ಬ್ರಿಟಿಷ್ ಕಾಲದಲ್ಲಿ ಆಧುನಿಕ ರಾಜಕೀಯ ಚಿಂತನೆಗಳ ಕಾರಣಕ್ಕೆ ಕಗ್ಗಂಟಿನ ಸ್ವರೂಪ ಪಡೆದ ಇದು ಕಾಲ ಸರಿದಂತೆ ಮತ್ತಷ್ಟು ಕಗ್ಗಂಟಾಗುತ್ತಿದೆ. ಇಂದಿನ ಸ್ಥಿತಿ ಇದನ್ನು ಢಾಳಾಗಿ ತೋರಿಸುತ್ತದೆ. ಕಾವೇರಿ ವಿವಾದ ಕೇಂದ್ರ ಸರ್ಕಾರ, ಸರ್ವೋಚ್ಚ ನ್ಯಾಯಾಲಯ ಇತ್ಯಾದಿ ಎಲ್ಲ ಕಡೆ ಅಲೆದಾಡಿ 1980ರ ವೇಳೆಗೆ ಒಂದು ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆಯಾದರೆ ಇದು ಬಗೆ ಹರಿಯುತ್ತದೆ ಎಂಬ ಯೋಚನೆಯಿಂದ ಅದನ್ನೂ ಸ್ಥಾಪಿಸಿದರು, ಆದರೆ ಆಗಿದ್ದೇನು? ಅದಕ್ಕೊಂದು ಅಂತಿಮ ತೀರ್ಪುಕೊಡಲು ಆಗುತ್ತಿಲ್ಲ. ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ತೀರ್ಪುಕೊಟ್ಟು ಯಾರಿಗೂ ಬೇಸರ ಆಗದಂತೆ ಪರಿಸ್ಥಿತಿ ಸರಿದೂಗಿಸುವ ಯತ್ನ ಮಾಡುತ್ತಿದೆ. ಹೀಗಾಗಿ ಕರ್ನಾಟಕದ ಪರ ತೀರ್ಪು ಕೊಟ್ಟರೆ ತಮಿಳುನಾಡಲ್ಲಿ ಗಲಾಟೆ, ಅವರ ಪರ ತೀರ್ಪು ಕೊಟ್ಟರೆ ಇಲ್ಲಿ ಗಲಾಟೆ. ಒಟ್ಟಿನಲ್ಲಿ ಆಧುನಿಕ ರಾಜಕೀಯ ವ್ಯವಸ್ಥೆ ಹೇಳುವ ಸಮತೋಲನ ಮಾಡುವ ಕ್ರಮದಿಂದ ವಿವಾದ ಇದಮಿತ್ಥಂ ಎಂಬ ಕಡ್ಡಿ ತುಂಡಾಗಿಸುವ ತೀರ್ಪು ಬರುವ ಸಾಧ್ಯತೆಂiÀಯೇ ಇಲ್ಲವಾಗಿದೆ. ಇಂದಿನ ನಮ್ಮ ಯೋಚನೆಯ ದಾಟಿಗೆ ಇದು ಸರಿಯಾಗಿದೆ. ನೀರು ಪ್ರಾಕೃತಿಕ ಸಂಪತ್ತು, ಅದು ಎಲ್ಲ ಜೀವಿಗಳಿಗೆ ಸೇರಿದ್ದು. ನಮ್ಮಂತೆ ತಮಿಳು ನಾಡಲ್ಲಿ ಇರುವವರೂ ಮನುಷ್ಯರೇ, ಜೀವಿಗಳೇ. ಹಾಗಾಗಿ ಕಾವೇರಿ ಅವರಿಗೂ ಸೇರಿದೆ ಅನ್ನುವುದು ರಾಜಕೀಯವಾಗಿ ಸೂಕ್ತ ಹೇಳಿಕೆ ಹಾಗೂ ಆಧುನಿಕ ಸಮಾನತೆಯ ಹಕ್ಕು ಪ್ರತಿಪಾದಿಸುವ ನಮ್ಮೆಲ್ಲರ ವಾದ. ಅದೇನೋ ಸರಿ. ಆದರೆ ವಿವಾದಕ್ಕೆ ಅಂತ್ಯ ಹೇಗೆ? ಹಳೆಯ ಪಂಚಾಯ್ತಿ ನ್ಯಾಯಕ್ಕೆ ಹೋಗಬೇಕು. ನೋಡ್ರಪ್ಪಾ ನಿಮಗೆ ಒಪ್ಪಿಗೆಯೋ ಇಲ್ಲವೋ ಕಾವೇರಿ ಹುಟ್ಟಿದ ಜಾಗ ಕರ್ನಾಟಕ, ಅದರ ಬಳಕೆಯ ಮೊದಲ ಎಲ್ಲ ಹಕ್ಕು ಅವರದು. ಇನ್ನೂ ಮೊದಲ ಹಕ್ಕು ನೆಲದ್ದು. ಭೂಮಿಯೊಳಗಿಂದ ಕಾವೇರಿ ಉಕ್ಕದಿದ್ದರೆ, ಮಳೆ ಹುಯ್ಯದಿದ್ದರೆ ಅವರೂ ಏನೂ ಮಾಡಲಾಗದು. ಹಾಗಂತ ನೀರು ಹೆಚ್ಚಾಗಿ ಬಂದರೆ ಅದನ್ನು ಕಟ್ಟಿಕೊಂಡು ಕೂರಲೂ ಆಗದು. ಅಲ್ಲಿಂದ ನೀರು ಎಷ್ಟು ಯಾವಾಗ ಬರುತ್ತದೋ ಆಗ ಅದನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ಅಥವಾ ಬಿಡುವ ಹಕ್ಕು ನಿಮ್ಮದು ಎಂದು ಇಂದಿನ ಯಾವ ನ್ಯಾಯ ವ್ಯವಸೃಯೂ ಹೇಳುವ ಸ್ಥಿತಿಯಲ್ಲಿ ಇಲ್ಲ, ಏಕೆಂದರೆ ಇಂದಿನ ನಮ್ಮ ವ್ಯವಸ್ಥೆ ಹೀಗಿದೆ.
ಇಂದಿನ ನ್ಯಾಯ ವ್ಯವಸ್ಥೆ ಪ್ರಕಾರ ತಮಿಳುನಾಡಿಗೆ ನೀವು ಕುರುವೈ ಬೆಳೆಯಲು ಕೇವಲ ಸಾವಿರ ಹೆಕ್ಟೇರ್ ಗೆ ಅನುಮತಿ ಇದೆ ಅನ್ನಲಾಗಿದೆ. ಆದರೆ ರೈತನಿಗೆ ಇದನ್ನು ತಿಳಿಸಲಾಗದು. ಅಲ್ಲಿ ಈಗ ನಾಲ್ಕು ಸಾವಿರಕ್ಕೂ ಹೆಚ್ಚು ಹೆಕ್ಟೇರ್ಗಳಲ್ಲಿ ಕುರುವೈ ಬೆಳೆಯುತ್ತಿದ್ದಾರೆ, ನೀರು ಹೆಚ್ಚಾಗಿ ಬೇಕಾಗಿದೆ. ಈ ದೃಷ್ಟಿಯಿಂದ ಇಂದಿನ ನ್ಯಾಯ ವ್ಯವಸ್ಥೆ ಪ್ರಕಾರ ತಮಿಳುನಾಡ ರೈತರು ತಪ್ಪು ಮಾಡಿದ್ದಾರೆ, ಹೀಗಾಗಿ ಅವರ ಬೇಡಿಕೆಯಂತೆ ನೀರು ಕೊಡಲಾಗದು, ಪ್ರಾಧಿಕಾರ ಬಹು ಹಿಂದೆಯೇ ಕರ್ನಾಟಕಕ್ಕೆ ಹತ್ತು ಟಿಎಂಸಿ ನೀರನ್ನು ಕುಡಿಯಲು ಕೃಷಿಗೆ ಮೂವತ್ತು ಟಿಎಂಸಿ ನೀರು ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಿದೆ, ಇದರ ಪ್ರಕಾರ ನಮ್ಮಲ್ಲಿ ಸದ್ಯ ಲಭ್ಯ ಇರುವ ನೀರು ಇಷ್ಟೇ ಎಂದು ಲೆಕ್ಕ ಕಾಣಿಸಿದರೆ ಇಂದಿನ ನ್ಯಾಯ ವ್ಯವಸ್ಥೆಯಲ್ಲಿ ಕರ್ನಾಟಕವೇ ಗೆಲ್ಲುತ್ತದೆ. ಆದರೆ ಸರ್ಕಾರ ಹೀಗೆ ಮಾಡದೇ ಎಡವಿದೆ ಅನ್ನುವುದು ಇನ್ನೊಂದು ವಾದ. ಎರಡೂ ಸರಿ, ಆದರೆ ಗಲಾಟೆ ಏಕೆ ನಿಲ್ಲುತ್ತಿಲ್ಲ? ಕಾರಣ ಇದು ಪಡೆದುಕೊಂಡಿರುವ ಇಂದಿನ ರಾಜಕೀಯದ ಭಿನ್ನ ಆಯಾಮಗಳು.ನಮಗೆ ಇಂದು ಯಾವುದೇ ಇಂಥ ಸಮಸ್ಯಗೆ ಮೊದಲು ಕಾಣುವ ಮಾರ್ಗ ಪ್ರತಿಭಟನೆ. ಮುಷ್ಕರ. ಆದರೆ ಇವುಗಳಿಂದ ಜನರ ಗಮನ ಸೆಳೆಯಬಹುದು, ಒಂದಷ್ಟು ನಷ್ಟಮಾಡಿಕೊಳಬಹುದೇ ವಿನಾ ಯಾವುದೇ ಸಮಸ್ಯೆ ಬಗೆಹರಿದ ನಿದರ್ಶನವಿಲ್ಲ, ಯಾವುದಾದರೂ ಒಂದು ಪಕ್ಷ ಬಗ್ಗಿದರೆ ಮಾತ್ರ ಪರಿಹಾರ ಸಾಧ್ಯ, ಹಾಗೆ ಆಗುವ ಲಕ್ಷಣವಿಲ್ಲ, ನಮ್ಮಂತೆ ತಮಿಳರೂ ಮುಂದೆ ಹೀಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ಮಾಡಬಹುದು. ಇವಕ್ಕೆ ಅಂತ್ಯವಿಲ್ಲ. ಆದರೆ ಸಮಸ್ಯೆ ಹಾಗೆಯೇ ಉಳಿಯುತ್ತದೆ.
ಆಧುನಿಕ ಸಮಾಜದಲ್ಲಿ ಪ್ರತಿಭಟನೆಗಳು ಭಾರತಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ನೆರವಾದ ಮಾತ್ರಕ್ಕೆ ನಮ್ಮ ಇಂದಿನ ಎಲ್ಲ ಸಮಸ್ಯೆಗೂ ಅದು ಪರಿಹಾರ ಕೊಡಲಾರದು. ಅಂದಿನ ಪ್ರತಿಭಟನೆ ಅನ್ಯರ ವಿರುದ್ಧ ನಮ್ಮವರ ಹೋರಾಟವಾಗಿತ್ತು. ಆದರೆ ಇಂದು ನಮ್ಮ ವಿರುದ್ಧ ನಾವೇ ಪ್ರತಿಭಟಿಸಬೇಕಿದೆ. ಹಾಗಾಗಿ ಇದರಿಂದ ಪರಿಹಾರ ಅಸಾಧ್ಯ. ಆದ್ದರಿಂದ ಇಂದಿನ ವ್ಯವಸ್ಥೆಯಲ್ಲಿ ಇಂಥ ಸಮಸ್ಯೆಗಳಿಗೆ ನಮ್ಮ ಪರಂಪರೆ ಸೂಚಿಸುವ ಮಾರ್ಗವನ್ನು ತುಳಿಯಬೃಕಿದೆ, ಇಲ್ಲವಾದಲ್ಲಿ ಹಾವೂ ಸಾಯುವುದಿಲ್ಲ, ಕೋಲೂ ಮುರಿಯುವುದಿಲ್ಲ ಎಂಬ ವಿಚಿತ್ರ ಸ್ಥಿತಿ ಮುಂದುವರೆಯುತ್ತಲೇ ಇರುತ್ತದೆ. ನಮ್ಮ ಆಧುನಿಕ ನ್ಯಾಯ ವ್ಯವಸ್ಥೆಯಲ್ಲಿ ಹಗ್ಗಜಗ್ಗಾಟಕ್ಕೆ ಕೊನೆ ಇರದ ಅವಕಾಶಗಳಿವೆ, ಕರ್ನಾಟಕದ ಕಾವೇರಿ ನೀರಿನ ಹಂಚಿಕೆ ಕಥೆ ಇದಕ್ಕೆ ಉತ್ತಮ ನಿದರ್ಶನ. ನ್ಯಾಯಾಲಯದಲ್ಲಿ ಕರ್ನಾಟಕ ಸೂಕ್ತ ದಾಖಲೆ ಕೊಟ್ಟಿಲ್ಲ ಎಂಬ ಆರೋಪವಿದೆ, ಕರ್ನಾಟಕ ಕಾವೇರಿ ಕೊಳ್ಳದ ನಾಲ್ಕಾರು ಜಿಲ್ಲೆಗಳಲ್ಲಿ ಜನ, ದನ ಹಾಗೂ ಹೊಲಗದೆಗಳಿಗರ ಯಾವ ಕಾರಣಕ್ಕೆ ಎಷ್ಟು ನೀರು ಬೇಕಾಗುತ್ತದೆ, ಎಷ್ಟು ಅಣೆಕಟ್ಟುಗಳಿವೆ, ಅವುಗಳ ಸಾಮಥ್ರ್ಯ ಎಷ್ಟು ಇತ್ಯಾದಿ ಲೆಕ್ಕಾಚಾರವನ್ನು ಸಮರ್ಪಕವಾಗಿ ಮಂಡಿಸಿಲ್ಲ ಅನ್ನಲಾಗುತ್ತದೆ, ಗೊತ್ತಿಲ್ಲ.
ಆದರೆ ಇದೇಬಗೆಯ ವಾದವನ್ನು ತಮಿಳುನಾಡುಕೂಡ ಮಂಡಿಸುತ್ತದೆ, ತಮಾಷೆ ಅಂದ್ರೆ ನಮ್ಮ ಆಧುನಿಕ ಕಾನೂನು. ನಿಯಮವನ್ನು ಯಾರು ಎಷ್ಟು, ಹೇಗೆ ಸಮರ್ಥವಾಗಿ ಅನ್ವಯಿಸುತ್ತೀರೋ ಅದು ಅತ್ತ ಒಲಿಯುತ್ತದೆ. ಇಲ್ಲಿ ಬೇಕಿರುವುದು ವಿಶ್ಲೇಷಣೆಯ ಶಕ್ತಿ, ಕಾನೂನು ವಿಧಿಯ ವ್ಯಾಖ್ಯಾನ ಶಕ್ತಿ. ಒಂದೇ ನಿಯಮ ಹಿಡಿದು ಎರಡೂ ರಾಜ್ಯಗಳು ವಾದಿಸುತ್ತವೆ, ಅಲ್ಲಿ ಯಾವುದಾದರೂ ಒಂದು ವಾದ ಗೆಲ್ಲಬಹುದು. ಆದರೆ ವಾಸ್ತವಿಕತೆ? ಇದು ಇಂದಿನ ಕಾವೇರಿ ನೀರು ಮತ್ತು ಕರ್ನಾಟಕದ ಕಥೆ. ಇಲ್ಲಿ ಆಧುನಿಕ ವ್ಯವಸ್ಥೆಯನ್ನಲ್ಲದೇ ದೂರಬೇಕಾದುದು ಯಾರನ್ನು? ಹಾಗಂತ ಪರಸ್ಪರ ತೋಳ್ಬಲ ತೋರಿಸಲಾಗದಲ್ಲವೇ? ಇಂಥ ಕಗ್ಗಂಟಿನ ಸ್ಥಿತಿಯಲ್ಲಿ ಕಾವೇರಿ ಅಥವಾ ಮಳೆಯೇ ದಾರಿ ತೋರಬೇಕಿದೆ.

ಕಾವು ಇರುವ ಕಡೆಗೆ ಕಾನೂನು ಕರಗುವ ಕ್ರಮ😡🤬
ReplyDelete