ತಾನು ಕೈಗೊಂಡ ಹುಚ್ಚುತನದ ನಿರ್ಧಾರದಿಂದ ಜಗತ್ತು ನಗುತ್ತದೆ ಎಂಬುದರ ಹೊರತಾಗಿಯೂ ಟ್ರಂಪ್ ಭಾರತದ ಆರ್ಥಿಕತೆ ಕುಸಿಯುತ್ತಿದೆ, ತನ್ನ ಕ್ರಮ ಅದಕ್ಕೆ ದೊಡ್ಡ ಹೊಡೆತ ಕೊಡುತ್ತದೆಂದು ಹೇಳಿಕೆ ಕೊಡುವ ಮೂಲಕ ಮತ್ತೆ ನಗೆಪಾಟಲಿಗೆ ಒಳಗಾಗಿದ್ದಾನೆ.ಭಾರತ ಸದ್ಯ ಜಾಗತಿಕ ಆರ್ಥಿಕತೆಯಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ ಎಂಬ ಅರಿವೇ ಆತನಿಗೆ ತಿಳಿದಿಲ್ಲ, ಹಿಂದೆ ವಾಜಪೇಯಿ ಆಡಳಿತವಿದ್ದಾಗ ಅಮೆರಿಕ ಭಾರತದ ವಸ್ತುಗಳ ಮೇಲೆ ಮಾತ್ರವಲ್ಲ ಸಂಪೂರ್ಣ ಭಾರತದೊಂದಿಗಿನ ವ್ಯವಹಾರದ ಮೇಲೆಯೇ ನಿಷೇಧ ಹೇರಿತ್ತು, ಆಗ ಇಂದಿನಂತೆ ಭಾರತದ ಆರ್ಥಿಕತೆ ಬೆಳೆದಿರಲಿಲ್ಲ, ಅಂಥಾದ್ದರಲ್ಲಿ ಆಗಲೇ ನಮಗೆ ಹೇಳಿಕೊಳ್ಳುವ ಹೊಡೆತ ಬಿದ್ದಿರಲಿಲ್ಲ, ಈಗ ಜಾಗತಿಕವಾಗಿ ನಾಲ್ಕನೆಯ ಸ್ಥಾನದಲ್ಲಿರುವ ಭಾರತ ಅಮೆರಿಕದ ಈ ಬೆದರಿಕೆಗೆ ಹೆದರಬೇಕಾದ ಅಗತ್ಯವೇ ಇಲ್ಲ, ಅಮೆರಿಕದ ಸ್ಥಿತಿ ಹಾಗೂ ಸ್ಥಾನ ಪ್ರಪಂಚದಲ್ಲಿ ದಶಕಗಳ ಹಿಂದೆ ಇದ್ದಂತೆ ಈಗ ಉಳಿದಿಲ್ಲ ಎಂಬ ಸತ್ಯವನ್ನು ಮೂರ್ಖ ಟ್ರಂಪ್ ಅರ್ಥ ಮಾಡಿಕೊಳ್ಳುತ್ತಿಲ್ಲ, ಎಲ್ಲ ವಿಷಯದಲ್ಲೂ ತಾನೇ ಜಗತ್ತಿನ ದೊಡ್ಡಣ್ಣನಾಗಿ ಇಂದಿಗೂ ಇದ್ದೇನೆಂಬ ಭ್ರಮೆಯಲ್ಲಿದೆ ಅಮೆರಿಕ. ಆದರೆ ಅತ್ತ ಅಮೆರಿಕದ ನಾಣ್ಯಕ್ಕಿದ್ದ ಜಾಗತಿಕ ಮೌಲ್ಯ ಒಂದೆಡೆ ಕುಸಿಯುತ್ತಿದೆ, ಅಮೆರಿಕದ ನಡೆಗೆ ಬೇಸತ್ತ ದೇಶಗಳು ಅಮೆರಿಕದ ಡಾಲರ್ ಗೆ ಬದಲಾಗಿ ತಮ್ಮದೇ ಪ್ರತಿ ನಾಣ್ಯ ಜಾರಿ ಮಾಡಿಕೊಂಡು ಅಮೆರಿಕಕ್ಕೆ ಭಾರೀ ಹೊಡೆತ ಕೊಟ್ಟಿವೆ. ಜೊತೆಗೆ ಅಮೆರಿಕದ ಮಾತನ್ನು ಯಾವ ದೇಶವೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಉಕ್ರೇನ್ ನಂಥ ದೇಶ ಅಮೆರಿಕ ಹೇಳಿ ಯುದ್ಧ ನಿಲ್ಲಿಸಲು ಕೊಟ್ಟ ಸಲಹೆಯನ್ನು ದೂರ ಬಿಸಾಡಿದೆ. ರಷ್ಯಾದೊಂದಿಗೆ ಯುದ್ಧ ಮುಂದುವರೆಸಿದೆ. ಇರಾನ್ ಮತ್ತು ಇರೇಲ್ ಯುದ್ಧದಲ್ಲೂ ಅಮೆರಿಕದ ಮಾತಿಗೆ ಕಿಮ್ಮತ್ತು ಸಿಕ್ಕಿಲ್ಲ, ಅಂಥಾದ್ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಈಚೆಗೆ ನಡೆದು ಪಾಕಿಸ್ತಾನ ಸೋತು ಸುಣ್ಣವಾಗಿ ಯುದ್ಧ ನಿಂತಾಗ ಇದನ್ನು ತಾನೇ ನಿಲ್ಲಿಸಿದ್ದು ಎಂಬ ಮೂರ್ಖ ಸುಳ್ಳು ಹೇಳಿ ನಗೆಗೀಡಾಗಿದ್ದ. ಹೇಗಾದರೂ ಮಾಡಿ ಕಳೆದು ಹೋದ ತನ್ನ ಸ್ಥಾನ ಮರ್ಯಾದೆಯನ್ನು ಮತ್ತೆ ಗಳಿಸಿಕೊಳ್ಳಬೇಕೆಂಬ ಹಠದಲ್ಲಿ ಟ್ರಂಪ್ ಹುಚ್ಚು ಹುಚ್ಚಾದ ನಿಲುವು ತೆಗೆದುಕೊಳ್ಳುತ್ತಿದ್ದಾನೆ, ಅದು ಅವನಿಗೆ ಬಿಟ್ಟ ವಿಷಯ, ಆದರೆ ಇಲ್ಲಿ ನಮ್ಮ ದೇಶದ ಕಾಂಗ್ರೆಸ್ ತೆರಿಗೆ ವಿಷಯದಲ್ಲಿ ಮೋದಿಗೆ ಸೋಲಾಯಿತು ಎಂದು ದೇಶಾದ್ಯಂತ ಸಂಭ್ರಮಾಚರಣೆ ಮಾಡುತ್ತ ಟ್ರಂಪ್ ಭಜನೆಯಲ್ಲಿ ತೊಡಗಿದೆ. ಆದರೆ ತೆರಿಗೆ ಬಿದ್ದಿರುವುದು ದೇಶಕ್ಕೆ, ಮೋದಿಗಲ್ಲ ಎಂಬ ಕನಿಷ್ಠ ಅರಿವು ಈ ಪಕ್ಷಕ್ಕುಲ್ಲದೇ ಹೋಗಿದೆ, ಮೋದಿ ವಿರೋಧಕ್ಕೆ ಏನು ಸಿಕ್ಕಿದರೂ ಸರಿ ಎಂಬ ನಿಲುವಿಗೆ ಅದು ಬಂದ ಪರಿಣಾಮ ಇದು. ತಾನು ಹೀಗೆ ಮಾಡುವುದರ ಪರಿಣಾಮ ಏನಾಗುತ್ತದೆಂಬ ತಿಳಿವಳಿಕೆ ಕಾಂಗ್ರೆಸ್‌ಗೆ ಇಲ್ಲ.
ಭಾರತ ರಷ್ಯಾದೊಂದಿಗೆ ವ್ಯಾಪಾರ ಸಂಬಂಧವಿಟ್ಟುಕೊಂಡಿದೆ ಎಂಬ ಕಾರಣಕ್ಕೆ ಅಮೆರಿಕ ಭಾರತದ ಮೇಲೆ ಅತಿಯಾದ ತೆರಿಗೆ ವಿಧಿಸಿ ಸಂಭ್ರಮಿಸುತ್ತಿದೆ, ಇದಕ್ಕೆ ಬೆಂಬಲ ಕೊಟ್ಟ ಯುರೋಪಿನ ಒಕ್ಕೂಟ ಹಾಗೂ ಚೀನಾ ಕೂಡ ರಷ್ಯಾದೊಂದಿಗೆ ವ್ಯಾಪಾರ ಸಂಬಂಧವಿಟ್ಟುಕೊಂಡಿವೆ ಎಂಬುದನ್ನು ಗಮನಿಸಬೇಕು, ಚೀನಾಕ್ಕೆ ಕೂಡ ಅದು ಶೇ೨೫ ತೆರಿಗೆ ವಿಧಿಸಿದೆ, ಟರ್ಕಿ ಕೂಡ ರಷ್ಯಾದೊಂದಿಗೆ ವ್ಯಾಪಾರ ಸಂಬಂಧ ಮಾತ್ರವಲ್ಲ, ಕಚ್ಚಾ ತೈಲ ಖರೀದಿ ಮಾಡುತ್ತದೆ, ಭಾರತಕ್ಕಿಂತ ಹೆಚ್ಚಾಗಿ ಚೀನಾ ತನ್ನ ಅಗತ್ಯದ ಶೇ.೪೭ರಷ್ಟನ್ನು ರಷ್ಯಾದಿಂದ ಖರೀದಿಸುತ್ತದೆ, ಜೊತೆಗೆ ಚಿಕ್ಕ ದೇಶಗಳಾದ ಕಾಂಬೋಡಿಯಾದಂಥವು ಕೂಡ ರಷ್ಯಾದಿಂದ ತೈಲ ಖರೀದಿ ಮಾಡುತ್ತವೆ, ಇವೆಲ್ಲ ಆಯಾ ದೇಶಗಳ ಸ್ವ ಹಿತಾಸಕ್ತಿಯ ವಿಷಯ, ಅಮೆರಿಕದ ನಿರ್ದೇಶನದ ಅಗತ್ಯ ಇದಕ್ಕಿರುವುದಿಲ್ಲ, ಈ ಕನಿಷ್ಠ ತಿಳಿವಳಿಕೆ ಈ ಅವಿವೇಕಿ ಟ್ರಂಪ್ ಗೆ ಗೊತ್ತಾಗುವುದಿಲ್ಲ, ಅಷ್ಟಕ್ಕೂ ಈ ದೇಶಗಳ ವ್ಯವಹಾರದಿಂದ ಅಹಂಕಾರಕ್ಕಲ್ಲದೇ ಅದರ ಸಾರ್ವಭೌಮತ್ವಕ್ಕೇನೂ ಧಕ್ಕೆ ಆಗುವುದಿಲ್ಲ, ಆದರೆ ಅದು ತನ್ನ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಭಾರತಕ್ಕೆ ಪಾಠ ಕಲಿಸುವ ಭಾಗವಾಗಿ ಹೆಚ್ಚಿನ ತೆರಿಗೆ ವಿಧಿಸುವ ಕ್ರಮ ಭಾರತದ ಸಾರ್ವಭೌಮತೆಯ ಮೇಲೆ ಸವಾರಿ ಮಾಡುವ ಯತ್ನವಾಗಿದೆ. ಅದು ವಿಶೇಷವಾಗಿ ಭಾರತವನ್ನು ಗುರಿ ಮಾಡುತ್ತಿರುವುದರಲ್ಲಿ ಅದರ ಬರೀ ಸ್ವಾರ್ಥವಿದೆ. ಭಾರತದಂಥ ಬಲಿಷ್ಠ ದೇಶ ತನ್ನ ಅಡಿಯಾಳಾಗಿರಲಿ ಎಂಬುದು ಅದರ ದುರಾಲೋಚನೆ, ಭಾರತದ ವೇಗದ ಅಭಿವೃದ್ಧಿ ಅದರ ಹೊಟ್ಟೆಯುರಿಗೆ ಕಾರಣ. ಅದು ಕಾಂಬೋಡಿಯಾದಂಥ ಪುಟ್ಟ ಗುಬ್ಬಿ ದೇಶಗಳನ್ನು ತನ್ನ ಕ್ರಮಕ್ಕೆ ಗುರಿ ಮಾಡುತ್ತಿಲ್ಲ, ಏಕೆಂದರೆ ಅವನ್ನು ಕಟ್ಟಿಕೊಂಡರೂ ಒಂದೇ ಬಿಟ್ಟರೂ ಒಂದೇ, ಪ್ರಪಂಚದ ೬೮ ದೇಶಗಳು ಹಾಗೂ ಯೂರೋಪಿನ ೨೭ ದೇಶಗಳ ಮೇಲೆ ಟ್ರಂಪ್ ತೆರಿಗೆ ಹೆಚ್ಚಳ ಮಾಡಿದ್ದಾನೆ.ಇದರ ಫಲವನ್ನು ಟ್ರಂಪ್ ಕಾಣತೊಡಗಿದ್ದಾನೆ, ಈಗಾಗಲೇ ಅಲ್ಲಿನ ಶೇರು ಮಾರುಕಟ್ಟೆ ಸನ್ಸೆಕ್ಸ್ನಲ್ಲಿ ೧೦೦ ಪಾಯಿಂಟ್ ಪತನವಾಗಿದೆ. ಇದು ಭಾರತದ ವಿರುದ್ಧದ ಕ್ರಮದ ಫಲ ಉಳಿದ ದೇಶಗಳಿಂದ ಆದ ಹಾನಿಯ ಅಂದಾಜು ಇನ್ನೂ ಸಿಕ್ಕಿಲ್ಲ. ನಿಫ್ಟಿ ಕೂಡ ೫೦ ಪಾಯಿಂಟ್ ಪತನವಾಗಿದೆ.ಶುಕ್ರವಾರದವರೆಗೂ ಅದರ ಶೇರು ಮಾರುಕಟ್ಟೆ ಕೆಂಪು ಸಂಕೇತ ಕಾಣಿಸುತ್ತಿತ್ತು.ನಿಫ್ಟಿಯಂತೂ ೨೪ , ೭೫೦ ಪಾಯಿಂಟ್ ಪತನ ಕಂಡಿತ್ತು. ಸೆನ್ಸೆಕ್ಸ್ ೮೧, ೦೪೭ರಷ್ಟು ಕುಸಿತಕಂಡಿತು. ಭಾರತಕ್ಕೆ ವಿಧಿಸಿದ ತೆರಿಗೆಯ ಕಾರಣದಿಂದ ಅಲ್ಲಿನ ಮಾರುಕಟ್ಟೆ ಶೇ. ೧೭ ಪತನ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.ಇದಲ್ಲದೇ ಟ್ರಂಪ್ ನ ಅವಿವೇಕತನದ ನಿರ್ಧಾರದಿಂದ ಎರಡೂ ದೇಶಗಳ ಸೇನಾ ವ್ಯವಸ್ಥೆ ಮತ್ತು ಸಂಬಂಧಗಳ ಮೇಲೆಯೂ ಪರಿಣಾಮವಾಗಲಿದೆ. ಭಾರತದ ಹೊರತಾಗಿ ಅಮೆರಿಕ ಇರಾಕ್ ಮೇಲೆ ಶೇ.೩೫ ತೆರಿಗೆ ಹಾಕಿದೆ,ಸಿರಿಯಾ ಮೇಲೆ ಅತ್ಯಂತ ಹೆಚ್ಚು ಶೇ೪೧. ತೆರಿಗೆ ವಿಧಿಸಿದೆ. ಆದರೆ ಅವುಗಳ ಸಂಬಂಧ ಅಷ್ಟಕ್ಕಷ್ಟೇ.
ತಮಾಷೆ ಅಂದರೆ ಕಿತ್ತುಹೋದ ಪಾಕಿಸ್ತಾನವನ್ನು ತನ್ನ ಅತ್ಯಂತ ಆಪ್ತ ಮಿತ್ರನಂತೆ ಪರಿಗಣಿಸುವ ಅಮೆರಿಕ ಪಾಕಿಸ್ತಾನ ರಷ್ಯಾದೊಂದಿಗೆ ಎಲ್ ಪಿಜಿ, ಮೂಲಭೂತ ಸೌಕರ್ಯ, ವಿದ್ಯುತ್ ಮೊದಲಾದ ಹತ್ತಾರು ಸಂಬಂಧವಿಟ್ಟುಕೊಂಡಿದೆ, ಅದರ ಮೇಲೆ ಕ್ರಮವಿಲ್ಲ. ಪಾಕಿಸ್ತಾನದ ಮೇಲೆ ಅದು ಶೇ.೧೯ ತೆರಿಗೆ ವಿಧಿಸಿದೆ. ಆದರೆ ಅದು ಪಾಕಿಸ್ತಾನದಿಂದ ವಸ್ತçಗಳನ್ನು ಬಿಟ್ಟು ಹೇಳಿಕೊಳ್ಳುವ ಬೇರೆ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದಿಲ್ಲ, ಆದರೆ ಭಾರತದಿಂದ ಔಷಧ, ತಂತ್ರಜ್ಞಾನ ಉಪಕರಣ , ಆಹಾರ ಮೊದಲಾದ ಅನೇಕ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ, ತನ್ನ ತೆರಿಗೆ ನೀತಿಯಿಂದ ಭಾರತದೊಂದಿಗಿನ ಇಂಥ ಸಂಬಂಧ ಹಾಳಾಗಬಹುದೆಂಬ ವಿವೇಚನೆಯೂ ಆ ಅವಿವೇಕಿಗೆ ಇಲ್ಲ. ಈಗ ಭಾರತ ಅಮೆರಿಕಕ್ಕೆ ಕಳಿಸಿದ್ದ ಅಪಾರ ಪ್ರಮಾಣದ ಅಕ್ಕಿಯನ್ನು ವಾಪಸ್ ಪಡೆದು ಮೊದಲ ಪಾಠ ಶುರು ಮಾಡಿದೆ. ತೀವ್ರ ಅಕ್ಕಿ ಕೊರತೆ ಶುರುವಾಗುತ್ತಿರುವ ಅಮೆರಿಕಕ್ಕೆ ಇದು ದೊಡ್ಡ ಆಘಾತ ಕೊಡಲಿದೆ, ನಿಮ್ಮ ವಿರುದ್ಧ ಕೈಗೊಂಡ ತೆರಿಗೆ ಕೈಬಿಡುತ್ತೇವೆ ಎಂದು ಅದು ಮಂಡಿಯೂರುವ ಸ್ಥಿತಿ ಸದ್ಯ ಬರಲಿದೆ, ನಮಗೆ ಬೇಕಾಗಿರುವುದೂ ಅದೇ.
ಅಮೆರಿಕದ ತೆರಿಗೆ ನೀತಿಯಿಂದ ಭಾರತದ ಕೃಷಿ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮವಾಗುತ್ತದೆ ಎಂಬುದು ಆತಂಕ ಪಡಬೇಕಾದ ಸಂಗತಿ.
ಭಾರತ ತಮ್ಮ ದೇಶದಿಂದ ಅಮೆರಿಕದ ಜೋಳವನ್ನು ಖರೀದಿಸಲಿ ಎಂಬುದು ಅಮೆರಿಕದ ಆಸೆ. ಇದನ್ನು ಅಮೆರಿಕದ ವಾಣಿಜ್ಯ ಸಚಿವ ಹಾರ್ವರ್ಡ್ ಲುಟ್ನಿಕ್ ಈಚೆಗೆ ಮುಕ್ತವಾಗಿ ಹೇಳಿದ್ದರು. ಆದರೆ ಟ್ರಂಪ್ ಪ್ರಕಾರ ಭಾರತ ಅದರೊಂದಿಗಿನ ವ್ಯಾಪಾರ ಒಪ್ಪಂದವನ್ನು ಮುರಿದಿದೆಯಲ್ಲದೇ ಅಮೆರಿಕದ ರೈತರಿಗೆ ದೊಡ್ಡ ಹೊಡೆತ ಕೊಡುತ್ತಿದೆ. ಆದರೆ ಭಾರತ ಅಮೆರಿಕದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ನಮ್ಮ ಸಣ್ಣ ಹಿಡುವಳಿದಾರರಿಗೆ ಉಪಯೋಗವಾಗುತ್ತಿದೆ.ಭಾರತದಲ್ಲಿ ಗರಿಷ್ಠ ಆಹಾರ ಸಂಗ್ರಹಣೆ ಇದಕ್ಕೆ ನಿದರ್ಶನ. ೧೯೫೦ ಮತ್ತು ೬೦ರ ದಶಕಗಳಲ್ಲಿ ಭಾರತ ತನ್ನ ಆಹಾರದ ಅಗತ್ಯ ಪೂರೈಸಿಕೊಳ್ಳಲು ಅನ್ಯ ದೇಶಗಳನ್ನು ಅವಲಂಬಿಸಿತ್ತು. ಆದರೆ ಈಗ ಭಾರತದ ಬಳಿ ಹೆಚ್ಚಿನ ಆಹಾರ ಧಾನ್ಯವಿದೆ. ಇದರ ಕಥೆ ಬೇರೆ. ಭಾರತ ಕೈಗೊಂಡ ವಿಜ್ಞಾನ ತಂತ್ರಜ್ಞಾನದ ನೆರವು, ತೋಟಗಾರಿಕೆಗೆ ಕೊಟ್ಟ ಮಹತ್ವ, ಕೋಳಿ. ಪಶುಪಾಲನೆಗೆ ನೀಡಿದ ಆದ್ಯತೆಗಳಿಂದ ದೇಶದ ಹಣೆಬರೆಹ ಬದಲಾಗಿದೆ.ಇಂದು ಭಾರತ ತನ್ನ ೧.೪ ಶತಕೋಟಿ ಜನರ ಹೊಟ್ಟೆಯನ್ನು ಮಾತ್ರವಲ್ಲದೇ ಜಗತ್ತಿನ ಆಹಾರ ಧಾನ್ಯ ರಫ್ತುದಾರರಲ್ಲಿ ಜಾಗತಿಕವಾಗಿ ಎಂಟನೆಯ ಸ್ಥಾನದಲ್ಲಿದೆ. ಇದರಲ್ಲಿ ಆಹಾರ ಧಾನ್ಯಗಳು ಮಾತ್ರವಲ್ಲದೇ ಹಣ್ಣುಗಳು, ಹಾಲಿನ ಉತ್ಪನ್ನಗಳು ವಿಶೇಷವಾಗಿವೆ. ಇಷ್ಟಾಗಿಯೂ ಭಾರತದ ಕೃಷಿ ಉತ್ಪಾದನೆ ಈಗಲೂ ನಿರೀಕ್ಷೆಯಷ್ಟು ಬೆಳವಣಿಗೆ ಕಾಣದಿರಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು, ರಸ್ತೆ, ಸಂಪರ್ಕ ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಆದರೆ ಭಾರತದ ಬೆನ್ನೆಲುಬು ಕೃಷಿಯೇ ಆಗಿದೆ ಎಂಬುದು ಇಂದಿಗೂ ನಿಜ. ಏಕೆಂದರೆ ದೇಶದ ೭೦೦ ದಶಲಕ್ಷ ಜನ ಕೃಷಿ ಚಟುವಟಿಕೆಯಲ್ಲಿದ್ದು ಕೃಷಿಯೇ ಇಲ್ಲಿನ ಪ್ರಧಾನ ಉದ್ಯೋಗದಾತವಾಗಿದೆ. ಆದರೆ ದೇಶದ ಆರ್ಥಿಕತೆಗೆ ಈ ಕ್ಷೇತ್ರ ನೀಡುತ್ತಿರುವ ಕೊಡುಗೆ ಜಿಡಿಪಿಯ ಶೇ.೧೫ ಮಾತ್ರ. ಹೋಲಿಕೆ ಮಾಡುವುದಾದರೆ ಅಮೆರಿಕದ ಜನಸಂಖ್ಯೆಯ ಶೇ.೨ಕ್ಕಿಂತ ಕಡಿಮೆ ಜನ ಅಲ್ಲಿ ಕೃಷಿ ಚಟುವಟಿಕೆಯಲ್ಲಿದ್ದಾರೆ, ಆದರೆ ನಮ್ಮ ದೇಶದ ಹೆಚ್ಚೂ ಕಡಿಮೆ ಅರ್ಧದಷ್ಟು ಜನ ಕೃಷಿಯಲ್ಲಿದ್ದಾರೆ.ಇದರಲ್ಲಿ ಬಹುತೇಕರು ಕಡಿಮೆ ಆದಾಯದ ಕೃಷಿ ಚಟುವಟಿಕೆಯಲ್ಲಿದ್ದರೆ ಇತರರು ಕೃಷಿ ಉಪಕರಣ ಸಂಬಂಧಿ ಕೆಲಸದಲ್ಲಿಯೂ ಉಳಿದಂತೆ ಹೆಚ್ಚಿನವರು ಕಡಿಮೆ ಕೂಲಿ ಕೆಲಸದಲ್ಲಿರುವುದು ಅಭಿವೃದ್ಧಶೀಲ ದೇಶಕ್ಕೆ ಅಸಹಜವೆನ್ನಲಾಗಿದೆ. ಕೃಷಿಯಲ್ಲಿನ ಭಾರತದ ಇಂಥ ಅಸಮತೋಲನ ಇಲ್ಲಿನ ಆರ್ಥಿಕ ಚಟುವಟಿಕೆಯನ್ನು ನಿರ್ಧರಿಸುತ್ತದೆ, ಇದಕ್ಕೂ ಈಗ ಅಮೆರಿಕದ ತೆರಿಗೆ ನೀತಿ ಏಟು ಕೊಡಲಿದೆ. ಚಿಕ್ಕ ಹಿಡುವಳಿದಾರರ ಹಿತ ಕಾಯಲು ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಭಾರತ ಕಡಿಮೆ ಸುಂಕ ವಿಧಿಸುತ್ತದೆ, ಆದರೆ ಅಮೆರಿಕದ ನೀತಿಗೆ ಸಮನಾಗಿ ನಾವು ಕೂಡ ರಫ್ತು ತೆರಿಗೆ ಏರಿಸಿದರೆ ಅದರ ಪರಿಣಾಮ ನಮ್ಮ ರೈತರ ಮೇಲೆ ನೇರವಾಗಿ ಉಂಟಾಗುತ್ತದೆ. ಭಾರತ ಆಮದು ಮಾಡಿಕೊಳ್ಳುವ ಕೃಷಿ ಉತ್ಪನ್ನಗಳಿಗೆ ಶೇ.೩೭.೭ ಸುಂಕವಿದ್ದರೆ ಅಮೆರಿಕದಲ್ಲಿ ಭಾರತದ ಉತ್ಪನ್ನಗಳಿಗೆ ಶೇ.೫.೩ ಸುಂಕ ಬೀಳುತ್ತದೆ ಎಂದು ದೆಹಲಿಯಲ್ಲಿರುವ ಜಾಗತಿಕ ಕೃಷಿ ವ್ಯಾಪಾರ ಸಂಶೋಧನ ಸಂಸ್ಥೆ(ಗ್ಲೋಬಲ್ ಟ್ರೇಡ್ ರೀಸರ್ಚ್ ಇನ್ಸ್ಟಿಟ್ಯೂಟ್) ತಿಳಿಸಿದೆ.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ವಹಿವಾಟು ಸರಾಸರಿ ೬.೨ ಶತಕೋಟಿ ಡಾಲರ್ ನಷ್ಟಿದೆ. ಭಾರತ ಮುಖ್ಯವಾಗಿ ಸಿಗಡಿ, ಅಕ್ಕಿ, ಜೇನುತುಪ್ಪ, ತರಕಾರಿ ಇತ್ಯಾದಿ ಸಸ್ಯಮೂಲ ಸಾರಗಳು, ಹರಳೆಣ್ಣೆ ಮತ್ತು ಕಾಳುಮೆಣಸನ್ನು ಅಮೆರಿಕಕ್ಕೆ ರಫ್ತು ಮಾಡುತ್ತದೆ. ಅಮೆರಿಕದಿಂದ ಭಾರತ ಅಲ್ಲಿನ ವಜ್ರ, ಅಕ್ರೋಡು (ವಾಲ್ ನಟ್), ಪಿಸ್ತೂಲು, ಸೇಬು ಮತ್ತು ಚೆನ್ನಂಗಿ ಬೇಳೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಅಮೆರಿಕ ತನ್ನ ಹತ್ತಿ ಮತ್ತು ಜೋಳವನ್ನು ಹೆಚ್ಚಾಗಿ ಭಾರತಕ್ಕೆ ತುರುಕಲು ಯತ್ನಿಸುತ್ತಿದೆ, ಆದರೆ ಈಗ ವಿಧಿಸಿದ ತೆರಿಗೆ ಎರಡೂ ದೇಶಗಳ ಮೇಲೆ ಅಂಥ ಪರಿಣಾಮ ಬೀರದು, ನಿಜವಾದ ಆಟ ಬೇರೆ ಇದೆ, ಅಮೆರಿಕ ತನ್ನ ಕೃಷಿ ವಹಿವಾಟು ನೀತಿಯಲ್ಲಿ ಭಾರತಕ್ಕೆ ಸಡಿಲಿಕೆ ನೀಡಿ ತನ್ನ ಕುಲಾಂತರಿ ಬೆಳೆಗಳನ್ನು ಇಲ್ಲಿ ನುಗ್ಗಿಸಲು ಯತ್ನಿಸುತ್ತಿದೆ, ಈ ಬಗ್ಗೆ ನಾವು ಎಚ್ಚರದಿಂದ ಇರಬೇಕಿದೆ, ಜೊತೆಗೆ ಅಮೆರಿಕದ ಧಾನ್ಯಗಳನ್ನು ಇಲ್ಲಿಗೆ ತರುವ ಮುಂಚೆ ಅದರ ಕಳೆ ಗುಣ ನಮ್ಮನ್ನು ನುಂಗುವ ಅಪಾಯ ಕೂಡ ಇದೆ ಎಂಬುದನ್ನು ಮರೆಯುವಂತಿಲ್ಲ.
ಅಮೆರಿಕ ಕೆಲವು ಕೃಷಿ ಉತ್ಪನ್ನಗಳಿಗೆ ನೂರರಷ್ಟು ವಿಮೆ ನೀಡಿ ದೊಡ್ಡ ಕೃಷಿಕುಳಗಳನ್ನು ಮೆಚ್ಚಿಸಿ, ಪೋಷಿಸಿ ನಮ್ಮ ಚಿಕ್ಕ ಹಿಡುವಳಿದಾರರನ್ನು ಹಿಂಡುತ್ತಿದೆ. ಅಮೆರಿಕದ ಇಂಥ ಹುನ್ನಾರವನ್ನು ಮೊದಲು ಅರಿಯಬೇಕಿದೆ.
ಭಾರತದ ರೈತರಿಗೆ ಕೃಷಿ ವಿಮೆಯಲ್ಲಿ ಭಾರೀ ಕಡಿತ ನೀಡಿ ಅಮೆರಿಕ ಆಮಿಷ ಒಡ್ಡುತ್ತಿದೆ. ಭಾರತದ ಕೃಷಿ ಉತ್ಪನ್ನಗಳಿಗೆ ತೆರಿಗೆ ಕಡಿತವನ್ನೂ ನೀಡಿದೆ. ಆದರೆ ಹಗ್ಗ ತೋರಿಸಿ ಹಾವು ತೂರಿಸುವ ಕೆಲಸದಲ್ಲಿ ಅಮೆರಿಕ ನಿಷ್ಣಾತ ಎಂಬುದನ್ನು ಮರೆಯುವಂತಿಲ್ಲ.

No comments:
Post a Comment