ಫೆಬ್ರವರಿ ಒಂದರಂದು ಮಂಡನೆಯಾದ ಮೋದಿ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಎಲ್ಲರನ್ನೂ ಸಂತೈಸಿದೆ. ಮುಖ್ಯವಾಗಿ ಎಲ್ಲ ಟೀಕಾಕಾರರ ಬಾಯಿ ಮುಚ್ಚಿಸಿದೆ.ಒಟ್ಟು 45ಲಕ್ಷ ಕೋಟಿ ರೂಗಳ ಈ ಬಜೆಟ್ನಲ್ಲಿ ನಿರೀಕ್ಷೆಯಂತೆ ತೆರಿಗೆ ಪಾವತಿಯ ಹಳೆಯ ನೀತಿಯಲ್ಲಿ ಸ್ವಲ್ಪ ಬದಲಾವಣೆ ತರಲಾಗಿದೆ. ಹೊಸ ನೀತಿಯಲ್ಲಿ ಐದು ಸ್ಲಾಬ್‍ಳನ್ನು ಕೊಡಲಾಗಿದೆ. ಹೊಸ ತೆರಿಗೆ ನೀತಿ ಕಳೆದ ವರ್ಷ ಜಾರಿಯಾಗಿದ್ದರೂ ಅದು ಪಾವತಿದಾರ ಸ್ನೇಹಿಯಾಗಿರಲಿಲ್ಲ. ಹೀಗಾಗಿ ಇದನ್ನು ಕೇವಲ ಶೇ.12 ಜನ ಮಾತ್ರ ಸ್ವೀಕರಿಸಿದ್ದರು. ಹೀಗಾಗಿ ಅದರಲ್ಲಿ ಬದಲಾವಣೆ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಒಪ್ಪುತ್ತಾರೆಂಬುದನ್ನು ನೋಡಬೇಕಿದೆ. ಸಂತೋಷದ ಸಂಗತಿ ಅಂದರೆ ಈ ಬಾರಿವಿತ್ತೀಯ ಕೊರತೆಯನ್ನು ಇಳಿಸಲಾಗಿದೆ. ಮುಂದೆ ಈ ಕೊರತೆಯನ್ನು ಸಂಪೂರ್ಣ ನಿಲ್ಲಿಸುವುದರತ್ತ ಇದು ಇನ್ನೊಂದು ಹೆಜ್ಜೆ. ಯಾವುದೇ ಜನಪ್ರಿಯ ಯೋಜನೆ ಇಲ್ಲದ ವಿತ್ತೀಯ ಶಿಸ್ತನ್ನು ಕಾಯ್ದುಕೊಂಡ ಹಾಗೂ ಕೇಂದ್ರ ಅನುದಾನದಲ್ಲಿ ರಾಜ್ಯಗಳು ಜನಪ್ರಿಯ ರಾಜಕೀಯ ಯೋಜನೆ ಘೋಷಿಸುವುದಕ್ಕೂ ಕಡಿವಾಣ ಹಾಕಿದೆ. ಕುಟುಂಬ ಕಲ್ಯಾಣ ಇಲಾಖೆಯ ಅನುದಾನ ಕಡಿತ ಇದಕ್ಕೆ ನಿದರ್ಶನ.
ತೆರಿಗೆಯ ಮಿತಿಯನ್ನು ಏಳು ಲಕ್ಷಕ್ಕೆ ಏರಿಸಿದ್ದು ಖರೀದಿ ಶಕ್ತಿ ಹೆಚ್ಚಿಸಲು, ಎಲ್ಲರ ಆದಾಯ ಹೆಚ್ಚಿಸಲು ಅನುವುಮಾಡಿಕೊಡಲಿದೆ.
ವಿಶ್ವಕರ್ಮ ಯೋಜನೆಯಡಿ 4 ಲಕ್ಷ ಜನರಿಗೆ ಕೌಶಲ ತರಬೇತಿ ನೀಡುವುದು, ದೇಶದ ಅನೇಕ ಕಡೆ ದೇಶೀ ಯೂನಿಟ್ಗಳನ್ನು ಸ್ಥಾಪಿಸಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವುದು ಉತ್ತಮ ಪ್ರಯತ್ನವಾಗಿದೆ.ಮುಖ್ಯವಾಗಿ ಗ್ರಾಮೀಣಾಭಿವೃದ್ಧಿಗೆ ಒತ್ತು ಕೊಟ್ಟಿರುವುದು ಜೊತೆಗೆ ಕೃಷಿ ಸಹಕಾರಿ ಸಂಘಗಳ ಸದಸ್ಯರಿಗರ 2 ಲಕ್ಷ ನಗದು ಕೊಡುವುದು ಕೃಷಿ ವಲಯದ ಸಾಲಕ್ಕೆ ಉತ್ತೇಜನ ಕೊಟ್ಟಿರುವುದು ಸ್ತುತ್ಯರ್ಹ. ಸಿರಿಧಾನ್ಯಗಳಿಗೆ ನೀಡಿರುವ ಉತ್ತೇಜನ, ಆಹಾರ ಧಾನ್ಯಗಳಿಗೆ ಕೊಟ್ಟ ಪ್ರೋತ್ಸಾಹಗಳು ಕೂಡ ಬಜೆಟ್ಟಿನ ಗುಣಾತ್ಮಕ ಅಂಶಗಳು. ದೇಖೋ ಅಪ್ನಾ ದೇಶ್ ದೇಶ ದರ್ಶನಗಳ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿರುವುದು ಒಂದೆಡೆ ಸ್ಥಳೀಯ ಉದ್ಯೋಗ ಹೆಚ್ಚಳ ಮಾಡಿದರೂ ಪರಿಸರಾತ್ಮಕ ಅಪಾಯಗಳ ಬಗ್ಗೆ ಯೋಚಿಸಬೇಕಿದೆ. ಸಣ್ಣ ಕೈಗಾರಿಕೆಗೆ ಕೊಟ್ಟಿರುವ ಉತ್ತೇಜನ ಸ್ಪರ್ಧಾತ್ಮಕತೆಗೆ ಕಾರಣವಾಗುವುದಲ್ಲದೇ ಗುಣಮಟ್ಟ ಹೆಚ್ಚಳಕ್ಕೂ ದಾರಿ ಮಾಡಿಕೊಡುತ್ತದೆ.
ಈ ಬಾರಿಯ ಬಜೆಟ್ ಎಂದಿನಂತೆ ಟೀಕಾಕಾರರ ಹಾಗೂ ಪ್ರತಿಪಕ್ಷಗಳ ಟೀಕೆಯನ್ನು ಎದುರಿಸದಿರುವುದು ಒಂದು ಹೆಗ್ಗಳಿಕೆಯಾದರೂ ಇದರಲ್ಲಿರುವ ಮಿತಿ ಅರ್ಥವಾಗಲು ಆರು ತಿಂಗಳಾದರೂ ಬೇಕಾಗುತ್ತದೆ.
ಬಜೆಟ್ಗೆ ಸಂಬಂಧಸಿದ ಇನ್ನೊಂದು ವಿಷಯವೆಂದರೆ ಸಾಮಾಜಿಕ ಜಾಲ ತಾಣಗಳಲ್ಲಿ ಕೂಡ ಹೆಚ್ಚು ಚರ್ಚೆ ಆಗದಿರುವುದು, ಅಲ್ಲಿ ಹೆಚ್ಚು ನಡೆದ ಚರ್ಚೆ ಬಜೆಟ್ಟಿಗಿಂತಲೂ ನಿರ್ಮಲಾ ಅವರು ತೊಟ್ಟ ಸೀರೆ ಎಲ್ಲಿಯದು ಕರ್ನಾಟಕದ ಇಳಕಲ್ಲಿನದಾ ಮೈಸುರು, ಧರವಾಡದ್ದಾ ಕಂಚೀಪುರದ್ದಾ ಒತ್ಯಾದಿ ಲಘು ಹರಟೆ ರೀತಿಯದ್ದೇ ವಿನಾ ಗಂಭೀರ ಸ್ವರೂಪದ್ದಲ್ಲ. ಎಡ ಪಕ್ಷದವರು ಕೂಡ ಟೀಕೆ ಮಡದಿರುವುದನ್ನು ಗಮನಿಸಿದ ನೆಟ್ಟಿಗರು ನಿರ್ಮಲಾ ಅವರು ತೊಟ್ಟ ಸೀರೆ ಕೆಂಪು ಬಣ್ಣದ್ದಾದ್ದರಿಂದ ಅವರು ಸುಮ್ಮನಿದ್ದಾರೆ ಅಕಸ್ಮಾತ್ ಅದು ಕೇಸರಿ ಬಣ್ಣದ್ದಾಗಿದ್ದರೆ ಹಣಕಾಸು ಸಚಿವರು ಬಜೆಟ್ ಮಂಡನೆಯಂಥ ಸಂದರ್ಭವನ್ನು ಪಕ್ಷ ಸಂಕೇತವಾಗಿ ಬಳಸಿಕೊಂಡು ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆಂದು ತೆಗಳುತ್ತಿದ್ದರೆಂದು ಈಗ ಟೀಕಿಸಲು ಅವರಿಗೆ ಏನೂ ಉಳಿದಿಲ್ಲ ಎಂದು ಕಾಲೆಳೆದಿದ್ದಾರೆ.
ದೇಶಾದ್ಯಂತ ಮೂಲಸೌಕರ್ಯಕ್ಕೆ ಒತ್ತು ಕೊಡುವಂತೆ ರಸ್ತೆ ಸಾರಿಗೆ ಸಂಪರ್ಕ ಉತ್ತಮಪಡಿಸುವ ಸೌಲಭ್ಯ ಹೆಚ್ಚಿಸುವುದು ದೂರದೃಷ್ಟಿಯನ್ನು ಉಳ್ಳದ್ದಾಗಿದೆ.ರಿಯಲ್ ಎಸ್ಟೇಟ್ ವಲಯದ ಉತ್ತೇಜನ ಉದ್ಯೋಗ ಸೃಸ್ಟಿಗೆ ಸಹಕಾರಿಯಾದರೂ ಇದರ ಅಪಾಯದ ಮಗ್ಗುಲನ್ನು ತಳ್ಳಿಹಾಕುವಂತಿಲ್ಲ. ಈ ಎಲ್ಲ ಅಂಶಗಳ ಬಗ್ಗೆ ಇನ್ನು ಮೇಲೆ ಗಂಭೀರ ಚಚರ್ರ ಆಗಬೇಕಿದೆ. ಒಟ್ಟಿನಲ್ಲಿ ಮೇಲ್ನೋಟಕ್ಕೆ ಎಲ್ಲರೂ ಒಪ್ಪಬಹುದಾದ ಬಜೆಟ್ ಅನಿಸಿದರೂ ಇದರಿಂದ ನೇರವಾಗಿ ಹಳ್ಳಿಗಳು ಮತ್ತು ಪರಿಸರದ ಮೇಲಾಗುವ ದೂರಗಾಮಿ ಪರಿಣಾಮವನ್ನು ಯಾರೂ ಯೋಚಿಸುತ್ತಿರುವಂತೆ ಕಾಣುತ್ತಿಲ್ಲ. ಇದು ನಡೆಯಬೇಕಿದೆ.

No comments:
Post a Comment