ಇದೀಗ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನವೊಂದು ವಿಶ್ವದ ದೊಡ್ಡಣ್ಣನೆನಿಸಿಕೊಂಡ ಅಮೆರಿಕದ ನಿದ್ರೆ ಕೆಡಿಸಿದೆ,ಇದಕ್ಕೆ ಕಾರಣ ಸದ್ಯ ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮ್ಮೇಳನ, ಈ ಸಮ್ಮೇಳನ ಪ್ರತಿ ವರ್ಷ ನಡೆಯುತ್ತದೆ. ಆದರೆ ಈ ಬಾರಿ ಈ ಸಮ್ಮೇಳನ ಅಮೆರಿಕದ ಬುಡಕ್ಕೆ ಬೆಂಕಿ ಹಚ್ಚಿದೆ. ಇದಕ್ಕೆ ಸ್ವತಃ ಅಮೆರಿಕವೇ ಮೂಲ ಕಾರಣ. ಟ್ರಂಪ್ ಅಧ್ಯಕ್ಷನಾದ ಮೇಲೆ ಜಗತ್ತಿನ ಮೇಲೆ ಕುಸಿಯುತ್ತಿರುವ ತನ್ನ ಪ್ರಭುತ್ವವನ್ನು ಬಲಗೊಳಿಸಿಕೊಳ್ಳಲು ಅಮೆರಿಕ ಒಂದರ ಮೇಲೊಂದರಂತೆ ಏಕಸ್ವಾಮ್ಯ ಸ್ಥಾಪಿಸುವ ಕ್ರಮಕ್ಕೆ ಮುಂದಾಯಿತು, ಇದರಿಂದ ಬೇಸತ್ತ ಅಮೆರಿಕ ನಿಲುವು ವಿರೋಧಿ ಜಾಗತಿಕ ರಾಷ್ಟçಗಳು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದವು, ಹಾಗೆ ನೋಡಿದರೆ ವಿಶ್ವಸಂಸ್ಥೆಯ ಬಲ ಕುಗ್ಗಿಸುವ ದೃಷ್ಟಿಯಿಂದ ಹಾಗೂ ತನ್ನ ಪ್ರಭುತ್ವ ಮೆರೆಯುವ ಉದ್ದೇಶದಿಂದ ಅಮೆರಿಕ ೧೯೭೫ರಲ್ಲಿ ತಾನೇ ಮುಂದಾಗಿ ಬ್ರಿಟನ್, ಜಪಾನ್, ಜರ್ಮನಿ, ಇಟಲಿ, ಫ್ರಾನ್ಸ್ ಮತ್ತು ಕೆನಡಾಗಳನ್ನು ಸೇರಿಸಿಕೊಂಡು ಕೂಟ ಮಾಡಿಕೊಂಡಿತ್ತು, ಇದರ ಮೂಲಕ ಜಗತ್ತಿನ ಮೇಲೆ ತನ್ನ ಹಿಡಿತ ಇರುವಂತೆ ವಿಶ್ವ ಸಂಸ್ಥೆಯಲ್ಲಿ ವಿಟೋ ಪರಮಾಧಿಕಾರ ಇರುವಂತೆ ಮಾಡಿಕೊಂಡು ಮನೋಪಲಿ ಮಾಡುತ್ತಿತ್ತು, ಆದರೆ ದಶಕಗಳ ಹಿಂದೆ ಬದಲಾದ ಜಾಗತಿಕ ವಿದ್ಯಮಾನ, ರಾಜಕೀಯ ನಿಲುವುಗಳು ಹಾಗೂ ಜಾಗತೀಕರಣ, ಉದಾರೀಕರಣಗಳ ಫಲವಾಗಿ ಅಮೆರಿಕದ ಶಕ್ತಿಗೆ ಪರ್ಯಾಯ ಕೂಟವನ್ನು ರಚಿಸಿಕೊಳ್ಳುವ ಉದ್ದೇಶದಿಂದ ಬ್ರೆಜಿಲ್ ಮುಖಂಡತ್ವದಲ್ಲಿ ಬ್ರೆಜಿಲ್, ರಷ್ಯಾ, ¨ಇಂಡಿಯಾ, ಚೀನಾ,ದಕ್ಷಿಣ ಆಫ್ರಿಕಾ, ಯುಎಇ ಮೊದಲಾದ ದೇಶಗಳು ೨೦೦೯ರಲ್ಲಿ ಎಲ್ಲ ದೇಶಗಳ ಇಂಗ್ಲಿಷ್ ಹೆಸರಿನ ಮೊದಲ ಅಕ್ಷರ ಸೇರಿಸಿ ಬ್ರಿಕ್ಸ್ ಎಂಬ ಸಂಘಟನೆ ರಚಿಸಿಕೊಂಡವು, ಆರಂಭದಲ್ಲಿ ಐದೇ ದೇಶಗಳಿದ್ದ ಈ ಸಂಘಟನೆಯಲ್ಲಿ ಸದ್ಯ ಹನ್ನೊಂದು ದೇಶಗಳು ಸದಸ್ಯ ದೇಶಗಳಾಗಿವೆ, ಪ್ರತಿವರ್ಷ ಸಮ್ಮೇಳನ ನಡೆಸುವ ಇದರಲ್ಲಿ ಪ್ರತಿವರ್ಷ ಹೊಸದಾಗಿ ಸೇರಿಕೊಳ್ಳುವ ದೇಶಗಳಿವೆ, ಸಾಮಾನ್ಯವಾಗಿ ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ಕಳೆದ ವರ್ಷವೇ ಅಮೆರಿಕದ ಡಾಲರ್ ಗೆ ಪರ್ಯಾಯವಾದ ಹಣವನ್ನು ಜಾರಿಗೆ ತರುವ ಪ್ರಸ್ತಾಪವಿತ್ತು, ಆದರೆ ಈ ಬಾರಿ ಬ್ರಿಕ್ಸ್ ನ ಎಲ್ಲ ದೇಶಗಳು ಸೇರಿ ತಮ್ಮೆಲ್ಲ ದೇಶಗಳಿಗೆ ಸಾಮಾನ್ಯವಾದ ಅಂತರಾಷ್ಟೀಯ ವ್ಯವಹಾರಕ್ಕೆ ನೆರವಾಗುವ ಡಿಜಿಟಲ್ ರೂಪದ ಹಣವನ್ನು ಒಪ್ಪಿವೆ, ಜಗತ್ತಿನ ಶೇ, ೫೬ ಜನಸಂಖ್ಯೆ ಹೊಂದಿರುವ ಈ ದೇಶಗಳು ತೆಗೆದುಕೊಂಡ ಈ ತೀರ್ಮಾನದಿಂದ ಅಮೆರಿಕದ ಡಾಲರ್ ಸಂಪೂರ್ಣ ಮಹತ್ವ ಕಳೆದುಕೊಳ್ಳಲಿದೆ, ಈಗಾಗಲೇ ಯೂರೋಪಿನ ದೇಶಗಳು ಸೇರಿ ರೂಪಿಸಿಕೊಂಡ ಯೂರೋ ಹಣ ಅಮೆರಿಕ ಡಾಲರ್ ನ ಮೂಳೆಗೆ ಏಟುಕೊಟ್ಟಿವೆ, ಆದರೆ ಈಗ ಬ್ರಿಕ್ಸ್ ದೇಶಗಳು ಕೈಗೊಂಡ ನಿರ್ಣಯದಿಂದ ಅಮೆರಿಕ ಡಾಲರ್ ನ ಬೆನ್ನು ಮೂಳೆಯೇ ಮುರಿದಂತಾಗಿದೆ. ಈ ಎಲ್ಲ ದೇಶಗಳು ಒಗ್ಗೂಡಿ ಸಮನ ಕರೆನ್ಸಿಯನ್ನು ಜಾರಿಗೆ ತಂದರೆ ಅಮೆರಿಕದ ಕರೆನ್ಸಿಯ ಮೌಲ್ಯ ಪಾತಾಳ ಕಾಣುತ್ತದೆ, ಅಮೆರಿಕವನ್ನು ಎಲ್ಲ ದೇಶಗಳ ಪ್ರಭುವನ್ನಾಗಿ ಮಾಡುವ ಹವಣಿಕೆಯಲ್ಲಿ ಟ್ರಂಪ್ ಇದ್ದಾರೆ, ಆದರೆ ಐದಾರು ದಶಕಗಳ ಹಿಂದಿನ ಜಗತ್ತು ಈಗ ಇಲ್ಲ ಎಂಬ ಅರಿವು ಅವರಿಗೆ ಇಲ್ಲದೇ ಹೋಯ್ತು, ಆದ್ದರಿಂದ ಅಮೆರಿಕದ ನಡೆಯಿಂದ ಬೇಸತ್ತ ದೇಶಗಳು ತಮ್ಮ ಮಾರ್ಗ ಹುಡುಕಿಕೊಂಡಿವೆ, ಮಾಡಿದ್ದುಣ್ಣೋ ಮಹರಾಯ ಅನ್ನುವುದು ಇದಕ್ಕೇ ಇರಬೇಕು.

No comments:
Post a Comment