ಸಾಮಾನ್ತವಾಗಿ ಕಬ್ಬು ಅಂದರೆ ನಾವು ಬೆಲ್ಲ ಮತ್ತು ಸಕ್ಕರೆಗಳು ಮಾತ್ರ ಅದರ ಪ್ರಮುಖ ಉತ್ಪನ್ನಗಳು ಎಂದು ಭಾವಿಸುತ್ತೇವೆ. ಇಲ್ಲ. ಮುಖ್ಯವಾಗಿ ಅದರ ಸಿಪ್ಪೆ ಜೊತೆಗೆ ಬೆಲ್ಲ ಅಥವಾ ಸಕ್ಕರೆ ತಯಾರಿಸುವಾಗ ಲಭಿಸುವ ಮೊಲಾಸಿಸ್, ಕಾಕಂಬಿ ಮತ್ತು ಅದರ ಉತ್ಪನ್ನ ಸ್ಪಿರಿಟ್‌ಗಳು ಕಡಿಮೆಯವಲ್ಲ. ಕೆಳಗಿನ ಪಟ್ಟಿ ನೋಡಿದರೆ ಕಬ್ಬಿನ ನಿಜವಾದ ಬೆಲೆ ಏನೆಂದು ಅರ್ಥವಾಗುತ್ತದೆ.
ಕಬ್ಬಿನಿಂದ ಸುಮಾರು ಒಂಬತ್ತು ಬಗೆಯ ಉಪುತ್ಪನ್ನಗಳನ್ನು ಪಡೆಯಲಾಗುತ್ತದೆ. ಮುಖ್ಯ ಉತ್ಪನ್ನಗಳೆಂದರೆ ಸಕ್ಕರೆ ಮತ್ತು ಬೆಲ್ಲ.ಇವಲ್ಲದೇ ದೊರೆಯುವ ಇತರೆ ಸಾಮಗ್ರಿಗಳೂ ಬೆಲೆ ಹೊಂದಿವೆ- ಇವುಗಳಲ್ಲಿ ಮುಖ್ಯವಾಗಿ ಕೆಳಕಂಡವು ಸೇರಿವೆ -
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಇವೆಲ್ಲ ಪ್ರತಿ ಟನ್ ಕಬ್ಬಿನಿಂದ ತಯಾರಾಗುವ ಉಪ ಉತ್ಪನ್ನಗಳು, ಇದರಲ್ಲಿ ಎಲ್ಲ ಸೇರಿ ರೈತರಿಗೆ ದೊರೆಯುವುದು ಪ್ರತಿ ಟನ್ನಿಗೆ ರೂ ೩೨೦೦ ಮಾತ್ರ, ಇದರಲ್ಲೂ ರೈತರೇ ಶುಗರ್ ಫ್ಯಾಕ್ಟರಿಗೆ ಸಾಗಿಸಿದರೆ ಮಾತ್ರ ೮೦೦ ರೂ ಹೆಚ್ಚಾಗಿ ದೊರೆಯುತ್ತದೆ, ಇಲ್ಲದಿದ್ದಲ್ಲಿ ೧,೪೦೦ ರೂ ಮಾತ್ರ. ಇದರಲ್ಲೂ ಕಬ್ಬಿನ ಗುಣಮಟ್ಟ ಶೇ ೧೧ ರಷ್ಟು ಇಲ್ಲದಿದ್ದರೆ ಬೆಲೆ ಬಹಳ ಕಡಿಮೆ ಸಿಗುತ್ತದೆ. ಉಳಿದ ಹಣವನ್ನು ಕಂಪನಿ ಮತ್ತು ದಲ್ಲಾಳಿಗಳೇ ನುಂಗುತ್ತಾರೆ ಅನಿಸಬಹುದು, ಆದರೆ ವಾಸ್ತವ ಬೇರೆ ಇದೆ, ದಶಕಗಳ ಹಿಂದೆ ಸಹಕಾರಿ ಸಕ್ಕರೆ ಸಂಘಗಳಿದ್ದವು. ಅವುಗಳಲ್ಲಿ ಕರ್ನಾಟಕದಲ್ಲಿ ಕಾರಣಾಂತರಗಳಿಂದ ಬಾಗಿಲು ಹಾಕಿ ಈಗ ಉಳಿದುಕೊಂಡವು ೩೨ ಮಾತ್ರ. ಕೆಲವು ಖಾಸಗಿ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತವೆ, ಆದರೆ ಹೆಸರಾಂತ ಕಂಪನಿಗಳು ಹೀಗೆ ಮಾಡಲಾರವು.
ಭಾರತದಲ್ಲಿ ಸಕ್ಕರೆ ತಯಾರಿಸುವ ಸುಮಾರು ೫೦೦ ಕಂಪನಿಗಳಿವೆ, ದೊಡ್ಡ ಕಂಪನಿಗಳಲ್ಲಿ ಸುಮಾರು ೮೦೦ ರಿಂದ ಸಾವಿರದವರೆಗೆ ನೌಕರರಿರುತ್ತಾರೆ, ಇವರ ಸಂಬಳ ವಗೈರೆ, ಯಂತ್ರೋಪಕರಣಗಳ ಖರೀದಿ, ನಿರ್ವಹಣಾ ವೆಚ್ಚ, ಮೂಲ ಬಂಡವಾಳ ಇತ್ಯಾದಿಗಳ ಜೊತೆಗೆ ರೈತರಿಗೆ ಕೊಡುವ ಹಣ, ಕಬ್ಬಿನ ಸಾಗಣೆ ಮತ್ತು ಕೂಲಿ ವೆಚ್ಚಗಳು ಸೇರಿ ಈಗಿರುವ ಸಕ್ಕರೆ ಮಾರುಕಟ್ಟೆ ದರದಲ್ಲಿ ಕಂಪನಿಗಳಿಗೆ ಶೇ ೧೦ರಷ್ಟೂ ಲಾಭ ದೊರೆಯುವುದಿಲ್ಲ. ನಿಜವಾಗಿ ಸರ್ಕಾರ ಎಥನಾಲ್ ಖರೀದಿ ಪ್ರಮಾಣ ಹೆಚ್ಚಿಸಿ ಕಂಪನಿಗಳಿಗೆ ಹಣ ನೀಡಿದರೆ ಕಂಪನಿಗಳು ರೈತರಿಗೂ ಹೆಚ್ಚು ಹಣಕೊಡಬಹುದು, ಆದರೆ ಸರ್ಕಾರ ಇಂಧನಗಳಿಗೆ ಬೆರೆಸುವ ಎಥನಾಲ್ ಖರೀದಿಯನ್ನು ಶೇ.೨೭ಕ್ಕೆ ಮಿತಗೊಳಿಸಿದೆ, ಅಲ್ಲದೇ ಕಂಪನಿಗಳು ಎಥನಾಲ್ ಉತ್ಪಾದನೆಯನ್ನು ಶೇ ೩೨ಕ್ಕಿಂತ ಹೆಚ್ಚು ತಯಾರಿಸುವಂತಿಲ್ಲವೆಂದು ಮಿತಗೊಳಿಸಿದೆ. ಇದರ ಪ್ರಮಾಣ ಏರಿದರೆ ಕಂಪನಿಗಳಿಗೆ ಹಣದ ಹರಿವು ವೇಗವಾಗಿ ಬಂದು ರೈತರ ಕೈಗೂ ಬೇಗ ಹಣ ಸಿಗುವಂತೆ ಮಾಡಬಹುದು. ಆದರೆ ಕಬ್ಬು ಕಟಾವು ಆಗುತ್ತಿದ್ದಂತೆ ರೈತರು ಹಣ ಬೇಕು ಅನ್ನುತ್ತಾರೆ, ಮಾರುಕಟ್ಟೆಯ ಸಕ್ಕರೆ ಬೇಡಿಕೆ ಇರುವುದೇ ಸೀಮಿತ. ಸಾಲದ್ದಕ್ಕೆ ಸಕ್ಕರೆ ಈಗ ಅಗತ್ಯ ವಸ್ತುಗಳ ಪಟ್ಟಿಯಲ್ಲಿದೆ. ಇದರ ದರವನ್ನು ಸುಮ್ಮನೇ ಏರಿಸುವಂತಿಲ್ಲ, ಲಭಿಸುವ ಎಲ್ಲ ಬಗೆಯ ಸಕ್ಕರೆಯನ್ನೂ ಗೃಹೋಪಯೋಗಿ ದರದಲ್ಲಿ ಕೊಡಲಾಗುತ್ತಿದೆ. ಇದರ ಬೆಲೆ ಕೂಡ ಪ್ರತಿ ಕಿಲೋಗೆ ೩೬-೩೭ ರೂ ಇದೆ. ಗಮನಿಸಬೇಕಾದ ಸಂಗತಿ ಎಂದರೆ ಭಾರತದಲ್ಲಿ ಲಭ್ಯವಿರುವ ಸಕ್ಕರೆಯಲ್ಲಿ ಶೇ.೬೦ರಷ್ಟು ಸಕ್ಕರೆಯನ್ನು ಕೋಕಾ ಕೋಲಾ, ಹಲ್ದಿರಾಮ್‌ನಂಥ ಕಂಪನಿಗಳು ಖರೀದಿಸುತ್ತವೆ, ನಿಜವಾಗಿ ಇಂಥ ವಾಣಿಜ್ಯ ಬಳಕೆಯ ಸಕ್ಕರೆಯ ದರವನ್ನು ಬೇರ್ಪಡಿಸಿ ಅದಕ್ಕೆ ಬೇರೆ ದರ ವಿಧಿಸಿದರೆ ಕಂಪನಿಗಳು ಚೇತರಿಸಿಕೊಳ್ಳುತ್ತವೆ, ಅಲ್ಲದೇ ಕಬ್ಬು ಕಟಾವು ಮಾಡಿ ಅದನ್ನು ಕಂಪನಿಗೆ ಸಾಗಿಸುವ ವೆಚ್ಚವನ್ನು ಟನ್ನಿಗೆ ೮೦೦ ರೂಗೆ ನಿಗದಿಪಡಿಸಿದ್ದು ಕೂಡ ಕಂಪನಿಗಳ ಕೈ ಕಟ್ಟುತ್ತದೆ. ಏಕೆಂದರೆ ಕಬ್ಬು ಕಟಾವಿನ ಕೂಲಿ ಒಂದೇ ಇದ್ದರೂ ಸಾಗಣೆಯ ದೂರ ೧೦ ಕಿಮೀಯಿಂದ ೧೦೦ ಕಿಮೀವರೆಗೂ ಇರಬಹುದು, ಇಲ್ಲಿ ಕಂಪನಿಗಳಿಗೆ ಹೊಡೆತ ಬೀಳುತ್ತದೆ.ಇಷ್ಟಾಗಿಯೂ ಈಗ ರೈತರಿಗೆ ಪ್ರತಿ ಟನ್ನಿಗೆ ಕೊಡಲಾಗುತ್ತಿರುವ ೩೮೦೦ ರೂ ಬೆಂಬಲ ಬೆಲೆಯಿಂದ ರೈತರಿಗೆ ಹೇಳಿಕೊಳ್ಳುವ ನಷ್ಟವೇನೂ ಆಗುವುದಿಲ್ಲ, ಆದರೆ ತಮ್ಮ ಜಮೀನಿನಲ್ಲಿ ಬೆಳೆಗೆ ಸೂಕ್ತ ನೀರು ಮತ್ತು ಗೊಬ್ಬರ ದೊರೆಯುವ ಖಾತರಿಯನ್ನು ರೈತ ಕೊಡಬೇಕು, ಇಲ್ಲದಿದ್ದರೆ ಮಾತ್ರ ಆತನಿಗೆ ನಷ್ಟವಾಗುತ್ತದೆ.
ಇದಕ್ಕೆ ಕಂಪನಿ ಹೊಣೆ ಅಲ್ಲ, ಇಂಥ ನಿರೀಕ್ಷೆ ಕೂಡ ಸರಿಯಲ್ಲ, ಕಬ್ಬು ಬೆಳೆಯ ವಿಷಯದಲ್ಲಿ ಜಮೀನು ಮತ್ತು ಅದರ ಸೂಕ್ತ ನಿರ್ವಹಣೆ ಬಿಟ್ಟರೆ ಭೂಮಿಗೆ ಬೀಜ ಬಿತ್ತುವುದರಿಂದ ಕಟಾವಿನವರೆಗೆ ಎಲ್ಲ ಜವಾಬ್ದಾರಿ ಕಂಪನಿಯದಾಗಿರುತ್ತದೆ, ಕಬ್ಬು ಬೆಳೆಯುವ ಮುನ್ನ ಕಂಪನಿ ರೈತನೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಿಂದ ಬೆಳೆಗೆ ಮಾರುಕಟ್ಟೆಯ ಚಿಂತೆ ರೈತನಿಗೆ ಇರುವುದಿಲ್ಲ,
ಕರ್ನಾಟಕದಲ್ಲಿ ಸಕ್ಕರೆ ðಯಾಕ್ಟರಿಯಿಂದ ವಿದ್ಯುತ್ ಖರೀದಿಸುವ ದರ ಪ್ರತಿ ಯೂನಿಟ್‌ಗೆ ೨ರೂ ೭೦ ಪೈಸೆಯಿಂದ ೩ ರೂ ವರೆಗೆ ಇದೆ. ಚ್ಯೂಯಿಂಗ್ ಗಮ್ ಬಿಳಿಕಾಗದ, ಗೊಬ್ಬರ ಇತ್ಯಾದಿಗಳೆಲ್ಲ ಕಬ್ಬಿನ ಉಪ ಉತ್ಪನ್ನಗಳು ಮೌಲ್ಯವರ್ಧಿತ ಉತ್ಪನ್ನಗಳು ಇವುಗಳ ಬೆಲೆಗೂ ಫ್ಯಾಕ್ಟರಿ ಲಾಭಕ್ಕೂ ಸಂಬಂಧವಿಲ್ಲ, ಮೊಲಾಸಿಸ್ ಅನ್ನು ಮುಖ್ಯವಾಗಿ ಆಲ್ಕೊಹಾಲ್ ತಯಾರಿಕೆಗೆ ಬಳಸಲಾಗುತ್ತದೆ, ಇದರ ಮೂಲ ಸ್ಪಿರಿಟ್ ಇದನ್ನು ಮಾತ್ರ ಸಕ್ಕರೆ ಫ್ಯಾಕ್ಟರಿ ಲೀಟರಿಗೆ ೨೦೦ ರಿಂದ ೩೦೦ ರೂಗೆ ಮಾರುತ್ತವೆ, ಅನಂತರ ಅವುಗಳಿಗೆ ಯಾವ ರೂಪದಲ್ಲಿ ಎಷ್ಟು ಬೆಲೆಗೆ ಮಾರಿದರೂ ಅದಕ್ಕೂ ಫ್ಯಾಕ್ಟರಿಗೂ ಸಂಬಂಧವಿಲ್ಲ.
ಆದ್ದರಿಂದ ಸದ್ಯ ರೈತರು ಬೆಲೆ ಏರಿಕೆಗೆ ಮಾಡುತ್ತಿರುವ ಪ್ರತಿಭಟನೆಯ ಮೂಲ ಕಾರಣ ಎಲ್ಲಿದೆ ಎಂದು ಮೊದಲು ಅರಿಯಬೇಕಿದೆ. ನಿಜವಾಗಿ ಕಂಪನಿಗಳಿಗೆ ಅಡೆತಡೆ ಇಲ್ಲದ ಸರಳ ಹಣದ ಹರಿವು ಬಂದರೆ ಕಂಪನಿಗೂ ನಷ್ಟವಿರುವುದಿಲ್ಲ, ರೈತನಿಗೂ ಹೆಚ್ಚು ಹಣ ಸಕಾಲಕ್ಕೆ ದೊರೆಯುತ್ತದೆ, ಈಗ ನೋಡಿ- ನಮ್ಮ ದೇಶದಲ್ಲಿ ವಾಹನ ಇಂಧನಗಳಿಗೆ ಎಥನಾಲ್ ಬಳಸುವ ಬ್ರೆಜಿಲ್ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ, ನಿಜವಾಗಿ ಪ್ರಪಂಚದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶ ಅದು, ಅಲ್ಲಿಯೇ ಸಹಜ ಇಂಧನದ ಜೊತೆಗೆ ಎಥನಾಲ್ ಮಿಶ್ರಮಾಡಿ ಬಳಸುವ ಪ್ರಮಾಣ ಶೇ. ೩೭ ರಷ್ಟಿದೆ, ನಮ್ಮ ದೇಶದಲ್ಲಿ ಇದು ಶೇ೨೭ರಷ್ಟಿದೆ, ಅಲ್ಲದೇಕಂಪನಿಗಳಿಗೆ ಕೂಡಲೇ ಲಾಭ ತರುವ ಎಥನಾಲ್ ಉತ್ಪಾದನೆಗೆ ಮಿತಿ ಹೇರಿದ್ದು ಹಣದ ಹರವಿಗೆ ಅಡ್ಡಿ ಮಾಡುತ್ತಿದೆ, ಇದರಿಂದ ತಾವುಖರೀದಿಸಿದ ಕಬ್ಬಿಗೆ ರೈತರಿಗೆ ಹಣಕೊಡುವ ಅನಿವಾರ್ಯತೆಗೆ ಸಿಲುಕುವ ಕಂಪನಿಗಳು ಬ್ಯಾಂಕ್‌ಗಳಿಂದ ಕೋಟ್ಯಂತರ ರೂ ಸಾಲ ಮಾಡಿ. ಈ ಹಣ ಅಲ್ಪ ಬೇಡಿಕೆಯ ಮಾರುಕಟ್ಟೆಯಿಂದ ಕೇವಲ ಸಕ್ಕರೆ ಮಾತ್ರ ಮಾರಾಟವಾಗಿ ಅದರ ಹಣ ಬರುವವರೆಗೆ ಬ್ಯಾಂಕಿಗೆ ಕಟ್ಟಬೇಕಾದ ಬಡ್ಡಿದರ ನೌಕರರ ವೇತನ, ಸಾಗಣೆ, ತೆರಿಗೆ,ನಿರ್ವಹಣೆಇತ್ಯಾದಿ ಖರ್ಚುಗಳನ್ನು ಲೆಕ್ಕ ಹಾಕಿದರೆ ಕಂಪನಿಗಳಿಗೆ ದೊರೆಯುವ ಲಾಭ ಹೇಳಿಕೊಳ್ಳುವಂಥದ್ದಲ್ಲ. ಈ ಸಮಸ್ಯೆಯ ಇನ್ನೊಂದು ಮುಖ್ಯ ವಿಷಯವೆಂದರೆ ಎಥನಾಲ್ ತಯಾರಿಗೆ ಹೇರಿರುವ ನಿರ್ಬಂಧ. ಇದಕ್ಕೆ ಅಂತಾರಾಷ್ಟ್ರೀಯ ತೈಲ ಒಕ್ಕೂಟಗಳ ಲಾಬಿಯಿಂದ ಹಿಡಿದು, ಅಂತಾರಾಷ್ಟ್ರೀಯ ಪರಿಸರ ರಕ್ಷಣೆಯ ಮಾಲಿನ್ಯ ನಿಯಂತ್ರಣ ವಿಶ್ವಸಂಸ್ಥೆಯ ಮಾಲಿನ್ಯ ಮಿತಿ ಪ್ರಮಾಣ ಹಾಗೂ ವಾಹನ ತಯಾರಿಕಾ ಘಟಕಗಳ ಲಾಬಿಯವರೆಗೆ ಏನೆಲ್ಲ ವಿಷಯ ತಳಕುಹಾಕಿಕೊಂಡಿದೆ, ಜಾಗತಿಕ ಮಾಲಿನ್ಯ ನಿಯಂತ್ರಣ ಮುಂದುವರೆದ ದೇಶಗಳಿಗೂ ಭಾರತದಂಥ ಮುಂದುವರೆಯುತ್ತಿರುವ ದೇಶಗಳಿಗೂ ವ್ಯತ್ಯಾಸವಿದೆ, ಈ ಎಲ್ಲ ಕಾರಣಗಳಿಂದ ಕಬ್ಬಿನ ಬೆಂಬಲ ಬೆಲೆ ಹೆಚ್ಚಿಸುವುದು ಅಷ್ಟು ಸುಲಭವಲ್ಲ, ಅಲ್ಲದೇ ರಾಜ್ಯದಿಂದ ರಾಜ್ಯಕ್ಕೆ ಇದು ಬೇರೆಯಾಗುತ್ತದೆ, ಕರ್ನಾಟಕಕ್ಕಿಂತ ಮಹಾರಾಷ್ಟ್ರದಲ್ಲಿ ಹೆಚ್ಚಿದೆ, ಕರ್ನಾಟಕದಲ್ಲಿ ಟನ್ನಿಗೆ ೩೫೦೦ ಇದ್ದರೆ ಮಹಾರಾಷ್ಟ್ರದಲ್ಲಿ ಹೆಚ್ಚಿದೆ. ಇದಕ್ಕೆ ಕಾರಣ ಅಲ್ಲಿ ರುವ ಮರುಪಾವತಿ ಪ್ರಮಾಣ ಹೆಚ್ಚಿದೆ.
ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಳಿಂದ ಈ ಬೆಂಬಲ ಬೆಲೆ ಹತ್ತು ಪೈಸೆಯಷ್ಟೂ ಏರಿಲ್ಲ ಎಂಬುದು ನಿಜ, ಜೊತೆಗೆ ಮದ್ಯದ ಬೆಲೆ ಹತ್ತು ವರ್ಷಗಳಲ್ಲಿ ವಿಪರೀತ ಏರಿರುವುದೂ ನಿಜ, ಜೊತೆಗೆ ಉಳಿದ ಸಾಮಗ್ರಿಗಳ ಬೆಲೆಯೂ ಏರಿದೆ, ಆದರೆ ಈ ಏರಿಕೆಯ ಲಾಭ ಯಾವ ಕಂಪನಿಗೂ ದೊರೆತಿಲ್ಲ.
ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ವಿಚಾರ ಮಾಡಿದರೆ ಸದ್ಯ ಕಬ್ಬಿಗೆ ಒಂದು ರೂ ನಷ್ಟು ದರ ಏರಿಸುವುದು ಎಷ್ಟು ಸಮಸ್ಯೆಯ ಸಂಗತಿ ಎಂಬುದು ಅರಿವಾಗುತ್ತದೆ.


No comments:
Post a Comment