Saturday, 26 July 2025

ಮುಂಬರಲಿರುವ ವಿಧಾನಸಭೆ ಚುನಾವಣೆ


ಇದೀಗ ಲೋಕ ಸಭೆಯ ಮುಂಗಾರು ಅಧಿವೇಶನ ಆರಂಭವಾದರೂ ಕಳೆದ ನಾಲ್ಕಾರು ದಿನಗಳಿಂದ ಪ್ರತಿಪಕ್ಷಗಳು ಕಲಾಪ ನಡೆಯಲು ಬಿಡುತ್ತಿಲ್ಲ, ಇದಕ್ಕೆ ಕಾರಣ ಬಿಹಾರದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳತ್ತಿರುವಂತೆಯೇ ಚುನಾವಣಾ ಆಯೋಗ ಕೂಡ ತನ್ನ ಬಾಧ್ಯತೆಗಳ ಮೂಲಕ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ, ಇದರ ಪರಿಣಾಮವಾಗಿ ಆಯೋಗ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆ ನಡೆಸುತ್ತಿದೆ, ಇದರ ಹೊಡೆತ ತಡೆಯಲಾಗದ ಪ್ರತಿಪಕ್ಷಗಳು ಈ ಕ್ರಮವನ್ನು ವಿರೋಧಿಸುತ್ತಿವೆ, ಆಯೋಗದ ಈ ಕ್ರಮವನ್ನು ಅಲ್ಲಿನ ಜನಸಾಮಾನ್ಯರು ವಿರೋಧಿಸುತ್ತಿಲ್ಲ,  ಬಿಹಾರ ವಿಧಾನಸಭೆಯಲ್ಲಿ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸುತ್ತಿವೆ, ಯಾವುದಕ್ಕೂ ಸೊಪ್ಪುಹಾಕದ ಆಯೋಗ ತನ್ನ ಕೆಲಸ ಮಾಡುತ್ತಿದೆ, ಇದರಿಂದ ಏನೆಲ್ಲ ಆಗಿದೆ ನೋಡೋಣ.

ಈ ರೀತಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆದರೆ ತಾವು ಸೋಲುವುದು ಖಚಿತವೆಂದು ಪ್ರತಿಪಕ್ಷಗಳು ಭಾವಿಸಿವೆ ಎಂದು ಬಿಜೆಪಿ ಹೇಳುತ್ತಿದೆ, ನುಸುಳುಕೋರರನ್ನು ಇಷ್ಟುಕಾಲ ಪೋಷಿಸಿಕೊಂಡು ಬರಲಾಗಿದೆ, ಬಾಂಗ್ಲಾದಿಂದ ಭಾರತದೊಳಗೆ ನುಸುಳಿಬರುವುದು ಬಹಳ ಸುಲಭ, ಅಸ್ಸಾಂ ಮತ್ತಿತರ ಗಡಿ ಭಾಗದಲ್ಲಿ ರೈತರ ಜಮೀನುಗಳಿದ್ದು, ಇಲ್ಲಿ ಗಡಿ ಬೇಲಿ ಹಾಕಲು ಅಥವಾ ಸೈನಿಕರನ್ನು ನಿಯೋಜಿಸುವುದು ಸಾಧ್ಯವಿಲ್ಲ, ಈ ಜಮೀನುಗಳಲ್ಲಿ ನುಸುಳುಕೋರರು ರೈತರಂತೆ ಬಂದು ಸುಲಭವಾಗಿ ನಡೆದು ಬರುತ್ತಾರೆ, ಇದನ್ನು ಪ್ರಶ್ನಿಸಲು ಹೋದರೆ ಅಡ್ಡಪರಿಣಾಮಗಳಾಗುತ್ತವೆ. ಇದನ್ನು ಚುನಾವಣಾ ಸಮಯದಲ್ಲಿ ಲಾಭಕ್ಕೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಅವರಿಗೆಲ್ಲ ಆಧಾರ್ ಮೊದಲಾದ ದಾಖಲೆಗಳನ್ನು ಒದಗಿಸಿ ಮತಗಳಿಸಲು ಯತ್ನಿಸುತ್ತ ಬಂದಿವೆ ಇದು ಈಗ ಪರಿಷ್ಕರಣೆಗೆ ಒಳಗಾಗುತ್ತಿರುವುದು ಪಕ್ಷಗಳಿಗೆ ನುಂಗಲಾಗದ ತುತ್ತಾಗಿದೆ. ಬಿಹಾರದಲ್ಲಿ ಎರಡು ದಶಕಗಳಿಂದ ಪರಿಷ್ಕರಣೆ ನಡೆದಿಲ್ಲ ಎಂಬುದು ಕೂಡ ಆಯೋಗದ ಸಮರ್ಥನೆ. 

ಆಯೋಗದ ಕ್ರಮದಂತೆ ಈಗಾಗಲೇ ಬಿಹಾರ ಮತದಾರ ಪಟ್ಟಿಯಲ್ಲಿದ್ದ ೫೨ ಲಕ್ಷ ಮತದಾರರ ಹೆಸರನ್ನು ತೆಗೆಯಲಾಗಿದೆ ಎಂದು ಆಯೋಗ ಅಂಕಿ ಅಂಶ ನೀಡಿದೆ. ಇವರಲ್ಲಿ ೨೨ ಲಕ್ಷ ಜನ ಸತ್ತು ಬಹಳ ಕಾಲವಾಗಿದ್ದರೆ ೭ ಲಕ್ಷ ಜನ ನಕಲಿ ಮತದಾರರು ಅಂದಿದೆ ಆಯೋಗ, ಇವರನ್ನೆಲ್ಲ ನೆಚ್ಚಿಕೊಂಡು ನಮ್ಮ ಪ್ರಜಾಪ್ರಭುತ್ವ ಹೇಗೆ ಸರಿಯಾಗಿರಲು ಸಾಧ್ಯ? ಬಿಹಾರದಲ್ಲಿ ಬರುವ ನವೆಂಬರ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತಚಲಾಯಿಸಲಿರುವ ಮತದಾರರ ಪಟ್ಟಿಯನ್ನು ತೀವ್ರವಾಗಿ ಪರಿಶೀಲನೆಗೆ ಒಳಪಡಿಸಿದೆ. ಸದ್ಯ ಬಿಹಾರದಲ್ಲಿ ೭ ಕೋಟಿ ೮೯ ಲಕ್ಷ ನೋಂದಾಯಿತ ಮತದಾರರಿದ್ದಾರೆ, ಇವರ ಅಧಿಕೃತತೆಯನ್ನು ಆಯೋಗ ಪರಿಶೀಲಿಸುತ್ತಿದೆ, ಇದನ್ನು ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿವೆ. 

ಇದರಲ್ಲಿ ೭ ಲಕ್ಷ ಜನರ ಹೆಸರು ಎರಡು ಕಡೆಗಳಲ್ಲಿದೆ, ೨೬ ಲಕ್ಷ ಜನರ ಹೆಸರನ್ನು ದಾಖಲೆ ಇರುವ ಕಡೆ ವರ್ಗಾಯಿಸಿದ್ದಾರೆ, ೩೫ ಲಕ್ಷ ಜನರ ಹೆಸರನ್ನು ಕಾಯಂ ಆಗಿ ಕಿತ್ತುಹಾಕಲಾಗಿದೆ. ಇನ್ನೂ ೧.೨ ಲಕ್ಷದಷ್ಟು ಅರ್ಜಿಗಳು ಬರಬೇಕಿದೆಯಂತೆ. ಜುಲೈ ೨೦ರಂದು ಆಯೋಗವು ಮರಣ ಹೊಂದಿದವರ, ಸೂಕ್ತ ದಾಖಲೆ ಕೊಡದ, ವಿಳಾಸದಲ್ಲಿಲ್ಲದವರ ಹೆಸರಿನ ಪಟ್ಟಿಯನ್ನು ಬಿಜೆಪಿ, ಆರ್ ಜೆಡಿ, ಜೆಡಿಯು, ಎಎಪಿ, ಸಿಪಿರಂ, ಕಾಂಗ್ರೆಸ್ ಮೊದಲಾದ ೨೦ ಪ್ರಮುಖ ಪಕ್ಷಗಳಿಗೆ ನೀಡಿತ್ತು. ಇದರಲ್ಲಿ ತಪ್ಪಿದ್ದರೆ ಸೂಚಿಸುವಂತೆ ತಿಳಿಸಿತ್ತು. ೭೭ ಲಕ್ಷ ಬ್ಲಾಕ್ ಮಟ್ಟದ ಅಧಿಕಾರಿಗಳು ಹಾಗೂ ೧,೬ ಲಕ್ಷ ಎಲ್ಲ ಪಕ್ಷಗಳ ಬ್ಲಾಕ್ ಮಟ್ಟದ ಕಾರ್ಯಕರ್ತರ ನೆರವಿನಿಂದ ಈ ಪರಿಷ್ಕರಣೆಯ ಯಜ್ಞ ನಡೆದಿದೆ.

ಉಳಿದಂತೆ ಇರುವವರು ನಕಲಿ ಮತದಾರರು ಹಾಗೂ ಸತ್ತವರ ಹೆಸರುಗಳು. ಇವರೆಲ್ಲ ಸತ್ತು ಬಹಳ ಕಾಲವಾಗಿದ್ದರೂ ಅವರ ಹೆಸರಲ್ಲಿ ಮತದಾನ ನಡೆಯುತ್ತಲೇ ಇದೆಯಂತೆ, ಈ ಕ್ರಮಕ್ಕೆ ಆಯೋಗ ಆಧಾರ್ ಚೀಟಿಯನ್ನು ಪರಿಗಣಿಸುತ್ತಿಲ್ಲ, ಕಳೆದ ಚುನಾವಣೆಯಲ್ಲಿ ಒಪ್ಪಿದ್ದ ಆಯೋಗದ ಎಪಿಕ್ ಕಾರ್ಡು ಒಪ್ಪುತ್ತಿಲ್ಲ, ಬ್ಯಾಂಕ್ ಇತ್ಯಾದಿ ದಾಖಲೆ ಸ್ವೀಕರಿಸುತ್ತಿಲ್ಲ, ಬದಲಾಗಿ ಮನೆ ಮನೆಗೆ ತೆರಳಿ ಪರಿಶೀಲಿಸಿ ಪಟ್ಟಿ ಸಿದ್ಧಗೊಳಿಸುತ್ತಿದೆ, ಇದನ್ನು ಕಾಂಗ್ರೆಸ್  ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯ್ತು, ನ್ಯಾಯಾಲಯ ಆಧಾರ್ ಕಾರ್ಡ್ ಪರಿಗಣಿಸುವಂತೆ ಸೂಚಿಸಿದ್ದರೂ ಆಯೋಗ ಇದನ್ನು ಒಪ್ಪಿಲ್ಲ, ಈ ವಿಷಯದಲ್ಲಿ ಆಯೋಗಕ್ಕೆ ಸಂಪೂರ್ಣ ಸ್ವಾಯತ್ತತೆ ಇದೆ, ಅದರ ಕ್ರಮವನ್ನು ಯಾರೂ ಪ್ರಶ್ನಿಸುವಂತಿಲ್ಲ, ನಮ್ಮ ಸಂವಿಧಾನ ಅದಕ್ಕೆ ಕೊಟ್ಟ ಅಧಿಕಾರ ಅದು. ಸಂವಿಧಾನದ ೩೨೪ ನೆಯ ವಿಧಿ ಇಂಥ ಹಕ್ಕನ್ನು ಆಯೋಗಕ್ಕೆ ಕೊಟ್ಟಿದೆ. ಪ್ರತಿಯಾಗಿ ವಿಪಕ್ಷಗಳು ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ಇದಕ್ಕೆ ಗುರಿ ಮಾಡಲಾಗುತ್ತಿದೆ ಎಂದು ಆಕ್ಷೇಪಿಸುತ್ತಿದೆ ನಮಗೆಲ್ಲ ತಿಳಿದಂತೆ ಆಧಾರ್ ಕಾರ್ಡ್ ಪಡೆಯುವುದು ಕಷ್ಟವಲ್ಲ, ನಮ್ಮ ಬೆಂಗಳೂರಲ್ಲಿ ಒಂದೇ ಮನೆ, ಕೊಠಡಿ ಇಟ್ಟುಕೊಂಡು ಅದನ್ನು ಆಧಾರ್ ವಿಳಾಸದ ದಂಧೆಗೆ ಬಳಸುತ್ತಿರುವ ಬಹಳಷ್ಟು ಮಾಲೀಕರಿದ್ದಾರೆ, ಇದನ್ನು ಯಾರಿಗೂ ಬಾಡಿಗೆ ಕೊಡುವುದಿಲ್ಲ, ಬದಲಾಗಿ ಅಗತ್ಯ ಇರುವವರಿಗೆ ಇವರು ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದಾರೆಂದು ಒಂದು ಪತ್ರ ಕೊಟ್ಟು ಒಂದಿಷ್ಟು ಹಣ ಪಡೆಯಲು ಮಾತ್ರ ಬಳಸಲಾಗುತ್ತದೆ, ಇಂಥ ವಿಳಾಸದ ಆಧಾರದಲ್ಲಿ ಒಂದು ಆಧಾರ್ ಕಾರ್ಡ್ ಪಡೆಯಬಹುದು, ಹೀಗೆ ಆಧಾರ್ ಪಡೆದ ಅಸಂಖ್ಯ ಜನ ಬೆಂಗಳೂರಲ್ಲಿದ್ದಾರೆ, ಬಾಂಗ್ಲಾದೇಶ, ನೇಪಾಳ ಹೀಗೆ ಎಲ್ಲಿಂದಲೋ ಬಂದವರು ಸರ್ಕಾರದ ಸವಲತ್ತು ಪಡೆಯಲು ಇಂಥ ಆಧಾರ್ ಕಾರ್ಡ್ ಪಡೆದಿದ್ದಾರೆ, ಇಲ್ಲಿಯೂ ಕಟ್ಟುನಿಟ್ಟಿನ ಪರಿಶೀಲನೆ ನಡೆದರೆ ಸರ್ಕಾರದ ಬೊಕ್ಕಸಕ್ಕೆ ಅದೆಷ್ಟೋ ಉಳಿತಾಯವಾಗುತ್ತದೆ, ಬಿಹಾರದಲ್ಲಿ ನಡೆಯುತ್ತಿರುವ ಕ್ರಮವನ್ನು ಮುಂಬರುವ ದಿನಗಳಲ್ಲಿ ದೇಶದ ಎಲ್ಲ ಕಡೆ ಆಯೋಗ ಕೈಗೊಳ್ಳಲಿದೆ ಅನ್ನಲಾಗಿದೆ. ಹೀಗಾದರೆ ಕೋಟ್ಯಂತರ ನಕಲಿಗಳು ಹೊರಬರಲಿದ್ದಾರೆ, ದೇಶದ ನೈಜ ನಿವಾಸಿಗಳು ಆಯೋಗದ ಈ ಕ್ರಮದಿಂದ ಪತ್ತೆ ಆಗುತ್ತಿದ್ದಾರೆ, ಇದುವರೆಗೆ ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ದೇಶವನ್ನು ನೆರೆ ದೇಶಗಳು ಪುಗ್ಸಟ್ಟೆ ಛತ್ರದಂತೆ ಕಾಣುತ್ತಿವೆ. ಆಯೋಗದ ಈ ನಿರ್ದಾಕ್ಷಿಣ್ಯ ಕ್ರಮಕ್ಕೆ ಯಾರು ಏನೇ ವಿರೋಧ ಮಾಡಿದರೂ ದೇಶದ ಒಳಿತು ಮಾತ್ರ ಇರುತ್ತದೆ. ಬಿಹಾರದಲ್ಲಿ ವಿಧಾನ ಸಭೆಯ ೨೪೦ ಕ್ಷೇತ್ರಗಳಿವೆ ಇಲ್ಲೆಲ್ಲ ನಕಲಿ ಮತದಾರ ಪಟ್ಟಿಯ ಪರಿಶೀಲನೆ ನಡೆದಿದೆ, ಪಕ್ಷ ಪ್ರೇಮವಿಲ್ಲದೇ ಆಯೋಗದ ನೀತಿ ನಿಯಮಗಳ ಆಧಾರದಲ್ಲಿ ಅದರ ಅಧಿಕೃತ ಹೇಳಿಕೆಗಳ ಆಧಾರದಲ್ಲಿ ನೋಡಿದರೆ ಆಯೋಗದ ಕ್ರಮ ಸರಿಯಾಗಿಯೇ ಇದೆ, ಏಕೆಂದರೆ ಮೂರು - ನಾಲ್ಕು ದಶಕಗಳಿಂದ ಇಂಥ ಪರಿಷ್ಕರಣೆ ಎಲ್ಲಿಯೂ ನಡೆದೇ ಇರಲಿಲ್ಲ, ಬಿಹಾರದಲ್ಲಿ ಬಂದ ದೂರುಗಳ ಆಧಾರದಲ್ಲಿ ಆಯೋಗ ಪರಿಶೀಲನೆ  ಮಾಡಿದಾಗ ಇಂಥ ದತ್ಯಗಳು ಹೊರಬರುತ್ತಿವೆ, ಕೆಲವು ಕ್ಷೇತ್ರಗಳಲ್ಲಿ ಇರುವ ಜನಸಂಖ್ಯೆಗಿಂತ ಮತದಾರ ಪಟ್ಟಿಯಲ್ಲಿರುವವರ ಸಂಖ್ಯೆ ಹೆಚ್ಚು ಇದ್ದಿದ್ದು ಆಯೋಗದ ಅನುಮಾನಕ್ಕೆ ಪುಷ್ಟಿ ನೀಡಿತ್ತು, ಇದು ಈಗ ನಿಜವಾಗಿದೆ, ಇಂಥ ನಕಲಿ ಮತದಾರರನ್ನು ಕೈ ಬಿಡುವುದು ಸರಿ ಅಲ್ಲ ಎಂದು ಯಾರೂ ಹೇಳಲಾರರು, ಅಲ್ಲಿ ಬಹುತೇಕರು ಬಾಂಗ್ಲಾದಿಂದ ಬಂದ ನುಸುಳುಕೋರರು, ಅವರ ಬಳಿ ಸೂಕ್ತ ಪಾಸ್ ಪೋರ್ಟ್ ಇಲ್ಲ, ಆದರೆ ನಮ್ಮ ದೇಶದ ಮತದಾರ ಕಾರ್ಡು, ಆಧಾರ್ ಕಾರ್ಡುಗಳಿವೆ, ಇದಪ್ಪಾ ತಮಾಷೆ. ಈ ಕಾರಣಕ್ಕಾಗಿಯೇ ಆಯೋಗ ಆಧಾರ್ ಕಾರ್ಡನ್ನು ಅಧಿಕೃತ ದಾಖಲೆ ಎಂದು ಪರಿಗಣಿಸುತ್ತಿಲ್ಲ, ಬದಲಾಗಿ ಸರ್ಕಾರಿ ನೌಕರರಾಗಿದ್ದರೆ ಅವರ ಅಧಿಕೃತ ಗುರುತಿನ ಚೀಟಿಯನ್ನು ಮಾನ್ಯ ಮಾಡುತ್ತಿದೆ. ಸಾಕಷ್ಟು ಕಾಲಾವಕಾಶ ಕೊಟ್ಟಿಲ್ಲವೆಂದು ಪಕ್ಷಗಳು ಆರೋಪಿಸುವುದಕ್ಕೆ ಆಯೋಗ ಒಂದು ತಿಂಗಳ ಕಾಲದಲ್ಲಿ ಸೂಕ್ತ ದಾಖಲೆಗಳೊಂದಿಗೆ ಮುಂದೆ ಬನ್ನಿ ಅಂದಿದೆ, ಇದಕ್ಕರ ನೀರಸ ಪ್ರತಿಕ್ರಿಯೆ ಬಂದಿದೆ.ಈಗಾಗಲೇ ಬಿಹಾರದಲ್ಲಿ ಶೇ.೯೯.೮  ಸ್ವಚ್ಛತಾ ಕಾರ್ಯ ಆಗಿದೆ ಎಂದು ಆಯೋಗ ಹೇಳಿದೆ. ಈ ಕ್ರಮಕ್ಕೆ ವಿಶೇಷ ತೀವ್ರ ಪರಿಷ್ಕರಣಾ ಕಾರ್ಯ (ಸ್ಪೆಶಲ್ ಇಂಟೆನ್ಸಿನ್ ರಿವಿಜನ್-ಎಸ್ ಐ ಆರ್) ಎಂದು ಹೆಸರಿಸಲಾಗಿದೆ.

ಆಯೋಗದ ನಿರ್ಧಾರವನ್ನು ಪ್ರಶ್ನಿಸುವಂತಿಲ್ಲ, ಈ ವಿಷಯದಲ್ಲಿ ಅದು ಸರ್ವೋಚ್ಚ. ಕೇಂದ್ರ ಚುನಾವಣಾ ಆಯೋಗ ನಮ್ಮ ದೇಶದ ಪ್ರಜಾಪ್ರಭುತ್ವದ ಅಡಿಪಾಯವಾದ ಮತದಾನ ಪ್ರಕ್ರಿಯೆಯನ್ನು ನ್ಯಾಯಯುತವಾಗಿ ನಿರ್ವಹಿಸುವ ದೊಡ್ಡ ಜವಾಬ್ದಾರಿ ಹೊಂದಿದ್ದು ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಒಂದೇ ಆಗಿದೆ, ಇದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು ಯಾವ ಸರ್ಕಾರದ ಅಧಿಕಾರವೂ ಇದರ ಮೇಲಿರುವುದಿಲ್ಲ, ಆದ್ದರಿಂದ ಮೋದಿ ಸರ್ಕಾರದ ಹಸ್ತಕ್ಷೇಪ ಇದರಲ್ಲಿದೆ ಅನ್ನುವ ಆರೋಪಕ್ಕೆ ತಿರುಳಿಲ್ಲ, ಅಲ್ಲದೇ ಆಯೋಗದ ನಿರ್ಧಾರಗಳನ್ನು ಸೂಕ್ತ ದಾಖಲೆಗಳ ಮೂಲಕ ರಾಷ್ಟ್ರಪತಿಗಳ ಗಮನಕ್ಕೆ ತರಬಹುದು, ಆರೋಪ ಸಲ್ಲಿಸಬಹುದು. ಇದನ್ನು ಸಾಬೀತು ಮಾಡುವಲ್ಲಿ ಪ್ರತಿಪಕ್ಷಗಳು ಹಲವು ಬಾರಿ ಸೋತಿವೆ, ವಿದ್ಯುನ್ಮಾನ ಯಂತ್ರಗಳ ಕುರಿತ ಪ್ರತಿಪಕ್ಷಗಳ ಆರೋಪ ಕೂಡ ಇಂಥದ್ದೇ ಆಗಿತ್ತು. ಆಯೋಗದ ನಿರ್ಧಾರದ ವಿರುದ್ಧ ನೇರವಾಗಿ ಸವಾಲು ಹಾಕಲು ಕೂಡ ಅವಕಾಶವಿದೆ, ಇದರಲ್ಲೂ ಪ್ರತಿಪಕ್ಷಗಳು ಸೋತಿವೆ, ಆರೋಪಕ್ಕಾಗಿ ಆರೋಪ ಮಾಡುತ್ತಿವೆ. ಎಂಬಂತಾಗಿದೆ ಅವುಗಳ ಸ್ಥಿತಿ. ೭,೨೩ ಕೋಟಿ ಸರಿ ಮತದಾರರನ್ನು ಗುರುತಿಸಿ ಅಚರ ಹೆಸರನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಆಯೋಗ ಹೇಳಿದೆ. ಈ ಪ್ರಮಾಣದ ಬಿಹಾರಿನ ಜನತೆ ತಮ್ಮ ಕ್ರಮವನ್ನು ಒಪ್ಪಿದ್ದಾರೆಂದು ಆಯೋಗ ಹೇಳಿದೆ, ಆಗಸ್ಟ್ ೧ ರಂದು ಈ ಪಟ್ಟಿಯನ್ನು ಪ್ರಕಟಿಸಲಾಗುವುದಲ್ಲದೇ ಉಳಿದಂತೆ ಬೂತ್ ಮಟ್ಟದ ಅಧಿಕಾರಿಗಳು ಪಟ್ಟಿ ಪರಿಷ್ಕರಣೆ ಮಾಡುತ್ತಾರೆಂದು ಆಯೋಗ ತಿಳಿಸಿದೆ, ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ನಿರ್ದಿಷ್ಟ ಅರ್ಜಿ ನಮೂನೆ ಹಂಚಿದ್ದು ಅದನ್ನು ಗುರುತಿಸಿದ ರೀತಿಯಲ್ಲಿ ಸಂಗ್ರಹಿಸಿ ಮಾಹಿತಿ ಪಡೆಯಲಾಗುತ್ತಿದೆ ಇದನ್ನು ಮಾತ್ರ ಆಯೋಗ ಅಧಿಕೃತ ಅನ್ನುತ್ತಿದೆ, ಇದರಲ್ಲಿ ತಪ್ಪೇನಿದೆ? 


    


No comments:

Post a Comment