Thursday, 11 September 2025

ನೇಪಾಳ ಗಲಭೆಯ ಹಿಂದೆ ಏನಿದೆ?


ಕಳೆದ ಮೂರು ದಿನಗಳಿಂದ ಇಡೀ ನೇಪಾಳ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಇದಕ್ಕೆ ಕೊಡುತ್ತಿರುವ ಕಾರಣ ಈ ಸಾಮಾಜಿಕ ಜಾಲತಾಣಗಳನ್ನು ನಿಲ್ಲಿಸಿದ್ದೆಂದು ಹೇಳಲಾಗುತ್ತಿದೆ. ಫೇಸ್ ಬುಕ್, ಯೂಟ್ಯೂಬ್ ನಿಲ್ಲಿಸಿದ ಮಾತ್ರಕ್ಕೆ ಈ ಪ್ರಮಾಣದ ಗಲಭೆ ಎಲ್ಲಾದರೂ ನಡೆಯುವುದುಂಟೆ? ಇಲ್ಲ ಅನಿಸುತ್ತಿದೆ, ಸಾಲದ್ದಕ್ಕೆ ಇಡೀ ನೇಪಾಳದಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ ಗಲಭೆ ಹರಡುತ್ತಿದೆ.

ನೇಪಾಳದಲ್ಲಿ ಗಲಭೆಗೆ ಕರೆ ಕೊಟ್ಟವನು ಸಂದೂಪ್ ಗುರುಂಗ್ ಎಂಬಾತ. ಈತನ ಒಂದು ಸರ್ಕಾರೇತರ ಸಂಸ್ಥೆ 'ಹಮೀ ನೇಪಾಳ್'. ಇದಕ್ಕೆ ಹಣಕಾಸು ನೆರವು ಕೊಡುತ್ತಿರುವವನು ರುಯೀತ್ ಎಂಬ ಶ್ರೀಮಂತ. ಈತನಿಗೆ ಅಮೆರಿಕದ ಸಿ.ಎ.ಎ. ಸಂಬಂಧವಿದೆ ಅನ್ನಲಾಗಿದೆ. ಭಾರತದಲ್ಲಿ ಮೋದಿ ಪ್ರಧಾನಿ ಆದಾಗಿನಿಂದ ಭಾರತ ಮತ್ತು ಅದರ ಹಿತಾಸಕ್ತಿಗಳ ವಿರುದ್ಧ ಪಿತೂರಿ ನಡೆಯುತ್ತಿದೆ. ಈಗ ನೇಪಾಳದಲ್ಲಿ ನಡೆಯುತ್ತಿರುವ ಗಲಭೆ ಇಂಥ ಪಿತೂರಿಯ ಒಂದು ಭಾಗ. ಭಾರತ ಬೃಹತ್ ಆಳವಾದ ಶ್ರೀಮಂತ ಸಂಸ್ಕೃತಿಯುಳ್ಳ ದೊಡ್ಡ ಮರದಂಥ ದೇಶ. ಮೌಢ್ಯ ಸಂಪ್ರದಾಯದ ಹೆಸರಲ್ಲಿ ಇದನ್ನು ಅಲ್ಲಾಡಿಸುವ ಯತ್ನ ವಸಾಹತು ಕಾಲದಿಂದಲೂ ನಡೆಯುತ್ತಿದೆ. ಸದ್ಯ ಅಲ್ಲಿ ನಡೆಯುತ್ತಿರುವ ಗಲಭೆ ಸಾಮಾಜಿಕ ಮಾಧ್ಯಮಗಳ ನಿಷೇಧದಿಂದ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿನ ಯುವ ಜನತೆ ವೃದ್ಧರ ಆಡಳಿತದಿಂದ ಬೇಸತ್ತಿದೆ ಎಂದು ಬಿಂಬಿಸಿ ಯುವಕರೆಲ್ಲ ಆಧುನಿಕ ವಿಜ್ಞಾನ ತಂತ್ರಜ್ಞಾನ ಪ್ರಿಯರೆಂದೂ ಮುದುಕರು ಆಧುನಿಕತೆಯ ವಿರೋಧಿಗಳೆಂದೂ ಚಿತ್ರಿಸಲು ದಂಗೆಗೆ ಜೆನ್ ಝಡ್ ಅಥವಾ ಜೆನ್ ಜೀ ಎಂಬ ಸಂಕೇತ ಕೊಡಲಾಗಿದ್ದು ಗಲಭೆಕೋರರು ಪ್ರತಿಭಟನೆಯಲ್ಲಿ 'ಜೆನ್ ಜೀ' ಎಂದು ಕೂಗುತ್ತಿದ್ದಾರೆ.

ಅಲ್ಲಿನ ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರು, ಸುಳ್ಳು ಸುದ್ದಿ ಹರಡುತ್ತಿದೆ ಎಂಬ ಕಾರಣಕ್ಕೆ ೧೨೫ ವಾಹಿನಿಗಳನ್ನು ನಿಷೇಸಿದ್ದನ್ನು ವಿರೋಧಿಸಿ ಗಲಭೆ ಶುರುವಾಯ್ತು. ಆದರೆ ಇದರಲ್ಲಿರುವವರೆಲ್ಲ ಕಾಲೇಜು ವಿದ್ಯಾರ್ಥಿಗಳೆಂದೂ ಯುವಕರು ಮಾತ್ರವೆಂದೂ ಬಿಂಬಿಸಲಾಗಿದೆ, ನಿಜವಾಗಿ ಗಲಾಟೆ ಮಾಡುತ್ತಿರುವವರಲ್ಲಿ ಅರ್ಧದಷ್ಟು ಜನ ನೇಪಾಳದ ಜನರಲ್ಲ, ವಿದ್ಯಾರ್ಥಿಗಳೂ ಅಲ್ಲವೆನ್ನಲಾಗಿದೆ, ಅಮೆರಿಕ ತನ್ನ ಸಿಎಎ ಸಂಪರ್ಕವುಳ್ಳ ರುಯೀತ್  ಮೂಲಕ ಹಣಕೊಟ್ಟು ಗಲಭೆ ನಡೆಸುತ್ತಿದೆ, ಇದರ ನಕಾರಾತ್ಮಕ ಪರಿಣಾಮ ಭಾರತದಲ್ಲಾಗಲಿ ಎಂಬುದು ನೈಜ ಉದ್ದೇಶ. ಭಾರತದಂಥ ಬೃಹದಾಕಾರದ ಮರವನ್ನು ಉರುಳಿಸುವುದು ಸುಲಭವಲ್ಲ, ಹಾಗೆ ಕೀಳಲು ನೇರವಾಗಿ ಅದರ ಬುಡಕ್ಕೆ ಕೈ ಹಾಕಿದರೆ ಆಗುವುದಿಲ್ಲ, ದೊಡ್ಡ ಮರವನ್ನು ಕೀಳಲು ಆ ಮರದ ಸುತ್ತಲಿನ ಮಣ್ಣನ್ನು ಸಡಿಲಗೊಳಿಸಬೇಕು, ಅಗೆಯಬೇಕು, ಆಗ ಮರಕ್ಕೆ ಸಣ್ಣಗಾಳಿ ಬೀಸಿದರೂ ಅದು ಉರುಳಿ ಬೀಳುತ್ತದೆ, ಅದೇ ರೀತಿ ಭಾರತವನ್ನು ಉರುಳಿಸಲು ಶತಮಾನಗಳಿಂದ ನಡೆಯುತ್ತಿರುವ ಯತ್ನದ ಭಾಗ ಇದು, ಇದಕ್ಕೆ ಮುಖ್ಯ ಕಾರಣ ಮತಪ್ರಚಾರ, ಮತ ಪ್ರಚಾರದ ಮೂಲಕ ಇಡೀ ದೇಶವನ್ನು ನಂಬಿಕೆಯ ಆಧಾರದಲ್ಲಿ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬುದು ವಸಾಹತುಗಳ ದೀರ್ಘಕಾಲದ ಉದ್ದೇಶ, ಇದನ್ನು ಸಿಪಾಯಿದಂಗೆ ಕಾಲದಿಂದ ಗುರುತಿಸಬಹುದು. ಆದರೆ ಇಂಥ ಯತ್ನಗಳು ಇಂದಿಗೂ ನಿರೀಕ್ಷಿತ ಫಲ ಕೊಟ್ಟಿಲ್ಲ, ಆದರೆ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಯುತ್ತಲೇ ಇದೆ. ಇದು ಕೂಡ ಅಂಥ ಒಂದು ಯತ್ನ ಅನ್ನಲಾಗಿದೆ. ಅಮೆರಿಕದ ಟೆಕ್ಸಾಸ್ ನ ಈ ಕಂಪನಿ ಮೂಲತಃ ಇನ್ಶೂರನ್ಸ್ ಕೊಡುತ್ತದೆ, ಸಮಾಜ ಸ್ವಚ್ಛ ಮಾಡುತ್ತೇವೆ ಎಂಬುದು ಇದರ ಧ್ಯೇಯ. ನೇಪಾಳದಲ್ಲಿ ಏಷ್ಯಾದಲ್ಲೇ ಹೆಚ್ಚಿದೆ ಅನ್ನಲಾದ ಭ್ರಷ್ಟಾಚಾರದ ನೆಪದಲ್ಲಿ ನಿಷೇಧಿತ ವಾಹಿನಿಗಳು ಭ್ರಷ್ಟಾಚಾರ ಬಯಲು ಮಾಡುತ್ತಿದ್ದವೆಂದು ಇದಕ್ಕಾಗಿ ನಿಷೇಧಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ, ಜೆನ್ ಜೀಯಲ್ಲಿ ಮುಖ್ಯವಾಗಿ ೨೦೧೦ರ ನಂತರ ಜನಿಸಿದ ಯುವಜನತೆಯನ್ನು ಮುಖ್ಯವಾಗಿಟ್ಟುಕೊಂಡು ಅವರಿಗೆ ಸಾಮಾಜಿಕ ಜಾಲತಾಣಗಳ ಹುಚ್ಚು ಹಿಡಿಸಲಾಗಿದೆ, ಈಗ ಅವರೇ ಪ್ರತಿಭಟಿಸುತ್ತಿದ್ದಾರೆನ್ನಲಾಗಿದೆ. ಆದರೆ ಚೀನಾದ ಟಿಕ್ ಟಾಕ್ ಅಲ್ಲಿನ್ನೂ ಕೆಲಸಮಾಡುತ್ತಿದೆ. ಮನರಂಜನೆ, ಐಶಾರಾಮಿ ಜೀವನ ಬಯಸುತ್ತಿರುವ ಈ ಯುವ ಜನರಿಗೆ ಯಾವ ಕೆಲಸದಲ್ಲೂ ಆಸಕ್ತಿ ಇಲ್ಲ, ಮೂರು ಬಾರಿ ಅಧಿಕಾರಕ್ಕೆ ಬಂದ ಶರ್ಮಾ ಸಮಾಜದಲ್ಲಿ ಶಿಸ್ತು ತರಲು ಯತ್ನಿಸುತ್ತಿದ್ದರೆನ್ನಲಾಗಿದೆ, ಇವರ ವಿರುದ್ಧ ವಿರೋಧ ಪಕ್ಷಗಳು ಸೇರಿಕೊಂಡು ತಮ್ಮ ರಾಜಕೀಯ ಆಸಕ್ತಿ ಬೆಳೆಸಿಕೊಳ್ಳಲು ಜೆನ್ ಜೀ ಯನ್ನು ಬಳಸಿಕೊಳ್ಳುತ್ತಿವೆ, ತಲೆಕೆಟ್ಟ ಈ ಯುವ ಜನತೆ ಸರ್ಕಾರದ ಎಲ್ಲ ಕಚೇರಿಗಳಿಗೂ ಬೆಂಕಿ ಹಚ್ಚಿ ಲೂಟಿ ಮಾಡುತ್ತಿದೆ, ಮಾಜಿ ಪ್ರಧಾನಿ ಪತ್ನಿಯನ್ನು ಜೀವಂತ ಸುಟ್ಟಿದ್ದಾರೆ, ವಿದೇಶಾಂಗ ಸಚಿವರ ಮೇಲೆ ದಾಳಿ ಮಾಡಿದ್ದಾರೆ, ಪ್ರಧಾನಿ ಶರ್ಮಾ ಪಲಾಯನ ಮಾಡಿದ್ದಾರೆ, ನೇಪಾಳದಲ್ಲಿ ಅರಾಜಕತೆ ಮನೆ ಮಾಡಿದೆ, ಇದರ ರಾಜಕೀಯ ಲಾಭ ಪಡೆಯಲು ಮಸಲತ್ತು ನಡೆಯುತ್ತಿದೆ, ಇವೆಲ್ಲದರ ಪರಿಣಾಮ ಪರೋಕ್ಷವಾಗಿ ಭಾರತದ ಮೇಲೆ ಉಂಟಾಗುವುದನ್ನು ಕಾಯಲಾಗುತ್ತಿದೆ. ಭಾರತದ ಮೇಲೆ ಅಮೆರಿಕ ಕರಭಾರ ಹಾಕಿದ ಬೆನ್ನಲ್ಲೇ ನೆರೆಯ ಮಿತ್ರ ದೇಶ ನೇಪಾಳದಲ್ಲಿ ಇಂಥ ವಾತಾವರಣ ಸೃಷ್ಟಿ ಆಗಿರುವುದಕ್ಕೆ ತಾಳೆ ಹಾಕಬಹುದು. ಈಗಾಗಲೇ ಭಾರತದ ಸುತ್ತಲಿನ ದೇಶಗಳಲ್ಲಿ ಗಲಭೆಗಳು ನಡೆದಿವೆ, ಶ್ರೀಲಂಕಾ, ಬಾಂಗ್ಲಾ, ಮಾಲ್ಡೀವ್ಸ್ ಗಲಾಟೆ, ಇತ್ಯಾದಿ, ಇನ್ನು ಚೀನಾ ಮತ್ತು ಪಾಕಿಸ್ತಾನಗಳ ನಿತ್ಯ ಭಾರತ ವಿರೋಧಿ ನಿಲುವಿನ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಇದು ಪರೋಕ್ಷವಾಗಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಗಲಭೆ, ಇದಕ್ಕೆ ಅನೇಕ ವಿದೇಶೀ ಶಕ್ತಿಗಳು ಬೆಂಬಲ ಕೊಡುತ್ತಿವೆ, ನೇಪಾಳದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ವೇಶ್ಯಾವಾಟಿಕೆ, ಮಾದಕ ವಸ್ತುಗಳ ಮಾರಾಟ ಮೊದಲಾದವನ್ನು ಭಾರತದೊಳಗೆ ತೂರಿಸಲಾಗುತ್ತಿದೆ, ಮಾನವ ಅದರಲ್ಲೂ ಹೆಣ್ಣುಮಕ್ಕಳ ಮಾರಾಟ ಅಲ್ಲಿ ನಿರಂತರ ನಡೆಯುತ್ತಿದೆ, ಭಾರತದೊಳಗೆ ಅಲ್ಲಿನ ಹೆಣ್ಣುಮಕ್ಕಳನ್ನು ಮನೆಗೆಲಸ ಮನೆ ಕಾಯುವ ಕೆಲಸ ಹಾಗೂ ಅಡುಗೆ ಕೆಲಸದ ಹೆಸರಲ್ಲಿ ಕರೆತಂದು ಎಳೆಯ ವಯಸ್ಸಿಗೆ ಅವರನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ, ಈ ಮೂಲಕ ಸಮಾಜವನ್ನು ಕೊರೆಯುವ ಕೆಲಸ ಮಾಡಲಾಗುತ್ತಿದೆ, ಇಂಥ ದಂಧೆಗೆ ತಡೆ ಬೀಳುತ್ತಿರುವುದು ದಲ್ಲಾಳಿಗಳಿಗೆ ನುಂಗಲಾಗದ ತುತ್ತಾಗಿದೆ, ಇಂದಿನ ಗಲಭೆಗೆ ಇಂಥ ಆಯಾಮ ಇರುವುದನ್ನು ಅಲಕ್ಷಿಸಿ ಕೇವಲ ಸಾಮಾಜಿಕ ಮಾಧ್ಯಮ ಹಾಗೂ ಭ್ರಷ್ಟಾಚಾರವನ್ನು ಮುಂದೆ ಮಾಡಲಾಗುತ್ತಿದೆ, ನಿಜ, ಅಲ್ಲಿ ಭ್ರಷ್ಟಾಚಾರವಿದೆ, ಜೊತೆಗೆ ವಿದೇಶೀ ಶಕ್ತಿಗಳ ಹಿತಾಸಕ್ತಿಯೂ ಇದೆ. ಸದ್ಯ ನೇಪಾಳದ ಆಡಳಿತದ ಪೊಲೀಸ್, ಸರ್ಕಾರಿ ಕಚೇರಿಗಳೆಲ್ಲ ಬೆಂಕಿಗೆ ಆಹುತಿಯಾಗಿವೆ, ಈ ಗಲಾಟೆಯಿಂದ ಪ್ರವಾಸೋದ್ಯಮವನ್ನೇ ಮುಖ್ಯವಾಗಿ ನೆಚ್ಚಿಕೊಂಡ ಈ ದೇಶ ಕಂಗೆಟ್ಟಿದೆ, ಅಪಾರ ಹಣಕಾಸಿನ ನಷ್ಟ ಕಂಡಿದೆ, ಅಲ್ಲಿನ ಕೋರ್ಟು ಕಚೇರಿ ಕಟ್ಟಡಗಳೆಲ್ಲ ಭೂತ ಬಂಗಲೆಗಳಾಗಿವೆ ಅನ್ನಲಾಗಿದೆ, ಈ ಪರಿಸ್ಥಿತಿಯಿಂದ ನೇಪಾಳ ಚೇತರಿಸಿಕೊಳ್ಳಲು ದಶಕಗಳೇ ಬೇಕು. 

ನೇಪಾಳಕ್ಕೂ ಭಾರತಕ್ಕೂ ರಾಮಾಯಣ ಕಾಲದಿಂದಲೂ ನಂಟು, ಸೀತಾದೇವಿಯ ತವರು ನೇಪಾಳವೆಂದು ಹೇಳಲಾಗುತ್ತದೆ, ಲಿಚ್ಛವಿಗಳು ಮತ್ತು ನೇವರಾ ರಾಜಮನೆತನಗಳು ಇದನ್ನು ಆರಂಭದಲ್ಲಿ ಆಳುತ್ತಿದ್ದರೆಂದೂ ೧೭೬೮ರ ವೇಳೆಗೆ ಗೋರ್ಖಾರಾಜ ಮನೆತನ ಆಳುತ್ತಿತ್ತೆಂದು ಹೇಳಲಾಗಿದೆ, ಅಲ್ಲಿಂದ ಮುಂದೆ ಭಾರತದಲ್ಲಿ ವಸಾಹತುಗಳು ಆಳುತ್ತಿದ್ದ ಸಂದರ್ಭದಲ್ಲಿ ರಾಣಾ ಮನೆತನ ಆಳುತ್ತಿತ್ತು, ೨೦೦೮ರವರೆಗೂ ಅಲ್ಲಿ ರಾಜಮನೆತನ ಇತ್ತು, ಅನಂತರ ಭಾರತದ ನೆರವಿನೊಂದಿಗೆ ಪ್ರಜಾಪ್ರಭುತ್ವ ಅಳವಡಿಸಿಕೊಂಡಿತು. ಅದನ್ನು ಕಮ್ಯೂನಿಸ್ಟರು ತಮ್ಮ ಹಿಡಿತಕ್ಕೆ ತೆಗೆದುಕೊಂಡರು, ಭಾರತದ ವಿರುದ್ಧ ಅಂದಿನಿಂದಲೂ ಕಿಡಿ ಕಾರುತ್ತ ಬಂದಿದ್ದರೂ ಅಷ್ಟು ಶಕ್ತಿ ಇಲ್ಲದ ನೇಪಾಳ ಚೀನಾ ಜೊತೆ ಸೇರಿ ಭಾರತದ ವಿರುದ್ಧ ದನಿ ಎತ್ತುವ ಕೆಲಸವನ್ನು ಆಗಾಗ ಮಾತಾಡುತ್ತದೆ, ಈಗಿನ ಗಲಭೆ ಕೂಡ ಭಾರತವೇ ಕಾರಣ, ಭಾರತ ಪಿತೂರಿ ಮಾಡಿದೆ ಎಂದು ಅಲ್ಲಿಂದ ಪರಿಸ್ಥಿತಿ ಎದುರಿಸಲಾಗದೇ ಕಾಲು ಕಿತ್ತ ಓಲಿ ಶರ್ಮಾ ಎಂಬ ಕಮ್ಯೂನಿಸ್ಟ್ ಪ್ರಧಾನಿ ಕಿಡಿ ಕಾರಿಕೊಂಡಿದ್ದಾನೆ, ಮುಖ್ಯವಾಗಿ ಹಾಲು, ಹಣ್ಣುಗಳಿಗೂ ಭಾರತವನ್ನು ಅವಲಂಬಿಸಿರುವ ನೇಪಾಳ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದರೂ ಇರುವ ಪ್ರವಾಸೀ ತಾಣಗಳನ್ನು ಅಭಿವೃದ್ಧಿಪಡಿಸದೇ ಅದಕ್ಕೂ ಭಾರತವನ್ನು ನಕಲು ಮಾಡುವ ಕೆಲಸ ಮಾಡುತ್ತ ಭಾರತದಲ್ಲಿ ಪ್ರಸಿದ್ಧನಾಗಿರುವ ರಾಮ ಮೂಲತಃ ನೇಪಾಳದವನೆಂದು ಪ್ರವಾಸಿಗರನ್ನು ಸೆಳೆಯುವ ವಿಫಲ ಯತ್ನ ಮಾಡುತ್ತಿದೆ. ಈಗ ಅದು ಸ್ವಂತ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಅದಕ್ಕೂ ಭಾರತವನ್ನು ದೂಷಿಸುತ್ತಿದೆ. ಭಾರತ ಮತ್ತು ಚೀನಾಗಳ ನಡುವೆ ಸಣ್ಣ ಲಯಾಂಡ್ ಲಾಕ್ ಆಗಿರುವ ಭೂಭಾಗದಲ್ಲಿರುವ ನೇಪಾಳವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ಚೀನಾ ಬಹುಕಾಲದಿಂದ ಬಯಸುತ್ತಿದೆ, ಇದರಿಂದ ಭಾರತದ ವಿರುದ್ಧ ದಾಳಿ ಮಾಡಲು ಅನುಕೂಲ ಎಂಬುದು ಅದರ ಲೆಕ್ಕಾಚಾರ. ನೇಪಾಳದಲ್ಲಿ ಕೃಷಿ ಮಾಡುವ ಯಾವ ಅನುಕೂಲಕರ ಪರಿಸ್ಥಿತಿ ಇಲ್ಲ, ಹಾಗಾಗಿ ಅದು ಎಲ್ಲದಕ್ಕೂ ಭಾರತವನ್ನು ಮೊದಲಿನಿಂದಲೂ ಆಶ್ರಯಿಸಿದೆ. ಈ ಎರಡೂ ದೇಶಗಳ ನಡುವೆ ಅನೇಕ ಸಾಂಸ್ಕೃತಿಕ ಕೊಳುಕೊಡೆಗಳಿವೆ. ನೇಪಾಳ ಮತ್ತು ಚೀನಾ ನಡುವೆ ಇರುವ ಏಕೈಕ ಸಮಾನ ಸಂಬಂಧವೆಂದರೆ ಆಡಳಿತದಲ್ಲಿ ಕಮ್ಯೂನಿಸ್ಟ್ ಸರ್ಕಾರವಿರುವುದು.ಚೀನಾ ಇದನ್ನೇ ಬಂಡವಾಳ ಮಾಡಿಕೊಂಡು ನೇಪಾಳದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದೆ. ಆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ, ಸಿಕ್ಕ ಅವಕಾಶಗಖನ್ನು ಬಳಸಿಕೊಳ್ಳುತ್ತಿದೆ. ನೇಪಾಳದಲ್ಲಿ ಸ್ಥಿರತೆ ಅಗತ್ಯವೆಂದು ಈಗ ಪ್ರತಿಪಾದನೆಗೆ ತೊಡಗಿದೆ, ಅಲ್ಲಿನ ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲು ಭಾರತ ಯತ್ನಿಸುತ್ತಲೇ ಇದೆ.ಮೂರು ದಿನಗಳ ಅವಧಿಯಲ್ಲಿ ಅಲ್ಲಿನ ಗಲಭೆಯಲ್ಲಿ ೩೦ ಜನ ಸತ್ತಿದ್ದಾರೆ. ಗಲಾಟೆಯಲ್ಲಿ ಆದ ನಷ್ಟದ ಅಂದಾಜು ಇನ್ನೂ ಸಿಕ್ಕಿಲ್ಲ.  ಸದ್ಯ ಆ ದೇಶವನ್ನು ಸೇನೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ನೇಪಾಳ ಗಲಭೆಯಿಂದ ಭಾರತದ ವಾಣಿಜ್ಯ ಚಟುವಟಿಕೆಗೆ ಹೊಡೆತ ಬಿದ್ದಿದೆ. ಗಡಿಯಲ್ಲಿ ಸರಕು ಸಾಗಣೆ ವಾಹನಗಳು ನಿಂತೇ ಇವೆ. ಸದ್ಯ ಈ ಗಲಭೆಯಿಂದ ಸುಮಾರು ೬೦೦ ಕೋಟಿ ರೂಗಳಷ್ಟು ನಷ್ಟವಾದ ಅಂದಾಜಿದೆ.

ರಜಕೀಯ ಲಾಭದ ಲೆಕ್ಕಾಚಾರ ಒಂದೆಡೆಯಾದರೆ ನೇಪಾಳದ ಬೆಳವಣಿಗೆಗೂ ಮೊನ್ನೆ ಘಟಿಸಿದ ರಕ್ತ ಚಂದ್ರಗ್ರಹಣಕ್ಕೂ ಆಸ್ತಿಕರು ತಳಕು ಹಾಕುತ್ತಿದ್ದಾರೆ, ಗ್ರಹಣ ಪ್ರಭಾವದಿಂದ ಪ್ರಪಂಚದ ಮೂವರು ಪ್ರಧಾನಿಗಳು ಬೇರೆ ಬೇರೆ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ (ಜಪಾನ್, ಫ್ರಾನ್ಸ್ ಮತ್ತು ನೇಪಾಳ). ಗ್ರಹಣವೋ ಮತ್ತೊಂದೋ ಭಾರತಕ್ಕೆ ಅಂಟಿದ ಈ ಕತ್ತಲು ಸದ್ಯಕ್ಕೆ ಬಗೆಹರಿಯುವ ಲಕ್ಷಣವಿಲ್ಲ.

No comments:

Post a Comment