ಹೌದು, ಒಂದು ಕಾಲದಲ್ಲಿ ಅಂದರೆ ಒಂದೆರಡು ಶತಮಾನಗಳ ಹಿಂದಿನವರೆಗೆ ಜಗತ್ತಿನ ಕಂಡ ಕಂಡ ಭೂಪ್ರದೇಶಗಳ ಮೇಲೆ ದಾಳಿ ಮಾಡಿ ಸವಾರಿ ಮಾಡಿ ಅಲ್ಲಿನ ಭೌಗೋಳಿಕ ಹಾಗೂ ಇತರೆ ಸಕಲ ಸಂಪತ್ತನ್ನೂ ಬಡಿದು ತಿಂದು ತೇಗಿ ಹಾಯಾಗಿದ್ದ ಬ್ರಿಟನ್ ಈಗ ಅಕ್ಷರಶಃ ದಿವಾಳಿ ಆಗಿದೆ, ಅದರ ಸಾಲದ ಪ್ರಮಾಣ ಶೇ. ೯೯ ಎಂದು ತಜ್ಞರು ಹೇಳುತ್ತಿದ್ದಾರೆ.ತಮಾಷೆ ಅಂದರೆ ಅದು ಯುನೈಟೆಡ್ ಕಿಂಗ್ಡಂ, ಅಂದರೆ ಲಂಡನ್ ಜೊತೆ ಇಂಗ್ಲೆಂಡ್ ವೇಲ್ಸ್, ಉತ್ತರ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಗಳು ಸೇರಿದ್ದರಿಂದ ಬ್ರಿಟನ್ ಸಾಲದ ಭಾರ ಇವುಗಳ ಮೇಲೂ ಬೀಳುವ ವ್ಯವಸ್ಥೆ ಇದೆ, ಆದರೆ ಸದ್ಯದ ತೆರಿಗೆ ಭಾರಕ್ಕೆ ಬ್ರಿಟನ್ ಬಿಟ್ಟು ಬೇರೆ ಒಕ್ಕೂಟ ದೇಶಗಳು ತಲೆ ಕೊಡದ ಕಾರಣದಿಂದ ಬ್ರಿಟನ್‌ನಲ್ಲಿ ಕಿಂಗ್ ಡಂ ನ ಇತರೆ ದೇಶಗಳೂ ಸೇರಿಕೊಳ್ಳಲೆಂಬ ಕೂಗಾಟ ಜೋರಾಗಿದೆ, ನಿಜವಾಗಿ ಬ್ರಿಟನ್ ಮಾಡಿಕೊಂಡ ಸ್ವಯಂಕೃತ ಅಪರಾಧ ಇದಕ್ಕೆ ಕಾರಣ. ಜೊತೆಗೆ ಹಣದುಬ್ಬರದಿಂದ ಜೀವನ ವೆಚ್ಚ ಸಿಕ್ಕಾಪಟ್ಟೆ ಏರಿದೆ, ಕೋವಿಡ್ ಆದಾಗಿನಿಂದ ಅಲ್ಲಿನ ಸೇವಾ ವಲಯ ನೆಲಕಚ್ಚಿದ್ದು ಮೇಲೇಳಲಿಲ್ಲ, ಕೂಲಿ ದರ ಅನೂಹ್ಯವಾಗಿ ಏರಿದೆ, ಇವೆಲ್ಲದರ ಜೊತೆಗೆ ರಾಜಕೀಯ ಅಸ್ಥಿರತೆ ಸೇರಿ ಇಂದಿನ ಬಿಕ್ಕಟ್ಟು ಎದುರಾಗಿದೆ.ಅಲ್ಲಿ ಆರ್ಥಿಕತೆ ದುರ್ಬಲವಾಗಿ ಜೀವನ ನಿರ್ವಹಣೆ ವೆಚ್ಚ ವಿಪರೀತವಾಗಿದೆ.ನೆರೆ ದೇಶಗಳ ಜನರ ವಲಸೆ ಅವ್ಯಾಹತವಾಗಿ ನಡೆದು ಇಂದಿನ ದುಸ್ಥಿತಿ ಎದುರಾಗಿದೆ ಎಂದು ಸರ್ಕಾರಗಳ ನೀತಿಯನ್ನು ದೂಷಿಸಲಾಗುತ್ತಿದೆ, ಹಿಂದಿನ ಪ್ರಧಾನಿ ಋಷಿ ಸುನಕ್ ಆರ್ಥಿಕ ಸ್ಥಿತಿಯನ್ನು ಹಳಿಗೆ ತರುವಲ್ಲಿ ಎಚ್ಚರತಪ್ಪಿದರೆಂದು ಹೇಳಲಾಗುತ್ತಿದೆ. ಅಲ್ಲಿನ ಬಡತನ ಪ್ರಮಾಣವಂತೂ ಮೇರೆ ಮೀರಿದೆ. ೨೦೦೮ರಿಂದ ಕೂಲಿದರ ನಿಂತಲ್ಲೇ ನಿಂತಿದೆ, ದೇಶದ ಶೇ೭೦ ಭೂಮಿಯನ್ನು ಕೃಷಿಗೆ ಬಳಸಿದರೂ ಅದರಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಶೇ.೧ ಮಾತ್ರ. ಸಾಲದ್ದಕ್ಕೆ ಅಲ್ಲಿನ ಕೃಷಿ ದೇಶದ ಒಟ್ಟೂ ಉತ್ಪನ್ನಕ್ಕೆ ಕೊಡುವ ಕೊಡುಗೆ ಶೇ.೦.೫ ಮಾತ್ರ. ದೇಶ ಬಳಸುವ ಆಹಾರದ ಅಗತ್ಯದಲ್ಲಿ ಶೇ.೫೪ ನ್ನು ಮಾತ್ರ ಅದು ಪೂರೈಸಿಕೊಳ್ಳುತ್ತದೆ, ಮಿಕ್ಕವನ್ನು ಆಮದು ಮಾಡಿಕೊಳ್ಳುತ್ತದೆ. ಇಲ್ಲೇ ಇರುವುದು ಸಮಸ್ಯೆ, ಶತಮಾನಗಳ ಕಾಲ ಕಂಡ ಕಂಡ ದೇಶಗಳನ್ನು ಹಿಂಡಿ ರಕ್ತ ಕುಡಿದೇ ದೇಹ ಬೆಳೆಸಿಕೊಂಡ ಬ್ರಿಟನ್, ಗ್ರೇಟ್ ಬ್ರಿಟನ್ ಈಗ ಸ್ವಂತ ದುಡಿಯದಿದ್ದರೆ ಆಗುವುದಿಲ್ಲ ಎಂಬ ಹಂತಕ್ಕೆ ಬಂದಾಗ ಸಪಾಟಾಗಿ ಮಲಗಿದೆ, ಸಾಯಲಿ. ಕುಶಲ ಕೃಷಿಕರಿಲ್ಲ, ಆಧುನಿಕ ತಂತ್ರಜಾನ ಸೌಲಭ್ಯವಿಲ್ಲ, ಸರ್ಕಾರದ ಸವಲತ್ತುಗಳಿಲ್ಲದ ಕಾರಣ ಅದು ಮುರುಟಿಕೊಂಡಿದೆ, ದೇಶವನ್ನು ಮುದುಡಿಸಿದೆ, ಭೂಮಿಯ ಬೆಲೆ ಅಗಾಧ, ಕೃಷಿ ಉತ್ಪನ್ನದ ಬೆಲೆ ಕಿಲುಬುಕಾಸು ಆದ್ದರಿಂದ ಜನಕ್ಕೂ ಆಸಕ್ತಿ ಇಲ್ಲ, ನೀರಾವರಿ ಪ್ರದೇಶ ಇಲ್ಲದ ಕಾರಣ ಯುವ ಜನತೆ ಕೃಷಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ, ಬ್ರಿಟನ್ ಇಂದು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ದೀರ್ಘ ಇತಿಹಾಸವಿದೆ, ಕನಿಷ್ಠ ದಶಕಗಳ ಇತಿಹಾಸವಿದೆ, ೨೦೦೮ರಲ್ಲಿ ಸಣ್ಣದಾಗಿ ಕಾಣಿಸಿಕೊಂಡಿದ್ದ ಸಮಸ್ಯೆ ಇದು, ೧೦ ವರ್ಷಗಳ ಹಿಂದೆ ಕಿಡಿಯಂತೆ ಕಾಣಿಸಿಕೊಂಡ ಈ ಸಮಸ್ಯೆಯನ್ನು ಅಲಕ್ಷಿಸಿದ ಕಾರಣ ಇಂದು ಅದು ಪರ್ವತವಾಗಿ ಬೆಳೆದು ಇಡೀ ದೇಶವನ್ನು ನುಂಗುವಂತೆ ಮಾಡಿದೆ. ಈ ಬಗ್ಗೆ ಅಲ್ಲಿ ತಲೆಕೆಡಿಸಿಕೊಳ್ಳಬಲ್ಲ ರಾಜಕೀಯ ಪಂಡಿತರು ಅಥವಾ ಆರ್ಥಿಕ ತಜ್ಞರು ಇರಲಿಲ್ಲವೇ ಎಂಬುದು ವಿಚಿತ್ರ ಸಂಗತಿ, ಹೇಳಿಕೊಳ್ಳಲು ಅಲ್ಲಿ ಆಕ್ಸ್ಫರ್ಡ್ , ಕೇಂಬ್ರಿಜ್ ಆರ್ಥಿಕ ಪಂಡಿತರನ್ನು ತಯಾರಿಸಿ ಪ್ರಪಂಚಕ್ಕೆ ಕೊಡುವ ಸಂಸ್ಥೆಗಳಿವೆ, ಆದರೇನು? ಬುಡಕ್ಕೆ ಬಿದ್ದ ಬೆಂಕಿಯನ್ನು ಕಾಣಲಾರದೇ ಹೋದರಲ್ಲಾ ಅವರೆಲ್ಲಾ! ಬ್ರಿಟನ್ನಿನ ಆರ್ಥಿಕ ಬಿಕ್ಕಟ್ಟಿಗೆ ಹತ್ತು ಹಲವು ಕಾರಣಗಳಿದ್ದರೂ ನಿಜವಾಗಿ ಕುಸಿದು ಹೋದ ಉತ್ಪಾದನೆ ಹಾಗೂ ನಿಂತುಹೋದ ಆರ್ಥಿಕ ಬೆಳವಣಿಗೆ, ಜೊತೆಗೆ ನೆರೆ ದೇಶಗಳಿಂದ ಬರುತ್ತಿರುವ ವಲಸಿಗರು ಅದರಲ್ಲೂ ಇಸ್ಲಾಂ ಮತಸ್ಥರು, ಕಳೆದ ದಶಕಗಳ ಅವಧಿಯಲ್ಲಿ ಅವರ ಜನಸಂಖ್ಯೆಯ ಪ್ರಮಾಣ ಇಮ್ಮಡಿಸಿದ್ದು ಕ್ರಿಶ್ಚಿಯನ್ನರಾದ ತಮ್ಮ ಸಂಖ್ಯೆ ವಿಪರೀತ ಕುಸಿದಿದೆ ಎಂಬುದು ಅಲ್ಲಿನ ಸ್ಥಳೀಯರ ಕೂಗು. ತಮಾಷೆ ಅಂದರೆ ಶತಮಾನಗಳ ಕಾಲ ಪ್ರಪಂಚದ ದೇಶಗಳಿಗೆ ಮತೀಯ ಸ್ವಾತಂತ್ರö್ಯ, ಧಾರ್ಮಿಕ ಸ್ವಾತಂತ್ರö್ಯ ಎಂದೂ ಜಾತ್ಯತೀತ ವರ್ತನೆ ನಾಗರಿಕ ಸಮಾಜಕ್ಕೆ ಅನಿವಾರ್ಯ ಎಂದು ಭಾಷಣ ಬಿಗಿಯುತ್ತ ಭಾರತ ಮತ್ತು ಆಫ್ರಿಕಾದಂಥ ದೇಶಗಳು ಅನಾಗರಿಕ,ಕ್ರೂರ ಸಮಾಜಗಳು, ಅವು ಬಾರ್ಬರಿಕ್, ಗ್ರಾಮೀಣ ಪರಿಸರವುಳ್ಳ, ನಾಗರಿಕ ವರ್ತನೆಯ ಅರ್ಥ ಗೊತ್ತಿರದ ಸಮಾಜಗಳು, ಅವನ್ನು ತಮ್ಮ ಧರ್ಮವನ್ನು ಅಲ್ಲಿ ಹರಡುವ ಮೂಲಕ ತಿದ್ದುವ ಅಗತ್ಯವಿದೆ ಎಂದು ಆಳ್ವಿಕೆ ನಡೆಸುತ್ತ ದಬ್ಬಾಳಿಕೆ ಮಾಡುತ್ತ ತಮ್ಮ ಆಡಳಿತಕ್ಕೆ ಅನುಕೂಲವಾಗುವಂತೆ ಸಮಾಜವನ್ನು ಒಡೆಯುತ್ತ ಲೂಟಿ ಮಾಡುತ್ತ ಈ ದೇಶಗಳ ಸಕಲ ಸಂಪತ್ತನ್ನು ಲೂಟಿ ಮಾಡಿ ತಮ್ಮ ದೇಶಕ್ಕೆ ಸಾಗಿಸಿಕೊಂಡು ಹಾಯಾಗಿದ್ದರು, ಆದರೆ ೧೮ನೆಯ ಶತಮಾನ ಕಳೆದ ಮೇಲೆ ಅವರ ಶಿಕ್ಷಣದ ಫಲವಾಗಿ ಎಚ್ಚೆತ್ತ ಇಲ್ಲಿನ ಜನತೆ ಅವರ ವಿರುದ್ಧ ತಿರುಗಿಬಿದ್ದಿತು. ಪರಿಣಾಮವಾಗಿ ಈ ದೇಶಗಳು ಸ್ವತಂತ್ರವಾದವು, ಇದರಿಂದ ಸುಲಭವಾಗಿ ಅವರಿಗೆ ಸಿಗುತ್ತಿದ್ದ ಆದಾಯ ನಿಂತುಹೋಯಿತು, ಪ್ರಪಂಚದಲ್ಲಿ ಆಳ್ವಿಕೆ ಆಗುತ್ತಿಲ್ಲ, ಆದರೆ ಹೇಗಾದರೂ ಮಾಡಿ ಯೂರೋಪಿನಲ್ಲಿ ತನ್ನ ಪ್ರಭುತ್ವ ಸ್ಥಾಪಿಸಬೇಕೆಂದು ಬ್ರಿಕ್ಸಿಟ್ ಎಂಬ ಹೆಸರಲ್ಲಿ ತನ್ನ ಕೈಕೆಳಗೆ ಯೂರೋಪಿನ ಸಣ್ಣಪುಟ್ಟ ದೇಶಗಳು ಬರುವಂತೆ, ಅದರ ಒಕ್ಕೂಟದ ಆಡಳಿತ ತನ್ನ ಹಿಡಿತದಲ್ಲಿರುವಂತೆ ನೋಡಿಕೊಳ್ಳಲು ಯತ್ನಿಸಿತು. ಯೂರೋಪಿನ ಒಕ್ಕೂಟದಿಂದ ಹೊರಬರಲು (ಸ್ಕಾಟ್ಲೆಂಡ್, ಐರ್ಲೆಂಡ್ ಇತ್ಯಾದಿ) ಉಳಿದ ದೇಶಗಳನ್ನು ಉತ್ತೇಜಿಸಲು ಬ್ರಿಟನ್, ಮತ್ತು ಎಕ್ಸಿಟ್ ಎಂಬ ಪದಗಳನ್ನು ಸೇರಿಸಿ 'ಬ್ರಿಕ್ಸಿಟ್' ಹೆಸರಲ್ಲಿ ಒಕ್ಕೂಟ ರಚಿಸಿಕೊಂಡಿತು, ಇದು ೨೦೨೦ರ ಜನವರಿಯಲ್ಲಿ ಅಧಿಕೃತವಾಗಿ ರಚನೆಯಾಯ್ತು. ಅದುವರೆಗೆ ಯೂರೋಪಿನ ಒಕ್ಕೂಟದಲ್ಲಿದ್ದ ಬ್ರಿಟನ್ ಅಲ್ಲಿಂದ ಹೊರಬರಲು ಇದರಿಂದ ಅನುಕೂಲವಾಯ್ತು. ಬ್ರಿಟನ್ ಸುತ್ತಲಿನ ಸಣ್ಣ ದೇಶಗಳ ಗಡಿ ವಿವಾದ, ಭಾಷೆ, ವಲಸೆ, ಆರ್ಥಿಕ ವಿಷಯ, ಮೊದಲಾದವುಗಳ ನಿರ್ವಹಣೆ ಇದರ ಮುಖ್ಯ ಉದ್ದೇಶವಾಗಿತ್ತು. ಆದರೆ ಇದರಿಂದ ಬ್ರಿಟನ್ನಿನ ಆರ್ಥಿಕತೆ ೨೦೧೭ರಲ್ಲಿ ೧.೭ರಷ್ಟು ಹೊಡೆತ ತಿಂದಿತು. ಶಿಕ್ಷಣ, ಸಂಶೋಧನೆಗಳ ಮೇಲೆ ಪರಿಣಾಮ ನಕಾರಾತ್ಮಕವಾಯ್ತು. ಇದರಿಂದ ಬ್ರಿಟನ್ನಿನ ಪ್ರತೀ ಮನೆಯ ಮೇಲೆ ೪೦೪ ಪೌಂಡ್ ಹೊರೆ ಬೀಳುವಂತಾಯ್ತು. ಬ್ರಿಕ್ಸಿಟ್ ನಿಂದ ಬ್ರಿಟನ್ನಿನ ಜಿಡಿಪಿ ಮೇಲೆ ಶೇ.೨ರಷ್ಟು ಕುಂಠಿತವಾಗುವಂತಾಯ್ತು. ಜೊತೆಗೆ ಬ್ರಿಟನ್ನಿನ ಉತ್ಪಾದನೆ ಶೇ. ೬ರಷ್ಟು ಕುಸಿಯುವಂತಾಯ್ತು ಎಂದು ತಜ್ಞರು ಹೇಳಿದ್ದಾರೆ. ಅಲ್ಲಿಂದ ಶುವಾದ ಆರ್ಥಿಕ ಹೊಡೆತವನ್ನು ರಾಜಕೀಯ ಮುಖಂಡರು ಯತ್ನಿಸುವ ಬದಲು ಅಸ್ಥರ ರಾಜಕೀಯದ ಕಾರಣದಿಂದ ತಮ್ಮ ಜಾಗ ಭದ್ರ ಮಾಡಿಕೊಳ್ಳಲು ಯತ್ನಿಸತೊಡಗಿದರು, ಈ ನಡುವೆ ಪ್ರಧಾನಿಗಳ ಬದಲಾವಣೆ ನಡೆಯಿತು. ಈ ಅಸ್ಥಿರತೆ ಆರ್ಥಿಕತೆ ಮೇಲೆ ಪರಿಣಾಮ ಬೀರಿತು.
ಬ್ರಿಟನ್ನಿನಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಏಕಕಾಲಕ್ಕೆ ವಸತಿ, ಉದ್ಯೋಗ ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ, ಇವುಗಳ ಜೊತೆಗೆ ವೈದ್ಯಕೀಯ ಸೌಲಭ್ಯದ ಕೊರತೆಯೂ ಸೇರಿಕೊಂಡು ಆಡಳಿತದ ವಿರುದ್ಧದ ಸಿಟ್ಟನ್ನು ವಲಸಿಗರ ಮೇಲೆ ಸ್ಥಳೀಯರು ತೋರಿಸತೊಡಗಿದ್ದಾರೆ. ಅದರಲ್ಲೂ ಮುಸ್ಲಿಂ ಜನಸಂಖ್ಯೆ ವಿಪರೀತವಾಗಿ ಏರುತ್ತಿದೆ ಎಂಬುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ, ೨೦೧೧ರಲ್ಲಿ ಶೇ.೪.೯ರಷ್ಟಿದ್ದ ಮುಸ್ಲಿಂ ಯುವಜನತೆಯ ಸಂಖ್ಯೆ ಅಲ್ಲಿ ೨೦೨೧ರಲ್ಲಿ ಶೇ.೬.೫ಕ್ಕೇರಿದೆ. ಸಾಲದ್ದಕ್ಕೆ ಸ್ಥಳೀಯ ಕ್ರಿಶ್ಚಿಯನ್ ಜನಸಂಖ್ಯೆ ಕುಸಿಯುತ್ತಿದೆ. ೨೦೦೧ಕ್ಕೆ ಹೋಲಿಸಿದರೆ ಮುಸ್ಲಿಂ ಜನಸಂಖ್ಯೆ ಅಲ್ಲಿ ೮೭ ಲಕ್ಷದಷ್ಟು ಏರಿದೆ ಎಂಬುದು, ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಕೈತಪ್ಪುತ್ತಿವೆ, ಇದಕ್ಕೆ ಸರ್ಕಾರ ನಿಯಂತ್ರಣ ಹೇರುವುದನ್ನು ಬಿಟ್ಟು ವಲಸಿಗರಿಗೆ ಉತ್ತೇಜನ ಕೊಡುತ್ತಿದೆ ಎಂಬುದು ಪ್ರತಿಭಟನಾಕಾರರ ಮುಖ್ಯ ಆರೋಪ. ಬ್ರಿಟನ್ ನಲ್ಲಿ ದೈನಂದಿನ ಮನೆಗೆಲಸದಿಂದ ಹಿಡಿದು ಯಾವುದೇ ಕುಶಲ ಕೆಲಸಕ್ಕೆ ಕೆಲಸಗಾರರಿಲ್ಲದ ಕಾರಣ ದಶಕಗಳಿಂದ ಈಚೆಗೆ ಪಾಕಿಸ್ತಾನದಿಂದ ಒಂದೇ ಸಮನೆ ಜನ ಬರತೊಡಗಿದರು. ಹಾಗೆ ಬಂದವರು ಕರ್ನಾಟಕಕ್ಕೆ ಮಲೆಯಾಳಿ ಕಾಕಾಗಳು ಬರುವಂತೆ ಬಂದು ತಮ್ಮ ಕುಟುಂಬ, ಬಂಧು ಬಾಂಧವರನ್ನೆಲ್ಲ ಕರೆದುಕೊಂಡುಬಂದು ನೆಲೆಯೂರತೊಡಗಿದರು. ಇದು ಬ್ರಿಟನ್ನಿಗೆ ಹೊರೆಯಾಗತೊಡಗಿತು, ಆರಂಭದಲ್ಲಿ ಮುಂದೆ ಇದು ಸಮಸ್ಯೆ ಆಗಬಹುದೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅದರ ಪರಿಣಾಮ ದಶಕಗಳ ಒಳಗೇ ಅವರು ತಿನ್ನುತ್ತಿದ್ದಾರೆ.ಕೆಲವು ರಾಜಕೀಯ ಮತದಾರ ಕ್ಷೇತ್ರಗಳಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿರುವುದರಿಂದ ಪಕ್ಷಗಳು ಅವರಿಗೆ ಬೆಂಬಲ ಕೊಡುತ್ತಿವೆ.ನಗರ ಪ್ರದೇಶಗಳಲ್ಲಿ ಮುಸ್ಲಿಮರು ಪ್ರಬಲರಾಗಿದ್ದಾರೆ. ಅಲ್ಲಿನ ಚುನಾವಣೆಯಲ್ಲಿ ಇವರೇ ನಿರ್ಣಾಯಕವಾದ್ದರಿಂದ ಇವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಪಕ್ಷಗಳು ಬಿಡುತ್ತಿಲ್ಲ. ಮುಸ್ಲಿಮರು ಅಲ್ಲಿ ಸಾಮಾಜಿಕ ಹಾಗೂ ತಮ್ಮ ಸಾಂಸ್ಕೃತಿಕ ವಲಯವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ, ಇವೆಲ್ಲ ಒಟ್ಟಾಗಿ ಅವರ ಸಿಟ್ಟು ಈಗ ಸ್ಫೋಟವಾಗಿದೆ, ಕಳೆದ ವಾರದಿಂದ ಬ್ರಿಟನ್ನಿನ ಮೂಲೆ ಮೂಲೆಯಲ್ಲಿ ಲಕ್ಷ ಲಕ್ಷ ಜನ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ, ಈ ಮುಷ್ಕರಕ್ಕೆ ತಡೆ ಒಡ್ಡುವ ಸಮರ್ಥ ನಾಯಕತ್ವ ಕೂಡ ಅಲ್ಲಿ ಕಾಣುತ್ತಿಲ್ಲ, ಪ್ರತಿಭಟನಾಕಾರರನ್ನು ತಡೆಯಲು ಸೇನೆ ಬಳಸುವ ಮಾರ್ಗಕ್ಕೆ ಕೈಹಾಕಲಾಗುತ್ತಿದೆ. ಸಾಲದ್ದಕ್ಕೆ ಮುಸ್ಲಿಮರು ಒತ್ತೆದಿಂದ ಸಥಳೀಯರನ್ನು ಇಸ್ಲಾಂಗೆ ಮತಾಂತರ ಮಾಡುತ್ತಿರುವುದು ಸಮಸ್ಯೆಗೆ ಮತ್ತೊಂದು ಆಯಾಮ ನೀಡಿದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಿಲಿಜನ್‌ಗಳು ಪ್ರಪಂಚದಲ್ಲಿ ಮತಾಂತರದ ಮೂಲಕವೇ ಅಸ್ತಿತ್ವ ಕಂಡುಕೊಂಡವು ಈಗ ಇಂಥ ಎರಡು ರಿಲಿಜನ್‌ಗಳು ಪರಸ್ಪರ ಕಚ್ಚಾಟಕ್ಕೆ ಇಳಿದಿವೆ, ಇದು ಇವುಗಳ ನಿಜವಾದ ಬಣ್ಣವನ್ನು ಬಯಲು ಮಾಡಿದೆ. ಅಲ್ಲಿ ೨೦೨೨ರಲ್ಲಿ ಟ್ರುಸ್ ಸರ್ಕಾರದಿಂದ ಶುರುವಾದ ಸಾಲದ ಹೊರೆ ಒಂದೇಸಮನೆ ಕಾಡತೊಡಗಿದೆ. ೨೦೨೨ರಲ್ಲಿ ಅಲ್ಲಿನ ಹಣದುಬ್ಬರ ಶೇ೧೦ರಷ್ಟು ಏರಿತು. ಇದು ಅಲ್ಲಿ ನಲ್ವತ್ತು ವರ್ಷಗಳ ದಾಖಲೆ ಅನಿಸಿತು. ಅನಂತರ ಶ್ರೀಮಂತ ದೇಶಗಳ ನೆರವಿನಿಂದ ಇಳಿಯತೊಡಗಿತು. ಆದರೆ ಹಣದುಬ್ಬರ ಇಳಿದರೂ ಅಲ್ಲಿನ ಇಂಧನ ಬೆಲೆ, ವಿದ್ಯುತ್ ಬೆಲೆ ವಿಪರೀತ ಏರಿತು. ರಷ್ಯಾ ಮತ್ತು ಉಕ್ರೇನ್ ಯುದ್ಧ ಇದಕ್ಕೆ ತುಪ್ಪ ಸುರಿಯಿತು. ಬ್ರಿಟನ್ನಿನ ಹಣದುಬ್ಬರ ಕಳೆದ ಕೆಲವು ತಿಂಗಳಿನಿಂದ ಏರುತ್ತಲೇ ಇದೆ, ಕಳೆದ ಜುಲೈನಲ್ಲಿ ಶೇ.೩.೪ವಸತಿ ದರ ಶೇ.ರಷ್ಟಿದ್ದ ಬೆಲೆ ಏರಿಕೆ ಆಗಸ್ಟ್ ವೇಳೆಗೆ ಶೇ. ೩.೮ರಷ್ಟಾಯಿತು. ವಸತಿ ದರ ಶೇ. ೬ರಷ್ಟಿದ್ದುದು ಕೆಲವೇ ತಿಂಗಳಲ್ಲಿ ಶೇ.೬.೧ ರಷ್ಟಾಗಿದೆ.
ಇಡೀ ಯೂರೋಪಿನಾದ್ಯಂತ ಮುಸ್ಲಿಮರು ಹರಡುತ್ತಿರುವುದು ಧರ್ಮದ ಹೆಸರಲ್ಲಿ ಭಯೋತ್ಪಾದನೆ ಮಾಡುತ್ತಿರುವುದು ಅಶಾಂತಿಗೆ ಕಾರಣವಾಗಿದೆ. ಭವಿಷ್ಯವಾದಿಗಳನ್ನು ಹೆಚ್ಚಾಗಿ ನಂಬುವ ಯೂರೋಪಿನ ಜನ ಅದರಲ್ಲೂ ಲಂಡನ್ನಿನ ಜನ ಬಲ್ಗೇರಿಯದ ಬಾಬಾ ವಂಗ ಅವರು ಹೇಳಿದ ಸದ್ಯದಲ್ಲಿ ಯೂರೋಪನ್ನು ಮುಸ್ಲಿಂ ಆಕ್ರಮಿಸಲಿದೆ ಎಂಬ ಭವಿಷ್ಯವಾಣಿಯನ್ನು ನಂಬಿ ಭಯ ಬಿದ್ದಿದೆ. ಸದ್ಯ ಬ್ರಿಟನ್ ನಲ್ಲಿ ನಡೆಯುತ್ತಿರುವ ವಿದ್ಯಮಾನ ಭಾರತಕ್ಕೂ ಪಾಠ ಹೇಳುತ್ತಿದೆ, ಭಾರತದಲ್ಲಿ ಮತಾಂತರ ರಿಲಿಜನ್‌ಗಳ ಕಚ್ಚಾಟಗಳಿಗೆ ಅಂಥ ಮಹತ್ವ ದೊರೆಯುವುದಿಲ್ಲ, ಆದರೆ ರಾಜಕೀಯ ಮತಬ್ಯಾಂಕ್ ಕಾರಣಕ್ಕೆ ವಲಸಿಗರ ಹೊಡೆತದಿಂದ ಆಗುವ ಸಂಪನ್ಮೂಲ ಸೋರಿಕೆ ದೊಡ್ಡ ಸಮಸ್ಯೆ ಆಗಲಿದೆ. ಇದನ್ನು ಈಗಲೇ ನಿಯಂತ್ರಿಸಲು ಸರ್ಕಾರ ಮಾರ್ಗಗಳನ್ನು ಹುಡುಕಿ ನಿಯಂತ್ರಣ ಮಾರ್ಗ ಜಾರಿ ಮಾಡಲು ಯತ್ನಿಸುತ್ತಿದೆ, ಈಶಾನ್ಯ ಮತ್ತು ಉತ್ತರ ಭಾರತಗಳಲ್ಲಿ ನೆರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಅಸಂಖ್ಯ ಜನ ಪ್ರತಿವರ್ಷ ವಲಸೆ ಬರುತ್ತಿದ್ದು ಇವರೆಲ್ಲ ಇಲ್ಲೇ ನೆಲೆಯೂರಿ ಇಲ್ಲಿನ ಸವಲತ್ತುಗಳನ್ನು ಪಡೆದು ಹಾಯಾಗಿದ್ದಾರೆ. ಇವುಗಳಿಗೆ ಅಗತ್ಯವಾದ ದಾಖಲೆಗಳನ್ನು ಪಡೆಯಲು ರಾಜಕೀಯ ಪಕ್ಷಗಳು ನೆರವಾಗುತ್ತಿವೆ. ಇದನ್ನು ತಡೆಯಲು ಚುನಾವಣಾ ಆಯೋಗ ತೀವ್ರ ಪರಿಶೀಲನೆ ನಡೆಸಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುತ್ತಿದೆ. ಆದರೆ ಭವಿಷ್ಯದ ಕಲ್ಪನೆ ಇಲ್ಲದ ರಾಜಕೀಯ ಪಕ್ಷಗಳು ಇದನ್ನು ವಿರೋಧಿಸುತ್ತಿವೆ. ಅವುಗಳಿಗೆ ಸದ್ಯದ ಬ್ರಿಟನ್ ಪರಿಸ್ಥಿತಿ ಅರಿವಾಗಬೇಕಿದೆ.

No comments:
Post a Comment