ಭಾರತದ ಜಾತಿಯನ್ನು ಕುರಿತು ಸಾಕಷ್ಟು ಕೇಳಿದ್ದೇವೆ, ಮಾತಾಡುತ್ತಲೇ ಇರುತ್ತೇವೆ. ವಿದ್ಯೆ ಒಂದು ಜಾತಿಗೆ ಮಾತ್ರ ಸೀಮಿತವಾಗಿತ್ತು ಎಂದೂ ಹೇಳುತ್ತೇವೆ. ಇದು ಬ್ರಟಿಷರು ಹೇಳಿಕೊಟ್ಟ ಗಿಣಿ ಪಾಠ ಎಂದರೆ ಅನೇಕರು ನಂಬುವುದಿಲ್ಲ. ಇಲ್ಲಿ ಒಬ್ಬ ಬ್ರಿಟಿಷ್ ಉಲ್ಲೇಖಿಸಿದ ಮಾತಿದೆ. ಜಾಗೃತರಾಗಿ ಓದಿ....
ಸುಮಾರು 16ನೆಯ ಶತಮಾನದ ಮಧ್ಯಭಾಗದಿಂದ ಇದಕ್ಕೆ ವಿರುದ್ಧವಾದ ಪ್ರವೃತ್ತಿ ಕಾಣಿಸಿಕೊಳ್ಳತೊಡಗಿತು. ಇದು ಚರ್ಚುಗಳಲ್ಲಿ ಬೈಬಲ್ಲಿನ ಇಂಗ್ಲಿಷ್ ಆವೃತ್ತಿಯನ್ನು ಓದಬಾರದೆಂಬ ಕಾನೂನು ಜಾರಿಯಾಗಲು ಕಾರಣವಾಯಿತು. ಶ್ರೀಮಂತರು ವ್ಯಾಪಾರಿಗಳು ಮತ್ತು ಕೆಲವು ಗೃಹಸ್ಥರಿಗೆ ಖಾಸಗಿ ಓದಿನ ಹಕ್ಕಿಗೆ ಅವಕಾಶ ಕೊಡಲಾಯಿತು. ಇದನ್ನು ಕಲಾಕಾರರು ಪ್ರವಾಸಿಗರು ಮತ್ತು ಸೇವಕರು ಜನಸಾಮಾನ್ಯರು, ಕಾರ್ಮಿಕರು ಮುಂತಾದವರಿಗೆ ಸ್ಪಷ್ಟವಾಗಿ ನಿರಾಕರಿಸಲಾಯಿತು. ಇವರು ಧರ್ಮಗ್ರಂಥಗಳ ಮುಕ್ತ ಬಳಕೆಗೆ ಅರ್ಹರಲ್ಲ ಎಂದು ಭಾವಿಸಲಾಯಿತು. ಈ ಹೊಸ ಪ್ರವೃತ್ತಿಯ ಪ್ರಕಾರ ಒಬ್ಬ ರೈತನ ಮಗ ಉಳುಮೆಗೆ ಹೋಗಬೇಕು, ಕಲಾವಿದನ ಮಗ ಕಲಾವಿದನಾಗಬೇಕು, ಅಂತೆಯೇ ವ್ಯಾಪಾರಿಯ ಮಗ ವ್ಯಾಪಾರವನ್ನೇ ಮಾಡಬೇಕು. ಹಾಗೇಯೇ ಒಬ್ಬ ಪದವೀಧರನ ಮಗ ಸರ್ಕಾರದ ತಿಳಿವಳಿಕೆ ಮತ್ತು ನಿಯಮವನ್ನು ಸಾಮಾನ್ಯರ ಒಳಿತಿಗಾಗಿ ತಿಳಿದುಕೊಳ್ಳಬೇಕು. ಯಾವುದೇ ಇತರ ಸಂಗತಿಯಂತೆ ರೈತ ಕೂಡ ನಮಗೆ ಅಗತ್ಯವಾಗಿದ್ದಾನೆ. ಎಲ್ಲರೂ ಶಾಲೆಗೆ ಹೋಗಲು ಸಾಧ್ಯವಾಗದಿರಬಹುದು.

No comments:
Post a Comment