Sunday, 17 November 2024

ಮಣಿಪುರ ಗಲಭೆ ಹೇಳುವುದೇನು?


ಮಣಿಪುರದಲ್ಲಿ ಸದ್ಯ ಮೈತೆಯಿ ಮತ್ತು ಕುಕಿ ಪಂಗಡಗಳ ಮಧ್ಯೆ ಗಲಾಟೆ ನಡೆಯುತ್ತಿದೆ. ಈ ಗಲಾಟೆಯ ಹಿಂದೆ ಸಂಕೀರ್ಣ ಸಂಗತಿಗಳಿವೆ. ಕಳೆದ ಜನವರಿ ೧೬ರಿಂದ ನಡೆಯುತ್ತಿರುವ ಈ ಗಲಾಟೆಯಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ೨೦೦ ದಾಟಿದೆ. ಕಳೆದ ಮೂರು ತಿಂಗಳಿದ ಮತ್ತೆ ಹೆಚ್ಚಿದ್ದು ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ೨೦೨೩ ಮೇಯಲ್ಲಿ ಗಲಾಟೆ ಶುರುವಾಯ್ತು. ಮಣಿಪುರ ರಾಜಧಾನಿ ಬಳಿಯ ಚರ್ಚಂದ ಪುರದಲ್ಲಿ ಮೊದಲು ಶುರುವಾಯ್ತು. ನಿಜವಾದ ಕಾರಣ ಏನೆಂದರೆ ಮೈತೇಯಿ ಸಮುದಾಯ ತಮಗೂ ಬುಡಕಟ್ಟು ಸ್ಥಾನಮಾನ ಕೊಡಿ ಎಂದು ಬೇಡಿಕೆ ಇಟ್ಟಿದ್ದು. ಇದನ್ನು ಕುಕಿ ಸಮುದಾಯ ವಿರೋಧಿಸಿತು. ಇಲ್ಲಿಂದ ಗಲಭೆ ಶುರು. ಮೇಲಾಟ ಆರಂಭ. ಸರ್ಕಾರಗಳಿಗೆ ಪೀಕಲಾಟ. ಇಷ್ಟು ಶತಮಾನಗಳ ಕಾಲ ಆ ಎರಡು ಸಮುದಾಯಗಳು ಪ್ರತ್ಯೇಕವಾಗಿ ತಮ್ಮ ಸಮಾಜ ಕಟ್ಟಿಕೊಂಡಿದ್ದರೂ ಗಲಾಟೆ ಇಲ್ಲದೇ ಹೇಗೆ ಆರಾಮವಾಗಿದ್ದವು ಎಂಬುದರ ಅಧ್ಯಯನವನ್ನು ನಮ್ಮ ಸಮಾಜಶಾಸ್ತç ಪಂಡಿತರು ಇನ್ನೂ ಮಾಡಿಲ್ಲ. ಏಕೆಂದರೆ ಅವರಿಗೆ ಈ ಸಮಸ್ಯೆಯ ಮೂಲ ಸದ್ಯದ ನಮ್ಮ ಆಡಳಿತ ಹಾಗೂ ಸಾಮಾಜಿಕ ದೃಷ್ಟಿಕೋನದಲ್ಲಿದೆ ಎಂಬುದನ್ನು ಒಪ್ಪಲು ಸಿದ್ಧರಿಲ್ಲ ಹಾಗೂ ನಮ್ಮ ದೃಷ್ಟಿಯನ್ನು ಆದಿವಾಸಿಗಳು ಅಳವಡಿಸಿಕೊಳ್ಳಲಿ ಎಂಬ ಧೋರಣೆ ಇದೆ. ಬ್ರಿಟಿಷರು ನಮ್ಮ ದೇಶದಲ್ಲಿ ವಸಾಹತು ಸ್ಥಾಪಿಸುವವರೆಗೆ ಮಣಿಪುರ ಕೂಡ ಒಬ್ಬ ರಾಜನ ಆಳ್ವಿಕೆಯಡಿಯಲ್ಲಿ ಶಾಂತವಾಗಿತ್ತು. ಮಣಿಪುರದಲ್ಲಿ ಮೈತೇಯಿ ಜನರ ಪ್ರಮಾಣ ಶೇ. ೯೦. ಆದರೆ ಕುಕಿಗಳ ಪ್ರಮಾಣ ಶೇ. ೨೮. ಇವರ ಬಳಿ ಶೇ. ೯೦ ಭೂಮಿ ಇದ್ದರೆ ಜನ ಜಾಸ್ತಿ ಇರುವ ಮೈತೇಯಿ ಜನರ ಬಳಿ ಇರುವುದು ಶೇ. ೧೦ ಭೂಮಿ. ಅದು ಕೂಡ ಕಣಿವೆ ಭಾಗ. ಮಣಿಪುರದಲ್ಲಿರುವುದು ಒಂದೋ ಪರ್ವತ ಅಥವಾ ಕಣಿವೆ. ಕಣಿವೆ ಭಾಗ ಕಡಿಮೆ. ಬ್ರಿಟಿಷರಿಗೆ ನೆರವಾಗಿದ್ದ ಮೈತೇಯಿ ಜನ ಕ್ರಿಶ್ಚಿಯನ್ ಗೆ ಮತಾಂತರವಾಗಿದ್ದರು, ಬ್ರಿಟಿಷರ ಕೃಪೆಯಿಂದ ಶಿಕ್ಷಣ ಹಾಗೂ ನೌಕರಿರ ಸವಲತ್ತುಗಳನ್ನು ಮೊದಲಿಂದಲೂ ಪಡೆದಿದ್ದರು. ಜೊತೆಗೆ ಬ್ರಿಟಿಷ್ ಅವಧಿಯಲ್ಲಿ ಅಲ್ಲಿನ ರಾಜನಾಗಿದ್ದ ಜಯಸಿಂಹ ಹಿಂದಿನ ಬರ್ಮಾ ಅಥವಾ ಇಂದಿನ ಮಯನ್ಮಾರ್ ಕಾಟ ತಡೆಯಲು ಬ್ರಿಟಿಷರ ನೆರವು ಕೋರಿದ. ಪ್ರತಿಯಾಗಿ ಬ್ರಿಟಿಷರು ಆಂಗ್ಲೋ ಬರ್ಮಾ ಯುದ್ಧದ ನಂತರ ರಾಜನನ್ನು ಕಿತ್ತು ತಮ್ಮ ಆಡಲಿತ ಶುರುಮಾಡಿದರು. ಮಣಿಪುರ ಅತ್ತ ಬರ್ಮಾ, ಇತ್ತ ಬಾಂಗ್ಲಾ ಕಾಟದಿಂದ ಬಸವಳಿದಿದೆ. ಎರಡೂ ಕಡೆಯ ನುಸುಳುಕೋರರ ಕಾಟದಿಂದ ಬುಡಕಟ್ಟುಗಳು ತೊಂದರೆಗೆ ಒಳಗಾಗಿವೆ. ನುಸುಳುಕೋರರು ಮಾದಕ ವಸ್ತುಗಳ ದಾಸರಾಗಿ ಅದರಲ್ಲಿ ಬುಡಕಟ್ಟು ಬರುವಂತೆ ಮಾಡಿ ಮತ್ತಷ್ಟು ತೊಂದರೆ ಮಾಡಿದರು, ಜೊತೆಗೆ ಭಾರತ ಸ್ವತಂತ್ರವಾದಾಗ ಅಲ್ಲಿನ ರಾಜ ಭೋಜ ಭಾರತಕ್ಕೆ ಸೇರುವಂತೆ ಮಾಡಿಕೊಂಡ, ಬಾಂಗ್ಲಾ ಮಯನ್ಮಾರ್ ಕಾಟದ ಭಯವಿದ್ದ ಭಾರತ ಮಣಿಪುರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು. 

ಮೊದಲ ಮಹಾಯುದ್ಧದ ವೇಳೆಯಲ್ಲಿ ಬ್ರಿಟಿಷರು ಅಲ್ಲಿನ  ಆದಿವಾಸಿಗಳನ್ನು ತಮ್ಮ ಪರವಾಗಿ ಹೋರಾಡಲು ಬಳಸಿಕೊಂಡರು. ಪ್ರತಿಯಾಗಿ ಬ್ರಿಟಿಷ್ ಸರ್ಕಾರ ಅಂಥ ಬುಡಕಟ್ಟಿನಲ್ಲಿ ಒಂದಾದ ಮೈತೇಯಿ ಜನರಿಗೆ ಗುಡ್ಡಗಾಡಿನ ಪ್ರದೇಶವನ್ನು ವಹಿಸಿ ಭೂಮಿಯ ಹಕ್ಕನ್ನು ಕೊಟ್ಟಿತು. ಅದುವರೆಗೆ ಅಲ್ಲಿ ತಮ್ಮಪಾಡಿಗೆ ತಾವು ಬದುಕುತ್ತಿದ್ದ ಆದಿವಾಸಿಗಳು ಭೂಮಿಯ ಹಕ್ಕಿನ ಕಾರಣದಿಂದ ತಮ್ಮ ತಲೆತಲಾಂತರದ ಪಶುಪಾಲನೆ ಜೀವನೋಪಾಯಕ್ಕೆ ಹೊಡೆತ ಬಿದ್ದ ಕಾರಣ ಪರಸ್ಪರ ಕಚ್ಚಾಡತೊಡಗಿದವು. ಹತ್ತಾರು ಬುಡಕಟ್ಟುಗಳಿದ್ದ ಮಣಿಪುರದಲ್ಲಿ ಮೈತೇಯಿ ನಾಗಾ ಹಾಗೂ ತಾವೇ ಗುರುತಿಸಿ ಹೆಸರಿಸಿದ ಕುಕಿ ಆದಿವಾಸಿಗಳಿದ್ದಾರೆಂದು ಬ್ರಿಟಿಷರು ದಾಖಲೆ ಕೊಡತೊಡಗಿದರು. ಇದರಿಂದ ಅಲ್ಲಿದ್ದ ಹತ್ತಾರು ಆದಿವಾಸಿಗಳು ಈ ಮೂರು ಪ್ರಮುಖ ಗುಂಪುಗಳಲ್ಲಿ ಗುರುತಿಸಿಕೊಳ್ಳಬೇಕಾಯಿತು. ಇದರಿಂದ ತಮ್ಮ ಆಚಾರ ವಿಚಾರಕ್ಕೆ ಪ್ರಾತಿನಿಧ್ಯ ಸಿಗದ ಆದಿವಾಸಿಗಳಲ್ಲಿ ಅಸಮಾಧಾನ ಹೊಗೆಯಾಡತೊಡಗಿತು. ಜೊತೆಗೆ ಮೂರು ಪ್ರಮುಖ ಪಂಗಡಗಳು ತಾವೇ ಇಲ್ಲಿನ ಮೂಲನಿವಾಸಿಗಳು, ಉಳಿದವರು ಹೊರಗಿನವರು ಎಂದು ಜಗಳ ಶುರುಮಾಡಿದರು. ಉಳಿದವರು ಕೂಡ ಇದೇ ಮಾತನ್ನು ಹೇಳುತ್ತ ಕಂದಕವನ್ನು ಅಗಲ ಮಾಡತೊಡಗಿದರು. ಅದರ ಪರಿಣಾಮ ಇಂದು ನಮ್ಮ ಮುಂದೆ ಇದೆ.

ಆದಿವಾಸಿಯಾಗಲಿ ಅಥವಾ ಯಾವುದೇ ಸಮುದಾಯವಾಗಲಿ, ತಮ್ಮ ಅನನ್ಯತೆಗೆ ಧಕ್ಕೆ ಬಂದಾಗ ತಿರುಗಿಬೀಳುತ್ತದೆ. ೧೮೫೭ರ ದಂಗೆ ಶುರುವಾದುದು ಕೂಡ ಇಂಥ ಕಾರಣಕ್ಕೇ ಆಗಿದೆ. ಅವರ ವಿರುದ್ಧ ಸ್ವಾತಂತ್ರ ಹೋರಾಟಕ್ಕೂ ಇದೇ ಕಾರಣ. ಅದರಿಂದ ಬ್ರಿಟಿಷರು ನಮ್ಮ ಜನರನ್ನು ಜಾತಿ ಧರ್ಮಗಳ ಹೆಸರಲ್ಲಿ ಹೇಗೆ ಸುಲಭವಾಗಿ ಒಡೆಯಬಹುದೆಂಬ ಪಾಠ ಕಲಿತು ತಾವು ಇಲ್ಲಿರುವ ತನಕ ಅದನ್ನು ಮುಂದುವರೆಸಿ ನಮ್ಮವರಿಗೆ ಅದನ್ನು ಕಲಿಸಿ ಬಳುವಳಿಯಾಗಿ ಕೊಟ್ಟುಹೋದರು. ಚಾಚೂ ತಪ್ಪದೇ ನಮ್ಮವರು ಇದನ್ನು ಮುಂದುವರೆಸಿಕೊAಡುಹೋಗುತ್ತಿದ್ದಾರೆ. ಜಾತಿ ಅಥವಾ ಸಮುದಾಯ ಆಧಾರಿತ ಮೀಸಲಾತಿ ಎಂಥ ಸಮಸ್ಯೆ ತರಬಹುದು ಎಂಬುದನ್ನು ಮಣಿಪುರದ ಇಂದಿನ ಗಲಾಟೆ ತೋರಿಸಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಇದರಿಂದ ದೇಶದ ಆಡಳಿತಗಳು ಕಲಿಯಬೇಕಿದೆ.

2 comments:

  1. ಭಟ್ಟರೇ ವಿಪುಲ ಹಾಗೂ ಅಲ್ಲಿನ ಭೌಗೋಳಿಕ ಪರಿಸ್ಥಿತಿಯ ವಿವರಗಳು ಚಂದ ಮೂಡಿಬಂದಿದೆ

    ReplyDelete