Thursday, 7 August 2025

ತಿಕ್ಕಲು ಅಧ್ಯಕ್ಷ


ಅಮೆರಿಕದ ತಿಕ್ಕಲು ಅಧ್ಯಕ್ಷ ಟ್ರಂಪ್ ನಿಂದ ದಿನಕ್ಕೊಂದು ಸುದ್ದಿ ನಮಗೆ ದೊರೆಯುತ್ತಿದೆ. ಈ ಹುಚ್ಚುದೊರೆಯ ಆರ್ಥಿಕ ನಿರ್ಧಾರಗಳಿಂದ ಅಲ್ಲಿನ ಮಾರುಕಟ್ಟೆ ಒಂದೇ ದಿನದಲ್ಲಿ ೧.೧ ಟ್ರಿಲಿಯನ್ ಡಾಲರ್ ನಷ್ಟ ಕಂಡಿದೆ. ಸಾಲದ್ದಕ್ಕೆ ರಷ್ಯಾ ಅಮೆರಿಕದ ಕಂಪನಿಗಳ ಆಕ್ಸಿಜನ್ ಪೈಪ್ ನಂತಿರುವ ಸಿಪಿಸಿ, ಕ್ಯಾಸ್ಪಿಯನ್ ಪೈಪ್ ಲೈನ್ ನಿಲ್ಲಿಸುವ ಗಂಭೀರ ಯೋಚನೆಯಲ್ಲಿದೆ, ಹೀಗಾದರೆ ಆಮೆರಿಕದ ಉಸಿರುಕಟ್ಟುವುದು ನಿಜ-ಅದಾಗಲಿದೆ. ಅಮೆರಿಕ ಬ್ರೆಜಿಲ್ ಮೇಲೆ ಕೂಡ ಶೇ.೫೦ ತೆರಿಗೆ ವಿಧಿಸಿದೆ, ಆದರೆ ಬ್ರೆಜಿಲ್ ಹಾಗೂ ಭಾರತದ ಸಂಬಂಧ ಈ ರೀತಿ ಕೆಟ್ಟರೆ ಅಮೆರಿಕದ ಕತೆ ಏನಾಗುತ್ತದೆ ಎಂಬ ಅರಿವೇ ಇಲ್ಲದ ಹುಚ್ಚ ಈತ. ನಿನ್ನೆ ನೋಡಿ, ಅಮೆರಿಕದ ಪತ್ರಿಕಾ ಗೋಷ್ಠಿಯಲ್ಲಿ ಅಲ್ಲಿನ ಪತ್ರಕರ್ತೆಯೊಬ್ಬಳು ಮಿಸ್ಟರ್ ಪ್ರೆಸಿಡೆಂಟ್, ನೀವು ರಷ್ಯಾದೊಂದಿಗೆ ಭಾರತ ವ್ಯಾಪಾರ ಮಾಡಬಾರದೆಂದು ಅದಕ್ಕೆ ತೆರಿಗೆ ವಿಧಿಸುತ್ತೀರಿ, ಆದರೆ ಸ್ವತಃ ನಾವು ರಷ್ಯಾದಿಂದ ರಾಸಾಯನಿಕ ಗೊಬ್ಬರ, ಖನಿಜಗಳು, ಸಂಸ್ಕರಿತ ಆಹಾರ ತೈಲಗಳನ್ನು ಖರೀದಿಸುತ್ತಿದ್ದೇವಲ್ಲ, ಇವೆಲ್ಲ ನಿಂತರೆ ಏನು ಕತೆ ಎಂದು ಕೇಳಿದರೆ ಆತ ಗೊತ್ತಿಲ್ಲ ಅನ್ನುತ್ತಾನೆ. ಈತ ಅಲ್ಲಿನ ಅಧ್ಯಕ್ಷ. ನಾಟಕ ಆಡುತ್ತಿದ್ದಾನೋ ನಿಜಕ್ಕೂ ಗೊತ್ತಿಲ್ಲವೋ ಏನಾದರೂ ಆಗಲಿ, ತನ್ನ ದೇಶಕ್ಕೆ ಎಲ್ಲಿಂದ ಏನು ಬರುತ್ತದೆ ಎಂಬ ಪ್ರಜ್ಞೆ ಇಲ್ಲದ ವ್ಯಕ್ತಿ ತಮ್ಮ ಅಧ್ಯಕ್ಷ ಎಂಬುದೇ ಅಲ್ಲಿನ ಜನರಿಗೆ ನಾಚಿಕೆಯ ವಿಷಯ.

ಭಾರತದ ಆರ್ಥಿಕತೆ ಸಾಯುತ್ತಿದೆ ಎನ್ನುವ ಅವನ ಹೇಳಿಕೆ ಎಷ್ಟು  ಮೂರ್ಖತನದ್ದು ನೋಡಿ - ಭಾರತದ ಆರ್ಥಿಕತೆ ಕಳೆದ ಹತ್ತು ವರ್ಷಗಳಲ್ಲಿ ಹೇಗೆ ಬೆಳೆದಿದೆ ಎಂಬುದನ್ನು ಸ್ಚತಃ ವಿಶ್ವ ಬ್ಯಾಂಕ್ ವರದಿ ಮಾಡಿದ್ದನ್ನು ನೋಡಿದ್ದರೂ ತಿಳಿಯುತ್ತಿತ್ತು, ಇಲ್ಲ, ಆತನಿಗೆ ತನ್ನ ಮೂರ್ಖತನವೇ ದೊಡ್ಡದು. ಸದ್ಯ ಭಾರತ ವಿಶ್ವದ ನಾಲ್ಕನೆಯ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಸದ್ಯದಲ್ಲೇ ಇದು ಮೂರನೆಯ ಆರ್ಥಿಕತೆಯಾಗಲಿದೆ, ಈ ಅರಿವಿಲ್ಲದ ಆತ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಇಲ್ಲಿನ ರಾಹುಲ್ ಗಾಂಧಿ ಅದನ್ನು ಬೆಂಬಲಿಸುತ್ತಿದ್ದಾನೆ. ಆದರೆ ಕಾಂಗ್ರೆಸ್ ಆಡಳಿತವಿದ್ದ ೬೦ ಮತ್ತು ೭೦ ರ ದಶಕದ ಭಾರತದ ಆರ್ಥಿಕತೆ ಗಮನಿಸಿ, ಆಗ ಭಾರತ ಶೇ. ೪ ಬೆಳವಣಿಗೆಯನ್ನು ದಾಟಿಯೇ ಇರಲಿಲ್ಲ, ಜಿಡಿಪಿ ೩೫ ರೂ ಆಗಿತ್ತು, ಇಂಥ ಲೆಕ್ಕಾಚಾರವನ್ನು ರಾಹುಲ್ ತಿಳಿಯಲು ಸಿದ್ಧವಿಲ್ಲ.

ಅಮೆರಿಕದ ಮಾರುಕಟ್ಟೆ ಟ್ರಂಪನ ಹುಚ್ಚು ನಿರ್ಧಾರದಿಂದ ಒಂದೇ ದಿನದಲ್ಲಿ ೧.೧ ಟ್ರಿಲಿಯನ್ ಡಾಲರ್ ನಷ್ಟವಾಗಿದೆ. ಸದ್ಯ ರಷ್ಯಾ ರಷ್ಯಾದಿಂದ ಅಮೆರಿಕಕ್ಕೆ ಹೋಗುವ ತೈಲ ಮಾರ್ಗ (ಸಿಪಿಸಿ- ಕ್ಯಾಸ್ಪಿಯನ್ ಪೈಪ್ ಲೈನ್)ವನ್ನು ನಿಲ್ಲಿಸುವುದಾಗಿ ಹೇಳಿದೆ, ಹೀಗಾದರೆ ನಿಜಕ್ಕೂ ಅಮೆರಿಕದ ಆಕ್ಸಿಜನ್ ವಿತರಣೆ ನಿಲ್ಲುತ್ತದೆ, ಒಟ್ಟಿನಲ್ಲಿ ಇನ್ನೊಂದು ವರ್ಷವಿರುವ ತನ್ನ ಅಧಿಕಾರಾವಧಿಯಲ್ಲಿ ಆತ ಅಮೆರಿಕದ ಆರ್ಥಿಕತೆಯನ್ನು ಗುಡಿಸಿ ಗುಡ್ಡೆ ಹಾಕುವುದಂತೂ ಖಚಿತ, ಆದರೆ ಆತ ಅಷ್ಟೇ ಪ್ರಮಾಣದಲ್ಲಿ ಭ್ರಷ್ಟಚಾರದಲ್ಲಿ ತೊಡಗಿದ್ದಾನೆಂದು ಹೇಳಲಾಗುತ್ತಿದೆ, ಇಷ್ಟಾದರೆ ಮುಂಬರುವ ಅಧಶ್ಯಕ್ಷ ಈತನ ಮೇಲೆ ಕ್ರಮ ಕೈಗೊಳ್ಳುವ ಎಲ್ಲ ಸಾಧ್ಯತೆಯೂ ಇದೆ. ಇಂಥ ದುರ್ದಿನವನ್ನು ಆತ ಬರಮಾಡಿಕೊಳ್ಳುತ್ತಿದ್ದಾನೆ.


    


No comments:

Post a Comment