ ಶಾಲಾ ಕಾಲೇಜುಗಳನ್ನೂ ಸದ್ದು, ವಾಸನೆಗಳಿಲ್ಲದೇ ಪ್ರವೇಶಿಸಿವೆ ಅನ್ನಲಾಗಿದ್ದು ಇದೊಂದು ಭಯಾನಕ ವಿಷಯ. ಯಾವುದೇ ಬಗೆಯ ಅಡ್ಡ ವಾಸನೆ ಬಾರದ ಕಾರಣ ಇದನ್ನು ಸೇವಿಸಿದವರು ಎಲ್ಲರ ನಡುವೆ ಇದ್ದರೂ ಯಾರಿಗೂ ಯವ ಅನುಮಾನವೂ ಬರುವುದಿಲ್ಲ, ಇದರಲ್ಲಿ ಮೆಟಾಂಫೆಟಾಮೈನ್ ಎಂಬ ರಾಸಾಯನಿಕವಿದ್ದು ನರಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆಯಂತೆ. ಒಮ್ಮೆ ಇದನ್ನು ಸೇವಿಸಿದವರು ವ್ಯಸನಿಗಳಾಗುತ್ತಾರೆನ್ನಲಾಗಿದೆ. ಭಾರತದ ಶಕ್ತಿಯನ್ನು ಕುಗ್ಗಿಸಲು ನಮ್ಮ ಸುತ್ತಲಿನ ಶತ್ರು ದೇಶಗಳು ಈ ಮಾರ್ಗವನ್ನು ಹಿಡಿದಿವೆ. ಇದು ಯುದ್ಧದ ಒಂದು ಮಾದರಿ. ನಮ್ಮ ಸಮಾಜ ಇದರ ವಿರುದ್ಧ ಆದಷ್ಟು ಬೇಗ ಜಾಗ್ರತವಾಗುವ ಅಗತ್ಯವಿದೆ. ಭರತದ ದೊಡ್ಡ ದೊಡ್ಡ ಔಷಧ ವ್ಯಾಪಾರಿಗಳು ಇದನ್ನು ಸಾಮಾನ್ಯ ಔಷಧಗಳ ಜೊತೆ ಸುಲಭವಾಗಿ ಸಾಗಾಟ ಮಾಡುತ್ತಿದ್ದು ಹಣದ ಆಸೆ ಇದನ್ನೆಲ್ಲ ಮಾಡಿಸುತ್ತಿದ್ದು ಶತ್ರು ದೇಶಗಳಿಗೆ ಮಾರ್ಗ ಸುಲಭವಾಗಿದೆ. ಈಚೆಗೆ ಮಣಿಪುರದಲ್ಲಿ ಕುಕಿಗಳು ಮತ್ತು ಮೈತಿ ಬುಡಕಟ್ಟುಗಳ ಕದನದ ಹಿಂದೆಯೂ ಯಾಬಾ ಸೇರಿಕೊಂಡಿದೆ ಅನ್ನಲಾಗಿದೆ. ಆದಷ್ಟು ಬೇಗ ಇದು ನಮ್ಮ ದೇಶದ ಹಳ್ಳಿ ಮೂಲೆಗಳನ್ನು ಶಾಲೆಗಳನ್ನು ತಲುಪುವ ಸಾಧ್ಯತೆಯನ್ನು ತಡೆಯುವ ಅಗತ್ಯವಿದೆ. ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವ ಪೋಷಕರ ಜವಾಬ್ದಾರಿ ಹತ್ತು ಪಟ್ಟು ಈಗ ಹೆಚ್ಚಿದೆ. ಇಂಥ ವಿಷಯಗಳಿಂದ ನಮ್ಮ ಸಮಾಜವನ್ನು ಮತ್ತು ದೇಶವನ್ನು ಕಾಪಾಡುವ ಸವಾಲು ನಮ್ಮ ಮುಂದಿದೆ.

No comments:
Post a Comment