Sunday, 27 February 2022

ಕರ್ನಾಟಕ ಬಜೆಟ್ 2022 ನಿರೀಕ್ಷೆಗಳು

ಸದ್ಯದಲ್ಲಿ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜನರ ನಿರೀಕ್ಷೆ ಮತ್ತು ಸರ್ಕಾರದ ಮುಂದಿರುವ ಸವಾಲುಗಳ ಅವಲೋಕನ ಮಾಡಬಹುದು. ಕಳೆದ ಎರಡು ವರ್ಷಗಳಿಂದ ಪ್ರಪಂಚ ಎದುರಿಸುತ್ತಿರುವ ಕರೋನಾ ಕಾಟದಿಂದ ಎಲ್ಲ ಕಡೆಯೂ ಆದಾಯದ ಮೇಲೆ ಹೊಡೆತ ಬಿದ್ದಿದೆ, ನಮ್ಮ ಸರ್ಕಾರವೂ ಇದಕ್ಕೆ ಹೊರತಲ್ಲ. ಹೀಗಾಗಿ ಏನೇ ಯೋಜನೆಯನ್ನು ಸರ್ಕಾರ  ಹಾಕಿಕೊಂಡಿದ್ದರೂ ಅದನ್ನು ಆಗುಮಾಡಿಸಲು ಸರ್ಕಾರ ಹಿಂದೆಮುಂದೆ ನೋಡಬೇಕಾಗುತ್ತದೆ. ಹೀಗಾಗಿ ಯಾವುದೇ ಯೋಜನೆಗೆ ಹಣ ವ್ಯಯಿಸಲು ಬಹಳ ಲೆಕ್ಕಾಚಾರ ಮಾಡಬೇಕಾದ ಸವಾಲು ಹೆಚ್ಚಿನದು. ಸಾಲದ್ದಕ್ಕೆ ಸಿಎಂರಿಂದ ಜನರ ನಿರೀಕ್ಷೆಯೂ ಸಹಜವಾಗಿ ಹೆಚ್ಚಿದೆ. ಸಿ ಎಂ ಬೊಮ್ಮಾಯಿಯವರ ಸರ್ಕಾರದ ಚೊಚ್ಚಲ ಬಜೆಟ್ ಇದಾಗಿದೆ.ಇದರಿಂದ ಜನರ ನಿರೀಕ್ಷೆ ಕೂಡ ಸಹಜವಾಗಿ ಹೆಚ್ಚಿದೆ. ಕಳೆದ ವರ್ಷದಿಂದ ಸ್ವಲ್ಪ ಆದಾಯ ಬರುತ್ತಿರುವುದರಿಂದ ಸಮಾಧಾನ ಮಾಡಿಕೊಳ್ಳಬಹುದು.ಏನೇ ಆದರೂ 2023ರಲ್ಲಿ ಚುನಾವಣೆ ಬರುತ್ತಿರುವುದರಿಂದ ಸಿಎಂ ಅವರ ಮೇಲೆ ಒತ್ತಡ ಉಂಟಾಗಲಿದೆ. ಅಭಿವೃದ್ಧ ಕಾರ್ಯಗಳ ಜೊತೆಗೆ ಸರ್ಕಾರಿ ನೌಕರರ ವೇತನ ಹೆಚ್ಚಳದಂಥ ಸವಾಲುಗಳೂ ಸೇರಿವೆ. ಈಗಾಗಲೇ ಶಾಸಕ, ಮಂತ್ರಿಗಳ ವೇತನ ಹೆಚ್ಚಿಸಿಕೊಂಡಿದ್ದರಿಂದ ನೌಕರರ ಬಹುಕಾಲದ ಬೇಡಿಕೆಯನ್ನು ಸುಲಭವಾಗಿ ತಳ್ಳಿಹಾಕಲು ಬರುವುದಿಲ್ಲ. ಜೊತೆಗೆ ಸರ್ಕರದಲ್ಲಿ ಬಹುಕಾಲದಿಂದ ಖಾಲಿ ಬಿದ್ದಿರುವ ಹುದ್ದೆಗಳನ್ನೂ ತುಂಬಬೇಕಿದೆ. ಇವು ದೊಡ್ಡ ಸವಾಲುಗಳು.ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಮುಂದುವರೆಸುವುದೇ ಸವಾಲಿನದು ಅನಿಸುವಾಗ ಹೊಸ ಜನಪ್ರಿಯ ಯೋಜನೆಗಳನ್ನು ಸರ್ಕಾರ ಕೈಗೊಳ್ಳ ಲಾರದು.ಕೇಂದ್ರದಿಂದ ಬರಬೇಕಿರುವ ಜಿಎಸ್‍ಟಿ ಪಾಲಿನ ಮೇಲೆ ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕಿದೆ.ಇವೆಲ್ಲದರ ನಡುವೆ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಸಿಎಂ ಅವರು ಜಾರಿ ಮಾಡುತ್ತೇವೆಂದು ಘೋಷಿಸಿದ ಯೋಜನೆಗಳ ಅಂದಾಜು ವೆಚ್ಚವೇ ಸುಮಾರು 30 ಸಾವಿರ ಕೋಟಿ ರೂಗಳಷ್ಟಾಗಿ ಕೂತಿದೆ.ರೈತರ ಮಕ್ಕಳಿಗೆಂದು ಘೋಷಿಸಿದ ರೈತವಿದ್ಯಾನಿದಿ ವಿದ್ಯಾರ್ಥಿವೇತನ ಯೋಜನೆ ಸಾವಿರ ಕೋಟಿಗಳದ್ದು.ಇದೊಂದು ಬಿಸಿ ತುಪ್ಪ., ಬಾಯಲ್ಲಿಟ್ಟಾಗಿದೆ. ನುಂಗಿದರೆ ಕಷ್ಟ, ಉಗಿದರೆ ನಷ್ಟ!ಇದೇ ಸಾಲಿಗೆ ಸೇರಿದ್ದು ಬೆಂಗಳೂರು ಅಭಿವೃದ್ಧಿ ಯೋಜನೆ. ಕೇವಲಹೆಬ್ಬಾಳ ಜಂಕ್ಷನ್ ಯೋಜನೆಯೇ ಆರು ಸಾವಿರ ಕೋಟಿಗಳದ್ದು.ಇನ್ನು ಪರಿಶಿಷ್ಟಪಂಗಡ, ವರ್ಗಗಳ ಯೋಜನೆ ಕೈಬಿಡಲಾಗದ್ದು.

ಇವೆಲ್ಲವುಗಳ ಜೊತೆಗೆ ನೀರಾವರಿ, ಮೂಲಭೂತ ಸೌಕರ್ಯ, ಗ್ರಾಮೀಣ ಅಭಿವೃದ್ಧಿ,ಲೋಕೋಪಯೋಗಿ ಕೆಲಸಗಳಿಗೆ ನಿಗದಿತ ಹಣಕಾಸು ಕೊಡುವುದು ಅನಿವಾರ್ಯ.ಇದನ್ನೆಲ್ಲ ನೋಡಿದರೆ ಬೊಮ್ಮಾಯಿಯವರ ಸರ್ಕಾರ ಈ ಬಾರಿ ಖೋತಾ ಬಜೆಟ್ ಕೊಡುವುದು ಅನಿವಾರ್ಯ ಅನಿಸುತ್ತದೆ.ಕೊರೊನಾ ಹೊಡೆತದ ನಡುವೆಯೂ ಸರ್ಕಾರದ ಆದಾಯ ಸುಸ್ಥಿಯನ್ನು ಕಾಯ್ದುಕೊಂಡಿದೆ. ಇದು ಉತ್ತಮ ಲಕ್ಷಣ.ಕಳೆದ ಜನೆವರಿ ಅಂತ್ಯದ ವೇಳೆಗೆ ಕರ್ನಾಟಕ ಸಾಲ ಪಡೆಯಲು ಅರ್ಹವಾದ ಮೊತ್ತದಲ್ಲಿ ಕೇವಲ ಶೇ57 ಮಾತ್ರ ಪಡೆದಿದೆ.ಇದು ನಿಜಕ್ಕೂ ಗುಣಾತ್ಮಕ ಸಂಗತಿ.ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ಜನಪ್ರಿಯ ಘೋಷಣೆಗಳು ಕಾಣಿಸಬಹುದು.ಇದು ಮುಂಬರುವ ಚುನಾವಣೆಯ ರಣ ನೀತಿಯ ಭಾಗವೂ ಆಗಬಹುದು. ಇನ್ನು ಹೊಸದಾಗಿ ಬೇಡಿಕೆ ಇರುವ ವೈದ್ಯ ಕಾಲೇಜುಗಳು, ಹೊಸ ಸಂಸ್ಥೆಗಳ ಸ್ಥಾಪನೆ ಸಾಧ್ಯವಾಗದೆನಿಸುತ್ತದೆ.ಕಿರು ಕೈಗಾರಿಕೆ, ಕಿರು ಹಾಗೂ ಹೊಸ ಉದ್ಯಮಗಳಿಗೆ ಹೆಚ್ಚಿನ ಸಾಲ ಸೌಲಭ್ಯ  ಹಾಗೂ ಎಂಎಸ್ ಎಂಇಗಳಿಗೆ ಸಬ್ಸಿಡಿ ಕೊಡಬೇಕಿದೆ ಉದ್ಯೋಗ ಸೃಷ್ಟಿ ದೃಷ್ಟಿಯಿಂದಲೂ ಇದು ಅಗತ್ಯ. ಸೂಕ್ತ ಸಂಪರ್ಕ ವ್ಯವಸ್ಥಗಾಗಿ ಪ್ರಧಾನ ಮಂತ್ರಿಗಳ ಗತಿ ಶಕ್ತಿ ಯೋಜನೆಗೂ ಆದ್ಯತೆ ಕೊಡಬೇಕಿದೆ. ಜೊತೆಗೆ ವಿದ್ಯತ್ ದರ ಇಳಿಸುವಂತೆ ಉದ್ದಿಮೆಗಳ ಒತ್ತಡವಿದೆ. ಆಯವ್ಯಯದ ಶೇ. ಹತ್ತರಷ್ಟು ಮೊತ್ತ ಸೇವಾ ವಲಯಕ್ಕೆ ಹೋಗುತ್ತದೆ.21-22ನೆಯ ಸಾಲಿನಲ್ಲಿ ನಮ್ಮ ಸರ್ಕಾರ 27,160 ಕೋಟಿ ರೂಗಳನ್ನು ಸಾಲದ ಮೇಲಿನ ಬಡ್ಡಿಗೆ ವ್ಯಯಿಸಿದೆ.ಕಳೆದ ಮೂರು ವರ್ಷಗಳಲ್ಲಿ ಇದು ಶೇ. 76ರಷ್ಟು ಹೆಚ್ಚಿದಂತಾಗಿದೆ.ಸವಾಲುಗಳು ಏನೇ ಇರಲಿ, ಕೃಷಿಗೆ ಉತ್ತೇಜನ ದೊರೆತಷ್ಟೂ ಅಭಿವೃದ್ಧಿ ವೇಗ ಪಡೆಯುತ್ತದೆ. ಕೃಷಿ ಉತ್ಪನ್ನಗಳಿಗೆ ಕೃಷಿ ಬೆಲೆ ನಿಗದಿ ಆಯೋಗ ಸ್ಥಾಪಿಸಿದ್ದು ಅದರ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟ ತಲುಪಬೇಕಿದೆ.

No comments:

Post a Comment