
ಇದೀಗ ವಾಹನ ಮಾರುಕಟ್ಟೆಯಲ್ಲಿ ಸುದ್ದಿ ಮಾಡಿದ್ದು ಟಾಟಾ ಕಂಪನಿಯ ಹೊಸ ಕಾರು. ಹೌದು. ಭಾರತದ ಟಾಟಾ ಕಂಪನಿ ಇಂಗ್ಲೆಂಡ್ ನಲ್ಲಿ ಸುಪ್ರಸಿದ್ಧ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಾರನ್ನು ಉತ್ಪಾದಿಸುತ್ತಿದೆ. ಆದರೆ ಇವುಗಳಿಗೆ ಸ್ಪರ್ಧೆ ಕೊಡುತ್ತಿರುವವರೆಂದರೆ ಅಮೆರಿಕದ ಕಂಪನಿಗಳು ಅದರಲ್ಲೂ ಎಲಾನ್ ಮಸ್ಕ್. ಈತ ಈಚೆಗೆ ಭಾರತಕ್ಕೆ ಬರುತ್ತೇನೆಂದು, ಭಾರೀ ಹೂಡಿಕೆ ಮಾಡುತ್ತೇನೆಂದು ಹೇಳಿಕೊಂಡು ಭಾರತ ಸರ್ಕಾರಕ್ಕೆ ಪೂಸಿ ಹೊಡೆಯುತ್ತ ಎಷ್ಟೆಲ್ಲ ಉದ್ಯೋಗ ಸೃಷ್ಟಿಸುತ್ತೇನೆಂದು ಬೊಗಳೆ ಬಿಡುತ್ತ ತನ್ನ ಸ್ವಾರ್ಥ ಸಾಧಿಸಲು ಸರ್ಕಾರದ ಮುಂದೆ ತನಗೆ ವಿಶೇಷ ಸೌಕರ್ಯ ಕೇಳಿದ್ದ. ಬೇರೆಲ್ಲ ಕಂಪನಿಗಳಿಗೆ ಇರದ ಸವಲತ್ತು ಕೊಡಬೇಕೆಂದು ಕಂಡೀಶನ್ ವಿಧಿಸಿದ್ದ, ಆದರೆ ಭಾರತ ಸರ್ಕಾರ ಮಾತ್ರ ನಮ್ಮಲ್ಲಿ ಕಂಪನಿ ತೆಗೆ, ಯಾರು ಬೇಡ ಅಂದ್ರು, ಆದ್ರೆ ಎಲ್ಲ ವಿದೇಶೀ ಕಂಪಂಪನಿಗಳಿಗೆ ಅನ್ವಯಿಸುವ ನಿಯಮವೇ ನಿಮಗೂ ಲಾಗೂ ಆಗುತ್ತದೆ, ವಿಶೇಷ ಎಲ್ಲ ಆಗಲ್ಲ ಅಂದಿತ್ತು. ಆಗ ನಾನು ಬರಲ್ಲ ಎಂದು ಮುಖ ಊದಿಸಿಕೊಂಡವರಂತೆ ನಾಟಕಮಾಡಿ ಭಾರತವೇ ಮತ್ತೆ ಆಹ್ವಾನ ಕೊಡಲಿ ಎಂದು ಲೆಕ್ಕ ಹಾಕುತ್ತ ಕುಳಿತಿದ್ದ, ಆದರೆ ಅಷ್ಟರಲ್ಲಿ ನಮ್ಮ ದೇಶಕ್ಕೆ ಸಾಕಷ್ಟು ಕೊಡುಗೆ ಕೊಟ್ಟ ಟಾಟ ಕಂಪನಿ ಮಸ್ಕ್ ಗೆ ಸವಾಲು ಎಸೆಯಲು ತನ್ನ ಕಂಪನಿಯಿಂದ ಮಸ್ಕ್ ನ ಟೆಸ್ಲಾ ಕಾರನ್ನು ಬದಿಗೆ ತಳ್ಳುವಂತೆ ತನ್ನ ಪ್ರಸಿದ್ಧ ಕಾರುಗಳ ವಿದ್ಯುತ್ ಮಾದರಿಯನ್ನು ಪರಿಚಯಿಸಿತು, ಜಾಗ್ವಾರ್ ಐಶಾರಾಮಿ ಕಾರು ಟೆಸ್ಲಾಗಿಂತ ತುಂಬ ಕಡಿಮೆ ಬೆಲೆಗೆ ಸಿಗುವುದಾದರೆ ಟೆಸ್ಲಾ ಏಕೆಂದು ಗ್ರಾಹಕರು ಎಣಿಸತೊಡಗಿದರು. ಟೆಸ್ಲಾ ಕಾರು ೭೫ ಲಕ್ಷದಿಂದ ಐದು ಕೋಟಿಯವರೆಗೆ ಬೆಲೆ ಬಾಳುತ್ತದೆ, ಆದರೆ ಇದಕ್ಕಿಂತ ಟಟಾ ಉತ್ಪನ್ನಗಳು ಶೇ೩೦ರಷ್ಟು ಕಡಿಮೆ ಬೆಲೆಗೆ ಲಭಿಸುತ್ತವೆ, ಅಷ್ಟೇ ಅಲ್ಲ, ಐಶಾರಾಮಿ ವಿಷಯದಲ್ಲಿ ಜಾಗ್ವಾರ್ ಕಾರು ಟೆಸ್ಲಾಗಿಂತ ಅನೇಕ ಪಟ್ಟು ಮೇಲೆ. ಹೀಗಿರುವಾಗ ಗ್ರಾಹಕರು ಟಾಟಾ ಕಡೆ ನೋಡುವುದು ಸಹಜ, ಅಷ್ಟಕ್ಕೂ ಈ ಮಸ್ಕ್ ಭಾರತದಲ್ಲಿ ಕಡಿಮೆ ಖರ್ಚಿನಲ್ಲಿ ನೌಕರರನ್ನು ಹಿಡಿದು ಕಾರು ಉತ್ಪಾದಿಸಿ ವಿದೇಶಗಳಿಗೆ ಕಳಿಸುವ, ಹೀಗೆ ಮಾಡಿದರೆ ಅಪಾರ ಲಾಭ ಮಾಡಬಹುದೆಂಬ ಲೆಕ್ಕಾಚಾರದಲ್ಲಿದ್ದ, ಭಾರತದ ಕಂಡೀಶನ್ ಗೆ ಒಪ್ಪದ ಆತ ಭಾರತದ ನೆರೆಯ ಚೀನಾ, ಮಲೇಷ್ಯ, ಶ್ರೀಲಂಕಗಳಿಗೆ ಹೋಗಿ ಇದೇ ವರಾತ ಊದಿ ಭಾರತಕ್ಕೆ ಪಾಠ ಕಲಿಸಲು ಮುಂದಾಗಿದ್ದ, ಆದರೆ ಟಾಟಾ ಇದಕ್ಕೆ ಅವಕಾಶ ಕೊಡದಂತೆ ಆತ ಏನೇ ಲಾಗ ಹಾಕಿದರೂ ವೇಸ್ಟ್ ಅನ್ನುವಂತೆ ಮಾಡಿಬಿಟ್ಟಿತ್ತು. ಈಗ ಜಗತ್ತಿನ ಕಣ್ಣು ಟಾಟ ಜಾಗ್ವಾರ್ ಲ್ಯಾಂಡ್ ರೋವರ್ ವಿದ್ಯುತ್ ವಾಹನಗಳ ಕಡೆ ನೆಟ್ಟಿದೆ, ಇದು ಟಾಟಾ ನಮ್ಮ ದೇಶದ ಗೌರವ ಕಾಯ್ದ ಒಂದು ಕತೆ. ೨೦೦೮ರಲ್ಲಿಯೇ ಟಾಟಾ ಕಂಪನಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ, ಹೀಗಾಗಿ ಅಂತಾರಾಷ್ಟ್ರೀಯ ಪ್ರೀಮಿಯಂ ಕಾರು ಮಾರುಕಟ್ಟೆಯಲ್ಲಿ ಟಾಟಾ ಅಧಿಪತ್ಯ ಸ್ಪಷ್ಟವಾಗಿದೆ. ಇಷ್ಟು ಕಾಲ ಹೊಸ ಬಗೆಯ ವಾಹನ ಸೃಷ್ಟಿಯಲ್ಲಿ ನಾವು ಇಲ್ಲವೇ ಜರ್ಮನಿ ಮಾತ್ರ ಇರಬೇಕೆಂದು ಭಾವಿಸಿದ್ದ ಅಮೆರಿಕದ ಮಸ್ಕ್ ಸರಿಯಾಗಿ ಮಣ್ಣು ತಿಂದು ಕೂತಿದ್ದಾನೆ. ಆತ ಇಲ್ಲಿ ಬಂದು ಉದ್ಯಮ ಬೆಳೆಸಬೇಕೆಂದರೆ ಎಲ್ಲರೂ ಅನುಸರಿಸುವ ನಿಯಮವನ್ನೇ ಅನುಸರಿಸಬೇಕು ಇಲ್ಲಾಂದ್ರೆ ನಿಮ್ಮ ಅಗತ್ಯ ಖಂಡಿತ ಇಲ್ಲವೆಂದು ಭಾರತ ಹೇಳಿದಂತಾಗಿದೆ. ಹೀಗೆ ಮಾಡುವ ಮೂಲಕ ಟಾಟಾ ಕಂಪನಿ ವಾಹನ ತಯಾರಿಕಾ ಕ್ಷೇತ್ರದಲ್ಲಿ ಇದುವರೆಗಿದ್ದ ವಿದೇಶೀ ಅಧಿಪತ್ಯದ ಅಹಮಿಕೆಗೆ ಏಟುಕೊಟ್ಟಿದೆಯಲ್ಲದೇ ಭಾರತದ ಗೌರವ ಹೆಚ್ಚುವಂತೆ ಮಾಡಿದೆ. ಅಷ್ಟಕ್ಕೂ ಈ ಮಸ್ಕ್ ನಮ್ಮ ದೇಶದ ನೆಲ, ಜಲ ಹಾಗೂ ಜನರನ್ನು ಬಳಸಿಕೊಂಡು ಸಾಕಷ್ಟು ಹಣ ಮಾಡಿಕೊಂಡು ಹೋಗುವ ಆಸೆ ಇಟ್ಟುಕೊಂಡುಬಂದಿದ್ದ, ಅದರಲ್ಲೂ ಡಿಸ್ಕೌಂಟ್ ಕೇಳಿದ್ದ. ಆತನೇನೂ ಹಣವನ್ನು ಮತ್ತೆ ನಮ್ಮ ದೇಶದಲ್ಲಿ ಹೂಡುತ್ತಿರಲಿಲ್ಲ, ಆತ ಕೊಡುಗೈ ದಾನಿ ಕೂಡ ಅಲ್ಲ, ಆದರೆ ಟಾಟಾ ಹಾಗಲ್ಲ, ಅವರ ಕುಟುಂಬದ ಹಿರಿಯ ಜೆಮ್ ಷೆಡ್ ಜಿ ಟಾಟಾ ಕೂಡ ಮಹಾನ್ ದಾನಿ. ನಮ್ಮ ಇಂದಿನ ಐಐಎಸ್ ಸಿ ಕೂಡ ಅವರ ಕೊಡುಗೆ. ಇಂದಿಗೂ ರತನ್ ಟಾಟಾ ಆ ಸೇವೆಯನ್ನು ಮುಂದುವರೆಸಿದ್ದಾರೆ, ಅತ್ಯಂತ ಹೆಚ್ಚು ದಾನ ಮಾಡಿದವರ ಪಟ್ಟಿ ತೆಗೆದರೆ ಕಾಣುವ ಹೆಸರುಗಳಲ್ಲಿ ಟಾಟಾ ಕೂಡ ಸೇರಿದ್ದಾರೆ. ಭಾರತದ ಮೊದಲ ಹತ್ತು ದಾನಿಗಳಲ್ಲಿ ಮೊದಲ ಹೆಸರು ಉದ್ಯಮಿ ಶಿವ ನಾಡಾರವರದು. ಮೂರನೆಯ ಹೆಸರೇ ರತನ್ ಟಟಾ ಅವರದ್ದು. ಹೀಗಾಗಿ ಟಾಟಾ ಕಂಪನಿ ಇದರಲ್ಲಿ ಬರುವ ಲಾಭದಲ್ಲಿ ಅರ್ಧದಷ್ಟನ್ನು ನಮ್ಮ ನಮ್ಮದೇಶಕ್ಕೆ ಮರಳಿಸುತ್ತದೆ, ಹೊಸ ಉದ್ಯೋಗ ಸಷ್ಟಿಸಿ ಕೊಡುತ್ತದೆ. ಈ ದೃಷ್ಟಿಯಿಂದಲೂ ಟಾಟಾ ಬೆಳವಣಿಗೆ ಸ್ತುತ್ಯರ್ಹ.
ಟಾಟಾ ತನ್ನ ಹೊಸ ಕಾರಿಗೆ ಅವಿನ್ಯಾ ಎಂದು ಹೆಸರಿಟ್ಟಿದ್ದು ಇದು ಎಸ್ ಯುವಿ ಆಗಿರಲಿದೆ. ಇದು ಟೆಸ್ಲಾದ ಮಾಡೆಲ್ ೩ಕ್ಕೆ ನೇರ ಸ್ಪರ್ಧೆ ಒಡ್ಡಲಿದೆ.ಅವಿನ್ಯಾ ಎಂಬ ಸಂಸ್ಕೃತದ ಹೆಸರು ಹೇಳುವಂತೆ ಇದು ನಿಜಕ್ಕೂ ಅನನ್ಯವಾಗಿದೆ, ಇಂಥ ಹೆಸರೇ ವಾಹನ ಕ್ಷೇತ್ರಕ್ಕೆ ಹೊಸದು. ಸಾಮಾನ್ಯವಾಗಿ ಸ್ಪಾನಿಷ್, ಫ್ರಂಚ್, ಲ್ಯಾಟಿನ್ ಹೆಸರು ಇಡಲಾಗುತ್ತಿತ್ತು, ಇಲ್ಲೂ ಟಾಟಾ ಹೊಸತನ ಮೆರೆದಿದೆ. ಈ ಕಾರನ್ನು ಟಾಟಾ ೨೦೨೭ರ ಆರ್ಥಿಕ ವರ್ಷದಲ್ಲಿ ಮಾರುಕಟ್ಟೆಗೆ ತರುವ ಯೋಚನೆ ಮಾಡಿದೆ. ಇದರ ಬೆಲೆ ಅಂದಾಜು ೨೫ ಲಕ್ಷವಾಗಲಿದೆ ಎಂದು ಹೇಳಲಾಗಿದೆ. ನಿಜಕ್ಕೂ ಇದು ಟೆಸ್ಲಾಗೆ ನುಂಗಲಾಗದ ತುತ್ತು. ಅದರ ಬೆಲೆ ಕನಿಷ್ಠ ೬೦ರಿಂದ ೭೫ ಲಕ್ಷ. ಹೀಗಿರುವಾಗ ಟಾಟಾ ಗೆಲ್ಲುವುದು ಖಚಿತ, ಟಾಟಾ ಕಾರು ಸೌಲಭ್ಯದಲ್ಲಿ ಟೆಸ್ಲಾಗೆ ಯಾವಾಗಲೂ ಸ್ಪರ್ಧೆಯೊಡ್ಡಿದೆ. ಟೆಸ್ಲಾ ಇಷ್ಟರಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು ಲಾಭ ಮಾಡಿಕೊಳ್ಳುವ ಆಸೆಯಿಂದ ಈ ವರ್ಷ ಏಪ್ರಿಲ್ ನಿಂದ ಕಾರು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು, ಈಗ ಜನ ಅವಿನ್ಯಾ ಆಗಮನಕ್ಕೆ ಕಾಯುತ್ತಿದ್ದಾರೆ, ಇದು ಮಸ್ಕ್ ಆಸೆಗೆ ತಣ್ಣೀರು ಎರಚಿದೆ.ಅಲ್ಲದೇ ಮಸ್ಕ್ ತನ್ನ ಕಾರುಗಳನ್ನು ಎಲ್ಲೋ ಉತ್ಪಾದಿಸಿ ಭಾರತದಲ್ಲಿ ಇಲ್ಲಿನ ಸ್ಪರ್ಧಾತ್ಮಕ ಬೆಲೆಗೆ ಮಾರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾಲದ್ದಕ್ಕೆ ಭವಿಷ್ಯದ ದೃಷ್ಟಿಯಿಂದ ಭಾರತದಲ್ಲಿ ವಿದ್ಯುತ್ ಚಾಲಿತ ಪ್ರೀಮಿಯಂ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕಂಪನಿಗಳ ಮಧ್ಯೆ ಪರಸ್ಪರ ಸ್ಪರ್ಧೆ ಸೃಷ್ಟಿಯಾಗಿ ಇಲ್ಲಿನ ಗ್ರಾಹಕರಿಗೆ ಲಾಭವಾಗುವಂತಾಗಿದೆ. ಮಸ್ಕ್ ಮಾಡಿದ ಆರಂಭಿಕ ಮಸಲತ್ತಿನಿಂದ ಟಾಟಾ ಜಾಗತಿಕ ಮಟ್ಟದಲ್ಲಿ ವಿದ್ಯುತ್ ಕಾರುಗಳ ಲೀಡರ್ ಆಗಯವ ಅವಕಾಶ ಲಭಿಸಿದೆ, ಇದಕ್ಕಾಗಿ ನಾವು ಯಾರನ್ನು ಅಭಿನಂದಿಸಬೇಕೋ ತಿಳಿಯುತ್ತಿಲ್ಲ.
ಅಂತೂ ಟಿಸಿಎಸ್ ಕಂಪನಿ ಮೂಲಕ ವಿದೇಶೀ ಸಾಫ್ಟ್ ವೇರ್ ಕಂಪನಿಗಳಿಗೆ ಪಾಠ ಕಲಿಸಿದ್ದ ಟಾಟಾ ಈಗ ಹೊಸ ಕಾರು ಉತ್ಪಾದನೆಯ ಮೂಲಕ ವಾಹನ ಕ್ಷೇತ್ರದಲ್ಲಿ ಭಾರತದ ಅಧಿತ್ಯ ಸ್ಥಾಪನೆಗೆ ಅಡಿಪಾಯ ಹಾಕಿ ವಿದೇಶಿಗರಿಗೆ ಪಾಠ ಹೇಳಿದ್ದಾರೆ, ನಮ್ಮ ನೆಲದ ಎಲ್ಲ ಕ್ಷೇತ್ರದ ಕಂಪನಿಗಳೂ ಹೀಗೆ ಮುಂದಾಳತ್ವ ಗಳಿಸಲು ಮುಂದಾದರೆ ನಮ್ಮನ್ನು ತಡೆಯುವವರಾರು ಆಗ ನಾವು ಹೆಮ್ಮೆಯಿಂದ ನಾವುಂಟೋ ಮೂರು ಲೋಕವುಂಟೋ ಎಂದು ಹೇಳಿಕೊಳ್ಳಬಹುದು.
.
No comments:
Post a Comment