Sunday, 21 September 2025

"ಓ ದೇವರೇ ಅವರನ್ನು ಕ್ಷಮಿಸು"

ನಿತ್ಯ ಏನಾದರೊಂದು ಹೊಸ ತಿಕ್ಕಲು ನಿರ್ಧಾರದ ಮೂಲಕ ಸುದ್ದಿಯಾಗುವ ಅಮೆರಿಕದ ಅವಿವೇಕಿ ಅಧ್ಯಕ್ಷ ಟ್ರಂಪ್ ಇದೀಗ ಭಾರತ ಹಣಿಯುವ ಹೊಸ ಸೂತ್ರವಾಗಿ ಎಚ್ ೧ ಬಿ ವೀಸಾ ಕುರಿತ ಹೊಸನಿಯಮ ಜಾರಿಗೆ ತಂದು ನಮ್ಮ ದೇಶದಲ್ಲಿ ಇನ್ನಿಲ್ಲದ ಆತಂಕ ಸೃಷ್ಟಿಸಿದ್ದಾನೆ.
 
ಹೌದು, ಟ್ರಂಪ್ ಎಂಬಾತನನ್ನು ನೋಡಿದರೆ ಇತಿಹಾಸ ಮರುಕಳಿಸುತ್ತದೆ ಎಂಬ ಮಾತು ಅಕ್ಷರಶಃ ನಿಜ ಅನಿಸುತ್ತದೆ. ಇತಿಹಾಸ ಹೇಳುವಂತೆ ಭಾರತದಲ್ಲಿ ಹಿಂದೆ ತುಘಲಕ್ ಎಂಬ ದೊರೆ ಇದ್ದನಂತೆ. ಆತನ ನಿರ್ಧಾರಗಳನ್ನು ಕೇಳಿ ಜನ ಹುಚ್ಚರಂತೆ ನಗುತ್ತಿದ್ದರಂತೆ. ಇಂದಿಗೂ ಆಡಳಿತಗಾರರ ಹುಚ್ಚು ನಿರ್ಧಾರಗಳನ್ನು ತುಘಲಕ್ ನೀತಿ ಎಂದೇ ಗೇಲಿ ಮಾಡಲಾಗುತ್ತದೆ. ನಾವೆಲ್ಲ ಶತಮಾನಗಳ ಹಿಂದಿದ್ದ ತುಘಲಕ್ ನ ಬಗ್ಗೆ ಓದಿದ್ದೆವು, ನೋಡಲು ಸಾಧ್ಯವಿರಲಿಲ್ಲ. ಆದರೆ ಈಗ ಈ ತುಘಲಕ್ ಟ್ರಂಪ್ ರೂಪದಲ್ಲಿ ಮರಳಿದ್ದಾನೆ. ಸದ್ಯ ಈತ ಜಾರಿ ಮಾಡಿರುವ ಎಚ್ ೧ ಬಿ ವೀಸಾ ನಿಯಮ ನಮ್ಮ ದೇಶಾದ್ಯಂತ ಕೋಲಾಹಲ ಹುಟ್ಟಿಸಿದೆ. ಈ ವಾರದ ಆರಂಭದಲ್ಲಿ ಟ್ರಂಪ್ ಅಮೆರಿಕದಲ್ಲಿರುವ ಎಚ್ ೧ ಬಿ ವೀಸಾ ಪರವಾನಿಗೆ ಉಳ್ಳವರು ಒಂದು ಲಕ್ಷ ಅಮೆರಿಕನ್ ಡಾಲರ್ ದಂಡ ತೆರಬೇಕು, ಸೆಪ್ಟೆಂಬರ್ ೨೧ ಇದಕ್ಕೆ ಕಡೆಯ ದಿನಾಂಕ ಎಂದು ಆದೇಶ ಮಾಡಿ, ಈ ರಾತ್ರಿಯೊಳಗೆ ಜಾಗ ಖಾಲಿ ಮಾಡದಿದ್ದರೆ ಕಾನೂನು ಕ್ರಮ ಎದುರಿಸಿ ಅಂದಿದ್ದ. ಇದರಿಂದ ಅಲ್ಲಿದ್ದ ನಮ್ಮವರ ಎದೆ ನಡುಗಿಸಿದ್ದ. ಈ ಮೊತ್ತ ಭಾರತದ ರೂಗಳಲ್ಲಿ ಈಗ ೮೮ ಲಕ್ಷ ರೂ ಆಗುತ್ತದೆ. 
 
ಭಾರತೀಯರಿಗೆ ವಿದೇಶದ ಹುಚ್ಚು ಹಿಡಿಸಿದವರು ತಮ್ಮ ಆಡಳಿತಾವಧಿಯಲ್ಲಿ ಬ್ರಿಟಿಷರು. ತಮ್ಮ ಜನರನ್ನು ಅಲ್ಲಿಂದ ಇಲ್ಲಿಗೆ ಕರೆಸುವ, ಇಲ್ಲಿನ ಜನರನ್ನು ಅಲ್ಲಿಗೆ ಕಳುಹಿಸಿ ಓಲೈಸುವ ಕೆಲಸವನ್ನು ಅವರು ಶುರು ಮಾಡಿದರು. ಸಾಲದ್ದಕ್ಕೆ ಪರಂಗಿ ದೇಶಕ್ಕೆ ಹೋಗುವುದು ಅಂದಿನ ಯುವ ಜನರಲ್ಲಿ ಫ್ಯಾಶನ್ ಆಯಿತು, ಅನಂತರ ಇಲ್ಲಿನ ಜನ ಬೇರೆ ಬೇರೆ ದೇಶಗಳಿಗೂ ಯಾತ್ರೆ ಮಾಡತೊಡಗಿದರು, ದೇಶ ಸುತ್ತುವುದು ನಮ್ಮ ದೇಶದಲ್ಲಿ ಮೊದಲಿಂದಲೂ ಇತ್ತಾದರೂ ಯಾವುದೇ ಒಂದು ದೇಶ ಅಥವಾ ಸ್ಥಳದ ಬಗ್ಗೆ ವ್ತಾಮೋಹ ಬೆಳೆಯುವಂತೆ ಮಾಡಿದವರು ವಸಾಹತುಗಳು. ಬ್ರಿಟಿಷರಿಂದ ಸ್ವಾತಂತ್ರö್ಯ ಪಡೆದ ಮೇಲೆ ಲಂಡನ್ ಬಗ್ಗೆ ಇದ್ದ ಮೋಹ ಯೂರೋಪ್ ಕಡೆಗೆ ತಿರುಗಿತು. ೮೦ರ ದಶಕದಿಂದ ಈಚೆಗೆ ಮಾಹಿತಿ ತಂತ್ರಜ್ಞಾನ ಮತ್ತು ವೈಭೋಗದ ಕಾರಣಕ್ಕೆ ಅಮೆರಿಕಕ್ಕೆ ಹೋಗದಿದ್ದರೆ ಅಲ್ಲಿ ಒಂದೆರಡು ದಿನವಾದರೂ ಕೆಲಸ ಮಾಡದಿದ್ದರೆ, ಅಥವಾ ಕನಿಷ್ಠ ಸುಮ್ಮನೇ ಇದ್ದು ಬರದಿದ್ದರೆ ಈ ಜಗತ್ತಿನಲ್ಲಿ ಹುಟ್ಟಿದ್ದೇ ದಂಡ ಎಂಬಂತೆ ಬಿಂಬಿಸಲಾಯಿತು. ಇದರ ಪರಿಣಾಮವಾಗಿ ನಮ್ಮ ಜನ ಹುಟ್ಟಿದ ಊರು ಬಿಟ್ಟು ಅಮೆರಿಕಕ್ಕೆ ಬೇಕಾದ ವಿದ್ಯೆ ಕಲಿಯಲು ಬೆಂಗಳೂರಿಗೆ ಬರುವುದು, ಕಲಿತ ಮೇಲೆ ಅಮೆರಿಕಕ್ಕೆ ಹಾರುವುದನ್ನು ರೂಢಿ ಮಾಡಿಕೊಂಡರು. ಆದರೆ ಅಲ್ಲಿ ಕೆಲಸ ಮುಗಿಸಿ ವಾಪಸು ಬರಲು ಇಷ್ಟವಿಲ್ಲದವರು ಅಲ್ಲೇ ಉಳಿಯಲು ಮಾರ್ಗ ಹುಡುಕಿಕೊಂಡರು. ಅದೇ ತಾವು ಮಾಡುವ ಕೆಲಸ ಅಲ್ಲಿ ಅನಿವಾರ್ಯ ಎಂದು ಬಿಂಬಿಸುವ ವೀಸಾ ಪತ್ರ, ಇದನ್ನು ಅಲ್ಲಿನ ಕಂಪನಿಗಳಿಗೆ ದುಡಿಯುವ ಜನರಿಗೆ ಆಯಾ ಕಂಪನಿ ಕೊಡುತ್ತದೆ,  , ವಿದೇಶದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ನಿಗಾ ವಹಿಸುವ ನಾಸ್ಕಾಂ ಪ್ರಕಾರ  ಅಮೆರಿಕದಲ್ಲಿ ವಾಸಿಸಲು ಅಗತ್ಯವಾದ ಗ್ರೀನ್ ಕಾರ್ಡ್ ಪಡೆಯಲು ನಿರೀಕ್ಷೆ ಮಡುತ್ತಿರುವ ಇಂಥ  ಕೌಶಲ್ಯ ಆಧಾರಿತ ಕೆಲಸ ಮಾಡುತ್ತ ಮೂರು ಲಕ್ಷ ಭಾರತೀಯರು ಸದ್ಯ ಅಲ್ಲಿದ್ದಾರೆ ಅನ್ನಲಾಗಿದೆ.
 
ಆದರೆ ಮಾಹಿತಿ ತಂತ್ರಜ್ಞಾನ ಆಧಾರಿತ ಕೆಲಸ ಮಾಡುವವರ ನಿಗಾ ವಹಿಸುವ ಭಾರತದ ನಾಸ್ಕಾಂ ಪ್ರಕಾರ ಅಮೆರಿಕದಲ್ಲಿ ಇಂಥವರ ಸಂಖ್ಯೆ ೧೫ ಲಕ್ಷದಷ್ಟಿದೆ. ಭಾರತದ ವಿರುದ್ಧ ರಫ್ತು ತೆರಿಗೆ ಏರಿಸಿ ಇಂಗು ತಿಂದ ಮಂಗನಂತಾದ ಟ್ರಂಪ್ ಈಗ ಈ ಹೊಸ ಅಸ್ತ್ರ ತೆಗೆದಿದ್ದಾರೆ, ಇಷ್ಟು ಜನರಿಂದ ಅಮೆರಿಕಕ್ಕೆ ಆಗುವ ಲಾಭವನ್ನು ಊಹಿಸಿ. ಆದರೆ ಇಷ್ಟು ಹಣವನ್ನು ಎಲ್ಲರೂ ಕಟ್ಟುವುದಲ್ಲ, ಅದರಲ್ಲೂ ಮೂರ್ನಾಲ್ಕು ವರ್ಗ ಮಾಡಲಾಗಿದ್ದು ಕಂಪನಿಯಿಂದ ಇಂಥ ನೌಕರ ಪಡೆಯುವ ವೇತನವನ್ನು ಇದು ಆಧರಿಸಿದೆ. ಆದರೆ ಒಂದಿಷ್ಟು ಹಣವನ್ನಂತೂ ಅವರು ಪೀಕಲೇಬೇಕು. ಜೊತೆಗೆ ಈ ಹಣವನ್ನು ಹೊಣೆಗಾರಿಕೆ ಹೆಚ್ಚಿಸಲು ಆಯಾ ಕಂಪನಿಗಳು  ಈ ಮೊತ್ತ ತೆರಬೇಕೆಂದು ಮತ್ತೆ ಹೇಳಿದ.
 
ಟ್ರಂಪ್ ನನ್ನು ಮತ್ತು ಅವನ ನೀತಿ ನಿರ್ಧಾರಗಳನ್ನು ನೋಡಿದರೆ ಇತಿಹಾಸ ಮರುಕಳಿಸುತ್ತದೆ ಎಂಬ ಮಾತು ಅಕ್ಷರಶಃ ಸತ್ಯ ಅನಿಸುತ್ತದೆ, ಹಿಂದೆ ಭಾರತದಲ್ಲಿ ತುಘಲಕ್ ಎಂಬ ರಾಜನಿದ್ದನಂತೆ. ಈತ ಬುದ್ಧಿ ಹೀನ ನಿರ್ಧಾರ ತೆಗೆದುಕೊಳ್ಳಲು ಹೆಸರಾಗಿದ್ದ, ಈಗಲೂ ತಿಕ್ಕಲು ನೀತಿ ಜಾರಿ ಮಾಡುವ ಆಡಳಿತಗಾರರನ್ನು ಈತನಿಗೆ ಹೋಲಿಸುತ್ತಾರೆ, ಶತಮಾನಗಳ ಹಿಂದಿನ ತುಘಲಕ್ ನನ್ನು ನಾವು ಓದಿದ್ದೇವೆ, ಕೇಳಿದ್ದೇವೆ, ಈಗ ಟ್ರಂಪ್ ರೂಪದಲ್ಲಿ ನೋಡುತ್ತಿದ್ದೇವೆ. ಟ್ರಂಪ್ ವಾರಗಳ ಹಿಂದೆ ಹೀಗೆ ಅನ್ನುತ್ತಿದ್ದಂತೆ ಭಾರತಕ್ಕೆ ಹಿಂದಿರುಗಲು ಅಲ್ಲಿನ ರ‍್ಪೋರ್ಟ್ಗಳಲ್ಲಿ ನೂಕುನುಗ್ಗಲು ಉಂಟಾಯಿತು, ಏರ್ ಲೈನ್‌ಗಳು ಸಿಕ್ಕಾಪಟ್ಟೆ ದರ ಏರಿಸಿ ಖುಷಿ ಪಟ್ಟವು. ಲಾಭ ಮಾಡಿಕೊಂಡವು.
 
ಕೆಲವು ದಶಕಗಳ ಹಿಂದೆ ನಾನು ನಮ್ಮೂರಲ್ಲಿ ನೋಡಿದ್ದೇನೆ, ೭೦, ೮೦ರ ದಶಕಗಳಲ್ಲಿ ಉತ್ತರ ಕನ್ನಡ ಮೂಲೆಯಿಂದ ಮೈಸೂರಿಗೋ ಬೆಂಗಳೂರಿಗೋ ಓದಲು ಅಥವಾ ಕೆಲಸಕ್ಕೆ ಹೋಗುವುದು ತುಂಬ ದೊಡ್ಡ ವಿಷಯವಾಗಿತ್ತು, ಊರಿನ ಬಸ್ ನಿಲ್ದಾಣಗಳಿಂದ ಈ ಊರುಗಳಿಗೆ ಹೋಗುವ ವ್ಯಕ್ತಿಯನ್ನು ಬೀಳ್ಕೊಡಲು ಅವನ ಬಂಧು ಬಾಂಧವರ ಹಿಂಡೇ ಬರುತ್ತಿತ್ತು, ಕುಳಿತವನ ಬಸ್ ಕಣ್ಣಿಗೆ ಕಾಣದಷ್ಟು ದೂರ ಹೋಗುವವರೆಗೂ ಕೈ ಬೀಸುತ್ತ, ಅವರಲ್ಲೇ ಸ್ಪರ್ಧೆಗೆ ಬಿದ್ದು ಮಾತಾಡಿಸುವುದನ್ನು ನೋಡಿ  ಓಹೋ ಈ ವ್ಯಕ್ತಿ ಎಲ್ಲೋ ಇನ್ನು ಮತ್ತೆ ಮರಳಿ ಬಾರದ ಮಂಗಳನ ಅಂಗಳಕ್ಕೆ ಹೋಗುತ್ತಿರಬೇಕೆಂದು ನಕ್ಕಿದ್ದೆ, ಒಮ್ಮೆ ಇಂಥ ಕಿರಿಕಿರಿ ತಡೆಯಲಾಗದೇ ಸ್ವಾಮೀ ತಾವು ಎಲ್ಲಿಗೆ ಪ್ರಯಾಣಿಸುತ್ತಿದ್ದೀರಿ ಎಂದು ಬಂಧುಗಳ ಮುಂದೆ ಕೇಳಿದಾಗ ಬೆಂಗಳೂರಿಗೆ ಅಂದಿದ್ದರು, ಮತ್ತೆ ನಾಳೆಯೇ ಬರಬಹುದಲ್ಲ, ಅದಕ್ಕೇಕೆ ಇಷ್ಟೆಲ್ಲ ಸಡಗರ ಅಂದಿದ್ದೆ, ಕೆಲ ವರ್ಷಗಳಲ್ಲಿ ಇದು ಬದಲಾಗಿ ಬಸ್ ನಲ್ಲಿ ಕುಳಿತ ಪಾಲಕರು ಪರಸ್ಪರ ಮಾತಾಡುವುದು ಕೇಳುತ್ತಿತ್ತು, ಒಬ್ಬರು - ಸ್ವಾಮೀ ತಾವು ಬೆಂಗಳೂರಿಗೋ, ಅವರು- ಇಲ್ಲ, ಅಮೆರಿಕಕ್ಕೆ, ನನ್ನ ಮಗ ಸೊಸೆ ಅಲ್ಲಿದ್ದಾರೆ, ಮಗಳು ಅಲ್ಲೇ ಇದ್ದಾಳೆ ಈಗ ಅವಳು ಮಗು ಹೆತ್ತಿದ್ದಾಳೆ ಬಾಣಂತನ ಮಾಡಿಸಲು ಹೋಗುತ್ತಿದ್ದೇವೆ ಎಂದು ಬೀಗುತ್ತಿದ್ದರು, ಹಾಗೆ ಹೇಳುವಾಗ ಮುಖದಲ್ಲಿ ಜಗತ್ತು ಗೆದ್ದ ಜಂಭ ಇರುತ್ತಿತ್ತು,  ದೇಶದ ಎಲ್ಲ ಸಣ್ಣಪುಟ್ಟ ಊರಿನಿಂದಲೂ ಇಂಥ ಪಾಲಕರು ಇದ್ದೇ ಇದ್ದಾರೆ. ಈಗ ಟ್ರಂಪ್ ಇಂಥ ಸಂಭ್ರಮಕ್ಕೆ ಸೂಜಿ ಚುಚ್ಚಿದ್ದಾನೆ, ಈ ನಿಯಮದಿಂದಾಗಬಹುದಾದ ಪರಿಣಾಮದ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಪರಿಶೀಲನೆ ನಡೆಸಿದೆ, ಕೌಶಲ್ಯ ಹೀನ ಅಮೆರಿಕ ಕೂಡ ತನ್ನ ಮೇಲಾಗುವ ಪರಿಣಾಮದ ಅವಲೋಕನ ಮಾಡತೊಡಗಿದೆ. ಭಾರತದ ವಿಪ್ರೋ, ಟಿಸಿಎಸ್, ಮೊದಲಾದ ಕಂಪನಿಗಳು ಈ ವೀಸಾದಡಿ ಅಮೆರಿಕಕ್ಕೆ ಕಳಿಸಿದ್ದ ತಮ್ಮ ಉದ್ಯೋಗಿಗಳನ್ನು ವಾಪಸು ಕರೆಸಿಕೊಳ್ಳುತ್ತಿವೆ, ಮಾರ್ಗ ಹುಡುಕುತ್ತಿವೆ, ಇವೆಲ್ಲ ಕಂಪನಿಗಳು ಒಟ್ಟಾಗಿ ಇದೇೆ ಸೋಮವಾರದೊಳಗೆ ನಿಲುವು ಪ್ರಕಟಿಸುವ ನಿರೀಕ್ಷೆ ಇದೆ, ಆದರೆ ಟ್ರಂಪ್ ನ ನಿರ್ಧಾರ ಆಘಾತ ಕೊಟ್ಟಿರುವುದು ನಿಜ. ಇದರ ಪರಿಣಾಮ ಈಗಾಗಲೇ ಅಮೆರಿಕದ ಶೇರು ನಾಸ್ದಾಕ್ ಮೇಲೆ ಆಗಿದ್ದು ಶೇ. ೪.೭೫ ರಷ್ಟು ಕುಸಿದಿದೆ. ಅಮೆರಿಕದಲ್ಲಿ ಹೆಚ್ಚು ವಹಿವಾಟು ಹೊಂದಿರುವ ಭಾರತದ ಕಂಪನಿಗಳು ತಮ್ಮ ಅಲ್ಲಿನ ಘಟಕಗಳನ್ನು ಮಾರುವ ಯೋಚನೆ ಮಾಡುತ್ತಿವೆ. ಇನ್ಫೋಸಿಸ್ ಶೇರು ಕೂಡ ಶೇ.೩.೪೦ರಷ್ಟು ಕುಸಿದಿದೆ. ತಜ್ಞರ ಪ್ರಕಾರ ಎಚ್ ೧ ಬಿ ವೀಸಾಅವಲಂಬಿಸಿದ ಕಂಪನಿಗಳಿಗೆ ಕುಶಲಿಗಳ ಕೊರತೆ ಉಂಟಾಗಲಿದೆ.ಇಂಥ ಕಂಪನಿಗಳಿಗೆ ಭಾರೀ ಹಿನ್ನೆಡೆ ಆಗಲಿದೆ, ಭಾರತ ಮತ್ತು ಅಮೆರಿಕದಲ್ಲಿ ಶೇರು ಪಟ್ಟಿಯಲ್ಲಿರುವ ವಿಪ್ರೋ, ಎಚ್ ಸಿ ಎಲ್,ಕಾಗ್ನಿಸೆಂಟ್ ನಂಥವು ಹೆಚ್ಚಾಗಿ ಈ ವೀಸಾ ಅವಲಂಬಿಸಿವೆ. ಇದನ್ನೇ ಮೋದಿ ಹಣಿಯಲು ಕಾಯುತ್ತಿರುವ ವಿಪಕ್ಷಗಳು ಈ ಮೋದಿ ಫ್ರೆಂಡು ದೇಶದ ಮೇಲೆ ಒಂದರ ಮೇಲೆ ಒಂದು ಆಘಾತ ಕೊಡುತ್ತಿದ್ದಾನೆ, ಇದು ಮೋದಿಯ ವೈಫಲ್ಯ ಎಂದು ಕೂಗತೊಡಗಿದ್ದಾರೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯಂತೂ ೨೦೧೭ರ ತನ್ನ ಸಾಮಾಜಿಕ ಜಾಲತಾಣದ ಪೋಸ್ಟನ್ನು ಮತ್ತೆ ಹಾಕಿ ಎಚ್ ೧ ಬಿ ವೀಸಾ ಬಗ್ಗೆ ಮೋದಿ ಏನೂ ಮಾತಾಡಿಲ್ಲವೆಂದು ಹೇಳಿಕೊಂಡಿದ್ದಾನೆ. ಈ ಒತ್ತಡಕ್ಕೆ ಮಣಿದ ಟ್ರಂಪ್ ಸ್ವಲ್ಪ ನಿಯಮ ಬದಲಿಸಿದ್ದು ಈ ವೀಸಾ ನಿಯಮದಂತೆ ಹಣ ಕಟ್ಟಬೇಕಿರುವುದು ಹೊಸ ಅರ್ಜಿದಾರರು, ಹಳೆಯ ನವೀಕರಣಕ್ಕೆ ಇದು ಅನ್ವಯವಾಗದು ಎಂದಿದ್ದು ನಿಟ್ಟುಸಿರು ಬಿಡುವಂತೆ ಮಾಡಿದೆ.
 
ನಿಜವಾಗಿ ಟ್ರಂಪ್ ನಿರ್ಧಾರ ಆಪಲ್, ಗೂಗಲ್‌ನಂಥ ಅಮೆರಿಕ ಮೂಲದ ಕಂಪನಿಗಳಿಗೆ ಭಾರೀ ಹೊಡೆತ ನೀಡಲಿದೆ ಅನ್ನಲಾಗಿದೆ.ಇವೆಲ್ಲ ತಮ್ಮ ಕೆಲಸಗಾರರನ್ನು ಭಾರತದಿಂದಲೇ ಹೆಚ್ಚಾಗಿ ಪಡೆದಿವೆ, ಅಮೆಜಾನ್, ಮೈಕ್ರೋಸಾಪ್ಟ್ ಹೀಗೆ ಮುಗಿಯದ ಪಟ್ಟಿ ಇದರಲ್ಲಿದೆ, ಇವೆಲ್ಲ ತಮ್ಮ ಟ್ರಂಪ್ ಎಂಬ ಅವಿವೇಕಿಗೆ ಬುದ್ಧಿ ಹೇಳಲು ಮುಂದಾಗಿವೆ, ಆ ಟ್ರಂಪನಿಗೂ ನಮ್ಮ ರಾಹುಲ್ ಗಾಂಧಿಗೂ ತಿಳಿ ಹೇಳುವವರು ಇನ್ನೂ ಹುಟ್ಟಿಲ್ಲ ಅನಿಸುತ್ತಿದೆ.
 
ಶೇರು ಮಾರುಕಟ್ಟೆಯ ಅಲುಗಾಟ ಈಗಾಗಲೇ ಶುರುವಾಗಿದ್ದು ಸದ್ಯ ಬರಲಿದೆ ಅನ್ನಲಾದ ಆರ್ಥಿಕ ಹಿಂಜರಿತಕ್ಕೆ ಇವೆಲ್ಲವುಗಳ ಮೂಲಕ ತಿಕ್ಕಲ ಟ್ರಂಪ್ ಭಾರೀ ಸ್ವಾಗತಕ್ಕೆ ಸಿದ್ಧತೆ ಮಾಡುತ್ತಿದ್ದಾನೆ ಅನಿಸುತ್ತದೆ, ಆತ ನಂಬುವ ಬೈಬಲ್ ನ ಪ್ರಸಿದ್ಧ ವಾಕ್ಯವನ್ನು ಇಲ್ಲಿ ನೆನೆಯಬಹುದು, 'ಓ ದೇವರೇ ಅವರನ್ನು ಕ್ಷಮಿಸು, ತಾವು ಏನು ಮಡುತ್ತಿದ್ದೇವೆ ಎಂಬುದೇ ಅವರಿಗೆ ತಿಳಿದಿಲ್ಲ' - ಇನ್ನೇನು ಹೇಳುವುದು?


   



No comments:

Post a Comment