ಅಕ್ಟೋಬರ್ ೬ ರಂದು ಸ್ವತಃ ಇಸ್ರೇಲಿಗೆ ಗಾಬರಿ ಆಗುವಂತೆ ಹಮಾಸ್ ಉಗ್ರರು ಅವರ ಮೇಲೆ ದಾಳಿ ಮಾಡಿದ್ದರು. ಇಸ್ರೇಲಿಗೆ ಯುದ್ಧ ಅಥವಾ ದಾಳಿ ಹೊಸದಲ್ಲ. ಆದರೆ ಈ ಬಾರಿ ನಡೆದ ದಾಳಿ ಮಾತ್ರ ಯಾರಿಗೂ ಅರ್ಥವಾಗದಂತೆಯೂ ಎಲ್ಲರೂ ಬೆಚ್ಚಿ ಬೀಳುವಂತೆಯೂ ಮಾಡಿದೆ. ಹಮಾಸ್ ಉಗ್ರರ ದಾಳಿಯ ಮುನ್ಸೂಚನೆ ಇಸ್ರೇಲಿನಂಥ ಮುಂದುವರೆದ ಆಧುನಿಕ ತಂತ್ರಜ್ಞಾನವುಳ್ಳ, ಸಮರ ತಂತ್ರನಿಪುಣತೆಯ ದೇಶಕ್ಕೆ ಏಕೆ ತಿಳಿಯಲಿಲ್ಲ, ಅಲ್ಲಿನ ಗುಪ್ತಚರ ದಳ ಎಡವಿದ್ದೆಲ್ಲಿ ಎಂಬ ಗುಮಾನಿಯೂ ಎದ್ದಿದೆ. ಪವಿತ್ರ ಧಾರ್ಮಿಕ ಕೇಂದ್ರ ಜೆರುಸಲೇಂ ಜೊತೆಗೆ ಮಹತ್ವದ ಆರ್ಥಿಕ ಹಾಗೂ ಸಂಪದ್ಭರಿತ ಕೇಂದ್ರ ಗಾಜಾಪಟ್ಟಿಯ ವಶೀಕರಣ ಇನ್ನೊಂದು ಪ್ರಮುಖ ಕಾರಣ. ಜೊತೆಗೆ ಕಣ್ಣಿಗೆ ಕಾಣದ ಅಸಂಖ್ಯ ಭೌಗೋಳಿಕ ರಾಜಕೀಯಾತ್ಮಕ ಕಾರಣಗಳಿವೆ. ಅಮೆರಿಕದ ವಾಷಿಂಗ್ಟನ್ ನಷ್ಟು ಸಣ್ಣ ಗಾಜಾ ಭೂಭಾಗದಲ್ಲಿ ಮೊದಲ ಮಹಾಯುದ್ಧದ ಕಾಲಕ್ಕೆ ಪ್ಯಾಲಸ್ತೀನಿಯರ ಸಂಖ್ಯೆ ೨ ಮಿಲಿಯನ್ ಆಗಿದ್ದರೆ ಯಹೂದಿಗಳ ಸಂಖ್ಯೆ ೨.೫ ಮಿಲಿಯನ್ ಗಳಷ್ಟಿತ್ತು. ಮೂಲತಃ ಇದು ಮುಸ್ಲಿಮರು ಹೆಚ್ಚಾಗಿರುವ ಜಾಗ. ಇದರ ಮೇಲೆ ಕಣ್ಣಿದೆ. ಇದು ಇನ್ನೊಂದು ಕಾರಣ.
ಹಾಗೆ ನೋಡಿದರೆ ಹಮಾಸ್ ಎಂಬ ಆಯುಧ ಹಿಡಿದ ರಾಜಕೀಯ ಸಮೂಹದ ಸುನ್ನಿ ವರ್ಗದ ಮುಸ್ಲಿಮರು ಮೊದಲ ಮಹಾಯುದ್ಧದ ಕಾಲದಿಂದ ಇಸ್ರೇಲಿನ ಯಹೂದಿ ಜನರೊಂದಿಗೆ ಸಂಘರ್ಷದಲ್ಲಿ ತೊಡಗಿದ್ದಾರೆ. ಆಟೋಮನ್ ತುರುಷ್ಕರ ರಾಜನೊಂದಿಗೆ ಶತಮಾನಗಳ ಹಿಂದೆ ನಡೆದ ಭೂಪ್ರದೇಶ ಕುರಿತ ವ್ಯಾಜ್ಯ ಇದಕ್ಕೆ ಮೂಲ ಕಾರಣ ಅನ್ನಬಹುದು. ಮೊದಲ ಮಹಾಯುದ್ಧದ ಕಾಲದಲ್ಲಿ ಇಂದಿನ ಇಸ್ರೇಲ್ ಸ್ಥಳ ಆಟೋಮನ್ನರಿಗೆ ಸೇರಿತ್ತು. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೌದಿಯ ಅರಬ್ಬರು ಹಾಗೂ ಅಲ್ಪ ಸಂಖ್ಯೆಯಲ್ಲಿ ಯಹೂದಿಗಳು ಇದ್ದರು. ಆಟೋಮನ್ ರಾಜ ಯಹೂದಿಗಳಿಗೆ ಪ್ರತ್ಯೇಕ ಜಾಗ ಕೊಡಲು ನಿರಾಕರಿಸಿದ. ಆದರೆ ಯಹೂದಿಗಳು ಸ್ವತಂತ್ರವಾಗಿ ಇಂದಿನ ಪ್ಯಾಲಸ್ಟೀನ್ ಜಾಗವನ್ನು ಖರೀದಿ ಮಾಡುತ್ತ ಕೃಷಿ ಕೆಲಸಶುರು ಮಾಡಿಕೊಂಡರು. ಹೀಗೆ ಹಂತ ಹಂತವಾಗಿ ಬಹುದೊಡ್ಡ ಜಾಗವನ್ನು ತಮ್ಮದನ್ನಾಗಿ ಮಾಡಿಕೊಂಡ ಯಹೂದ್ಯರು ಆ ಜಾಗದ ಮೇಲೆ ಹಿಡಿತ ಸಾಧಿಸಿದರು. ಆದರೆ ಅದರ ಕೂಲಿ ಕೆಲಸಕ್ಕೆ ಅರಬ್ಬರೇ ಬೇಕಾಗಿತ್ತು. ಯಹೂದಿಗಳ ಆರ್ಥಿಕತೆ ಏರತೊಡಗಿತು. ಅರಬ್ಬರ ಕಣ್ಣು ಅದರ ಮೇಲೆ ಬೀಳತೊಡಗಿತು. ಸಂಘರ್ಷ ಶುರುವಾಯಿತು. ಜೊತೆಗೆ ಇಸ್ರೇಲ್ ವಶದಲ್ಲಿದ್ದ ಜೆರುಸಲೇಂ ತಮ್ಮ ಕ್ಷೇತ್ರವೆಂದುಮುಸ್ಲಿಮರು ವರಾತ ತೆಗೆದರು. ಇದರೊಂದಿಗೆ ಕ್ರಿಶ್ಚಿಯನ್ನರು ಕೂಡ ಅದು ತಮಗೂ ಪವಿತ್ರ ಧಾರ್ಮಿಕ ಕೇಂದ್ರವೆಂದು ಹಕ್ಕು ಸಾಧಿಸತೊಡಗಿತು. ಯಹೂದಿಗಳು ಶತಮಾನಗಳ ಹಿಂದಿನ ಅಬ್ರಹಾಂ, ಐಸೆಕ್ ಹಾಗೂ ಜೇಕಬ್ ಎಂಬ ಮೂಲ ಧಾರ್ಮಿಕ ವ್ಯಕ್ತಿಗಳ ಕಾರಣಕ್ಕೆ ಅದು ತಮ್ಮ ಆಸ್ತಿ ಎಂದು ವಾದಕ್ಕೆ ಶುರುಮಾಡಿದರು. ಹೀಗಾಗಿ ಇಸ್ರೇಲ್ ಜಗಳಕ್ಕೆ ಧಾರ್ಮಿಕ ಕಗ್ಗಂಟು ಸುತ್ತಿಕೊಂಡಿತು. ಅದು ಇಂದಿಗೂ ಬಿಗಿಯಾಗುತ್ತಲೇ ಇದೆ. ಸಾಲದ್ದಕ್ಕೆ ಈ ಮೂರೂ ಧರ್ಮಗಳು ‘ಆಯ್ತು ಬಿಡಿ’ ಅನ್ನುವ ಮನೋಧರ್ಮ ಇರುವವರಲ್ಲ. ಧರ್ಮಕ್ಕಾಗಿ ಪ್ರಾಣಬಿಡುವವರು ಹಾಗೂ ತೆಗೆಯುವವರು. ಇಂಥ ಸಂಕೀರ್ಣ ಪರಿಸ್ಥಿತಿ ಇಸ್ರೇಲಿಗೆ ಅಂಟಿದೆ. ಜೊತೆಗೆ ಯಾವುದೇ ಯುದ್ಧದ ಹಿಂದೆ ಅಡಗುವ ಆರ್ಥಿಕ ಕಾರಣಗಳೂ ಇವೆ.ಇದರ ಹಿಂದೆ ಮುಖ್ಯವಾಗಿರುವುದು ಅಮೆರಿಕದ ಆರ್ಥಿಕ ಹಿತಾಸಕ್ತಿ.ಮುಖ್ಯವಾಗಿ ಯುದ್ಧ ಆರ್ಥಿಕತೆ.
ಇಸ್ರೇಲ್ ಸುತ್ತ ಆರು ದೇಶಗಳಿವೆ. ಪ್ಯಲೆಸ್ಟೀನ್ ನಲ್ಲಿ ಹಮಾಸ್‌ನ ಚುನಾಯಿತ ಸರ್ಕಾರವಿದೆ. ಇಸ್ರೇಲ್ ನಲ್ಲಿ ಇರುವುದು ಎರಡು ಪಕ್ಷಗಳ ಸರ್ಕಾರವಲ್ಲ. ಅಲ್ಲಿ ಬಹುಪಕ್ಷೀಯ ಆಡಳಿತವಿದೆ. ಸದ್ಯ ಇರುವ ನೇತಾನ್ಯಹು ವಿರುದ್ಧ ಭ್ರಷ್ಟಾಚಾರದ ಆರೋಪವಿದೆ.ಜನರ ವಿರೋಧ ತಪ್ಪಿಸಿಕೊಂಡು ಛಿದ್ರವಾದ ಯಹೂದಿ ಜನತೆಯನ್ನು ಈ ಸಮರದ ನೆಪದಲ್ಲಿ ಒಗ್ಗೂಡಿಸುವ ತಂತ್ರವನ್ನು ನೆತಾನ್ಯಹು ಮಾಡುತ್ತಿದ್ದಾರೆಂಬ ಆರೋಪವಿದೆ. ಇವರ ಕುvಲಂತ್ರದಿAದಲೇ ಇಸ್ರೇಲ್ಬೇಹುಗಾರಿಕೆ ಸೋತಿದೆ ಎಂದೂ ಹೇಳಲಾಗುತ್ತಿದೆ.
ಈಗ ಇಸ್ರೇಲ್ ಉಗರರನ್ನು ಎದುರುಹಾಕಿಕೊಂಡು ಬಹಳ ಸಮಸ್ಯೆಗಳನ್ನು ಎದುರುಹಾಕಿಕೊಳ್ಳುತ್ತಿದೆ ಎಂದು ವಾದಿಸಲಾಗುತ್ತಿದೆ. ಈ ಹಿಂದೆ ಲಷ್ಕರ್ ಉಗರರನ್ನು ಎದುರುಹಾಕಿಕೊಂಡ ಅಮೆರಿಕ ತನ್ನ ಮೇಲೆ ೯/೧೧ರ ದಾಳಿ ಮಾಡಿಸಿಕೊಂಡಿತು. ಆದರೆ ಗಾತ್ರ, ಆರ್ಥಿಕತೆಗಳಲ್ಲಿ ಬೃಹತ್ತಾದ ದೇಶ ಅಮೆರಿಕ ಬೇಗನೇ ಚೇತರಿಸಿಕೊಂಡಿತು. ಹಮಾಸ್ ಉಗ್ರರು ಇಸ್ರೇಲ್ ಮೇಲೆ ಇಂಥ ದಾಳಿಯನ್ನು ಎಸಗಿದರೆ ಅದು ಇಸ್ರೇಲಿಗೆ ಭಾರೀ ನಷ್ಟವಾಗಲಿದೆ. ಇಂಥ ದಾಳಿಯನ್ನು ಅಲ್ಲಗಳೆಯಲಾಗದು ಅನ್ನಲಾಗುತ್ತಿದೆ. ಭೌಗೋಳಿಕವಾಗಿ ಬಹಳ ಸಣ್ಣದಾಗಿರುವ, ಹೇಳಿಕೊಳ್ಳುವ ಆರ್ಥಿಕ ವ್ಯವಸ್ಥೆಯೂ ಅಲ್ಲದ ಇಸ್ರೇಲ್ ಉಗ್ರ ದಾಳಿಯಾದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಅನುಮಾನಾಸ್ಪದ ಅನ್ನಲಾಗುತ್ತಿದೆ.ಈ ನಡುವೆ ಇಸ್ರೇಲ್ ಮತ್ತು ಹಮಾಸ್ ಗಳಿಗೆ ಪ್ರಪಂಚದ ವಿವಿಧ ದೇಶಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬೆಂಬಲ ಕೊಡುತ್ತಿವೆ. ಒಂದೆಡೆ ಇಂದಿನ ಜಗತ್ತಿನ ತಲೆಕೆಟ್ಟ ದೊರೆ ಅನಿಸಿಕೊಂಡ ಉತ್ತರ ಕೊರಿಯದ ಕಿಮ್ ಕೂಡ ಈ ಯುದ್ಧದಲ್ಲಿ ಸೇರಿಕೊಳ್ಳುತ್ತಿದ್ದಾನೆ. ಹಮಾಸ್ ಉಗ್ರರ ಬಳಿ ಸಾವಿರಕ್ಕೂ ಹೆಚ್ಚು ಕ್ಷಿಪಣಿಗಳ ಸಂಗ್ರಹವಿದೆ. ಜಪತೆಗೆ ಕ್ಷಿಪಣಿಗಳನ್ನು ಪಟಾಕಿಯಂತೆ ತಿಳಿದಿರುವ ಕಿಮ್ ನಂಥ ದೊರೆ ಯುದ್ಧಕ್ಕೆ ಇಳಿದರೆ ಮೂರನೆಯ ಮಹಾಯುದ್ಧಕ್ಕೆ ಪ್ರಪಂಚ ಸಾಕ್ಷಿಯಾಗುವ ಭೀತಿಯಿದೆ. ಹೀಗಾದರೆ ಮುಂದೆ ನಾಲ್ಕನೆಯ ಮಹಾಯುದ್ಧ ನಡೆಯುವ ಸಂಭವ ಎಂದೂ ಇರುವುದಿಲ್ಲ ಎಂಬ ಭೀತಿ ಎಲ್ಲೆಡೆ ಕಾಡುತ್ತಿದೆ. ಇದರೊಂದಿಗೆ ಪ್ರಪಂಚದೆಲ್ಲೆಡೆ ಭೂಕಂಪ, ಕಾಡ್ಗಿಚ್ಚು ಹಾಗೂ ಪ್ರವಾಹದಂಥ ನೈಸರ್ಗಿಕ ಪ್ರಕೋಪಗಳುನಡೆಯುತ್ತಿದ್ದು ಮಾನವ ಮಾತ್ರವಲ್ಲದೇ ಇಡೀ ಜೀವ ಸಂಕುಲ ಅಪಾಯ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಇಂಥದ್ದೊಂದು ಸಮರ ಶುರುವಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.ಈ ಯುದ್ಧ ಆ ದೇಶಗಳ ನಡುವೆ ನಡೆಯುತ್ತಿದೆ ನಮಗ್ಯಾಕೆ ಎಂದು ಇಂದು ಯಾರೂ ಅಸಡ್ಡೆ ತೋರಿಸುವಂತಿಲ್ಲ. ಯುದ್ಧ ಎಲ್ಲೇ ನಡೆಯಲಿ, ಅದರ ಪರಿಣಾಮ ಎಲ್ಲ ಕಡೆಗೂ ಆಗುವಷ್ಟರಮಟ್ಟಿಗೆ ಪ್ರಪಂಚ ಪರಸ್ಪರ ಅವಲಂಬಿತವಾಗಿದೆ.

No comments:
Post a Comment