Sunday, 26 October 2025

ಚೀನಾದಲ್ಲಿ ಮೋದಿ ಹತ್ಯಗೆ ನಡೆದಿದ್ದ ಸಂಚು ಬಹಿರಂಗ


ಈಚೆಗೆ ಅಕ್ಟೋಬರ್ ಮೂರನೆಯ ವಾರದ ಸಂದರ್ಭದಲ್ಲಿ ಮೋದಿಯವರನ್ನು ಹತ್ಯೆಗೈಯುವ ಸಂಚನ್ನು ಅಮೆರಿಕದ ಸಿಐಎ ರೂಪಿಸಿ ವಿಫಲವಾಯಿತೆಂಬ ವಿಷಯ ಇದೀಗ ಜಾಗತಿಕ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಅಮೆರಿಕದ ಸಿಐಎ ಅಧಿಕಾರಿಯೊಬ್ಬ ಢಾಕಾದ ಹೊಟೇಲ್‌ನಲ್ಲಿ ನಿಗೂಢವಾಗಿ ಸತ್ತಿದ್ದು ಇದರಿಂದ ಹಿಂದಿನ ಬೆಳವಣಿಗೆಗಳು ಬಯಲಾಗಿವೆ. ಜೊತೆಗೆ ಕಾನ್ಸ್ಫಿರಸಿ ಥಿಯರಿ ಎಂಬಂತೆ ಇದಕ್ಕೂ ಬೆಂಗಳೂರಿನ ೩೦ಕ್ಕೂ ಹೆಚ್ಚು ಪ್ರಗತಿಪರರಿಗೂ ನಂಟು ಕೂಡ ಹಾಕಲಾಗಿದೆ. ಇವರಲ್ಲಿ ನಕ್ಸಲ್ ಪರ ಅನಿಸಿಕೊಂಡ ಕವಿ ಪತ್ರಕರ್ತರಾದ ತೆಲುಗಿನ ವರವರರಾವ್ ಹೆಸರು ಮುಖ್ಯವಾಗಿ ಮುಂದೆ ಬಂದಿದ್ದು ಈ ಕಾರಣಕ್ಕಾಗಿ ಅವರನ್ನು ಎಸ್ ಐಟಿ ಬಂಧಿಸಿ ಅವರ ಡೈರಿಯನ್ನು ವಶಕ್ಕೆ ಪಡೆದು ಮಾಹಿತಿ ಕಲೆಹಾಕಿದೆ ಎಂದು ಹೇಳಲಾಗುತ್ತಿದೆ, ಇದರ ಪ್ರಕಾರ ಮೋದಿಯವರ ಹತ್ಯೆಗೆ ಅವರ ಬೆಂಗಳೂರಿನ ರ‍್ಯಾಲಿ ಸಂದರ್ಭದಲ್ಲಿ ಹತ್ಯೆಗೈಯುವ ಅಥವಾ ಅವರ ಫ್ರಾನ್ಸಸ ಯಾತ್ರೆಯ ಸಂದರ್ಭ ಎಲ್ಲಿ ಹೇಗೆ ಯಾವ ರೀತಿ ಹತ್ಯೆ ಮಾಡಬೇಕೆಂಬ ಸವಿವರ ಮಾಹಿತಿ ದಾಖಲಿಸಲಾಗಿದೆ ಎಂದು ಹೇಳಲಾಗಿದೆ, ಇದು ಪತ್ರಕರ್ತೆ ಗೌರಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಯೋಚನೆ ಇತೆಂದು ಹೇಳಲಾಗಿದೆ.

ಇದು ಎಷ್ಟು ನಿಜ ಎಂಬುದು ಇನ್ನೂ ಗೊತ್ತಾಗ ಬೇಕಿದೆ. ಇದರ ನಡುವೆ ಜಾಗತಿಕವಾಗಿ ಸುಳಿದಾಡುತ್ತಿರುವ ವಿಚಾರವೆಂದರೆ ಈ ಸಂಚಿನ ಹಿಂದೆ ಅಮೆರಿಕವಿದೆ ಎಂಬುದು. ಇದಕ್ಕೆ ಕಾರಣವಿಲ್ಲದಿಲ್ಲ, ಮುಖ್ಯವಾಗಿ ಅಮೆರಿಕದ ಬೆದರಿಕೆಗಳಿಗೆ ಅದು ವಿಧಿಸಿದ ಹೆಚ್ಚುವರಿ ತೆರಿಗೆ ಇತ್ಯಾದಿಗಳಿಗೆ ಮೋದಿ ನೇತೃತ್ವದ ಭಾರತ ಬಗ್ಗುತ್ತಿಲ್ಲ. ರಷ್ಯಾದಿಂದ ತೈಲ ಖರೀದಿ ಮಾಡಬೇಡಿ ಅಂದರೆ ಭಾರತ ಕೇಳುತ್ತಿಲ್ಲ. ಅಮೆರಿಕದ ಕರೆನ್ಸಿಗೆ ಜಾಗತಿಕವಾಗಿ ಬೆಲೆ ಕುಸಿಯುವಂತೆ ಭಾರತ ಮಾಡುತ್ತಿದೆ ಎಂಬವು ಮುಖ್ಯ ಕಾರಣಗಳು. ಜೊತೆಗೆ ಮೋದಿ ನೇತೃತ್ವದಲ್ಲಿ ರಷ್ಯಾ, ಚೀನಾ ಮತ್ತು ಭಾರತಗಳು ಒಂದಾಗಿ ಪ್ರಪಂಚದಲ್ಲಿ ಬಲಿಷ್ಠವಾಗುತ್ತಿವೆ. ಹೀಗಾದರೆ ಅಮೆರಿಕಕ್ಕೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ, ಇದರ ಹಿಂದೆ ಮೋದಿ ಇದ್ದಾರೆ ಅನ್ನುವುದು, ಇದಕ್ಕೆ ಮೋದಿ ಮುಗಿಸುವುದೇ ಪರಿಹಾರ ಎಂದು ಭಾವಿಸಿದ ಅಮೆರಿಕ ಈ ಸಂಚಿಗೆ ಮುಂದಾಗಿತ್ತು, ಆದರೆ ಭಾರತದ ಅಂತಾರಾಷ್ಟ್ರೀಯ ಗೂಢಚಾರ ಸಂಸ್ಥೆ 'ರಾ' ಅಮೆರಿಕದ ಸಿಐಎಯ ಪಿತೂರಿಯನ್ನು ವಿಫಲವಾಗಿದೆ. ಈ ಕೆಲಸ ಮಾಡಲು ಮೋದಿಯನ್ನು ಅನುಸರಿದುತ್ತಿದ್ದ ಅಮೆರಿಕದ ಅಧಿಕಾರಿ ಜಾಕ್ಸನ್ ಎಂಬಾತ  ಸತ್ತುಬಿದ್ದಿದ್ದ. ಈತ ಹಲವಾರು ತಿಂಗಳಿಂದ ಬಾಂಗ್ಲಾದಲ್ಲಿದ್ದ, ಆಗಸ್ಟ್ ೩೧ರಂದು ಈತನ ಅಂತ್ಯವಾಯ್ತು, ಈತ ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸಿದ್ದ. ಇದರ ಹಿಂದೆ ಭಾರತದ ರಾ ಕೈವಾಡ ಇದೆ ಅನ್ನಲಾಗುತ್ತಿದೆ, ಇದು ಸುಳ್ಳು ಸುದ್ದಿ ಎಂದೂ ಹೇಳಲಾಗುತ್ತಿದೆ. ಆದರೆ ಈ ಮೂಲಕ ಅಮೆರಿಕ ಏನು ಸಾಧಿಸಲು ಹೊರಟಿತ್ತು ಎಂಬುದನ್ನು ಈ ಹಿಂದೆ ನೋಡಲಾಗಿದೆ. ಆದರೆ ರಷ್ಯಾದ ರಕ್ಷಣಾ ಸಂಸ್ಥೆ ಮತ್ತು ಭಾರತದ  ಏಜನ್ಸಿಗಳು ದೇರಿ ಈ ಸಂಚನ್ನು ವಿಫಲಗೊಳಿಸಿವೆ ಎಂಬುದು ಸದ್ಯದ ಸುದ್ದಿ. ಸಾಲದ್ದಕ್ಕೆ ಎಂದೂ ಯಾರಿಗೂ ಕಾಯದ ಪುಟಿನ್  ಶಾಂಘೈನಲ್ಲಿ ಸಭೆ ನಡೆಯುವ ಸಂದರ್ಭದಲ್ಲಿ ಪ್ರತ್ಯೇಕ ಉಳಿದಿದ್ದರೂ ಅಕ್ಟೋಬರ್ ೨೧ರಂದು ಮೋದಿ ಉಳಿದಿದ್ದ ಹೊಟೇಲಿಗೆ ಬಂದು ಮೋದಿಗಾಗಿ ಕಾಯ್ದು ನಿಂತು ತಮ್ಮ ಅತ್ಯದ್ಭುತ ಲಿಮೋಸಿನ್ ಕಾರಿನಲ್ಲಿ ಕೂರಿಸಿಕೊಂಡು ಸಭೆಯ ಸ್ಥಳಕ್ಕೆ ಕಾರಿನಲ್ಲೇ ಪರಸ್ಪರ ಮಾತುಕತೆ ನಡೆಸುತ್ತ ಬಂದಿದ್ದರು. ಪುಟಿನ್ ಕಾರು ಅಂತಿಂಥದ್ದಲ್ಲ, ಅದು ಸಾಮಾನ್ಯ ಬುಲೆಟ್ ಪ್ರೂಫ್ ಕಾರು ಮಾತ್ರವಲ್ಲ, ಅದಕ್ಕೆ ಬಾಂಬ್ ನಿರೋಧಕ ಕ್ಷಿಪಣಿ ನಿರೋಧಕ ಶಕ್ತಿಯೊಂದಿಗೆ ಸ್ವಯಂ ರಕ್ಷಣೆಯ ಹತ್ತಾರು ತಂತ್ರಜ್ಞಾನ ಅಳವಡಿಸಲಾಗಿದೆ. ಇದು ಅಂತ್ಯತ ಸುರಕ್ಷಿತ ಸ್ಥಳವೆಂದು ತಮ್ಮ ಏಜನ್ಸಿಯ ಮೂಲಕ ವಿಷಯ ತಿಳಿದಿದ್ದ ಪುಟಿನ್ ಮೋದಿಯನ್ನು ರಕ್ಷಿಸಿ ನೈಜ ಮಿತ್ರರಾದರೆಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಅಮೆರಿಕ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳುವುದಿಲ್ಲ, ಬದಲಾಗಿ ಜಾಗತಿಕವಾಗಿ ಯಾವುದೇ ದೇಶ ತನ್ನನ್ನು ಮೀರದಿರುವಂತೆ ನೋಡಿಕೊಳ್ಳಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡುತ್ತದೆ, ಈ ಬೆಳವಣಿಗೆ ಕೂಡ ಅದೇ ಆಗಿದೆ, ಈ ಸಂಚು ಯಶಸ್ವಿಯಾದರೆ ಅಮೆರಿಕ ಒಂದೇ ಹತ್ಯೆಯಲ್ಲಿ ಭಾರತ, ರಷ್ಯಾ ಮತ್ತು ಚೀನಾಗಳನ್ನು ಶಾಶ್ವತವಾಗಿ ದೂರ ಮಾಡುತ್ತಿತ್ತು, ಇಷ್ಟಾದರೂ ಈ ಪ್ರಯತ್ನ ಅಮೆರಿಕದ ಮೇಲೆ ಮಾಡುವ ಆರೋಪ ಮಾತ್ರ ಆಗುವಂತೆ ನೋಡಿಕೊಳ್ಳಲಾಗುತ್ತಿತ್ತು, ಈಗ ಕೂಡ ಈ ವಿಫಲ ಯತ್ನವನ್ನು ಕಾನ್ಸ್ಫಿರಸಿಥಿಯರಿ ಎಂದೇ ಕೆಲವರು ಬಣ್ಣಿಸುತ್ತಿದ್ದಾರೆ, ಈ ಸಂಚು ವಿಫಲವಾಗುವ ಮೂಲಕ ಅಮೆರಿಕದ ಏಜನ್ಸಿಗಳ ಅಶಕ್ತತೆ ಮತ್ತು ಭಾರತ ಗೂಢಚಾರ ಸಂಸ್ಥೆಯ ಸಶಕ್ತತೆಯನ್ನು ಎತ್ತಿ ತೋರಿಸಿದೆ, ಅದೇನೇ ಇರಲಿ, ಮೋದಿಯ ಹತ್ಯೆಯ ಪ್ರಯತ್ನವಂತೂ ಎಲ್ಲೆಡೆ ಇದೆ ಎಂಬುದು ಸಾಬೀತಾಗಿದೆ, ಭಾರತ ಕಳೆದ ಎರಡು ವರ್ಷಗಳಿಂದ ರಷ್ಯಾದಿಂದ ಕಚ್ಚಾ ತೈಲ ಖರೀದಿ ಹೆಚ್ಚಿಸಿಕೊಂಡಿದ್ದು  ಅಂದಿನಿಂದ ಭಾರತದಲ್ಲಿ ಇಂಧನ ಬೆಲೆ ಒಂದೇ ರೀತಿ ಇದ್ದು ಬೆಲೆ ಏರಿಕೆ ಆಗಿಲ್ಲ, ಪೆಟ್ರೋಲ್ ಡೀಸೆಲ್ ಬೆಲೆ ಒಂದೇ ರೀತಿ ಇವೆ. ಇದನ್ನು ಅಂತಾರಾಷ್ಟಿçÃಯ ಬೆಲೆ ಏರಿಳಕ್ಕೆ ಜೋಡಿಸಿದ್ದರೆ ಇಷ್ಟರಲ್ಲಿ ಇವುಗಳ ಬೆಲೆ ಅನೇಕ ಬಾರಿ ಸಾಕಷ್ಟು ಏರಿಳಿತ ಕಾಣುತ್ತಿತ್ತು, ಹಾಗಾಗಿಲ್ಲ, ಈ ವಿಷಯದಲ್ಲೂ ಅಮೆರಿಕ ಅಂತಾರಾಷ್ಟ್ರೀಯ ತೈಲ ಸಂಸ್ಥೆಯ ಮೂಲಕ ಭಾರತದ ಮೇಲೆ ಒತ್ತಡ ಹಾಕಲು ಯತ್ನಿಸಿ ವಿಫಲವಾಗಿತ್ತು, ಈ ಎಲ್ಲ ಉರಿಗಳು ಸೇರಿಕೊಂಡು ಅಮೆರಿಕ ಇಂಥ ಅವಿವೇಕದ ಯತ್ನಕ್ಕೆ  ಕೈ ಹಾಕಿತ್ತು ಅನ್ನಲಾಗಿದೆ, ಏನೇ ಆಗಲಿ ಈ ಕುಯತ್ನ ವಿಫಲವಾಗಿದೆ, ಹೇಳುತ್ತಾರಲ್ಲ, ಕೊಲ್ಲುವವರು ಇರುವಂತೆ ಕಾಯುವವರೂ ಇರುತ್ತಾರೆಂದು ಅದಾಗಿದೆ. 


  


Sunday, 5 October 2025

ಮರೆಯಲಾಗದ ಮೊಗಳ್ಳಿ


ನನಗೆ ಕತೆಗಾರ ಮೊಗಳ್ಳಿ ಗಣೇಶ ಪರಿಚಯವಾಗಿದ್ದು ೮೦ರ ದಶಕದಲ್ಲಿ. ನಾನಾಗ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಓದುತ್ತಿದ್ದೆ. ನಮಗೆ ಅವರು ಅರೆಕಾಲಿಕ ಶಿಕ್ಷಕರಾಗಿದ್ದರು. ಅವರು ಜೀಶಂಪ ಅವರ ಶಿಷ್ಯರಾಗಿ ಅಪಾರ ಜಾನಪದ ಪ್ರೇಮ ಹೊಂದಿದ್ದವರು. ಅವರು ದ್ವತಃ ಅಗಾಧ ಓದು ಪ್ರಿಯರು. ಉಳಿದವರೂ ಓದುವಂತೆ ಪ್ರೇರೇಪಿಸುತ್ತಿದ್ದರು. ನಾನು ಅವರ ಪ್ರಭಾವದಿಂದಲೇ ಸ್ವಲ್ಪ ಜಾಸ್ತಿಯಾಗಿ ಗಂಗೋತ್ರಿಯ ಗ್ರಂಥಾಲಯದಲ್ಲಿ ಸಮಯ ಕಳೆತೊಡಗಿದೆ. ಸಾಲದ್ದಕ್ಕೆ ಆಗಾಗ ಬಳಿ ಬಂದು ಹೊಸ ಹೊಸ ಪುಸ್ತಕಗಳ ಬಗ್ಗೆ ಹೇಳಿ ಗ್ರಂಥಾಲಯದಿಂದ ತೆಗೆದುಕೊಡುತ್ತಿದ್ದರು. ಅವರೇ ನನಗೆ ಮೊದಲ ಬಾರಿಗೆ ಕಾಲಿನ್ಸ್, ವೆಬ್‌ಸ್ಟರ್, ಲಾಂಗ್ ಮನ್ ಮೊದಲಾದ ಶಬ್ದಕೋಶಗಳು, ಬ್ರಿಟಾನಿಕಾ ವಿಶ್ವಕೋಶ ಹಿಡಿದು ತೋರಿಸಿದವರು. ವಿಮೆನ್ ಎಂಬ ಅಪೂರ್ವ ಗ್ರಂಥ ಸಂಪುಟ ಅಲ್ಲದೇ ಅಂಬೇಡ್ಕರ್ ಸಂಪುಟಗಳು ಅವರಿಂದ ಪರಿಚಿತವಾದವು. ಗಂಗೋತ್ರಿಯ ಮುಖ್ಯ ಗ್ರಂಥಾಲಯದ ರೇರ್ ಮಾತ್ರವಲ್ಲ, ವೆರಿ ರೇರ್ ಪುಸ್ತಕಗಳ ವಿಭಾಗಕ್ಕೂ ಅಲ್ಲಿನ ಗ್ರಂಥಪಾಲಕರಾಗಿದ್ದ ರಾಮಶಢಷು ಅವರಿಂದ ಪ್ರವೇಶ ಕೊಡಿಸಿ ತೃಪ್ತಿಯಾಗುವಷ್ಟು ಓದಲು ಅವಕಾಶ ಮಾಡಿಸಿದರು. ಇದಕ್ಕಾಗಿ ನಾನು ಅವರನ್ನು ಎಂದೂ ಮರೆಯಲಾರೆ. ಅವರು ಕಲಿಸಿದ ಹೊಸ ವಿಷಯಗಳ ಓದಿನ ಹುಚ್ಚನ್ನು ಮುಂದುವರೆಸಿದ್ದೇನೆ. ಫಲವಾಗಿ ಚೌಚೌ ಓದುಗನಾಗಿ  ಕಂಡವರಿಂದ ನಿಮಗೆ ನಿಮ್ಮದೇ ಸ್ವಂತ ವಿಷಯ ತಜ್ಞತೆ ಇಲ್ಲವೆಂದು ಮನೆಯವರಾದಿಯಾಗಿ ಬೈಸಿಕೊಳ್ಳುತ್ತಿದ್ದೇನೆ. ಇದರಲ್ಲೂ ಒಂಥರಾ ಖುಷಿ ಇದೆ. ಕೆಲವೊಮ್ಮೆ ನಮ್ಮ ನಡುವೆ ಭಿನ್ನಾಬಿಪ್ರಾಯಗಳಿದ್ದರೂ, ಅವರಲ್ಲಿ ಇದ್ದದ್ದು ಪ್ರೀತಿ ಮಾತ್ರ.

ಅವರು ಅಂದು ತೋರಿಸಿದ್ದ ವಿಮೆನ್ ಸೇರಿದಂತೆ ಹತ್ತು ಹಲವು ಪುಸ್ತಕಗಳನ್ನು ಅವಕಾಶ ಸಿಕ್ಕ ಎಲ್ಲ ಪುಸ್ತಕೋತ್ಸವಗಳಲ್ಲೂ ಹುಡುಕುತ್ತಿದ್ದೇನೆ, ಅವುಗಳಲ್ಲಿ ಒಂದೇ ಒಂದು ಪುಸ್ತಕ ಸ್ವಂತದ್ದಾಗುವುದಿರಲಿ, ಮೈಸೂರು ಗಂಗೋತ್ರಿ ಗ್ರಂಥಾಲಯ ಬಿಟ್ಟರೆ ಬೇರೆಲ್ಲೂ ನೋಡಲು ಸಿಕ್ಕಿಲ್ಲ. ಅಲ್ಲಿನ ಮಹಾರಾಜರು ತಮ್ಮ ಅಮೂಲ್ಯ ಗ್ರಂಥ ಸಂಗ್ರಹವನ್ನು ಗ್ರಂಥಾಲಯಕ್ಕೆ ದಾನ ಮಾಡಿದ್ದು ಇದಕ್ಕೆ ಕಾರಣವಿರಬೇಕು. ಅಂಥ ಅಪೂರ್ವ ಬಂಢಾರವನ್ನು ತೋರಿಸಿದ ಗಣೇಶ್ ನೆನಪಾಗಿದ್ದಾರೆ. ಸಾಂಪ್ರದಾಯಿಕ ಆಹಾರ ಪದ್ಧತಿ ಕುರಿತು ನಾನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಡಿ. ಲಿಟ್ ಪ್ರಬಂಧವನ್ನು ಪುಸ್ತಕ ರೂಪದಲ್ಲಿ ತರುವಂತೆ ಒತ್ತಾಯಿಸಿ ಈಚೆಗೆ ಅದನ್ನು ಮುದ್ರಣಕ್ಕೂ ಕೊಡಿಸಿ ಅದಕ್ಕೊಂದು ಅದ್ಭುತ ಮುನ್ನುಡಿಯನ್ನೂ ಬರೆದು ತಡವಾಗುತ್ತದೆಂಬ ಕಾರಣಕ್ಕೆ ಸ್ವತಃ ಬಂದು ಕೊಟ್ಟುಹೋಗಿದ್ದರು.

ಇದಾಗಿ ಕೆಲವೇ ತಿಂಗಳಾಗಿವೆ, ಆಗ ಒಂದು ಸುಳಿವನ್ನೂ ಕೊಟ್ಟಿರಲಿಲ್ಲ, ಚೆನ್ನಾಗಿಯೇ ಇದ್ದರು, ಆದರೆ ಈಚೆಗೆ ಇದ್ದಕ್ಕಿದ್ದಂತೆ ಅವರ ಆರೋಗ್ಯ ಹದಗೆಟ್ಟಿತ್ತು. ಕಿಡ್ನಿ ಮತ್ತು ಲಿವರ್ ಕೈಕೊಟ್ಟಿದ್ದವು. ಇವು ಇಂದು ಬೆಳಿಗ್ಗೆ ಸಂಪೂರ್ಣ ಕೈಕೊಟ್ಟು ಅವರ ಉಸಿರನ್ನೇ ಕಿತ್ತವು. ನಾವೆಲ್ಲ ಕೆಲವು ವಿದ್ಯಾರ್ಥಿ ಮಿತ್ರರು ಸೇರಿ ಅವರ ಮದುವೆ ಮದ್ದೂರಿನಲ್ಲಾದಾಗ ಬಹಳ ಸಂಭ್ರಮದಿಂದ ಓಡಾಡಿದ್ದೆವು. ಅದಿನ್ನೂ ಮನದಲ್ಲಿ ಹಸಿರು. ಅವರ ಪತ್ನಿ ಶೋಭಾ ಅವರು ಸದ್ಗುಣಿ, ಅವರ ಸಕಲ ಶ್ರೇಯಸ್ಸು ಬಯಸಿದರು, ಮದುವೆಯಾದ ಹೊಸದರಲ್ಲಿ ಗಂಡನನ್ನು ಅನುಸರಿಸಿ ಬಯಲಸೀಮೆಯ ಹಂಪೆಗೆ ಗಂಡನೊಂದಿಗೆ ಹೋಗಿ ಸಂಸಾರ ಕಟ್ಟಿ ಬದುಕನ್ನು ಹಸಿರು ಮಾಡಿಕೊಂಡರು, ಮಕ್ಕಳೊಂದಿಗೆ ಚೊಕ್ಕ ಸಂಸಾರ ರೂಪಿಸಿಕೊಂಡರು, ಈಗ ವಿಧಿ ಅದರ ಮೇಲೆ ಸವಾರಿ ಮಾಡಿದೆ, ಅವರ ಮಕ್ಕಳಿಗೂ ಶೋಭಕ್ಕ ಅವರಿಗೂ ಸಕಲ ಶ್ರೇಯಸ್ಸು, ನೆಮ್ಮದಿ ಗಣೇಶರ ಸದ್ಗುಣದಿಂದ ಬದುಕಲ್ಲಿ ಲಭಿಸಲಿ, ಗಣೇಶರ ಬಗ್ಗೆ ಇಷ್ಟು ಬೇಗ ಇಂಥ ಮಾತು ಬರೆಯಬೇಕಾಗಿ ಬಂದುದು ದುಃಖಕರ, ಕನ್ನಡಕ್ಕೆ ಅವರು ಕೊಡಬೇಕಿದ್ದ ಕೊಡುಗೆಗಳು ಇನ್ನೂ ಸಾಕಷ್ಟಿದ್ದವು, ಅವನ್ನೆಲ್ಲ ಬಿಟ್ಟು ಹೋದಿರಲ್ಲಾ ಸಾರ್.