Monday, 28 July 2025

ರಾಷ್ಟ್ರಗೀತೆ ಕುರಿತು ಒಂದಿಷ್ಟು


ನಮ್ಮ ರಾಷ್ಟ್ರಗೀತೆ ಜನಗಣಮನ ಅಧಿನಾಯಕ ಜಯಹೇ ಎಂಬ ಗೀತೆ ಲಾಗಾಯ್ತಿನಿಂದಲೂ ಚರ್ಚೆಗೆ ಒಳಗಾಗುತ್ತ ಬಂದಿದೆ. ಎಲ್ಲ ದೇಶಗಳಿಗೂ ಇರುವಂತೆ ನಮ್ಮ ದೇಶಕ್ಕೂ ಒಂದು ಗೀತೆ, ಬಾವುಟ ಲಾಂಛನ, ಪಕ್ಷಿ, ಪ್ರಾಣಿ ಮತ್ತು ಹೂವುಗಳ ಲಾಂಛನವಿದೆ, ಇವೆಲ್ಲ ನಮ್ಮ ದೇಶದ ಅನನ್ಯತೆಯನ್ನು ಹೇಳುವಂಥವು, ಇದೇ ರೀತಿ ನಮ್ಮ ದೇಶದೊಳಗಿನ ರಾಜ್ಯಗಳಿಗೂ ಇವೆಲ್ಲ ಇವೆ ಎಂಬುದು ನಮ್ಮಲ್ಲಿ ಬಹುತೇಕ ಜನರಿಗೆ ಗೊತ್ತೇ ಇಲ್ಲ, ಕರ್ನಾಟಕದ ಪಕ್ಷಿ, ಪ್ರಾಣಿ, ಹೂವುಗಳ ಲಾಂಛನ ಶೇ.೯೦ ಜನಕ್ಕೆ ತಿಳಿದೇ ಇಲ್ಲ, ಅಂತೆಯೇ ರಾಷ್ಟç ದೇವತೆಇರುವಂತೆ ನಾಡ ದೇವತೆ ಕೂಡ ರಾಜ್ಯಗಳಿಗೆ ಇದೆ, ನಮ್ಮ ರಾಷ್ಟç ದೇವತೆ ಮತ್ತು ನಾಡ ದೇವತೆ ಕ್ರಮವಾಗಿ ಭಾರತಾಂಬೆ ಹಾಗೂ ಚಾಮುಂಡಿ ಎಂದು ಎಲ್ಲರಿಗೂ ಗೊತ್ತು, ಸದ್ಯ ಚರ್ಚೆಗೆ ಇರುವುದು ನಮ್ಮ ರಾಷ್ಟç ಗೀತೆ, ಇದು ಆಗಾಗ ಚರ್ಚೆಯ ಮುನ್ನೆಲೆಗೆ ಬಂದು ಹೋಗುತ್ತದೆ. ಈ ಜನಗಣಮನ ಗೀತೆಯ ಬದಲು ಚಟರ್ಜಿ ಅವರ ವಂದೇ ಮಾತರಂ ಇರಲಿ ಎಂದು ವಾದಿಸಿದವರಿದ್ದರು, ಆದರೆ ಇದು ರಾಷ್ಟçಗೀತೆ (ಆಂಥಮ್ ಆಗದೇ ರಾಷ್ಟ್ರ ಹಾಡು - ನ್ಯಾಶನಲ್ ಸಾಂಗ್ ಎಂದು ಪರಿಗಣಿತವಾಯಿತು. ಆದರೆ ನಮ್ಮ ರಾಷ್ಟ್ರಗೀತೆಯ ಹಿಂದು ಮುಂದು ಎಂಬ ಬಗ್ಗೆ ವಿವರಗಳು ಎಲ್ಲ ಕಡೆ ದೊರೆಯುವುದು ಕಷ್ಟ, ಸದ್ಯ ನಮ್ಮ ಸ್ವಾತಂತ್ರೋತ್ಸ್ವವದ ದಿನ ಹತ್ತಿರವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಒಂದು ಅವಲೋಕನ ಮಾಡಬಹುದು.    

ನಮ್ಮ ರಾಷ್ಟç ಗೀತೆ ಎಂದು ಪರಿಗಣಿಸಲಾದ ರವೀಂದ್ರ ನಾಥ ಟಾಗೋರರ 'ಜನಗಣಮನ' ಎಂಬ ಪದ್ಯವನ್ನು ಅವರು ದೇಶಭಕ್ತಿಯಿಂದ ರಾಷ್ಟ್ರವನ್ನು ಹೊಗಳುವ ಕಾರಣದಿಂದ ರಚಿಸಿದ್ದ ಗೀತೆ ಅಲ್ಲ, ಅದರಲ್ಲಿ ಧ್ಯಾನ ಇದ್ದರೂ ಅದು ದೇಶದ ಧ್ಯಾನವಲ್ಲ, ಬದಲಿಗೆ ಬ್ರಿಟಿಷ್ ರಾಜನಾಗಿದ್ದ  ಐದನೆಯ ಜಾರ್ಜ್ನ ಕುರಿತ ಹೊಗಳು ಪದ್ಯ ಅದು, ಆತ ದೇಶ ಬಿಟ್ಟು ಹೋಗುವಾಗ ಟಾಗೋರರನ್ನು ಆತನ ಉದಾರ ಗುಣ ಕುರಿತು ವಿದಾಯ ಗೀತೆಯಂತೆ ಒಂದು ಪದ್ಯ ರಚಿಸಿಕೊಡುವಂತೆ ಕೋರಿದಾಗ ಆತನನ್ನು ಹೊಗಳುವಂತೆ ಇದನ್ನು ರಚಿಸಲಾಯಿತು, ಅನ್ಯ ಕಾರಣಗಳಿಗಾಗಿ ಇದನ್ನು ರಾಷ್ಟ್ರಗೀತೆ ಎಂದು ಪರಿಗಣಿಸಬೇಕಾಯಿತು, ಹಾಗೆ ನೋಡಿದರೆ ಬಂಕಿಮ್ ಚಂದ್ರ ಚಟರ್ಜಿ ಅವರ 'ವಂದೇ ಮಾತರಂ' ಪದ್ಯ ನಿಜವಾಗಿ ದೇಶವನ್ನು ಕುರಿತ ಗೀತೆಯಾಗಿ ಕಾಣಿಸುತ್ತದೆ, ಜನಗಣಮನ ಪದ್ಯದಲ್ಲಿ  ಆರಂಭದಲ್ಲೇ ಬರುವ 'ಅಧಿನಾಯಕ ಜಯಹೇ ಎಂಬ ಸಾಲು ಅಥವಾ ಭಾರತ ಭಾಗ್ಯ ವಿಧಾತ ಎಂಬ ಸಾಲುಗಳು ಯಾವ ಮಹಾಪುರುಷನನ್ನು ಕುರಿತು ಬರೆಯಲಾಗಿದೆ ಎಂದು ಯೋಚಿಸಬಹುದೇ? ಇದು ಅಮೋಘ ವರ್ಷ ನೃಪತುಂಗ ಅಥವಾ ಅಶೋಕ ಅಥವಾ ಇಮ್ಮಡಿ ಪುಲಕೇಶಿ ಇಲ್ಲವೇ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ಸಾಲುಗಳು ಖಂಡಿತ ಆಗಿರಲು ಸಾಧ್ಯವಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಭಾರತದ ವೈವಿಧ್ಯವನ್ನು ಕಾಪಾಡಿದ ವಿಧಾತ ನೀನು ಎಂದು ಜೈಕಾರ ಹಾಕಲಾಗಿದೆ, ಇದಕ್ಕೆ ಪೂರಕವಾಗಿ ಭಾರತದ ಜನ ವೈವಿಧ್ಯ ಹಾಗೂ ಭೂಪ್ರದೇಶಗಳ ಅದರಲ್ಲೂ ಬ್ರಿಟಿಷ್ ವ್ಯಾಪ್ತಿಯಲ್ಲಿದ್ದ ಆಧುನಿಕ ಭಾರತದ ವಿವರಗಳು ಕಾಣಿಸುತ್ತವೆ. ನಿಜವಾಗಿ ಇಂಥ ಗೀತೆಯನ್ನು ಬರೆದುಕೊಡುವಂತೆ ಕೋರಿದಾಗ ಟಾಗೋರರಗೆ ಇರಿಸುಮುರಿಸು ಉಂಟಾಯಿತಂತೆ. ದೇಶದ ಬಗ್ಗೆ ಅಪಾರ ಅಭಿಮಾನವಿದ್ದ ಟಾಗೋರರಿಗೆ ನಿಜವಾಗಿ ಜಾರ್ಜ್ನ ಸ್ವಾಗತಕ್ಕಾಗಿ ಹಾಡು ಬರೆದುಕೊಡುವಂತೆ ಬ್ರಿಟಿಷ್ ಅಧಿಕಾರಿಗಳ ಕೋರಿಕೆಯನ್ನೂ ಅವರು ತಿರಸ್ಕರಿಸುವಂತೆ ಇರಲಿಲ್ಲ, ಹೀಗಾಗಿ ಪದ್ಯದ ಮೊದಲಸಾಲು ಮಾತ್ರ ಸ್ವಾಗತ ಗೀತೆಯಂತೆ ಇದ್ದು  ಅನಂತರದ ಸಾಲುಗಳು ದಿವ್ಯತೆಯತ್ತ ಒಯ್ಯುತ್ತವೆ.

ಭಾರತದ ಭವಿಷ್ಯ ದಿವ್ಯ  ಶಕ್ತಿಯಿಂದ ಸಾಗುತ್ತಿದೆಯೇ ವಿನಾ ದೇಶವಾಳುತ್ತಿರುವ ಯಾವುದೇ ರಾಜನಿಂದ ಅಲ್ಲ ಎಂಬ ಆಶಯ ಇದರಲ್ಲಿದೆ. ೧೯೧೧ರಲ್ಲಿ  ಆತ ಭಾರತಕ್ಕೆ ಆಗಮಿಸುವವನಿದ್ದ. ಇಲ್ಲಿ ಬರುವ ಅಧಿನಾಯಕ ಎಂಬ ಕಲ್ಪನೆ ಭಾರತದ ಪುರಾಣ ಕಾವ್ಯಗಳಲ್ಲಿ ಬರುವ ಎಲ್ಲ ಸೇನಾ ಬಲದ ಮಹಾನಾಯಕ ಸ್ಕಂದ ಅಥವಾ ಸುಬ್ರಹ್ಮಣ್ಯನನ್ನು ಕುರಿತು ಕೂಡ ಇರಬಹುದು, ಈ ಗೀತೆಯನ್ನು ರಾಜಕೀಯ ದೃಷ್ಟಿಯಿಂದಲೂ ಭಾರತದ ಆಧ್ಯಾತ್ಮಿಕ ದೃಷ್ಟಿಯಿಂದಲೂ ನೋಡಬಹುದು, ಹೇಗೆ ನೋಡಿದರೂ ಇದರಲ್ಲಿ ಕಾಣಿಸುವುದು ಧ್ಯಾನವೇ. ಯಾವುದೇ ದೇಶದ ರಾಷ್ಟçಗೀತೆ ನೋಡಿ ಅವುಗಳಲ್ಲಿ ತಮ್ಮ ದೇಶದ ವರ್ಣನೆ ಹಾಗೂ ಭಾವನಾತ್ಮಕ ಒಳನೋಟ ಇದ್ದರೂ ವ್ಯಕ್ತಿ ವರ್ಣನೆಯ ಛಾಯೆ ಇಷ್ಟು ಮಟ್ಟಿಗೆ ಕಾಣುವುದಿಲ್ಲ. ಸಾಮಾನ್ಯವಾಗಿ ಯಾವುದೇ ದೇಶದ ರಾಷ್ಟ್ರಗೀತೆಯಲ್ಲಿ ಆಯಾ ದೇಶಗಳ ಭಕ್ತಿ, ಐಕ್ಯತೆ ಮತ್ತು ತ್ಯಾಗಗಳ ವರ್ಣನೆ  ಮತ್ತು ಅವುಗಳನ್ನು ಮುಂದುವರೆಸುವ ಆಶಯ ಸಾಮಾನ್ಯವಾಗಿರುತ್ತದೆ. ಆದರೆ ನಮ್ಮ ರಾಷ್ಟ್ರಗೀತೆಯಲ್ಲಿ ಜೈ ಜೈ ಅನ್ನುವ ಭಜನೆಯ ಸಂಗತಿ ಹೆಚ್ಚಾಗಿದೆ. ಜೊತೆಗೆ ಆಯಾ ದೇಶದ ಸಂಸ್ಕೃತಿ, ಇತಿಹಾಸ, ಜನ ಸಮಾಜಗಳು, ಸ್ವಾತಂತ್ರ್ಯ ಪಡೆದ ಬಗೆ ಇತ್ಯಾದಿ ವಿವರ ಇರುತ್ತದೆ, ನಮ್ಮ ಗೀತೆಯಲ್ಲಿಯೂ ಇವು ಸ್ವಲ್ಪ ಮಟ್ಟಿಗೆ ಕಾಣಿಸುತ್ತವೆಯಾದರೂ ಅದಕ್ಕೆ ಇರುವ ಗಮನ ಕಡಿಮೆ. ಸಾಮಾನ್ಯವಾಗಿ ರಾಷ್ಟ್ರಗೀತೆಗಳನ್ನು ಕೇಳಿದಾಗ ತಮ್ಮ ದೇಶದ ಬಗ್ಗೆ ಹೆಮ್ಮೆ ಮೂಡುವಂತೆ, ತಾವು ಇಂಥ ಪರಂಪರೆಗೆ ಸೇರಿದವರೆಂಬ ಭಾವ ತೀವ್ರವಾಗಿ ಆಯಾ ದೇಶದ ಜನರಲ್ಲಿ ಮೂಡುವಂತೆ ಇರುತ್ತದೆ, ಆದರೆ ನಮ್ಮ ಗೀತೆಯಲ್ಲಿ ಬ್ರಿಟಿಷರಿಗೆ ದಾಸರಾಗಿ ಒಪ್ಪಿಸಿಕೊಂಡ ಭಾವ ಮೂಡಲು ಸಾಧ್ಯವಿದೆ. ಹಿಂದಿನದನ್ನು ಹೇಳುವುದಕ್ಕಿಂತ ನಮ್ಮ ಭದ್ರ ಭವಿಷ್ಯದ ಕನಸು ಅದರಲ್ಲಿ ಎದ್ದು ಕಾಣುವಂತೆ ಇರುತ್ತದೆ. ನಮ್ಮ ರಾಷ್ಟ್ರಗೀತೆ ಎಂದು ಪರಿಗಣಿತವಾದ ಹಾಡನ್ನು ಟಾಗೋರರು ಮೊದಲು ಮೂಲತಃ ಬಂಗಾಳಿಯಲ್ಲಿ ರಚಿಸಿದ್ದರು, ಇದರ ಹಿಂದಿ ಅವತರಣಿಕೆಯನ್ನು ೧೯೫೦ ಜನವರಿ೨೪ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.ಇದರ ಸಂಪೂರ್ಣ ಗಾಯನಕ್ಕೆ ೫೨ ಸೆಕೆಂಡ್ ಕಾಲಾವಧಿ ಬೇಕಾಗುತ್ತಿತ್ತು. ಅನಂತರ ಮೊದಲ ಹಾಗೂ ಕೊನೆಯ ಸಾಲುಗಳ ಪರಿಷ್ಕರಣೆಯ ಮೂಲಕ ಅದು ೨೦ ಸೆಕೆಂಡ್ ತೆಗೆದುಕೊಳ್ಳುವಂತೆ ಮಾಡಲಾಯಿತು. ಭಾರತದ ರಾಷ್ಟ್ರಗೀತೆಯ ಸಾಹಿತ್ಯ ಮತ್ತು ಲಿಪಿ ಬಹುತೇಕ ನಮ್ಮ ದೇಶದ ಲಿಪಿ ಇರುವ ಎಲ್ಲ ಭಾಷೆಗಳಲ್ಲೂ ಲಭ್ಯವಿದೆ. ಮೊದಲು ಬಂಗಾಳಿಯ ಅನಂತರ ಇದು ಹಿಂದಿ, ಇಂಗ್ಲಿಷ್, ಗುಜರಾತಿ, ತೆಲುಗು ಹಾಗೂ ಕನ್ನಡಗಳಲ್ಲಿ ಕಾಣಿಸಿತು. ಜೊತೆಗೆ ಆಯಾ ದೇಶದ ಸಂಸ್ಕೃತಿ, ಇತಿಹಾಸ, ಜನ ಸಮಾಜಗಳು, ಸ್ವಾತಂತ್ರ್ಯ ಪಡೆದ ಬಗೆ ಇತ್ಯಾದಿ ವಿವರ ಇರುತ್ತದೆ, ನಮ್ಮ ಗೀತೆಯಲ್ಲಿಯೂ ಇವು ಸ್ವಲ್ಪ ಮಟ್ಟಿಗೆ ಕಾಣಿಸುತ್ತವೆಯಾದರೂ ಅದಕ್ಕೆ ಇರುವ ಗಮನ ಕಡಿಮೆ. ಸಾಮಾನ್ಯವಾಗಿ ರಾಷ್ಟ್ರಗೀತೆಗಳನ್ನು ಕೇಳಿದಾಗ ತಮ್ಮ ದೇಶದ ಬಗ್ಗೆ ಹೆಮ್ಮೆ ಮೂಡುವಂತೆ, ತಾವು ಇಂಥ ಪರಂಪರೆಗೆ ಸೇರಿದವರೆಂಬ ಭಾವ ತೀವ್ರವಾಗಿ ಆಯಾ ದೇಶದ ಜನರಲ್ಲಿ ಮೂಡುವಂತೆ ಇರುತ್ತದೆ, ಆದರೆ ನಮ್ಮ ಗೀತೆಯಲ್ಲಿ ಬ್ರಿಟಿಷರಿಗೆ ದಾಸರಾಗಿ ಒಪ್ಪಿಸಿಕೊಂಡ ಭಾವ ಮೂಡಲು ಸಾಧ್ಯವಿದೆ. ಹಿಂದಿನದನ್ನು ಹೇಳುವುದಕ್ಕಿಂತ ನಮ್ಮ ಭದ್ರ ಭವಿಷ್ಯದ ಕನಸು ಅದರಲ್ಲಿ ಎದ್ದು ಕಾಣುವಂತೆ ಇರುತ್ತದೆ. ನಮ್ಮ ರಾಷ್ಟç ಗೀತೆ ಎಂದು ಪರಿಗಣಿತವಾದ ಹಾಡನ್ನು ಟಾಗೋರರು ಮೊದಲು ಮೂಲತಃ ಬಂಗಾಳಿಯಲ್ಲಿ ರಚಿಸಿದ್ದರು, ಇದರ ಹಿಂದಿ ಅವತರಣಿಕೆಯನ್ನು ೧೯೫೦ ಜನವರಿ ೨೪ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.ಇದರ ಸಂಪೂರ್ಣ ಗಾಯನಕ್ಕೆ ೫೨ ಸೆಕೆಂಡ್ ಕಾಲಾವಧಿ ಬೇಕಾಗುತ್ತಿತ್ತು.ಅನಂತರ ಮೊದಲ ಹಾಗೂ ಕೊನೆಯ ಸಾಲುಗಳ ಪರಿಷ್ಕರಣೆಯ ಮೂಲಕ ಅದು ೨೦ ಸೆಕೆಂಡ್ ತೆಗೆದುಕೊಳ್ಳುವಂತೆ ಮಾಡಲಾಯಿತು.ಭಾರತದ ರಾಷ್ಟ್ರಗೀತೆಯ ಸಾಹಿತ್ಯ ಮತ್ತು ಲಿಪಿ ಬಹುತೇಕ ನಮ್ಮ ದೇಶದ ಲಿಪಿ ಇರುವ ಎಲ್ಲ ಭಾಷೆಗಳಲ್ಲೂ ಲಭ್ಯವಿದೆ. ಮೊದಲು ಬಂಗಾಳಿಯ ಅನಂತರ ಇದು ಹಿಂದಿ, ಇಂಗ್ಲಿಷ್, ಗುಜರಾತಿ, ತೆಲುಗು ಹಾಗೂ ಕನ್ನಡಗಳಲ್ಲಿ ಕಾಣಿಸಿತು. ೧೯೪೭ ಆಗಸ್ಟ್ ೧೫ರಂದು ಬ್ರಿಟಿಷ್ ಅಧಿಪತ್ಯದಿಂದ ಭಾರತ ಸ್ವಾತಂತ್ರ್ಯ ಪಡೆಯಿತು. ಮೂಲತಃ ಇದು ಬಂಗಾಳಿಯಲ್ಲಿ 'ಭಾರತೋ ಭಾಗ್ಯೋ ಬಿದಾತೋ' ಎಂದಿತ್ತು.ಮೊದಲ ಐದು ಸಾಲುಗಳಲ್ಲಿ ಬಂಗಾಳಿ ಮತ್ತು ಸಂಸ್ಕೃತ ಶಬ್ದಗಳು ಹೆಚ್ಚಾಗಿವೆ. ಮೊದಲ ಬಾರಿ ಇದನ್ನು ೧೯೧೧ ಡಿಸೆಂಬರ್ ೨೧ರಂದು ಭಾರತ ರಾಷ್ಟ್ರೀಯ ಕಾಗ್ರೆಸ್‌ನ  ವರ್ಷಾಚರಣೆಯ ಸಂದರ್ಭದಲ್ಲಿ ಹಾಡಲಾಯಿತು. ಮೂಲತಃ ಬಂಗಾಳಿಯಲ್ಲಿದ್ದ ಇದನ್ನು ಹಿಂದಿ ಮತ್ತು ಉರ್ದುಗಳಿಗೆ ಅಬಿದ್ ಅಲಿ ಅನ್ನುವವರು ಅನುವಾದಿಸಿದರು. ಅನಂತರ ೧೯೫೦ ಜನವರಿ ೨೪ರಂದು ನಮ್ಮ ಸಂವಿಧಾನ ಇದನ್ನು ರಾಷ್ಟ್ರಗೀತೆ ಎಂದು ಸ್ವೀಕರಿಸಿತು. ನಮ್ಮ ದೇಶದ ಜಾತಿ, ಸಂಸ್ಕೃತಿ, ಭೌಗೋಳಿಕ ಬಹುಳತೆಯನ್ನು ಇದರಲ್ಲಿ ವಿಶಢಷವಾಗಿ ಬಣ್ಣಿಸಲಾಗಿದೆ. ಇಷ್ಟಾಗಿಯೂ ನೀನು ನಮ್ಮೆಲ್ಲರ ಜನರ ಮನದಲ್ಲಿರುವ ದೊರೆ ಅನ್ನಲಾಗಿದೆ. ವಿಜಯ ಸದಾ ನಿಮಗಿರಲಿ ಎಂದು ಹಾರೈಸಲಾಗಿದೆ. ಈ ಜೈಕಾರ ವಿಂಧ್ಯ ಹಿಮಾಲಯಗಳಿಂದ ಪ್ರತಿಧ್ವನಿಸುತ್ತಿದೆ, ಸುತ್ತಲೂ ಹರಡಿರುವ ಸಮುದ್ರದ ಅಲೆಗಳಲ್ಲಿ ಕೇಳಿಸುತ್ತಿದೆ ಎಂದು ಸ್ತುತಿಸಲಾಗಿದೆ. ನಿನ್ನ ಕೈಯಡಿಯಲ್ಲಿರುವ ಸಕಲ ಜನರ ಹಾರೈಕೆ ನಿನ್ನೊಂದಿಗಿದೆ, ನಮ್ಮೆಲ್ಲ ಜನರ ಮನದಲ್ಲಿ ನೀನು ಇದ್ದೀಯಾ, ದೇಶದ ಭಾಗ್ಯ ಕೊಟ್ಟವನು ನೀನು ಎಂದೂ ಬಣ್ಣಿಸಲಾಗಿದೆ.

ನಾವು ಈಗ ಹಾಡುತ್ತಿರುವ ರಾಷ್ಟ್ರಗೀತೆಯ ದಾಟಿ ಆಂಧ್ರದ ತೆಲಂಗಾಣದ ಮದನಪಲ್ಲಿಯ ಬೆಸೆಂಟ್ ಕಾಲೇಜಿಗೆ ಬಂದಿದ್ದರು. ಟಾಗೋರರು ಇಲ್ಲಿಗೆ ೧೯೧೯ರ ಫೆಬ್ರವರಿಯಲ್ಲಿ ಬಂದಿದ್ದರು. ಅಲ್ಲಿ ಒಂದು ಸ್ವಾಗತ ಗೀತೆ ಹಾಡಲಾಯಿತು. ಜೇಮ್ಸ್  ಕಸಿನ್ಸ್ ಅನ್ನುವವರು ಆ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅವರು ಜನಮನಗಣವನ್ನು ಇಂಗ್ಲಿಷಿಗೆ ಅನುವಾದಿಸಿದರು.ಇದಕ್ಕೆ ಅವರು ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂದು ಹೆಸರಿಸಿದ್ದರು. 

ಮದನಪಲ್ಲಿಯಲ್ಲಿ ಹಾಡುವವರೆಗೂ ಇದು ಕೇವಲ ಗೀತೆಯಾಗಿತ್ತು, ಮದನಪಲ್ಲಿಯ ಬೆಸೆಂಟ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಜೇಮ್ಸ್ ಕಸಿನ್ಸ್ ಅವರ ಜೊತೆ ಟಾಗೋರ್ ಉಳಿದುಕೊಂಡಿದ್ದರು, ಕಸಿನ್ಸ್ ಅವರ ಪತ್ನಿ ಮಾರ್ಗರೆಟ್ ಈ ಗೀತೆಯನ್ನು ಗಂಭೀರವಾಗಿ ಅಧ್ಯಯನ ಮಾಡಿ ಇದಕ್ಕೊಂದು ಸಂಗೀತ ಸಂಯೋಜನೆ ಮಾಡಿದರು. ಈ ಸಂಯೋಜನೆಯನ್ನು ಸ್ವತಃ ಟಾಗೋರ್ ಮೆಚ್ಚಿದ್ದರು. ಈ ಬೆಸೆಂಟ್ ಫಿಲಾಸಫಿಕಲ್ ಕಾಲೇಜು ಮೊದಲಬಾರಿಗೆ ಇದನ್ನು ತಮ್ಮ ಕಾಲೇಜಿನ ಹಾಡನ್ನಾಗಿ ಅಳವಡಿಸಿಕೊಂಡಿತು.ಅನಂತರ ಇದನ್ನು ಅಕ್ಕಪಕ್ಕದ ಪ್ರದೇಶಕ್ಕೆ ಪರಿಚಯಿಸಿತು. ಅನಂತರ ಮದನಪಲ್ಲಿಯ ಈ ಸಂಯೋಜನೆಯನ್ನೇ  ಸಂವಿಧಾನ ಒಪ್ಪಿತು.













 



No comments:

Post a Comment