ಶಾಂತಿ ಎಂಬುದು ಮನುಕುಲದ ಹುಟ್ಟಿನೊಂದಿಗೆ ಜಾಣಿಸುತ್ತದೆ. ಇದು ವೈಯಕ್ತಿಕ ಹಾಗೂ ಸಾಮಾಜಿಕ ಮಟ್ಟದಲ್ಲಿ ಗುರುತಿಸಬಹುದು. ವ್ಯಕ್ತಿಯ ಮಾನಸಿಕ ನೆಮ್ಮದಿ ಇರುವ ಸ್ಥಿತಿಯೇ ಅವನ ಮಟ್ಟಿಗಿನ ಶಾಂತಿ, ಸಾಮಾಜಿಕ ಘರ್ಷಣೆ, ಯುದ್ಧ ಮೊದಲಾದವು ಸಾಮಾಜಿಕ ನೆಮ್ಮದಿ ಹಾಗೂ ಶಾಂತಿಯನ್ನು ಕೆಡಿಸುತ್ತದೆ, ಇದಕ್ಕಿರುವ ಏಕೈಕ ಮಾರ್ಗವೆಂದರೆ ಪರಸ್ಪರ ಘರ್ಷಣೆಯ ಮಾರ್ಗವನ್ನು ತ್ಯಜಿಸುವುದು, ವ್ಯಕ್ತಿ ಅಥವಾ ಸಾಮಾಜಿಕ ಮಟ್ಟದಲ್ಲಿ ಸ್ವಾರ್ಥವೇ ಅಶಾಂತಿಯ ಮೊದಲ ಕಾರಣ. ಬುದ್ಧನ ಪ್ರಕಾರ ಆಸೆಯೇ ದುಃಖ ಅಥವಾ ಅಶಾಂತಿಗೆ ಕಾರಣವಾಗುತ್ತದೆ. ನಿತ್ಯದ ಜೀವನವನ್ನು ಘರ್ಷಣೆ ಇಲ್ಲದೆ ಸುಖ ಸಂತೋಷದಿಂದ ಕಳೆಯುವುದೇ ಶಾಂತಿಯ ಜೀವನ.
ಭಾರತ ಶಾಂತಿಪ್ರಿಯ ದೇಶ ಸರಿ, ಆದರೆ ಅದು ದೇಶವಾಗಿ ಉಳಿಯಲು ಅದಕ್ಕೆ ಸೇನೆಯೂ ಬೇಕು, ಸ್ವಂತ ಧರ್ಮ, ಅಸ್ತಿತ್ವಗಳಿಗೆ ಧಕ್ಕೆ ಬಂದಾಗ ಹೋರಾಟ ಅನುವಾರ್ಯ, ಈಗ ಆಗಿರುವುದು ಅದೇ, ಹೌದು, ಭಾರತವನ್ನು ಕೆಣಕಿದರೆ ತನಗೆ ಉಳಿಗಾಲವಿಲ್ಲ ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ, ಆದರೂ ಅನ್ಯರ ಕುಮ್ಮಕ್ಕಿನಿಂದ ಅದು ಕಾಲು ಕೆರೆದಿದೆ, ಆದರೆ ಭಾರತ ಸಹನೆಯಿಂದ ತಾಳ್ಮೆಯಿಂದ ಯುದ್ಧದ ತಂತ್ರಗಾರಿಕೆಯನ್ನು ಹಂತಹಂತವಾಗಿ ಬಿಚ್ಚಿದೆ, ಮೊದಲು ಶತ್ರು ದೇಶದ ಜಲಮೂಲ ನಿಲ್ಲಿಸಿ ಸೂಚನೆ ಕೊಟ್ಟಿದೆ, ಇಲ್ಲ, ರಾಜತಾಂತ್ರಿಕ ಕಠಿಣ ನಿರ್ಧಾರಗಳ ಮೂಲಕ ಸನ್ನೆ ಮಾಡಿ ಸಾಮ, ಭೇದ, ದಮಗಳನ್ನು ತೋರಿಸಿದೆ, ಅಂತಿಮವಾಗಿ ಯಾವುದಕ್ಕೂ ಕಿವಿಗಿಡದೇ ಮೊಂಡಾಟವಾಡುತ್ತಿದ್ದ ಕಾರಣ ದಂಡಕ್ಕೆ ಇಳಿದಿದೆ. ಒಂದು ದೇಶವಾಗಿ ಇದು ಮಾಡಲೇ ಬೇಕಾದ ಕೆಲಸ. ಆದರೆ ಇಲ್ಲಿ ಪಾಕಿಸ್ತಾನದ ಹೇಯ ಕೃತ್ಯ ಮಾತ್ರ ನಮಗೆ ಕಾಣಿಸುತ್ತಿದೆ, ಉಳಿದಂತೆ ಹಿತಶತ್ರು ರಾಷ್ಟ್ರಗಳ ಕುಟಿಲತೆ ಕಾಣುತ್ತಿಲ್ಲ, ಪಾಕಿಸ್ತಾನದ ಹಿಂದೆ ಅಮೆರಿಕದ ಯುದ್ಧ ಸಾಮಗ್ರಿ ಮಾರುವ ಹುನ್ನಾರವೂ ಚೀನಾ ಏಷ್ಯದ ಮೇಲೆ ತನ್ನ ಹಿಡಿತ ಸಾಧಿಸಿಕೊಳ್ಳುವ ಕುತಂತ್ರದ ಉದ್ದೇಶವೂ ಇದೆ, ಸುಮಾಎಉ ಒಂದೆರಡು ದಶಕಗಳಿಗೊಮ್ಮೆ ಯಾವುದಾದರೂ ನೆಪದಲ್ಲಿ ಎಲ್ಲಾದರೂ ಯುದ್ಧ ಮಾಡಿ ತನ್ನ ಶಸ್ತçಗಳನ್ನು ಬರಿದು ಮಾಡಿಕೊಳ್ಳುವುದು ಅಮೆರಿಕದ ಚಾಳಿ. ವಿಯೆಟ್ನಾಮ್, ಮಧ್ಯಪ್ರಾಚ್ಯ ಯುದ್ಧ ಕಾಲದಿಂದಲೂ ನೋಡಿ, ಆದರೆ ಈಚಿನ ದಶಕಗಳಲ್ಲಿ ಅಮೆರಿಕಕ್ಕೆ ಅಂಥ ಅವಕಾಶ ಎಲ್ಲಿಯೂ ಸಿಕ್ಕಿಲ್ಲ, ತನ್ನ ಯುದ್ಧ ಸಾಮಗ್ರಿ ತನ್ನಲ್ಲೇ ಕೊಳೆಯುವುದು ಅದಕ್ಕೆ ಇಷ್ಟವಿಲ್ಲ. ಪಾಕಿಸ್ತಾನ ಅದಕ್ಕೆ ಸೂಕ್ತ ದೇಶ, ಒಂದರಡೆ ಸಾಲ ಕೊಟ್ಟು ಅದೇ ಹಣವನ್ನು ಯುದ್ಧ ಸಾಮಗ್ರಿ ದರದ ರೂಪದಲ್ಲಿ ಮರಳಿ ಪಡೆಯುವುದು ಅಮೆರಿಕದ ಚಾಳಿ. ಪಾಕಿಸ್ತಾನ ಇಂಥ ಬಲೆಯೊಳಗೆ ಬಿದ್ದು ಈಗಾಗಲೇ ೨.೫ ದಶಲಕ್ಷ ಡಾಲರ್ ಅಂತಾರಾಷ್ಟ್ರೀಯ ಸಾಲದ ಸುಳಿಯಲ್ಲಿದೆ, ಆ ಹಣ ಅಲ್ಲಿನ ಜನರ ಅಭಿವೃದ್ಧಿಗೆ ಬಳಕೆ ಆಗುವ ಬದಲು ಉಗರರಿಗೆ, ಶಸ್ತ್ರಾಸ್ತ್ರ ಖರೀದಿಗೆ ವ್ಯಯವಾಗಿದೆ, ಭಾರತದ ಮೇಲೆ ಪಾಕಿಸ್ತಾನ ಯುದ್ಧ ಮಾಡಿದರೆ ಅಮೆರಿಕದ ಮಾರುಕಟ್ಟೆಯ ಬಾಗಿಲು ದೊಡ್ಡದಾಗಿ ತೆರೆದುಕೊಳ್ಳುತ್ತದೆ, ಸದ್ಯ ಹೊಟ್ಟೆಯುರಿದುಕೊಳ್ಳುತ್ತಿರುವ ಚೀನಾಕ್ಕೂ ಸ್ವಲ್ಪ ಮಾರುಕಟ್ಟೆ ದಕ್ಕುತ್ತದೆ, ಭಾರತದ ಆರ್ಥಿಕ ಅಭಿವೃದ್ಧಿಗೆ ತಡೆಯಾಗುತ್ತದೆ, ಯಾವುದೇ ದೇಶದಲ್ಲಿ ಯುದ್ಧ ನಡೆಯುತ್ತಿದ್ದರೆ ಯಾರೂಅಲ್ಲಿ ಬಂಡವಾಳ ಹೂಡಲು ಮುಂದಾಗುವುದಿಲ್ಲ, ಪಾಕ್ ವಿರುದ್ಧ ಗೆಲುವು ಎರಡನೆಯ ವಿಷಯ, ಆದರೆ ಇಲ್ಲಿ ಯುದ್ಧ ವಾತಾವರಣ ಇದೆ ಎಂಬುದು ಜಾಹೀರಾದರೆ ಕೋಟ್ಯಂತರ ಡಾಲರ್ ಹಣ ಹೂಡಿಕೆ ತಪ್ಪಿ ಭಾರತದ ಅಭಿವೃದ್ಧಿಗೆ ಹಿನ್ನೆಡೆ ಆಗುತ್ತದೆ, ಇದರಿಂದ ಸಂತೋಷ ಪಡುವ ದೇಶಗಳಿಗೆ ಲೆಕ್ಕವಿಲ್ಲ, ಇದು ನಿಜವಾಗಿ ಈ ಯುದ್ಧದ ಹಿಂದಿನ ನೈಜ ಮುಖ. ತಮಾಷೆಯ ಸಂಗತಿ ಎಂದರೆ ಮಾನವ ಕುಲ ಹುಟ್ಟಿದಾಗಿನಿಂದಲೂ ಶಂತಿ ಸ್ಥಾಪನೆಗಾಗಿ ಹಲವಾರು ಯುದ್ಧಗಳಾಗಿವೆ. ಈಗ ಆಗುತ್ತಿರುವುದೂ ಅದೇ. ಯುದ್ಧದಿಂದ ಹಿಂಸೆ ಆಗುತ್ತದೆ ಆದರೆ ಅಹಿಂಸೆಯ ಸ್ಥಾಪನೆಗೆ ಈ ಹಿಂಸೆ ಅಗತ್ಯ. ಇದು ನಾಗರಿಕ ಸಮಾಜದ ವ್ಯಂಗ್ಯ. ಅನ್ಯ ಮಾರ್ಗವೇ ಇದಕ್ಕಿಲ್ಲ.ಒಂದು ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆನೀಡಲಾಗಿದ್ದ ೩೭೦ನೆಯ ವಿಧಿಯನ್ನು ಕಿತ್ತು ಹಾಕಿದ್ದು ಇದಕ್ಕೆ ಕಾರಣವೆನ್ನಲಾಗುತ್ತದೆ, ಒಂದು ರೀತಿಯಲ್ಲಿ ಹೌದು. ೩೭೦ ವಿಧಿ ೧೯೪೭ರಲ್ಲಿ ಹುಟ್ಟಿಕೊಂಡ ಸಂದರ್ಭ ಹಾಗಿತ್ತು, ಆಗ ಕಾಶ್ಮೀರದಲ್ಲಿ ಹರಿಸಿಂಗನ ಆಳ್ವಿಕೆ ಇತ್ತು. ಮುಸ್ಲಿಮರೇ ಹೆಚ್ಚಾಗಿದ್ದ ಆ ಪ್ರದೇಶ ಹರಿಸಿಂಗ್ ಆಳುತ್ತಿದ್ದ, ಇದಕ್ಕೆ ಜಿನ್ನಾ ಸೇರಿದಂತೆ ರಶೀದ್ ಅನ್ನುವವರ ತೀವ್ರ ವಿರೋಧವಿತ್ತು, ಜಮ್ಮು ಮತ್ತು ಕಾಶ್ಮೀರ ಎಂದಿಗೂ ಭಾರತದ ಭಾಗವಾಗಬಾರದೆಂಬುದು ಜಿನ್ನಾ ನಿಲುವಾಗಿತ್ತು, ಆದರೆ ಬಲಾತ್ಕಾರದಿಂದ ಅದನ್ನು ಕಿತ್ತುಕೊಳ್ಳಲು ಪಾಕಿಸ್ತಾನ ಸಮರ ಸಾರಿತು, ಆಗ ಹರಿಸಿಂಗ್ ಭಾರತದ ನೆರವು ಕೋರಿದ, ಆಗ ಭಾರತದ ಭಾಗವಾಗಲು ಒಪ್ಪಿದರೂ ತನ್ನ ಹಿಡಿತ ಉಳಿಸಿಕೊಳ್ಳಲು ಭಾರತದ ಉಳಿದ ರಾಜ್ಯಗಳಿಗೆ ಸಂಸತ್ತಿನ ತೀರ್ಮಾನ ಅನ್ವಯವಾದರೂ ಕಾಶ್ಮೀರದ ಹಿತದ ದೃಷ್ಟಿಯಿಂದ ತಾನು ಒಪ್ಪುವವರೆಗೆ ಅದು ಅಲ್ಲಿ ಅನ್ವಯವಾಗದಂತೆ ಕರಾರು ಮಾಡಿಕೊಂಡ, ೧೯೬೩ರಲ್ಲಿ ನೆಹರೂ ಜಮ್ಮು ಮತ್ತು ಕಾಶ್ಮೀರದ ಈ ಹಕ್ಕಿಗೆ ಸಂಬಂಧಿಸಿ ಮಸೂದೆ ಪ್ರಸ್ತಾಪಿಸಿ ೩೭೦ನೆಯ ವಿಧಿ ಜಾರಿ ಆಗುವಂತೆ ಮಾಡಿದರು,ಇದರ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಭಾರತದೊಳಗೆ ಇದ್ದರೂ ಪ್ರತ್ಯೇಕ ಧ್ವಜ, ಸಂವಿಧಾನ ಇತ್ಯಾದಿಗಳನ್ನು ಪಡೆದುಕೊಂಡಿತ್ತು. ಇದನ್ನು ೨೦೧೯ರಲ್ಲಿ ಮೋದಿ ಸರ್ಕಾರ ಕಿತ್ತುಹಾಕಿ ಅದನ್ನು ಭಾರತದ ಅವಿಭಾಹ್ಯ ಅಂಗವಾಗಿಸಿತು, ಅದುವರೆಗೆ ಪಾಕಿಸ್ತಾನದ ಉಗ್ರ ಚಟುವಟಿಕೆಗಳಿಗೆ ಸುರಕ್ಷಿತ ಜಾಗವಾಗಿದ್ದ ಅದು ಭಾರತದ ಬಿಗ್ರಹಣೆಗೆ ಒಳಗಾಗಿ ಉಗರ ಚಟುವಟಿಕೆ ನಡೆಯದಂತಾಗಿ ಪಾಕಿಸ್ತಾನ ಕೈ ಹಿಸುಕಿಕೊಳ್ಳುವಂತಾಯಿತು. ಜೊತೆಗೆ ೩೭೦ನೆಯ ವಿಧಿ ಜಾರಿ ಇರುವವರೆಗೆ ಹೇಳಿಕೊಳ್ಳುವ ಆರ್ಥಿಕ ಬೆಳವಣಿಗೆ ಕಾಣದ ಜಮ್ಮು ಕಾಶ್ಮೀರ ೩೭೦ ನೆಯ ವಿಧಿಯನ್ನು ತೆಗೆಯುತ್ತಿದ್ದಂತೆ ಶಿಕ್ಷಣ, ವ್ಯಾಪಾರ, ಪ್ರವಾಸೋದ್ಯಮಗಳಿಂದ ತೀವ್ರ ಬೆಳವಣಿಗೆ ಕಾಣಲು ಆರಂಭಿಸಿ ಪಾಕಿಸ್ತಾನದ ಉಗ್ರ ಚಟುವಟಿಕೆಗೆ ಯಾವ ಬೆಂಬಲವೂ ಸ್ಥಳೀಯರಿಂದ ದೊರೆಯದಂತಾಗಿ ಪಾಕಿಸ್ತಾನದ ಮಸಲತ್ತು ನಡೆಯದಂತಾಗಿತ್ತು. ಜಮ್ಮು ಕಾಶ್ಮೀರದ ಆರ್ಥಿಕತೆಗೆ ಹೊಡೆತ ಕೊಟ್ಟು ಮತ್ತೆ ಅದನ್ನು ತನ್ನ ವಶದಲ್ಲಿಟ್ಟುಕೊಳ್ಳುವುದು ಪಾಕಿಸ್ತಾನದ ಈ ದಾಳಿಯ ಹಿಂದಿನ ಮುಖ್ಯ ಉದ್ದೇಶ. ಆದರೆ ಇದಾಗಲು ಭಾರತ ಅವಕಾಶ ಕೊಡುವುದಿಲ್ಲ. ಈಗಿರುವ ಭಾರತದ ಸೇನಾ ಶಕ್ತಿಯ ಮುಂದೆ ಪಾಕಿಸ್ತಾನ ನೇರ ಯುದ್ಧದಲ್ಲಿ ಹೆಚ್ಚೆಂದರೆ ಏಳು ದಿನ ಉಳಿಯಬಲ್ಲದು ಎಂದು ಅಂದಾಜಿಸಲಾಗಿತ್ತು, ಆದರೆ ಅದು ಮೂರೇ ದಿನಗಳಲ್ಲಿ ಮಂಡಿಯೂರಿ ಕುಳಿತಿದೆ. ಕುತಂತ್ರವನ್ನು ಆರಂಭಿಸಿದೆ. ಒಂದೆಡೆ ಶಾಂತಿ ಅನ್ನುತ್ತ ಇನ್ನೊಂದೆಡೆ ಶಾಂತಿ ಭಂಗ ಮಾಡುವುದನ್ನು ಮಾಡುತ್ತಿದೆ, ಇದರಿಂದ ನಮ್ಮ ಆರ್ಥಿಕತೆ ಹಿನ್ನೆಡೆ ಕಾಣುತ್ತಿದೆ. ಪಾಕಿಸ್ತಾನ ಈ ವಿಷಯದಲ್ಲಿ ಸ್ವಲ್ಪ ಯಶಸ್ಸು ಕಾಣಬಹುದಷ್ಟೇ.
ಆದರೆ ಭಾರತ ತನ್ನಾರ್ಥಿಕ ಅಭಿವೃದ್ಧಿಗೆ ಹಾನಿಯಾಗದಂತೆ ಎಚ್ಚರಿಕೆಯ ನಡೆ ಹಾಕುತ್ತಿದೆ, ಒಂದೆಡೆ ಯುದ್ಧ ನಡೆಯುತ್ತಿದ್ದರೂ ದೇಶದೊಳಗಿನ ಆರ್ಥಿಕತೆ ವ್ಯತ್ಯಾಸವಾಗದಂತೆ ನಿಗಾ ವಹಿಸಲಾಗುತ್ತಿದೆ, ಈ ಯುದ್ಧದಿಂದ ಯಾವುದೇ ಅಗತ್ಯ ವಸ್ತಿಗಳ ಪೂರೈಕೆ ಅಥವಾ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ. ಯಾವುದೇ ವಿದೇಶ ಭಾರತಸ ಪ್ರತ್ಯುತ್ತರ ನೀತಿಯನ್ನು ಪ್ರಶ್ನಿಸಿಲ್ಲ ಎಂಬುದನ್ನು ಗಮನಿಸಬೇಕು. ಇದು ಭರತದ ನೈಜ ಗೆಲುವು. ಹಾಗೆ ನೋಡಿದರೆ ಭಾರತ ಈಗ ಪಾಕಿಸ್ತಾನದ ಮೇಲೆ ಪೂರ್ಣ ರೂಪದಲ್ಲಿ ಹೋರಾಟ ನಡೆಸಿಲ್ಲ, ಹೊರ ತೆಗೆದ ಒಂದೆರಡು ಅಸ್ತçಗಳಿಗೆ ಅದು ಹೈರಾಣಾಗಿದೆ, ಇನ್ನುಪಾಕಿಸ್ತಾನಕ್ಕೆ ತನ್ನೊಳಗಿನ ಬಲೂಚಿಗಳು, ಪಶ್ತೂನರು, ವಹಾಬಿಗಳು ಹಾಗೂ ಪಠಾಣರನ್ನು ಸುಮ್ಮನಿರಿಸುವ ಕೆಲಸ ಈಗ ದೊಡ್ಡದಾಗಿದೆ. ಈಗಾಗಲೇ ಇಂಥ ಯುದ್ಧವನ್ನು ಕಾಯುತ್ತದ್ದವರಂತೆ ಬಲೂಚಿ ಹೋರಾಟಗಾರರು ಬಲೂಚಿಸ್ತಾನವನ್ನು ಪ್ರತ್ಯೇಕ ದೇಶವೆಂದು ಘೋಷಿಸಿಕೊಂಡು ತಿರುಗಿಬಿದ್ದಿದ್ದಾರೆ, ಇನ್ನು ಪಶ್ತೂನರು ಮತ್ತು ವಹಾಬಿಗಳು ಎದ್ದರೆ ಪಾಕಿಸ್ತಾನ ತಾನಾಗಿಯೇ ನಾಮಾವಶೇಷವಾಗುತ್ತದೆ, ಆಗ ಯುದ್ಧದ ಅಗತ್ಯವೇ ಇರುವುದಿಲ್ಲ, ಪಾಕಿಸ್ತಾನ ಸ್ವತಃ ಅಂಥ ಸ್ಥಿತಿಯನ್ನು ತಂದುಕೊಂಡಿದೆ, ದುಷ್ಟತನ ಎಷ್ಟು ಕಾಲ ಇರಬಲ್ಲುದು?

No comments:
Post a Comment