Wednesday, 27 November 2024

ಬಾಂಗ್ಲಾ ಹಿಂಸಾಚಾರದ ಹಿಂದಿನ ಕಥೆ


ಯಾವುದೇ ಸಾಮಾಜಿಕ ಗಲಭೆ ಇದ್ದಕ್ಕಿದ್ದಂತೆಯೇ ಶುರುವಾಗುವುದಿಲ್ಲ ಎಂಬುದು ಅಷ್ಟಿಷ್ಟು ಇಂದಿನ ಇತಿಹಾಸ ಓದಿಕೊಂಡ ನಮಗೆಲ್ಲ ತಿಳಿದಿದೆ. ಈಗ ನೋಡಿ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಇನ್ನಿಲ್ಲದ ಹಿಂಸಾಚಾರ ನಡೆಯುತ್ತಿದೆ. ಕೊಲೆಗಳೂ ಆಗಿವೆ ಈಗ ಇಸ್ಕಾನ್ ದೇವಾಲಯದ ಅರ್ಚಕರನ್ನು ಹಿಡಿದಿಟ್ಟುಕೊಂಡು ಆಟವಾಡಲಾಗುತ್ತಿದೆ. ಅಲ್ಲಿ ಎಲ್ಲ ಕಡೆ ಹಿಂದೂಗಳ ಮೇಲೆದೌರ್ಜನ್ಯ ನಡೆಯುತ್ತಿದ್ದರೆ ಅಲ್ಲಿನ ಸರ್ಕಾರ ಅಲ್ಪ ಸಂಖ್ಯಾತ ಹಿಂದೂಗಳಿಗೆ ಎಲ್ಲ ಬಗೆಯ ರಕ್ಷಣೆ ಕೊಡಲಾಗುತ್ತದೆ ಎಂದು ಗಲಭೆ ಶುರುವಾದ ತಿಂಗಳಿಂದಲೂ ಹೇಳುತ್ತಿದೆ. ಪರಿಣಾಮ ಶೂನ್ಯ.

ಈ ಗಲಭೆಗೆ ಶತಮಾನಗಳ ಇತಿಹಾಸವಿದೆ. ಅದು ೧೭೦೭ರ ಔರಂಗಜೇಬ್ ಅಧಿಕಾರ ಮುಗಿದ ಕಾಲದಿಂದ ಶುರುವಾಗುತ್ತದೆ ಅನ್ನಬಹುದು. ಯಾಕೆಂದರೆ ಔರಂಗಜೇಬ್ ಇಸ್ಲಾಂ ಮತಕ್ಕೆ ಸಮುದಾಯಕ್ಕೆ ಎಲ್ಲ ಬಗೆಯ ರಕ್ಷಣೆ ಹಾಗೂ ವಿಸ್ತರಣೆಗೆ ಎಲ್ಲ ರೀತಿಯ ನೆರವು ಕೊಡುತ್ತಿದ್ದ ಅವನ ಅನಂತರ ಆ ಸಮುದಾಯಕ್ಕೆ ಮಧ್ಯ ಪಶ್ಚಿಮ ಪ್ರದೇಶದಲ್ಲಿ ಹಾಗೂ ಭಾರತದ ಈಶಾನ್ಯ ಭಾಗದಲ್ಲಿ ಅಧಿಕಾರ ಕಳೆದುಕೊಂಡ ಮುಸ್ಲಿಮರು ಅಭದ್ರತೆಯಲ್ಲಿ ತೊಳಲುತ್ತಿದ್ದರು. ಇದು ೧೯೦೫ರಲ್ಲಿ ಬಂಗಾಳ ವಿಭಜನೆ ಆಗುವವರೆಗೆ ಹಬ್ಬಿಕೊಳ್ಳುತ್ತದೆ. ಅದುವರೆಗೆ ಅಭದ್ರತೆಯನ್ನು ಅನುಭವಿಸುತ್ತಿದ್ದ ಈ ಸಮುದಾಯ ಬ್ರಿಟಿಷರ ಮುಂದೆ ಪ್ರತ್ಯೇಕ ದೇಶಕ್ಕಾಗಿ ಬೇಡಿಕೆ ಇಟ್ಟು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಎಂದು ತಮ್ಮ ಮತಕ್ಕಾಗಿ ಪ್ರತ್ಯೇಕ ಪ್ರಾಂತ್ಯ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆ ಸಮಯದಲ್ಲಿ ವೈಸ್ರಾಯ್ ಆಗಿದ್ದ ಕರ್ಜನ್ ಭಾರತದ ಸಮಾಜವನ್ನು ಒಡೆಯಲು ಹಾಗೂ ತಮ್ಮ ವಸಾಹತು ಆಳ್ವಿಕೆ ನಿರಾತಂಕವಾಗಿ ಮುಂದುವರೆಯಲು ಇವರನ್ನು ಧರ್ಮದ ಆಧಾರದಲ್ಲಿ ಸುಲಭವಾ ಒಡೆಯಬಹುದೆಂದು ತಿಳಿದು ಮುಸ್ಲಿಮರ ಬೇಡಿಕೆಗೆ ಒಳ ಒಳಗೆ ಬೆಂಬಲ ಕೊಟ್ಟಿದ್ದ. ಇತ್ತ ವಿಭಜನೆ ವಿರುದ್ಧ ಎದ್ದುನಿಂತ ಬಿಪಿನ್ ಚಂದ್ರ ಮೊದಲಾದವರು ಮೌನವಾಗಿ ನರಳಿದರು. ಆ ಕಾಲದಲ್ಲಿ ವಿಭಜನೆ ಪರ ಇದ್ದವರು ನವಾಬ ಸಲೀಮುಲ್ಲಾ ಮತ್ತು ಧಾರ್ಮಿಕ ಮುಖಂಡರಾದ ನವಾಬ್ ನವಾಬ್ ಸೈಯದ್ ಅಲಿ ಚೌಧರಿ ಮೊದಲಾದವರು. ಇವರು ಮುಸ್ಲಿಂ ಮತಕ್ಕೆ ಪ್ರತ್ಯೇಕ ನೆಲ ಸಿಕ್ಕಿದೆ ಎಂಬ ಸಂಭ್ರಮದಲ್ಲಿ ಬ್ರಿಟಿಷರಿಗೆ ನೆರವಾಗತೊಡಗಿದರು. ಇದರ ಲಾಭವನ್ನು ಬ್ರಟಿಷರು ತಮ್ಮ ಸ್ವಾರ್ಥಕ್ಕೆ ಚೆನ್ನಾಗಿ ಬಳಸಿಕೊಂಡರು. ಸ್ಬವಾತಂತ್ರ್ಯ ಹೋರಾಟದ ಕಿಚ್ಚನ್ನು ತಮಣೆ ಮಾಡಲು ಬ್ರಿಟಿಷರಿಗೆ ಇದು ನೆರವಾಯಿತು. ಅನಂತರ ಸ್ವಾತಂತ್ರ್ಯ ದೊರೆತ ಮೇಲೆಯೂ ಇಲ್ಲಿನ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಹಿಂದೂ ಮುಸ್ಲಿಂ ವಿಭಜನೆಯನ್ನು ಹಾಗೆಯೇ ಬಳಸಿಕೊಳ್ಳುತ್ತಾ ಬಂದವು.

ಸದ್ಯ ಬಂಗಾಲದಲ್ಲಿ ಹಿಂದೂಗಳ ಜನಸಂಖ್ಯೆ ಏರುತ್ತಿರುವುದು ಅವರ ಚಿಂತೆಗೆ ಕಾರಣ. ಸುಮ್ಮನೇ ನೋಡಿ - ೨೦೦೧ರಲ್ಲಿ ೧೧. ೮೨೨ ರಷ್ಟಿದ್ದ ಹಿಂದೂಗಳು ೨೦೧೨ರಲ್ಲಿ ೧೨, ೯೯೯ರಷ್ಟಾದರು. ೨೦೨೨ರಲ್ಲಿ ಇದು ೧೩, ೧೩೦ಕ್ಕೇರಿದೆ, ಆದರೆ ಅಲ್ಲಿನ ಮುಸ್ಲಿಂ ಜನಸಂಖ್ಯೆಯ ಮುಂದೆ ಇದು ನಗಣ್ಯ. ೧೯೯೧ರಲ್ಲಿ ಅಲ್ಲಿನ ಮುಸ್ಲಿಂ ಜನಸಂಖ್ಯೆ ೯೩,೮೮೧ ಇದ್ದುದು ೨೦೨೨ರಲ್ಲಿ ಕ್ರಮೇಣ ೧೫೦, ೩೬೦ರಷ್ಟಗಿದೆ. ಆದರೂ ಅಲ್ಲಿನ ಮುಸ್ಲಿಮರಿಗೆ ಒಂಥರಾ ಅಭದ್ರತೆ. ಸಾಲದ್ದಕ್ಕೆ ಷೇಕ್ ಹಸೀನಾ ಸರ್ಕಾರ ಹಿಂದೂಗಳ ಭದ್ರತೆಗೆ ಆದ್ಯತೆ ಕೊಡುತ್ತಿದ್ದುದು ಅವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಆಗಾಗ ಏನಾದರೂ ನೆಪದಲ್ಲಿ ಸರ್ಕಾರದ ವಿರುದ್ಧ ಗಲಾಟೆ ಮಾಡುತ್ತಿದ್ದರು. ವಿರೋಧ ಪಕ್ಷಗಳು ಇದರ ಲಾಭವನ್ನು ಪಡೆಯಲು ಹವಣಿಸಿ ಸದ್ಯ ಯಶಸ್ಸು ಕಂಡವು. ಇದನ್ನು ಬಳಸಿಕೊಂಡ ಮೂಲಭೂತವಾದಿಗಳು ಹಿಂದೂಗಳು ಮತ್ತು ಅವರ ಪವಿತ್ರ ತಾಣಗಳ ಮೇಲೆ ಮುಗಿಬಿದ್ದರು. ಅದು ಮುಂದುವರೆದಿದೆ. ಈಗ ಸಕಾರ ಮೂಲಭೂತವಾದಿಗಳ ಬೆಂಬಲದೊಂದಿಗೆ ಯೂನಸ್ ನೇತೃತ್ವದಲ್ಲಿದ್ದು ಅವರು ಮಾತಿಗೆ ಮಾತ್ರ ಅಲ್ಪ ಸಂಖ್ಯಾತರಿಗೆ ರಕ್ಷಣೆ ಕೊಡುವುದಾಗಿ ಹೇಳುತ್ತಿದ್ದಾರೆ. ಆದರೆ ಗಲಭೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇಷ್ಟರ ನಡುವೆ ಮತ್ತೆ ಷೇಕ್ ಹಸೀನಾ ಭಾರತದಲ್ಲಿ ಆಸರೆ ಪಡೆದಿದ್ದು ಅಲ್ಲಿನ ಹಿಂದೂಗಳ ರಕ್ಷಣೆಗೆ ಭಾರತ ಮುಂದಾಗಬೇಕೆಂಬ ಕೂಗು ಕೇಳುತ್ತಿದೆ. ಆದರೆ ಭಾರತ ಮಾತಲ್ಲಿ ಮಾತ್ರವಲ್ಲ, ಕ್ರಿಯೆಯಲ್ಲೂ ಉದಾರವಾದಿ. ಯಾವುದೇ ಧರ್ಮದ ಹೆಸರಲ್ಲಿ ಮತ್ತೊಂದು ದೇಶದ ಆಡಳಿತದಲ್ಲಿ ಅದು ಮೂಗು ತೂರಿಸುವುದಿಲ್ಲ, ಆದರೆ ಅಗತ್ಯ ರಾಜತಾಂತ್ರಿಕ ಮಾತುಕತೆಯ ಯತ್ನವನ್ನು ಮಾಡುತ್ತಿದೆ. ಸ್ವಲ್ಪ ಯಶಸ್ಸನ್ನೂ ಕಾಣುತ್ತಿದೆ. ಈ ನಡುವೆ ಸನಾತಬಿಗಳು ಜಾಗತಿಕ ಮಟ್ಟದಲ್ಲಿ ಹಿಂದೂಗಳು ಬಾಂಗ್ಲಾ ದೌರ್ಜನ್ಯದ ವಿರುದ್ಧ ಒಂದಾಗುವಂತೆ, ಹೋರಾಡುವಂತೆ ಕರೆ ಕೊಡುತ್ತಿದ್ದಾರೆ.  ಇಂಥ ಯತ್ನ ಒಳ್ಳೆಯ ಬೆಳವಣಿಗೆ ಅಲ್ಲ. ಇದು ಮತ್ತೆಲ್ಲೋ ಹೋಗಬಹುದು.

ಒಟ್ಟಿನಲ್ಲಿ ಇಡೀ ಜಗತ್ತು ಪ್ರಜಾಪ್ರಭುತ್ವದ ಕಡೆಗೆ ವಾಲುತ್ತಿರುವಾಗ ಯಾವುದೇ ಒಂದು ಧರ್ಮದ ಹೆಸರಲ್ಲಿ ಪ್ರತ್ಯೇಕ ದೇಶ ಮಾಡಿಕೊಳ್ಳುವ ಯತ್ನ ಎಳ್ಳಷ್ಟೂ ಸರಿಯಲ್ಲ, ಹಾಗೂ ಎಷ್ಟು ಅಪಾಯಕಾರಿ ಎಂಬುದನ್ನು ಬಾಂಗ್ಲಾದ ಬೆಳವಣಿಗೆ ತೋರಿಸುತ್ತದೆ. ಅತ್ತ ಪಾಕಿಸ್ತಾನ ಕೂಡ ಇದೇ ದಾರಿಯಲ್ಲಿದ್ದು, ಅದಕ್ಕೆ ಸಲಹೆ ಕೊಡುತ್ತಿರುವವರು ಕೇವಲ ಮೂಲಭೂತವಾದಿಗಳಲ್ಲ, ಬದಲಿಗೆ ಮಹಾ ಭಯಂಕರ ಉಗ್ರರು, ಭಯೋತ್ಪಾದಕರು. ಇದು ಊಹೆಗೆ ನಿಲುಕದಷ್ಟು ಅಪಾಯಕಾರಿ. ಇಂಥ ಸಂದರ್ಭದಲ್ಲಿ ಮಧ್ಯ ಪಶ್ಚಿಮ ದೇಶಗ ಳಲ್ಲಿ ಪಕ್ಕಾ ಉಗ್ರರೇ ಆಡಳಿತದಲ್ಲಿದ್ದಾರೆ. ಒಟ್ಟಿನಲ್ಲಿ ಧರ್ಮದ ಹೆಸರಲ್ಲಿ ಪ್ರಪಂಚದ ಶಾಂತಿ ನಾಶವಾಗುತ್ತಿದೆ. ಶಾಂತಿ ಸ್ಥಾಪನೆಗಾಗಿ ಹುಟ್ಟಿಕೊಂಡ ಧರ್ಮಗಳು ಅದೇ ನೆಪದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವುದು ಮಾತ್ರ ವಿಪರ್ಯಾಸ.

No comments:

Post a Comment