Wednesday, 23 July 2025

ಜಿಎಸ್‌ಟಿಯ ಹಿಂದೆ ಮುಂದೆ


ಇದೀಗ ನಮ್ಮ ರಾಜ್ಯದಲ್ಲಿ ಕಿರು ಉದ್ದಿಮೆಗಳೆಂದು ಪರಿಗಣಿತವಾದ ಉದ್ದಿಮೆದಾರರು ಅವರಿಗೆ ಜಿಎಸ್ ಟಿ ಅಥವಾ (ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ, ಹೌದು ಇದರಲ್ಲಿ ಪ್ರತಿಭಟನಾಕಾರರ ನ್ಯಾಯದ ಬೇಡಿಕೆ ಕಂದಾಯ ಇಲಾಖೆಯ ಅನ್ಯಾಯದ ಆಗ್ರಹವಿದೆ. ಅಷ್ಟಕ್ಕೂ ಈ ಎಂ.ಎಸ್.ಎಂ.ಇ. ಅಂದರೆ ಏನು - ಸ್ಮಾಲ್ ಆಂಡ್ ಮೀಡಿಯಂ ಸ್ಕೇಲ್ ಆಂತ್ರಪ್ರೈಸಸ್ - ಇದರ ವ್ಯಾಪ್ತಿ ಬಹಳ ದೊಡ್ಡದು, ಇದರಲ್ಲಿ ಸಣ್ಣಪುಟ್ಟ ವೈದ್ಯಕೀಯ ಉಪಕರಣಗಳಾದ ಪಲ್ಸ್ ರೀಡಿಂಗ್ ಉಪಕರಣದಿಂದ ಹಿಡಿದು ರಸ್ತೆ ಬದಿಯ ಚಾ ಅಂಗಡಿವರೆಗೆ ಏನೆಲ್ಲ ಬರಬಹುದು. ಇದೇ ರೀತಿ ಮಹಾ ನಗರಗಳಲ್ಲಿನ ಸಗಟು ಹೂವು ವ್ಯಾಪಾರ ಕೂಡ, ಲಕ್ಷಾಂತರ ಬೆಲೆಯ ಹೂವಿನ ವ್ತಾಪಾರ ಮಾಡುವ ವ್ಯಾಪಾರಿಗಳು ಒಂದೆಡೆಯಾದರೆ ಬೀದಿಯಲ್ಲಿ ಕುಕ್ಕೆಯಲ್ಲಿ ಬಿಡಿಯಾಗಿ ಮಾರಾಟ ಮಾಡುವವರು ಬೇರೆ, ಇವರನ್ನೆಲ್ಲ ಒಂದೇ ಅನ್ನಲಾಗದು ಹಾಗೆಯೇ ದೊಡ್ಡ ವಿಂಡ್ಸರ್ ಮ್ಯಾನರ್ ಇದ್ದಂತೆ ಬೀದಿ ಬದಿಯ ಗಾಡಿ ಹೋಟೆಲ್ ಕೂಡ ಇದೆ, ಹೊಟೇಲ್ ಉದ್ಯಮ, ಉದ್ಯಮಿಗಳೆಲ್ಲ ಒಂದೇ ಅನ್ನಲಾಗದು. ಅಂತೆಯೇ ದೊಡ್ಡ ದೊಡ್ಡ ಮಾಲ್ ಗಳಿಗೆ ಬದಲಾಗಿ ಹಾದಿ ಬೀದಿಯಲ್ಲಿ ಸಣ್ಣ ಕಿರಾಣಿ ಅಂಗಡಿಗಳಿವೆ. ಇವೆಲ್ಲ ಒಂದೇ ಅಲ್ಲ, ಆದ್ದರಿಂದ ಇವುಗಳ ತೆರಿಗೆ ವವಿಧ ಬಗೆಯಲ್ಲಿರುತ್ತದೆ, ಅದರಲ್ಲೂ ದಿನಬ ನಿತ್ಯದ ಅಗತ್ಯ ವಸ್ತುಗಳಿಗೆ ತೆರಿಗೆ ವಿನಾಯ್ತಿ ಇದೆ, ಹಾಲು ವಿನಾಯ್ತಿ ಪಡೆದರೆ, ಅದರ ಉಪ ಉತ್ಪನ್ನಗಳಿಗೆ ತೆರಿಗೆ ಇದೆ, ಹೀಗೆ ಗಮನಿಸಬೇಕಾದ ವಿಷಯಗಳಿ ಇಲ್ಲಿ ಬಹಳ ಇವೆ, ವ್ಯಾಪಾರಿಗಳೂ ಅಷ್ಟೇ, ಈ ಬಗೆಯ ವ್ಯಾಪಾರದಲ್ಲಿ ಅನಕ್ಷರಸ್ಥರಿಂದ ಹಿಡಿದು ವಾಣಿಜ್ಯ ಪದವೀಧರರಿದ್ದಾರೆ, ಈ ಕಾರಣಕ್ಕಾಗಿ ಗುಜರಾತ್ ಸಿಎಂ ಆಗಿದ್ದಾಗ ಜಿಎಸ್ ಟಿಯನ್ನು ತೀವ್ರವಾಗಿ ವಿರೋಧಿಸಿದ್ದ ಸ್ವತಃ ಮೋದಿ ಪಿಎಂ ಆಗುತ್ತಿದ್ದಂತೆ ಇದನ್ನು ಖುದ್ದು ಜಾರಿ ಮಾಡಿದ್ದಾರೆ, ಹೀಗೆ ಒಂದೇ ಪಕ್ಷದಲ್ಲಿ ಇದರ ಪರ ವಿರೋಧ ಜನರಿದ್ದಾರೆ, ಸ್ವತಃ ಜಿಎಸ್ ಟಿ ನಿಯಮ ರೂಪಿಸಿದ ಎಡಪಕ್ಷ ಈಗ ಅದನ್ನು ವಿರೋಧಿಸುತ್ತಿದೆ, ಕಾಂಗ್ರೆಸ್ ನ ಚಿದಂಬರಂ ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದರೆ ಇಂದು ಕಾಂಗ್ರೆಸ್ ವಿರೋಧಿಸುತ್ತಿದೆ, ಆದ್ದರಿಂದ ಜಿಎಸ್ ಟಿ ಕುರಿತು ಹೇಳುವ ವಿಷಯ ಬಹಳವಿದೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಕಿರು ಉದ್ಯಮದವರಿಗೆ ಕೊಟ್ಟ ನೋಟಿಸ್ ಗೆ ಪ್ರತಿಯಾಗಿ ಸಣ್ಣಪ್ರಮಾಣದ ಪ್ರತಿಭಟನೆ ನಡೆಸಿದ ಕಿರು ಉದ್ದಿಮೆದಾರರು ಇದೇ ೨೫ರಂದು ದೊಡ್ಡ ಪ್ರತಿಭಟನೆ ಮಾಡುತ್ತೇವೆ ಅಂದ ಕೂಡಲೇ ರಾಜ್ಯಸರ್ಕಾರ ಇಲ್ಲ ನೋಟಿಸ್ ಕೊಟ್ಟಿದ್ದರೂ ಮುಂದಿನ ಕ್ರಮವಿಲ್ಲ ಎಂದು , ಹಿಂಬಾಕಿ ಅನ್ವಯವಿಲ್ಲ ಎಂದು ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಹಾಗೂ ಯುಪಿಐ ಮೂಲಕ ಹಣ ಸಂಗ್ರಹಿಸುವ ಉದ್ದಿಮೆದಾರರಿಗೂ ನಿಟ್ಟುಸಿರು ಬಿಡುವಂತೆ ಮಾಡಿದ ಕಾರಣ ಪ್ರತಿಭಟನೆಯನ್ನು ಉದ್ದಿಮೆದಾರರು ಕೈಬಿಟ್ಟಿದ್ದಾರೆ.

 ಹಾಗಾಗಿ ಈ ವಲಯ ದೇಶದ ಆರ್ಥಿಕತೆಯ ಅಥವಾ ಜಿಡಿಪಿಯ ಶೇ. ೪೦ರಷ್ಟು ಆದಾಯದ ಮೂಲವಾಗಿದೆ, ಒಂದು ಸಂಗತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು, ನಮ್ಮ ದೇಶ ಎಷ್ಟು ವೈವಿಧ್ಯಮಯ ಎಂಬುದನ್ನು ನೋಡಲು ಈ ಜಿಎಸ್‌ಟಿ ನೋಡಿದರೆ ಸಾಕು, ಒಂದು ಉದಾಹರಣೆ ನೋಡೋಣ. ಹೇರ್ ಕಟಿಂಗ್ ಸಲೂನ್ ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ಆದರೆ ಎಲ್ಲ ಕ್ಷೌರಿಕರ ಸಂಪಾದನೆ ಒಂದೇ ಬಗೆ ಆಗಿರುವುದಿಲ್ಲ, ಬೆಂಗಳೂರಿನ ಎಂಜಿ ರಸ್ತೆಯ ಒಂದು ಸೆಲೂನ್ ಮಾಲಿಕ ಯಾವ ದೊಡ್ಡ ಉದ್ದಿಮೆದಾರನಿಗೂ ಕಡಿಮೆ ಇಲ್ಲ. ಇವರ ಬಳಿ ಪ್ರಪಂಚದ ಅತ್ಯಂತ ಹೊಸ ಬ್ರಾಂಡಿನ ಅತಿ ದುಬಾರಿಯ ಪೋರ್ಷೆ, ರೋಲ್ಸ್ ರಾಯ್ ಕಾರುಗಳಿಂದ ಹಿಡಿದು ಏನೆಲ್ಲ ಇವೆ, ಹಾಗಂತ ಅವರು ಅಷ್ಟು ತೆರಿಗೆಯನ್ನೂ ಕಟ್ಟಬಹುದು, ಹಾಗೆಯೇ ಅತ್ಯಾಧುನಿಕ ಮಸಾಜ್ ಪಾರ್ಲರ್ ಗಳಾದ ಸ್ಪಾ ಸೆಂಟರ್‌ಗಳು ಕೂಡ ಅಸಾಧಾರಣ ಸಂಪಾದನೆ ಮಾಡುತ್ತವೆ, ಅಂತೆಯೇ ಜಯನಗರ ಕಾಂಪ್ಲೆಕ್ಸ್ ಬಳಿ ರಸ್ತೆ ಬದಿ ಗೂಡಂಗಡಿಯ ಕ್ಷೌರಿಕ ಕೂಡ ಎಂಎಸ್ ಎಂಇ ಅಡಿ ಬರುತ್ತಾನೆ, ಇವರನ್ನೆಲ್ಲ ಒಂದೇ ತಕ್ಕಡಿಯಲ್ಲಿ ಇಡಲು ಸಾಧ್ಯವೇ? ಇಲ್ಲ, ಹಾಗೆಯೇ ದುಬಾರಿಯ ಬೆಂಜ್ ಕಾರು ಓನರ್ ಹಾಗೂ ಹವಾಯಿ ಚಪ್ಪಲಿ ಹಾಕುವ ಸಾಮಾನ್ಯ ವ್ಯಕ್ತಿ ಎಲ್ಲರಿಗೂ ಒಂದೇ ಬಗೆಯ ತೆರಿಗೆ ಸಾಧುವಲ್ಲ, ಇದರ ಬಗ್ಗೆ ಆಚಾರ್ಯ ಚಾಣಕ್ಯರ ಕಾಲದಿಂದ ಚರ್ಚೆ ಇದೆ. ಚಾಣಕ್ಯರು ಹೇಳುವಂತೆ ತೆರಿಗೆ ಸಂಗ್ರಹಣೆ ಜೇನು ಹುಳವೊಂದು ಗಿಡ, ಹೂವುಗಳನ್ನು ನೋಡಿ ಮಕರಂದ ಸಂಗ್ರಹಿಸುವಂತೆ ಇರಬೇಕು, ಯಾವ ಹೂವಿನಿಂದ ಎಷ್ಟು ಮಕರಂದ ತೆಗೆಯಬೇಕೆಂಬ ಅರಿವು ಅದಕ್ಕಿದೆ, ಹೂವು ಇರಬೇಕು, ಮಕರಂದ ಕೂಡ ಜೇನಿಗೆ ಸಿಗಬೇಕು, ಹಾಗೆ ತೆರಿಗೆಯಿಂದ ಸರ್ಕಾರವೂ ಸಮಾಜವೂ ಉಳಿದು ಬೆಳೆಯಬೇಕು, ಈ ಕಾರಣಕ್ಕೆ ನಮ್ಮ ದೇಶದ ಜಿಎಸ್ ಟಿ ವ್ಯವಸ್ಥೆಯಲ್ಲಿ ವಿವಿಧ ಸ್ಲಾಬ್ ಅಥವಾ ಹಂತಗಳಿವೆ, ಇವನ್ನು ತೆರಿಗೆಯಲ್ಲಿ ಶೇ ೦, ಶೇ೫, ಶೇ.೧೨, ಶೇ.೧೮. ಮತ್ತು ಶೇ.೧೮ ಎಂದು ವಿಂಗಡಿಸಲಾಗಿದೆ, ಈ ಪ್ರಕಾರ ವರ್ತಕರ ವಿಂಗಡಣೆ ನಡೆಯುತ್ತದೆ. ಈಗ ಜಾರಿಯಾದ ಜಿಎ ಟಿಗೂ ಇತಿಹಾಸವಿದೆ. ಇದು ಮೋದಿಯಿಂದ ಜಾರಿಗೆ ಬಂದ ವ್ಯವಸ್ಥೆ ಅಲ್ಲ, ವಾಜಪೇಯಿ ಕಾಲದಲ್ಲಿ ಇದಕ್ಕೆ ಅಡಿಗಲ್ಲು ಬಿತ್ತು ಅನಂತರ ಮನಮೋಹನ ಸಿಂಗ್ ಸ್ವಲ್ಪ ಮುಂದೆ ಎಳೆದರು, ಈಗ ಮೋದಿ ಕಾಲದಲ್ಲಿ ಪೂರ್ಣರೂಪ ಪಡೆದು ಜಾರಿಗೆ ಬಂದಿದೆ, ಈ ಜಿಎಸ್ ಟಿಯನ್ನು ಮೊದಲು ಪ್ರಸ್ತಾಪಿಸಿದ್ದು ೨೦೦ದಲ್ಲಿ ಕೇಳ್ಕರ್ ಕಾರ್ಯಪಡೆ.ನಮ್ಮ ತೆರಿಗೆ ವ್ಯವಸ್ಥೆಯ ಸಂಕೀರ್ಣತೆಯನ್ನು ಕಡಿತಗೊಳಿಸಿ ಉದ್ಯಮದಾರರನ್ನು ಉತ್ತೇಜಿಸುವ ಉದ್ದೇಶ ಇದಕ್ಕಿತ್ತು. ಅನಂತರ ಹಣಕಾಸು ಮಂತ್ರಿಗಳು, ರಾಜ್ಯ ಹಣಕಾಸು ಸಚಿವರೊಂದಿಗೆ ಸಮಾಲೋಚನೆ ನಡೆಸಿ ೨೦೦೯ರಲ್ಲಿ ಒಂದು ಸ್ಪಷ್ಟ ವಿನ್ಯಾಸ ಹಾಗೂ ಮಾರ್ಗಸೂಚಿ ರೂಪಿಸಲಾಯಿತು.ಇದಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿಗೆ ಮಸೂದೆಯನ್ನು ೨೦೧೧ರಲ್ಲಿ ಮಂಡನೆ ಆಯಿತು, ಆದರೆ ಸಮಸ್ಯೆಗಳಿಗೆ ಒಳಗಾಗಿ ನಿಂತಿತು. ಅನಂತರ ೨೦೧೪ರಲ್ಲಿ ರಾಜ್ಯಗಳೊಂದಿಗೆ ಸಂಧಾನ ನಡೆದು ಸಂವಿಧಾನ ನಿಯಮ ತಿದ್ದುಪಡಿಗಾಗಿ ಮತ್ತೆ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಸೂದೆ ಮಂಡನೆ ಆಯಿತು. ಅನಂತರ ಮೇ ೨೦೧೫ರಲ್ಲಿ ಈ ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆಯಿತು. ಸ್ವಲ್ಪ ತೊದ್ದುಪಡಿ ಪಡೆದು ೨೦೧೬ರಲ್ಲಿ ರಾಜ್ಯಸಭೆಯ ಮುಂದೆ ಬಂದು ಒಪ್ಪಿತವಾಗಿ ಮತ್ತೆ ಲೋಕಸಭೆಗೆ ಹೋಗಿ ಒಪ್ಪಿಗೆ ಪಡೆಯಿತು. ೨೦೧೬ರಲ್ಲಿ ಸಂವಿಧಾನದ ೧೦೧ನೆಯ ತಿದ್ದುಪಡಿಯಾಗಿ ಅನುಮೋದನೆ ಪಡೆಯಿತು. ಜೊತೆಗೆ ಜಿಎಸ್‌ಟಿ ಪರಿಷತ್ತು ರಚನೆ ಆಯಿತು. ಇದು ಈಗಾಗಲೇ ಹೇಳಲಾದ ಆರು ಬಗೆಯ ಹಂತಗಳಲ್ಲಿ ವೈಭವದ ಹಾಗೂ ಜನಸಾಮಾನ್ಯರ ಅಗತ್ಯದ ವಸ್ತುಗಳ ತೆರಿಗೆ ಹಂತವನ್ನು ನಿರ್ಧರಿಸಿತು. ಇದರ ಬಗ್ಗೆ ಅರಿವು ಮೂಡಿಸಲು ಜಾಲವೊಂದನ್ನು ರಚಿಸಲಾಯಿತು. ಇದರಲ್ಲಿ ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಸೇರಿರುತ್ತವೆ. ಹಲವು ಹಂತಗಳ ತೆರಿಗೆ ತಪ್ಪಿಸಿ ತೆರಿಗೆ ಕಟ್ಟುವ ಶ್ರಮವನ್ನು ಇಳಿಸುವುದು ಇದರ ಮುಖ್ಯ ಉದ್ದೇಶ.ಸುಂಕ ಸಂಗ್ರಹ ಅಧಿಕಾರಿಗಳಿಗೆ ಸೂಕ್ತ ತರಬೇತಿ ಕೊಡಲಾಯಿತು.ಇದರಲ್ಲಿ ಯಾವ ಯಾವ  ವೃತ್ತಿಗೆ ಯಾವ ಹಂತದ ತೆರಿಗೆ ಬೀಳುತ್ತದೆ ಎಂಬ ಸ್ಪಷ್ಟತೆ ಉಂಟಾಯಿತು.

ಜಿಎಸ್ ಟಿ ವಿರುದ್ಧ ಕಿರು ಉದ್ದಿಮೆದಾರರು ತಿರುಗಿಬಿದ್ದುದರ ಮುಖ್ಯ ಕಾರಣ ಅವರು ಬಳಸುವ ಯುಪಿಐ ಅಥವಾ ಡಿಜಿಟಲ್ ವ್ಯವಹಾರವನ್ನು ನಿಷೇಧಿಸಿದ್ದು ಮುಖ್ಯ ಕಾರಣ. ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಡಿಜಿಟಲ್ ವ್ಯವಹಾರಕ್ಕೆ ಜನ ಹೊಂದಿಕೊಂಡಿದ್ದಾರೆ, ಕೈಯಲ್ಲಿ ಹಣವಿಟ್ಟುಕೊಂಡು ಯಾರೂ ಓಡಾಡುವುದಿಲ್ಲ, ಅಂಗಡಿಯವರ ಬಳಿಯೂ ಅಗತ್ಯ ಚಿಲ್ಲರೆ ಹಣವಿರುವುದಿಲ್ಲ ಇದನ್ನೇ ನಿಷೇಧಿಸಿದರೆ ಅವರ ಹೊಟ್ಟೆಯ ಮೇಲೆ ಬರೆಹಾಕಿದಂತೆ. ಕೆಲವು ವ್ಯಾಪಾರಿಗಳು ೪೦ ಲಕ್ಷ ಮೀರಿದ ವ್ಯಾಪಾರ ಮಾಡುವುದು ನಿಜ, ಆದರೆ ಎಲ್ಲ ವ್ಯಾಪಾರಿಗಳಿಗೂ ಈ ಮಟ್ಟದ ವ್ಯಾಪಾರ ಸಾಧ್ಯವಿಲ್ಲ, ಇದನ್ನು ಗಮನಿಸಿದರೆ ಜನರಿಗೆ ಅನಿವಾರ್ಯವಾದ ವ್ಯವಹಾರದ ಮಗ್ಗಲುಗಳು ಅರಿವಾಗುತ್ತವೆ. ಈ ದೃಷ್ಟಿಯಿಂದ ಈ ಉದ್ಯಮ ಸದ್ಯ ನಡೆಯುವಂತೆ ಇರಲು ಬಿಡುವುದೇ ಸೂಕ್ತ. ಏಕೆಂದರೆ ವಿದ್ಯುತ್ ಇತರೆ ಬಿಲ್ಲು, ಬಾಡಿಗೆ ಉತ್ಯಾದಿ ವೆಚ್ಚಗಳನ್ನು ಪೂರೈಸಿ ಸರ್ಕಾರಕ್ಕೆ ತೆರಿಗೆ ಕಟ್ಟಲು ಸಾಧ್ಯವಾಗದು. ಕಿರು ಉದ್ಯಮ ಸಾಕಷ್ಟು ಬೆಳೆದ ಮೇಲೆ ಇಂಥ ಕ್ರಮಕ್ಕೆ ಕೈ ಹಾಕಬಹುದು ಆದರೆ  ಸಾಕಷ್ಟು ಉದ್ಯೋಗ ಸೃಷ್ಟಿಸಿದ ಈ ವಲಯಕ್ಕೆ ಬೇಕಿರುವುದು ಉತ್ತೇಜನ ಮಾತ್ರ, ಅದನ್ನು ಸರ್ಕಾರ ಆಗು ಮಾಡಲಿ.

No comments:

Post a Comment