ಅಲ್ಲದೇ ಹತ್ತು ಡಿಗ್ರಿಯೊಳಗೆ ಸೂರ್ಯನ ಸಮೀಪ ಬುಧವೊಂದನ್ನು ಬಿಟ್ಟು ಯಾವುದೇ ಗ್ರಹ ಬಂದರೆ ಅವು ಸೂರ್ಯನಲ್ಲಿ ಲೀನವಾಗುತ್ತವೆ, ಹೀಗಿರುವಾಗ, ಜ್ಯೋತಿಷದಂತೆ ಗುರುವಿನ ಆಗಮನವನ್ನು ಕಾಯ್ದು ಪುಣ್ಯಸ್ನಾನ ನಡೆಸಬಹುದು. ಶಾಸ್ತçದಂತೆ ಪ್ರಯಾಗರಾಜದಲ್ಲಿ ಮಾತ್ರವಲ್ಲ, ಮೂರು ನದಿಗಳು ಸಂಗಮವಾಗುವ ನರ್ಮದಾ, ಗಂಗಾ, ಶಿಪ್ರಾ ಮತ್ತು ಗೋದಾವರಿ ತೀರಗಳಲ್ಲಿ ಹಿಂದಿನಿಂದಲೂ ನಡೆಯುತ್ತಿದೆ, ನಿಜವಾಗಿ ಸಂತರು, ಸಾಧಕರ ದೇಶವಾದ ಈ ನಾಡಿನಲ್ಲಿ ಸಾಧಕರು ಸಾಮಾನ್ಯ ಜೀವನದಿಂದ ವಿಮುಖರಾಗಿ ದೂರ ಕಾಡು, ಗುಡ್ಡ ಬೆಟ್ಟಗಳಿಗೆ ಹೋಗಿ ಸಾಧನೆಯಲ್ಲಿ ತೊಡಗಿರುತ್ತಾರೆ, ಕುಂಭಸ್ನಾನದ ವೇಳೆಯಲ್ಲಿ ಸಮಾಜವನ್ನು ಅವಲೋಕಿಸುವ ಉದ್ದೇಶದಿಂದ ಅವರು ನಾಲ್ಕು ವರ್ಷಕ್ಕೊಮ್ಮೆ ಹೊರಗೆ ಬರುತ್ತಾರೆ, ಇದು ಪದ್ಧತಿ. ಪ್ರತಿ ೧೪೪ ವರ್ಷ ಅಂದರೆ ಅಷ್ಟು ವರ್ಷ ಜೀವಂತವಾಗಿರುವ ಸಾಧಕರು ಕೂಡ ಬಹಳ ಕಡಿಮೆ, ಅಲ್ಲದೇ ಈಗ ನಡೆಯುತ್ತಿರುಉವ ಕುಂಭ ಮೇಳ ಕೂಡ ನಮಗೆ ನೆನಪಿರುವಂತೆ ೧೯೮೩, ೨೦೦೧ರಲ್ಲಿ ಕೂಡ ನಡೆದಿದೆ, ಇವೆಲ್ಲ ೧೪೪ ವರ್ಷಕ್ಕೆ ನಡೆದವೇ? ಒಂದು ರೀತಿಯಲ್ಲಿ ಈ ಬಾರಿ ನಡೆದ ಕುಂಭ ಮೇಳ ಪ್ರತಿ ೧೪೪ ವರ್ಷಕ್ಕೊಮ್ಮೆ ಘಟಿಸುತ್ತದೆ ಎಂದು ಹೇಳಿದ್ದರಿಂದ ಉತ್ತರಪ್ರದೇಶ ಹಾಗೂ ಪ್ರಯಾಗ ರಾಜ್ ನಲ್ಲಿ ೫೦-೬೦ ಕೋಟಿ ಜನ ಸೇರುವಂತೆ ಒಂದೇ ಕಡೆ ಮೂರು ಲಕ್ಷ ಕೋಟಿ ರೂ ಹರಿಯುವಂತೆ, ಇನ್ನು ನಮ್ಮ ಈ ಜೀವಿತಾವಧಿಯಲ್ಲಿ ಕುಂಭ ಸ್ನಾನ ಕನಿಷ್ಠ ಪಕ್ಷ ನೋಡಲೂ ಸಾಧ್ಯವಿಲ್ಲ ಅಂದುಕೊಂಡ ಜನಸಾಮಾನ್ಯರು ಅಲ್ಲಿ ನುಗ್ಗಿ ಸಂಚಾರ ವ್ಯತ್ಯಯ, ನೂಕುನುಗ್ಗಲು, ಜೀವಹಾನಿಯಂಥ ಕೆಲವು ಘಟನೆಗಳಿಗೂ ಸಾಕ್ಷಿ ಆಗುವಂತೆ ಆಯಿತು, ಈ ಕುಂಭ ಮೇಳದ ಆರ್ಥಿಕ ಲಾಭ ಅನೂಹ್ಯ. ಇವೆಲ್ಲ ಸಂಗತಿಗಳು ನಮ್ಮ ಹಿರಿಯರಿಗೆ ತಿಳಿಯದ ಸಂಗತಿಗಳೇನೂ ಆಗಿರಲಿಲ್ಲ, ಹೀಗಾಗಿ ಅವರು ದೇಶಾದ್ಯಂತ ಇರುವ ನದಿಗಳ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ಕೊಟ್ಟಿದ್ದರು, ಈಗ ನೋಡಿ ನಮ್ಮ ಟಿ. ನರಸೀಪುರದ ಸಂಗಮದಲ್ಲಿ ಇದೇ ಫೆಬ್ರವರಿ ೧೦ರಿಂದ ೨೦ರವರೆಗೆ ಪುಣ್ಯಸ್ನಾನ ನಡೆಯಲಿದೆ. ಇದರಿಂದ ದೇಶಾದ್ಯಂತ ಇರುವ ಸಾಧಕರಿಗೆ, ಜನಸಾಮಾನ್ಯರಿಗೆ ಒಂದೆಡೆ ಸೇರಲು, ಸಾಮಾಜಿಕವಾಗಿ ಪರಸ್ಪರ ಒಂದಾಗಲು, ಬೇಧಭಾವ ಮರೆಯಲು ಅನುಕೂಲ ಮಾಡಿಕೊಡುತ್ತದೆ, ಇದನ್ನು ಪಾಶ್ಚಾತ್ಯರು ಸ್ನಾನ ಮಾಡದ ಭಾರತೀಯರು ಸ್ನಾನ ಮಾಡುತ್ತಾರೆಂದೆಲ್ಲ ಟೀಕಿಸಬಹುದು, ಇವರ ಅನುಯಾಯಿಗಳು ನಮ್ಮಲ್ಲೂ ಇರಬಹುದು, ಆದರೆ ಇದರಿಂದ ಆಗುವುದು ಕೇವಲ ಆರ್ಥಿಕ ಲಾಭ ಮಾತ್ರವಲ್ಲ, ಸಮಾಜದಲ್ಲಿರುವ ಅನೇಕಾನೇಕ ಜಾತಿ, ಗುಂಪುಗಳು ಈ ನೆಪದಲ್ಲಿ ಒಂದೆಡೆ ಸೇರಿ ತಾವೆಲ್ಲ ಒಂದೇ ಎಂದು ಭಾವಿಸುತ್ತಾರೆ, ನನಗೇ ವೈಯಕ್ತಿಕವಾಗಿ ತಿಳಿದಂತೆ ಹಿಂದೂ ಸಮಾಜದ ವಿವಿಧ ಜಾತಿ ಜನ ಮಾತ್ರವಲ್ಲ, ಭಾರತೀಯ ಸಮಾಜದ ಭಾಗವಾದ ಮುಸ್ಲಿಂ, ಕ್ರಿಶ್ಚಿಯನ್ ಜನ ಕೂಡ ಈ ಕುಂಭದಲ್ಲಿ ಸಂತೋಷವಾಗಿ ಮಿಂದು ಬಂದಿದ್ದಾರೆ, ಸಮಾಜದ ಏಕತೆಗೆ ಇದೊಂದು ನೆಪ, ಹಾಗೆ ನೋಡಿದರೆ ಅಧ್ಯಾತ್ಮ ಹೆಸರಿನ ಸಾಮಾಜಿಕ ಸಂಗಮ ಇದು, ಕೇವಲ ನದಿಗಳ ಸಂಗಮವಲ್ಲ, ಮನುಷ್ಯ ಬದುಕಿದ್ದಾಗ ಯಾವ ಗಾಳಿಯ, ಬೆಂಕಿಯ, ನೀರಿನ ಅಂಶವನ್ನು ಯಾರು ಹೇಗೆ ಎಲ್ಲಿ ಬಳಸಿ ಬಿಟ್ಟಿರುತ್ತಾರೋ ಅದು ಮುಂದೆ ಸಾಗಿ ಎಲ್ಲೋ ಒಂದೆಡೆ ಶಿವನಿಗೆ ಅಭಿಷೇಕ ಆಗಬಹುದು, ಮಡಿವಂತ ಬ್ರಾಹ್ಮಣ ಆಚಮನ ಮಾಡಬಹುದು, ನಾವು ಈಗ ಉಸಿರಾಡುವ ಗಾಳಿಯನ್ನು ಯಾರು ಎಲ್ಲೆಲ್ಲಿ ಉಸಿರಾಡಿ ಬಿಟ್ಟಿದ್ದೋ, ಎಷ್ಟುಜನರ ಸಿಗರೇಟಿನ ಹವೆ ಇದರಲ್ಲಿ ಸೇರಿತ್ತೋ ಇದನ್ನೆಲ್ಲ ಯೋಚಿಸುತ್ತ ಕುಳಿತರೆ ಬದುಕು ಸಾಧ್ಯವಿಲ್ಲ, ಹೀಗಾಗಿ ಸತ್ತ ಮೇಲೆ ನಾವೆಲ್ಲ ಲೀನವಾಗುವುದು ಪ್ರಕೃತಿಯಲ್ಲಿ. ಅಲ್ಲಿ ಎಲ್ಲ ಒಂದೇ ಎಂಬುದನ್ನು ಈ ಸ್ನಾನ ನಮಗೆ ಅರ್ಥ ಮಾಡಿಸುತ್ತದೆ. ಜೊತೆಗೆ ನಮ್ಮ ಸಾಮಾಜಿಕ ವೈವಿಧ್ಯವನ್ನು ಜಗತ್ತೇ ಬೆರಗಾಗುವಂತೆ ತೋರಿಸಿದೆ. ಸುಮ್ಮನೇ ಪ್ರತಿ ೧೪೪ ವರ್ಷಕ್ಕೊಮ್ಮೆ ಮಾತ್ರ ಇದು ನಡೆಯುತ್ತದೆ ಎಂದು ಸುದ್ದಿ ಹರಡಿಸುವ ಬದಲು ಆಯಾ ಪ್ರದೇಶಗಳಲ್ಲಿ ಇದು ಹಿಂದಿನಿಂದಲೂ ನಡೆಯುತ್ತದೆ ಅನುಕೂಲ ಇರುವವರು ಅಲ್ಲಿ ಪಾಲ್ಗೊಳ್ಳಿ ಎಂದು ಹೇಳಿದ್ದರೆ ಪ್ರಯಾಗ್ ರಾಜ್ ನಲ್ಲಿ ಒಂದೇ ಕಡೆ ಜನ - ಧನ ಸೇರಿ ಅವಾಂತರ ಆಗುವುದು ತಪ್ಪುತ್ತಿತ್ತು ಅನಿಸುತ್ತದೆ. ಅಲ್ಲದೇ ಪ್ರಪಂಚಾದ್ಯಂತ ಕುತೂಹಲ ಹುಟ್ಟಿಸಿದ್ದ ಈ ಮೇಳ ಮಹಾನ್ ಮಾನವ ಸಂಗಮದ ದಾಖಲೆಯಾಗಿದೆ. ಪ್ರಯಾಗ್ ರಾಜ್ ನಲ್ಲಿ ವಸತಿ, ಊಟ ಇತ್ಯಾದಿಗಳೆಲ್ಲ ಕೋಟಿ ಕೋಟಿ ಜನಕ್ಕೆ ಸೇವೆಯ ರೂಪದಲ್ಲಿ ಸಂದಿವೆ, ಇಲ್ಲೆಲ್ಲೂ ವ್ಯವಹಾರ ತಲೆಹಾಕಿಲ್ಲ, ಅಲ್ಲಲ್ಲಿ ಆಗಿರುವ ಅವ್ಯವಸ್ಥೆಯನ್ನು ಕೂಡ ಜನ ಸಮಾಧಾನದಿಂದ ಸ್ವೀಕರಿಸಿದ್ದಾರೆ, ಅಲ್ಲಿ ಹೋಗಿರುವುದು ಸುಖಪಡುವ ಪ್ರವಾಸ ಅಥವಾ ಪಿಕ್ ನಿಕ್ ಗಾಗಿ ಅಲ್ಲ ಎಂಬುದು ಶ್ರದ್ಧಾಳುಗಳಿಗೆ ತಿಳಿದಿದೆ. ಈ ಮೂಲಕ ಭಾರತದ ಶ್ರದ್ಧೆಯ ಒಂದು ಸೆಳಕನ್ನು ಪ್ರಪಂಚಕ್ಕೆ ಕಾಣಿಸಿದೆ. ನೋಡಿ - ಪ್ರಯಾಗ್ ರಾಜ್ ನಲ್ಲಿ ವಿವಿಧ ಸಂಪ್ರದಾಯದ ಸಾಧು ಸಂತರು ಅಖಾಡಗಳ ಹೆಸರಲ್ಲಿ ಸೇರಿ ಸಂಭ್ರಮ ಮೆರೆದಿದ್ದಾರೆ, ಸಂಭ್ರಮದಲ್ಲಿ ಸ್ವಲ್ಪ ನೂಕುನುಗ್ಗಲು ಉಂಟಾಗಿ ಕೆಲವು ಸಾವು ಘಟಿಸಿದೆ, ಆದರೆ ಜಾತಿ ಮತಗಳ ಹೆಸರಲ್ಲಿ ಅಲ್ಲಿ ಯಾವ ಗಲಾಟೆಯೂ ಆಗಿಲ್ಲ ಎಂಬುದನ್ನು ಗಮನಿಸಿ. ಇದೇ ನಮ್ಮ ಸಂಪ್ರದಾಯದ ಹೆಚ್ಚುಗಾರಿಕೆಯನ್ನು ಹೇಳುತ್ತದೆ. ನಮ್ಮ ಆಧ್ಯಾತ್ಮಿಕ ಚಿಂತನೆಯ ಸಾರವನ್ನು, ಹೇಳುತ್ತದೆ. ಇದನ್ನು ನಾವು ಗಮನಿಸುವುದನ್ನು ಬಿಟ್ಟು ಇಲ್ಲಿಯೂ ಚಿಲ್ಲರೆ ರಾಜಕೀಯ ನಡೆಸುತ್ತಿದ್ದೇವೆ. ಈ ಕುಂಭದಿಂದ ಪ್ರವಾಸೋದ್ಯಮಕ್ಕೆ ಆದ ಲಾಭ ಎಷ್ಟು ಎಂಬ ಲೆಕ್ಕ ಇನ್ನೂ ಸಿಕ್ಕಿಲ್ಲ, ಕುಂಭ ಸ್ನಾನದ ವೇಳೆ ಪ್ರಯಾಗರಾಜ್ ವಿಮಾನ ಟಿಕೆಟ್ ದರ ೫೦-೭೦ಸಾವಿರ ಇತ್ತು ಅನ್ನಲಾಗಿದೆ, ಇದಲ್ಲದೇ ಅಸಂಖ್ಯ ಕಾರು, ಬಸ್ಸು ಆಟೋ ಇವುಗಳ ಲೆಕ್ಕ ಎಲ್ಲೂ ಸಿಗುವುದಿಲ್ಲ, ಇವೆಲ್ಲ ಬಿಟ್ಟರೂ ಇದರಿಂದ ಆಗಿರುವ ಸಾಮಾಜಿಕ ಐಕ್ಯಮತದ ಭಾವನೆಗೆ ಬೆಲೆ ಕಟ್ಟಲು ಸಾಧ್ಯವೇ?
Monday, 24 February 2025
ಐಕಮತ್ಯ ಸಾರಿದ ಮಹಾಕುಂಭ
ನಾಳೆ ಪ್ರಪಂಚಾದ್ಯಂತ ಪ್ರಸಿದ್ಧಿ ಪಡೆದ ಮಹಾಕುಂಭಮೇಳ ಮುಕ್ತಾಯ ಕಾಣಲಿದೆ. ಈ ಮಧ್ಯೆ ಕೆಲವು ಸಂಗತಿಗಳ ಚರ್ಚೆ ಮಾಡಬೇಕಿದೆ, ಮಹಾಕುಂಭ ಮೇಳ ಬಹಳಷ್ಟು ಜನ ತಿಳಿದಂತೆ ೧೪೪ ವರ್ಷಗಳಿಗೊಮ್ಮೆ ನಿಜವಾಗಿ ನಡೆಯುವುದಲ್ಲ. ಇದರ ಮುಹೂರ್ತ ನೋಡಿ - ಸೂರ್ಯ, ಚಂದ್ರ ಮತ್ತು ಗುರು ಗ್ರಹಗಳ ಸ್ಥಿತಿ ಏಕರೇಖೆಯಲ್ಲಿ ಬಂದಾಗ ಇದು ಘಟಿಸುತ್ತದೆ ಎಂದು ಹೇಳಲಾಗಿದೆ. ಜ್ಯೋತಿಷದ ಪ್ರಕಾರ ಕೂಡ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಇದು ಘಟಿಸಬಹುದು ಹೇಗೆಂದರೆ, ಚಂದ್ರ ಎರಡು ದಿನಕ್ಕೊಮ್ಮೆ ರಾಶಿ ಬದಲಿಸುತ್ತದೆ, ಗುರು ನಾಲ್ಕು ವರ್ಷಕ್ಕೊಮ್ಮೆ, ಸೂರ್ಯತಿಂಗಳಿಗೊಮ್ಮೆ, ತಮ್ಮ ರಾಶಿ ಬದಲಿಸುತ್ತವೆ ಹೀಗೆ ಗ್ರಹಗಳು ಹನ್ನೆರಡು ಮನೆಗಳನ್ನು ಸುತ್ತುವಾಗ ಎಲ್ಲೋ ಒಂದು ಕಡೆ ಅವು ಸೇರುತ್ತವೆ.ಅಂಥ ಸಂದರ್ಭದಲ್ಲಿ ಪುಣ್ಯಸ್ನಾನ ನಡೆಯಬಹುದು.
Subscribe to:
Post Comments (Atom)

No comments:
Post a Comment