
ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು, ನೆಲೆ - ಹಿನ್ನೆಲೆ ಎಂಬ ಅಪರೂಪ ಅನಿಸುವ ಕೃತಿ - ಇದು ಮೂರ್ನಾಲ್ಕು ದಿನ ನಿರಂತರ ಓದಿಸಿಕೊಂಡಿತು. ಯಾಕೆ ಅಪರೂಪ ಅಂದರೆ, ಇಂಥ ಒಂದು ಮುಖ್ಯ ಪಂಗಡ ಮತ್ತು ಅದರೊಳಗಿನ ಉಪ ಪಂಗಡ ಕುರಿತ ಗಂಭೀರ ಅಧ್ಯಯನ ಕೃತಿ ಇದೇ ಮೊದಲು ಆದ್ದರಿಂದ. ಅಲ್ಲದೇ ಸಾಮಾನ್ಯವಾಗಿ ಸಮಾಜ ಶಾಸ್ತ್ರ, ಮಾನವ ಶಾಸ್ತ್ರ ಅಥವಾ ಜಾನಪದ ಅಧ್ಯಯನಗಳಲ್ಲಿ ಆಗಾಗ ಜಾತಿ ಪಂಗಡಗಳ ಜಾತಿಗಳ ಅಧ್ಯಯನ ನಡೆಯುವಾಗ ಅಪರೂಪಕ್ಕೆ ಅಲ್ಲಲ್ಲಿ ಇಂಥ ಅಧ್ಯಯನ ನಡೆದುದುಂಟು. ಆದರೆ ಇತ್ತೀಚೆಗೆ ಬ್ರಾಹ್ಮಣರನ್ನು ಕುರಿತ ಅಧ್ಯಯನ ಉನ್ನತ ಮಟ್ಟದಲ್ಲಿ ಅಘೋಷಿತವಾಗಿ ನಿಷಿದ್ಧವಾಗಿಹೋಗಿದೆಯಾದ್ದರಿಂದ ಈ ಸಮುದಾಯದ ಬಗ್ಗೆ ಈ ಬಗೆಯ ಗಂಭೀರ ಅಧ್ಯಯನ ಕಾಣಿಸುವುದೇ ದುರ್ಲಭ. ಇಂದಿನ ಶೈಕ್ಷಣಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಬ್ರಾಹ್ಮಣ ಸಮುದಾಯವೇ ಈ ದೇಶದ ಪಿಡುಗುಗಳಿಗೆಲ್ಲ ಬ್ರಾಹ್ಮಣ ಸಮುದಾಯವೇ ಕಾರಣ ಅನ್ನುವ ಪಾಶ್ಚಾತ್ಯರು ಬಿತ್ತಿದ ಬೀಜ ಬೆಳೆದು ನಿಂತಿದೆ. ಇದರಿಂದ ಬ್ರಾಹ್ಮಣರನ್ನು ಕುರಿತ ಯಾವುದೇ ಬಗೆಯ ಗಂಭೀರ ಅಧ್ಯಯನಕ್ಕೆ ಯಾವುದೇ ವಲಯದಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತದೆ. ಇಂಥ ಸಂದರ್ಭದಲ್ಲಿ ಅಷ್ಟಕ್ಕೂ ನಿಜಕ್ಕೂ ಬ್ರಾಹ್ಮಣರು ಈ ದೇಶಕ್ಕೆ ಕೊಟ್ಟ ನಿಜವಾದ ಕೊಡುಗೆ ಏನೂ ಇಲ್ಲವೇ? ಬರೀ ಕೆಟ್ಟದ್ದನ್ನು ಮಾತ್ರ ಕೊಟ್ಟರೇ? ಕೆಟ್ಟದ್ದ ಅನ್ನು ವಂಥದ್ದು ಇದ್ದರೆ ಅದಕ್ಕೆ ಬೇರೆ ಸಮುದಾಯಗಳ ಕೊಡುಗೆ ನಿಜಕ್ಕೂ ಏನೂ ಇಲ್ಲವೇ ಎಂಬ ಅಧ್ಯಯನ ನಿಜಕ್ಕೂ ಗಂಭೀರವಾಗಿ ನಡೆಯಬೇಕಿದೆ. ಯಾವುದೇ ಪೂರ್ವಗ್ರಹವಿಲ್ಲದೇ ಇಂಥ ಅಧ್ಯಯನ ನಡೆಯಬೇಕಾದ ಅಗತ್ಯ ಇಂದಿಗೂ ಹಾಗೆಯೇ ಉಳಿದಿದೆ. ಬ್ರಾಹ್ಮಣರು ಬರೀ ಕೆಟ್ಟದ್ದು ಮಾತ್ರ ಮಾಡಿದ್ದಾರೆಂದು ಸಾರ್ವಜನಿಕವಾಗಿ ಯಾರೂ ಹೇಳುವುದಿಲ್ಲ, ಬ್ರಾಹ್ಮಣರು ಎಂದಲ್ಲ, ಯವ ಸಮುದಾಯದ ಬಗ್ಗೆಯೂ ಇಂಥ ಮಾತನ್ನು ಹೇಳಲು ಸಾಧ್ಯವಲ್ಲ, ಅದು ಸಾಧುವೂ ಅಲ್ಲ. ಆದರೆ ಒಟ್ಟಾರೆ ಇಂಥ ಮನೋಧರ್ಮ ಈ ವಲಯಗಳಲ್ಲಿ ಇರುವುದು ಸುಳ್ಳಲ್ಲ, ಆದ್ದರಿಂದ ಸಾರ್ವಜನಿಕ ಸ್ವರೂಪದಲ್ಲಿ ಅನ್ಯರು ಇಂಥ ಕೆಲಸವನ್ನು ಈ ಸಮುದಾಯದ ಬಗ್ಗೆ ಮಾಡಲು ಮುಂದಾಗಲಾರರು. ಅದನ್ನು ನಿರೀಕ್ಷಿಸುವುದು ಕೂಡ ಸರಿಯಲ್ಲ. ಆದರೆ ಇಂಥ ಅಧ್ಯಯನಗಳು ಅನ್ಯರಿಂದ ನಡೆದರೆ ಅದರ ಬೆಲೆ ಹೆಚ್ಚು ಎಂಬುದರಲ್ಲಿ ಎರಡು ಮಾತಿಲ್ಲ. ದೇಶದಲ್ಲಿ ಈ ಗಾಗಲೇ ಹೇಳಿದಂತೆ ಬ್ರಾಹ್ಮಣ ಸಮುದಾಯದ ಬಗ್ಗೆ ವಸಾಹತು ಪ್ರಭಾವದಿಂದ ಅನೇಕ ಅಪ ಕಲ್ಪನೆಗಳಿವೆ ಅದರಲ್ಲೊಂದು ಈ ದೇಶದ ಅನಿಷ್ಟಗಳಿಗೆ ಬ್ರಾಹ್ಮಣರೇ ಕಾರಣ ಅನ್ನುವುದು ಒಂದು. ಇನ್ನೊಂದು ಬ್ರಾಹ್ಮಣರು ಕೇವಲ ಪೂಜೆ ಪೌರೋಹಿತ್ಯ ಮಾಡಿಕೊಂಡಿರುವವರು ಅನ್ನುವುದು. ಇದಕ್ಕೆ ಕಾರಣ ಬ್ರಟಿಷರು ಯೂರೋಪಿನ ತಮ್ಮ ಸಮಾಜದಲ್ಲಿದ್ದ ಪ್ರೀಸ್ಟ್ಗಳಿಗೆ ಸಮಾಂತರವಾಗಿ ಇಲ್ಲಿನ ಬ್ರಾಹ್ಮಣ ಸಮುದಾಯವನ್ನು ಕಂಡು ಅವರ ಅನುಭವವನ್ನು ಹಾಗೆಯೇ ಇಲ್ಲಿನ ಸಮಾಜಕ್ಕೆ ಆರೋಪಿಸಿದ್ದು. ತಮಾಷೆ ಅಂದರೆ ಬ್ರಿಟಿಷರ ಕಾಲದಲ್ಲಿಯೇ ವಿವಿಧ ಬ್ರಾಹ್ಮಣ ಸಮುದಾಯಗಳು ಬೇರೆ ಬೇರೆ ವೃತ್ತಿಗಳಲ್ಲಿದ್ದರು, ಅಷ್ಟಕ್ಕೂ ಅವರ ಆಡಳಿತದಲ್ಲಿ ಅವರ ಸರ್ಕಾರದಲ್ಲಿಯೇ ವಿವಿಧ ವೃತ್ತಿಗಳಲ್ಲಿ ಬ್ರಾಹ್ಮಣರಿದ್ದರು. ಸಾಲದ್ದಕ್ಕೆ ಹವ್ಯಕ, ಸಂಕೇತಿ ಮೊದಲಾದ ಬ್ರಾಹ್ಮಣ ಪಂಗಡಗಳು ತಲೆ ತಲಾಂತರದಿಂದ ಕೃಷಿಯನ್ನೇ ತಮ್ಮ ಕುಲ ಕಸುಬನ್ನಾಗಿ ಮಾಡಿಕೊಂಡು ಬಂದಿದ್ದಾರೆOಬುದು ಅವರ ದಾಖಲೆಗಳಲ್ಲೇ ಇದೆ. ಇಷ್ಟಾಗಿಯೂ ಅವರು ಬ್ರಾಹ್ಮಣರೆಂದರೆ ಬರೀ ಪೂಜೆ ಪೌರೋಹಿತ್ಯ ಮಾಡಿಕೊಂಡಿರುವವರು ಎಂದು ಬಿಂಬಿಸಿದರಲ್ಲದೇ ಈ ದೇಶದ ಎಲ್ಲ ಸಾಮಾಜಿಕ ಅನಿಷ್ಟಗಳಿಗೂ ಜಾತಿಯೇ ಕಾರಣ ಹಾಗೂ ಇದನ್ನು ಸೃಷ್ಟಿಸಿದವರೇ ಬ್ರಾಹ್ಮಣರು ಎಂಬ ಕಲ್ಪನೆಯನ್ನು ಬಲವಾಗಿ ಬಿತ್ತಿದರು. ಇದು ಇಂದು ಹೆಮ್ಮರವಾಗಿ ಬೆಳೆದುನಿಂತು ಸಾಕಷ್ಟು ಗೊಂದಲಗಳಿಗೂ ತಪ್ಪು ಕಲ್ಪನೆಗಳಿಗೂ ತಪ್ಪು ಸಾರ್ವಜನಿಕ ಗ್ರಹಿಕೆಗಳಿಗೂ ಕಾರಣವಾಗಿದೆ. ಬ್ರಾಹ್ಮಣರು ಈ ದೇಶದ ಆಧುನಿಕ ಬೆಳವಣಿಗೆಗೂ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಮೊದಲ ಪ್ರಧಾನಿ ನೆಹರೂ ಒಬ್ಬ ಬ್ರಾಹ್ಮಣ ಸಮುದಾಯದವರು ಅಂತೆಯೇ ಅಪರೂಪದ ರಾಜಕಾರಣಿ ಲಾಲ್ ಬಹದ್ದೂರ್‌ಶಾಸ್ತ್ರಿ, ರಾಜಾರಾಮ ಮೋಹನ್‌ರಾಯ್ ಇವರೆಲ್ಲ ಆಯಾ ಪ್ರದೇಶದಲ್ಲಿದ್ದ ಬ್ರಾಹ್ಮಣ ಪಂಗಡದವರೆಂಬುದನ್ನು ಮರೆಯಲಾಗದು. ಅಂತೆಯೇ ಬ್ರಾಹ್ಮಣ ಸಮುದಾಯ ಈ ದೇಶದ ಸಂಗೀತ, ಕಲೆ ಸಾಹಿತ್ಯಗಳಿಗೆ ಕೊಟ್ಟವರ ಪಟ್ಟಿ ಸಣ್ಣದಲ್ಲ, ಜೊತೆಗೆ ಈ ದೇಶ ಕಂಡ ಅಸಾಧಾರಣ ಸಾಮಾಜಿಕ ಕ್ರಾಂತಿಕಾರ, ಸಮಾನತೆಯ ಹರಿಕಾರ ರಾದ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರು ಹಾಗೆ ಬಂದಿದ್ದೇ ಅವರ ಒಬ್ಬ ಬ್ರಾಹ್ಮಣ ಸಮುದಾಯದ ಶಿಕ್ಷಕರಿಂದ ಎಂಬುದನ್ನೂ ಮರೆಯಲಾಗದು. ಅಂಬೇಡ್ಕರ್ ಅವರ ಶಾಲಾ ದಾಖಲೆಗಳಲ್ಲಿ ಅವರ ಮೊದಲ ಮೂಲ ಹೆಸರು ಅಂಬಡವೇಕರ್ ಎಂದಿದ್ದು ಅದು ಅವರ ಶಿಕ್ಷಕರದ ಕೃಷ್ಣಜಿ ಕೇಶವ್ ಅಂಬೇಡ್ಕರ್ ಅವರ ಕಾರಣದಿಂದ ಅಂಬೇಡ್ಕರ್ ಎಂದು ಬದಲಾಯಿತು ಅನ್ನಲಾಗಿದೆ. ಅಲ್ಲದೇ ಸ್ವತಃ ಅಂಬೇಡ್ಕರ್ ಅವರಿಗೂ ಈ ದೇಶದ ಒಂದು ಸಮುದಾಯವಾದ ಬ್ರಾಹ್ಮಣರ ಬಗ್ಗೆ ಸ್ವತಃ ಅಂಬೇಡ್ಕರ್ ಅವರಿಗೆ ಯಾವುದೇ ಪೂರ್ವಗ್ರಹಗಳಿರಲಿಲ್ಲ. ದೇಶದಲ್ಲಿರುವ ಇಷ್ಟೊಂದು ಜಾತಿಗಳ ಸೃಷ್ಟಿ ಕೇವಲ ಬ್ರಾಹ್ಮಣರಿಂದ ಮಾತ್ರ ಆಗಿದೆ ಎಂಬುದನ್ನು ಅವರು ಒಪ್ಪುವುದಿಲ್ಲ, ಅನುಮೋದಿಸುವುದೂ ಇಲ್ಲ (ನೋಡಿ-(ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆಹಗಳು-ಭಾಷಣಗಳು, ಸಂಪುಟ ೧, ಪುಟ೧೮-೨೭, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ೨೦೧೮,). ಕನ್ನಡದಲ್ಲಿ ಇನ್ನೊಂದು ತಪ್ಪು ಗ್ರಹಿಕೆ ಹೆಚ್ಚು ಜನಪ್ರಿಯವಾಗಿದೆ. ಅದೆಂದರೆ ಈ ದೇಶದಲ್ಲಿ ಬ್ರಿಟಿಷರೇ ಮೊದಲು ಎಲ್ಲರಿಗೂ ಶಿಕ್ಷಣ ಕೊಟ್ಟವರು ಎಂಬುದು. ತಮಾಷೆ ಅಂದರೆ ಕುವೆಂಪು ಅವರಂಥವರು ಕೂಡ ಇಂಥ ಮಾತಿಗೆ ಓಗೊಡುತ್ತಾರೆ. ಆದರೆ ಸ್ವತಃ ಕುವೆಂಪು ಅವರೇ ಬ್ರಿಟಿಷ್ ಶಿಕ್ಷಣ ಬರುವ ಮುಂಚೆಯೇ ಸಾಂಪ್ರದಾಯಿಕ ಕೂಲಿ ಮಠದಲ್ಲಿ ಪಡೆದುಕೊಂಡಿದ್ದರು. ಆದರೆ ಕುವೆಂಪು ಅವರು ಒಂದೆಡೆ ಬ್ರಿಟಿಷರು ಬಾರದಿದ್ದರೆ ತಾವು ಎಲ್ಲೋ ದನ ಕುರಿ ಮೇಯಿಸಿಕೊಂಡು ಇರಬೇಕಾಗುತ್ತಿತ್ತು ಅಂದಿದ್ದಾರೆ ಹಾಗೂ ಅವರ ಮೇರು ಕೃತಿ ರಾಮಾಯಣ ದರ್ಶನಂ ಅನ್ನು ತಮ್ಮ ಪ್ರೀತಿಯ ಗುರುಗಳಾದ ಬ್ರಾಹ್ಮಣ ಸಮುದಾಯದ ಟಿ ಎಸ್ ವೆಂಕಣ್ಣಯ್ಯ ಅವರಿಗೆ ಅರ್ಪಿಸಿದ್ದಾರೆ. ವೆಂಕಣ್ಣಯ್ಯ ಹಗೂ ಅವರ ಸಹೋದರ ತ ಸು ಶ್ಶಾಮರಾವ್ ಅವರು ಜಾತಿ ಮತ ನೋಡದೇ ಅಸಂಖ್ಯ ವಿದ್ಯಾರ್ಥಗಳಿಗೆ ಊಟ ವಸತಿ ಒದಗಿಸಿದ್ದು ಕೂಡ ಅವರ ಗಮನದಲ್ಲಿತ್ತು. ಆದರೆ ಕುವೆಂಪು ಅವರಿಗೆ ಸಂಬಂಧಿಸಿದ ಇಂಥ ವಿವರಗಳ ಅರಿವಿಲ್ಲದ ತರುವಾಯದ ಜನ ಅವರ ಮಾತನ್ನು ಬ್ರಾಹ್ಮಣೇತರರಿಗೆ ಆರೋಪಿಸಿ ಎಲ್ಲರಿಗೂ ಶಿಕ್ಷಣ ಸಿಗದಂತೆ ಮಾಡಿದ್ದು ಬ್ರಾಹ್ಮಣರು ಎಂದು ಭಾವಿಸಿ ಹಾಗೆಯೇ ಪ್ರಚಾರ ಮಾಡುತ್ತ ಬಂದರು. ಕುವೆಂಪು ಅವರು ಹೀಗೆ ಹೇಳಿಲ್ಲ. ಇವೆಲ್ಲ ಹಾಗಿರಲಿ. ಈಗ ಮತ್ತೆ ಈ ಕೃತಿಯ ಕಡೆಗೆ ಬರೋಣ. ಪ್ರಸ್ತುತ ಕೃತಿಯಲ್ಲಿ ಕರ್ನಾಟಕದ ಸ್ಮಾರ್ತ ಬ್ರಾಹ್ಮಣರನ್ನು ಗಮನದಲ್ಲಿಟ್ಟುಕೊಂಡು ಅದರೊಳಗಿನ ಉಪ ಪಂಗಡಗಳ ವಿಶಿಷ್ಟ ಮಾಹಿತಿಗಳ ವಿವರ ಕೊಡಲಾಗಿದೆ. ಈ ಕೃತಿಯನ್ನು ಗಮನಿಸಿದರೆ ಇಂಥ ಕೃತಿ ದೇಶದ ಎಲ್ಲ ಸಮುದಾಯಗಳಲ್ಲೂ ಹೊರಬರುವ ಅಗತ್ಯವಿದೆ ಅನಿಸುತ್ತದೆ. ಏಕೆಂದರೆ ನಮ್ಮ ದೇಶದ ವೈವಿಧ್ಯ ಇರುವುದೇ ವಿವಿಧತೆ ಹಾಗೂ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರತ್ಯೇಕತೆಯಲ್ಲಿ. ಹಾಗೆ ನೋಡಿದರೆ ವಿವಿಧತೆ ನಿಸರ್ಗ ಸಹಜ. ಪ್ರಕೃತಿಯಲ್ಲಿ ಯಾವುದನ್ನೇ ಗಮನಿಸಿ. ಕಾಡು-ಮೇಡು, ನದಿ, ಪ್ರಾಣಿ ಪಕ್ಷಿ ಇತಾದಿ. ಇವುಗಳಲ್ಲಿ ಯಾವುದೂ ಒಂದರಂತೆ ಇನ್ನೊಂದಿಲ್ಲ. ಏಕ ರೂಪತೆ ಇದ್ದರೆ ವಿನಾಶ ಹತ್ತುರ ಬರುತ್ತದೆ ಎಂಬುದೂ ಸುಳ್ಳಲ್ಲ. ಇದಕ್ಕೆ ನಿಸರ್ಗವೇ ಮಾದರಿ ತೋರಿಸುತ್ತದೆ. ಒಂದು ಉದಾಹರಣೆ ಕೊಡಬೇಕೆಂದರೆ, ನಾಗರಹೊಳೆ, ಹುಣಸೂರು ಸುತ್ತುಮುತ್ತ ಸಾಗುವಾನಿ ಪ್ಲಾಂಟೇಶನ್ ಬೆಳೆಸಲಾಗಿತ್ತು. ನಾಗರಹೊಳೆಯಲ್ಲಿ ಅವನ್ನು ಮಿಶ್ರ ಕಾಡುಗಳಲ್ಲಿ ಬೆಳೆಸಲಾಗಿತ್ತು. ಆದರೆ ಹುಣಸೂರಲ್ಲಿ ಬರೀ ಸಾಗುವಾನಿಯನ್ನು ಮಾತ್ರ ಬೆಳೆಸಲಾಗಿತ್ತು. ಬರೀ ಸಾಗುವಾನಿ ಇದ್ದ ಕಾಡಿನಲ್ಲಿ ಮರಗಳಿಗೆ ಒಂದು ಬಗೆಯ ಕೀಟ ಮರಗಳಿಗೆ ಹತ್ತಿ ಅವನ್ನು ತಿನ್ನಲಾರಂಭಿಸಿದ್ದವು, ಸಾಲದ್ದಕ್ಕೆ ಮತಗಳು ಅಂಕುಡೊOಕಾಗಿ ಬೆಳೆದಿದ್ದವು. ಆದರೆ ಮಿಶ್ರ ಕಾಡಲ್ಲಿದ್ದ ಮರಗಳಿಗೆ ಏನೂ ಆಗದೇ ಅವು ನೇರ ಬೆಳೆದಿದ್ದವು. ಕಾರಣ ಹುಡುಕಿದಾಗ ಮಿಶ್ರ ಕಾಡಲ್ಲಿದ್ದ ಇತರೆ ಮರಗಳು ಕೀಟಗಳಿಗೆ ಬಾಧೆ ಉಂಟು ಮಾಡಿ ಅವನ್ನು ತಡೆದಿದ್ದವು. ಅಂದರೆ ವೈವಿಧ್ಯದಿಂದ ಉಳಿಗಾಲ ಎಂದರ್ಥ. ನಮ್ಮ ಸಮಾಜದಲ್ಲೂ ಮೇಲ್ನೋಟಕ್ಕೆ ಬ್ರಾಹ್ಮಣ ಸಮುದಾಯದ ಸ್ಮಾರ್ತ ಪಂಗಡ ಅಂದರೂ ಅದರೊಳಗೆ ೨೮ಕ್ಕೂ ಹೆಚ್ಚು ಉಪ ಪಂಗಡಗಳಿವೆ. ದೇಶಾದ್ಯಂತ ಕೇವಲ ಬ್ರಾಹ್ಮಣ ಸಮುದಾಯದಲ್ಲಿ ೪೩೦ಕ್ಕೂ ಹೆಚ್ಚು ಉಪ ಪಂಗಡಗಳಿವೆ. ಆದರೆ ಇವುಗಳ ಒಳಗೆ ಕೆಲವು ಸಂಪ್ರದಾಯ ಆಚರಣೆಗಳಲ್ಲಿ ಸಮಾನತೆ ಕಾಣಬಹುದು, ಆದರೂ ಅವು ಅನನ್ಯವಾಗಿವೆ. ನಮ್ಮ ಸಮಾಜದ ಬೆಳವಣಿಗೆಗೆ ಇಂಥ ವೈವಿಧ್ಯವೇ ಕಾರಣ.
ಕೇವಲ ಬ್ರಾಹ್ಮಣ ಸಮುದಾಯದಲ್ಲೇ ಇಷ್ಟು ವೈವಿಧ್ಯ ಇಷ್ಟು ಇರಬೇಕಾದರೆ ಇನ್ನು ದೇಶಾದ್ಯಂತ ಇರುವ ನೂರಾರು ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯ ಇನ್ನು ಹೇಗಿರಬೇಡ? ಇದು ಕೇವಲ ಸಾಮಾಜಿಕ ಮತ್ತು ಮಾನವ ಶಾಸ್ತ್ರೀಯ ಅಧ್ಯಯನದ ಕುತೂಹಲ ಮಾತ್ರ. ಇಂಥ ಅಧ್ಯಯನಗಳು ಎಲ್ಲ ಸಮುದಾತಗಳಲ್ಲೂ ನಡೆದರೆ ಆಗ ನಮ್ಮ ದೇಶದ ವಿವಿಧತೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ. ಆದರೆ ನಮ್ಮದು ಜಾತ್ಯತೀತ ಸಮಾಜ ಅನ್ನುತ್ತಾ ಇಂಥ ಜಾತಿ ಪಂಗಡಗಳ ಅಧ್ಯಯನಕ್ಕೆ ಅಡ್ಡಗಾಲು ಹಾಕುವವರು ರಾಜಕೀಯ ಕಾರಣಕ್ಕೆ ಇಂಥ ಅಧ್ಯಯನ ನಡೆಯುವುದನ್ನು ವಿರೋಧಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಈ ಕೃತಿಯಲ್ಲಿ ಗಮನಿಸಿದ ಎಲ್ಲ ಪಂಗಡಗಳ ಅಧ್ಯಯನಕ್ಕೂ ಒಂದು ಏಕರೂಪತೆ ಬರುವಂತೆ ಕಾಪಾಡಿಕೊಳ್ಳಲಾಗಿದೆಯಾದರೂ ಅದರ ವ್ಯಾಪ್ತಿ ಸೀಮಿತವಾಗಿದೆ. ಸಂಪಾದಕರು ತಮ್ಮ ಮಾತಿನಲ್ಲಿ ಹೇಳಿಕೊಂಡಂತೆ ಇದು ಸವಾಲಿನ ಕೆಲಸವಾಗಿದ್ದ ಕಾರಣ ಭಾಷೆ, ಮೂಲ, ಹಿರಿಯರ ಬದುಕಿನ ಥೂಲ ಚಿತ್ರಣಗಳು ಸೇರಿವೆಯಾದರೂ ಆಯಾ ಪಂಗಡಗಳ ಕಲೆ ಸಂಸ್ಕೃತಿಯ ಕೊಡುಗೆ, ಜನಸಂಖ್ಯಾ ವಿವರ, ಸಾಧನೆ-ಸಾಧಕರ ವಿವರ, ಕಾಕ ವೈವಿಧ್ಯ, ವೇಷ ಭೂಷಣ ಇತ್ಯಾದಿ, ಸಂಗತಿಗಳನ್ನು ಸಮಾನವಾಗಿ ಕೊಡಬೇಕಾಗಿತ್ತು ಅನಿಸುತ್ತದೆ. ಏಕೆಂದರೆ ಕೆಲವು ದೊಡ್ಡ ಹಬ್ಬ ಹರಿದಿನಗಳ ಆಚರಣೆಯಲ್ಲಿ ಇವರೊಳಗೆ ಸಮಾನತೆ ಕಾಣಿಸಿದರೂ ಅವರ ಅನನ್ಯತೆ ಇರುವುದು ಕೆಲವು ಸೂಕ್ಷ್ಮ ಸಂಗತಿಗಳಲ್ಲಿ ಅವುಗಳ ಪಾಕ ವೈವಿಧ್ಯದಲ್ಲಿ. ಅಲ್ಲದೇ ಕೆಲವು ಪಂಗಡಗಳು ಉದಾಹರಣೆಗೆ ಹವ್ಯಕರು ಮತ್ತು ಸಂಕೇತಿಗಳು ಹೊಯ್ಸಳ ಕರ್ನಾಟಕ ದಂಥ ಪಂಗಡಗಳು ಕೃಷಿಯನ್ನು ಕುಲ ಕಸುಬಾಗಿ ನಡೆಸುತ್ತ ಬಂದಿದ್ದರೂ ಇವರ ವಾಸಸ್ಥಳ ಭಿನ್ನವಾದ ಕಾರಣಕ್ಕೋ ಏನೋ ಇವರ ಸಂಪ್ರದಾಯ, ಆಚರಣೆ ಮತ್ತು ಪಾಕ ವೈವಿಧ್ಯದಲ್ಲಿ ಸಾಕಷ್ಟು ಅಂತರವಿದೆ, ಕೆಲವು ಸಾಮ್ಯಗಳಿವೆ. ಭಾಷೆಯಂತೂ ಪೂರ್ತಿ ಭಿನ್ನವಾಗಿದೆ. ಇಂಥ ವ್ಯತ್ಯಾಸವನ್ನು ಗುರುತಿಸುವುದು ಇಂಥ ಅಧ್ಯಯನದಲ್ಲಿ ಮಾತ್ರ ಬರಲು ಸಾಧ್ಯ. ಅದರ ಕೊರತೆ ಇಲ್ಲಿ ಕಾಣುತ್ತದೆ. ಅದಿರಲಿ, ಜೊತೆಗೆ ಹಾಸನ ಸುತ್ತುಮುತ್ತಲಿನ ಬಬ್ಬೂರ ಕಮ್ಮೆ, ಸಂಕೇತಿ ಸಮುದಾಯದ ಜನರು ಸಂಗೀತ ಸಾಹಿತ್ಯ, ಗಮಕ ಇತ್ಯಾದಿ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಗೈದಿದ್ದಾರೆ, ಕರಾವಳಿ, ಮಲೆನಾಡು ಪ್ರದೇಶದ ಹವ್ಯಕ ಜನರು ಯಕ್ಷಗಾನ, ತಾಳಮದ್ದಲರಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ, ಇಂಥ ಸಮುದಾಯದ ವಿಶೇಷತೆ ಮತ್ತು ಅಂಥ ಸಾಧಕರ ಪ್ರಶಸ್ತಿ ಗೌರವಗಳ ಸಣ್ಣ ಪಟ್ಟಿಯನ್ನಾದರೂ ಒದಗಿಸುವ ಯತ್ನ ಇಲ್ಲಿ ಆಗಬಹುದಿತ್ತು ಅನಿಸುತ್ತದೆ. ಏಕೆಂದರೆ ಇಂಥ ಸಶಧಕರು ಸಾಮಾನ್ಯದವರಲ್ಲ, ಅಂತಾರಾಷ್ಟç ಮಟ್ಟದಲ್ಲಿ ಹೆಸರು ಮಾಡಿದವರು. ಇಂಥ ಮಾಹಿತಿ ಇಂಥ ಕೃತಿಯಲ್ಲಿ ಅಪೇಕ್ಷಣೀಯವಾಗಿರುತ್ತದೆಯಲ್ಲವೇ? ಆದರೆ ಇದರಲ್ಲಿನ ಕೆಲವು ವಿದ್ವಾಂಸರ ಬರೆಹಗಳು ಅದರಲ್ಲೂ ಮಾನ್ಯ ಟಿ ವಿ ವೆಂಕಟಾಚಲ ಶಾಸ್ತಿçÃಗಳು, ಶತಾವಧಾನಿ ಗಣೇಶ್, ವಿಜ್ಞಾನಿ ಆಕಾಶ್ ಬಾಲಕೃಷ್ಣ ರಂಥವರ ಬರೆಹಗಳು ಗಮನಾರ್ಹವಾಗಿವೆ. ಆದರೆ ಇಲ್ಲಿರುವ ಎಲ್ಲ ೩೪ ಬರಹಗಳಲ್ಲಿ ಏಕರೂಪತೆ ಇಲ್ಲ, ಕೆಲವು ಬರೆಹಗಳಲ್ಲಿ ಮಾಹಿತಿಗಳ ಭಾರವಿದ್ದರೆ ಇನ್ನು ಕೆಲವು ಮಾಹಿತಿಗಳ ಕೊರತೆಯಿಂದ ಬಳಲುತ್ತಿವೆ. ವೈವಿಧ್ಯಮಯ ಬರಹಗಳು ಸ್ವೀಕಾರಾರ್ಹ ಅನಿಸಿದರೂ ಜನಸಂಖ್ಯೆ, ಹಿರಿಯರು ಸಾಧಕರು ಇತ್ಯಾದಿ ಕೆಲವು ಸಂಗತಿಗಳು ಅಗತ್ಯವಾಗಿವಾಗಿ ಏಕರೂಪತೆಯಲ್ಲಿರಬೇಕಿತ್ತು ಅನಿಸುತ್ತದೆ. ಇಷ್ಟಾಗಿಯೂ ಈ ಕೃತಿಯಲ್ಲಿ ಕೆಲವು ಅಭೂತಪೂರ್ವ ಮಾಹಿತಿಗಳು ಒಂದೆಡೆ ದಾಖಲಾಗಿವೆ, ಉದಾಹರಣೆಗೆ ಕ್ರಿ. ಶ. ೩ನೆಯ ಶತಮಾನದವರೆಗೆ ದಕ್ಷಿಣ ಭಾಗದಲ್ಲಿ ಬ್ರಾಹ್ಮಣರೇ ಇರಲಿಲ್ಲ ಹಾಗೂ ಇದ್ದರೆಂಬ ಶಾಸನಾಧಾರಿತ ಚರ್ಚೆಗಳು, ಮೊದಲು ಇವರನ್ನು ಅಹಿಚ್ಛತ್ರದಿಂದ ಕದಂಬರು ಕರೆತಂದರು, ಅವರು ಶೈವ ಮತ ಅನುಸರಿಸುತ್ತಿದ್ದ ಸ್ಮಾರ್ತರಾಗಿದ್ದು ಕ್ರಮೇಣ ವೇದಾಂತ ಸಿದ್ಧಾಂತಗಳು ಬೆಳೆದಂತೆ, ಅದನ್ನು ಅನುಸರಿಸಿ ಅನ್ಯಾನ್ಯ ಪಂಗಡಗಳು ಕಾಣಿಸಿಕೊಂಡಿವೆ ಅನ್ನುವ ಮಾಹಿತಿ ಒದಗಿಸುವ ಬರೆಹಗಳು ಗಮನ ಸೆಳೆಯುತ್ತವೆ, ಚಿಂತನೆಗೆ ಹಚ್ಚುತ್ತವೆ. ಕರ್ನಾಟಕದಲ್ಲಿ ಬ್ರಾಹ್ಮಣರು ಮೊದಲು ಇಂದಿನ ಶಿವಮೊಗ್ಗದ ತಾಳಗುಂದದಲ್ಲಿ ನೆಲೆಯಾಗಿದ್ದರು. ಕ್ರಿ. ಶ, ೧ ಮತ್ತು ೩ನೆಯ ಶತಮಾನದ ವೇಳೆಗೆ ಇವರೆಲ್ಲ ಹರಡಿಕೊಳ್ಳಲು ಆರಂಭಿಸಿದರು ಇದಕ್ಕಿರುವ ಕಾರಣಗಳು ಹಲವು ಎಂಬ ಚರ್ಚೆಗಳಿಗೂ ಸಾಕಷ್ಟು ಅವಕಾಶ ದೊರೆತಿದೆ. ಇಂಥ ಮಾಹಿತಿಗಳು ಒಂದೇ ಕಡೆ ದೊರಕುವುದು ದುರ್ಲಭ. ಇದಕ್ಕೆ ಮಳವಳ್ಳಿ ಶಾಸನ, ಹಿರೇ ಮಗಳೂರಿನ ಶಾಸನ ಮತ್ತು ಮಾಧವಪುರದ ಶಾಸನಗಳ ಆಧಾರ ಕೊಡಲಾಗಿದ್ದು ಆಸಕ್ತರಿಗೆ ಇವು ಸಮೃದ್ಧ ಆಹಾರ ಒದಗಿಸುತ್ತವೆ.
ಸಮೃದ್ಧ ಮಾಹಿತಿಯೊಂದಿಗೆ ಗಂಭೀರ ಅಧ್ಯಯನದಂತೆ ಹೊರಬಂದಿರುವ ಒಂದೊOದೂ ಲೇಖನಗಳನ್ನು ಓದಿದಾಗ ಇಷ್ಟೆಲ್ಲ ಇದೆಯಾ ಅನಿಸುತ್ತದೆ. ಇದನ್ನು ಬ್ರಾಹ್ಮಣ ಸಮುದಾಯದ ಪ್ರತಿಯೊಬ್ಬರೂ ಓದಿ ತಿಳಿಯಬೇಕಿದೆ ಜೊತೆಗೆ ಇತರೆ ಬ್ರಾಹ್ಮಣ ಸಮುದಾಯದೊಳಗಿನ ತರ ಒಳಪಂಗಡಗಳ ಬಗ್ಗೆಯೂ ಇಂಥ ಕೆಲಸ ನಡೆಯಬೇಕಿದೆ. ಇದರಿಂದ ಸಮುದಾಯವೊಂದರ ಬಗ್ಗೆ ಬದಲಾಗುತ್ತಿರುವ ಅನೇಕಾನೇಕ ಸಂಗತಿಗಳು ಕೈಬಿಟ್ಟುಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ಬಗೆಯ ಕೃತಿಗಳು ಹೊರಬಂದಲ್ಲಿ ಪಂಗಡಗಳ ಸಣ್ಣಪುಟ್ಟ ಮಾಹಿತಿಗಳು ಒಂದೆಡೆ ದಾಖಲಾಗಿ ಅದು ಐತಿಹಾಸಿಕ ಮಹತ್ವ ಪಡೆಯುತ್ತದೆ. ಆದ್ದರಿಂದ ಆದಷ್ಟು ಬೇಗ ಇಂಥ ಕೆಲಸಗಳು ಉಳಿದ ಎಲ್ಲ ಸಮುದಾಯಗಳಲ್ಲೂ ನಡೆಯುವ ಅಗತ್ಯವಿದೆ. ಮುಂದಿನ ತಲೆಮಾರುಗಳಿಗೆ ಇದು ಉಪಯುಕ್ತವಾಗುತ್ತದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವದ ಅರಿವಾಗುತ್ತದೆ. ಅಂಥದ್ದೊOದು ಮಾರ್ಗವನ್ನು ಈ ಕೃತಿ ತೆರೆದಿಟ್ಟಿದೆ. ಲೇಖನ ಬರೆದ ಮಹನೀಯರು, ಕೃತಿಯ ಸಂಪಾದಕರೆಲ್ಲರೂ ಅಭಿನಂದನಾರ್ಹರು. ಇಂಥ ಗಂಭೀರ ಕೃತಿಯೊಂದು ಮೊದಲು ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ಎರಡನೆಯ ಮುದ್ರಣ ಕಂಡಿದೆ ಎಂಬುದೇ ಇದರ ಹೆಗ್ಳಿಕೆಯನ್ನು ತೋರಿಸುತ್ತದೆ.
ಕೃತಿಯ ಹೆಸರು-ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು, ನೆಲೆ- ಹಿನ್ನೆಲೆ,
ಟಿ ಆರ್ ಅನಂತರಾಮು (ಸಂ),
ಅರಿವು ಬುಕ್ಸ್, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ಬೆಂಗಳೂರು, ಪುಟಗಳು-೧೮+೫೬೨, ಜಿ ಎಸ್ ಎಂ ೧/೪ ಮ್ಯಾಪ್ಲಿತೋ ಕ್ರೌನ್
ಬೆಲೆ-೮೦೦ರೂ. ಮುದ್ರಣ-೨೦೨೩.
No comments:
Post a Comment