Wednesday, 7 December 2022

ತಥಾಕಥಿತ ಚಿಂತನೆ


ಹೊರನಾಡ ಕನ್ನಡಿಗರಲ್ಲಿ (ಭೌಗೋಳಿಕವಾಗಿ ಕರ್ನಾಟಕದಿಂದ ಹೊರಗೆ ಇರುವವರು) ಪ್ರಮುಖ ಹೆಸರು ಜಿ.ಎನ್. ಉಪಾಧ್ಯ ಅವರದು. ಇವರು ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕನ್ನಡ ನಾಡು-ನುಡಿ ಸಮಾಜ ಸಂಸ್ಕೃತಿ ಬಗ್ಗೆ ಅನೇಕ ದಶಕಗಳಿಂದ ನಿರಂತರ ಕೆಲಸ ಮಾಡುತ್ತಾ ಬಂದಿದ್ದಾರೆ. ಇತ್ತೀಚಿಗೆ ಅವರ ಅನುಭಾವ ಸಾಹಿತ್ಯ ವಿಹಾರ ಎಂಬ ಕೃತಿ ಪ್ರಕಟವಾಗಿದೆ(ಜಾಗೃತಿ ಪ್ರಿಂರ‍್ಸ್, ಬೆಂಗಳೂರು, ೨೦೨೦). ಈ ಕೃತಿಯಲ್ಲಿ ವಚನಗಳನ್ನು ಕುರಿತು ವಿಶೇಷವಾಗಿ ಚರ್ಚಿಸಲಾಗಿದೆ. ೨೦ನೆಯ ಶತಮಾನದ ಆರಂಭದಿಂದ ಫ.ಗು. ಹಳಕಟ್ಟಿ, ಎಂ. ಆರ್. ಶ್ರೀನಿವಾಸಮೂರ್ತಿ ಮುಂತಾದವರು ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದ ಸಮಾಜ ಮತ್ತು ಸಾಹಿತ್ಯವನ್ನು ಸಮೀಕರಿಸಿ ನೋಡುವ ದೃಷ್ಟಿಯನ್ನು ಅಳವಡಿಸಿಕೊಂಡು ವಚನಗಳಲ್ಲಿ ಜಾತಿ, ವರ್ಗ ಮತ್ತು ವರ್ಣ ಮುಂತಾದ ವೈದಿಕ ಪರಿಕಲ್ಪನೆಗಳ ಚರ್ಚೆ ಇದೆ ಎಂಬ ಹಿನ್ನೆಲೆಯಲ್ಲಿ ವಚನಗಳನ್ನು ವಿಮರ್ಶಿಸುವ ಯತ್ನಕ್ಕೆ ಕೈಹಾಕಿದರು. ಅಂದಿನ ಸಂದರ್ಭದಲ್ಲಿ ಈ ದೃಷ್ಟಿ ಹೊಸದಾಗಿತ್ತು. ಅದೇ ದೃಷ್ಟಿಯನ್ನು ಅನಂತರದಲ್ಲಿ ಎಂ.ಎಂ. ಕಲ್ಬುರ್ಗಿ ಅವರ ಆದಿಯಾಗಿ ಎಲ್ಲರೂ ಅಳವಡಿಸಿಕೊಂಡರು. ವಚನಗಳ ಬಗ್ಗೆ ಈ ದೃಷ್ಟಿಯನ್ನಲ್ಲದೇ ಬೇರೆ ಹೇಳುವಂತಿಲ್ಲ ಎಂಬ ಪರಿಸ್ಥಿತಿ ಉದ್ಭವವಾಯಿತು.

ಇವೆಲ್ಲ ಏನೇ ಇರಲಿ. ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿಕೊಂಡ ವಚನಗಳ ಹಿನ್ನೆಲೆ, ಅವುಗಳ ಸ್ವರೂಪ, ಭಾಷೆ, ವಿಷಯ ವೈವಿಧ್ಯಗಳನ್ನು ಗಮನಿಸಿದಾಗ ಓದುಗನಲ್ಲಿ ಸಹಜವಾಗಿಯೇ ಅನೇಕಾನೇಕ ಪ್ರಶ್ನೆಗಳು ಹುಟ್ಟುತ್ತವೆ: ವಚನಗಳ ನರ‍್ದಿಷ್ಟ ಸಂಖ್ಯೆ ಯಾಕೆ ಲಭ್ಯವಿಲ್ಲ? ಕಲ್ಯಾಣ ಕ್ರಾಂತಿಯಾದಾಗ ವಚನಗಳ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೂ ಉಳವಿಗೂ ಸಾಗಿಸಲಾಯಿತು ಎಂಬ ಹೇಳಿಕೆ ಸರಿಯಾಗಿದ್ದರೆ ಆ ಕಟ್ಟುಗಳು ಏನಾದವು? ಲಭ್ಯ ವಚನಗಳಲ್ಲೂ ಒಬ್ಬ ಸಂಪಾದಕರ ಸಂಗ್ರಹದಲ್ಲಿರುವ ವಚನಗಳು ಮತ್ತೊಬ್ಬರ ಸಂಪಾದನೆಯಲ್ಲಿ ಇಲ್ಲದೇ ಹೋಗುವುದೇಕೆ? ಅಂಕಿತಗಳನ್ನು ಕಿತ್ತು ಓದಿದರೆ ಯಾವ ವಚನ ಯಾರದು ಎಂದು ಹೇಳಲು ಸಾಧ್ಯವೇ? ಯಾವ ವಚನಕಾರನ ಅಂಕಿತ ಯಾವುದು ಎಂದು ಎಲ್ಲ ವಚನಗಳಿಗೂ ಹೇಳಲು ಸಾಧ್ಯವಾಗದಿರುವುದು ಏಕೆ? ವಚನಗಳ ಪ್ರಧಾನ ಭಾಷೆ ಜನಪದವೇ ಆಗಿದ್ದರೂ ಅನೇಕ ವಚನಗಳಲ್ಲಿ ಸಂಸ್ಕೃತಭೂಯಿಷ್ಠ ಕ್ಲಿಷ್ಟವಾಕ್ಯಗಳು ಯಾಕಿವೆ? ಇಷ್ಟಾಗಿಯೂ ಇದು ಜನರ ಆಡುಮಾತಿನಲ್ಲೇ ಇದೆ ಎಂದು ಪ್ರತಿಪಾದಿಸುವುದು ಹೇಗೆ? ಏಕೆ? ವಚನಗಳು ರ‍್ಣ, ರ‍್ಗ, ಜಾತಿ, ಲಿಂಗ ಮೊದಲಾದ ಜಡ ಪರಿಕಲ್ಪನೆಗಳನ್ನು ಮುರಿದು ಇವೆಲ್ಲ ಇಲ್ಲದ ಸಮಾನ ಸಮಾಜಕಟ್ಟುವ ಉದ್ದೇಶ ಹೊಂದಿದ್ದರೆ ಬಸವಣ್ಣನೂ ಸೇರಿದಂತೆ ಅನೇಕಾನೇಕ ವಚನಕಾರರು ಮತ್ತೆ ಮತ್ತೆ ಹಲವು ಹದಿನೆಂಟುಜಾತಿಗಳ ಪ್ರಸ್ತಾಪ ಏಕೆ ಮಾಡುತ್ತಾರೆ? ಜಂಗಮರೆಲ್ಲ ಒಂದೇ ಆಗುತ್ತಾರಾದರೂ ಬ್ರಾಹ್ಮಣನಿಗೆ ಮೂರು ರ‍್ಷ, ವೈಶ್ಯನಿಗೆ ಎಂಟು ರ‍್ಷ, ಶೂದ್ರನಿಗೆ ಹನ್ನೆರಡು ರ‍್ಷ ಕಾಯಿಸಿ ದೀಕ್ಷೆಕೊಡಬೇಕೆಂದು ವಚನಗಳು ಹೇಳುವುದೇಕೆ? ವಚನಗಳು ಬ್ರಾಹ್ಮಣ, ವೈದಿಕ ವಿರುದ್ಧವಾಗಿದ್ದರೆ ನಿಜವಾದ ಜಂಗಮನೇ ಬ್ರಾಹ್ಮಣ ಎಂದು ವಚನಗಳು ಏಕೆ ಹೇಳಬೇಕು? ವೈದಿಕ ವಚನಕಾರರು ತಮ್ಮ ವಿರುದ್ಧವೇ ವಚನ ಬರೆದುಕೊಂಡರೇ? ವಚನಗಳು ಸ್ತ್ರೀ ಸಮಾನತೆ ಸ್ಥಾಪಿಸುವುದಾದರೆ ಚೆನ್ನಬಸವಣ್ಣನಂಥ ವಚನಕಾರರು ಆರು ರ‍್ಗದ ಸ್ತ್ರೀಯರನ್ನು ಬರ‍್ಪಡಿಸಿ ನೋಡುವುದೇಕೆ? ಸಮಾನತೆ ಇದ್ದ ಸಮಾಜದಲ್ಲಿ ಅಕ್ಕನ ವಚನಗಳು ಯಾಕೆ ಶೋಷಣೆ ಅನುಭವಿಸಿದ ದನಿಯನ್ನು ತೀವ್ರವಾಗಿ ತೋರಿಸುತ್ತವೆ? ಇಷ್ಟೆಲ್ಲ ಆಗಿಯೂ ಅಷ್ಟೊಂದು ಜಾತಿಗಳ ಸಂಗಮವಾಗಿ ರೂಪುಗೊಂಡಿದ್ದ ಆಂದೋಲನವೊಂದು ದಿಢೀರನೆ ಜರುಗಿದ ಕ್ರಾಂತಿಯೊಂದರಿಂದ ನಿರೀಕ್ಷಿತ ಯಶಸ್ಸು ಕಾಣದೇ ಅಷ್ಟು ಬೇಗನೆ ತಣ್ಣಗಾದುದಕ್ಕೆ ಬ್ರಾಹ್ಮಣ ಪಿತೂರಿಕಾರಣವೇ? ಹಾಗಾದರೆ ಬ್ರಾಹ್ಮಣರ ವಿರುದ್ಧವೇ ರೂಪುಗೊಂಡಿದ್ದ, ಹತ್ತು ಹಲವು ಜಾತಿಗಳು ಒಗ್ಗೂಡಿ ಮೂಡಿದ್ದ ಮಹಾನ್‌ ಚವಳಿಯು ಕೇವಲ ಬ್ರಾಹ್ಮಣರ ಪಿತೂರಿಗೆ ಬಲಿಯಾಗುವಷ್ಟು ದರ‍್ಬಲವಾಗಿತ್ತೇ? ಬಸವಣ್ಣನವರ ಅಂತ್ಯ ನಿಜಕ್ಕೂ ಒಳಗಿನವರಿಂದಾಯಿತೇ ಹೊರಗಿನವರಿಂದಲೇ? ಹೊರಗಿನವರಿಂದಾದರೆ ಲೋಕವಿರೋಧಿ, ಶರಣನಾರಿಗಂಜುವನಲ್ಲ ಎನ್ನುವ ಬಸವಣ್ಣನ ಭಕ್ತಾದಿಗಳು ಆ ಸತ್ಯವನ್ನು ಯಾವ ಪುರಾಣ ಸಾಹಿತ್ಯದಲ್ಲೂ ದಾಖಲಿಸದೇ ಹೋದುದೇಕೆ? - ಹೀಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಹುಟ್ಟುತ್ತವೆ. ಓದುಗನನ್ನು ಸದ್ಯ ನರ‍್ದೇಶಿಸುವ ದೃಷ್ಟಿ ಈ ಯಾವೊಂದು ಪ್ರಶ್ನೆಗೂ ಸರ‍್ಪಕ ಉತ್ತರ ನೀಡುವುದಿಲ್ಲ.

ಯಾವಕಟ್ಟಿಗೂ ಒಳಗಾಗದ ಜಂಗಮ ಸ್ವರೂಪದ ವಚನಗಳನ್ನು ಆಧುನಿಕ ದೃಷ್ಟಿಕೋನದಿಂದ ಚರ್ಚಿಸುವ ಪ್ರಯತ್ನಗಳು ಈಗಾಲೇ ಸಾಕಷ್ಟು ನಡೆದಿವೆ. ಇವು ಕೃತಿ ರೂಪದಲ್ಲೂ ಹೊರಬಂದಿವೆ. ಮೂರ್ನಾಲ್ಕು ವರ್ಷಗಳ ಹಿಂದೆ ಪ್ರಜಾವಾಣಿ ಪತ್ರಿಕೆಯಲ್ಲಿ ವಚನಗಳನ್ನು ಕುರಿತು ಇಂಥ ದೃಷ್ಟಿಕೋನದ ತೀವ್ರವಾದ ಪರ-ವಿರೋಧ ಚರ್ಚೆ ನಡೆದಿತ್ತು. ಇವೆರಡೂ ದೃಷ್ಟಿಕೋನಗಳ ಕೃತಿಗಳು ಪ್ರಕಟವಾಗಿವೆ. ಪ್ರಸ್ತುತ ಉಪಾಧ್ಯ ಅವರ ಕೃತಿ ವಚನಗಳನ್ನೇ ಕುರಿತು ಚರ್ಚಿಸಿದ್ದರೂ ಇಂಥ ಕೃತಿಗಳನ್ನು ಗಮನಿಸಿಲ್ಲ, ಎಂಬುದು ಅಚ್ಚರಿಯ ಸಂಗತಿ ಜೊತೆಗೆ ಇವರು ೨೦ನೆಯ ಶತಮಾನದ ಆರಂಭದ ದೃಷ್ಟಿಕೋನವನ್ನೇ ಪುನರುತ್ಪಾದನೆ ಮಾಡಿದೆ. ವಚನಗಳನ್ನು ಕುರಿತ ಯಾವ ಹೊಸ ಪ್ರಶ್ನೆಯನ್ನೂ ಎತ್ತಿಲ್ಲ. ಹೊಸ ನೋಟವನ್ನೂ ಕೊಡುವುದಿಲ್ಲ. ಜೊತೆಗೆ ಅನುಭವ ಹಾಗೂ ಅನುಭಾವ ಸಾಹಿತ್ಯ ಚರ್ಚೆಯಲ್ಲಿ ಹೊಸಗನ್ನಡದಲ್ಲಿ ಹೊರಬಂದಿರುವ ಯಾವುದೇ ಆಧುನಿಕ ವಚನಗಳ ಕೃತಿಯನ್ನೂ ಗಮನಿಸಿಲ್ಲ. ಆಧುನಿಕ ಕನ್ನಡದಲ್ಲಿ ಚನ್ನಣ್ಣ ವಾಲೀಕಾರ, ಬಸವರಾಜ ಸಬರದ, ಕಮಲಾ ಹಂಪನಾ, ಪ್ರೇಮಾ ಭಟ್, ಮಾತೆ ಮಹಾದೇವಿ ಮುಂತಾದವರು ಆಧುನಿಕ ವಚನಗಳನ್ನು ರಚಿಸಿದ್ದಾರೆ. ಇತ್ತೀಚಿಗೆ ಎಂ. ಜೀವನ ಎಂಬುವರು ಕೂಡ ಆಧುನಿಕ ವಚನಗಳನ್ನು ರಚಿಸುತ್ತಿದ್ದಾರೆ. ಇವುಗಳಲ್ಲಿ ಕೆಲವು ವಚನಗಳಲ್ಲಿ ಅನುಭವ-ಅನುಭಾವ ಎರಡೂ ಇಲ್ಲದಿರಬಹುದು. ಆದರೆ ಅನುಭಾವ ಸಾಹಿತ್ಯಕ್ಕೆ ಸೇರಬಹುದಾದ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗ ಕೃತಿಗಳು ಅಪರೂಪವಾಗಿವೆ. ಇವುಗಳ ಬಗ್ಗೆ ಕೂಡ ತಮ್ಮ ಈ ಕೃತಿಯಲ್ಲಿ ಉಪಾಧ್ಯ ಅವರು ಚರ್ಚಿಸದೇ ಇರುವುದು ಅಚ್ಚರಿದಾಯಕ ಸಂಗತಿ ಈ ದೃಷಿಯಲ್ಲಿ ಅನುಭಾವ ಸಾಹಿತ್ಯ ವಿಹಾರ ಕೃತಿ ಒಂದೇ ವಿಷಯಕ್ಕೆ ಸಂಬಂಧಿಸಿದ ಒಂದೇ ರೀತಿಯ ಚಿಂತನೆಯನ್ನು ಮತ್ತೊಮ್ಮೆ ಓದುಗರ ಮುಂದೆ ಇಡುವ ಪ್ರಯತ್ನಮಾಡಿದೆ. 

No comments:

Post a Comment