Sunday, 15 June 2025

ಸೂಪರ್ ಪವರ್ ಆಗುವತ್ತ ಭಾರತ


ಇದೀಗ ಭಾರತ ಖುಷಿ ಪಡುವ ಇನ್ನೊಂದು ವಿಷಯ ಕಾಣಿಸಿದೆ, ಅದೆಂದರೆ ಅಮೆರಿಕದ ಡಾಲರ್ ಪ್ರಭಾವ ಜಾಗತಿಕವಾಗಿ ಕುಸಿಯುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಈಚೆಗೆ ಅಮೆರಿಕ ಅಧ್ಯಕ್ಷ ಅಮೆರಿಕದ ಮಾರುಕಟ್ಟೆ ಬಲಪಡಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಹಿಡಿತ ಗಟ್ಟಿ ಮಾಡಿಕೊಳ್ಳಲು ಭಾರತವೂ ಸೇರಿದಂತೆ ಅನೇಕಾನೇಕ ದೇಶಗಳ ಮೇಲೆ ಅವು ಅಮೆರಿಕಕ್ಕೆ ರಫ್ತು ಮಾಡುವ ಸಾಮಗ್ರಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದರ ಪರಿಣಾಮ ಆ ಎಲ್ಲ ದೇಶಗಳು ಅಸಮಾಧಾನಗೊಂಡಿದ್ದವು. ಆದರೆ ಮುಂದೇನು ಮಾಡುವುದೆಂದು ತಿಳಿಯದೇ ಕಂಗಾಲಾಗಿದ್ದವು. ಆದರೆ ಇದಕ್ಕೆ ಈಗ ಭಾರತ ಮಾರ್ಗ ತೋರಿಸಿದೆ, ಮಾತ್ರವಲ್ಲ, ಅಮೆರಿಕದ ಬೆನ್ನು ಮೂಳೆ ಮುರಿಯುವಂತೆ ಮಾಡಿದೆ. ಇದುವರೆಗೆ ಎರಡು ದೇಶಗಳು ಪರಸ್ಪರ ವ್ಯವಹಾರ ನಡೆಸಲು ಮಧ್ಯಂತರ ಹಣವಾಗಿ ಅಮೆರಿಕದ ಡಾಲರ್ ಅನ್ನು ಬಳಸುತ್ತಿದ್ದವು, ಇದರಿಂದಾಗಿ ಅಮೆರಿಕಕ್ಕೆ ಅನಾಯಾಸ ಗೌರವ ಧನದ ರೂಪದಲ್ಲಿ ಕುಳಿತಲ್ಲೇ ಹಣ ಸಂದಾಯವಾಗುತ್ತಿತ್ತು, ರೈತ ಮತ್ತು ಗ್ರಾಹಕರ ನಡುವೆ ದಲ್ಲಾಳಿ ಇದ್ದಂತೆ ಅಮೆರಿಕ ಡಾಲರ್ ಇತ್ತು. ಇದಕ್ಕಾಗಿ ಅಮೆರಿಕ ಸ್ವಿಫ್ಟ್ ಎಂಬ ಅಂತಾರಾಷ್ಟ್ರೀಯ ಹಣ ವಿನಿಮಯ ವ್ಯವಸ್ಥೆಯನ್ನು ಕಾಯಂ ಮಾಡಿಕೊಂಡಿತ್ತು, ಅಂತಾರಾಷ್ಟ್ರೀಯ ಹಣ ವಿನಿಮಯಕ್ಕೆ ಸ್ವಿಫ್ಟ್ ಅನಿವಾರ್ಯವಾಗುವಂತೆ ಮಾಡಿ ಸುಲಭವಾಗಿ ಸಂಪಾದನೆಯ ಜೊತೆಗೆ ಅಂತರಾಷ್ಟ್ರೀಯ ಹಿಡಿತವನ್ನು ಭದ್ರ ಮಾಡಿಕೊಂಡಿತ್ತು, ಎಲ್ಲಿಯವರೆಗೆ ಎಂದರೆ ಕಚ್ಚಾ ತೈಲ ಮಾರುಕಟ್ಟೆಯಿಂದ ಹಿಡಿದು ಯಾರಾದರೂ ವಿದೇಶ ಪ್ರಯಾಣ ಮಾಡುವಾಗ ಹಣ ವಿನಿಮಯ ಮಾಡಿಕೊಳ್ಳುವವರೆಗೆ ಎಲ್ಲ ಕಡೆಯೂ ಅಮೆರಿಕದ ಡಾಲರ್ ಅನಿವಾರ್ಯವಾಗಿತ್ತು,ಈಗ ಇದಕ್ಕೆ ಭಾರೀ ಹೊಡೆತ ಬಿದ್ದಿದೆ. ಟ್ರಂಪ್ ತೆರಿಗೆ ಹೆಚ್ಚಳ ಮಾಡುತ್ತಿದ್ದಂತೆ ಭಾರತ ಮಾರಿಷಸ್ ನಲ್ಲಿ ಸಭೆ ನಡೆಸಿ ನಿರ್ಣಯವೊಂದನ್ನು ಕೈಗೊಂಡಿತು. ಅದರಂತೆ ಭಾರತ ಮತ್ತು ಮಾರಿಷಸ್ ವ್ಯವಹಾರದಲ್ಲಿ ಡಾಲರ್ ಗೆ ಜಾಗವಿಲ್ಲ, ಬದಲಾಗಿ ಎರಡೂ ದೇಶಗಳ ಹಣ ಸ್ಥಾನ ಪಡೆಯುತ್ತವೆ, ಇದನ್ನು ಬೆಂಬಲಿಸಿ ಸುಮಾರು ೩೦ ದೇಶಗಳು ಭಾರತದೊಂದಿಗೆ ಸೇರಿ ಇದೇ ಮಾರ್ಗ ಹಿಡಿದಿವೆ, ರಷ್ಯಾ ಕೂಡ ಇದಕ್ಕೆ ಸೇರಿ ಒಂದು ಸಾಮಾನ್ಯ ಡಿಜಿಟಲ್ ಹಣವನ್ನು  ಜಾಲ್ಮಾಡಲು ಉದ್ದೇಶಿಸಿದೆ, ಇದರ ಪರಿಣಾಮ ಅಮೆರಿಕದ ಡಾಲರ್ ಕ್ರ ಮೇಣ ಮೌಲ್ಯ ಕಳೆದುಕೊಳ್ಳಲಾರಂಭಿಸಿದೆ.

ಭಾರತದ ಈ ಸಾಧನೆ ಹಂತ ಹಂತವಾಗಿ ಆಗಿದೆ, ಇದಕ್ಕಾಗಿ ದೇಶದ ಸಕಾಲಿಕ ನಿರ್ಧಾರಗಳು ಕಾರಣವಾಗಿವೆ, ಜೊತೆಗೆ ನಮ್ಮ ದೇಶದ ಆರ್ಥಿಕ ನೀತಿ ಕೂಡ ಕಾರಣ. ಕೊರೊನಾ ನಂತರ ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತ ಕಂಡುಬಂದು ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಅಮೆರಿಕವೂ ಸೇರಿದಂತೆ ಅನೇಕ ದೇಶಗಳ ಷೇರು ಬೆಲೆ ಒಂದೇ ಸಮನೆ ಕುಸಿಯುತ್ತಿದ್ದರೆ ಭಾರತದ ಮಾರುಕಟ್ಟೆ ಏರಿಯೇ ಇತ್ತು, ೨೦೨೦ರಲ್ಲಿ ೪೯೦ ದಶಲಕ್ಷ ಡಾಲರ್ ವಿದೇಶೀ ವಿನಿಮಯ ಮೊತ್ತವಿದ್ದರೆ ಇದು ೨೦೨೫ರಲ್ಲಿ ಸಾರ್ವಕಾಲಿಕ ಎಂಬಂತೆ ೬೯೭ ದಶಲಕ್ಷ ಡಾಲರ್ ಗಳಷ್ಟಾಯಿತು. ಅಲ್ಲದೇ ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಹೂಡಿಕೆ ಹಾಗೂ ವಿದೇಶೀ ಪ್ರವಾಸಿಗರು ತಂದ ನೂರು ದಶಲಕ್ಷ ಡಾಲರ್ ಹಣ ಇದಕ್ಕೆ ಕಾರಣ, ಜೊತೆಗೆ ಭಾರತ ದಲ್ಲಿ ಶುರುವಾದ ಸ್ಟಾರ್ಟಪ್ ಯೋಜನೆಯಿಂದ ಆರಂಭವಾದ ರಫ್ತು ಭಾರತದ ಆರ್ಥಿಕ ಸ್ಥಿರತೆಗೆ ಮೂಲವಾಯ್ತು. ಇಷ್ಟಾದರೂ ಅಮೆರಿಕದ ಒಂದು ಡಾಲರ್ ಈಗ ಭಾರತದ ೮೪ ರೂಗೆ ಸಮನಾಗಿದ್ದರೂ ಭಾರತ ತನ್ನ ಹಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಿದ್ದು ಹಲವು ದೇಶಗಳು ಇದಕ್ಕೆ ಆಸಕ್ತಿ ತೋರಿಸಿವೆ, ಅಲ್ಲದೇ ಭಾರತ ವಿದೇಶೀ ವಿನಿಮಯ ಕಾದಿಟ್ಟ ಹಣವನ್ನು ಹಾಗೆಯೇ ಉಳಿಸಿಕೊಂಡಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ೬೯೦ ದಶಲಕ್ಷ ಅಮೆರಿಕನ್ ಡಾಲರ್ ವಿದೇಶೀ ವಿನಿಮಯ ಹಣವೆಂದರೆ ಸಾಮಾನ್ಯವಲ್ಲ. ಇದನ್ನು ನೋಡಿಯೇ ಬಹುತೇಕ ದೇಶಗಳು ಹೂಡಿಕೆಗೆ ಮುಂದಾಗುತ್ತವೆ. ಇದು ಭಾರತಕ್ಕೆ ವರವಾಗಿದೆ, ಸದ್ಯ ಭಾರತ ಜಪಾನ್ ಸೇರಿದಂತೆ ಕೊರಿಯಾ ಇತ್ಯಾದಿ  ದಕ್ಷಿಣ ಏಷ್ಯಾದ  ದೇಶಗಳನ್ನು ಹೂಡಿಕೆಗೆ ಆಹ್ವಾನಿಸುತ್ತಿದೆ, ಇಷ್ಟಾದರೆ ಅಮೆರಿಕ ಡಾಲರ್ ನ ಬೆಲೆ ಇಳಿಯುತ್ತದೆ, ಪ್ರಪಂಚದ ಅರ್ಧಕ್ಕರ್ಧ ದೇಶಗಳು ಭಾರತದ ರೂಪಾಯಿಯನ್ನು ಮಾನ್ಯ ಮಾಡುವುದು ಇದಕ್ಕೆ ಕಾರಣ. ಸದ್ಯ ರೂಢಿಯಲ್ಲಿರುವ ತೈಲ ಖರೀದಿಗೆ ಡಾಲರ್ ವಿನಿಮಯ ಮಾಡಿಕೊಳ್ಳುವ ಕ್ರಮ ತಪ್ಪುತ್ತದೆ, ವಿನಾಕಾರಣ ಅಮೆರಿಕಕ್ಕೆ ಎರಡೂ ದೇಶಗಳು ಕೊಡುತ್ತಿದ್ದ ಕಪ್ಪ ಕಾಣಿಕೆ ತಪ್ಪಿ ಅಮೆರಿಕದ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಇದುವರೆಗೆ ತನ್ನ ಸ್ವಿಫ್ಟ್ ವ್ಯವಸ್ಥೆಯಿಂದ ಪ್ರಪಂಚದ ಎಲ್ಲ ದೇಶಗಳು ತನ್ನ ಗುಲಾಮರು ಎಂಬಂತೆ ಕಾಣುತ್ತಿದ್ದ ಅಮೆರಿಕ ಈಗ ಗಾಬರಿಗೆ ಒಳಗಾಗಿದೆ. ನಮ್ಮ ಸ್ವಾತಂತ್ರ್ಯದ ಕಾಲಕ್ಕೆ ಅಮೆರಿಕದ ಒಂದು ಡಾಲರ್ ನಮ್ಮ ಒಂದು ರೂಪಾಯಿಗೆ ಸಮನಾಗಿದ್ದುದು ಕಾಲಾಂತರ ಅಮೆರಿಕದಯಾಜಮಾನ್ಯ ಹಾಗೂ ಚಿನ್ನದ ಕಾದಿಡುವಿಕೆಯಿಂದ ತನ್ನ ಹಣದ ಮೌಲ್ಯ ಹೆಚ್ಚಿಸಿಕೊಂಡಿತು, ಈಗ ಭಾರತ ಕೂಡ ವಿದೇಶಗಳಲ್ಲಿದ್ದ ಅದರಲ್ಲೂ ಲಂಡನ್ ನಲ್ಲಿದ್ದ ೩೦೦ ಟನ್ ಗಟ್ಟಲೆ ಚಿನ್ನವನ್ನು ವಾಪಸು ಪಡೆದು ತನ್ನ ಚಿನ್ನ ಕಾದಿಟ್ಟ ಪ್ರಮಾಣವನ್ನೂ ಗಮನಾರ್ಹವಾಗಿ ಹೆಚ್ಚಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ  ತನ್ನ  ಜಾಗವನ್ನು ಭದ್ರ ಮಾಡಿಕೊಂಡಿದೆ. ಇವೆಲ್ಲ ಕಾರಣಗಳಿಂದ ಜಗತ್ತು ಭಾರತದ ಅರ್ಥ ವ್ಯವಸ್ಥೆ ಹಾಗೂ ರೂಪಾಯಿಯನ್ನು ನಂಬತೊಡಗಿದೆ. ಈ ಬೆಳವಣಿಗೆ ಇನ್ನು ಸ್ವಲ್ಪ ಕಾಲ ಮುಂದುವರೆದರೆ ಅಮೆರಿಕದ ಡಾಲರ್ ಬೆಲೆ ಪೂರ್ಣ ಕುಸಿಯುವುದರಲ್ಲಿ ಅನುಮಾನವಿಲ್ಲ, ನಮ್ಮ ದೇಶ ಹೊರಗಿನಿಂದ ಖರೀದಿಸುದಕ್ಕಿಂತ ಹೆಚ್ಚಾಗಿ ರಫ್ತು ಮಾಡಲು ತೊಡಗಿದರೆ ಈ ಕಾಲ ಹೆಚ್ಚು ದೂರವಿಲ್ಲ, ಸದ್ಯದಲ್ಲೇ ಇದು ಆಗಲಿದೆ. ಇದುವರೆಗೆ ಅಮೆರಿಕದ ಡಾಲರ್ ಎದುರು ತಲೆ ಎತ್ತದ ದೇಶಗಳು ಭಾರತದ ನಡೆಯಿಂದ ಉತ್ತೇಜನ ಪಡೆದು ಭಾರತದ ಕಡೆ ವಾಲತೊಡಗಿವೆ, ಇದು ಉತ್ತಮ ಬೆಳವಣಿಗೆ. ಪ್ರಾಚೀನ ಕಾಲದಲ್ಲಿ ವಿದೇಶೀ ವಿನಿಮಯಕ್ಕೆ ಚಿನ್ನ ಬಳಕೆ ಆಗುತ್ತಿದ್ದಂತೆ ಆಧುನಿಕ ಕಾಲದಲ್ಲಿ ಅಮೆರಿಕದ ಡಾಲಲರ್ ಬಳಕೆ ಆಗುತ್ತಿತ್ತು ಜೊತೆಗೆ ಚಿನ್ನ ಬೆಳ್ಳಿಗಳ ಬಳಕೆ ಆಗುತ್ತಿದೆ, ಜೊತೆಗೆ ಭಾರತದ ರೂಪಾಯಿ ಕೂಡ ಬಳಕೆಗೆ ಬರುತ್ತಿದೆ, ಇದು ಅತ್ಯಂತ ಗುಣಾತ್ಮಕ ಬೆಳವಣಿಗೆ, ಇದರಿಂದ ಒಂದು ಕಾಲದಲ್ಲಿ ನೇರ ಸಂಪತ್ತು ಲೂಟಿ ಮಾಡಿ ದೊಡ್ಡವನೆನಿಕೊಂಡ ಬ್ರಿಟನ್ ಹಾಗೂ ಕುತಂತ್ರದಿಂದ ಆಧುನಿಕ ಕಾಲದಲ್ಲಿ ಆರ್ಥಿಕ ಹಿಡಿತ ಹೊಂದಿದ್ದ ಅಮೆರಿಕಗಳು ಜಾಗ ಬಿಡುತ್ತಿವೆ. ಇದನ್ನು ಭಾರತ ಆಕ್ರಮಿಸಲು ಬರುತ್ತಿದೆ, ಈಗಾಗಲೇ ಸೇನೆ, ಕೃಷಿಗಳಲ್ಲಿ, ಇತರೆ ಉತ್ಪಾದನೆಯಲ್ಲಿ ಮುಂಚೂಣಿಗೆ ಬಂದಿರುವ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತರೆ ದೇಶಗಳಿಗೆ ಸಾಲ ಕೊಡುವ ಮೂಲಕ ಸ್ಥಾನ ಗಟ್ಟಿ ಮಾಡಿಕೊಂಡಿದೆ. ಚಿನ್ನಕ್ಕೆ ಬದಲಾಗಿ ಅಮೆರಿಕದ ಡಾಲರ್ ಕೊಡುತ್ತಿದ್ದ ಜಗತ್ತು ಈಗ ಭಾರತದ ರೂಪಾಯಿಯನ್ನು ಕೂಡ ಬಳಸುತ್ತಿದೆ. ಇವೆಲ್ಲ ಭಾರತದ ಭವ್ಯ ಭವಿಷ್ಯವನ್ನು ಸೂಚಿಸುತ್ತಿವೆ. ಏನೋ ಮಾಡಲು ಹೋದ ಟ್ರಂಪ್ ಈಗ ತಾನು ಹಣೆದ ಬಲೆಯಲ್ಲಿ ತಾನೇ ಸಿಲುಕಿದ್ದಾನೆ, ಭಾರತ ಆಮದು ಮಾಡಿಕೊಳ್ಳುತ್ತಿದ್ದ ಸಾಮಗ್ರಿಗಳಿಗೆ ಆತ ಹೆಚ್ಚಿನ ಕರ ವಿಧಿಸಿದ ಬೆನ್ನಲ್ಲಿ ಭಾರತ ಕೂಡ ಅಲ್ಲಿಗೆ ರಫ್ತಾಗುತ್ತದ್ದ ವಸ್ತುಗಳಿಗೆ ಕರ ಹೆಚ್ಚಿಸಿ ಪ್ರತಿ ಶಾಕ್ ನೀಡಿ ಅಮೆರಿಕವೇ ಭಾರತಕ್ಕೆ ಹೆಚ್ಚು ಹಣ ಕೊಡುವಂತೆ ಮಾಡಿ ಗೆದ್ದಿದೆ. ಇವೆಲ್ಲ ಒಟ್ಟಾಗಿ ಭಾರತವನ್ನು ಸೂಪರ್ ಪವರ್ ಆಗುವತ್ತ ಮಾಡುತ್ತಿವೆ, ಜೈ ಭಾರತ್. 


  





No comments:

Post a Comment