Bhattara Blog (ಭಟ್ಟರ ಬ್ಲಾಗ್)
ಜನಪ್ರಿಯ ಹಾಗೂ ಸಂಶೋಧನ ಲೇಖನಗಳ ಸಂಗ್ರಹ
Saturday, 13 December 2025
ಸೊಕ್ಕಿನ ಅಮೆರಿಕಕ್ಕೆ ಬುದ್ಧಿ ಕಲಿಯುವ ಸಮಯ
Wednesday, 10 December 2025
ಪಾಕಿಸ್ತಾನದ ಭವಿಷ್ಯ ನಿರ್ಧರಿಸಲಿರುವ ಗಲಭೆ
ಇದುವರೆಗೆ ಬಲೂಚಿಸ್ತಾನ್ ಪಂಜಾಬ್ ಗಲಾಟೆಗಳು ಆದವು, ಅದು ತಣ್ಣಗಾಯ್ತು ಅನ್ನುವಷ್ಟರಲ್ಲಿ ಇದೀಗ ದೊಡ್ಡಪ್ರಮಾಣದಲ್ಲಿ ಸಿಂಧ್ ಪ್ರದೇಶದಲ್ಲಿ ಇದೇ ಕಾರಣಕ್ಕೆ ಗಲಾಟೆ ಶುರುವಾಗಿದೆ. ಸಿಂಧ್ ನಲ್ಲಿ ನಡೆಯುತ್ತಿರುವ ಗಲಾಟೆಗೆ ಹಲವು ಆಯಾಮಗಳಿವೆ. ಆರ್ಥಿಕ ಹಿಂದುಳಿದಿರುವಿಕೆ, ರಾಜಕೀಯ ನಿರ್ಲಕ್ಷ್ಯ, ನಿರುದ್ಯೋಗ ಮತ್ತು ಅಧಿಕಾರಿಗಳ ದಬ್ಬಾಳಿಕೆಗಳು ಇವುಗಳಲ್ಲಿ ಮುಖ್ಯವಾದವು. ಅದರಲ್ಲೂ ಜಲಮೂಲದ ಗಲಭೆ ಅತ್ಯಂತ ಮುಖ್ಯವಾಗಿದೆ. ಪಾಕಿಸ್ತಾನದ ಅಗತ್ಯದ ಮುಕ್ಕಾಲು ಪಾಲು ನೀರಿನ ಮೂಲ ಸಿಂಧ್ ಪ್ರಾಂತ್ಯದಿಂದ ಪೂರೈಕೆಯಾಗುತ್ತದೆ. ಕೃಷಿಗೂ ಇದೇ ಪ್ರಮುಖ ಮೂಲ, ಈ ಪ್ರದೇಶಕ್ಕೆ ರಾಜಕೀಯ ಕಾರಣಕ್ಕೆ ಪಂಜಾಬ್ ಪ್ರದೇಶವನ್ನು ಸೇರಿಸಿದ್ದು, ತಮಗೆ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬುದು ಸಿಂಧ್ ಜನರ ಬಹುಕಾಲದ ಆರೋಪ. ಇದಕ್ಕೆ ಪೂರಕವಾಗಿ ಸಿಂಧ್ ಪ್ರಾಂತ್ಯದ ಜನ ಸ್ವಂತಂತ್ರ ಗ್ರೇಟರ್ ಸಿಂಧ್ ದೇಶಕ್ಕಾಗಿ ಹೋರಾಟಮಾಡುತ್ತಲೇ ಇದ್ದಾರೆ. ಆದರೆ ಈ ಬಾರಿ ಈ ಗಲಭೆ ಅಲ್ಲಿನ ಸರ್ಕಾರದ ಯಾವ ನಿಯಂತ್ರಣಕ್ಕೂ ಸಿಗುತ್ತಿಲ್ಲ. ಅಲ್ಲಿನ ಜನ ಮುನೀರ್ ನೇತೃತ್ವದಲ್ಲಿ ದೊಡ್ಡಪ್ರಮಾಣದಲ್ಲಿ ಹೋರಾಟಕ್ಕಿಳಿದಿದ್ದಾರೆ. ತಮಗೆ ಈ ಬಾರಿ ಪ್ರತ್ಯೇಕತೆ ಕೊಡಬೇಕು, ಅದೂ ಅಹಿಂಸಾತ್ಮಕವಾಗಿ, ಗೌರವಯುತವಾಗಿ ಎಂದು ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದಲ್ಲಿ ತಮ್ಮ ಹೋರಾಟ ನಿಮ್ಮ ನಿರೀಕ್ಷೆ ಮೀರಿಹೋಗುತ್ತದೆಂದು ಎಚ್ಚರಿಸಿದ್ದಾರೆ. ಸಾಲದ್ದಕ್ಕೆ ಅವರು ಮೋದಿ ಸರ್ಕಾರದ ನೆರವು ಕೋರಿದ್ದಾರೆ, ಆದರೆ ಪಾಕಿಸ್ತಾನದ ಕಷ್ಟ ಏನೆಂದರೆ ಸಿಂಧ್ ಬೇಡಿಕೆ ಈಡೇರಿಸಿದರೆ ಅತ್ತ ಬಲೂಚಿಗಳು, ವಾಯವ್ಯ ಭಾಗದ ಪಾಕಿಸ್ತಾನದ ಬೇಡಿಕೆ, ಈಗಾಗಲೇ ಈಜನ ತಮ್ಮನ್ನು ತಾವು ಸಿಂಧೂ ದೇಶದವರೆಂದು ಕರೆದುಕೊಂಡು, ಭಾರತ ಮತ್ತು ವಿಶ್ವಸಂಸ್ಥೆಗಳ ನೆರವು ಪಡೆಯಲು ಮೊರೆಹೋಗಿದ್ದಾರೆ.
ಭಾರತದ ಪಾಲಿಗೆ ಇದು ಬಯಸಿದ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ ಅನಿಸಿದರೂ ಸದ್ಯ ಪಾಕಿಸ್ತಾನದ ಯಾವ ಭಾಗವನ್ನೂ ಭಾರತ ತನ್ನ ಒಡಲಲ್ಲಿ ಸೇರಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಸದ್ಯದ ಇಡೀ ಪಾಕಿಸ್ತಾನ ಕೊಳಕುಮಂಡಲ ಹಾವಿನಂತಾಗಿದೆ. ಅದೇ ಹಠಮಾಡಿ ಭಾರತಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತೇವೆಂದರೂ ಅದನ್ನು ಭಾರತ ಮಾತ್ರವಲ್ಲ, ಪ್ರಪಂಚದಲ್ಲಿ ಚೀನಾ ಸೇರಿದಂತೆ ಯಾರೊಬ್ಬರೂ ಸ್ವೀಕರಿಸುವ ಸ್ಥಿತಿಯಲ್ಲಿಲ್ಲದಷ್ಟು ಅದು ಹಾಳಾಗಿಹೋಗಿದೆ. ಅಲ್ಲಿನ ಆರ್ಥಿಕ ಸ್ಥಿತಿಯನ್ನು ಪ್ರಪಂಚದ ಯಾವ ಅರ್ಥಶಾಸ್ತ್ರಜ್ಞ ಕೂಡ ಸರಿಪಡಿಸಲಾರ. ಸಾಮಾಜಿಕ ಸ್ಥಿತಿ ಯಾರಿಗೂ ಬೇಡ, ಇನ್ನು ರಾಜಕೀಯ ಉಗ್ರರ ಅಥವಾ ಅವರು ಬೆಂಲಿಸುವ ಸೇನೆಯ ಕೈಲಿದೆ. ಇಂಥ ಅಸಂಬದ್ಧ ದೇಶವನ್ನು ಯಾರು ಬಯಸುತ್ತಾರೆ? ಇಂದಿನ ಹೋರಾಟಕ್ಕೆ ಬಲವಾದ ಕಾರಣ ಒದಗಿಸಿದ್ದು ಸಿಂಧ್ ನೀರನ್ನು ಬಳಸಿಕೊಂಡು ಪಂಜಾಬ್ ಪ್ರದೇಶ ಯಾಂತ್ರಿಕ ರೀತಿಯಲ್ಲಿ ಉತ್ಪನ್ನ ಪಡೆಯುತ್ತಿದ್ದು ಸಂಪೂರ್ಣ ಉದ್ಯಮ ಸ್ವರೂಪ ಪಡೆದು ನ್ಯಾಯವಾಗಿ ಸಿಂಧ್ ಜನರಿಗೆ ದೊರೆಯಬೇಕಿದ್ದ ನೀರು ಸಿಗದಂತೆ ಸೇನಾ ಬೆಂಲದೊಂದಿಗೆ ಕಾಲುವೆ ಮೂಲಕ ಪಂಜಾಬ್ ಕಡೆ ತಿರುಗಿಸಿಕೊಂಡಿದ್ದಾಗಿದೆ.
ಇವೆಲ್ಲದರ ಜೊತೆಗೆ ಈ ಪ್ರದೇಶದಲ್ಲಿ ನಿರಂತರ ಮಾನವಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು ಈಜನರನ್ನು ಶೋಷಣೆಗೆ ಗುರಿ ಮಾಡಲಾಗುತ್ತಿದೆ, ಮಕ್ಕಳು ಮಹಿಳೆಯರು, ಮುದುಕರೆಂದು ನೋಡದೇ ದೌರ್ಜನ್ಯ ಮಾಡಲಾಗುತ್ತಿದೆ, ಇವೆಲ್ಲದರಿಂದ ಬೇಸತ್ತ ಅಲ್ಲಿನ ಜನ ಈ ಬಾರಿ ನಿರ್ಣಯಾತ್ನಕ ಹೋರಾಟಕ್ಕೆ ಇಳಿದಿದ್ದಾರೆ. ಸಿಂಧ್ ಹೋರಾಟಗಾರರು ಮತ್ತು ಮಾನವ ಹಕ್ಕು ಕಾರ್ಯಕರ್ತರನ್ನು ಹೀನಾಯವಾಗಿ ಕೊಲ್ಲಲಾಗುತ್ತಿದೆ. ಮುಖ್ಯವಾಗಿ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳು ನಿಂತಿವೆ, ದಿನ ಬಳಕೆಗೂ ನೀರಿಲ್ಲದಂತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಳೆಯ ವಯಸ್ಸಿನ ಬಾಲಕಿಯರ ಮೇಲೆ ಮದುವೆ ಹೆಸರಲ್ಲಿ ಭೀಕರ ದೌರ್ಜನ್ಯ ನಡೆಯುತ್ತಿದೆ. ಅದರಲ್ಲೂ ಅಲ್ಪ ಸಂಖ್ಯಾತ ಸಮುದಾಯಗಳ ಹೆಣ್ಣುಮಕ್ಕಳನ್ನು ಮೃಗೀಯವಾಗಿ ಕಾಣಲಾಗುತ್ತಿದೆ. ಈ ಭಾಗದಲ್ಲಿ ಪ್ರಕೃತಿ ವಿಕೋಪಗಳೂ ಹೆಚ್ಚಿದ್ದು ಸರ್ಕಾರ ಏನೂ ಮಾಡಲಾಗದೇ ಕುಳಿತಿದೆ.ತಿನ್ನಲು ಗತಿ ಲ್ಲದೇ ಭಿಕ್ಷೆ ಬೇಡಲೂ ಶಕ್ತಿ ಇಲ್ಲದಷ್ಟು ಇಡೀ ದೇಶಸೊರಗಿದೆ, ಜನರಲ್ಲಿ ಅಪೌಷ್ಟಿಕತೆ, ಬಡತನ ಮೇರೆ ಮೀರಿದೆ. ಅಗತ್ಯ ಆಹಾರ ವಸ್ತುಗಳ ಬೆಲೆ ಅನೂಹ್ಯ ಪ್ರಮಾಣದಲ್ಲಿ ಏರಿದೆ. ಟೊಮ್ಯಾಟೋ ಕೆಜಿಗೆ ಅಲ್ಲ, ಒಂದು ಬಿಡಿ ಹಣ್ಣಿನ ಬೆಲೆ ೭೫ ರೂಗಳಷ್ಟಾಗಿದೆ. ಗೋದಿ ಹಿಟ್ಟಿನ ಬೆಲೆ ಕೆಜಿಗೆ ೧೦೦ ರೂ ದಾಟಿದೆ, ಅಕ್ಕಿಯ ಬೆಲೆ ೨೦೦ ರೂ ದಾಟಿದ್ದು ಈ ರುಳ್ಳಿ ಬೆಲೆ ೨೬೦ ರೂಗಳಷ್ಟಾಗಿದೆ. ಯಾವ ಪದಾರ್ಥವೂ ೧೫೦ರ ಒಳಗೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲ ಕಾರಣಕ್ಕೆ ಬೇಸತ್ತ ಇಲ್ಲಿನ ಜನತೆ ಪ್ರತ್ಯೇಕತೆಯ ಹೋರಾಟಕ್ಕಿಳಿದಿದ್ದಾರೆ.
ಸಾರ್ವಜನಿಕ ಆರೋಗ್ಯವಂತೂ ಸಂಪೂರ್ಣ ಹದಗೆಟ್ಟಿದ್ದು ಎಚ್ ಐವಿ ಪ್ರಕರಣಗಳು ಮೇರೆ ಮೀರುತ್ತಿವೆ, ಎಲ್ಲಿಯೂ ಆರೋಗ್ಯ ಮೂಲಸೌಕರ್ಯಳಿಲ್ಲವೆನ್ನಲಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಬದುಕಿದ್ದ ಸಿಂಧೂ ಜನತೆ ಈಗ ಮಾತ್ರ ಸಿಡಿದೆದ್ದಿದ್ದಾರೆ, ಈಗಿನ ಬೆಳವಣಿಗೆ ನೋಡಿದರೆ ಈ ಗಲಭೆ ಇನ್ನೂ ವೇಗವಾಗಿ ಹಬ್ಬುತ್ತದೆಯೇ ವಿನಾ ನಿಲ್ಲುವ ಲಕ್ಷಣಗಳಿಲ್ಲ, ಇನ್ನೊಂದು ವಾರದಲ್ಲಿ ಪಾಕಿಸ್ತಾನದ ಹಣೆಬರೆಹವನ್ನು ಇದು ನಿರ್ಧರಿಸಲಿದೆ. ನೆರೆಯ ಪಾಕಿಸ್ತಾನ ಭಾರತದ ವೈರಿ ಆಗಿದ್ದರೂ ಅದು ನಾಶವಾದರೆ ನಮಗೆ ಸಂತೋಷವೇನೂ ಇಲ್ಲ, ಏಕೆಂದರೆ ನೆರೆಹೊರೆ ಚೆನ್ನಾಗಿದ್ದರೆ ಮಾತ್ರ ನಾವು ಕೂಡ ಸುಖವಾಗಿರಬಹುದು. ಇದು ನಮ್ಮ ಧೋರಣೆ, ಆದರೆ ಪಾಕಿಸ್ತಾನಕ್ಕೆ ಬುದ್ಧಿ ಯಾವಾಗ ಬರುತ್ತದೋ ಅವರ ದೇವನೇ ಬಲ್ಲ.
Friday, 5 December 2025
ತೆರಿಗೆ ಯುದ್ಧದಲ್ಲಿ ಅಮೇರಿಕಾದ ವಿರುದ್ಧ ಭಾರತಕ್ಕೆ ಜಯ
ಅಮೆರಿಕ ಕೈಗೊಂಡಿದ್ದ ಈ ಪರಿಷ್ಕರಣೆಯ ಹಿಂದೆ ಕೇವಲ ಅಮೆರಿಕದ ಸ್ವಾರ್ಥವಿತ್ತು. ಅವರ ದುಷ್ಟ ಕೃಷಿ ತಳಿ ಬೀಜಗಳನ್ನು ಭಾರತ ಖರೀದಿಸಬೇಕು, ಸವರ ಹೈನು ಉತ್ಪನ್ನ ಪಡೆಯಬೇಕು ಎಂದಾಗಿತ್ತು, ಇವೆರಡೂ ಭಾರತದ ರೈತರ ಹಿತಾಸಕ್ತಿಗೆ ವಿರುದ್ಧವಾದ್ದರಿಂದ ಪ್ರಧಾನಿ ಮೋದಿ ಯಾವ ಒತ್ತಡಕ್ಕೂ ಮಣಿಯದೇ ಅಮೆರಿಕದ ತೆರಿಗೆ ಹೆಚ್ಚಳಕ್ಕೆ ಕ್ಯಾರೆ ಅನ್ನದೇ ಕುಳಿತಿದ್ದರು. ಈಗ ಅದರ ಫಲ ಲಭಿಸಿದೆ. ತನ್ನ ನಿಲುವಿನಿಂದ ಅಮೆರಿಕ ಜನರ ವಿರೋಧವನ್ನು ಟ್ರಂಪ್ ಎದುರಿಸಬೇಕಾಯ್ತು. ಅಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದೊಡ್ಡ ಹೊಡೆತ ತಿನ್ನಬೇಕಾಯ್ತು, ತನ್ನ ದೇಶದ ಜನತೆ ಮತ್ತು ವ್ಯಾಪಾರಿ ಕಂಪನಿಗಳಿಂದ ಬೈಗುಳ ಎದುರಿಸಬೇಕಾಯ್ತು. ಇವೆಲ್ಲದರ ಪರಿಣಾಮದಿಂದ ಅಧ್ಯಕ್ಷ ಟ್ರಂಪ್ ತೆರಿಗೆಯನ್ನು ಹೇಗೆ ಹೆಚ್ಚಿಸಿದ್ದನೋ ಹಾಗೆಯೇ ಇಳಿಸಲು ತೀರ್ಮಾನಿಸಿದ್ದಾನೆ. ಹಾಗೆ ನೋಡಿದರೆ ಅಮೆರಿಕ ತೆರಿಗೆ ಹೆಚ್ಚಿಸಿದ್ದಕ್ಕೆ ಭಾರತ ಪ್ರತಿ ತೆರಿಗೆ ವಿಧಿಸಿದ್ದರಿಂದ ಅಮೆರಿಕ ಕಂಪನಿಗಳಿಂದ ಭಾರತಕ್ಕೆ ಹೆಚ್ಚು ಲಾಭವಾಗಿ ಭಾರತದ ವಿದೇಶೀ ಕಾದಿಟ್ಟ ನಿಧಿ ಅನಿರೀಕ್ಷಿತ ಮಟ್ಟಕ್ಕೇರಿ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ಶ್ರೇಣಿ ಮೇಲಕ್ಕೆ ಬರುವಂತಾಯ್ತು.
Wednesday, 26 November 2025
ಸೆಳೆದುಕೊಂಡು ಹೋಗುವ ಅಧ್ಯಾತ್ಮ ಕೃತಿ
ನಮ್ಮ ದೇಶದಲ್ಲಿ ಆಧ್ಯಾತ್ಮಿಕ ಸಾಧಕರಿಗೆ ಬಹುದೊಡ್ಡ ಸ್ಥಾನವಿದೆ, ಅವರು ಯಾವಾಗಲೂ ಸಾಧಕರನ್ನು ಪವಾಡಪುರುಷರೆಂದೋ ದೈವೀಪುರುಷರೆಂದೋ ಸಾಮಾನ್ಯವಾಗಿ ಭಾವಿಸುತ್ತಾರೆಸದಾಕಾಲ ಅವರನ್ನು ಪೂಜನೀಯ ಭಾವದಿಂದ ಆರಾಧಿಸುತ್ತಿರುತ್ತಾರೆ ಆದ್ದರಿಂದ ಇಂಥವರನ್ನು ಕುರಿತ ಕೃತಿಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಇಂಥ ಕೃತಿಗಳಲ್ಲಿ ಹೆಸರಿಸಬೇಕಾದ ಹತ್ತು ಹಲವು ಕೃತಿಗಳಿದ್ದರೂ ಹೇಳಲೇ ಬೇಕಾದ ಕೆಲವೆಂದರೆ ಮುಕಂದೂರು ಸ್ವಾಮಿಗಳ ಬಗ್ಗೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ರಚಿಸಿದ ಯೇಗ್ದಾಗೆಲ್ಲಾ ಐತೆ, ಅನುವಾದವಾಗಿ ಬಂದ ಸ್ವಾಮಿ ರಾಮ ಅವರ ಆಧ್ಯಾತ್ಮ ಸಾಧನೆ ವಿವರಿಸುವ ಜಗತ್‌ಪ್ರಸಿದ್ಧ ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ, ರಮಣ ಮಹರ್ಷಿಗಳ ಸಾಧನೆ ಬೋಧನೆ ವಿವರಿಸುವ ಅವರ ಶಿಷ್ಯ ಕೆ ವಿ ನಾರಾಯಣನ್ ಅವರು ರಚಿಸಿದ ನಾನು ಯಾರು, ಶಿರಡಿ ಸಾಯಿಬಾಬಾ ಅವರನ್ನು ಕುರಿತ ಸಾಯಿಗುರು ಚರಿತೆ, ಶ್ರೀಪಾದ ವಲ್ಲಭರ ಗುರುಚರಿತೆ ಮೊದಲಾದವು. ದೇಶದ ಅನ್ಯಭಾಷೆಗಳಲ್ಲಿ ರಚಿತಗೊಂಡು ಅನುವಾದವಾಗಿ ಕನ್ನಡಕ್ಕೆ ಬಂದ ಇನ್ನೂ ಹಲವು ಕೃತಿಗಳಿವೆ. ಈಗ ಈ ಪಟ್ಟಿಗೆ ಸೇರಿಕೊಂಡ ಇತ್ತೀಚೆಗೆ ಒಂದೆರಡು ದಶಕಗಳ ಹಿಂದೆ ಸಮಾಧಿಸ್ತರಾದ ಭಕ್ತರಿಂದ ಗುರುನಾಥರೆಂದೂ ವೆಂಕಟಾಚಲರೆಂದೂ ಗೌರವದಿಂದ ಕರೆಯಿಸಿಕೊಂಡ ಸಸಖರಾಯಪಟ್ಟಣದಲ್ಲಿ ಆಶ್ರಮ ಹೊಂದಿದ್ದ ಗುರುನಾಥರ ಆಧ್ಯಾತ್ಮಿಕ ಸಾಧನೆ ಸಿದ್ದಿಯನ್ನು ಮನಮುಟ್ಟುವಂತೆ ಚಿತ್ರಿಸುವ ಶ್ರೀಗುರುಗಾಥಾ ಎಂಬ ಕೃತಿ. ೨೦೧೭ರಲ್ಲಿ ಮೊದಲು ಮುದ್ರಣವಾದ ಇದು ೨೦೨೨ರಲ್ಲಿ ಮರು ಮುದ್ರಣ ಕಂಡಿರುವುದು ಭಕ್ತರಿಂದ ಇದು ಪಡೆದ ಗೌರವಾದರವನ್ನು ತೋರಿಸುತ್ತದೆ, ಸಾಮಾನ್ಯವಾಗಿ ಇಂಥ ಆಧ್ಯಾತ್ಮಿಕ ಸಾಧಕರು ಮಾಡುವ ಕೆಲಸಗಳು ಜನತೆಗೆ ವಿಶೇಷವಾಗಿ ಕಾಣಿಸಿ ಅವರನ್ನು ಪವಾಡಪುರುಷರಂತೆ ನೋಡುವಂತೆ ಮಾಡುತ್ತದೆ. ಆದರೆ ಗುರುನಾಥರು ಭಕ್ತರಿಗೆ ಸರಿದಾರಿ ತೋರಿಸಲು ಕೆಲವೊಮ್ಮೆ ಇಂಥ ಪವಾಡಗಳನ್ನು ಮಾಡಿದ್ದಿದೆ, ಅವರ ದೇಹ ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ ಅವರ ಅಮರ ಚೈತನ್ಯ ಭಕ್ತರೊಂದಿಗೆ ಸದಾಕಾಲ ಇರುತ್ತದೆ ಎಂಬ ನಿದರ್ಶನಗಳು ಇಲ್ಲಿವೆ, ಭಕ್ತರು ಹೇಳುವಂತೆ ಗುರುನಾಥರು ಭಕ್ತರ ಮನಸ್ಸಿಗೆ ಸಮಾಧಾನ ಮಾಡಲು ಏಕಕಾಲಕ್ಕೆ ಸಾಕಷ್ಟು ದೂರದಲ್ಲಿರುವ ಊರುಗಳಲ್ಲಿ ಏಕಕಾಲಕ್ಕೆ ಬೇರೆ ಬೇರೆ ರೂಪಗಲ್ಲಿ ದರ್ಶನ ಕೊಟ್ಟಿದ್ದಿದೆ. ಪವಾಡ ಮಾಡಿ ಜನರನ್ನು ಮರಳು ಗೊಳಿಸಲು ಅವರು ಹೀಗೆ ಮಾಡುತ್ತಿರಲಿಲ್ಲ, ಬದಲಾಗಿ ಜನರ ಒಳಗಣ್ಣು ತೆರೆಸಲು ಹಾಗೂ ಗುರು ದೇವ ಭಾವದ ಬಗ್ಗೆ ಜನರಲ್ಲಿ ಸೂಕ್ತ ಅರಿವು ಮೂಡಿಸುವ ಉದ್ದೇಶದಿಂದ ಇಂಥ ದರ್ಶನ ಕೊಡುತ್ತಿದ್ದರೆಂದು ಕೃತಿ ಓದಿದಾಗ ಅರಿವಾಗುತ್ತದೆ. ಇಂಥ ಯಾವುದೇ ಪವಾಡ ಮಾಡದೇ ಜನರಲ್ಲಿ ಮೌನದಿಂದಲೇ ಸಂವಾದ ನಡೆಸಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ರಮಣ ಮಹರ್ಷಿಗಳಂಥ ಗುರುಗಳೂ ಈ ನೆಲದಲ್ಲಿ ಆಗಿಹೋಗಿದ್ದಾರೆ. ಇಂಥವರನ್ನೂ ನಮ್ಮ ಜನ ಮರೆತಿಲ್ಲ, ಪವಾಡಗಳ ಮೂಲಕ ಜನರನ್ನು ಸೆಳೆಯುವ ಕಾರಣಕ್ಕಾಗಿ ಪವಾಡ ಮಾಡುತ್ತಿದ್ದ ಸಾಧಕರೂ ನಮ್ಮಲ್ಲಿ ಆಗಿಹೋಗಿದ್ದಾರೆ ಇಂಥವರಲ್ಲಿ ಪುಟ್ಟಪರ್ತಿಯ ಸಾಯಿಬಾಬಾ ಒಬ್ಬರು, ಆದರೆ ಆಧ್ಯಾತ್ಮದ ಹೆಸರಲ್ಲಿ ಕೆಲವು ಪವಾಡಗಳನ್ನು ಜಾದೂಗಾರರಂತೆ ಕಲಿತು ಜನಸಾಮಾನ್ಯರನ್ನು ಮರಳು ಮಾಡಿ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದ ಸಾಧಕರೆಂದುಕೊಂಡ ಜನರಿಗೂ ನಮ್ಮ ಸಮಾಜದಲ್ಲಿ ಕೊರತೆ ಇಲ್ಲ, ಇಂಥವರ ನಡುವೆ ಭಿನ್ನವಾಗಿ ನಿಲ್ಲುವವರು ಗುರುನಾಥರು. ಇವರ ಸರಳತೆ, ಮತ ಭೇದವಿಲ್ಲದ, ಸಮಾನತೆಯ ದೃಷ್ಟಿಕೋನ ಮೊದಲಾದವು ಆಧುನಿಕ ಸಮಾಜದಲ್ಲಿದ್ದ ಅನೇಕ ಕುರುಡು ಮನೋಭಾವವನ್ನು ಹೊಡೆದೋಡಿಸಿತು. ಅವರ ಭಕ್ತಗಣ ಕೂಡ ಸಮಾನತೆಯನ್ನು ಅನುಸರಿಸುವಂತೆ ಅವರು ಬೋಧಿಸದೇ ನಡೆದು ತೋರಿಸಿದರು ಎಂಬುದು ವಿಶೇಷ.
ಪ್ರಸ್ತುತ ಕೃತಿಯಲ್ಲಿ ಒಟ್ಟೂ ೫೩ ಅಧ್ಯಾಯಗಳಿದ್ದು, ಇವುಗಳನ್ನು ಮೊದಲ ಅಧ್ಯಾಯದಿಂದ ಕ್ರಮವಾಗಿಯೇ ಓದಬೇಕಾದ ಅಗತ್ಯವಿಲ್ಲ, ವಿಷಯಾನುಕ್ರಮಣಿಕೆಯಲ್ಲಿ ಓದುಗರು ತಮಗೆ ಇಷ್ಟವಾದ ಅಥವಾ ಕುತೂಹಲಕರ ಅನಿಸಿದ ಯಾವುದೇ ಅಧ್ಯಾಯವನ್ನು ಹಿಂದೆ ಮುಂದೆ ಮಾಡಿಕೊಂಡು ಓದಿ ಆನಂದಿಸಬಹುದು, ಏಕೆಂದರೆ ಇಲ್ಲಿನ ಅಧ್ಯಾಯಗಳನ್ನು ವಿಷಯಾನುಸಾರ ವಿಂಗಡಿಸಿಕೊಳ್ಳಲಾಗಿದೆ, ಹಾಗಾಗಿ ಕ್ರಮಾನುಗತ ಬೆಳವಣಿಗೆಯಾಗಲೀ ಅಧ್ಯಾಯಗಳ ಪರಸ್ಪರ ಜೋಡಣೆಯ ಅಗತ್ಯವಾಗಲೀ ಇವುಗಳಿಗೆ ಬೇಕಿಲ್ಲ. ಆದರೆ ಒಂದೊಂದು ಅಧ್ಯಾಯವೂ ಸೊಗಸಾದ ಕಾದಂಬರಿ ಅಥವಾ ಪತ್ತೇದಾರಿ ಶೈಲಿಯಲ್ಲಿ ಇರುವುದರಿಂದ ಯಾವ ಅಧ್ಯಾಯವನ್ನೂ ಯಾರೂ ಕೈಬಿಡದೇ ಓದುತ್ತಾರೆಂದು ಖಚಿತವಾಗಿ ಹೇಳಬಹುದು. ಮೊದಲ ಮೂರು ಅಧ್ಯಾಯಗಳನ್ನು ಲೇಖಕರು ಕೃತಿಯ ಶೈಲಿಯನ್ನು ಸ್ಥಾಪಿಸಲು ಪೀಠಿಕೆಯ ರೂಪದಲ್ಲಿ ಹೇಳಿದ್ದಾರೆ ಮುಂದೆ ಗುರುನಾಥರ ಜೀವನ ಸಾಧನೆಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ, ಅದರಲ್ಲೂ ಗುರುನಾಥರು ನಂಬಿ ಬಂದ ಭಕ್ತರ ಕಷ್ಟ ಕಾರ್ಪಣ್ಯವನ್ನು ಕೆಲವೊಮ್ಮೆ ಕೇಳಿ ಕೆಲವೊಮ್ಮೆ ಸ್ವತಃ ತಿಳಿದು ಪರಿಹಾರ ಕೊಡುತ್ತಿದ್ದರು, ಇವೆಲ್ಲ ಬಡವರಿಗೆ ಶ್ರೀಮಂತರಿಗೆ ಎಂಬ ಭೇದ ಇರುತ್ತಿರಲಿಲ್ಲ, ಗುರುವಿಗೆ ಎಲ್ಲ ಭಕ್ತರೂ ಒಂದೇ, ಸಮಸ್ಯೆಗಳಿಗೆ ಪರಿಹಾರ ಮಾರ್ಗ ಕೂಡ ಸಮಾನ ಎಂಬುದು ಗುರುಗಳ ಆದರ್ಶ, ಕೃತಿಯ ಅಂತ್ಯದಲ್ಲಿ ಗುರುಗಳ ಉಪದೇಶ ಸಾರದಲ್ಲಿ ಮುಖ್ಯವಾದ ೨೬ ಮಾತುಗಳನ್ನು ಕೊಡಲಾಗಿದೆ. ಪರಿಶಿಷ್ಟ ಭಾಗದಲ್ಲಿ ಇದರ ಜೊತೆಗೆ ಶ್ರೀ ದತ್ ಅವಧೂತರು ಭಕ್ತರಿಗಾಗಿ ರಚಿಸಿಕೊಟ್ಟ ೨೮೯ ಶ್ಲೋಕಗಳಲ್ಲಿ ೨೬ ಶ್ಲೋಕಗಳಿಗೆ ಮಾತ್ರ ಅರ್ಥವತ್ತಾದ ವಿವರ ಪೂರ್ಣ ಅನುವಾದ ಕೊಡಲಾಗಿದೆ, ಇದನ್ನು ಓದಿದರೆ ಸದರಿ ಲೇಖಕರು ಉಳಿದ ಶ್ಲೋಕಗಳಿಗೂ ಇಂಥ ವಿವರ ಕೊಡಬಾರದೇ ಅನಿಸುತ್ತದೆ, ಇವನ್ನು ಬಿಟ್ಟು ಅವತರಣಿಕೆಯಲ್ಲಿ ಗುರುನಾಥರು ಸಾಂಪ್ರದಾಯಿಕ ಮದುವೆಗೆ ಬದಲಾಗಿ ವಧೂವರರಲ್ಲಿ ಪರಸ್ಪರ ನಂಬಿಕೆ ಇದ್ದರೆ ಎರಡೂ ಕಡೆಯ ಪೋಷಕರಿಗೆ ಹೊರೆ ಆಗದಂತೆ ವಿಧಿವತ್ತಾಗಿ ಮದುವೆ ಮಾಡುವುದು ಹೇಗೆ, ಅದನ್ನು ಪ್ರತಿಪಾದಿಸುವ ಅಗತ್ಯ ಏಕಿದೆ ಎಂದು ಹೇಳಿದ ಮಾತುಗಳು ದಾಖಲಾಗಿವೆ, ಗುರೂಪದೇಶವಂತೂ ಆಧುನಿಕ ಪ್ರಪಂಚದಲ್ಲಿ ಈ ಮಾತುಗಳನ್ನು ಅಳವಡಿಸಿಕೊಂಸರೆ ಬೇರೆ ಯಾವ ಭಗವದ್ಗೀತೆಯ ಅಗತ್ಯವಾಗಲೀ ಧರ್ಮಗ್ರಂಥಗಳ ಅಗತ್ಯವಾಗಲೀ ಇರುವುದೇ ಇಲ್ಲ, ಅಷ್ಟೇ ಅಲ್ಲದೇ ಸಮಾಜದ ಎಲ್ಲರೂ ಈ ಮಾತುಗಳಂತೆ ನಡೆದುಕೊಂಡರೆಯಾವುದೇ ಪೊಲೀಸ್ ಠಾಣೆ, ನ್ಯಾಯಾಲಯವಾಗಲೀ ಪಂಚಾಯ್ತಿ ಕಟ್ಟೆಗಳ ಅಗತ್ಯವಾಗಲೀ ಕಾನೂನು ಶಿಕ್ಷೆಗಳ ಪ್ರಶ್ನೆಯಾಗಲೀ ಉದ್ಭವಿಸುವುದೇ ಇಲ್ಲ. ಅಷ್ಟು ಆದರ್ಶಪ್ರಾಯವಾದ ನುಡಿಗಳು ಇವಾಗಿವೆ. ಈ ದೃಷ್ಟಿಯಿಂದ ಈ ಕೃತಿಯನ್ನು ಒಮ್ಮೆ ಓದಿ ಬದಿಗೆ ಇಡುವಂಥದ್ದಲ್ಲ, ಆಗಾಗ ತಿರುವಿಹಾಕಬೇಕಾದ ಗಗ್ರಂಥ ಈ ದೃಷ್ಟಿಯಿಂದ ನಿಜಕ್ಕೂ ಇದು ಪಾರಾಯಣ ಯೋಗ್ಯವಾದ ಪುಸ್ತಕವೇ ಹೌದು. ಕೆಲವು ಸಂದರ್ಭಗಳನ್ಮು ಓದಿ ಮೆಲುಕು ಹಾಕುತ್ತಿದ್ದರೆ ಛೆ ನಾವು ಗುರುಗಳ ಕಾಲದಲ್ಲಿಯೇ ಈ ಪ್ರಪಂಚದಲ್ಲಿದ್ದರೂ ಅವರ ಕೃಪೆಗೆ ಪಾತ್ರವಾಗುವ ಭಾಗ್ಯ ಸಿಗದೇ ಹೋಯಿತಲ್ಲ ಅಂಥ ಪಾಪವನ್ನು ನಾವೇನು ಮಾಡಿದ್ದೆವೋ ಎಂಬ ಅನ್ನುವ ಪಾಪ ಪ್ರಜ್ಞೆ ಕಾಡದೇ ಇರುವುದಿಲ್ಲ, ನನ್ನ ಅದೃಷ್ಟಕ್ಕೆ ಮೈಸೂರಿನಲ್ಲಿ ನಾವು ಬಾಡಿಗೆಗೆ ಮನೆಯ ಜನ ಗುರು ಬಂಧುಗಳಾಗಿದ್ದರು. ಅವರು ಆಗಾಗ ಸಕ್ಕರೆ ಪಣ್ನಕ್ಕೆ ಹೋಗ್ತೇವೆ ಅನ್ನುತ್ತಿದ್ದರು ನಾನು ಅವರ ಬಾಯಲ್ಲಿ ಮೊದಲ ಬಾರಿಗೆ ಗುರುಗಳ ಬಗ್ಗೆ ಕೇಳಿದ್ದೆ, ಒಮ್ಮೆ ಮೈಸೂರಿನ ಖ್ಯಾತ ಅಯ್ಯಂಗಾರ್ ಮೆಸ್ ಬಲ್ಲಿ ಊಟ ಮಾಡುತ್ತಿದ್ದಾಗ ಗುರು ಭಕ್ತರೊಬ್ಬರ ಜೊತೆ ಆ ಮೆಸ್ ನ ಮೂಲುಯೊಂದರಲ್ಲಿ ಸಾಮಾನ್ಯವಾಗಿ ಅವರು ತೊಟ್ಟಿರುತ್ತಿದ್ದ ಕೆಂಪು ಬಣ್ಣದ ಟವೆಲ್ ಸುತ್ತಿಕೊಂಡು ನಿಂತಿದ್ದ ಸಂನ್ಯಾಸಿಯೊಬ್ಬರಿದ್ದರು ಆ ಮೇಲೆ ಆ ಭಕ್ತರನ್ನು ಅವರು ಯಾರೆಂದು ಕೇಳಿ ತಿಳಿದುಕೊಂಡೆ, ಅವರೇ ಗುರುನಾಥರು ಎಂದು ತಿಳಿಯಿತು, ಈಗ ಆ ಚಿತ್ರವನ್ನು ಮತ್ತೆ ಮತ್ತೆ ನೆನೆಯುತ್ತೇನೆ. ಅವರು ನಿಂತ ಭಂಗಿ ನನ್ನ ಕಣ್ಣ ಮುಂದೆ ಇಂದಿಗೂ ಅಚ್ಚೊತ್ತಿದಂತೆ ಇದೆ. ಅಷ್ಟೇ ನನ್ನ ಪಾಲಿನ ಭಾಗ್ಯ ಅಂದುಕೊಂಡು ಕೊರಗುತ್ತೇನೆ ಗುರುಗಳು ಆಗಾಗ ಭಕ್ತರಿಗೆ ಹೇಳುತ್ತಿದ್ದರಂತೆ ನಮ್ಮ ಸಂಬAಧ ಎಪ್ಪತ್ತು ಜನ್ಮದ್ದೆಂದು. ಈ ಪ್ರಕಾರ ನೋಡಿದರೆ ನನ್ನ ಮತ್ತು ಗುರುಗಳ ಸಂಬAಧ ಕ್ಕೆ ಇದೇ ಮೊದಲ ಜನ್ಮದ್ದಿರಬಹುದು, ಇನ್ನು ೫೯ ಜನ್ಮಗಳಲ್ಲಿ ಅದು ಬೆಳೆಯುತ್ತಾ ಮುಕ್ತಿ ಪಡೆಯಲು ಇನ್ನೂ ಅಷ್ಟು ಜನ್ಮ ಕಾಯಬೇಕಿದೆ ಅಂದುಕೊಂಡಾಗ ದುಃಖವಾಗುತ್ತದೆ, ಏನು ಮಾಡುವುದು, ಹೇಳುತ್ತಾರಲ್ಲ, ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದದ್ದು ಜೋಗಿಗೆ ಹಾಗೆ ಇದು, ಯಾರೂ ಏನೂ ಮಾಡಲಾಗದು, ನನಗೆ ಅಂದು ಹಾಗೆ ಕಾಣಿಸಿಕೊಂಡವರೇ ಗುರುನಾಥರೆಂದು ಆಗಲೇ ಗೊತ್ತಾಗಿದ್ದರೆ ಬಹುಶಃ ಹೆಚ್ಚೆಂದರೆ ಅವರ ಪಾದಪದ್ಮಗಳಿಗೆ ಬೀಳುತ್ತಿದ್ದೆ. ಹೆಚ್ಚೆಂದರೆ ಅವರು ಏನಾದರೂ ಆದೇಶ ಮಾಡಿದ್ದರೆ ಅನುಸರಿಸುತ್ತಿದ್ದೆ, ಇನ್ನೇನೂ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ, ಬಹುಶಃ ಇದರ ಗುಟ್ಟು ಮುಂದೆ ಏನಿದೆ ಎಂಬುದು ಗುರುಗಳಿಗೆ ತಿಳಿದಿತ್ತು ಅನಿಸುತ್ತದೆ, ಆಗ ನನ್ನ ಕಾಲ ಕೂಡಿಬಂದಿಲ್ಲವೆಂದು ತಿಳಿದು ಅಷ್ಟಕ್ಕೇ ಬಿಟ್ಟು ಸುಮ್ಮನೇ ನನ್ನನ್ನು ನೋಡಿದ್ದರು ಅನಿಸುತ್ತದೆ. ಗೊತ್ತಿಲ್ಲ ಭವಿಷ್ಯದಲ್ಲಿ ಗುರುಗಳು ನನ್ನ ಪಾಲಿಗೆ ಯಾವ ಗಂಟು ಇಟ್ಟಿದ್ದಾರೋ? ಅದರಲ್ಲಿ ಏನಿದೆಯೋ? ನಾನೂ ಕಾಯುತ್ತಿದ್ದೇನೆ, ಇಲ್ಲದಿದ್ದರೆ ನನಗೆ ಆ ಕಾಲದಲ್ಲಿ ಅಷ್ಟೇ ಬಾಂಧವ್ಯ ಕೂಡಿದ್ದೇಕೆ. ಏಕೆ ಅದು ಮುಂದರಿಯಲಿಲ್ಲ? ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಈ ಎಲ್ಲ ದೃಷ್ಟಿಯಿಂದ ಈ ಕೃತಿ ಓದುಗರನ್ನು ಬಿಟ್ಟೂ ಬಿಡದೇ ತನ್ನೊಂದಿಗೆ ಸೆಳೆದುಕೊಂಡು ಹೋಗುತ್ತದೆ.
ಇದಾದ ಅನಂತರ ನೇರ ಸಂಪರ್ಕ ಪಡೆದಿದ್ದ ಗುರುಬಂಧುಗಳಿಂದ ಗುರುನಾಥರ ಅನೇಕ ಮಹಿಮೆಗಳನ್ನು ಕಣ್ಣು ಬಾಯಿ ಬಿಟ್ಟು ಆಲಿಸಿದ್ದೇನೆ, ಇದನ್ನೆಲ್ಲ ಗಮನಿಸಿದರೆ ಗುರುಗಳ ಜೊತೆ ನನ್ನ ಬಂಧುತ್ವ ಆಗುವುದಿದೆ ಅನಿಸುತ್ತದೆ, ಕಾಲ ಕೂಡಿ ಬಂದಿಲ್ಲ, ಕಾಯ ಬೇಕಲ್ಲ, ಇವೆಲ್ಲ ಆಗುವಂಥವಲ್ಲ, ಘಟಿಸುವಂಥವು, ಈ ನಂಬಿಕೆ ನನಗಿದೆ, ಕಾಯುತ್ತಿದ್ದೇನೆ. ಆದರೆ ಅವರ ಈ ಉಪದೇಶ ಕೃತಿಗೆ ಯಾವ ಓದುಗರೂ ಕಾಯುವ ಅಗತ್ಯವಿಲ್ಲ, ೯೪೪೮೦೯೩೮೩೦ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ಮಾಹಿತಿ ಪಡೆದು ಪುಸ್ತಕ ತರಿಸಿಕೊಳ್ಳಬಹುದು, ಇದಕ್ಕೆ ತಡವಾಗುವುದಿಲ್ಲ.ಭಕ್ತರು ಇಷ್ಟು ಮಾಡಿ ಸಾಕು.
ಕೃತಿಯ ವಿವರ
ಶ್ರೀ ಗುರುಗಾಥಾ
ಲೇಖಕರು - ಅ ನಾಗರಾಜ್, ಪ್ರಕಾಶಕರು-ಪ್ರಕೃತಿ ಪ್ರಕಾಶನ, ವಿದ್ಯುತ್ ನಗರ. ಹಾಸನ. ಮೊಬೈಲ್- ೯೪೪೮೦೯೩೮೩೦/೯೬೬೩೬೩೩೯೬೮
ಮೊದಲ ಮುದ್ರಣ - ೨೦೧೭, ಎರಡನೆಯ ಮುದ್ರಣ- ೨೦೨೨
ಬೆಲೆ-ರೂ-೩೦೦
Tuesday, 25 November 2025
ಮನುಷ್ಯನಿಗೆ ಮುಳುವಾಗುತ್ತಿರುವ ಚಟುವಟಿಕೆಗಳು
ನಮ್ಮ ದೇಶ ಕೂಡ ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಿದೆ. ಸಮಸ್ಯೆ ಏನು? ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಒಂದೆರಡು ದಶಕಗಳಲ್ಲಿ ದೇಶವನ್ನು ನಿರೀಕ್ಷಿತ ಅಭಿವೃದ್ಧಿಯತ್ತ ಒಯ್ಯಲು ಜನಸಂಖ್ಯೆ ಅಡ್ಡಿ ಎಂದು ಭಾವಿಸಿ ಅದನ್ನು ಎಲ್ಲ ಕಡೆ ಪ್ರಚಾರ ಮಾಡಿ ಕುಟುಂಬವೊಂದರಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದು ಅಪಹಾಸ್ಯಕಾರಕ ಎಂಬ ಭಾವನೆ ಹುಟ್ಟಿಸಲಾಯಿತು. ಪರಿಣಾಮವಾಗಿ ಯಾವುದೇ ಕುಟುಂಬ ತಮಗೆ ಒಂದಕ್ಕಿಂತ ಹೆಚ್ಚು ಮಕ್ಕಳಿವೆ ಎಂದು ಹೇಳಿಕೊಳ್ಳಲು ನಾಚುವಂತಾಯಿತು, ಅಕಸ್ಮಾತ್ ಮೂರನೆಯ ಮಗು ಬರಲಿದೆ ಎಂದು ತಿಳಿದರೆ ಅದನ್ನು ಗರ್ಭದಲ್ಲೇ ಚಿವುಟುವ ಪ್ರಮಾಣ ಕೂಡ ಅಧಿಕೃತವಾಗಿ ನಡೆಯತೊಡಗಿತು. ಆದರೆ ನಮ್ಮ ಪರಂಪರೆಯಲ್ಲಿ ಮನೆ ತುಂಬ ಮಕ್ಕಳಿರಲಿ ಎಂದು ಹೇಳಿಕೊಂಡು ಅನುಸರಿಸಿಕೊಂಡು ಬರಲಾಗುತ್ತಿತ್ತು. ಅದು ಸಹಜ ಎಂಬಂತೆ ಪರಿಗಣಿತವಾಗಿತ್ತು.ಆದರೆ ೧೯೬೦ರ ದಶಕದ ಅನಂತರ ಹೆಚ್ಚು ಮಕ್ಕಳನ್ನು ಹೊಂದಿದವರು ಪ್ರಾಣಿಗಳಿಗೆ ಸಮ ಎಂಬ ಭಾವನೆ ಹುಟ್ಟಿಸಲಾಯಿತು. ಜನಜಾಗೃತಿ ಉಂಟು ಮಾಡಲಾಯಿತು, ಜೊತೆಗೆ ಇದಕ್ಕೆ ಪೂರಕವಾಗಿ ಸಾಮಾಜಿಕ ಔದ್ಯೋಗಿಕ ಸಮಸ್ಯೆಗಳು ಆಡಳಿತಾತ್ಮಕ ವೈದ್ಯಕೀಯ ಸಂಗತಿಗಳು ಕೋಡಿಕೊಂಡು ಜನಸಂಖ್ಯೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿತುಸಾಲದ್ದಕ್ಕೆ ವಿಶ್ವಸಂಸ್ಥೆ ಕೂಡ ಇದಕ್ಕೆ ಕೈ ಜೋಡಿಸಿ ಯಾವ ದೇಶದಲ್ಲಿ ಜನಸಂಖ್ಯೆ ಏರುತ್ತಿದೆ ಎಂಬ ಎಚ್ಚರವನ್ನು ಕೊಡುತ್ತ ಇಂಥ ದೇಶಕ್ಕೆ ಭವಿಷ್ಯವಿಲ್ಲ ಎಂಬಂತೆ ಬಿಂಬಿಸತೊಡಗಿತು.
ಹತ್ತಾರು ದಶಕಗಳ ಹಿಂದೆ ಸಿಡುಬು, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳ ಕಾರಣದಿಂದ ಯುದ್ಧಗಳ ಕಾರಣದಿಂದ ಒಂದು ಮನೆಯಲ್ಲಿ ಜನಿಸಿದ್ದ ಹತ್ತಾರು ಮಕ್ಕಳಲ್ಲಿ ಒಂದೋ ಎರಡೋ ಮಕ್ಕಳು ಮಾತ್ರ ತಮ್ಮ ಆಯಸ್ಸಿನ ಅರ್ಧ ವಯಸ್ಸು ದಾಟುತ್ತಿದ್ದರೆ ಅದೇ ಹೆಚ್ಚಾಗಿತ್ತುಮರಣ ಪ್ರಮಾಣ ಜಾಸ್ತಿ ಇದ್ದ ಕಾರಣ ಹೆಚ್ಚು ಮಕ್ಕಳನ್ನು ಪಡೆಯಲು ಸಮಾಜ ಒಪ್ಪಿಗೆ ನೀಡಿತ್ತು. ಆದರೆ ಈಗ ವೈಜ್ಞಾನಿಕ, ವೈದ್ಯಕೀಯ ಬೆಳವಣಿಗೆಯ ಕಾರಣದಿಂದ ಸಾಂಕ್ರಾಮಿಕ ಕಾಹಿಲೆಗಳು ಹಾಗೂ ಯುದ್ಧ ಸಮಸ್ಯೆಗಳ ಸ್ವರೂಪ ಬದಲಾಗಿ ಮರಣ ಪ್ರಮಾಣ ಕುಸಿದಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಮಕ್ಕಳನ್ನು ಪಡೆಯುವುದನ್ನು ಸಮಾಜ ಅನುಮೋದಿಸಿತು ಆದರೆ ಇದರ ದುಷ್ಪರಿಣಾಮವನ್ನು ಗುರುತಿಸಲು ನಾವೆಲ್ಲ ವಿಫಲವಾದೆವು. ಈಗ ಸಮಾಜದಲ್ಲಿ ಜನಸಂಖ್ಯೆಯ ಹಂಚಿಕೆ ಹಾಗೂ ಎಲ್ಲ ವಯೋಮಾನದ ಜನತೆಯ ಲಭ್ಯತೆ ಇಲ್ಲದ ಕಾರಣ ಅದರ ಅಡ್ಡ ಪರಿಣಾಮ ಎದ್ದು ಕಾಣತೊಡಗಿದೆ. ನಮ್ಮ ದೇಶದ ಬಹಳಷ್ಟು ಹಳ್ಳಿಗಳಲ್ಲಿ ದುಡಿಯುವ ಶಕ್ತಿ ಇರುವ ಯುವ ಶಕ್ತಿ ಇಲ್ಲದೇ ಕೇವಲ ವೃದ್ಧರು ಇರುವಂತಾಗಿ ಅಲ್ಲಿ ಯಾವುದೇ ಚಟುವಟಿಕೆ ಇಲ್ಲದೇ ಹಳ್ಳಿಗಳು ನಾಶದ ಅಂಚಿಗೆ ಬಂದು ನಿಂತಿವೆ. ಮಧ್ಯವಯಸ್ಸಿನ ಜನತೆಯ ಪ್ರಮಾಣದ ಕೊರತೆಯಿಂದ ಕೈಗಾರಿಕೆಗಳು ಸಮಸ್ಯೆ ಎದುರಿಸುತ್ತಿವೆ, ಸಮಾಜದಲ್ಲಿ ಉದ್ಯೋಗ ಸ್ಥಾನಗಳು ಖಾಲಿ ಇರುವಂತಾಗಿ ನಿರೀಕ್ಷೆಯ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಕೃಷಿ ಚಟುವಟಿಕೆಗಳು ಸ್ಥಗಿತವಾಗುವ ಪರಿಸ್ಥಿತಿ ತಲುಪಿವೆ. ಊಟ ಮಾಡುವ ವೃದ್ಧರು ಮತ್ತು ಕೈಲಾಗದ ಮಕ್ಕಳ ಸಂಖ್ಯೆ ಏರುತ್ತಿದ್ದು ಸಮಾಜದ ಭವಿಷ್ಯದ ಮೇಲೆ ಕರಿ ನೆರಳು ಬೀಳುತ್ತಿದೆ. ಇದು ಆತಂಕಕಾರಿ. ಸಾಲದ್ದಕ್ಕೆ ಸಮರ್ಥ ಯುವ ಜನತೆ ಕೂಡ ಮಕ್ಕಳನ್ನು ಪಡೆಯಲು ಹಿಂದೇಟು ಹಾಕುತ್ತಿದೆ, ಇದಕ್ಕೆ ಕಾರಣ ಅವರವರ ಉದ್ಯೋಗ ಭವಿಷ್ಯ ಹಾಗೂ ಆರ್ಥಿಕ ಅಸ್ಥಿರತೆ. ಇದರ ಜೊತೆಗೆ ಭಾರತದಂಥ ದೇಶದಲ್ಲಿ ವೈದ್ಯಕೀಯ ಬೆಳವಣಿಗೆಯ ಕಾರಣದಿಂದ ಮಕ್ಕಳನ್ನು ಪಡೆಯಲು ಗಂಡು ಹೆಣ್ಣು ಇಬ್ಬರೂ ಅಗತ್ಯ ಎಂಬ ಭಾವನೆ ಅಳಿಸಿ ಹೋಗಿ ತಮ್ಮ ಸಮರ್ಥ ಅಂಡಾಣು ವೀರ್ಯಾಣುಗಳನ್ನು ಶೀತಲ ಪೆಟ್ಟಿಗೆಯಲ್ಲಿ ದಶಕಗಳ ಕಾಲ ವೈದ್ಯಕೀಯ ನಿಗ್ರಹಣೆಯಲ್ಲಿ ನೋಡಿಕೊಂಡು ಬೇಕಾದಾಗ ಅವನ್ನು ಜೋಡಿಸಿ ಮಕ್ಕಳನ್ನು ಪಡೆಯುವ ವ್ಯವಹಾರಕ್ಕೆ ನವದಂಪತಿಗಳು ಮುಂದಾಗುತ್ತಿವೆ, ಇದರಿಂದ ಸಹಜವಾಗಿರಬೇಕಿದ್ದ ಜನಸಂಖ್ಯಾ ಹಂಚಿಕೆ ಏರುಪೇರಾಗುತ್ತಿದೆ.
ಜನಸಂಖ್ಯೆಯ ಅಸಮಹಂಚಿಕೆ ಮತ್ತು ಯುವಕರ ಅಲಭ್ಯತೆಯ ಸಮಸ್ಯೆ ಕಲೆಸಂಸ್ಕೃತಿಗಳ ಮೇಲೆಯೂ ಆಗುತ್ತಿದೆ. ಯಕ್ಷಗಾನ, ನಾಟ್ಯ ಮೊದಲಾದ ಕ್ಷೇತ್ರಗಳಿಗೆ ದೈಹಿಕ ಶಕ್ತಿಯುಳ್ಳ ಯುವ ಪ್ರತಿಭೆಗಳು ಬೇಕಾಗುತ್ತದೆ. ಆದರೆ ಅವರ ಅಲಭ್ಯತೆಯ ಕಾರಣದಿಂದ ಈ ಕ್ಷೇತ್ರಗಳು ಸೊರಗತೊಡಗಿವೆ, ಇರುವ ಬೆರಳೆಣಿಕೆಯ ಯುವ ಜನತೆ ದೈಹಿಕ ಶ್ರಮವಿಲ್ಲದ ಉದ್ಯೋಗಗಳನ್ನು ಪಡೆದು ಅಲ್ಲಿ ತುಂಬಿಕೊಳ್ಳುತ್ತಿರುವುದು ಉಳಿದ ವಲಯಗಳ ಹಿಂದುಳಿಯುವಿಕೆಗೆ ಕಾರಣವಾಗುತ್ತಿದೆ, ಇದರ ತೀವ್ರ ಪರಿಣಾಮವನ್ನು ಈಗ ಜಪಾನ್‌ನಂಥ ದೇಶಗಳು ಎದುರಿಸುತ್ತಿದ್ದು ಅಲ್ಲಿ ಸರ್ಕಾರಗಳೇ ಜನತೆಗೆ ಹೆಚ್ಚು ಮಕ್ಕಳನ್ನು ಪಡೆಯುವಂತೆ ಪ್ರೋತ್ಸಾಹಿಸುತ್ತಿದೆ. ಅಲ್ಲಿ ಒಂದೆಡೆ ಆರ್ಥಿಕ ತಾಟಸ್ಥ್ಯ ಇದ್ದರೆ ಮತ್ತೊಂದೆಡೆ ವೃದ್ಧರ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಸಾಲದ್ದಕ್ಕೆ ವೈದ್ಯಕೀಯ ಮುನ್ನಡೆಯಿಂದ ಮರಣ ಪ್ರಮಾಣ ಕುಸಿದು ಸರಾಸರ ವಯಸ್ಸಿನ ಏರಿಕೆ ಏರಿದ್ದು ವೃದ್ಧರ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಕ್ಕೆ ಆರ್ಥಿಕ ಒಳಹರಿವು ಇಲ್ಲದೇ ವೆಚ್ಚ ನಿಭಾಯಿಸುವುದೂ ಕಷ್ಟವಾಗಿದೆ.ಒಟ್ಟಿನಲ್ಲಿ ವೃದ್ಧರು ಮತ್ತು ಮಕ್ಕಳ ನಿವರ್ಞಹಣೆ ದೊಡ್ಡ ತಲೆ ಬಿಸಿಯಾಗಿದೆ.
ಸದ್ಯ ಚೀನಾ ರಷ್ಯಾ ಮತ್ತು ಜಪಾನ್ ದೇಶಗಳು ಈ ಮೊದಲಿನ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಕಿತ್ತು ಪರ್ಯಾಯವಾಗಿ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಆರ್ಥಿಕ ಉತ್ತೇಜನ ತೆರಿಗೆ ವಿನಾಯ್ತಿ ಹಾಗೂ ವಿಶೇಷ ಸವಲತ್ತುಗಳನ್ನು ನೀಡತೊಡಗಿ ಜನಸಂಖ್ಯೆಯ ಗಾತ್ರವನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿವೆ. ಚೀನಾದಲ್ಲಿ ಹಿಂದೆ ಒಂದು ಮಗುವಿಗಿಂತ ಹೆಚ್ಚು ಮಕ್ಕಳಿದ್ದರೆ ತೀವ್ರ ಶಿಕ್ಷೆ ವಿಧಿಸುತ್ತಿದ್ದ ಸರ್ಕಾರ ಈಗ ಜನಸಂಖ್ಯೆ ಇಳಿಕೆಯ ಪರಿಣಾಮ ಎದುರಿಸಲಾಗದೇ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ವಿಶೇಷ ಸವಲತ್ತು ಕೊಡತೊಡಗಿದೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದ ಮಕ್ಕಳ ಜನನ ತಡೆದಿದ ಕಾರಣ ಅಲ್ಲಿ ಈಗ ಸಾಮಾಜಿಕ ಅಸುರಕ್ಷತೆ, ಆರ್ಥಿಕ ಅಭದ್ರತೆ, ಖರ್ಚುವೆಚ್ಚದ ಏರಿಕೆ, ಜೀವನ ನಿರ್ವಹಣೆಯ ದುರ್ಗತಿಗಳು ಕಾಣಿಸತೊಡಗಿವೆ. ಅಲ್ಲಿನ ಸೇನೆಯಲ್ಲಿ ಮುದುಕರೇ ಇರುವಂತಾಗಿದೆ. ಮಕ್ಕಳನ್ನು ಹೊಂದುವ ಶಕ್ತಿ ಮತ್ತು ಪ್ರಮಾಣ ಇಳಿದು ಸರ್ಕಾರಕ್ಕೆ ಭವಿಷ್ಯದ ಚಿಂತೆ ಕಾಡತೊಡಗಿದೆ. ಶ್ರಮಿಕ ವರ್ಗ ತೀವ್ರವಾಗಿ ಕುಸಿದಿದೆ, ಪರಿಣಾಮ ಸರ್ಕಾರಕ್ಕೆ ಆದಾಯವಿಲ್ಲದಂತಾಗಿದೆ. ಜನಸಂಖ್ಯಾ ನಿಯಮಕ್ಕೆ ಕಿವಿಗೊಡದ ಇಸ್ಲಾಂ ಧರ್ಮದ ಜನತೆ ಏರಿಕೆ ಕಂಡಿದ್ದ ಸ್ಥಳೀಯ ಮತ ಧರ್ಮಗಳ ಮೇಲೆ ಅಪಾಯದ ಗಂಟೆ ಬಾರಿಸತೊಡಗಿದೆ.ಇದರಿಂದ ಸಾಂಸ್ಕೃತಿಕ ಪರಿವರ್ತನೆ ಕಾಣಿಸತೊಡಗಿದೆ. ಸಾಲದ್ದಕ್ಕೆ ಈಚೆಗೆ ಅಬ್ಬರಿಸಿದ್ದ ಕೋವಿಡ್‌ಗೆ ಅನೇಕರು ಬಲಿಯಾಗಿ ಚಿಂತೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಹೆಚ್ಚು ಹೆಚ್ಚು ಸಾಂಪ್ರದಾಯಿಕ ಕುಟುಂಬ ಹೊಂದುವಂತೆ ಸರ್ಕಾರ ಪ್ರೇರೇಪಿಸುತ್ತಿದೆ. ಚೀನಾದಲ್ಲಿಸದ್ಯ ಇರುವ ೧.೪ ಶತಕೋಟಿ ಜನಸಂಖ್ಯೆ ೨೦೫೦ರ ವೇಳೆಗೆ ೧.೩ ಶತಕೋಟಿಗೆ ಕುಸಿಯಲಿದೆ ಅನಂತರ ಐವತ್ತು ವರ್ಷಗಳಲ್ಲಿ ೬೩೩ ದಶಲಕ್ಷಕ್ಕೆ ಕುಸಿಯಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದು ಚೀನಾದ ನಿದ್ರೆ ಕೆಡಿಸಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ದೇಶಕ್ಕೆ ಉಳಿಗಾಲವಿಲ್ಲವೆಂದು ಹೇಳಲಾಗುತ್ತಿದೆ.
ನಿಸರ್ಗ ಮಾಡುವ ಕೆಲಸದಲ್ಲಿ ಮನುಷ್ಯ ಹಸ್ತಕ್ಷೇಪ ಮಾಡಿ ತನಗೆ ಗೆಲುವು ಸಿಗುತ್ತಿದೆ ಎಂದು ಭ್ರಮಿಸುತ್ತಾನೆ, ಆದರೆ ಅದರಿಂದ ಆಗುವ ದುಷ್ಪರಿಣಾಮ ಅವನ ಗಮನಕ್ಕೆ ಬರುವುದು ತಡವಾಗಿ ಇಂಥ ಅನೇಕ ಸಂದರ್ಭಗಳನ್ನು ಆತ ಸೃಷ್ಟಿಸಿಕೊಂಡಿದ್ದಾನೆ. ತನ್ನ ಜಾಣ್ಮೆ ಪ್ರದರ್ಶಿಸಲು ಆತ ನಿಸರ್ಗದಲ್ಲಿ ಪ್ರತಿಸೃಷ್ಟಿ ಎಂಬಂತೆ ರೊಬಟ್ ಎಂಬ ಪ್ರತಿ ಮಾನವನನ್ನು ಸೃಷ್ಟಿಸಿ ಅದಕ್ಕೆ ಕೃತಕ ಯಾಂತ್ರಿಕ ಬುದ್ಧಿ ತುಂಬಿ ಮೆರೆದ, ಹತ್ತಾರು ಕಡೆ ಅದನ್ನು ಮನುಷ್ಯನಿಗೆ ಬದಲಾಗಿ ಬಳಸಿದ. ಈಗ ಆ ರೋಬಟ್‌ಗಳು ಇವನ ಕೈ ಮೀರಿ ಮನುಷ್ಯನಿಗೇ ಅಪಾಯಕಾರಿಯಾಗಿ ಬೆಳೆದಿವೆ. ಇಡೀ ಮನುಕುಲವನ್ನು ತನ್ನ ಶತ್ರುವಿನಂತೆ ರೊಬಟ್‌ಗಳು ಕಾಣತೊಡಗಿವೆ, ಸೇನೆಯಂಥ ಕಡೆ ಇರುವ ಸೈನಿಕ ರೊಬಾಟ್‌ಗಳು ಮನುಷ್ಯರ ವಿರುದ್ಧ ಶಸ್ತ್ರ ಹಿಡಿಯುತ್ತಿವೆ, ಇಡೀ ಮಾನವ ಕುಲವನ್ನು ನಾಶ ಮಾಡಲು ಹಠತೊಟ್ಟಂತೆ ಮಾಡುತ್ತಿವೆ, ಹೀಗಾದಲ್ಲಿ ಮನುಷ್ಯನ ಯಾವುದೇ ಅಸ್ತç ಶಸ್ತçಗಳಿಗೆ ಜಗ್ಗದಂತೆ ಮನುಷ್ಯನೇ ಸೃಷ್ಟಿಸಿಕೊಂಡ ರೊಬಾಟ್‌ಗಳು ಅವನ ಪಾಲಿಗೆ ಆಧುನಿಕ ಭಸ್ಮಾಸುರನಂತೆ ಆಗುತ್ತವೆ.
ಮನುಷ್ಯ ಮಾಡಿಕೊಂಡ ಆವಾಂತರ ನೋಡಿ - ಒಮ್ಮೆ ಸ್ವೇಚ್ಛೆಯಿಂದ ಅತಿಯಾಗಿ ವರ್ತಿಸಿದ, ಈಗ ಮತ್ತೆ ಸಂತಾನ ನಿಯಂತ್ರಣಕ್ಕೆ ಮುಂದಾಗಿ ಸಮಸ್ಯೆ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಸಾಲದ್ದಕ್ಕೆ ಕೃತಕ ಬುದ್ಧಿಮತ್ತೆಯ ರೊಬಾಟ್‌ಗಳನ್ನು ಸೃಷ್ಟಿಸಿಕೊಂಡು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದಾನೆ. ಈ ಸವಾಲಿನಿಂದ ಹೊರಬರುವುದು ಸುಲಭವಲ್ಲ ಎಂದು ಅವನಿಗೆ ಅರಿವಾಗಿದೆ, ಆದರೆ ಮನುಷ್ಯ ಬಹಳ ಮುಂದೆ ಹೋಗಿಬಿಟ್ಟಿದ್ದಾನೆ. ಮುಂದೆ ಹೋಗುವ ದಾರಿ ಇಲ್ಲ. ಹಿಂದೆ ಬರಲಾಗದಂಥ ಇಕ್ಕಟ್ಟಿಗೆ ಸಿಲುಕಿದ್ದಾನೆ. ಇನ್ನು ತಂತ್ರಜ್ಞಾನದ ಹೆಸರಲ್ಲಿ ಇಂಥ ತಲೆಹರಟೆ ಮಾಡುವುದನ್ನು ಬಿಟ್ಟು ನಿಸರ್ಗಕ್ಕೆ ಶರಣಾಗುವುದನ್ನು ಬಿಟ್ಟರೆ ಅವನಿಗೆ ಅನ್ಯ ಮಾರ್ಗವಿಲ್ಲ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ತನ್ನ ಬದುಕು ಹಸನು ಮಾಡಿಕೊಳ್ಳಲು ಬಳಸದೇ ಪ್ರಕೃತಿಯೊಂದಿಗೆ ಪೈಪೋಟಿ ನಡೆಸಲು ಬಳಸಿದ್ದು ಅವನ ಮೊದಲ ತಪ್ಪು. ನೈಸರ್ಗಿಕ ವಿದ್ಯಮಾನದಲ್ಲಿ ಹಸ್ತಕ್ಷೇಪ ಮಾಡದೇ ಇದ್ದಿದ್ದರೆ ಅವನಿಗೆ ಇಂಥ ಕೇಡುಗಾಲ ಬರುತ್ತಿರಲಿಲ್ಲ ಅನಿಸುತ್ತದೆ. ಇನ್ನಾದರೂ ಆತ ಪಾಠ ಕಲಿಯುವುದು ಒಳಿತು.




