Friday, 29 November 2024

ಇವಿಎಂ ವಿವಾದದ ಸುತ್ತ


ವಿಪರರ್ಯಾಸನೋಡಿ - ಆಧುನಿಕ ವಿಧಾನದ ಮತಯಂತ್ರ ಎಲೆಕ್ಟ್ರಾನಿಕ್ ವೋಟಿಂಗ್ ಮಶೀನ್ಗಳನ್ನು ಅಮೆರಿಕದಲ್ಲಿ ವಿಲಿಯಂ ಆರ್ ಬಿಲ್ ಮೆಕ್ಲಿಫ್ ಎಂಬಾತ ೧೯೬೪ರಲ್ಲಿ ಸಿದ್ಧಪಡಿಸಿ ಅದಕ್ಕೆ ಪೇಟೆಂಟ್ ಪಡೆದ. ಆದರೆ ಅಮೆರಿಕದಲ್ಲಿ ಅದರ ಪ್ರಯೋಗ ಮಾತ್ರ ನಡೆಯಿತು. ೨೦೦೫ರವರೆಗೆ ಅದು ತನ್ನ ಚುನಾವನೆ ಪ್ರಕ್ರಿಯೆಯಲ್ಲಿ ಈ ಮಶೀನ್ಗಳನ್ನು ಬಳಸುವ ಮನಸ್ಸು ಮಾಡಲಿಲ್ಲ. ಅನಂತರ ೨೦೧೯ರಲ್ಲಿ ಇದರ ಬಳಕೆ ಶುರುವಾಯಿತು. ಆದರೆ ಅಷ್ಟರಲ್ಲಿ ವಿಶ್ವದ ಅನೇಕ ದೇಶಗಳು ಈ ವ್ಯವಸ್ಥೆಗೆ ಮಹತ್ವ ಕೊಟ್ಟು ಅಳವಡಿಸಿಕೊಂಡಿದ್ದವು.

ಭಾರತ ೧೯೮೯-೯೦ರಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸಿತು. ಇದಕ್ಕೆ ಹೆಚ್ಚಿನ ಆದ್ಯತೆ ಕೊಟ್ಟವರು ಅಂದಿನ ಚುವಾವಣಾ ಆಯುಕ್ತರಾಗಿದ್ದ ಶ್ಯಾಮಲಾಲ್ ಶೇಕ ದಾರ್ ಎಂಬುವವರು. ಇವರು ಈ ವ್ಯವಸ್ಥೆ ಭಾರತದಂಥ ಬಹುದೊಡ್ಡ ಚುವಾವಣಾ ವ್ಯವಸ್ಥೆಯನ್ನು ಸರಿಪಡಿಸಿ ವೆಚ್ಚ ಮತ್ತು ಶ್ರಮವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಕೊಂಡು ಇದಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದ ಕಾರಣಕ್ಕೆ ಇದರ ಅಳವಡಿಕೆ ವೇಗ ಪಡೆಯಿತು. ಅನಂತರ ಬಹುತೇಕ ಎಲ್ಲ ಚುನಾವಣೆಗಳಲ್ಲೂ ಇದರ ಬಳಕೆ ಆಗತೊಡಗಿತು. ಇದರ ಜೊತೆಗೆ ಅಮೆರಿಕದಲ್ಲಿ ಈ ಯಂತ್ರಕ್ಕೆ ಎದ್ದಿದ್ದ ವಿರೋಧವನ್ನು ಆಧರಿಸಿ ಇಲ್ಲಿನ ಪ್ರತಿಪಕ್ಷಗಳು ಈ ಯಂತ್ರದ ಬಳಕೆಯನ್ನು ವಿರೋಧಿಸಿ ಹಳೆಯ ಮತಪತ್ರ ವ್ಯವಸ್ಥೆ ಮರುಜಾರಿ ಆಗಬೇಕೆಂದು ಆಗ್ರಹಿಸತೊಡಗಿದರು. ಆದರೆ ಈ ಯಂತ್ರ ಈಗ ಸಾಕಷ್ಟು ಸುಧಾರಣೆ ಕಂಡು ಅದರಲ್ಲಿ ಲೋಪ ತೋರಿಸುವುದು ಸಾಧ್ಯವೇ ಇಲ್ಲ ಅನ್ನುವಂತಾಗಿದೆ. ಆದರೆ ಪ್ರತಿಪಕ್ಷಗಳು ಹಠ ಬಿಡದೇ ಸರ್ವೋಚ್ಚ ನ್ಯಾಯಾಲಯದವರೆಗೂ ಎಳೆದರು. ಆದರೆ ಅದರಲ್ಲಿನ ದೋಷವನ್ನು ತೋರಿಸಿ ಸಾಬೀತುಪಡಿಸುವಂತೆ ಎಸೆದ ಸವಾಲಿನಲ್ಲಿ ಸೋತಕಾರಣ ಪ್ರತಿಪಕ್ಷಗಳಿಗೆ ನ್ಯಾಯಾಲಯ ನೀವು ಗೆದ್ದಾಗ ಸರಿ ಇರುವ ಈ ಯಂತ್ರ ನೀವು ಸೋತಾಗ ಮಾತ್ರ ದೋಷಪೂರಿತ ಆಗುವುದು ಹೇಗೆಂದು ಜನಸಾಮಾನ್ಯರಿಗೆ ಎದುರಾಗುತ್ತಿದ್ದ ಪ್ರಶ್ನೆಯನ್ನೇ ಕಟು ಶಬ್ದಗಳಲ್ಲಿ ಕೇಳಿದೆ.  ಇಷ್ಟರಲ್ಲಿ ವಿಶ್ವದಲ್ಲಿ ಭಾರತವಲ್ಲದೇ ಬ್ರೆಜಿಲ್, ನೆದರ್ಲೆಂಡ್, ನಾರ್ವೆ, ಪಿಲಿಪ್ಪೀನ್ಸ್, ದಕ್ಷಿಣ ಕೊರಿಯಾ ಮಲೇಷ್ಯ, ಸ್ವಿರ‍್ಲೆಂಡ್ ಮೊದಲಾದ ದೇಶಗಳಲ್ಲಿ ಯಶಸ್ವಿಯಾಗಿ ಬಳಕೆ ಆಗುತ್ತಿದೆ. ಇದರಿಂದ ವೆಚ್ಚ ಮತ್ತು ಶ್ರಮ ಕಡಿಮೆ ಆಗಿದೆ. ಸಾಂಪ್ರದಾಯಿಕ ಮತಪತ್ರ ಚುನಾವಣೆಯಲ್ಲಿ ಮತಪತ್ರಗಳನ್ನು ಮುದ್ರಿಸುವುದ, ಅದರ ಡಬ್ಬಗಳ ನಿರ್ವಹಣೆ, ಮತಪತ್ರಗಳ ದುರುಪಯೋಗ ಮೊದಲಾದವು ತುಂಬ ವೆಚ್ಚಕ್ಕೆ ಕಾರಣವಾಗುತ್ತಿದ್ದವಲ್ಲದೇ ಮತಗಟ್ಟೆಯ ಅಧಿಕಾರಿಗಳಿಗೆ ಇದರ ನಿರ್ವಹಣೆ ಫಜೀತಿಗೂ ಕಾರಣವಾಗುತ್ತಿತ್ತು. ಸಣ್ಣಪುಟ್ಟ ಮತಕೇಂದ್ರಗಳಲ್ಲೂ ಮತಪತ್ರಗಳ ಅಪಹರಣ ಹಾಗೂ ಇಷ್ಟಬಂದಂತೆ ಅದನ್ನು ಚಲಾಯಿಸುವ ದಾದಾಗಿರಿ ಸಾಮಾನ್ಯವಾಗುತ್ತಿತ್ತು. ಆದರೆ ಮತಯಂತ್ರದಲ್ಲಿ ಇದಕ್ಕೆ ಅವಕಾಶವಿಲ್ಲ. ಹಾಗೂ ಮತಗಳ ಎಣಿಕೆ ಕ್ಷಿಪ್ರವೂ ಸುಲಭವೂ ಸರಿಯಾಗಿಯೂ ಲಭಿಸುತ್ತದೆ. ಇದರ ನಿರ್ವಹಣೆ ಕೂಡ ಸರಳವೇ. ಆದರೆ ಈ ಯಂತ್ರಗಳನ್ನು ಬಳಸಿ ಅಧಿಕೃತ ಮತದಾರ ಎಲ್ಲಿಂದ ಬೇಕಾದರೂ ಮತ ಚಲಾವಣೆ ಮಾಡಬಹುದಾದ ಸುರಕ್ಷಿತ ವ್ಯವಸ್ಥೆ ಬಂದರೆ ಇದು ಪೂರ್ಣವಾಗುತ್ತದೆ. ಸದ್ಯ ಇದರಪ್ರಯೋಗ ನಡೆಯುತ್ತಿದೆ.

No comments:

Post a Comment