Sunday, 17 August 2025

ಹುಚ್ಚು ದೊರೆಯ ತಲೆ ತಿರುಕ ನಿರ್ಧಾರಗಳು


ಈ ಟ್ರಂಪ್ ನನ್ನು ತಮ್ಮ ಅಧ್ಯಕ್ಷನನ್ನಾಗಿ ಮಾಡಿಕೊಂಡಿದ್ದಕ್ಕೆ ಅಮೆರಿಕದ ಜನ ತಮ್ಮನ್ನು ತಾವು ಯಾವುದರಲ್ಲಿ ಹೊಡೆದುಕೊಳ್ಳಬೇಕೆಂದು ಚಿಂತಿಸುತ್ತಿದ್ದಾರಂತೆ. ಕನ್ನಡದಲ್ಲೊಂದು ಗಾದೆ ಇದೆ, ಇಂಥವರನ್ನು ನೋಡಿಯೇ ಹೇಳಿದ ಮಾತು ಇದು -'ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿ ಕೊಡೆ ಹಿಡಿಸಿಕೊಂಡನಂತೆ' ಅಂತ. ಯಾವಾಗ ಏನು ಮಾಡಬೇಕೆಂದು ತಿಳಿಯದೇ ತೋಚಿದಂತೆ ನಿರ್ಧಾರ ಕೈಗೊಳ್ಳುವ ಟ್ರಂಪ್ ತರಹದವರೂ ಇದೇ ಗುಂಪಿಗೆ ಬರುತ್ತಾರೆ. ಅಲ್ರೀ ಈ ತಿಕ್ಕಲನ ಆಡಳಿತ ವೈಖರಿಯಿಂದ ಅಮೆರಿಕದಲ್ಲಿ ಹಿಂದೆ ಒಂದು ಕೆಜಿ ಬಾಳೆ ಹಣ್ಣಿನ ದರ ಈ ಹುಚ್ಚನ ಅವಧಿಯಲ್ಲಿ ೮೩ ಸೆಂಟ್ ಆಗಿದೆಯಂತೆ. (ಅಲ್ಲಿನ ಒಂದು ಸೆಂಟ್ ನಮ್ಮ ರೂಗಳಲ್ಲಿ ೨ ರೂ ೧೫ ಪೈಸೆ ಇದ್ದಂತೆ). ಅದನ್ನು ಬೆಳೆಯುವ ಯೋಗ್ಯತೆ ಇಲ್ಲ, ತರಿಸಿಕೊಳ್ಳುವುದಕ್ಕೂ ಕಲ್ಲು ಹಾಕಿಕೊಂಡು ಕುಳಿತಿದ್ದಾನೆ, ಪ್ರಪಂಚದಲ್ಲಿ ಅತಿ ಹೆಚ್ಚು ಬಾಳೆ ಹಣ್ಣು ತಿನ್ನುವ ಜನ ಎಲ್ಲಾದರೂ ಇದ್ದರೆ ಅದು ಅಮೆರಿಕ, ವರ್ಷಕ್ಕೆ ಅಲ್ಲಿ ಲಕ್ಷಾಂತರ ಟನ್ ಬಾಳೆ ಹಣ್ಣು ಅಗತ್ಯ ಆದರೆ ಹವಾಯ್ ಮತ್ತು ಪ್ಲೋರಿಡಾಗಳಲ್ಲಿ ಬೆಳೆಯುವ ಬಾಳೆ ಕೆಲವೇ ಟನ್, ಇದು ಗೊತ್ತಿದ್ದರೂ ಈ ಅವಿವೇಕಿ ಎಲ್ಲ ಆಮದಾಗುವ ವಸ್ತುಗಳ ಮೇಲೆ ತೆರಿಗೆ ವಿಧಿಸಿ ತನ್ನ ತಲೆ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದಾನೆ, ಈಗ ಅಲ್ಲಿ ದೇಶಾದ್ಯಂತ ಪ್ರತಿಭಟನೆ ಆದ ಮೇಲೆ ಜಗತ್ತಿನಾದ್ಯಂತ ಅದರಲ್ಲೂ ವಾರಕ್ಕೊಂದು ಬಾರಿಯಂತೆ ಎರಡು ವಾರಗಳಲ್ಲಿ ವಿಧಿಸಿದ ಭಾರತದ ಮೇಲೆ ವಿಧಿಸಿದ ತೆರಿಗೆಯನ್ನು ಪರಿಶೀಲಿಸುವುದಾಗಿ ಹೇಳಿದ ಗಂಟೆಗಳಲ್ಲಿ ಇಲ್ಲ ತೆಗೆಯುತ್ತೇನೆಂದು ಹೇಳಿದ್ದಾನೆ. ಪರಿಣಾಮಗಳ ಅರಿವಿಲ್ಲದೇ ನಿರ್ಧಾರ ತೆಗೆದುಕೊಳ್ಳುವ ಇಂಥ ಅವಿವೇಕಿಗೆ ಏನು ಹೇಳುವುದು? ಈಗ ತೆರಿಗೆ ದಂಡ ವಿಧಿಸಿ ಆತ ಮತ್ತೆ ಕಿತ್ತುಹಾಕಿರಬಹುದು, ಆದರೆ ಈ ಹುಚ್ಚುತನದಿಂದಾದ ನಷ್ಟ ಅಮೆರಿಕನ್ನರಿಗೆ ಅಷ್ಟಿಷ್ಟಲ್ಲ. ಏಕೆಂದರೆ ಅಲ್ಲಿನ ಕಂಪನಿಗಳು ತೆರಿಗೆ ಹೆಚ್ಚಳ ಆಗುವ ಮುಂಚೆ ವಿದೇಶೀ ಖಂಪನಿಗಳಿಗೆ ನೀಡಲಾದ ವಸ್ತುಗಳ ಖರೀದಿ ಆದೇಶವನ್ನು ಹಿಂಪಡೆದು ಹೊಸ ಆದೇಶ ನೀಡಿ ತಮ್ಮ ವಿಶ್ವಾಸ ನಷ್ಟವಾಗಿದೆ ಎಂದು ಪ್ರತಿಭಟಿಸಿದ್ದರು. ಈಗ ಮತ್ತೆ ಹೊಸ ಆದೇಶದಂತೆ ಅವು ಹಾಗೂ ಗ್ರಾಹಕರು ತಮ್ಮದಲ್ಲದ ತಪ್ಪಿಗೆ ದಂಡ ತೆರಬೇಕಿದೆ, ಇದನುಬಹಳ ಕಾಲ ಬೇಕು ಅನಿಸುತ್ತದೆ. ಭರಿಸುವವರು ಯಾರು?

ಅಷ್ಟಕ್ಕೂ ಅಮೆರಿಕ ಭಾರತದ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಇದ್ದ ನಿಜವಾದ ಕಾರಣ ಅದು ಬಾಯಿಬಡಿದುಕೊಂಡಂತೆ ರಷ್ಯಾದೊಂದಿಗಿನ ನಮ್ಮ ವ್ಯವಹಾರವಲ್ಲ, ಬದಲಿಗೆ ಭಾರತದಲ್ಲಿ ತಮ್ಮ ಕೃಷಿ ವಹಿವಾಟಿಗೆ ಮುಕ್ತ ಅವಲಾಶ ಕೊಡಲಿ ಎಂಬುದಾಗಿತ್ತು, ಆದರೆ ನೀವು ಬೇಕಾದ್ದು ಮಾಡಿ, ನಾವು ಇದಕ್ಕೆ ಬಿಲ್ ಕುಲ್ ಅವಕಾಶ ಕೊಡುವುದಿಲ್ಲವೆಂದು ಮುಖದ ಮೇಲೆ ಹೊಡೆದಂತೆ ಹೇಳಿದ ಮೇಲೆ ಹಾಗೂ ತಾನು ಬಿಟ್ಟ ಬಾಣ ತನಗೇ ಮುಳುವಾಗುತ್ತಿದೆ ಎಂದು ಅರ್ಥವಾದ ಮೇಲೆ ಈಗ ವಿಧಿಸಿದ್ದ ತೆರಿಗೆ ತೆಗೆಯುವ ವರಾತ ತೆಗೆದಿದ್ದಾನೆ ಟ್ರಂಪ್. ಅವನ ಇಂಥ ಹುಚ್ಚಾಟದಿಂದ ಭಾರತದ ನಿಲುವೇನೂ ಹೀಗೆ ಹುಚ್ಚು ಹುಚ್ಚಾಗಿ ಬದಲಾಗುವುದಿಲ್ಲ, ಇದು ಅವನಿಗೆ ಅರ್ಥವಾಗಲು ಇನ್ನೂ ಬಹಳ ಕಾಲ ಬೇಕು ಅನಿಸುತ್ತದೆ, ಈ ಅವಾಂತರಗಳಿಂದ ಟ್ರಂಪ್ ಇನ್ನೊಂದು ಎಡವಟ್ಟಿಗೆ ಸಿಲುಕಿಕೊಂಡಿದ್ದಾನೆ, ಆತ ಅಮೆರಿಕದ ಅಧ್ಯಕ್ಷನಾಗುವ ಮೊದಲು ನಡೆಸುತ್ತಿದ್ದ ವ್ಯವಹಾರ ಹಗೂ ವಾಣಿಜ್ಯ ಚಟುವಟಿಕೆಗಳಲ್ಲಿನ ನಷ್ಟವನ್ನು ಸರ್ಕಾರಿ ಖಜಾನೆ ಲೂಟಿ ಮಾಡಿ ತುಂಬಿಸಿಕೊಳ್ಳುತ್ತಿದ್ದಾನೆಂದು ಅವನಿಂದ ಹಿಂಸೆಗೊಳಗಾದ ಅಲ್ಲಿನ ಸರ್ಕಾರಿ ಉದ್ಯೋಗಿಗಳು ದಾಖಲೆ ಕೊಡತೊಡಗಿದ್ದಾರೆ, ಆತ ಅಧ್ಯಕ್ಷ ಪದವಿಯಿಂದ ಈ ವರ್ಷ ಮುಗಿಯುತ್ತಿದ್ದಂತೆ ಇಳಿದು ಹೊಸಬರು ಬರುತ್ತಿದ್ದಂತೆ ಇವನ ಮೇಲೆ ಅಲ್ಲಿನ ನಿಯಮಗಳ ಅನುಸಾರ ಭಾರೀ ಶಿಕ್ಷೆಗೆ ತಯಾರಾಗಬೇಕಿದೆ. ಈಗಿನ ಹುಚ್ಚುತನದಿಂದ ಆತ ಬರಮಾಡಿಕೊಂಡ ದೊಡ್ಡ ಲಾಭವೆಂದರೆ ಇದೇ. ಆತ ಭಾರತದ ಮೇಲೆ ಸೇಡಿಗಾಗಿ ಹೆಚ್ಚು ತೆರಿಗೆ ವಿಧಿಸಿದ್ದೂ ಆಯಿತು, ಈಗ ಹಿಂಪಡೆಯಲು ಮುಂದಾಗಿದ್ದೂ ಆಯಿತು. ಆದರೆ ಇದರಿಂದ ಆತ ಸ್ವ ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಮಾಡಿಕೊಂಡ ಅವಮಾನ ಹಾಗೂ ನಷ್ಟದ ಅಂದಾಜು ಅವನಿಗೆ ಇಲ್ಲ.  ಹೀಗಾಗಿ ಆತ ತಾನೇ ಸರಿ ಎಂಬ ಹುಂಬತನದಲ್ಲೇ ಈಗಲೂ ಇದ್ದಾನೆ. ಸುಮ್ಮನೇ ನೋಡಿ- ಈತ ಅಧಿಕಾರಕ್ಕೆ ಬರುವಷ್ಟರಲ್ಲಾಗಲೇ ಪ್ರಪಂಚದಲ್ಲಿ ಅಮೆರಿಕ ತನ್ನ ಮಾತಿಗೆ ಕಿಲುಬುಗಾಸಿನ ಬೆಲೆಯನ್ನೂ ಉಳಿಸಿಕೊಂಡಿರಲಿಲ್ಲ, ಇದನ್ನು ಈತ ಮತ್ತೆ ಪ್ರತಿಷ್ಠಾಪಿಸುತ್ತೇನೆಂಬ ಭರದಲ್ಲಿ ಇದ್ದಬಿದ್ದ ಕಡೆಯಲ್ಲೆಲ್ಲ ತನ್ನ ಮೂಗು ತೂರಿಸತೊಡಗಿದ. ಜಗತ್ತಿನ ಯಾವುದೇ ದೇಶಗಳ ನಡುವೆ ವೈಮನಸ್ಯ ಉಂಟಾದಾಗ ಅದನ್ನು ಬಗೆಹರಿಸುವವನಂತೆ ತೋರಿಸಿಕೊಂಡ. ಆದರೆ ಬದಲಾದ ಜಗತ್ತಿನ ಬಣ್ಣ ಇವನಿಗೆ ಗೊತ್ತೇ ಇರಲಿಲ್ಲ, ಇರಾನ್- ಪ್ಯಾಲೆಸ್ಟೀನ್- ಹಮಾಸ್ ಆದಿಯಾಗಿ  ಭಾರತ- ಪಾಕಿಸ್ತಾನದವರೆಗೆ ಕರೆಯದಿದ್ದರೂ ತನ್ನ ಆಟವಾಡಲು ಹೋಗಿ ಮೂಗು ಮುರಿಸಿಕೊಂಡ. ಎಲ್ಲೂ ಅವನ ಮಾತಿಗೆ ಬೆಲೆ ಸಿಗಲಿಲ್ಲ, ಆದರೆ ಅಂತಿಮವಾಗಿ ಭಾರತ -ಪಾಕ್ ಯುದ್ಧ ನಿಲ್ಲಿಸಿದ್ದು ತಾನೇ ಎಂದು ಹುಚ್ಚನಂತೆ ಕಂಡಕಂಡಲ್ಲಿ ಹಲಬುತ್ತ ನೊಬೆಲ್ ಶಾಂತಿ ಪುರಸ್ಕಾರದ ಬೆನ್ನು ಬಿದ್ದ, ಅದೂ ದಕ್ಕದೆಂದು ಗೊತ್ತಾದ ಮೇಲೆ ಮತ್ತೆ ತನ್ನ ಮೇಲಾಟ ತೋರಿಸಲು ತನ್ನ ಬಳಿಯೇ ಇದ್ದ ತೆರಿಗೆ ಅಸ್ತ್ರದ ಮೂಲಕ ಜಗತ್ತನ್ನು ಬೆದರಿಸಲು ಯತ್ನಿಸಿ ಈಗ ಹಲ್ಲು ಮುರಿಸಿಕೊಂಡಿದ್ದಾನೆ, ಅಮೆರಿಕದ ಇತಿಹಾಸದಲ್ಲಿ ಇವನಂತೆ ನಗೆಪಾಟಲಿಗೆ ಈಡಾದ ಇನ್ನೊಬ್ಬ ಅಧ್ಯಕ್ಷನಿಲ್ಲ ಎಂಬ ಹೆಗ್ಗಳಿಕೆ ಈಗ ಇವನಿಗೆ ದಕ್ಕುವಂತಾಗಿದೆ, ಜೊತೆಗೆ ಇಂಗ್ಲಿಷ್ ಆಡು ಮಾತಿನಲ್ಲಿ ಡೋಂಟ್ ಬಿಹೇವ್ ಲೈಕ್ ಟ್ರಂಪ್ - ('ಎಯ್ ತೀರಾ ಟ್ರಂಪ್‌ನಂತೆ ಆಡಬೇಡ') ಎಂದು ಅಣಕು ಕೂಡ ಶುರುವಾಗಿದೆ, ಇದೆ ಅವನ ಸದ್ಯದ ಸಾಧನೆ. ಒಂದು ದೇಶದ ಅಧ್ಯಕ್ಷನಂಥ ಗಂಭೀರ ಹುದಗ್ದೆಯಲ್ಲಿ ಹೇಗೆ ವರ್ತಿಸಬೇಕೆಂಬ ಕನಿಷ್ಠ ಪ್ರಜ್ಞೆ ಇಲ್ಲದ ಈ ಅವಿವೇಕಿಯಿಂದ ಅಮೆರಿಕದಲ್ಲಿ ಇನ್ನು ಮೇಲೆ ತಮ್ಮ ದೇಶದ ಅಧ್ಯಕ್ಷರಾಗುವವರಿಗೆ ಕನಿಷ್ಠ ತರಬೇತಿ ಕೊಡುವ ಶಾಲೆಗಳು ಶುರುವಾಗಬಹುದು. ಇದು ಕುಹಕವಲ್ಲ, ಅಲ್ಲಿನ ದಿನ ಬಳಕೆಯ ವಸ್ತುಗಳಿರಲಿ, ತೀರಾ ಚಾಕೊಲೇಟ್ ಕವರು, ಬಿಸಿ ಚಹಾ ಕಪ್ ಗಳನ್ನು ಹೇಗೆ ಹಿಡಿಯಬೇಕು, ಸೇವಿಸಬೇಕೆಂದು ಗ್ರಾಹಕರಿಗೆ ಅರಿವು ಮೂಡಿಸುವ ಬರಹಗಳಿರುತ್ತವೆ, ಇನ್ನು ಅಧ್ಯಕ್ಷನಾದವನು ಹೇಗೆ ಇರಬೇಕೆಂದು ತಿಳಿಸುವ ವ್ಯವಸ್ಥೆ ನಿರೀಕ್ಷಿಸಬಾರದಾ? ಇದೂ ಇಲ್ಲವಾದರೆ ನಮ್ಮ ಅಧ್ಯಕ್ಷನಾಗುವವನು ಟ್ರಂಪ್ ನಂತೆ ಇರಬಾರದು ಅಷ್ಟೇ ಎಂಬ ಘೋಷವಾಕ್ಯವಾದರೂ ಇನ್ನು ಮುಂದೆ ರಾರಾಜಿಸಬಹುದು. ಎಲ್ಲದಕ್ಕೂ ತಾವೇ ಮಾದರಿ ಎಂದು ಬೀಗಿಕೊಳ್ಳುವ ಇವರಿಗೆ ಈ ಗೌರರವೂ ಸಲ್ಲಲಿ. ಆ ಮಾರ್ಗವನ್ನು ಟ್ರಂಪ್ ತೆರೆದಿಟ್ಟಿದ್ದಾನೆ. ಆತನ ಹೆಸರು ಅಲ್ಲಿನ ಅಧ್ಯಕ್ಷನಾದುದಕ್ಕೆ ಹೀಗೆ ಚಿರಸ್ಥಾಯಿಯಾಗಲಿ. 

 



No comments:

Post a Comment