ನಾವೆಲ್ಲ ಹೀಗೆಯೇ, ಈಚೆಗೆ ಕನ್ನಡದ ಧಾರಾವಾಹಿಯೊಂದರಲ್ಲಿ ಚಿಕ್ಕ ಮಕ್ಕಳನ್ನು ಹಿಂಡಿ ತನ್ನ ಪ್ರತಿಷ್ಠೆ ಹಿಗ್ಗಿಸಿಕೊಳ್ಳುವ ಪಾತ್ರವೊಂದು ಸ್ಪರ್ಧೆ ಬಹಳ ಮುಖ್ಯವೆಂದು ನಮ್ಮ ನಿಮ್ಮೆಲ್ಲರ ಇಂದಿನ ಮನೋಧರ್ಮವನ್ನು ಬಿಚ್ಚಿಟ್ಟಿತ್ತು. ಹೌದು.ಪ್ರತಿ ಬಾರಿ ಎಸ್ ಎಸ್ ಎಲ್ ಸಿ ಪಿಯುಸಿ ಇತ್ಯಾದಿ ಫಲಿತಾಂಶಗಳು ಬಂದಾಗ ಶೇ. ೮೫ ಅಂಕ ಪಡೆದ ಕೆಲ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ವರದಿಗಳು ಬರುತ್ತವೆ.ಇದಕ್ಕೆ ಪೋಷಕರ ಒತ್ತಡ ಕಾರಣ ಎಂಬುದೂ ತಿಳಿಯದ ಸಂಗತಿ ಅಲ್ಲ. ಪಕ್ಕದ ಮನೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಿ ನೋಡು ಅವನು ಇನ್ನೂ ಹೆಚ್ಚು ಅಂಕ ತೆಗೆದಿದ್ದಾನೆ ಎಂಬುದೇ ದುಃಖದ ಕಾರಣ. ಆಯ್ತು ಏನೀಗ ಎಂಬುದಿಲ್ಲ. ನೂರಕ್ಕೆ ೮೫ ತೆಗೆದರೂ ಉಳಿದ ೧೫ ಶೇ. ಅಂಕ ಯಾಕೆ ಬರಲಿಲ್ಲ ಎಂಬುದೇ ಇವರ ಚಿಂತೆ. ಪರವಾಗಿಲ್ಲ, ಉತ್ತಮ ಅಂಕ ಪಡೆದು ಖುಷಿಯಾಗಿದ್ದಾನಲ್ಲ ಎಂಬುದಿಲ್ಲ. ನಮ್ಮ ಸಮಾಜ ಹೀಗೆ ಆಗಿಹೋಗಿದೆರೊಂದಿಗೆ,ಸ್ಪರ್ಧೆ- ಸ್ಪರ್ಧೆ.ಯಾರೊಂದಿಗೆ? ಅಕ್ಕ ಪಕ್ಕದ ನಮ್ಮ ಜನರೊಂದಿಗೆ. ಅನ್ಯಗ್ರಹ ಜೀವಿಗಳೊಂದಿಗೆ ಅಲ್ಲಇದರಿಂದ ನಮಗೆ ದಕ್ಕುವುದು ಕಿರಿಕಿರಿ ಹಾಗೂ ಸಂಕಟ ಮಾತ್ರ. ಮಕ್ಕಳು ಚಿಕ್ಕವರಿದ್ದಾಗಿನಿಂದ ನಾವು ಅವರಿಗೆ ಇದೇ ಮನೋಧರ್ಮ ಕಲಿಸುತ್ತೇವೆ. ಓಡುವ ಸ್ಪರ್ಧೆಯಲ್ಲಿ ಪಕ್ಕದವರನ್ನು ತಳ್ಳಿ ಮುಂದೆ ಹೋಗುವುದು ಹಾಗು ಮೊದಲು ಗುರಿ ಮುಟ್ಟುವುದು ಇಷ್ಟೇ ಇದರ ಉದ್ದೇಶ. ಎಲ್ಲ ಸ್ಪರ್ಧೆಗಳ ಸ್ವರೂಪವೂ ಇದೇ. ನಮ್ಮ ಸಂಪ್ರದಾಯ-ಪರಂಪರೆ ನಮಗೆ ಬಿಟ್ಟು ಹೋದ ಆನಂದವಾಗಿ ಶಾಂತಿಯಿಂದ ಇರುವ ಮಾರ್ಗವನ್ನು ಮರೆತಿದ್ದೇವೆ. ಇಂದಿನ ಜಗತ್ತಿನಲ್ಲಿ ನಮಗೆ ಬೇಕಿರುವುದು ಈ ಮಾರ್ಗವೇ ವಿನಾ ಪರಸ್ಪರ ಕಿಚ್ಚು ಹಚ್ಚುವ ಸ್ಪರ್ಧೆ ಅಲ್ಲ. ಮಾಧ್ಯಮವೊಂದರಲ್ಲಿ ಅನ್ಯ ವಾಹಿನಿಗಳಿಗಿಂತ ತಮ್ಮ ವಾಹಿನಿ ಶ್ರೇಷ್ಠ ಎಂದು ಬಿಂಬಿಸುವ ಜಾಹೀರಾತು ಬರುತ್ತದೆ. ಅವರಪ್ರಕಾರ ಅವರ ವಾಹಿನಿ ನೋಡುತ್ತಿರುವ ಜನ ಜಗತ್ತಿನ ತುದಿಯಲ್ಲಿದ್ದಾರಂತೆ. ಆಯ್ತು ಎಲ್ಲಿದ್ದರೇನು? ಏನು ಮಾಡುವುದು ಈಗ ಇದನ್ನು ಕಟ್ಟಿಕೊಂಡು? ಎಲ್ಲೇ ನೋಡಿ, ಮಕ್ಕಳಿಗೆ ಕೊಟ್ಟ ಸಂಸ್ಕಾರ, ಅವರ ಸಂತೋಷದ ಸ್ಪರ್ಧೆ ಇಲ್ಲವೇ ಇಲ್ಲ. ಹೀಗಾದ್ರೆ ಇಲ್ಲೂ ಅದೇ ಮನೋಭಾವ ಬರುತ್ತದೆ. ಎಲ್ಲೇ ನೋಡಿ. ಒಂದು ಸ್ಪರ್ಧೆ. ಇಡ್ಲಿ ತಿನ್ನಲು ರಾಗಿಮುದ್ದೆ ತಿನ್ನಲು ಇತ್ಯಾದಿ. ಇವೆಲ್ಲ ನಮ್ಮ ಆನಂದಕ್ಕೆ ಅನ್ನುವ ಭಾವನೆಯೇ ಇಲ್ಲ. ಸ್ಪರ್ಧೆ ಗೆಲ್ಲುವ ಆಸೆಯಿಂದ ಗಬಗಬನೆ ಮುಕ್ಕಿ ಹತ್ತು ಇಡ್ಲಿಗಳನ್ನು ಒಮ್ಮೆಲೇ ಗಂಟಲಲ್ಲಿ ತುರುಕಿಕೊಂಡು ಅದನ್ನೆಲ್ಲ ಹೊಟ್ಟೆಗೆ ತುರುಕಿಕೊಳ್ಳುವ ಹಣೆಬರಹ. ಉಸಿರಾಡಿಸಲಾಗದೇ ಒದ್ದಾಡುವ ಪರಿ ಪರಿ ಮತ್ತೊಂದೆಡೆ. ವಿಚಿತ್ರ ಅನಿಸೊಲ್ವ? ಇಲ್ಲೆಲ್ಲ ಸ್ಪರ್ಧೆ ಗೆದ್ದವರು ಕಳೆದುಕೊಳ್ಳುವುದು ಸಂತೋಷವನ್ನು. ಇದರಲ್ಲಿ ಉಳಿದವರನ್ನು ಸೋಲಿಸಿದೆ ಎಂಬ ಸಂಗತಿ ಖುಷಿ ಕೊಡಬಹುದು. ಆದರೆ ಇದರಿಂದ ಸಾಧಿಸುವುದೇನು? ಈಚೆಗೆ ಇನ್ನೊಂದು ಬಗೆಯ ಸ್ಪರ್ಧೆ ಕಾಣುತ್ತಿದೆ. ಪಕ್ಕದ ಮನೆಯವರು ಫಾರಿನ್ನಿಗೆ ಹೋದರು, ನಾವೂ ಹೋಗಬೇಕು. ಅವರು ಒಬ್ರ ಹೋದ್ರೆ ನಾವೆಲ್ಲ ಮನೆ ಜನ ಹೋಗಬೇಕು! ಎಂಥ ವಿಚಿತ್ರ ಪರಿಸರದಲ್ಲಿದ್ದೇವೆ, ಕಟ್ಟಿಕೊಂಡಿದ್ದೇವೆ ನೋಡಿ. ಇದರ ಫಲವಾಗಿ ಪ್ರಪಂಚದಲ್ಲಿ ಶಾಂತಿ, ನೆಮ್ಮದು ಹಾಳಾಗುತ್ತಿದೆ, ಆಗಿದೆ. ಪರಸ್ಪರ ಹೋಲಿಸಿಕೊಂಡು ದುಃಖ ಪಡುವುದೇ ಜೀವನವಾಗಿದೆ. ಅವರದು ಎರಡು ಮನೆ ಇದ್ದರೆ ತನ್ನದು ಹತ್ತು ಇರಬೇಕು ಎಂಬ ದುರಾಸೆ ಸಮಾಜವನ್ನು ಎಲ್ಲೋ ದೂಡುತ್ತಿದೆ. ಹಿರಿಯರು ಹೇಳಿದ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತನ್ನು ಬೇರೆಯವರಿಗೆ ಹೇಳಲು ಮಾತ್ರ ನೆನಪಲ್ಲಿಟ್ಟುಕೊಂಡಿದ್ದೇವೆ. ಯಾರಲ್ಲೂ ನೆಮ್ಮದಿಯೇ ಇಲ್ಲ. ದೇಶ, ವಿದೇಶದ ಮಟ್ಟದಲ್ಲೂ ಇದೇ ಪರಿಪಾಠ. ಹೀಗಾಗಿ ಸಂಸ್ಥೆಯೊಂದು ರಾಷ್ಟ್ರಗಳ ಆನಂದ ಸೂಚಿ ಪ್ರಮಾಣವನ್ನು ಪ್ರತಿವರ್ಷ ಬಿಡುಗಡೆ ಮಾಡುತ್ತಿದೆ. ತಮಾಷೆ ಅಂದ್ರೆ ಇಡೀ ಜಗತ್ತು ಹಿಂದೆ ಓಡುತ್ತಿರುವ ಹಣದ ವಿಷಯದಲ್ಲಿ ಮುಂದೆ ಇರುವ ದೇಶಗಳೆಲ್ಲ ಈ ಪಟ್ಟಿಯಲ್ಲಿ ಹಿಂದೆ ಇವೆ. ೧೮೦ ದೇಶಗಳಲ್ಲಿ ಈ ಪಟ್ಟಿಯಲ್ಲಿ ಭಾರತ ೧೨೫ ಆಸುಪಾಸಿನಲ್ಲಿದೆ.ಈ ಹಿಂದೆ ಭಾರತದ ಸ್ಥಾನ ಬಹಳ ಮೇಲೆ ಇತ್ತು.
ನಾನು ಯಾರೊಂದಿಗೂ ಸ್ಪರ್ಧಿಸುವುದಿಲ್ಲ, ಇದು ನನ್ನ ಮಂತ್ರ. ಮತ್ತೆ ಎಂಎಯಲ್ಲಿ ಮೊದಲ ರ‍್ಯಾಂಕ್ ಬಂದು ಚಿನ್ನದ ಪದಕ ಗೆದ್ದಿದ್ರಿ ಎಂದು ಯಾರೋ ಕೇಳಿದ್ರು. ನಾನು ಅನ್ನುತ್ತೇನೆ. ನಾನು ಖುಷಿಯಿಂದ ಆಯ್ಕೆ ಮಾಡಿಕೊಂಡಿದ್ದ ವಿಷಯ ಅದು.ಖುಷಿಯಿಂದ ಪರೀಕ್ಷೆ ಬರೆದೆ. ಎಲ್ಲ ಬಂತು. ಉಳಿದವರು ನನ್ನೊಂದಿಗೆ ಸ್ಪರ್ಧಿಸಿರಬಹುದು. ಗೊತ್ತಿಲ್ಲ. ನಾನು ಆಗಲೂ ಖುಷಿಯಲ್ಲಿದೆ ಈಗಲೂ! ನನಗೆ ನಮ್ಮ ಸಂಪ್ರದಾಯ ಆಸ್ತಿ ಏನೂ ಇಲ್ಲ ಅಂದ್ರೂ ಖುಷಿಯಾಗಿರುವುದನ್ನು ಕಲಿಸಿದೆ. ಅದೇ ಸ್ಪರ್ಧೆ ಮಾಡದಿರುವುದು, ನಮ್ಮ ಸಾಮರ್ಥ್ಯದಲ್ಲಿ ತೃಪ್ತಿ ಕಾಣುವುದು. ಬೇವು ಸರಿ ಅನ್ನು ಕರುಬದಿರಿ. ನಿಮ್ಮ ಸರದಿ ನಾಳೆ ಬರಬಹುದು. ಕಿದ್ದರೆ ನೀವೂ ಹೀಗೆ ಮನಸ್ಸು ಬದಲಿಸಿಕೊಂಡು ನೋಡಿ ಖುಷಿಯಾಗಿರುತ್ತೀರಿ. ಯಾರೋ ನಿಮ್ಮ ವಾರಿಗೆಯವರು ಆಸ್ತಿ ಮಾಡಿದ್ರು ವೃತ್ತಿಯಲ್ಲಿ ದೊಡ್ಡ ಹುದ್ದೆಗೇರಿದರು ಅಂದ್ರೆ ನೀವು ಕರುಬದೇ ಸರಿ ಅನ್ನಿ, ಸುಮ್ಮನಿರಿ. ನಿಮ್ಮ ಈ ಸರದಿ ನಾಳೆ ಬರಬಹುದು. ಧಾವಂತ ಏಕೆ? ಇದರಿಂದ ನೆಮ್ಮದಿ ಹಾಳಾಗುತ್ತದೆ ಇನ್ನೇನೂ ಇಲ್ಲ. ನಾವು ಮಕ್ಕಳಿಗೆ ಖುಷಿಯಾಗಿರುವುದನ್ನು ಬಿಟ್ಟು ಬೇರೆಲ್ಲ ಕಲಿಸುತ್ತಿದ್ದೇವೆ. ಇಡೀ ಜೀವನದ ಪ್ರತಿ ದಿನ ಪ್ರತಿ ಕ್ಷಣ ಯುದ್ಧ ಎಂದು ಭಾವಿಸಿದ್ದೇವೆ, ಅಲ್ಲ, ಇದು ಬದುಕು. ಇಲ್ಲಿ ಯಾರು ಯಾರಿಗೂ ಸ್ಪರ್ಧಿಗಳಲ್ಲ. ಅವರವರ ಬದುಕು ಅವರವರದು. ಸಾಧ್ಯವಾದರೆ ಇನ್ನೊಬ್ಬರಿಗೆ ನೆರವಾಗಿ ಇಲ್ಲವೇ ಸುಮ್ಮನಿರಿ. ಜಗತ್ತು ವಿಶಾಲವಾಗಿದೆ ಎಲ್ಲಿಂದ ಬೇಕಾದರೂ ಆಕಾಶ ನೋಡಬಹುದು. ಅದನ್ನು ಇಷ್ಟದಲದ ಒಂದೇ ಜಾಗದಲ್ಲಿ ನಿಂತು ನೂಕಾಡಿ ಕಚ್ಚಾಡಿ ನೋಡಬೇಕೆ?
ಹಳ್ಳಿಗಳ ನೈಸರ್ಗಿಕ ಜೀವನ ಶೈಲಿಯಿಂದ ಅಲ್ಲಿಗಿಂತ ನಗತಗಳಲ್ಲಿ ಒತ್ತೆ ಹೆಚ್ಚು. ಇಲ್ಲಿ ಏನಿದ್ದರೂ ಕ್ಷಣ ಕ್ಷಣಕ್ಕೂ ಸ್ಪರ್ಧೆ. ಹಾಗಾಗಿ ರೋಗಗಳೂ ಹೆಚ್ಚು. ನಗರಗಳಲ್ಲಿ ವೈದ್ಯರು ಹಾಗೂ ಆಸ್ಪತ್ರೆಗಳು (ಹುಚ್ಚಾಸ್ಪತ್ರೆಯೂ ಸೇರಿ) ಹೆಚ್ಚು. ನಮ್ಮ ದೇಶದ ಬಹುತೇಕ ಹಳ್ಳಿಗಳಲ್ಲಿ ಒಂದಾದರೂ ಆಸ್ಪತ್ರೆ ಇರಲಿ, ನೆಟ್ಟಗೆ ಸಣ್ಣ ಕ್ಲಿನಿಕ್ ಕೂಡ ಇರುವುದಿಲ್ಲ, ಇದು ಕೇವಲ ಮೂಲಸೌಕರ್ಯದ ಪ್ರಶ್ನೆ ಅಲ್ಲ, ರೋಗಿಗಳ ಸಂಖ್ಯೆ ಕಡಿಮೆಯಾದಕಾರಣ ಇಲ್ಲಿ ಲಾಭವಿಲ್ಲ ಎಂದು ಆಸ್ಪತ್ರೆ ತೆಗೆಯುವವರು ಮೊದಲು ಭಾವಿಸುತ್ತಾರೆ. ಒಂದು ಮಾತ್ರ ಸತ್ಯ. ಯಾವ ಊರಿನಲ್ಲಿ ಆಸ್ಪತ್ರೆಗಳು, ಪೊಲೀಸ್ ಸ್ಟೇಶನ್ನುಗಳು ಹೆಚ್ಚಾಗಿರುತ್ತವೋ ಆ ಊರಿಗೆ ಹೆಚ್ಚು ಭವಿಷ್ಯವಿಲ್ಲ. ಆಯ್ಕೆ ನಮ್ಮದು.

No comments:
Post a Comment