ಭಾರತದಲ್ಲಿ ಸದ್ಯ ೫,೩೩೪ ಬೃಹತ್ ಅಣೆಕಟ್ಟುಗಳಿದ್ದು ಇನ್ನೂ ೪೪೭ ಅಣೆಕಟ್ಟುಗಳು ಸಿದ್ಧವಾಗುತ್ತಿವೆ. ನಮ್ಮಲ್ಲಿ ಪರಿಸರ, ಒಟ್ಟೂ ವಾತಾವರಣದ ಬಗ್ಗೆ ಸರಿಯಾದ ಸ್ವಂತ ಕಲ್ಪನೆ ಇಲ್ಲ. ನಮ್ಮಲ್ಲಿರುವುದು ಏನಿದ್ದರೂ ಅಲ್ಲಿ ಇಲ್ಲಿಂದ ಆಮದು ಮಾಡಿಕೊಂಡ ತತ್ವಗ್ಳು. ವಿಶೇಷವಾಗಿ ಅಮೆರಿಕ ಮತ್ತು ಯೂರೋಪ್ ನಿಂದ. ಅಲ್ಲಿನ ಹವಾಗುಣ, ಪರಿಸರ ಎಲ್ಲ ಭಿನ್ನ. ಅಲ್ಲಿನ ಮಾದರಿ ನಮ್ಮ ಸಮಾಜಕ್ಕೆ ಹೇಗೆ ಸೀದಾ ತಂದುಹಾಕಲು ಸಾಧ್ಯವಿಲ್ಲವೂ ಹಾಗೆಯೇ ಅಲ್ಲಿನ ಪರಿಸರ ಕಲ್ಪನೆಯನ್ನು ಕೂಡಾ. ಏಕೆಂದರೆ ಅಲ್ಲಿನ ಬೇಸಗೆ, ಮಳೆಗಾಲ ಮತ್ತು ಚಳಿಗಾಲಗ್ಳ ಅವಧಿ ಸ್ವರೂಪ ಎಲ್ಲ ಬೇರೆ. ಅವರಿಗೆ ಹೊಂದುವ ಅಣೆಕಟು,ಚೆಕ್ ಡ್ಯಾಂ ಮೊದ್ಲಾದವು ಅಲ್ಲಿಗೆ ಸರಿ. ನಮ್ಮ ದೇಶದ ಹವಾಗುಣ, ವಾತಾವರಣ ತೀರಾ ಭಿನ್ನ.ಸಹಜವಾಗಿ ಹರಿಯುವ ನದಿ ನೀರನ್ನು ಎಲ್ಲೆಂದರೆ ಅಲ್ಲಿ ಕಟ್ಟುವುದರಿಂದ ನದಿ ಮತ್ತು ನದಿ ಪಾತ್ರದ ಜೀವ ಜಂತುಗಳಿಗೆ. ಪರಿಸರಕ್ಕೆ ಆಗುವ ಹಾನಿ ಅಪಾರ. ಯೂರೋಪಿನ ಪ್ರಭಾವದಿಂದಲೋ ಏನೋ ನಮ್ಮಲ್ಲಿ ಒಂದು ಭ್ರಮೆ ಹುಟ್ಟಿದೆ. ಗಿಡಮರಗಳೇ ಪರಿಸರ. ಬಯಲು ಕಲ್ಲು ಗುಡ್ಡಗಳು ಪರಿಸರಕ್ಕೆ ಪೂರಕವಲ್ಲ ಇತ್ಯಾದಿ. ಇದು ಸರಿಯಲ್ಲ. ಕಾಡು ಅಂದರೆ ಅದು ಕೇವಲ ಗಿಡಮರಗಳ ಸಂದಣಿ ಅಲ್ಲ. ಅದರೊಳಗೆ ಸೆಗಣಿ ಹುಳದಿಂದ ಹಿಡಿದು ಆನೆಯವರೆಗೆ ಎಲ್ಲದಕ್ಕೂ
ಅವುಗಳದ್ದೇ ಆದ ಹೊಣೆಗಾರಿಕೆ ಇದೆ. ಇವುಗಳಲ್ಲಿ ಯಾವುದಾದರೂ ಒಂದು ಏರುಪೇರಾದರೂ ಪರಿಸರಕ್ಕೆ ಧಕ್ಕೆ. ಕಲ್ಲು ಕುರುಚಲು ತುಂಬಿದ ಪ್ರದೇಶ ಹಾವುಗಳಂಥ ಸರೀಸೃಪಗಳಿಗೆ, ಕೃಷ್ಣಮೃಗದಂಥ ಪ್ರಾಣಿಗಳಿಗೆ ಆವಾಸ. ಎಲ್ಲಕಡೆ ದಟ್ಟ ಕಾಡಿದ್ದರೆ ಇಂಥ ಜೀವಿಗಳಿಗೆ ಜಾಗವಿಲ್ಲ, ಉಳಿಗಾಲವಿಲ್ಲ. ಹಾಗಾಗಿ ಪರಿಸರದ ಬಗೆಗಿನ ನಮ್ಮ ತಿಳಿವಳಿಕೆ ಸರಿಯಾಗಬೇಕಿದೆ. ಅಣೆಕಟ್ಟುಗಳ ಹಣೆಬರೆಹ ನೋಡಿ. ಅವು ನೀರು ಹಿಡಿದಿಡುತ್ತವೆ ಸರಿ. ಆದರೆ ಬೇಸಗೆಯಲ್ಲಿ ಹಿಡಿದಿಟ್ಟ ಇಂಥ ನೀರು ಶೇ, ೫೦ ಆವಿಯಾದರೆ ಹರಿಯುವ ನೀರು ಆವಿಯಾಗುವ ಪ್ರಮಾಣ ಬಹಳ ಕಡಿಮೆ.ಆಗ ಸಮಸ್ಯೆಗಳೂ ಕಡಿಮೆ ಆಗುತ್ತವೆ, ಬೇಸಗೆಯಲ್ಲಿ ಮಾತ್ರವಲ್ಲ, ಮಳೆಗಾಲದಲ್ಲೂ ಪ್ರವಾಹ ಸ್ಥಿತಿಯ ಅಪಾಯ ಕೂಡ ಅಣೆಕಟ್ಟುಗಳಿಂದ ಹೆಚ್ಚು. ಹೀಗಾಗಿ ಪಾಶ್ಚಾತ್ಯ ಪರಿಸರ ಮಾದರಿಯಿಂದ ನಮಗೆ ಅಪಾಯವೇ ಹೆಚ್ಚು. ಇದರ ಜೊತೆಗೆ ನಾವು ಆಹಾರ ವಾಣಿಜಯ ಮೊದಲಾದ ಬೆಳೆಗಳನನುಪರಿಗಣಿಸುವ ದೃಅಶಹಥಿ ಕೂಡ ಪರಿಸರಕಕೆ ಪೂರಕವಲ್ಲ, ಯಾವ ಭೌಗೋಳಿಕ ವಾತಾವರಣದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಪ್ರಾಥಮಿಕ ಜ್ಞಾನವನ್ನೇ ನಾವು ಕಳೆದುಕೊಂಡು ತಿನ್ನಲು ಆಹಾರವಿಲ್ಲದೇ ಕುಡಿಯಲು ನೀರಿಲ್ಲದಂತೆ ಮಾಡಿಕೊಂಡು ಪರದಾಡುತ್ತೇವೆ. ಈ ಸಮಸ್ಯೆಗೆ ಪರಿಹಾರ ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿದೆ. ನಮ್ಮ ಪೂರ್ವಜರು ಯಾವ ಪ್ರದೇಶ ಕ್ಕೆ ಯಾವ ಬೆಳೆ ಸೂಕ್ತ ಎಂದು ಅನುಭವದಿಂದ ಕಂಡುಕೊAಡು ಆಯಾ ಸ್ಥಳಗಳಲ್ಲಿ ಅವನ್ನು ಬೆಳೆಯುತ್ತಿದ್ದರು. ಇದರಿಂದ ಎಲ್ಲ ಬಗೆಯ ಬೆಳೆಯೂ ಇರುತ್ತಿತ್ತಲ್ಲದೇ ನಷ್ಟವೂ ಆಗುತ್ತಿರಲಿಲ್ಲ. ಆದರೆ ಇಂದು ಚಿತ್ರದುರ್ಗ, ರಾಯಚೂರಿನಂಥ ಬಿರುಬೇಸಗೆಯ ಜಾಗದಲ್ಲಿ ವಾಣಿಜ್ಯ ಬೆಳೆಯಾದ ಅಡಕೆಯನ್ನು ಬೆಳೆಯಲು ಹಣ ಹಾಕಿ ಕಷ್ಟ ಪಡಲಾಗುತ್ತಿದೆ. ಈ ಪ್ರದೇಶಕ್ಕೆ ಇದು ಸೂಕ್ತವಲ್ಲ ಎಂದು ತಿಳಿ ಹೇಳುವವರೂ ಇಲ್ಲ. ಇದ್ದರೂ ಯಾಕೆ ಬೆಳೆಯಬಾರದು ಇಲ್ಲಿಯೂ ಮೇಲು ಕೀಳು ಭಾವನೆ, ಇತ್ಯಾದಿ ವಿಚಾರಗಳು ಬರುತ್ತವೆ. ನೀರು ಕಡಿಮೆ ದೊರೆಯುವ ಬಯಲು ಸೀಮೆಯಲ್ಲಿ ಸಿರಿಧಾನ್ಯಗಳನ್ನು ಬೆಳೆvಯುವುದು ಸೂಕ್ತ. ಮಳೆ ಹೆಚ್ಚು ಬೀಳುವ ಮಲೆನಾಡಲ್ಲಿ ಅಡಕೆ, ಬತ್ತ, ಕಬ್ಬಿನಂಥ ಬೆಳೆ ಸರಿ. ಆದರೆ ನಮ್ಮ ಜಮೀನು ನಮ್ಮ ಇಷ್ಟ ಎಂಬ ಮನೋಧರ್ಮ ರೈತರಲ್ಲಿ ಮೂಡಿ ಕಷ್ಟ ಹೆಚ್ಚಾಗುತ್ತಿದೆ.ಇದರಿಂದ ಕೆಲವಞೆ ಕೆಲವು ಬೆಳೆಗಳನ್ನು ಎಲ್ಲ ಕಡೆಗೂ ಬೆಳೆಯುವಂತಾಗಿ ಕೆಲ ಧಾನ್ಯಗಳ ಲಭ್ಯತೆಯೇ ಇಲ್ಲವಾಗಿದೆ. ಉದಾಹರಣೆಗೆ ಅಗಸೆ, ಹುಚ್ಚೆಳ್ಳಿನ ಬೆಳೆ ತೀರಾ ಅಪರೂಪವಾಗಿದೆ.ಇಂಥ ಅಸಮತೋಲನದಿಂದ ದನಕರುಗಳ ಮೇವಿಗೂ ಪ್ರಾಣಿ ಪಕ್ಷಿಗಳ ಉಳಿವಿಗೂ ಸಂಚಕಾರ ಒದಗಿದೆ. ಇದಕ್ಕೆಲ್ಲ ಪ್ರಕೃತಿ ಕಾರಣವಲ್ಲ.

No comments:
Post a Comment