Monday, 26 August 2024

ಅಂತ್ಯಕಾಣುತ್ತಿರುವ ಕ್ಯಾನ್ಸರ್ ಪೀಡೆ


ಸದ್ಯ ಸುಮಾರು ಐವತ್ತು ವರ್ಷಗಳ ಕಾಲ ದೇಶಕ್ಕೆ ಅಂಟಿದ್ದ ಅರ್ಬುದ ರೋಗ ೨೦೨೬ ಮಾರ್ಚ್ ವೇಳೆಗೆ ಸಂಪೂರ್ಣ ನಾಶವಾಗುತ್ತದೆ ಎಂಬ ಆಶಯ ಈಗ ಹುಟ್ಟಿದೆ. ಮೊನ್ನೆ ಮೊನ್ನೆ ಸುದ್ದಿ ಗೋಷ್ಠಿ ನಡೆಸಿದ್ದಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮುಂಬರುವ ಮಾರ್ಚ್ ವೇಳೆಗೆ ನಮ್ಮ ದೇಶದಲ್ಲಿ ನಕ್ಸಲರು ಸಂಪೂರ್ಣವಾಗಿ ಇಲ್ಲವಾಗುತ್ತಾರೆ ಎಂದು ಹೇಳಿದ್ದಾರೆ. ದೇಶ ಹಾಗೂ ಸಮಾಜವನ್ನು ಭಾರೀ ಉದ್ಧಾರ ಮಾಡುತ್ತೇವೆ, ಸಮೃದ್ಧಿ ತರುತ್ತೇವೆ ಎಂಬ ಕ್ರಾಂತಿಯ ಆಸೆಯೊಂದಿಗೆ ನಮ್ಮ ದೇಶದ ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಎಂಬ ಹಳ್ಳಿಯಲ್ಲಿ ೧೯೬೭ರಲ್ಲಿ ಹುಟ್ಟಿಕೊಂಡ ನಕ್ಸಲರು ಕಳೆದ ಐದು ದಶಕಗಳಲ್ಲಿ ನಮ್ಮ ದೇಶದ  ೧೬ ರಾಜ್ಯಗಳ ೧೮೨ ಜಿಲ್ಲೆಗಳಿಗೆ ಹರಡಿಕೊಂಡಿದ್ದರು. ಇವರೆಲ್ಲ ಕಾಡು ಮೇಡುಗಳಲ್ಲಿ ಅಡಗಿರುವ ಸಶಸ್ತçನಕ್ಸಲರು. ಆದರೆ ಇವರಿಗೆ ಬೆನ್ನೆಲುಬಾಗಿ ನಿಂತು ಅವರ ತಲೆಯಲ್ಲಿ ಹುಚ್ಚಾಟ ತುಂಬುತ್ತಿರುವ ನಮ್ಮ ನಡುವೆ ಇದ್ದರೂ ಸುಳಿವು ಸಿಗದ ನಗರ ನಕ್ಸಲರು ದೇಶಾದ್ಯಂತ ಹರಡಿದ್ದಾರೆ. ಸಶಸ್ತ್ರ ನಕ್ಸಲರು ಮಾಡುವ ನಷ್ಟ ಮತ್ತು ಅಪಾಯ ಕಣ್ಣಿಗೆ ಕಾಣುತ್ತದೆ. ಆದರೆ ನಗರ ನಕ್ಸಲರ ಉಪಟಳ ಕಣ್ಣಿಗೆ ಕಾಣಿಸುವುದಿಲ್ಲ ಜೊತೆಗೆ ಅನೇಕತಲೆಮಾರುಗಳನ್ನು ಅದು ನಾಶಗೊಳಿಸುತ್ತದೆ. ಏಕೆಂದರೆ ಇಂಥ ನಕ್ಸಲರಲ್ಲಿ ಬಹುತೇಕರು ಶಿಕ್ಷಣ ವಲಯದಲ್ಲಿದ್ದಾರೆ. ಕಾಡಿನ ನಕ್ಸಲರಿಂದ ದೇಶಕ್ಕೆ ಕಳೆದ ಐದು ದಶಕಗಳಲ್ಲಿ ಆದ ಆರ್ಥಿಕ ನಷ್ಟ ಸಾವಿರಾರು ಕೋಟಿಗಳನ್ನು ಮೀರಿದೆ. ಇದನ್ನು ಮುಂದೆ ನೋಡುವಾ.

ನಿಜವಾಗಿ ಭೂ ಒಡೆತನವುಳ್ಳ ಯಜಮಾನನೊಬ್ಬ ವಿರುದ್ಧ ಅನ್ಯಾಯಕ್ಕೊಳಗಾದ ಆದಿವಾಸಿ ರೈತನೊಬ್ಬ ನಕ್ಸಲ್ಬಾರಿ ಹಳ್ಳಿಯಲ್ಲಿ ತಿರುಗಿಬಿದ್ದದ್ದು ಈ ಉಪಟಳದ ಮೂಲ. ಪಶ್ಚಿಮ ಬಂಗಾಳದ  ಹಳ್‌ಳಿಗಳಲ್ಲಿ ಜಮೀನ್ದಾರರ ಆಟಾಟೋಪ ೬೦ರ ದಶಕದಲ್ಲಿ ಮೇರೆ ಮೀರಿತ್ತು. ಅದೇ ರೀತಿ ನಕ್ಸಲ್ಬಾರಿಯಲ್ಲೂ ಜಮೀನ್ದಾರನೊಬ್ಬ ರೈತನನ್ನು ಪೀಡಿಸಿದ್ದ. ಅವನ ಬಂಧು ಬಳಗ ಹಾಗೂ ಅವನ ಸಮುದಾಯದ ಜನ ಅವನ ಬೆಂಬಲಕ್ಕೆ ನಿಂತರು. ಯಜಮಾನನ ವಿರುದ್ಧ ಹೋರಾಟ ತೀವ್ರವಾಯ್ತು. ಯಜಮಾನ ಇದನ್ನು ಪ್ರತಿಷ್ಠೆಯಾಗಿ ಕಂಡು ಹಣ ಬಲ, ರಾಜಕೀಯ ಅಧಿಕಾರ ಬಲ ಪಡೆದು ರೈತರನ್ನು ಹತ್ತಿಕ್ಕಲು ನೋಡಿದ. ಜನ ಸಾಮಾನ್ಯರು ಅನ್ಯಾಯದ ವಿರುದ್ಧ ಸೆಟೆದರು. ಶಸ್ತçಧಾರಿಗಳಾದರು, ಇವರಿಗೆ ಸರ್ಕಾರ, ಎಲ್ಲ ಬಗೆಯ ಆಡಳಿತವನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಕಮ್ಯೂನಿಸ್ಟರು ಹೇಗಾದರೂ ಮಾಡಿ ಅಧಿಕಾರ  ಹಿಡಿಯುವ ಆಸೆಯಿಂದ ಇವರಿಗೆ ಬೆಂಬಲಕೊಡಲಾರAಭಿಸಿದರು.ನಮ್ಮ ದೇಶಕ್ಕೆ ಒಗ್ಗದ ಕಮ್ಯೂನಿಸ್ಟ್ ವಾದಕ್ಕೆ ಅಧಿಕಾರ ಹಿಡಿಯುವ ನೆಪವಾಗಿರೈತರ ಮೇಲಿನ ದಬ್ಬಾಳಿಕೆ ಕಾಣಿಸಿತು. ಎಲ್ಲ ಬಗೆಯ ಅಧಿಕಾರ ವಿರೋಧಿಸುವ ತತ್ತ್ವ ಹೊಂದಿದ ಕಮ್ಯೂನಿಸ್ಟರು ಭೂ ಯಜಮಾನಿಕೆಯನ್ನು ವಿರೋಧಿಸುತ್ತ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ಆಡಳಿತ ಸೂತ್ರಗಳನ್ನೂ ನಿರಾಕರಿಸತೊಡಗಿದರು. ಇದರಲ್ಲಿ ಸಾವಿರಾರು ವರ್ಷಗಳಿಂದ ನಡೆದುಬಂದಿದ್ದ ಪಂಚಾಯ್ತಿ ವ್ಯವಸ್ಥೆ ಕೂಡ ಸೇರಿತು. ಇದರಿಂದ ಸಂಪೂರ್ಣ ಸಾಮಾಜಿಕ ವ್ಯವಸ್ಥೆ ಹದಗೆಟ್ಟಿತು.ಆಡೀತದ ವಿರುದ್ಧ ಸಣ್ಣಪುಟ್ಟ ಸಿಟ್ಟು ಹೊಂದಿದ್ದ ಜನರೆಲ್ಲ ಗುಂಪುಕಟ್ಟತೊಡಗಿದರು. ಇವರು ಬೌದ್ಧಿಕ ಬೆಂಬಲವನ್ನೂ ಪಡೆದು ಬೇರೆ ಕಡೆಯೂ ನೆಲೆಯೂರತೊಡಗಿದರು. ನಿಧಾನವಾಗಿ ಭೂ ಒಡೆತನದ ವಿರುದ್ಧ ಹೋರಾಟದಿಂದ ದೂರವಾಗಿ ರಾಜ್ಯ, ಕೇಂದ್ರ ಸರ್ಕಾರ ಹಾಗೂ ಅವುಗಳ ವ್ಯವಸ್ಥೆಯನ್ನು ಸಾರಾಸಗಟು ವಿರೋಧಿಸುವ ಸ್ವರೂಪ ಪಡೆಯಿತು. ಸರ್ಕಾರದ ಒಳಗಿನ ಭ್ರಷ್ಟಾಚಾರ ಇದಕ್ಕೆ ಸಮೃದ್ಧ ಮೇವು ಒದಗಿಸಿತು. ಇದರಿಂದ ನಕ್ಸಲ್ ಬಾರಿ ಊರಿನ ಹೋರಾಟಗಾರರನ್ನು ನಕ್ಸಲರು ಎಂದು ಕರೆದು ಅಂಥ ಹೋರಾಟ ಮಾಡುವವರನ್ನೆಲ್ಲ ಅನಂತರ ಅದೇ ಹೆಸರಿನಿಂದ ಗುರುತಿಸಲು ಶುರುಮಾಡಲಾಯಿತು. ಹಿಂದೆ ಬ್ರಿಟಿಷರ ಆಡಳಿತದ ವಿರುದ್ಧ ಹೋರಾಡಿದ್ದ ನಮ್ಮ ಜನರ ಭಾವನೆಯಲ್ಲಿ ಸರ್ಕಾರವೆಂದರೆ ಅದು ಯಾವಾಗಲೂ ಸಾಮಾನ್ಯ ಜನರ ವಿರುದ್ಧ ಎಂಬ ಕಲ್ಪನೆಯನ್ನು ಕಮ್ಯೂನಿಸ್ಟರು ಸುಲಭವಾಗಿ ಮೂಡಿಸಿದರು.

ವ್ಯವಸ್ಥೆಯ ವಿರುದ್ಧ ಹೋರಾಟ ಅನ್ನುವ ನಕ್ಸಲರು ಜನಸಾಮಾನ್ಯರಿಗೆ ಸರ್ಕಾರ ಒದಗಿಸಿದ್ದ ಕನಿಷ್ಟಮೂಲಸೌಕರ್ಯಗಳನ್ನು ಹಾಳುಗೆಡವಿ ಸಿಟ್ಟು ಕಾರಿಕೊಳ್ಳಲು ಆರಂಭಿಸಿದರು. ಅವರ ಸಿಟ್ಟಿಗೆ ಶಾಲೆ, ರೈಲ್ವೆ ಸ್ಟೇಶನ್ನು, ಆಸ್ಪತ್ರೆ, ಪೊಲೀಸ್ ಠಾಣೆ, ದೂರವಾಣಿ ಕೇಂದ್ರಗಳು, ರಸ್ತೆ, ಸೇತುವೆಗಳು ಮೊದಲಾದವೆಲ್ಲ ಹಾಳಾದವು. ತಮ್ಮ ಊಟ ಇತ್ಯಾದಿ ವ್ಯವಸ್ಥೆಗೆ ನಕ್ಸಲರು ಜನರ ಲೂಟಿಗೆ ಇಳಿದು ಉಳ್ಳವರನ್ನು ಸುಲಿಗೆ ಮಾಡುವುದು ಆದರ್ಶ ಎಂಬ ವಾತಾವರಣ ಸೃಷ್ಟಿಸಿ ಕಳ್ಳತನ ಹಾಗೂ ದರೋಡೆಗಳಿಗೆ ಮೌಲ್ಯದ ಸ್ಥಾನ ನೀಡಲಾರಂಭಿಸಿದರು. ಇದರಿಂದ ನಕ್ಸಲರು ಲೂಟಿಯ ಮೂಲಕ ಹಣ ಮಾಡುವ ದಂಧೆಗೆ ಇಳಿದರು. ಬ್ಯಾಂಕು, ಕಚೇರಿ ಇತ್ಯಾದಿಗಳು ಅವರ ಗುರಿಗಳಾದವು. ಅನಂತರ ಸರ್ಕಾರದ ವ್ಯವಸ್ಥೆಯ ಮೂಲವಾದ ಮತದಾನ ವ್ಯವಸ್ಥೆಯನ್ನು ಹಾಳುಮಾಡಲು ಶುರುಮಾಡಿದರು. ಜನರನ್ನು ಬೆದರಿಸುವುದು ಮತದಾನ ಮಾಡದಂತೆ ಬಲಾತ್ಕರಿಸುವುದು, ತಮಗೆ ಮತಹಾಕದ ಜನರನ್ನು ಕೊಲೆ ಮಾಡುವುದು ಸಹಜವಾಯಿತು. ನಕ್ಸಲರು ಚುನಾವಣೆಗೆ ದೊಡ್ಡ ಭೀತಿ ಒಡ್ಡಿದರು. ನಕ್ಸಲ್ ಪೀಡಿತ ಜಾಗಗಳಲ್ಲಿ ಚುನಾವಣೆ ಅಸಾಧ್ಯವಾಯ್ತು. ಜನರನ್ನು ಹೆದರಿಸಿ ಬೆದರಿಸಿ ಅಧಿಕಾರಕ್ಕೆ ಬರತೊಡಗಿದರು. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೇ ಇದ್ದು ವಿರುದ್ಧ ಕೆಲಸ ಮಾಡುವ ಕಮ್ಯೂನಿಸ್ಟರು ನಕ್ಸಲರಿಗೆ ಹೊರಜಗತ್ತಿನ ಕೊಂಡಿಯಾದರು, ಇವರಿಗೆ ನಗರ ನಕ್ಸಲರು ಬೆಂಬಲ ನೀಡತೊಡಗಿದರು. ಹೀಗೆಬೆಳೆಯುತ್ತ ಬಂದ ನಕ್ಸಲರು ಎಲ್ಲ ಕಡೆ ಹರಡತೊಡಗಿ ವಿಷವೃಕ್ಷವಾದರು. ಪರಿಣಾಮವಾಗಿ ಐದು ದಶಕದಲ್ಲಿ ಅವರ ಕಾರಣಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ ದೇಶದಲ್ಲಿ ೧೭,೦೦೦ಜನ ಎಂಬ ಲೆಕ್ಕವಿದೆ. ಹೀಗೆ ಸತ್ವರನ್ನು ಅವಲಂಬಿಸಿದ್ದ ಎಷ್ಟು ಜನ ಆತ್ಮ ಹತ್ಯೆ ಮಾಡಿಕೊಂಡರು ಹಾಗೂ ನಿರ್ಗತಿಕರಾಗಿ ಸತ್ತರು ಎಂಬ ಲೆಕ್ಕವಿಲ್ಲ. ತಾವು ಬೀಡುಬಿಟ್ಟ ಜಾಗದಲ್ಲಿ ನಕ್ಸಲರು ನೂರರಿಂದ ಸಾವಿರ ರೂಗಳವರೆಗೆ ಜನರಿಂದ ನಿರಂತರ ಸುಲಿಗೆ ಮಾಡುತ್ತಿದ್ದರು. ಇವರ ನಿಯಂತ್ರಣ ಸರ್ಕಾರಗಳಿಗೆ ತಲೆನೋವಾಯಿತು. ಇವರ ನಿಗ್ರಹಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ೮೦ರ ದಶಕದಲ್ಲಿ ಗ್ರೇ ಹೌಂಡ್ಸ್ ಎಂಬ ಪೊಲೀಸ್ ಪಡೆಯನ್ನು ಪ್ರತ್ಯೇಕವಾಗಿ ರಚಿಸಿತು. ನಕ್ಸಲರ ನಿಗ್ರಹ ಬಿಟ್ಟರೆ ಇವರಿಗೆ ಬೇರೆ ಕೆಲಸವಿರಲಿಲ್ಲ. ಈಗ ಕೇವಲ ಆಂಧ್ರದಲ್ಲಿ  ೨೦೦೧-೨೦೦೩ರ ಅವಧಿಯಲ್ಲಿ ನಕ್ಸಲರ ಜಾಗದ ಮೇಲೆ ದಾಳಿ ಮಾಡಿದಾಗ ೬೨ ದಶಲಕ್ಷ ರೂ ಹಣ ದೊರೆತಿತ್ತು ಎಂದರೆ ದೇಶಾದ್ಯಂತ ಇವರ ಲೂಟಿಯ ಪ್ರಮಾಣ ಎಷ್ಟಿರಬಹುದೆಂಬುದು ಊಹಿಸಲು ಸಾಧ್ಯವಿಲ್ಲ.ಇದಲ್ಲದೇ ಇವರಿಂದಾದ ಆರ್ಥಿಕ ನಷ್ಟದಲ್ಲಿ ಇವರಿಂದ ಸತ್ತ ಪೊಲೀಸರು, ಅವರ ನೇಮಕಾತಿ, ಮೂಲ ಸೌಲಭ್ಯ, ಅವರ ಕುಟುಂಬಕ್ಕೆ ನೀಡಿದ ಪರಿಹಾರ, ರಸ್ತೆ ರೈಲು ಇತ್ಯಾದಿ ಸೌಕರ್ಯಗಳ ನಷ್ಟ ಮೊದಲಾದವುಗಳ ಲೆಕ್ಕ ಸೇರಿಲ್ಲ. ಇವೆಲ್ಲ ಸೇರಿದರೆ ಸಾವಿರಾರು ಕೋಟಿ ನಷ್ಟವಾಗುತ್ತದೆ. ಎಲ್ಲ ಬಗೆಯ ಸರ್ಕಾರ ವಿರೋಧಿಸುವ ನಕ್ಸಲರು ತಾವು ಬೆಂಬಲಿಸುವ ಕಮ್ಯೂನಿಸ್ಟರ ಸರ್ಕಾರ ಬರಲಿ ಅನ್ನುತ್ತಾರೆ. ಆಯಿತು. ಆದರೆ ಅವರ ಸಕಾರಗಳಿದ್ದ ಕಡೆ ಅಭಿವೃದ್ಧಿ ನೋಡಿದರೆ ವ್ಯಥೆ ಆಗುತ್ತದೆ. ಪಶ್ಚಿಮ ಬಂಗಾಳ, ಕೇರಳಗಳಲ್ಲಿ ಅವರ ಆಡಳಿತ ಜನರಿಗೆ ನೀಡಿದ ಸವಲತ್ತು ಅಷ್ಟರಲ್ಲೇ ಇದೆ. ಹಾಗೆ ನೋಡಿದರೆ ಅವು ಉಳಿದ ರಾಜ್ಯಗಳಿಗಿಂತ ಹಿಂದೆ ಇವೆ. ಜನಸಾಮಾನ್ಯರ ಕಾಳಜಿಯ ಹೆಸರಲ್ಲಿ ಇವರು ಕೇವಲ ಗದ್ದಲ ಗಲಭೆ ಮಾಡುತ್ತಾರೆಂಬುದು ಜನರಿಗೆ ಗೊತ್ತಾಗಿದೆ. ಹೀಗಾಗಿ ನಕ್ಸಲರು ಹಾಗೂ ಅವರು ಬೆಂಬಲಿಸುವ ಸಿದ್ಧಾಂತದ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಕ್ಸಲರ ವಾದ ಹಾಗೂ ಕೆಲಸಗಳ ಬಗ್ಗೆ ಜನಜಾಗೃತಿ ಮೂಡಿಸಿದ ಸರ್ಕಾರ ಅದರಲ್ಲಿ ಸಫಲತೆಯನ್ನೂ ಕಂಡಿದೆ. ಸೌಕರ್ಯಗಳಿಲ್ಲದೇ ಬದುಕು ದುರ್ಭರವಾಗುತ್ತದೆ ಎಂಬುದು ಜನರ ಅರಿವಿಗೆ ಬಂದಿದೆ. ಇವೆಲ್ಲ ಸೇರಿ ಜನಬೆಂಬಲ ಕಳೆದುಕೊಂಡ ನಕ್ಸಲರು ಹಾಗೂ ಅವರ ಬೆಂಬಲವುಳ್ಳ ಕಮ್ಯೂನಿಸ್ಟರು ಭ್ರಮನಿರಸನಕ್ಕೆ ಒಳಗಾಗಿದ್ದಾರೆ. ಇದರ ಜೊತೆಗೆ ಪೊಲೀಸ್ ಹಾಗೂ ಸೇನಾ ಬಲಗಳು ನಕ್ಸಲರ ಬೆನ್ನು ಮೂಳೆ ಮುರಿದಿವೆ. ನಗರ ನಕ್ಸಲರಿಗೆ ಸಮಾಜದಲ್ಲಿ ಬೆಲೆಕುಸಿದಿದೆ. ಇವೆಲ್ಲ ಸೇರಿ ಬೃಹದಾಕಾರ ತಳೆದಿದ್ದ ನಕ್ಸಲ್ ಉಪಟಳ ಅಂತೂ ಕೊನೆಗಾಣುತ್ತಿದೆ. ಈ ಕೆಲಸ ಕೆಲವು ವರ್ಷಗಳ ಹಿಂದೆ ಸಾಧ್ಯವಾಗಿದ್ದರೆ ದೇಶ ಇನ್ನಷ್ಟು ಅಭಿವೃದ್ಧಿ ಕಾಣುತ್ತಿತ್ತೆಂದು ಆಶಿಸಬಹುದು. ಸದ್ಯ ಈಗಲಾದರೂ ಈ ಉಪಟಳ ಕೊನೆಯಾಯಿತಲ್ಲ ಎಂಬುದೇ ಸಮಾಧಾನ. ಎಂಬತ್ತರ ದಶಕದವರೆಗೆ ಎಡವಾದ ಬೆಂಬಲಿಸುವ ಶೋಕಿಯಿಂದ ಸಾಹಿತ್ಯ ಸಂಸ್ಕೃತಿ ಅಧ್ಯಯನಗಳು ಅದೇ ಹಾದಿಯಲ್ಲಿ ಸಾಗುತ್ತ ಜನರ ದಿಕ್ಕು ತಪ್ಪಿಸಿದ್ದವು. ಕ್ರಮೇಣ ಜನರಲ್ಲಿ ಬೆಳೆದ ತಿಳಿವಳಿಕೆಯಿಂದ ಅವರು ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಆದರೆ ಇದಕ್ಕೆ ದೇಶ ತೆತ್ತ ಬೆಲೆ ಮಾತ್ರ ಅನೂಹ್ಯ.

No comments:

Post a Comment