ಈ ಆರ್ಯ ದ್ರಾವಿಡ ಅನ್ನುವ ಪರಿಕಲ್ಪನೆಯ ಹುಟ್ಟು ವಸಾಹತುಗಳ ಉದ್ದೇಶಕ್ಕೆ ಸೂಕ್ತವಾಗಿ ಹುಟ್ಟಿಕೊಂಡಿತ್ತು, ಅಥವಾ ಅವರೇ ಸೃಷ್ಟಿಸಿಕೊಂಡಿದ್ದರು. ಅವರ ಪ್ರಕಾರ, ಅಂದರೆ ಯೂರೋಪಿನ ಜನರ ಪ್ರಕಾರ ಪ್ರಪಂಚಕ್ಕೆ ಮನುಷ್ಯನಿಗೆ ಅನಿವಾರ್ಯವಾದ ಎಲ್ಲವನ್ನೂ ಅವರು ಮತ್ತು ಅವರ ದೇವರು ಮಾತ್ರ ತಂದಿದ್ದಾನೆ, ಅದೇ ರೀತಿ ಭಾಷೆಯನ್ನೂ ಅವರೇ ಭಾರತಕ್ಕೆ ತಂದು ಬಿಟ್ಟಿದ್ದು ಎಂಬುದನ್ನು ಸಾಧಿಸಲು ಬೇಕಾದಂತೆ ಆರ್ಯ ದ್ರಾವಿಡ ಸಿದ್ಧಾಂತವನ್ನು ರೂಪಿಸಿಕೊಂಡರು. ಜೊತೆಗೆ ಭಾರತದಲ್ಲಿನ ತಮ್ಮ ಆಡಳಿತಕ್ಕೆ ಅನುಕೂಲ ಆಗುವಂತೆ ಇಲ್ಲಿನ ಜನರನ್ನು ಮತ್ತು ಸಮಾಜವನ್ನು ಒಡೆಯುವ ಅಸ್ತ್ರವನ್ನಾಗಿಯೂ ಇದನ್ನು ಬಳಸಿಕೊಂಡು ಯಶಸ್ವಿಯಾದರು, ಈ ಎರಡು ಉದ್ದೇಶಗಳಿಂದ ವ್ಯವಸ್ಥಿತವಾಗಿ ವಸಾಹತು ಕಾಲದಲ್ಲಿ ತಯಾರಾದ ಈ ಸಿದ್ಧಾಂತ ಇಂದಿನ ವೈಜ್ಞಾನಿಕ ಯುಗದಲ್ಲಿ ಸೂಕ್ತ ಸಾಕ್ಷಿ-ಆಧಾರಗಳ ಕೊರತೆಯಿಂದ ಸತ್ತು ಹೋಗಿದ್ದರೂ ವಸಾಹತುಗಳ ದಟ್ಟ ಪ್ರಭಾವದಿಂದ ಬಿಡಿಸಿಕೊಳ್ಳಲಾಗದ ಕೆಲವರು ಇಂದಿಗೂ ಅದು ಸತ್ಯ ಎಂಬಂತೆ ನಂಬಿಕೊಂಡು ಕುಳಿತಿದ್ದಾರೆ, ಇಂಥ ಸುಳ್ಳನ್ನು ಇನ್ನಿಲ್ಲದಂತೆ ಬುಡಸಹಿತ ಕಿತ್ತೆಸೆಯುವ ಯತ್ನವನ್ನು ಹಲವಾರು ದಶಕಗಳಿಂದ ಆಧುನಿಕ ವಿದ್ವಾಂಸರು ಮಾಡುತ್ತಲೇ ಬಂದಿದ್ದಾರೆ, ಆದರೆ ಜನಸಾಮಾನ್ಯರ ಮನದಲ್ಲಿ ಆಳವಾಗಿ ಬೇರುಬಿಟ್ಟು ನೆಟ್ಟಿರುವ ಈ ಸುಳ್ಳು ಅಷ್ಟು ಸುಲಭವಾಗಿ ನಾಶವಾಗುವುದಿಲ್ಲ, ಆದ್ದರಿಂದ ಮತ್ತೆ ಮತ್ತೆ ಆಧುನಿಕ ಸಾಕ್ಷಿಗಳ ಆಧಾರದಲ್ಲಿ ಇದನ್ನು ಮತ್ತೆ ಮತ್ತೆ ಜನರ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ, ಇಂಥ ಹೊಸ ಯತ್ನ ಬಹುಶ್ರುತ ವಿದ್ವಾಂಸರಾದ, ವೃತ್ತಿಯಿಂದ ವೈದ್ಯರಾದ ಶಿವ್ ಶಾಸ್ತ್ರಿಯವರು ಇದೀಗ ಮಾಡಿ ನಮ್ಮ ಮುಂದೆ ವಿಚಾರ ಮಂಥನಕ್ಕೆ ತೆರೆದಿಟ್ಟಿದ್ದಾರೆ, ಈ ಕೃತಿಯ ಹೆಸರು- 'ಟಿಯರಿಂಗ್ ಡೌನ್ ದಿ ಆರ್ಯನ್ ಇನ್ವೇಶನ್ ಮಿತ್' ಇದರಲ್ಲಿ ೧೫ ಅಧ್ಯಾಯಗಳಿದ್ದು ಒಂದಕ್ಕೊಂದು ಪೂರಕವೂ ಮುಂದಿನ ದಾರಿಯನ್ನು ತೋರುವಂಥವೂ ಆಗಿವೆ, ಅಲ್ಲಲ್ಲಿ ಓದುಗರಲ್ಲಿ ಹುಟ್ಟುವ ಶಂಕೆಗಳಿಗೆ ಅಲ್ಲೇ ಪರಿಹಾರ ತೋರಿಸುತ್ತವೆ. ಯೂರೋಪ್ ಭಾಷಾ ವಿದ್ವಾಂಸರು ಮೊದಲು ಆರ್ಯ ಸಿದ್ಧಾಂತವನ್ನು ಭಾರತದಲ್ಲಿ ಭಾಷೆಯ ಚಲನೆಗೆ ಸಂಬಂಧಿಸಿದಂತೆ ಪ್ರಯೋಗಿಸಿದರು, ಅಲ್ಲದೇ ಭಾರತಕ್ಕೆ ಮೊದಲು ಬಂದು ಸ್ಥಾಪಿತವಾದುದು ಸಂಸ್ಕೃತವೆಂದೂ ಅದು ಆರ್ಯ ಭಾಷೆ ಎಂದೂ ಇದು ಇಲ್ಲಿದ್ದ ದ್ರಾವಿಡ ಭಾಷೆಗಳನ್ನು ಮೂಲೆಗೆ ತಳ್ಳಿತು ಎಂದೂ ಸುಳ್ಳಿನ ಕತೆ (ಮಿತ್)ಕಟ್ಟಿದರು. ಈ ಭಾಷೆ ಯೂರೋಪ್ ನಿಂದ ಇಲ್ಲಿಗೆ ಬಂದಿದ್ದು ಹೇಗೆ? ಗಾಳಿಯಲ್ಲಿ ತೇಲಿ ಬರಲು ಸಾಧ್ಯವಿಲ್ಲ, ಹಾಗಾಗಿ ಅದನ್ನು ಒಂದು ಮೂಲದ ಜನ ಸಮುದಾಯ ವಲಸೆ ಬರುವಾಗ ತನ್ನೊಂದಿಗೆ ತಂದಿತೆಂದು ಕತೆ ಕಟ್ಟಿದರು, ಹಾಗೆ ಆ ಸಮುದಾಯ ವಲಸೆ ಬಂದ ಮಾರ್ಗವನ್ನು ಕೂಡ ರೇಖಿಸಿ ತೋರಿಸಿದರು, ಅವರು ಯೂರೋಪ್ ನಿಂದ ಮಧ್ಯಪ್ರಾಚ್ಯವನ್ನು ಹಾಯ್ದು ಅಲ್ಲಿಂದ ಕಂದಹಾರ್ ಮೂಲಕ ಸಿಂಧೂ ನದೀ ಪಾತ್ರದ ಬಳಿಯಲ್ಲಿ ನೆಲೆ ನಿಂತು ತಮ್ಮ ನಾಗರಿಕತೆಯನ್ನು ಸ್ಥಾಪಿಸಿ-ಸಿಂಧೂ ಬಯಲಿನ ನಾಗರಿಕತೆ- ಅನಂತರ ಇಂದಿನ ಭಾರತದ ವಾಯವ್ಯ ಭಾಗದಿಂದ ಭಾತರದೊಳಗೆ ಬಂದರು ಎಂದು ಬಿಂಬಿಸಿದರು, ಮೇಲ್ನೋಟಕ್ಕೆ ಇದು ಇರಬಹುದೇನೋ ಯಾಕೆಂದರೆ ಅವರು ಕಟ್ಟಿದ ಸುಳ್ಳಿಗೆ ಅಲ್ಲಲ್ಲಿ ಸಾಕ್ಷಿಗಳಿವೆ, ಕುರುಹುಗಳಿವೆಯಲ್ಲಾ ಅನಿಸುತ್ತದೆ, ಇದನ್ನೇ ಅವರು ಆಧುನಿಕ ಶಿಕ್ಷಣದಲ್ಲಿ ಎಲ್ಲ ಹಂತಗಳಲ್ಲೂ ತುರುಕಿ ಒಂದೇ ಸುಳ್ಳನ್ನು ಸಾವಿರಾರು ಬಾರಿ ಹೇಳಿ, ಸಾವಿರಾರು ಬಾಯಿಂದ ಹೇಳಿಸಿ ನಿಜ ಅನ್ನುವಂತೆ ಮಾಡಿಬಿಟ್ಟಿದ್ದಾರೆ, ಇರಬಹುದು, ಆ ಕಾಲಕ್ಕೆ ಲಭ್ಯವಿದ್ದ ವೈಜ್ಞಾನಿಕ ಅಥವಾ ತಾರ್ಕಿಕ ಆಧಾರದಲ್ಲಿ ಸಾಧ್ಯವಾದುದೇ ಅಷ್ಟು ಅಂದುಕೊಂಡರೂ ನಾವು ಇಂದು ಇಂದಿನ ತಾರ್ಕಿಕ ಹಾಗೂ ವೈಜ್ಞಾನಿಕ ಆಧಾರದಲ್ಲಿ ಇದು ಇಂದು ಸುಳ್ಳಾಗಿದೆ ಎಂದು ಭಾವಿಸಲು ಸಿದ್ಧವಿಲ್ಲದಿರುವುದು ಅಧ್ಯಯನಕ್ಕೂ ಗಂಭೀರ ಸಂಶೋಧನೆಗೂ ಮಾಡುವ ಅಪಚಾರವಾಗುತ್ತದೆ, ಇಂಥ ಸಾಕ್ಷಿ- ಪುರಾವೆಗಳನ್ನೂ ಹಿಂದಿನ ಕಟ್ಟು ಕತೆಯಲ್ಲಿನ ವಿರೋಧಾಭಾಸಗಳನ್ನು ಈ ಕೃತಿ ಕಣ್ಣಿಗೆ ರಾಚುವಂತೆ ಕಾಣಿಸುತ್ತದೆ.
Sunday, 31 August 2025
ಆರ್ಯ-ದ್ರಾವಿಡ ಆಕ್ರಮಣದ ಕಟ್ಟುಕಥೆಯ ಮೇಲೊಂದು ಪುನರ್ವಿಚಾರ
ಈ ಆರ್ಯ ದ್ರಾವಿಡ ಅನ್ನುವ ಪರಿಕಲ್ಪನೆಯ ಹುಟ್ಟು ವಸಾಹತುಗಳ ಉದ್ದೇಶಕ್ಕೆ ಸೂಕ್ತವಾಗಿ ಹುಟ್ಟಿಕೊಂಡಿತ್ತು, ಅಥವಾ ಅವರೇ ಸೃಷ್ಟಿಸಿಕೊಂಡಿದ್ದರು. ಅವರ ಪ್ರಕಾರ, ಅಂದರೆ ಯೂರೋಪಿನ ಜನರ ಪ್ರಕಾರ ಪ್ರಪಂಚಕ್ಕೆ ಮನುಷ್ಯನಿಗೆ ಅನಿವಾರ್ಯವಾದ ಎಲ್ಲವನ್ನೂ ಅವರು ಮತ್ತು ಅವರ ದೇವರು ಮಾತ್ರ ತಂದಿದ್ದಾನೆ, ಅದೇ ರೀತಿ ಭಾಷೆಯನ್ನೂ ಅವರೇ ಭಾರತಕ್ಕೆ ತಂದು ಬಿಟ್ಟಿದ್ದು ಎಂಬುದನ್ನು ಸಾಧಿಸಲು ಬೇಕಾದಂತೆ ಆರ್ಯ ದ್ರಾವಿಡ ಸಿದ್ಧಾಂತವನ್ನು ರೂಪಿಸಿಕೊಂಡರು. ಜೊತೆಗೆ ಭಾರತದಲ್ಲಿನ ತಮ್ಮ ಆಡಳಿತಕ್ಕೆ ಅನುಕೂಲ ಆಗುವಂತೆ ಇಲ್ಲಿನ ಜನರನ್ನು ಮತ್ತು ಸಮಾಜವನ್ನು ಒಡೆಯುವ ಅಸ್ತ್ರವನ್ನಾಗಿಯೂ ಇದನ್ನು ಬಳಸಿಕೊಂಡು ಯಶಸ್ವಿಯಾದರು, ಈ ಎರಡು ಉದ್ದೇಶಗಳಿಂದ ವ್ಯವಸ್ಥಿತವಾಗಿ ವಸಾಹತು ಕಾಲದಲ್ಲಿ ತಯಾರಾದ ಈ ಸಿದ್ಧಾಂತ ಇಂದಿನ ವೈಜ್ಞಾನಿಕ ಯುಗದಲ್ಲಿ ಸೂಕ್ತ ಸಾಕ್ಷಿ-ಆಧಾರಗಳ ಕೊರತೆಯಿಂದ ಸತ್ತು ಹೋಗಿದ್ದರೂ ವಸಾಹತುಗಳ ದಟ್ಟ ಪ್ರಭಾವದಿಂದ ಬಿಡಿಸಿಕೊಳ್ಳಲಾಗದ ಕೆಲವರು ಇಂದಿಗೂ ಅದು ಸತ್ಯ ಎಂಬಂತೆ ನಂಬಿಕೊಂಡು ಕುಳಿತಿದ್ದಾರೆ, ಇಂಥ ಸುಳ್ಳನ್ನು ಇನ್ನಿಲ್ಲದಂತೆ ಬುಡಸಹಿತ ಕಿತ್ತೆಸೆಯುವ ಯತ್ನವನ್ನು ಹಲವಾರು ದಶಕಗಳಿಂದ ಆಧುನಿಕ ವಿದ್ವಾಂಸರು ಮಾಡುತ್ತಲೇ ಬಂದಿದ್ದಾರೆ, ಆದರೆ ಜನಸಾಮಾನ್ಯರ ಮನದಲ್ಲಿ ಆಳವಾಗಿ ಬೇರುಬಿಟ್ಟು ನೆಟ್ಟಿರುವ ಈ ಸುಳ್ಳು ಅಷ್ಟು ಸುಲಭವಾಗಿ ನಾಶವಾಗುವುದಿಲ್ಲ, ಆದ್ದರಿಂದ ಮತ್ತೆ ಮತ್ತೆ ಆಧುನಿಕ ಸಾಕ್ಷಿಗಳ ಆಧಾರದಲ್ಲಿ ಇದನ್ನು ಮತ್ತೆ ಮತ್ತೆ ಜನರ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ, ಇಂಥ ಹೊಸ ಯತ್ನ ಬಹುಶ್ರುತ ವಿದ್ವಾಂಸರಾದ, ವೃತ್ತಿಯಿಂದ ವೈದ್ಯರಾದ ಶಿವ್ ಶಾಸ್ತ್ರಿಯವರು ಇದೀಗ ಮಾಡಿ ನಮ್ಮ ಮುಂದೆ ವಿಚಾರ ಮಂಥನಕ್ಕೆ ತೆರೆದಿಟ್ಟಿದ್ದಾರೆ, ಈ ಕೃತಿಯ ಹೆಸರು- 'ಟಿಯರಿಂಗ್ ಡೌನ್ ದಿ ಆರ್ಯನ್ ಇನ್ವೇಶನ್ ಮಿತ್' ಇದರಲ್ಲಿ ೧೫ ಅಧ್ಯಾಯಗಳಿದ್ದು ಒಂದಕ್ಕೊಂದು ಪೂರಕವೂ ಮುಂದಿನ ದಾರಿಯನ್ನು ತೋರುವಂಥವೂ ಆಗಿವೆ, ಅಲ್ಲಲ್ಲಿ ಓದುಗರಲ್ಲಿ ಹುಟ್ಟುವ ಶಂಕೆಗಳಿಗೆ ಅಲ್ಲೇ ಪರಿಹಾರ ತೋರಿಸುತ್ತವೆ. ಯೂರೋಪ್ ಭಾಷಾ ವಿದ್ವಾಂಸರು ಮೊದಲು ಆರ್ಯ ಸಿದ್ಧಾಂತವನ್ನು ಭಾರತದಲ್ಲಿ ಭಾಷೆಯ ಚಲನೆಗೆ ಸಂಬಂಧಿಸಿದಂತೆ ಪ್ರಯೋಗಿಸಿದರು, ಅಲ್ಲದೇ ಭಾರತಕ್ಕೆ ಮೊದಲು ಬಂದು ಸ್ಥಾಪಿತವಾದುದು ಸಂಸ್ಕೃತವೆಂದೂ ಅದು ಆರ್ಯ ಭಾಷೆ ಎಂದೂ ಇದು ಇಲ್ಲಿದ್ದ ದ್ರಾವಿಡ ಭಾಷೆಗಳನ್ನು ಮೂಲೆಗೆ ತಳ್ಳಿತು ಎಂದೂ ಸುಳ್ಳಿನ ಕತೆ (ಮಿತ್)ಕಟ್ಟಿದರು. ಈ ಭಾಷೆ ಯೂರೋಪ್ ನಿಂದ ಇಲ್ಲಿಗೆ ಬಂದಿದ್ದು ಹೇಗೆ? ಗಾಳಿಯಲ್ಲಿ ತೇಲಿ ಬರಲು ಸಾಧ್ಯವಿಲ್ಲ, ಹಾಗಾಗಿ ಅದನ್ನು ಒಂದು ಮೂಲದ ಜನ ಸಮುದಾಯ ವಲಸೆ ಬರುವಾಗ ತನ್ನೊಂದಿಗೆ ತಂದಿತೆಂದು ಕತೆ ಕಟ್ಟಿದರು, ಹಾಗೆ ಆ ಸಮುದಾಯ ವಲಸೆ ಬಂದ ಮಾರ್ಗವನ್ನು ಕೂಡ ರೇಖಿಸಿ ತೋರಿಸಿದರು, ಅವರು ಯೂರೋಪ್ ನಿಂದ ಮಧ್ಯಪ್ರಾಚ್ಯವನ್ನು ಹಾಯ್ದು ಅಲ್ಲಿಂದ ಕಂದಹಾರ್ ಮೂಲಕ ಸಿಂಧೂ ನದೀ ಪಾತ್ರದ ಬಳಿಯಲ್ಲಿ ನೆಲೆ ನಿಂತು ತಮ್ಮ ನಾಗರಿಕತೆಯನ್ನು ಸ್ಥಾಪಿಸಿ-ಸಿಂಧೂ ಬಯಲಿನ ನಾಗರಿಕತೆ- ಅನಂತರ ಇಂದಿನ ಭಾರತದ ವಾಯವ್ಯ ಭಾಗದಿಂದ ಭಾತರದೊಳಗೆ ಬಂದರು ಎಂದು ಬಿಂಬಿಸಿದರು, ಮೇಲ್ನೋಟಕ್ಕೆ ಇದು ಇರಬಹುದೇನೋ ಯಾಕೆಂದರೆ ಅವರು ಕಟ್ಟಿದ ಸುಳ್ಳಿಗೆ ಅಲ್ಲಲ್ಲಿ ಸಾಕ್ಷಿಗಳಿವೆ, ಕುರುಹುಗಳಿವೆಯಲ್ಲಾ ಅನಿಸುತ್ತದೆ, ಇದನ್ನೇ ಅವರು ಆಧುನಿಕ ಶಿಕ್ಷಣದಲ್ಲಿ ಎಲ್ಲ ಹಂತಗಳಲ್ಲೂ ತುರುಕಿ ಒಂದೇ ಸುಳ್ಳನ್ನು ಸಾವಿರಾರು ಬಾರಿ ಹೇಳಿ, ಸಾವಿರಾರು ಬಾಯಿಂದ ಹೇಳಿಸಿ ನಿಜ ಅನ್ನುವಂತೆ ಮಾಡಿಬಿಟ್ಟಿದ್ದಾರೆ, ಇರಬಹುದು, ಆ ಕಾಲಕ್ಕೆ ಲಭ್ಯವಿದ್ದ ವೈಜ್ಞಾನಿಕ ಅಥವಾ ತಾರ್ಕಿಕ ಆಧಾರದಲ್ಲಿ ಸಾಧ್ಯವಾದುದೇ ಅಷ್ಟು ಅಂದುಕೊಂಡರೂ ನಾವು ಇಂದು ಇಂದಿನ ತಾರ್ಕಿಕ ಹಾಗೂ ವೈಜ್ಞಾನಿಕ ಆಧಾರದಲ್ಲಿ ಇದು ಇಂದು ಸುಳ್ಳಾಗಿದೆ ಎಂದು ಭಾವಿಸಲು ಸಿದ್ಧವಿಲ್ಲದಿರುವುದು ಅಧ್ಯಯನಕ್ಕೂ ಗಂಭೀರ ಸಂಶೋಧನೆಗೂ ಮಾಡುವ ಅಪಚಾರವಾಗುತ್ತದೆ, ಇಂಥ ಸಾಕ್ಷಿ- ಪುರಾವೆಗಳನ್ನೂ ಹಿಂದಿನ ಕಟ್ಟು ಕತೆಯಲ್ಲಿನ ವಿರೋಧಾಭಾಸಗಳನ್ನು ಈ ಕೃತಿ ಕಣ್ಣಿಗೆ ರಾಚುವಂತೆ ಕಾಣಿಸುತ್ತದೆ.
Wednesday, 27 August 2025
ಶಾಸನಗಳ ಅಧ್ಯಯನಕ್ಕೆ ಪ್ರೇರಕ
ನಮ್ಮ ದೇಶದಲ್ಲಿ ಶಾಸನಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದರೂ ಅವುಗಳನ್ನು ಕುರಿತ ಶಾಸ್ತ್ರೀಯ ಅಧ್ಯಯನ ಶುರುವಾದುದು ಎರಡು ಶತಮಾನಗಳಿಂದ ಈಚೆಗೆ. ೧೭೮೪ರಲ್ಲಿ ವಿಲಿಯಂ ಜೋನ್ಸ್ ಎಂಬ ಬ್ರಿಟಿಷ್ ವಿದ್ವಾಂಸ ಶಾಸನಗಳನ್ನು ಮೊದಲ ಬಾರಿ ಅಧ್ಯಯನಕ್ಕೆ ಒಳಪಡಿಸಿದ. ಅನಂತರ ಪ್ರಿನ್ಸೆಪ್ ಎಂಬಾತ ೧೮೩೬ರಲ್ಲಿ ಅಶೋಕನ ಶಿಲಾಶಾಸನಗಳನ್ನು ಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಿದ. ಅನಂತರ ೧೮೭೨ರಲ್ಲಿ ಇಂಡಿಯನ್ ಆಂಟಿಕ್ವೆರಿ ಎಂಬ ವಿದ್ವತ್ ಪತ್ರಿಕೆ ಭಾರತೀಯ ಜ್ಞಾನ ಪರಂಪರೆ ಕುರಿತ ಅಧ್ಯಯನಕ್ಕೆ ಮಹತ್ವ ಕೊಟ್ಟ ಮೇಲೆ ಶಾಸನಗಳ ಅಧ್ಯಯನಕ್ಕೆ ವೇಗ ದೊರೆಯಿತು. ಇದರ ಪರಿಣಾಮವಾಗಿ ಶಾಸನಗಳ ಅಧ್ಯಯನಕ್ಕೆಂದೇ ವಿಶೇಷವಾಗಿ ಎಪಿಗ್ರಾಪಿಯಾ ಇಂಡಿಕಾ ಸಂಪುಟಗಳು ಹೊರಬರುವಂತಾಯಿತು. ಅನಂತರ ೧೯೨೦ರ ಅನಂತರ ಈ ಸಂಪುಟಗಳು ಇಂಡಿಯನ್ ಆಂಟಿಕ್ವೆರಿಯ ಹಿಡಿತದಿಂದ ಹೊರಬಂದು ಸ್ವತಂತ್ರವಾಗಿ ಪ್ರಕಟವಾಗುವಂತಾಯಿತರೀ ಸಂಪುಟಗಳು ಪ್ರಾದೇಶಿಕ ಮಟ್ಟದಲ್ಲಿ ಇಂಥ ಸಂಪುಟಗಳ ಸಂಪಾದನೆ ಶುರುವಾಯಿತು. ಇವೆಲ್ಲ ಬೆಳವಣಿಗೆಯಿಂದ ಶಾಸನಗಳ ಮಹತ್ವ ಎಲ್ಲ ಕಡೆ ವೇಗವಾಗಿ ಹರಡಿತಲ್ಲದೇ ಜನರಲ್ಲೂ ಜಾಗೃತಿ ಮೂಡುವಂತಾಯಿತು. ಆದರೆ ಇವೆಲ್ಲ ಆರಂಭಿಕ ಶಾಸನ ಅಧ್ಯಯನಗಳಲ್ಲಿ ಮೂಲ ಶಾಸನಗಳ ಪಠ್ಯ ಸಂಗ್ರಹಣೆ, ಸಂಪಾದನೆ, ಅವುಗಳ ಇಂಗ್ಲಿಷ್ ಅನುವಾದ, ಅರ್ಥ, ಐತಿಗಾಸಿಕ ಮಾಹಿತಿಗಳನ್ನು ಆಧರಿಸಿ ಇತಿಹಾಸ ರಚಿಸುವತ್ತ ಗಮನ ಕೊಡಲಾಯಿತು. ಇದೇ ಬೆಳವಣಿಗೆ ಈಚಿನವರೆಗೂ ಮುಂದುವರೆದುಕೊಂಡು ಬಂದಿದೆ. ಆದರೆ ಈ ಅಧ್ಯಯನವನ್ನು ಆಧುನಿಕ ಸಮಾಜದ ದೃಷ್ಟಿಕೋನಕ್ಕೆ ಅಳವಡಿಸುವ ಯತ್ನ ನಡೆಯತೊಡಗಿದೆ. ಕನ್ನಡ ಶಾಸನಗಳಂತೂ ಈ ವಿಷಯದಲ್ಲಿ ಸಾಕಷ್ಟು ಮುಂದೆ ಹೋಗಿವೆ, ಕನ್ನಡ ಶಾಸನಗಳ ಸಂಗ್ರಹಣೆ ಮತ್ತು ಅಧ್ಯಯನ ಇದೇ ಸಮಯದಲ್ಲಿ ಬ್ರಿಟಿಷ್ ಅಧ್ಯಯನಕಾರರಿಂದ ಶುರುವಾಯಿತು, ಇವರಲ್ಲಿ ೧೮೦೦ರ ಅವಧಿಯಲ್ಲಿ ಇಂಥ ಕೆಲಸ ಆರಂಭಿಸಿದ ಕರ್ನಲ್ ಮೆಕಂಜೆ, ಫ್ಲೀಟ್, ರೈಸ್ಮೊದಲಾದವರು ದುಡಿದರು, ಇವರ ಅಧ್ಯಯನ ವಿಶ್ವವಿದ್ಯಾನಿಲಯಗಳ ಮೂಲಕ ಗಂಭೀರ ಅಧ್ಯಯನಕ್ಕೆ ಒಳಪಟ್ಟವು. ಕರ್ನಾಟಕ ಇತಿಹಾಸ ಅಕಾಡೆಮಿಇದಕ್ಕೆ ಪೂರಕವಾಗಿ ದುಡಿಯಿತು. ಪಾಶ್ಚಾತ್ಯ ವಿದ್ವಾಂಸರ ಜೊತೆಗೆ ಸ್ಥಳೀಯ ವಿದ್ವಂಸರಾದ ಶ್ರೀಕಂಠಶಾಸ್ತ್ರಿ, ಎಂ.ಎಚ್. ಕೃಷ್ಣ, ಆರ್. ನರಸಿಂಹಾಚಾರ್ ಮೊದಲಾದವರಿಂದ ಶಾಸನ ಅಧ್ಯಯನ ವೇಗ ಪಡೆಯಿತು. ಪರಿಣಾಮವಾಗಿ ಕನ್ನಡದ ಮೊದಲ ಶಾಸನವೆಂದು ತಿಳಿಯಲಾಗಿದ್ದ ಹಲ್ಮಿಡಿ ಶಾಸನವನ್ನು ಸ್ಥಳೀಯ ವಿದ್ವಂಸರೇ ಪತ್ತೆ ಹಚ್ಚುವಂತಾಯಿತು. ೧೯ನೆಯ ಶತಮಾನದ ಮೊದಲಾರ್ಧವನ್ನು ಕನ್ನಡ ಶಾಸನಗಳ ಅಧ್ಯಯನದ ಸುವರ್ಣಕಾಲ ಎಂದು ಕರೆಯಬಹುದಾದ ಸಮಯವಾಯಿತು. ಅಲ್ಲಿಂದ ಇಲ್ಲಿಯವರೆಗೂ ಕನ್ನಡ ಶಾಸನಗಳು ಬಗೆಬಗೆಯ ಅಧ್ಯಯನಕ್ಕೆ ಒಳಗಾಗುತ್ತ ಬಂದಿವೆ. ಇಂಥ ಅಧ್ಯಯನ ಹೇಗೆ ಹೊಸ ರೂಪ ಪಡೆಯುತ್ತಿದೆ ಎಂಬುದಕ್ಕೆ ಇದೀಗ ಪ್ರಕಟವಾಗಿರುವ ಸಂದೀಪ್ ಬಾಲಕೃಷ್ಣನ್ ಅವರ ಈ ಕೃತಿ ಉತ್ತಮ ಉದಾಹರಣೆಯಾಗಿದೆ.
ಸದ್ಯ ನನ್ನ ಮುಂದೆ "ಸ್ಟೋರೀಸ್ ಫ಼್ರಂ ಇನ್ಸಕ್ರಿಪ್ಷನ್ಸ್" ಎಂಬ ಕರ್ನಾಟಕದ ಶಾಸನ ಕುರಿತ ಕೃತಿಯೊಂದು ಹೊಸ ರೀತಿಯಲ್ಲಿ ನಮ್ಮ ಶ್ರೀಮಂತ ಶಾಸನಗಳ ಶ್ರೀಮಂತ ಸಂಸಕೃತಿಯ ತೆಗಳನ್ನು ಬಿಚ್ಚಿಡುತ್ತಿದೆ. ಇದು ಹೊಸದಾಗಿ ಏನು ಹೇಳುತ್ತಿದೆ? ಇಲ್ಲಿರುವ ಶಾಸನಗಳೆಲ್ಲ ಎಪಿಗ್ರಾಪಿಯಾ ಇಂಡಿಕದಲ್ಲಿ ಪ್ರಕಟವಾದವೇ, ಅನೇಕ ಕಡೆ ರ್ಚೆಗೆ ಬಂದವೇ ಅನ್ನುವುದು ನಿಜವಾದರೂ ಇಲ್ಲಿನ ಶಾಸನಗಳ ಸಂಗತಿಯನ್ನು ಇದು ನಮ್ಮ ಮುಂದೆ ಚಿಂತನೆಗೆ ತಂದಿರುವ ರೀತಿ ಹೊಸದು. ಹೊಸ ದೃಷ್ಟಿಯಿಂದ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಶತಮಾನಗಳ ಹಿಂದಿನ ಶಾಸನಗಳ ಕಾಲದಲ್ಲಿ ಯಾವ ರೀತಿಯಲ್ಲಿ ಬಿತ್ತರವಾಗಿದೆ. ಅದರ ಮೂಲಕ ಭಾರತೀಯ ಸಾಂಸ್ಕೃತಿಕ ಮನಸ್ಸು ಹೇಗೆ ಬೆಳೆದಿದೆ. ಇದನ್ನು ಪಾಶ್ಚಾತ್ಯರು ಕಂಡ ಬಗೆ ಹೇಗೆ ಎಂಬುದನ್ನು ನಮಗೆ ತಿಳಿಸುತ್ತದೆ. ನಮ್ಮ ಮುಂದೆ ಇಂದು ಕಾಣಿಸುತ್ತಿರುವ ಸಹಬಾಳ್ವೆಯ ವಿಚಾರ ಶಾಸನಗಳನ್ನು ಅವಲೋಕಿಸಿದರೆ ಖಂಡಿತ ಹೊಸದಲ್ಲವೆನಿಸುತ್ತದೆ. ನಮ್ಮ ಸಂಪ್ರದಾಯದಲ್ಲಿ ಒಂದೇ ಕುಟುಂಬದ ಸದಸ್ಯರು ವಿವಿಧ ಸಂಪ್ರದಾಯವನ್ನು ಅನುಸರಿಸಿದ್ದು, ಒಬ್ಬನೇ ವ್ಯಕ್ತಿ ವಿವಿಧ ಸನ್ನಿವೇಶದಲ್ಲಿ ವಿವಿಧ ಮತ ಧರ್ಮ ಅನುಸರಿಸಿದ್ದು ಹಾಗೂ ಸ್ವತಃ ಒಂದು ಸಂಪ್ರದಾಯವನ್ನು ಅನುಸರಿಸುತ್ತ ಮತ್ತೊಂದು ಸಂಪ್ರದಾಯಕ್ಕೆ ಸಾಕಷ್ಟು ಉತ್ತೇಜನ ಕೊಟ್ಟಿದ್ದು, ಅದರಿಂದ ಯಾವುದೇ ರೀತಿಯ ಸಂಘರ್ಷ ಉಂಟಾಗದಿದ್ದುದು ನಮ್ಮ ಗಮನ ಸೆಳೆಯುತ್ತದೆ. ಜೊತೆಗೆ ಈ ಕೃತಿ ಇಂಥ ಸಂಗತಿಗಳನ್ನು ಉಲ್ಲೇಖಿಸುವಾಗ ಸಾಂದರ್ಬಿಕವಾಗಿ ನಾವು ಇಂಥ ವಿಷಯವನ್ನು ಈಗ ಯಾವ ರೀತಿ ಕಾಣುತ್ತಿದ್ದೇವೆಂದು ಉಲ್ಲೇಖಿಸಿ ಓದುಗರು ಚಿಂತಿಸುವಂತೆ ಮಾಡಿ ಕೈಬಿಡುತ್ತಾರೆ. ಇದಕ್ಕೆ ಯಾವುದೇ ರೀತಿಯ ತೀರ್ಪು ಕೊಡುವುದಿಲ್ಲ, ತಮ್ಮ ಅಭಿಪ್ರಾಯವನ್ನು ಎಲ್ಲಿಯೂ ಹೇರುವುದಿಲ್ಲ ಎಂಬ ಕಾರಣಕ್ಕೆ ಇದು ಮುಖ್ಯವಾಗುತ್ತದೆ.
ಇತಿಹಾಸ, ಶಾಸನಗಳಲ್ಲಿ ವಿಶೇಷ ಆಸಕ್ತಿ ಇರುವ ಇವರು ಟಿಪ್ಪೂ ಸುಲ್ತಾನ್, ಭಾರತವರ್ಷ, ಆಕ್ರಮಣಕಾರರ ಇತಿಹಾಸಗಳ ಕುರಿತು ಹತ್ತಾರು ಕೃತಿಗಳನ್ನು ರಚಿಸಿ ಹೆಸರಾಗಿದ್ದಾರೆ, ಇತಿಹಾಸವೆಂದರೆ ಎಂದೋ ಆಗಿ ಹೋದ ವಿಷಯ ವಿವರವಲ್ಲ, ಅದು ಸದಾ ಪ್ರಸ್ತುತ ಎಂಬುದನ್ನು ತಮ್ಮ ಬರೆಹಗಳ ಮೂಲಕ ಚರಿತ್ರೆ ಜೀವಂತ ಎಂಬುದನ್ನು ತೋರಿಸಿಕೊಡುವುದು ಇವರ ವಿಶೇಷ. ಪ್ರಸ್ತುತ "ಸ್ಟೋರೀಸ್ ಫ್ರಂ ಇನ್ಸಕ್ರಿಪ್ಷನ್ಸ್" ಕೃತಿಯಲ್ಲಿ ಅವರು ವಿಶೇಷವಾಗಿ ಕನ್ನಡದ ಪ್ರಮುಖ ಶಾಸನಗಳ ಹಿನ್ನೆಲೆಯಲ್ಲಿ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಒಳನೋಟಗಳನ್ನು ತೆರೆದಿಟ್ಟಿದ್ದಾರೆ. ಇದರ ಅವಲೋಕನ ಇಲ್ಲಿದೆ. ಪ್ರಸ್ತುತ ಕೃತಿ ಶಾಸನಗಳ ಅಧ್ಯಯನ ಇತಿಹಾಸದ ವಿವರಗಳ ಜೊತೆಜೊತೆಗೆ ಜನಸಾಮಾನ್ಯರಲ್ಲಿ ಬಳಕೆಯಲ್ಲಿರುವ ಭಾಷಾ ಪ್ರಯೋಗ, ಆಚಾರ ವಿಚಾರಗಳ ಮಾಹಿತಿಗಳ ಉಲ್ಲೇಖಗಳ ಬಗ್ಗೆಯೂ ಮಾಹಿತಿ ಮತ್ತು ವಿಶ್ಲೇಷಣೆ ಕೊಡುತ್ತ ಪ್ರಾಚೀನ ಶಾಸನಗಳ ಸಮಕಾಲೀನತೆಯನ್ನು ಓದುಗರ ಮುಂದಿಡುತ್ತದೆ. ಇಂಥ ಪ್ರಯತ್ನವನ್ನು ಹಿಂದೆಯೂ ಪರಮಶಿವ ಮೂರ್ತಿ, ಪಿ.ವಿ. ಕೃಷ್ಣ ಮೂರ್ತಿ, ಕೃಷ್ಣರಂಥ ಕೆಲವು ಶಾಸನ ತಜ್ಞರು ನಮ್ಮಲ್ಲಿ ಮಾಡಿದ್ದಾರೆ. ನಿದರ್ಶನಕ್ಕೆ ನೋಡುವುದಾದರೆ ಇಲ್ಲಿ ಕನ್ನಡ ಮತ್ತು ತಮಿಳುನಾಡುಗಳಲ್ಲಿ ಬಳಕೆಯಲ್ಲಿರುವ 'ಮೂದೇವಿ' ಬೈಗುಳ ಪದ ಸಭ್ಯದ್ದಾದರೂ ಅದರ ಅರ್ಥ ದಡ್ಡ, ಹೆಡ್ಡ, ಮಾತು ಬಾರದವಳು, ಮಂದಮತಿ, ಕುರೂಪಿ ಇತ್ಯಾದಿ ಅರ್ಥ ಬರುವಂತೆ ಬಳಸಲಾಗುತ್ತದೆ, ಇದು ಹೆಣ್ಣುಮಕ್ಕಳನ್ನು ಕುರಿತು ಬಯ್ಯುವಾಗ ವಿಶೇಷವಾಗಿ ಬಳಕೆಯಾಗುತ್ತದೆ. ವಾಸ್ತವವಾಗಿ ಈ ಪದದ ಬಗ್ಗೆಬಹಳಷ್ಟು ಜನರಿಗೆ ತಿಳಿದೇ ಇಲ್ಲ, ಆದರೂ ಬಳಕೆ ಅವ್ಯಾಹತವಾಗಿ ಮಾಡುತ್ತಲೇ ಇರುತ್ತಾರೆ, ಈ ಪದ ಪದ್ಮಪುರಾಣದಲ್ಲಿ ಮೊದಲಬಾರಿಗೆ ದೊರೆಯುತ್ತದೆ. ಈ ಮೂದೇವಿ ಮೂಲತಃ ದುರ್ಗಾದೇವಿಯ ಮೂಲ ರೂಪ, ಆಕೆ ಸಮುದ್ರಮಂಥನ ಕಾಲದಲ್ಲಿ ಮೊದಲು ಉದ್ಭವಿಸಿದವಳು, ಈ ದೃಷ್ಟಿಯಿಂದ ಈಕೆ ಲಕ್ಷ್ಮಿಗಿಂತ ಹಿರಿಯಳು, ಆಕೆ ದಡ್ಡಿ, ಕುರೂಪಿ ಆಗಿದ್ದವಳೆಂಬ ಮಾಹಿತಿ ದೊರೆಯುತ್ತದೆ. ಜೊತೆಗೆ ಈ ಮೂದೇವಿಯೇ ಜ್ಯೇಷ್ಠಾ ದೇವಿ, ಇವಳ ಪ್ರಾಚೀನ ಉಲ್ಲೇಖ ತಮಿಳುನಾಡಿನ ಮಧುರೈಯಲ್ಲಿ ಪ್ರಸ್ತುತ ಶಕೆ ೭೭೩-೭೪ರ ಅವಧಿಯ ಸತ್ತನ ಗಣಪತಿ ಎಂಬ ಸೇನಾಧಿಪತಿಯ ಹೆಂಡತಿ ನಕ್ಕನ್ ಕೋರಿ ಕಟ್ಟಿಸಿದ ದೇವಸ್ಥಾನದ ಗೋಡೆಯ ನೇಲೆ ದೊರೆಯುತ್ತದೆಂದೂ ಈ ಜ್ಯೇಷ್ಠಾ ದೇವಿ ತಮಿಳುನಾಡಿನ ಜನಪ್ರಿಯ ದೇವತೆ ಆಗಿದ್ದಳೆಂದು ತಿಳಿದುಬರುತ್ತದೆ. ಇಂಥ ಕುತೂಹಲಕಾರಿ ವಿಷಯಗಳು ಇದರಲ್ಲಿನ ಎಲ್ಲ ೧೬ ಲೇಖನಗಳಲ್ಲೂ ದೊರೆಯುತ್ತದೆ. ಇದರ ವಿಶೇಷವೆಂದರೆ ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ಸಾಂಸ್ಕೃತಿಕ ಕೊಳುಕೊಡುವಿಕೆಯನ್ನು ಕಣ್ಣಿಗೆ ಕಟ್ಟುವಂತೆ ದಾಖಲೆ ಸಮೇತ ಮನಗಾಣಿಸುವುದು, ಇದರಿಂದ ಪರಸ್ಪರ ಬಾಂಧವ್ಯ ವೃದ್ಧಿಯ ಜೊತೆಗೆ ನಮ್ಮ ಪರಂಪರೆಯ ಹಿರಿಮೆ ಕೂಡ ಅರಿವಾಗುತ್ತದೆ. ಶಾಸನಗಳು ಎಂದೋ ಆಗಿ ಹೋದ ಘಟನೆಗೆ ಸಂಬಂಧಿಸಿದ್ದಲ್ಲ, ಅವು ಇಂದಿಗೂ ಹೇಗೆ ಪ್ರಸ್ತುತ ಎಂಬುದು ಕೂಡ ಅರಿವಾಗುವ ಜೊತೆಗೆ ನಮ್ಮ ಗಮನಕ್ಕೆ ಬಂದ ಶಾಸನಗಳನ್ನು ಇದೇ ದೃಷ್ಟಿಯಲ್ಲಿ ಗಮನಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.
ಶಾಂತಿ, ಸಹಬಾಳ್ವೆಯ ಬಗ್ಗೆ ಹೆಬ್ಬಾಳೆಯ ಶಾಸನ ಕೊಡುವ ವಿವರ ಕುರಿತ ಲೇಖನ, ಗುಜರಾತಿನ ಸಂಜನ ಮತ್ತು ಭಿಲ್ಲಮ ದೇವನ ದೇವಾಲಯಗಳ ಹಾಗೂ ಕರ್ನಾಟಕದ ಸಂಬಂಧ ಕುರಿತ ಆಸಕ್ತಿಕರ ವಿವರಗಳು ನಮ್ಮ ಗಮನ ಸೆಳೆಯುತ್ತವೆ, ಈ ಕಾರಣದಿಂದ ಪ್ರಸ್ತುತ ಕೃತಿ ಪ್ರಾಚೀನ ಶಾಸನಗಳನ್ನು ಇಂದಿನ ಸಂದರ್ಭದಲ್ಲಿ ನಾವು ಅರಿತು ಅವಡಿಸಿಕೊಳ್ಳಬೇಕಾದ ಕ್ರಮದ ಬಗ್ಗೆ ಸರಳವಾಗಿ ತಿಳಿಸಿಕೊಡುವ ಕಾರಣಕ್ಕೆ ಬಹಳ ಮಹತ್ವದ್ದು ಹಾಗೂ ಇದುವರೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಪತ್ತೆಯಾದ ಶಾಸನಗಳ ಸಂಖ್ಯೆಯೇ ೪೦ ಸಾವಿರ ದಾಟುತ್ತವೆ, ಇವುಗಳನ್ನು ಇಂಥ ಹೊಸ ದೃಷ್ಟಿಯಲ್ಲಿ ಮತ್ತೆ ಅಧ್ಯಯನಕ್ಕೊಳಪಡಿಸುವ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ಇಷ್ಟೆಲ್ಲ ಆಸಕ್ತಿದಾಯಕ ಶಾಸನಗಳ ಬಗ್ಗೆ ಈಚೆಗೆ ಜನರಲ್ಲಿ ಆಸಕ್ತಿ ಮತ್ತೆ ಕಡಿಮೆಯಾಗುತ್ತಿದ್ದು, ಇಂಥ ಸಕಾಲಿಕ ಎನಿಸುವ ಮಾಹಿತಿ ಕೊಡುವ ಮತ್ತಷ್ಟು ಕೃತಿಗಳು ಎಲ್ಲ ಕಡೆಯಿಂದ ಹೊರಬರುವಂತಾದರೆ ಶಾಸನಗಳ ಅಧ್ಯಯನಕ್ಕೆ ಮತ್ತೆ ಸುವರ್ಣಯುಗ ಪ್ರಾಪ್ತವಾಗಬಹುದೆನಿಸುತ್ತದೆ.
ಇಂಥ ಕೃತಿಯನ್ನು ಪ್ರಕಟಿಸಿದ ಹುಬ್ಬಳ್ಳಿಯ ಸುಬ್ಬು ಪ್ರಕಾಶನದ ಮಲೀಕರಿಗೂ ಲೇಖಕರಿಗೂ ಕನ್ನಡ ಸಾಹಿತ್ಯ ಸಂಸ್ಕೃತಿ ಪ್ರಿಯರು ಸದಾ ಋಣಿಗಳು.
ಪುಸ್ತಕ ವಿವರ -
ಸ್ಟೋರೀಸ್ ಫ್ರಂ ಇನ್ಸ್ ಕ್ರಿಪ್ಷನ್ಸ್,
ಲೇ- ಸಂದೀಪ್ ಬಾಲಕೃಷ್ಣನ್
ಸುಬ್ಬು ಪಬ್ಲಿ ಕೇಶನ್ಸ್, ಹುಬ್ಬಳ್ಳಿ, ಮೊದಲ ಮುದ್ರಣ- ೨೦೨೩,
ಪುಟಗಳು- ೧೫೬+೨೦ ವರ್ಣರಂಜಿತ ಪುಟಗಳು, ಬೆಲೆ-ರೂ೩೯೯
Saturday, 23 August 2025
ಜೀವನಕ್ಕೆ ಘಮಲು ಹತ್ತಿಸುವ ಕೃತಿ
ಪ್ರಪಂಚದ ಎಲ್ಲ ವಸ್ತುಗಳೂ ಮೊದಲು ಕಾಣಿಸಿಕೊಂಡಿದ್ದೇ ತಮಿಳುನಾಡಲ್ಲಿ ಅನ್ನುವ ಆ ಜನ ಒಮ್ಮೆ ನಮ್ಮ ಪಡ್ಡು ಅಥವಾ ಗುಂಡುಪಂಗಲವನ್ನು ಪಡ್ಡು ಎಂದು ಕರೆದುಕೊಂಡು ಮಾರುತ್ತಿದ್ದರು ನಾನು ಇದಕ್ಕೆ ಗುಂಡುಪಂಗುಲ ಅನ್ನುತ್ತಾರೆ ಅಂದ್ರೆ ಇದು ತಮಿಳು ತಾನ್ ಅನ್ನುತ್ತಿದ್ದರು ನಾನು ನಿಮ್ಮ ಬುದ್ಧಿಯೇ ಇಷ್ಟು ಅಂದುಕೊAಡು ಬಂದಿದ್ದೆ ಈಚೆಗೆ ಎಲ್ಲೋ ದೋಸೆಯೂ ತಮಿಳಿಂದ ಬಂದಿದೆ ಅನ್ನುವ ಲೇಖನ ಓದಿದ್ದೆ, ಇದಕ್ಕೆ ಸಿದ್ಧ ಉತ್ತರವೆಂಬಂತೆ ಈ ಪುಸ್ತಕ ದಾಖಲೆ ಕೊಟ್ಟಿದೆ. ದೋಸೆಗೆ ಕನ್ನಡದಲ್ಲಿ ಕನಿಷ್ಠ ಆರು ಶತಮಾನಗಳ ಇತಿಹಾಸವಿದೆ ಅನ್ನುತ್ತದೆ ಇದು, ಮಂಗರಸನ ಸೂಪ ಶಾಸ್ತ್ರವೊಂದೇ ಸಾಕು ಕರ್ನಾಟಕದ ಆಹಾರ ಇತಿಹಾಸ ತೋರಿಸಲು. ಜೊತೆಗೆ ವಡ್ಡಾರಾಧನೆಯಂಥ ಕೃತಿಗಳಿವೆ. ಅದಿರಲಿ, ಸಾಮಾನ್ಯವಾಗಿ ನಮ್ಮಲ್ಲಿ ಹೂವುಗಳಲ್ಲಿ ಮಲ್ಲಿಗೆ, ಹಣ್ಣುಗಳಲ್ಲಿ ಮಾವು ಇರುವಂತೆ ದೋಸೆಗಳಲ್ಲಿ ಮಸಾಲೆ ಅನ್ನುತ್ತದೆ ಇದು. ನಿಜ. ಭಗವದ್ಗೀತೆಯಲ್ಲಿ ನಿಸರ್ಗದ ಯಾವುದೇ ಶ್ರೇಷ್ಠ ವಸ್ತುಗಳಲ್ಲಿ ಅವೆಲ್ಲ ತಾನೇ ಅನ್ನುತ್ತಾನೆ ಕೃಷ್ಣ. ಅದಕ್ಕಿಂತ ಆತ್ಯಂತಿಕ ವಸ್ತು ಆ ಗುಂಪಿನಲ್ಲಿ ಇರಲಾರದು, ಅವೆಲ್ಲ ಅಂಥವು. ಉದಾಹರಣೆಗೆ ಮಾಸಗಳಲ್ಲಿ ತಾನು ಮಾರ್ಗಶೀರ್ಷ ಎಂದೂ ಮತ್ಸ್ಯಗಳಲ್ಲಿ ಮಕರವೆಂದೂ ಆತ ಪಟ್ಟಿಕೊಡುತ್ತ ಹೋಗುತ್ತಾನೆ, ಆ ಕಾಲದಲ್ಲಿ ಮಸಾಲೆ ದೋಸೆ ಇದ್ದಿದ್ದರೆ ಖಂಡಿತ ಆತ ನೀರು ದೋಸೆ, ಕಾಲಿ, ಪ್ಲೇನ್, ಸೆಟ್, ಪೋಡಿ ಮುಂತಾದ ಹತ್ತು ಹಲವು ದೋಸೆ ವೈವಿಧ್ಯಗಳಲ್ಲಿ ದೋಸೆಗಳಲ್ಲಿ ನಾನು ಮಸಾಲೆ ಎಂದೇ ಹೇಳುತ್ತಿದ್ದ. ಅಂಥ ಮಹಿಮೆ ಮಸಾಲೆ ದೋಸೆಯದು. ಆಧುನಿಕ ಕನ್ನಡ ಸಾಹಿತ್ಯದ ಲೇಖಕರಲ್ಲಿ ಬಹುತೇಕ ಎಲ್ಲರೂ ಮಸಾಲೆ ಪ್ರಿಯರೇ, ಡಿವಿಜಿ ಬಿಡಿ, ಅವರು ರಸಾಸ್ವಾದಿಗಳು, ಮಸಾಲೆ ಪ್ರಿಯರು, ಪುತಿನ, ಮೊದಲಾದವರು ಇದರ ಬಗ್ಗೆ ಬರೆದ ಲೇಖನಗಳು ಇಲ್ಲಿ ಸಂಕಲಿತವಾಗಿವೆ. ಕನ್ನಡ ಸಾಹಿತಿಗಳಲ್ಲಿ ಯಾರೆಲ್ಲ ತಿಂಡಿ ಪೋತರು ಎಂಬ ದಾಖಲೆ ವಿದ್ಯಾರ್ಥಿಭವನದಲ್ಲಿ ಫೋಟೋ ಸಮೇತ ದೊರೆಯುತ್ತದೆ, ಪುರುಸೊತ್ತಾದಾಗ ಅಲ್ಲಿ ಹೋಗಿ ಕಣ್ಣು ತುಂಬಿಕೊಳ್ಳಿ. ಇನ್ನೊಂದು ಸಂಗತಿ ಎಂದರೆ ಇದರ ಮುಖಪುಟದಲ್ಲಿ ಒಂದಲ್ಲ, ಎರಡಲ್ಲ, ಒಂದು ದೊಡ್ಡ ಫೋಟೋ ಸೇರಿ ಒಟ್ಟೂ ಎಂಟು ಬಾಯಲ್ಲಿ ನೀರೂರಿಸುವ ಮಸಾಲೆ ದೋಸೆಗಳ ಚಿತ್ರ ಹಾಕಿದ್ದಾರೆ, ನೋಡಿದರೆ ಎಲ್ಲಾದರೂ ಹೋಗಿ ಮಸಾಲೆ ತಿಂದೇ ಬರಬೇಕು ಅನಿಸುವಂತಿದೆ ಇದು, ಹಾಗೆ ಹೊಟ್ಟೆ ಉರಿಸುವಂತಿದೆ ಇದು.
ಆದರೆ ಯಾಕೋ ಕುವೆಂಪು ಅವರು ಮಸಾಲೆ ಬಗ್ಗೆ ಎಲ್ಲಿಯೂ ದಾಖಲಿಸಿದಂತೆ ಕಾಣುವುದಿಲ್ಲ. ಬೆಗಳೂರಲ್ಲಿ ಈಗಂತೂ ತರಹೇವಾರಿ ಆಹಾರದ ಹೋಟೆಲ್ ಗಳಿವೆ. ಒಂದೆರಡು ಕಡೆ ನೂರಕ್ಕೂ ಹೆಚ್ಚು ದೋಸೆ ದೊರೆಯುತ್ತದೆಂಬ ಫಲಕ ನೋಡಿದ್ದೇನೆ, ಅದು ದೋಸೆ ಕ್ಯಾಂಪ್. ಕೆಲವು ಕಡೆ ಮಸಾಲೆ ದೋಸೆಗೇ ಪ್ರಾಮುಖ್ಯ. ಒಂದಕ್ಕಿಂತ ಒಂದು ಶ್ರೇಷ್ಠ, ರುಚಿ. ಕೆಲವಂತೂ ಮಸಾಲೆ ಬ್ರಾಂಡ್ ಬೆಳೆಸುತ್ತವೆ, ಇದರಲ್ಲಿ ಒಂದೊಂದು ಏರಿಯಾದಲ್ಲಿ ಮಸಾಲೆ ದೋಸೆಯ ಮೊನಾಪಲಿ ಮಾಡಿಕೊಂಡ ಹೋಟೆಲ್ಲುಗಳಿವೆ.ಬೆಂಗಳೂರು ದಕ್ಷಿಣ, ಕಲ್ಲೇಶ್ವರ, ಎಂಟಿಆರ್, ಬೆಂಗಳೂರು ಟಿಫಿನ್ ರೂಂ, ರಾಮೇಶ್ವರ ಕೆಫೆ,ಎಂಗಳೂರು ಕೆಫೆ ಮುಂತಾದ ಪ್ರಸಿದ್ಧ ಹೊಟೇಲ್ಲುಗಳಲ್ಲದೇ ಲಾಲ್ ಬಾಗ್ ರಸ್ತೆ ಗಲ್ಲಿಯ ಸಿದ್ಧಪ್ಪ ಹೊಟೇಲ್, ಸಜ್ಜನ ರಾವ್ ಸರ್ಕಲ್ ನ ಮಾಡ್ರನ್, ಹನುಮಂತನಗರದ ಮಂಗಳ ಮೊದಲಾದವು ಮಸಾಲೆ ದೋಸೆಗೆ ಹೆಸರಾಗಿವೆ, ಮಸಾಲೆಯಲ್ಲೇ ಇವು ತಮ್ಮದೇ ವಿಶಿಷ್ಟ, ಅನನ್ಯ ರುಚಿಯಿಂದ ಹೆಸರಾಗಿವೆ. ಜೊತೆಗೆ ಸಜ್ಜನ ರಾವ್ ಸರ್ಕಲ್ ನ ಫುಡ್ ಸ್ಟ್ರೀಟ್ ಸ್ಪರ್ಧೆಯೋಪಾದಿಯಲ್ಲಿ ಮಸಾಲೆ ಮಾಡುತ್ತದೆ.ನಾನಂತೂ ಲಾಗಾಯ್ತಿನಿಂದ ಫುಡ್ಡೀ, ಹೀಗಾಗಿ ಬೆಂಗಳೂರಿನ ಯಾವ ಯಾವ ಜಾಗದಲ್ಲಿ ಯಾವ ಸಸ್ಯಾಹಾರಿ ಆಹಾರ ಸೊಗಸೆಂದು ಅಲ್ಲೆಲ್ಲ ಹೊತ್ತುಗೊತ್ತಿಲ್ಲದೇ ತೃಪ್ತಿಯಾಗುವಷ್ಟು ಮೆದ್ದು ಬರುವುದು ಸಹಜವೇ ಆಗಿದೆ. ಸದ್ಯ ಕರಣಾಂತರಗಳಿಂದ ಅಂಥ ಕಡೆ ಹೋಗಲಾಗುತ್ತಿಲ್ಲವಾದರೂ ಇದೀಗ ಫುಡ್ ಬ್ಲಾಗರ್ ಗಳಿಂದ ಬೆಂಗಳೂರು ಮಾತ್ರವಲ್ಲದೇ ದೇಶದ ಮೂಲೆ ಮೂಲೆಗಳ ಆಹಾರ ಅವುಗಳು ಎಲ್ಲಿ ಚೆನ್ನಾಗಿವೆ ಎಂಬ ಸಮಗ್ರ ಮಾಹಿತಿ ಸಿಗುವುದನ್ನು ನೋಡಿ ಆನಂದಿಸುತ್ತಿದ್ದೇನೆ, ಜೊತೆಗೆ ಅಂಥ ಆಹಾರ ಸಿಗುವ ವಿವರವಾದ ಪಟ್ಟಿಯನ್ನೇ ಮಾಡಿಟ್ಟುಕೊಂಡು ಅಲ್ಲೆಲ್ಲ ಹೋಗುವ ಅವಕಾಶಕ್ಕಾಗಿ ಕಾಯುತ್ತ ಕೂತಿದ್ದೇನೆ, ಜೀವನದಲ್ಲಿ ಆ ಪಟ್ಟಿಯ ಅನುಭವ ಪಡೆದೇ ಪಡೆಯುವ ಹೆಬ್ಬಯಕೆ ಇದೆ, ಸದ್ಯಕ್ಕೆ ಕಾಲಾಯ ತಸ್ಮೈ ನಮಃ, ಆಹಾರದ ಮಜಾ ಏನೆಂದರೆ ಅದರ ಮುಂದೆ ಎಲ್ಲರೂ ತಲೆ ನಾಗಗಬೇಕು. ಅದು ಅನ್ನಪೂರ್ಣೆ. ದೇವರು, ಅದಕ್ಕಲ್ಲ. ಮಸಾಲೆಯ ಮಜ ಹೇಗಿದೆ ಎಂದರೆ ಸದಾ ಕಾಲ ವ್ಯಾಕರಣ, ಛಂದಸ್ಸು, ಅಲಂಕಾರ ಅನ್ನುತ್ತಾ ಗಂಭೀರ ಸಂಶೋಧನೆಗೆ ಹಾಗು ಲೇಖನಕ್ಕೇ ಜನಿಸಿದ್ದು ಅನ್ನುವಂತಿರುವ ನಮ್ಮ ಟಿ ವಿ ವೆಂಕಟಾಚಲ ಶಾಸ್ತ್ರಿಗಳು. ವಿದ್ವತ್ತಿಗೆ, ಜಾಗತಿಕ ಭಾಷಾ ಪಾಂಡಿತ್ಯ ಕೈವಶ ಮಾಡಿಕೊಳ್ಳಲು, ಅತ್ಯಂತ ಗಂಭೀರ ಅವಧಾನ ಕಲೆಗೆ, ಸರಸ್ವತಿಯ ಆರಾಧನೆಗೆ ಜನ್ಮ ತಳೆದವರೆಂಬಂತಿರುವ ಶತಾವಧಾನಿ ಆರ್ ಗಣೇಶ್ ಅವರಂಥವರೂ ತನ್ನ ಆಕರ್ಷಣೆಗೆ ಬಲಿಯಾಗುವಂತೆ ಮಾಡಿ ಅವರಿಂದ ತನ್ನ ಬಗ್ಗೆ ಬರೆಸಿಕೊಂಡಿದೆ ಅಂದರೆ ಮಸಾಲೆ ದೋಸೆಯ ಮಹಿಮೆ ಎಂಥದ್ದಿರಬೇಡ? ಈ ಬಗೆಯ ವೈವಿಧ್ಯಮಯ ಲೇಖನಗಳ ಸಂಗ್ರಹ ಇದು, ಇದನ್ನು ಕನ್ನಡದ ಪ್ರಸಿದ್ಧ ವಿನೋದ ಬರೆಹಗಾರರಾದ ವೈ ಎನ್ ಗುಂಡೂರಾವ್ ಸಂಕಲಿಸಿಕೊಟ್ಟಿದ್ದಾರೆ, ಸನ್ಮಿತ್ರರಾದ ರಘುಪತಿ ತಮ್ಮನ್ ಕರ್ ಪ್ರೀತಿಯಿಂದ ಕಳಿಸಿದ್ದಾರೆ, ಅದನ್ನು ಮೆದ್ದೂ ಮೆದ್ದು ಇದೀಗ ಅದರ ಸ್ವಾದವನ್ನು ನಿಮ್ಮ ಮುಂದಿಡುತ್ತಿದ್ದೇನೆ, ಇದರಲ್ಲಿ ಚಿತ್ರದುರ್ಗದ ಚಿಕ್ಕ ಹೋಟೆಲ್ ನಿಂದ ಹಿಡಿದು ವರ್ಜೀನಿಯದ ದೋಸೆ ಹೋಟೆಲ್ ವರೆಗಿನ ವಿವರಗಳಿವೆ, ಓದಿದರೆ ಛೆ, ಇಲ್ಲೆಲ್ಲ ಹೋಗಿ ಆಸ್ವಾದಿಸುವ ಭಾಗ್ಯ ನಮಗಿಲ್ಲವೆಂದು ಅರಿವಾಗಿ ಖೇದವಾಗುತ್ತದೆ, ಆದರೆ ಇದರ ಓದು ಅಂಥ ಬೇಸರವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಮಸಾಲೆ ದೋಸೆಯನ್ನೇ ಕುರಿತು ಹಿರಿ ಕರಿಯ ಕನ್ನಡ ಕೇಖಕರು ಬರೆದ ೨೪ ಲೇಖನಗಳಿವೆ, ಇವೆಲ್ಲ ಪ್ರಬಂಧ, ಕಾವ್ಯ, ಶಾಸ್ತ್ರಿಗಳಿಂದ ಹಿಡಿದು ವೃತ್ತಿ ರಂಗಭೂಮಿವರೆಗೆ ಈ ದೋಸೆಯ ಘಮಲು ಹರಡಿಕೊಂಡ ವಿವಿಧತೆಯನ್ನು ಒಳಗೊಂಡಿದೆಯಾದ್ದರಿಂದ ಎಲ್ಲೂ ಬೇಸರ ಮೂಡಿಸದೇ ಶುಚಿರುಚಿಯಾದ ಮಸಾಲೆ ದೋಸೆ ಒಂದರ ಮೇಲೆ ಒಂದು ಬಂದಾಗ ಬೇಡ ಅನ್ನದಂತೆ ಒಳಗೆ ಸೇರಿಸಿಕೊಳ್ಳುವಂತೆ ಇವೆಲ್ಲ ನಮ್ಮ ಮನ, ಬುದ್ಧಿಯೊಳಗೆ ಇಳಿಯುತ್ತವೆ. ಈ ಮಸಾಲೆ ದೋಸೆ ಲಿಂಗಾತೀತ ಮಾತ್ರವಲ್ಲ ಜಾತ್ಯಾತೀತ ಕೂಡ ಹೌದು ಎಂಬುದು ಇಲ್ಲಿನ ಲೇಖಕರ ಹೆಸರುಗಳೇ ಕಾಣಿಸುತ್ತದೆ, ಎಲ್ಲ ಜಾತಿವರ್ಗದವರು ಗಂಡು ಹೆಣ್ಣುಗಳನ್ನು ಇದು ಸಮಾನವಾಗಿ ಸೆಳೆದಿದೆ. ಇದರ ಸ್ಯಾಂಪಲ್ ಇಲ್ಲಿನ ಲೇಖನಗಳಲ್ಲಿದೆ.
ಆಹಾರದ ಬಗ್ಗೆ ನಾನು ಪಿ.ಎಚ್.ಡಿ. ಅಧ್ಯಯನ ಮಾಡುವಾಗ ಕೂಡ ಇಂಥದ್ದೊಂದು ಕೃತಿ ಸಿದ್ಧಪಡಿಸುವ ಸಾಧ್ಯತೆ ಕನ್ನಡದಲ್ಲಿಎ ಎಂದು ಹೊಳೆದಿರಲಿಲ್ಲ, ಹಾಗೆ ನೋಡಿದರೆ ಕರ್ನಾಟಕದ ವಿವಿಧ ಪ್ರದೇಶ, ಜನಸಮುದಾಯಗಳ ಆಹಾರ ವೈವಿಧ್ಯ ಅಸಾಧಾರಣವಾದುದು, ಕೇವಲ ಮಸಾಲೆ ದೋಸೆ ಬಗ್ಗೆಯೇ ಇಷ್ಟೆಲ್ಲ ಇರುವಾಗ ಉಳಿದ ಪಾಕ ಬಗೆಗಳ ಈಚೆಗೆ ಇಂಥ ಯತ್ನಗಳೂ ನಡೆಯುತ್ತಿವೆ, ಈಚೆಗೆ ಮಇಸೂರಿನ ಮದಹುರಾ ತಮನ ಕರ ಅನ್ನುವವರು ರಚಿಸಿದ ಕರ್ನಾಟಕದ ಚಿತ್ಪಾವನ ಬ್ರಾಹ್ಮಣರ ಹಬ್ಬಗಳು ಕೃತಿಯಲ್ಲಿ ಈ ಸಮುದಾಯದ ಪಕ ವಿವಿಧತೆಯ ಪರಿಚಯ ಓದಿ ಖುಷಿ ಪಟ್ಟಿದ್ದೆ. ಇಂಥ ಕೃತಿಗಳು ಕನ್ನಡದಲ್ಲಿ ನೂರು ಸಾವಿರಗಳಾಗಲಿ, ಈ ಕೃತಿಯಲ್ಲಿ ಕಂಡ ಒಂದು ಮಿತಿ ಅಂದರೆ ನಮ್ಮ ರಾಜ್ಯದಲ್ಲಿ ಎಲ್ಲೆಲ್ಲಿ ಅತ್ಯತ್ತಮ ಮಸಾಲೆ ದೋಸೆ ಲಭ್ಯ ಅನ್ನುವ ವಿಳಾಸ ಇಲ್ಲದಿದ್ದುದು. ಏಕೆಂದರೆ ಉತ್ತರ ಕನ್ನಡದ ಗುಣವಂತೆ, ಇಡಗುಂಜಿ. ಉಡುಪಿ ಬಳಿಯ ಹಾರಾಡಿ ಮೊದಲಾದ ಕಡೆ ಜಗತ್ ಪ್ರಸಿದ್ಧ ದೋಸೆ ಅಂಗಡಿಗಳಿವೆ, ಇಂಥ ಒಂದು ಪಟ್ಟಿಯನ್ನು ಕೊಟ್ಟಿದ್ದರೆ ನಿಜಕ್ಕೂ ನನ್ನಂಥವರಿಗೆ ಇನ್ನೂ ಉಪಯುಕ್ತವಾಗುತ್ತಿತ್ತು. ಎಲ್ಲೋ ಮಸಾಲೆ ತಿನ್ನುತ್ತ ಹೊಳೆದ ಇಂಥ ಯೋಚನೆಯನ್ನು ಕಾರ್ಯಗತ ಗೊಳಿಸಿದ ಗುಂಡೂರಾಯರಿಗೆ, ಪ್ರೀತಿಯಿಂದ ಕಳಿಸಿದ ತಮನ್ ಕರ್ ಅವರಿಗೆ ವಂದನೆಗಳು ಮಸಾಲೆಯನ್ನು ತಿನ್ನಿ, ಬಿಡಿ, ಆದರೆ ಇದನ್ನಂತೂ ಓದಿ ಆಸ್ವಾದಿಸಿ.
೩೫ ರಸಪ್ರಿಯರು ಹೇಳಿರುವ ವೈವುಧ್ಯಮಯ ಸ್ವಾದವುಳ್ಳ ಈ ಮಸಾಲೆ ಕೃತಿ ೧೫೦ ರೂ ಗೆ ಸಿಗುತ್ತಿದೆ, ಹೊಟೇಲ್ ನಲ್ಲಿ ೫೦ ರೂ ದೋಸೆ ಸವಿದರೆ ಅದು ಹರಚ್ಚೆಂದರೆ ೨೪ ಗಂಟೆ ಇರಬಲ್ಲುದು ಆದರೆ ಇದು ಜೀವಮಾನಪರ್ಯಂತ ಇರುವಂಥದ್ದು, ಕೊಳ್ಳಿ, ಸವಿಯಿರಿ,
ಪುಸ್ತಕ ವಿವರ:
ಘಮ ಘಮ ಮಸಾಲೆ ದೋಸೆ
ವೈ ಎನ್ ಗುಂಡೂರಾವ್ (ಸಂ), ಅಂಕಿತ ಪ್ರಕಾಶನ, ಬೆಂಗಳೂರು
ಪುಟಗಳು - 152, ಬೆಲೆ - 150 ರೂ.
ISBN-08026610755/9019190502
ಸಂಪರ್ಕ ಅಂಕಿತ ಪ್ರಕಾಶನ-080-26617100/26617755/9019190502
Wednesday, 20 August 2025
ಶಿಕ್ಷಣವೆಂಬ ನಿರಂತರ ಪ್ರಯೋಗ
ಈಗ ಕೇಂದ್ರೀಯ ಪರೀಕ್ಷಾ ಮಂಡಳಿ ಒಂಬತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಟ್ಸ್ ಮತ್ತಿತರ ಅಧ್ಯಯನ ಸಾಮಗ್ರಿ ನೋಡಿ ಪರೀಕ್ಷೆ ಬರೆಯುವ ಮುಕ್ತ ಅವಕಾಶ ಕಲೊಸಿದೆ. ಇದನ್ನು (ಓಪನ್ ಟೆಕ್ಸ್ಟ್ ಬುಕ್ ಅಸಿಸ್ಟಂಟ್ -ಓ.ಟಿ.ಬಿ.ಎ.) ಎಂದು ಕರೆಯಲಾಗಿದ್ದು ಇದರಲ್ಲಿ ವಿದ್ಯಾರ್ಥಿ ಯಾವ ಪಠ್ಯಕ್ಕೆ ಯಾವ ಗ್ರಂಥಗಳನ್ನು ಯಾವ ದೃಷ್ಟಿಯಿಂದ ಅಧ್ಯಯನ ಮಾಡಿದ್ದಾನೆಂದು ಗ್ರಹಿಸಲಾಗುತ್ತದೆ, ಜೊತೆಗೆ ವಿದ್ಯಾರ್ಥಿಯ ವಿಶ್ಲೇಷಣಾ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಸರ್ಕಾರ ನಡೆಸುವ ಡಿಪಾರ್ಟ್ಮೆಂಟಲ್ ಪರೀಕ್ಷೆಯಲ್ಲಿ ಕೂಡ ಪುಸ್ತಕ ನೋಡಿ ಬರೆಯುವ ಅವಕಾಸವಿದ್ದರೂ ಅದರಲ್ಲಿ ಪಾಸಾಗದವರ ಸಂಖ್ಯೆಯೇ ಹೆಚ್ಚು. ಪರೀಕ್ಷೆಯ ವಿಧಾನವನ್ನು ಆಗಾಗ ಬದಲಿಸಿ ನೋಡುವುದೇ ಶಿಕ್ಷಣದ ಕ್ರಮವಾಗಿದೆ, ಇದರ ಉದ್ದೇಶವೆಂದರೆ ಕಲಿತ ವಿದ್ಯೆ ಬದುಕಿಗೆ ಉಪಯೋಗವಾಗುತ್ತದಾ ಇಲ್ಲವಾ ಎಂದು ನೋಡುವುದು. ಆದರೆ ಆಧುನಿಕ ಕ್ರಮದಲ್ಲಿ ಇದು ಆಗುತ್ತಿಲ್ಲ ಎಂಬುದು ಎಲ್ಲರೂ ಬಲ್ಲ ಸತ್ಯ. ಹಾಗಂತ ಪುಸ್ತಕ ನೋಡಿ ಬರೆದ ಮಾಯ್ರಕ್ಕೆ ಇದು ಆಗುತ್ತದಾ ಎಂಬುದಕ್ಕೂ ಖಚಿತ ಉತ್ತರ ಲಭ್ಯವಿಲ್ಲ, ಈ ಪದ್ಧತಿಯನ್ನು ಪರಿಚಯಿಸಲಾಗುತ್ತಿರುವುದು ಇದೇ ಮೊದಲಲ್ಲ. ಹಿಂದೆ ೨೦೧೪ರಲ್ಲಿ ಇದನ್ನು ಪರಿಚಯಿಸಲಾಗಿತ್ತದರೂ ಆಗ ೯ ನೆಯ ತರಗತಿಯಲ್ಲಿ ಹಿಂದೆ ಇಂಗ್ಲಿಷ್ ಸಮಾಜವಿಜ್ಞಾನ ವಿಷಯಗಳಿಗೆ ಈ ಮಾದರಿಯಲ್ಲಿ ಅವಕಾಶಕೊಡಲಾಗಿತ್ತು, ಅನಂತರ ಆಗ ಅದಕ್ಕೆ ಓಪನ್ ಬುಕ್ ಎಕ್ಸಾಂ ಎಂದು ಹೆಸರಿಸಲಾಗಿತ್ತು, ಅನಂತರ ೧೧ನೆಯ ತರಗತಿಯಲ್ಲಿ ಗಣಿತ, ಭೂಗೋಳಶಾಸ್ತç, ಅರ್ಥಶಾಸ್ತçಗಳಲ್ಲಿ ಇದನ್ನು ಪ್ರಯೋಗಿಸಲಾಯಿತು, ಆದರೆ ಇದು ವಿದ್ಯಾರ್ಥಿಗಳಲ್ಲಿ ವಿಮಶಾತ್ಮಕ ವಿವೇಚನೆಯನ್ನು ಬೆಳೆಸುವುದಿಲ್ಲವೆಂದು ಕೈಬಿಡಲಾಗಿತ್ತು, ಈಗ ಮತ್ತೆ ಜಾರಿ ಮಾಡಲಾಗಿದೆ, ಆದರೆ ಇದರಲ್ಲಿ ನ್ಯೂನ ಇಲ್ಲವೆಂದಲ್ಲ, ಇದು ಕ್ರಮೇಣ ಸರಿಹೋಗಬೇಕಿದೆ. ವಿದ್ಯಾರ್ಥಿಗಳಲ್ಲಿ ಯಾವ ಪ್ರಶ್ನೆಗೆ ಯಾವ ರೀತಿಯ ಉತ್ತರ ಸೂಕ್ತ ಹಾಗೂ ಯಾವ ಮೂಲದ ಯಾವ ಅಂಶಗಳು ಇದ್ದರೆ ಸೂಕ್ತ ಎಂದು ತರ್ಕಿಸುವ ಸವಾಲನ್ನು ಬೆಳೆಸುತ್ತದೆ, ಹಾಗಂತ ಇಲ್ಲಿ ಯಾವುದೇ ಕೃತಿಯಲ್ಲಿನ ಪಠ್ಯವನ್ನು ಅದು ಇರುವಂತೆಯೇ ಭಟ್ಟಿ ಇಳಿಸುವುದಲ್ಲ, ತಾನು ಪಡೆಉಕೊಂಡ ಅಂಶಗಳ ಆಧಾರದಲ್ಲಿ ವಿದ್ಯಾರ್ಥಿ ತನ್ನ ಚಿಂತನೆಯನ್ನು ಮಂಡಿಸಬೇಕಾಗುತ್ತದೆ. ಇದು ಸರ್ಕಾರಿ ಗುಮಾಸ್ತರು ಪುಸ್ತಕ ನೋಡಿ ಬರೆದರೂ ನಪಾಸ್ ಆಗುವಷ್ಟೇ ಕಠಿಣ. ಅಲ್ಲಿ ಗುಮಾಸ್ತರು ಯಾಕೆ ಪಾಸಾಗುವುದಿಲ್ಲ ಅಂದರೆ ಯಾವ ಪ್ರಶ್ನೆಗೆ ಯಾವ ಸರಿ ಉತ್ತರ ಎಲ್ಲಿದೆ ಎಂಬುದು ಆ ಕೃತಿಯನ್ನು ಪರಿಪೂರ್ಣವಾಗಿ ಓದಿ ಅರ್ಥಮಾಡಿಕೊಂಡಿದ್ದರೆ ಮಾತ್ರ ಉತ್ತರಿಸಲು ಸಾಧ್ಯ. ಇದಕ್ಕೂ ನಿಗದಿತ ಕಾಲ ಮಿತಿ ಇರುವುದರಿಂದ ವಿದ್ಯಾರ್ಥಿ ಪುಸ್ತಕ ಎದುರಿಗಿದ್ದರೂ ಸರಿಯಾಗಿ ಉತ್ತರಿಸಲಾರ. ಎಲ್ಲರೂ ಒಂದೇ ರೀತಿ ಉತ್ತರ ಕೊಡಲು ಸಾಧ್ಯವಿಲ್ಲ. ಜೊತೆಗೆ ಕದ್ದು ನಕಲು ಮಾಡುವ ಪ್ರಶ್ನೆ ಕೂಡ ಇದರಲ್ಲಿ ಬರುವುದಿಲ್ಲ, ನಕಲು ಮಾಡುವವರು ಕೂಡ ತಾರ್ಕಿಕ ರೀತಿಯಲ್ಲಿ ನೇರ ಪುಸ್ತಕದಿಂದಲೇ ನಕಲು ಮಾಡಬೇಕಾಗುತ್ತದೆ, ಪರೀಕ್ಷಾ ಮೇಲ್ವಿಚಾರಕರಿಗೂ ತಲೆ ಬೇನೆ ಇರುವುದಿಲ್ಲ, ಮೌಲ್ಯ ಮಾಪನ ಮಾಡುವಾಗ ಮಾತ್ರ ಪರೀಕ್ಷಕರು ಬಹಳ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕಾಗುತ್ತದೆ, ಇಂಥ ಅನೇಕ ಉತ್ತಮ ಸಂಗತಿಗಳು ಇದರಲ್ಲಿದ್ದರೂ ನಿಜವಾಗಿ ಬದುಕಿಗೆ ಅಗತ್ಯವಾದ ಕೌಶಲಗಳನ್ನು ಕಲಿಸುವಲ್ಲಿ ಸಫಲವಾಗುತ್ತದೆಯಾ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಸಿಗುವುದಿಲ್ಲ, ಆದರೆ ಈ ಬಗೆಯ ಪ್ರಯೋಗಗಳು ಶಿಕ್ಷಣದಲ್ಲಿ ಆಗುವುದು ಮಾತ್ರ ಸಕಾರಾತ್ಮಕ ಬೆಳವಣಿಗೆ. ಶಿಕ್ಷಣ ವ್ಯವಸ್ಥೆಯಲ್ಲಿಣೇನೇ ಬದಲಾವಣೆ ತಂದರೂ ಅದರಲ್ಲಿ ಮುಖ್ಯ ಪಾಕುದಾರರಾದ ವಿದ್ಯಾರ್ಥಿಗಳು ಹಾಗೂ ಪಾಲಕರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ ಎಂಬುದನ್ನು ಗಮನಿಸಬೇಕು. ಈಗಿನ ಓಟಿಬಿಎ ವ್ಯವಸ್ಥೆಯಲ್ಲಿಯೂ ಹೀಗೆ ಆಗದಿರಲಿ, ನನ್ನ ಪ್ರಕಾರ ಇದು ಸರಿಯಾದ ಉಪಕ್ರಮ, ನಿಜವಾಗಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಈಗಿನ ವ್ಯವಸ್ಥೆಯಲ್ಲೇ ವಿದ್ಯಾರ್ಥಿಗಳು ತಮ್ಮೊಂದಿಗೆ ತಂದ ಪುಸ್ತಕ ನೋಟ್ಸ್ ಮತ್ತು ಗೈಡ್ ಇತ್ಯಾದಿಯನ್ನು ಅವರ ಬಳಿಯೇ ಕೊಟ್ಟು ಈಗಿನಂತೆ ಪರಸ್ಪರ ಮಾತನಾಡದಂತೆ ನಕಲು ಮಾಡದಂತೆ ಸೂಚಿಸಿ ಯಾವುದೇ ರೀತಿಯಲ್ಲಿ ಕಾವಲು ಕಾಯದೇ, ಪರೀಕ್ಷಾ ಮೇಲ್ವಿಚಾರಕರು ಇಲ್ಲದೇ ಪರೀಕ್ಷೆ ನಡೆಸುವ ವ್ಯವಸ್ಥೆಗೆ ಪ್ರಯೋಗ ಮಾಡಿನೋಡಬೇಕು, ಇದರಿಂದ ವಿದ್ಯಾರ್ಥಿಗಳ ಪ್ರಾಮಾಣಿಕತೆ ಹಾಗೂ ಯಾರಾದರೂ ತಮ್ಮನ್ನು ಗಮನಿಸುತ್ತಿದ್ದಾರೆಂಬ ಭಯವಿದ್ದರಷ್ಟೇ ನಿಯಮದಂತೆ ಇರುವ ಒತ್ತಡ ಇಲ್ಲದಂತಾಗಿ ಅವರ ನೈಜ ವ್ಯಕ್ತಿತ್ವ ಬೆಳಕಿಗೆ ಬರುವಂತಾಗಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹಾಗೂ ತಮ್ಮ ವ್ಯಕ್ತಿತ್ವವನ್ನು ತಾವೇ ಪರೀಕ್ಷೆಗೆ ಒಡ್ಡಿಕೊಳ್ಳಲು ಸಾಧ್ಯವಾಗುತ್ತದೆ, ಯಾವುದೇ ಪದವಿಯನ್ನು ಪಡೆದರೂ ಅಂತಿಮವಾಗಿ ಸಮಾಜದಲ್ಲಿ ವ್ಯಕ್ತಿಯ ನಡತೆಯೇ ಮುಖ್ಯವಾಗುವ ಕಾರಣದಿಂದ ಶಿಕ್ಷಣದಲ್ಲಿ ಇಂಥ ಪ್ರಯೋಗವಿನ್ನೂ ಮುಕ್ತವಾಗಿ ನಡೆದಿಲ್ಲ. ಬದಲಿಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿ ಒಂದೆಡೆ ಕುಳಿತ ಜಾಗದಲ್ಲಿ ಅತ್ತಿತ್ತ ಅಲ್ಲಾಡದೇ ಯಾರೊಂದಿಗೂ ಮಾತನಾಡದೇ ನೋಡದೇ ಕೇಳಿದ ಪ್ರಶ್ನೆಗೆ ಗೊತ್ತಿರುವಷ್ಟನ್ನು ಉತ್ತರ ಪತ್ರಿಕೆಯಲ್ಲಿ ಗೀಚಿ ಹೋಗುವ, ಇದರಲ್ಲಿ ಅನುಸರಿಸಬೇಕಾದ ನಿಯಮವನ್ನು ವಿದ್ಯಾರ್ಥಿ ಮೀರುತ್ತಿದ್ದಾನೆಯೋ ಇಲ್ಲವೋ ಎಂದು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಗಮನಿಸುತ್ತಲೇ ಇರುವ ಪರೀಕ್ಷಾ ಮೇಲ್ವಿಚಾರಕನ ಕೆಲಸ ಬೇರೆ, ನಿಯಮದಲ್ಲಿ ವಿದ್ಯಾರ್ಥಿ ಅಲ್ಪಸ್ವಲ್ಪ ಮೀರಿದರೆ ಅವನನ್ನು ಪರೀಕ್ಷೆಯಿಂದ ಅಮಾನತು ಮಾಡಿ ಸಂಭ್ರಮಿಸುವ ಶಿಕ್ಷೆ ಬೇರೆ, ಇಂಥ ಕ್ರಮದಿಂದ ವಿದ್ಯಾರ್ಥಿ ಶಿಸ್ತು ಕಲಿಯುತ್ತಾನೆ, ಹೇಗಾದರೂ ಶಿಸ್ತು ಕಲಿಸುವುದು ಶಿಕ್ಷಣ ಎಂದು ಭಾವಿಸಲಾಗಿದೆ, ಆದರೆ ಶಿಕ್ಷಣದ ಮೂಲ ಉದ್ದೇಶ ಶಿಸ್ತು ಕಲಿಸುವುದಲ್ಲ, ವ್ಯಕ್ತಿತ್ವ ಬೆಳೆಸುವುದಾಗಿದೆ, ನಾನು ವೈಯಕ್ತಿಕವಾಗಿ ಇಂಥ ಹೊಸ ಪ್ರಯೋಗವನ್ನು ವೈಯಕ್ತಿಕವಾಗಿ ಮಾಡಿನೋಡಿದ್ದೇನೆ, ವಿದ್ಯಾರ್ಥಿಗಳ ಹಿಮ್ಮಾಹಿತಿಯನ್ನೂ ಪಡೆದಿದ್ದೇನೆ, ಅವರಿಗೆ ಇದು ಮೆಚ್ಚುಗೆ ಆಗಿದೆ, ನಮಗೆ ಯಾರೂ ಇಂಥ ಮುಕ್ತ ಪರೀಕ್ಷೆ ಮಾಡಿರಲಿಲ್ಲ, ಬುಕ್ ಗೈಡ್ ಎಲ್ಲ ನಮ್ಮ ಜೊತೆಗಿದ್ದರೂ ನೀವು ಕೂಡ ಗಮನಿಸದ ಕಾರಣ ನಮಗೆ ನಾವೇ ಮೇಲ್ವಿಚಾರಕರಾಗಿ ಜವಾಬ್ದಾರಿ ಹೆಚ್ಚಿಸಿಕೊಳ್ಳುವಂತೆಯೂ ನಮ್ಮ ಪ್ರಾಮಾಣಿಕತರಯೂ ಪರೀಕ್ಷೆಗೆ ಒಳಗಾಗುಬಂತೆಯೂ ಆತಿತೆಂದು ಅವರು ಹೇಳಿದ್ದಿದೆ, ವರ್ಷದಲ್ಲಿ ಒಮ್ಮೆಯಾದರೂ ಹತ್ತು ವರ್ಷಗಳಿಂದ ನನ್ನ ವಿದ್ಯಾರ್ಥಿಗಳಿಗೆ ಇಂಥ ಪರೀಕ್ಷೆಯನ್ನು ಗಂಭೀರವಾಗಿ ನಡೆಸುತ್ತ ಬರುತ್ತಿದ್ದೇನೆ, ಇದು ಸೂಕ್ತವೆನಿಸಿದೆ. ಇದು ಸುಮ್ಮನೇ ನಾನು ಮಾಡುತ್ತಿರುವ ಪರೀಕ್ಷಾ ಪ್ರಯೋಗ. ಇದರ ಮಿತಿಗಳನ್ನೂ ಸುಧಾರಣಾ ವಿಧಾನಗಳನ್ನೂ ಗಮನಿಸುತ್ತಿದ್ದೇನೆ. ಇಷ್ಟಾದರೆ ವಿದ್ಯಾರ್ಥಿಗಳು ಸಮಾಜದಲ್ಲಿ ಜವಾಬ್ದಾರಿಯುಳ್ಳವರಾಗುತ್ತಾರೆ ಎಂಬ ನಂಬಿಕೆ ಮೂಡುತ್ತಿದೆ, ಪೊಲೀಸರಿದ್ದಾರೆ ಆದ್ದರಿಂದ ನಾನು ಕದಿಯಬಾರದೆಂದೋ ಯಾರಾದರೂ ನಮ್ಮನ್ನು ಗಮನಿಸುತ್ತಿದ್ದಾರೆಂದೋ, ಜನತೆಗೆ ನಾನು ಸರಿ ಇದ್ದೇನೆಂದು ಕಾಣಿಸಿಕೊಳ್ಳಬೇಕು, ನಾನು ಮಮಾಡುವ ತಪ್ಪು ಯಾರ ಗಮನಕ್ಕೂ ಬಾರದಂತೆ ಎಚ್ಚರಿಕೆ ವಹಿಸಬೇಕಷ್ಟೆ ಎಂಬ ಭಾವನೆಯಿಂದಲೋ ಇದಕ್ಕಾಗಿ ನಾನು ಸರಿ ಇರಬೇಕೆಂಬ ಭಾವದ ಬದಲಾಗಿ ನೇರ ಸರಳ ನಡೆನುಡಿಯನ್ನು ಇದು ಕಲಿಸುತ್ತದೆಂಬ ನಂಬಿಕೆ ಮೂಡತೊಡಗಿದೆ, ಇನ್ನೂ ಬದಲಾವಣೆ ಇದರಲ್ಲಿ ಆಗಬೇಕಿದೆ. ಇಂಥ ಪರೀಕ್ಷಾಕ್ರಮ ತನಗೆ ತಾನೇ ಮೇಲ್ವಿಚಾರಕ ಎಂಬ ಎಚ್ಚರಿಕೆಯನ್ನು ಹುಟ್ಟಿಸಿ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯನ್ನು ಮೂಡಿಸುತ್ತದೆ ಎಂಬ ನಂಬಿಕೆ ನನ್ನದು. ಇಂಥ ಪ್ರಯೋಗ ವ್ಯಾಪಕವಾಗಿ ನಡೆದರೆ ಅದರ ಇತಿ ಮಿತಿಗಳು ಅಥವಾ ಸುಧಾರಣಾ ಮಾರ್ಗಗಳು ನಿಚ್ಚಳವಾಗುತ್ತವೆ, ಶಿಕ್ಷಣ ನಿಂತ ನೀರಲ್ಲ, ಅದರಲ್ಲಿ ನಿರಂತರ ಪ್ರಯೋಗ ನಡೆಯುತ್ತಿರಬೇಕು, ಸದ್ಯದ ಪರೀಕ್ಷಾ ವಿಧಾನ ಕೂಡ ಅಂಥ ಒಂದು ಪ್ರಯೋಗವಾಗಿದೆ.
Monday, 18 August 2025
ಆದಿವಾಸಿಗಳನ್ನು ನಾವು ಕಾಣುವ ಬಗೆ
ಬ್ರಿಟಿಷರ ವಿರುದ್ಧ ಬೇಡರು, ಸಂತಾಲರು ಮೊದಲಾದವರೆಲ್ಲ ಹೋರಾಟಮಾಡಿದ್ದು ತಮ್ಮ ಅಸ್ತಿತ್ವದ ಮೇಲೆ ಅಡ್ಡಿಯಾದಾಗ ಎಂಬುದನ್ನು ಗಮನಿಸಬೇಕು. ತಮ್ಮ ಸುರಕ್ಷತೆಗಾಗಿ ಇಲ್ಲ ಸಲ್ಲದ ನಿಯಮ ಜಾರಿಗೊಳಿಸಿ ಬಲಾತ್ಕಾರ ಮಾಡಿದ ಬ್ರಿಟಿಷರು ಅಸ್ತ್ರಾಸ್ತ್ರ ನಿಷೇಧ ಮಾಡುವಾಗ ಆದಿವಾಸಿಗಳ ಆಯುಧಗಳನ್ನೂ ನಿಷೇಧಿಸಿದ್ದರು. ಆದರೆ ಬ್ರಿಟಿಷರ ನಿಯಮ ಆದಿವಾಸಿಗಳ ಬದುಕಿನ ಮೇಲೆ ದಾಳಿ ಮಾಡಿತ್ತು. ಇದಕ್ಕಾಗಿ ಬ್ರಿಟಿಷರು ದೊಡ್ಡ ಬೆಲೆ ತೆರಬೇಕಾಯಿತು. ಅದು ಇತಿಹಾಸ. ಆದರೆ ಇಂದಿನ ಆಧುನಿಕ ಸಮಾಜ ಕೂಡ ಬ್ರಿಟಿಷರ ವಿಧಾನವನ್ನೇ ಇನ್ನೊಂದು ರೀತಿಯಲ್ಲಿ ಮಾಡುತ್ತಿದೆ.
ಆಧುನಿಕ ಸಮಾಜದಲ್ಲಿ ಮನರಂಜನೆಯ ಮಾಧ್ಯಮಗಳು ಮನರಂಜನೆಯ ಹೆಸರಲ್ಲಿ ಆದಿವಾಸಿಗಳ ಜೀವನದಲ್ಲಿ ಆಟವಾಡುತ್ತಿವೆ. ಇದರ ಅವಲೋಕನ ಮಾಡಬಹುದು, ಆದರೆ ಆಧುನಿಕ ಸಮಾಜದಲ್ಲೂ ಆದಿವಾಸಿಗಳ ಹಿತ ಕಾಯಲು ವಿವಿಧ ನಿಗಮ ಮಂಡಳಿಗಳಿವೆ, ಇವು ಎಲ್ಲ ಸಮಯದಲ್ಲೂ ಆದಿವಾಸಿಗಳ ಹಿತ ಕಾಯುವುದಿಲ್ಲ. ಉದಾಹರಣೆಗೆ ಒಂದೆರಡು ವರ್ಷಗಳ ಹಿಂದೆ ಕನ್ನಡ ರಿಯಾಲ್ಟಿ ಶೋವೊಂದರಲ್ಲಿ ಸೋಲಿಗ ಬುಡಕಟ್ಟಿನ ಯುವಕನೊಬ್ಬನನ್ನು ಕರೆತಂದು ಪ್ರಚಾರ ಗಿಟ್ಟಿಸಿಕೊಳ್ಳಲಾಗಿತ್ತು, ಮಾಧ್ಯಮಕ್ಕೆ ಬೇಕಾದ ಪ್ರಚಾರ ಸಿಕ್ಕ ಮೇಲೆ ಆ ಯುವಕನ ಪರಿಸ್ಥಿತಿಯತ್ತ ಮಾಧ್ಯಮ ಗಮನಕೊಡಲಿಲ್ಲ, ಇದರಿಂದ ಆತನ ಬದುಕು ಅಂತ್ಯವಾಯಿತು. ತೀರ ಈಚೆಗೆ ಇಂಥದ್ದೇ ಒಂದು ಶೋದಲ್ಲಿ ಸಿದ್ದಿ ಸಮುದಾಯದ ಯುವಕನೊಬ್ಬನನ್ನು ಕರೆತಂದು ಆದಿವಾಸಿಗಳ ಬಗ್ಗೆ ಮಾಧ್ಯಮಗಳಿಗೆ ಬಹಳ ಕಳಕಳಿ ಇದೆ ಎಂಬಂತೆ ತೋರಿಸಿಕೊಂಡು ಪ್ರಚಾರ ಪಡೆಯಲಾಯಿತು, ದುರಂತವೆAದರೆ ಈ ಇಬ್ಬರೂ ಯುವಕರು ಆಧುನಿಕ ಸಮಾಜದ ಒತ್ತಡ ತಡೆಯಲಾಗದೇ ಕೆಲವೇ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು, ಏಕೆ ಹೀಗೆಂದು ಯಾವ ಸಂಸ್ಥೆಯಾಗಲೀ ಸಮಾಜಶಾಸ್ತç ಅಧ್ಯಯನಕಾರರಾಗಲೀ ಗಮನಕೊಡಲಿಲ್ಲ. ನಿಜವಾಗಿ ಆಧುನಿಕ ಸಮಾಜ ಇವರನ್ನು ಸಾಯಿಸಿದೆ, ಆಧುನಿಕ ಸಮಾಜ ತಾನು ಜೀವಿಸುವ ಕ್ರಮದಲ್ಲೇ ಎಲ್ಲ ಸಮುದಾಯಗಳೂ ಜೀವಿಸಿದರೆ ಮಾತ್ರ ಅದು ಸಮಾನತೆ ಎಂದು ಭಾವಿಸಿ ಬಲಾತ್ಕಾರದಿಂದಲಾದರೂ ಅಂಥ ಸಮುದಾಯಗಳನ್ನು ತಾನು ಪ್ರಧಾನಧಾರೆ ಎಂದು ಕರೆಯುವ ಕ್ರಮಕ್ಕೆ ಎಳೆದುತರಲು ಒತ್ತಡ ಹಾಕುತ್ತದೆ. ಇದನ್ನು ಸೂಕ್ಷ್ಮ ಹಾಗೂ ಸರಳ- ಸಹಜ ಮನಸ್ಸಿನ ಬುಡಕಟ್ಟಿನ ಜನ ತಡೆದುಕೊಳ್ಳಲಾರರು. ಏಕೆಂದರೆ ಅಂಥ ಸಿದ್ಧತೆ ಅಥವಾ ಬದುಕಿನ ಪರಿಚಯವೇ ಅವರಿಗೆ ಅಪರಿಚಿತ. ಇಲ್ಲಿನ ಎರಡೂ ಪ್ರಕರಣಗಳಲ್ಲಿ ಆಗಿದ್ದೂ ಇದೇ. ಆಧುನಿಕ ಸಮಾಜ ಮುಗ್ಧ ಜನರ ಮನಸ್ಸಿನಲ್ಲಿ ಮೊದಲು ಅನಂತ ಆಸೆಗಳನ್ನು ಹುಟ್ಟಿಸುತ್ತದೆ, ಕನಸುಗಳನ್ನು ಬಿತ್ತುತ್ತದೆ, ಇವೆಲ್ಲ ಅಗ್ಗದ ಪ್ರಚಾರ ಹಾಗೂ ಹಣವನ್ನು ಆಧರಿಸಿರುತ್ತವೆ. ಸಮಸ್ಯೆ ಬರುವುದೇ ಇಲ್ಲಿ. ಶೋದಲ್ಲಿ ಬೆಳಕಿಗೆ ಬಂದ ಆದಿವಾಸಿಗಳನ್ನು ಮಾಧ್ಯಮಗಳು ಮತ್ತು ಜನಸಾಮಾನ್ಯರು ಹೋದಲ್ಲಿ ಬಂದಲ್ಲಿ ಬೆನ್ನು ಬಿದ್ದು ಅಂಥ ಆಸೆಗಳಿಗೆ ಗರಿ ಮೂಡಿಸುತ್ತವೆ. ಇವು ಒಳಗಿನಿಂದ ಒಡ್ಡುವ ಒತ್ತಡ ಅಸಾಧ್ಯ. ಇದನ್ನು ಇಬ್ಬರೂ ಯುವಕರು ಅನುಭವಿಸಿದ್ದಾರೆ. ಒಂದು ಹಂತ ಮುಗಿದ ಮೇಲೆ ಈ ಮಾಧ್ಯಮಗಳು ಹಾಗೂ ಜನರ ಗುಂಪು ದೂರವಾಗಿ ಯುವಕರು ಒಂಟಿತನ ಅನುಭವಿಸಿ ಮಾನಸಿಕವಾಗಿ ಕುಗ್ಗುವಂತಾಗುತ್ತದೆ, ತಮ್ಮದಲ್ಲದ ಜೀವನಕ್ರಮ ಅಳವಡಿಸಿಕೊಂಡ ಕರಣಕ್ಕೆ ಅವರ ಬಂಧುವರ್ಗ ಅವರನ್ನು ಈಗಾಗಲೇ ದೂರ ಇಟ್ಟಿರುತ್ತದೆ, ಈಗ ಒಂಟಿತನ ಅನುಭವಿಸುವಾಗ ಅವರ ಜೊತೆಗೆ ಯಾರೂ ಇರುವುದಿಲ್ಲ, ಅಂತಿಮವಾಗಿ ಇದು ಆತ್ಮಹತ್ಯೆಯ ಮೂಲಕ ಅವರನ್ನು ಬಲಿ ಪಡೆಯುತ್ತದೆ. ಇದು ಆಧುನಿಕ ಸಮಾಜ ಆದಿವಾಸಿ ಅಥವಾ ಬುಡಕಟ್ಟುಗಳನ್ನು ನಾಶ ಮಾಡುತ್ತಿರುವುದರ ಸಂಕೇತವೂ ಆಗಬಹುದು. ನಿಜವಾಗಿ ಶತಶತಮಾನಗಳಿಂದ ನಿರ್ದಿಷ್ಟ ಭೂಪ್ರದೇಶದಲ್ಲಿ ತಮ್ಮ ಜೀವನ ಕಟ್ಟಿಕೊಂಡ ಆದಿವಾಸಿಗಳು ಆ ನೈಸರ್ಗಿಕ ಪರಿಸರವನ್ನು ಕಾದುಕೊಂಡು ಬರುತ್ತಿರುತ್ತಾರೆ ಅದಿಲ್ಲದೇ ತಮ್ಮ ಜೀವನವಿಲ್ಲ ಎಂಬ ಅರಿವು ಅವರಿಗೆ ಇರುತ್ತದೆ, ಅದರಲ್ಲಿ ಸಹಜವಾಗಿ ಬದುಕು ಸಾಗಿಸುವ ಕೌಶಲವನ್ನು ಅವರು ಕಲಿಯುತ್ತಾರೆ, ಇದೇ ಅವರ ಜೀವನ ಕ್ರಮ, ಆದರೆ ಆಧುನಿಕ ಸಮಾಜ ತಾನು ಅಳವಡಿಸಿಕೊಂಡ ಜೀವನ ವಿಧಾನವೇ ಮನುಷ್ಯ ಸಮಾಜದ ಅಂತಿಮ ಕ್ರಮ, ಇದರ ವ್ಯಾಪ್ತಿಗೆ ಬಾರದವರು ಅನಾಗರಿಕರು ಹಾಗೂ ಅಂಥವರನ್ನೆಲ್ಲ ತನ್ನ ಜೀವನ ಕ್ರಮಕ್ಕೆ ಎಳೆದು ತರುವುದು ತನ್ನ ಕರ್ತವ್ಯವೆಂದು ಭಾವಿಸಿ ಬಲತ್ಕಾರದ ಮೂಲಕವಾದರೂ ಹೀಗೆ ಮಾಡುವುದು ಮಾನವ ಸಮಾಜದ ಕರ್ತವ್ಯ ಹಾಗೂ ಅದೇ ಸಮಾನತೆಯ ಆದರ್ಶ ಎಂದು ತಿಳಿದು ಅಂಥ ಕೆಲಸಕ್ಕೆ ಕೈಹಾಕುತ್ತದೆ. ನಿಜವಾಗಿ ನಮ್ಮ ಆದರ್ಶ ಸಂವಿಧಾನ ಕೂಡ ಸಮುದಾಯಕ್ಕೆ ಮಾತ್ರವಲ್ಲ, ಪ್ರತೀ ವ್ಯಕ್ತಿಗೆ ಅವನ ಬದುಕಿನ ಸ್ವಾತಂತ್ರ್ಯ ನೀಡುತ್ತದೆ, ಆದರೆ ಆಧುನಿಕ ಸಮಾಜ ನಾಗರಿಕತೆಯ ಹೆಸರಲ್ಲಿ ತನ್ನಂತೆಯೇ ಎಲ್ಲರೂ ಇರತಕ್ಕದ್ದೆಂದು ಬಲಾತ್ಕರಿಸುತ್ತದೆ, ಇದನ್ನು ಪ್ರಶ್ನಿಸುವವರೇ ಇಲ್ಲದಿರುವುದು ಆಧುನಿಕತೆಯ ದುರಂತ. ನಿಜವಾಗಿ ಆಧುನಿಕ ಸಮಾಜಕ್ಕೆ ಆದಿವಾದಿಗಳ ಬದುಕಿನ ಬಗ್ಗೆ ಗೌರವವಿದ್ದರೆ ಅವರ ಪಾಡಿಗೆ ಅವರು ಇರುವ ವ್ಯವಸ್ಥೆ ಮಾಡಿಕೊಡುತ್ತಿತ್ತು. ಇಲ್ಲ, ಬದಲಾಗಿ ತನ್ನಂತೆಯೇ ಅವರೆಲ್ಲ ಇರಬೇಕೆಂದು ಬಲಾತ್ಕರಿಸುತ್ತದೆ.
ಇದಿರಲಿ, ಇಂದಿನ ಸಂದರ್ಭದಲ್ಲಿ ಆದಿವಾಸಿಗಳನ್ನು ಆಧುನಿಕ ಸಮಾಜಕ್ಕೆ ಎಳೆದುತರುವ ಉದ್ದೇಶಕ್ಕಾಗಿ ಸರ್ಕಾರೇತರ ಸಂಸ್ಥೆಗಳು ಅಥವಾ ಎನ್‌ಜಿಒ ಗಳು ಕೆಲಸ ಮಾಡುತ್ತವೆ. ಈ ಸಂಸ್ಥೆಗಳು ಆಧುನಿಕತೆಗೆ ಇನ್ನೂ ತೆರೆದುಕೊಳ್ಳದ ಸಮುದಾಯಗಳನ್ನು ಗುರುತಿಸಿ ಅವುಗಳಿಗೆ ಆಧುನಿಕ ಶಿಕ್ಷಣ, ವೈದ್ಯ ವ್ಯವಸ್ಥೆಗಳನ್ನು ಒದಗಿಸುವ ಹಞಆಗೂ ಊಟ ವಸತಿಗಳನ್ನು ಒದಗಿಸುವ ಉದ್ದೇಶದಿಂದ ಸಾಕಷ್ಟು ಹಣ ಪಡೆದುಕೊಳ್ಳುತ್ತವೆ, ಇಂಥ ಸಂಸ್ಥೆಗಳಿಗೆ ಹಣ ಮಾಡುವ ದಂಧೆಗೂ ಈ ಆದಿವಾಸಿ ಪಂಗಡಗಳು ಅನುಕೂಲ ಮಾಡಿಕೊಟ್ಟಿವೆ, ಇದ್ಯಾವುದೂ ಆದಿವಾಸಿಗಳಿಗೆ ತಿಳಿದೇ ಇಲ್ಲ. ಒಂದು ಸಂದರ್ಭದಲ್ಲಿ ಮೈಸೂರಿನ ಸಮಾಜಶಾಸ್ತ್ರ ಅಧ್ಯಯನಕಾರರೊಬ್ಬರು ಆದಿವಾಸಿ ಕುಣಬಿ ಸಮುದಾಯದ ಬಗ್ಗೆ ತಾವು ಕೈಗೊಂಡ ಅಧ್ಯಯನ ವಿವರಿಸಲು ಒಬ್ಬ ಕುಣಬಿ ವ್ಯಕ್ತಿ ಹಾಗೂ ಮಹಿಳೆಯನ್ನು ಕರೆದುಕೊಂಡು ಬಂದು ಪ್ರದರ್ಶನಕ್ಕೆ ತಂದಿದ್ದರು, ಇದನ್ನು ನಾನು ಪ್ರಶ್ನಿಸಿದ್ದೆ. ಹೀಗೆ ಆದಿವಾಸಿಗಳು ಆಧುನಿಕ ಸಮಾಜಕ್ಕೆ ಪ್ರದರ್ಶನದ ವಸ್ತುವೂ ಆಗಿಬಿಟ್ಟಿದ್ದಾರೆ. ಇದು ಸರಿಯಲ್ಲ ಎಂಬ ಭಾವನೆಯೂ ನಮಗೆ ಕಾಡುವುದಿಲ್ಲ. ಹೀಗೆಯೇ ಈಗ ತಮ್ಮ ರ್ಸ್ವೃದಿಂದ ಪ್ರಾಣ ಕಳೆದುಕೊಂಡ ಇಬ್ಬರು ಬುಡಕಟ್ಟಿನ ಯುವಕರ ಬಗ್ಗೆ ಕೂಡ ಯಾವುದೇ ಮಾಧ್ಯಮ ಅದೊಂದು ಸುದ್ದಿ ಎಂಬಂತೆ ಬಿಂಬಿಸಿದ್ದು ಬಿಟ್ಟರೆ ಇನ್ನೇನೂ ಮಾಡಲಿಲ್ಲ, ಅದರ ಅಪಾಯದ ಆಯಾಮವೂ ಚಿಂತನಾರ್ಹ ಅನಿಸಲಿಲ್ಲ, ಒಟ್ಟಿನಲ್ಲಿ ಆಧುನಿಕತೆಯ ಹೆಸರಲ್ಲಿ ನಾವು ಏನೇ ಮಾಡಿದರೂ ಅದು ಅನುಸರಣೆಗೆ ಯೋಗ್ಯವೆಂದು ಭಾವಿಸಬೇಕೆಂದು ಈ ಸಮಾಜ ನಿರೀಕ್ಷೆ ಮಾಡುತ್ತದೆ, ಆದರೆ ಇದು ಮಾಡುತ್ತಿರುವ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ದೂರಗಾಮಿ ಅಪಾಯಗಳು ಗೋಚರವಾಗುತ್ತದೆ. ಇಂಥ ಮನಸ್ಥಿತಿಗೆ ಹೊರತಾಗಿ ಆದಿವಾಸಿಗಳನ್ನು ನಡೆಸಿಕೊಳ್ಳುವ ಅನ್ಯ ಮಾರ್ಗವೇ ಇಲ್ಲವೇ? ಇದನ್ನು ಚಿಂತಿಸಬೇಕಿದೆ. ನಿಜವಾಗಿ ನಾವು ನಾಗರಿಕರೇ ಆಗಿದ್ದರೆ ಇದು ಎಲ್ಲ ಮನುಷ್ಯರನ್ನೂ ಗೌರವದಿಂದ ಕಾಣುತ್ತದೆ ಎಂದಾದರೆ ಆದಿವಾಸಿಗಳ ಬದುಕನ್ನು ಅವರು ಬಾಳಲು ಬಿಡಬೇಕು. ಅದಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆದರೆ ಆದಿವಾಸಿಗಳನ್ನು ನಮ್ಮಂತೆ ಬದಲಿಸುವುದೇ ದೊಡ್ಡ ಆದರ್ಶ ಎಂಬಂತೆ ಸರ್ಕಾರವೂ ಸೇರಿದಂತೆ ಎಲ್ಲರೂ ಭಾವಿಸುವುದರಿಂದ ಇಂಥ ನಿರೀಕ್ಷೆ ಅರ್ಥಹೀನ ಎನಿಸುತ್ತವೆ. ಮನುಷ್ಯನಾಗಿ ಹುಟ್ಟಿದ ಮೇಲೆ ಆತ ಜೀವಿಸುವ ಸಾಧ್ಯತೆ ಕೂಡ ಹಲವಾರು ಇವೆ. ನಮ್ಮ ಆಧುನಿಕ ಜೀವನ ಕ್ರಮ ಒಂದು ಬಗೆಯಾದರೆ ಆದಿವಾಸಿ ಜೀವನ ಇನ್ನೊಂದು ಬಗೆ, ಅದೇ ಸರಿ, ಇದೇ ಸರಿ ಎಂದು ಹೇಳುವುದು ಸರಿಯಲ್ಲ. ಇದು ನಮಗೆ ಅರ್ಥವಾಗುವುದು ಯಾವಾಗ ಎಂಬುದು ಪ್ರಶ್ನೆ.
Sunday, 17 August 2025
ಹುಚ್ಚು ದೊರೆಯ ತಲೆ ತಿರುಕ ನಿರ್ಧಾರಗಳು
ಅಮೆರಿಕದ ತೆರಿಗೆ ನೀತಿ, ನಮ್ಮ ಕೃಷಿಯ ಗತಿ!
ನಿಜ, ನಮ್ಮ ಕೃಷಿ ವಲಯದಲ್ಲಿ ಅಮೆರಿಕಕ್ಕೆ ಬರಲು ಮುಕ್ತ ಅವಕಾಶಕೊಟ್ಟರೆ ಅದರ ಕುಲಾಂತರಿ ತಳಿಗಳು ಮೊದಲು ಬರುತ್ತವೆ, ಅದರ ಹಿಂದೆ ಅವರ ವಿಮಾ ಕಂಪನಿಗಳು ಬರುತ್ತವೆ, ಅನಂತರ ದೊಡ್ಡ ದೊಡ್ಡ ಜಮೀನುದಾರರಿಗೆ ಗಾಳ ಹಾಕಿ ಅವರೆಲ್ಲರ ಜಮೀನನ್ನು ತಮ್ಮ ವಶಕ್ಕೆ ಪಡೆಯಲಾಗುತ್ತದೆ, ಅಲ್ಲಿಗೆ ನಮ್ಮ ದೇಶದ ಚಿಕ್ಕ ಹಿಡುವಳಿದಾರರು ಗುಡಿಸಿಕೊಂಡುಹೋಗುತ್ತಾರೆ, ಜೊತೆಗೆ ಇಲ್ಲಿನ ಪಶುಪಾಲನೆ ಮೂಲೆಗುಂಪಾಗುತ್ತದೆ, ಹೀಗಾಗಲು ಬಿಡುವುದಿಲ್ಲವೆಂಬುದು ಮೋದಿಯವರ ಮಾತಿನ ಅರ್ಥ. ಅಷ್ಟಕ್ಕೂ ಅಮೆರಿಕ ಭಾರತದ ವಿರುದ್ಧ ವಿಧಿಸಿದ ತೆರಿಗೆಯಿಂದ ಭಾರತಕ್ಕೆ ಹೊಡೆತ ಬೀಳುತ್ತದೆ ಎಂದು ಮೂರ್ಖ ಟ್ರಂಪ್ ತಿಳಿದಿದ್ದಾನೆ, ಇಲ್ಲ, ಮಾರುಕಟ್ಟೆ ಹೀಗಿಲ್ಲ, ಭಾರತದಿಂದ ಅಮೆರಿಕಕ್ಕೆ ಹೋಗುವ ವಸ್ತುಗಳಿಗೆ ಬೆಲೆ ಹೆಚ್ಚುತ್ತದೆ, ಇದನ್ನು ಭಾರತದ ಕಂಪನಿಗಳು ತಮ್ಮ ಮೇಲೆ ಹಾಕಿಕೊಳ್ಳುವುದಿಲ್ಲ, ಅದನ್ನು ಸೀದಾ ಅಮೆರಿಕದ ಗ್ರಾಹಕರಿಗೆ ದಾಟಿಸಲಾಗುತ್ತದೆ, ಅಲ್ಲಿಗೆ ಬೆಲೆ ತೆರಬೇಕಾದುದು ಅಮೆರಿಕವೇ. ಸದ್ಯ ನೂರರಲ್ಲಿ ಐದು ವಸ್ತುಗಳಿಗೆ ಮಾತ್ರ ವಿನಾಯ್ತಿ ಇದೆ. ವಾಲ್ ಮಾರ್ಟ್ ಎಂಬ ಅಮೆರಿಕದ ಅಂಗಡಿ ಭಾರತದಿಂದ ತಮ್ಮ ದೇಶಕ್ಕೆ ಭಾರತದ ವಸ್ತುವನ್ನು ಕಳಿಸಿದರೆ ಅದರ ಮೇಲೆ ತೆರಿಗೆ ಭಾರ ಬೀಳುತ್ತದೆ. ಅದನ್ನು ಕಂಪನಿ ಹೊರುವ ಮೂರ್ಖತನ ಮಾಡುವುದಿಲ್ಲ, ಅದು ನೇರವಾಗಿ ಅಮೆರಿಕದ ಗ್ರಾಹಕರಿಗೆ ಹೋಗುತ್ತದೆ. ಭಾರತ ತಾನು ಕಟ್ಟಬೇಕಾದ ರಫ್ತಿನ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಿ ಕೊಡುತ್ತದೆ, ಮೇಲ್ನೋಟಕ್ಕೆ ಭಾರತ ರಷ್ಯಾದೊಂದಿಗೆ ವ್ಯವಹಾರ ನಡೆಸುತ್ತಿರುವುದರಿಂದ ಈ ತೆರಿಗೆ ಹಾಕಲಾಗಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ, ಇಲ್ಲ, ನಿಜವಾಗಿ ಅಮೆರಿಕಕ್ಕೆ ಬೇಕಾಗಿರುವುದು ಭಾರತದ ಕೃಷಿ ವಲಯದಲ್ಲಿ ಮುಕ್ತ ಪ್ರವೇಶ. ಇಷ್ಟಾದರೆ ಅಮೆರಿಕದ ಕೃಷಿ ತಿಮಿಂಗಿಲಗಳು ಭಾರತದೊಳಗೆ ಆರಾಮವಾಗಿ ನುಸುಳಿ ಯುದ್ಧವಿಲ್ಲದೇ ನಮ್ಮನ್ನು ವಶ ಮಾಡಿಕೊಳ್ಳುತ್ತವೆ. ಇದು ಹತ್ತಾರು ವರ್ಷ ನಡೆಯುವ ಪ್ರಕ್ರಿಯೆ, ಅಮೆರಿಕದಲ್ಲಿರುವ ರೈತರ ಜಮೀನು ಸಾವಿರಾರು ಎಕರೆ ಇರುತ್ತದೆ, ಅವರದ್ದೆಲ್ಲ ಯಂತ್‌ರಾಧಾರಿತ ಕೃಷಿ. ಕುಲಾಂತರಿ ತಳಿಯ ಬೆಳೆ-ಬೀಜ. ಅದಕ್ಕೆಂದೇ ಇರುವ ಗೊಬ್ಬರವನ್ನು ಮಾತ್ರ ಬಳಸಬೇಕು, ನಮ್ಮ ದೇಶದಲ್ಲಿ ಮುಕ್ತ ಅವಕಾಶ ಕೃಷಿಗೆ ಸಿಕ್ಕಿದರೆ ಅವರೆಲ್ಲ ಇಲ್ಲಿನ ದೊಡ್ಡ ಜಮೀನುದಾರರನ್ನು ಮೊದಲು ಬುಟ್ಟಿಗೆ ಹಾಕಿಕೊಂಡು ಅವರ ಜಮೀನುಗಳನ್ನು ವಶಕ್ಕೆ ಪಡೆದು ಸಣ್ಣ ಜಮೀನುದಾರರನ್ನು ಸಮಾಧಿ ಮಾಡುತ್ತವೆ, ಇಲ್ಲಿನ ಪಶುಪಾಲನೆ ಹಳ್ಳ ಹಿಡಿಯುತ್ತದೆ, ಇದರ ಪರಿಣಾಮ ಊಹಿಸಿಯೇ ಮೊನ್ನೆ ನರೇಂದ್ರ ಮೋದಿ ಯಾವ ಕಾರಣಕ್ಕೂ ಅಮೆರಿಕದ ತಂತ್ರಕ್ಕೆ ಮಣಿಯುವುದಿಲ್ಲ, ಬೇಕಿದ್ದರೆ ನಮ್ಮ ಮೇಲೆ ನೂರರಷ್ಟು ತೆರಿಗೆ ವಿಧಿಸಲಿ, ವೈಯಕ್ತಿಕವಾಗಿ ಬೆಲೆ ತೆರಲು ಸಿದ್ಧ ಅಂದಿರುವುದು. ಅಷ್ಟಕ್ಕೂ ಮೂರ್ಖ ಟ್ರಂಪ್ ವಿಧಿಸಿದ ತೆರಿಗೆಯನ್ನು ಪರೋಕ್ಷವಾಗಿ ತೆರಬೇಕಾದವರು ಅಮೆರಿಕದ ಜನರೇ, ಹಾಳಾಗುವುದು ಅಲ್ಲಿನ ಕಂಪನಿಗಳೇ. ಅದು ಅಲ್ಲಿ ಈಗಾಗಲೇ ಕಾಣತೊಡಗಿದೆ. ನಮ್ಮ ದೇಶದ ಕೃಷಿಗೆ ಮುಕ್ತ ಅವಕಾಶ ದೊರೆತರೆ ಮೊದಲು ಒಳಬರುವವರು ಅಲ್ಲಿನ ಬೃಹತ್ ಶ್ರೀಮಂತರು. ಅವರ ಬೆನ್ನಿಗೆ ಅಲ್ಲಿನ ವಿಮಾ ಕಂಪನಿಗಳು, ಇವರೆಲ್ಲ ಸೇರಿ ನಮ್ಮ ಮೀನುಗಾರರು, ಚಿಕ್ಕ ಹಿಡುವಳಿದಾರರನ್ನು ನುಂಗುತ್ತವೆ. ಕುಲಾಂತರಿ ತಳಿಗಳು ಅಲ್ಲಿನ ಕಳೆಗಳನ್ನು ಹೊತ್ತುತರುತ್ತವೆ, ನಮ್ಮ ನೆಲವನ್ನು ಬರಡು ಮಾಡುತ್ತವೆ, ಈಗ ನಮ್ಮಲ್ಲಿ ದೇಶಾದ್ಯಂತ ಹರಡಿರುವ ಜಾಲಿ ಗಿಡ ಹಾಗೂ ಕಾಂಗ್ರೆಸ್ ಗಿಡ ಅನ್ನಲಾಗುವ ಕಳೆಗಳು ೭೦ರ ದಶಕದಲ್ಲಿ ಅಲ್ಲಿನ ಕೃಷಿ ಬೀಜಗಳಿಂದ ಬಂದವು, ಅವುಗಳ ಕಾಟ ಸಾಕಾಗಿದೆ.
Friday, 15 August 2025
ಸ್ವಾತಂತ್ರ್ಯ ದಿನದ ಇತಿ ಮಿತಿಗಳು
ಇನ್ನು ಕಾರ್ಮಿಕರ ವಿಷಯ- ಕಾರ್ಮಿಕರೆಂದರೆ ಯಾರು? ಅವರ ವ್ಯಾಪ್ತಿ ಎಷ್ಟು? ಅವರಿಗೆ ಯಾವ ಕೆಲಸ ಮಾಡಬೇಕು? ಅವರು ಸದ್ಯದ ಸ್ಥಿತಿಯಿಂದ ಹೊರಬಂದು ಸ್ವತಂತ್ರವಾಗಿ ಯಜಮಾನರಾಗಿ ಜೀವಿಸುವುದು ಯಾವಾಗ ? ಎಂಬ ಪ್ರಶ್ನೆಗಳಿಗೂ ಉತ್ತರ ಶಾಶ್ವತವಾಗಿ ಸಿಗದು, ಅಲ್ಲದೇ ಕಾರ್ಮಿಕರಿಂದ ಯಜಮಾನ ಹುಟ್ಟುತ್ತಾನೋ ಯಜಮಾನ ಇರುವುದರಿಂದ ಕಾರ್ಮಿಕರ ಸೃಷ್ಟಿಯಾಗುತ್ತದೋ ಎಂಬುದೂ ಅಸ್ಪಷ್ಟ. ಇನ್ನು ಮಹಿಳೆ ಕೇಳುವ ಸ್ವಾತಂತ್ರ್ಯ ಕೊಟ್ಟರೆ ಪುರುಷ ಸ್ವಾತಂತ್ರ್ಯದ ಪ್ರಶ್ನೆ ಅಡ್ಡ ಬರುತ್ತದೆ. ಒಟ್ಟಿನಲ್ಲಿ ವೇದಗಳ ಕಾಲದ ಎಲ್ಲದರಿಂದ ಮುಕ್ತಿ ಪಡೆಯುವ ಆಶಯವೇ ಶಾಶ್ವತ ಅನಿಸುತ್ತದೆ. ಲೌಕಿಕ ಅರ್ಥದಲ್ಲಿ ನಾವು ಬಯಸುವ ಸ್ವಾತಂತ್ರ್ಯ ಎಲ್ಲಿಯೂ ಎಂದಿಗೂ ದೊರೆಯುವುದಿಲ್ಲ, ಯಾವುದೇ ಬಗೆಯ ಸ್ವಾತಂತ್ರ್ಯ ದೊರೆತರೂ ಕೊನೆಯಲ್ಲಿ ಮುಂದೇನು ಎಂಬ ಪ್ರಶ್ನೆಯೇ ಉಳಿಯುತ್ತದೆ. ಉದಾಹರಣೆಗೆ ಮಕ್ಕಳಿಗೆ ಒಂದು ವಯಸ್ಸು ದಾಟುವವರೆಗೂ ಮೊಬೈಲ್ ಕೊಡಬಾರದುಅನ್ನುವುದು ಸ್ವಾತಂತ್ರ್ಯದ ಹರಣವಾಗುತ್ತದೆ ಎಂದು ಅವರಿಗೆ ಜನಿಸಿದ ಕೂಡಲೇ ಮೊಬೈಲ್ ಕೊಟ್ಟೆವು, ಅದರಿಂದ ಮಗು ಏನೇನೂ ಅನಾಹುತ ಮಾಡಿಕೊಂಡಿತು ಅಂದುಕೊಳ್ಳಿ- ಅಯಯಯ್ಯೋ ಹಿಂಗಾಯ್ತಾ ಮತ್ತೆ ಏನು ಮಾಡುವುದು ಈಗ ಅನ್ನುತ್ತೇವೆ, ಈ ಲೌಕಿಕ ಬದುಕಿನಿಂದ ಮುಕ್ತಿ ಪಡೆಯುವುದೇ ನೈಜ ಸ್ವಾತಂತ್ರ್ಯ ಏಕೆಂದರೆ, ಇಂದಿನ ಸಮಾಜದಲ್ಲಿ ಎಲ್ಲರೂ ತಮಗೆ ಬೇಕಾದಂತೆ ಬದುಕಲು ಸಾಧ್ಯವಿಲ್ಲ,ಹಾಗಾದರೆ ಅದು ಸ್ವಾತಂತ್ರ್ಯವಲ್ಲ, ಸ್ವೇಚ್ಛೆ, ನಾಗರಿಕ ಸಮಾಜ ಅದನ್ನು ಒಪ್ಪುವುದಿಲ್ಲ. ಮಾನವ ಒಬ್ಬ ಪ್ರಾಣಿಯಾದರೂ ಆತನಿಗೆ ಪ್ರಾಣಿಗಳು ಇರುವಂತೆ ಇರಲು ಅಸಾಧ್ಯ. ಒಂದು ಕುಟುಂಬ, ಸಾಮಾಜಿಕ ವ್ಯವಸ್ಥೆ ಅವನಿಗೆ ಅನೇಕ ಕಾರಣಗಳಿಗಾಗಿ ಅಗತ್ಯ, ಇಲ್ಲವಾದಲ್ಲಿ ಒಬ್ಬ ಕಳ್ಳ ಈ ಸಮಾಜದಲ್ಲಿ ತನಗೆ ಬೇಕಾದ ಸ್ವಾತಂತ್ರ್ಯವಿಲ್ಲ ಅನ್ನಬಹುದು, ಹಾಗೆಯೇ ಒಬ್ಬ ಅತ್ಯಾಚಾರಿ ಕೂಡ ಹೇಳಬಹುದು ಇದನ್ನು ನಾಗರಿರ‍್ಯಾರೂ ಒಪ್ಪಲಾಗದು. ಆದ್ದರಿಂದ ಯಾರು ಯಾರಿಗೆ ಏನು ಬೇಕೋ ಅದನ್ನೆಲ್ಲ ಶಿಸ್ತಿನ ಜವಾಬ್ದಾರಿಯ ಗೊಡವೆಯೇ ಇಲ್ಲದೇ ಒದಗಿಸುವುದೇ ಸ್ವಾತಂತ್ರ್ಯವಲ್ಲ, ಅದು ಸಾಧುವೂ ಅಲ್ಲ, ಇಂಥ ಪ್ರಯೋಗಗಳೆಲ್ಲವನ್ನು ನೋಡಿಯೇ ನಮ್ಮ ಸಂವಿಧಾನ ಸೂಕ್ತವಾದ ಜವಾಬ್ದಾರಿಯ ಜೊತೆಗೆ ಅದ್ಭುತ ಸ್ವಾತಂತ್ರ್ಯವನ್ನು ನಮಗೆಲ್ಲ ಕೊಟ್ಟಿದೆ, ಸ್ವಾತಂತ್ರ್ಯ ನಮಗೆ ಬೇಕು ಅನ್ನುವವರು ಅದರ ಜೊತೆಗಿನ ಜವಾಬ್ದಾರಿಯನ್ನು ಪಡೆಯಬೇಕು, ಅದನ್ನು ನಿಭಾಯಿಸಬೇಕು. ಅಂಥ ಜವಾಬ್ದಾರಿ ನಮಗೆಲ್ಲ ಇದೆ. ಎಲ್ಲಿಯೇ ಆಗಲಿ, ಸ್ವೇಚ್ಛೆಯೇ ಸ್ವಾತಂತ್ರ್ಯವಲ್ಲ. ಈಗ ನಾವು ಯಾವುದೋ ಕಚೇರಿಯಲ್ಲಿ ನೌಕರಿಗೆ ಸೇರಿದ್ದೇವೆ ಅಂದುಕೊಳ್ಳಿ, ನಾವು ಆಗ ಅಲ್ಲಿನ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ, ಅಲ್ಲಿ ಕಚೇರಿ ಆವರಣ ಬಿಟ್ಟು ಸೂಕ್ತ ಅನುಮತಿ ಅಥವಾ ಅತ್ಯಗತ್ಯ ಕಾರ್ಯಗಳಿಗೆ ಅಲ್ಲದೇ ವೃಥಾ ಹೊರಗೆ ಹೋಗಬಾರದು ಎಂಬ ನಿಯಮ ಇದ್ದರೆ ಅದು ಸ್ವಾತಂತ್ರö್ಯ ಹರಣವಲ್ಲ, ಒಂದು ಶಿಸ್ತು, ಇಂಥವೆಲ್ಲ ಶಾಲಾ ಕಾಲೇಜುಗಳಲ್ಲಿ ಸಾಮಾನ್ಯವಾಗಿರುತ್ತವೆ, ಇವೆಲ್ಲ ಸ್ವಾತಂತ್ರ ಹರಣದ ಅಡಿ ಬರುವುದಿಲ್ಲ, ಬರಬಾರದು. ಆದರೆ ಉದ್ಯಾನವನ, ಅರಣ್ಯ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಆಯ್ದ ಕೆಲವರಿಗೆ ಮಾತ್ರ ಪ್ರವೇಶ ಅನ್ನುವುದು ನಿಜಕ್ಕೂ ಸ್ವಾತಂತ್ರ್ಯ ಹರಣವಾಗುತ್ತದೆ, ಇದು ಪ್ರಶ್ನಾರ್ಹ. ಇಂಥ ನಿದರ್ಶನಗಳು ನಮ್ಮ ದೇಶದಲ್ಲಿ ಅನೇಕಬಾರಿ ಸುರಕ್ಷತೆಯ ಹೆಸರಲ್ಲಿ ಆಗುತ್ತದೆ, ಇದನ್ನು ಪ್ರಜಾಪ್ರಭುವದಲ್ಲಿ ಎಲ್ಲರೂ ಸಮಾನರು, ಆದರೆ ಕೆಲವರು ಇನ್ನೂ ಹರಚ್ಚು ಸಮಾನರಾಗಿರುತ್ತರೆಂದು ವ್ಯಂಗ್ಯ ಮಾಡಲಾಗುತ್ತದೆ. ಇದು ನಿಜ ಕೂಡ. ಆದರೆ ನಾವೆಲ್ಲ ಸಮಾನರು ಎಂಬುದು ಸಮಾಜಿಕ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಅನಿವಾರ್ಯವಾಗುತ್ತದೆ, ಉದಾಹರಣೆಗೆ ಒಂದು ಕಚೇರಿಯಲ್ಲಿ ಹತ್ತು ಹಲವು ಬಗೆಯ ಕೆಲಸಗಳಿಗೆ ಹಲವು ಜನ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಾರೆಮ ಇವುಗಳಲ್ಲಿ ಮುಖ್ಶಸ್ಥನ ಕೆಲಸ ಹಾಗೂ ಜವಾಚ್ದಾರಿ ಬೇರೆ, ಸಾಮಾನ್ಯ ಜವಾನನ ಕೆಲಸ ಬೇರೆ. ಆದರೆ ಎಲ್ಲರ ಕೆಲಸಗಳಿಗೂ ಗೌರವ ವನ್ನು ಸಮಾನವಾಗಿ ಕೊಡಬೇಕಾದುದು, ಸಮಾನತೆಯ ಆದರ್ಶವಾಗುತ್ತದೆ, ಆದರೆ ಒಬ್ಬ ಗುಮಾಸ್ತ ಅಥವಾ ಮಾಲಿಯೊಬ್ಬ ನನಗೂ ಸ್ವಾತಂತ್ರö್ಯವಿದೆ, ನನಗೂ ಮ್ಯಾನೇಜರ್ ಸಮಾನ ಸಂಬಳ ಹಾಗೂ ಸ್ಥಾನಮಾನ ಬೇಕು ಅಂದರೆ ಸರಿಯಾಗುವುದಿಲ್ಲ, ಆಗ ವ್ಯವಸ್ಥೆಯ ಬುಡ ಅಲ್ಲಾಡುತ್ತದೆ, ಕೆಲಸ ಸರಿಯಾಗಿ ನಡೆಯುವುದಿಲ್ಲ, ಆದ್ದರಿಂದ ಎಲ್ಲಿ ಏನು, ಯಾವ ಬಗೆಯ ಸ್ವಾತಂತ್ರ್ಯ ಎಂಬ ಎಚ್ಚರ ಅಗತ್ಯವಾಗುತ್ತದೆ.
ಲಿಖಿತ ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಎಲ್ಲವನ್ನೂ ಅದರಲ್ಲಿ ಬರೆದೇ ತಿಳಿಸಲು ಸಾಧ್ಯವಿಲ್ಲ, ಅದಕ್ಕಾಗಿ ಸಮಾಜದಲ್ಲಿ ನಡವಳಿಕೆ ಇರುತ್ತದೆ, ಇದರಲ್ಲಿ ಗುರು ಹಿರಿಯರಿಗೆ ಗೌರವ ಕೊಡುವುದು, ತಂದೆ ತಾಯಿಯರಿಗೆ ಗೌರವ ಕೊಡುವ ಕ್ರಮ ಮೊದಲಾದವು ಸೇರುತ್ತವೆ, ಇದರಲ್ಲಿ ನಾವೆಲ್ಲ ಸಮಾನರೆಂದು ಬೀಗಲು ಸಾಧ್ಯವಿಲ್ಲ, ತಂದೆ ತಾಯಿಯರ ಎದುರು ಕಾಲು ಚಾಚಿ ಕೂರುವುದು, ಗುರುಗಳು ಎದುರಿಗೆ ಬಂದಾಗ ಎದ್ದು ಗೌರವಿಸುವುದು ಮೊದಲಾದವನ್ನು ಯವ ಸಂವಿಧಾನವೂ ಹೇಳುವುದಿಲ್ಲ, ಇವೆಲ್ಲ ಅಲಿಖಿತ ಸಾಮಾಜಿಕ ಶಿಷ್ಟಾಚಾರದ ನಿಯಮ, ಅಥವಾ ರೀತಿ ನೀತಿಗಳು, ಒಂದು ಅರ್ಥದಲ್ಲಿ ಲಿಖಿತ ನಿಯಮಗಳಿಗಿಂತ ಅಲಿಖಿತ ನಿಯಮಗಳೇ ಹೆಚ್ಚು ಶಕ್ತಿಯುತವಾಗಿರುತ್ತವೆ, ಇಲ್ಲೆಲ್ಲೂ ಸ್ವಾತಂತ್ರ್ಯದ ಪ್ರಶ್ನೆ ಬರುವುದಿಲ್ಲ, ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ಮನುಷ್ಯ ಎನಿಸಿಕೊಳ್ಳಲು ಇಂಥ ನಡವಳಿಕೆಗಳು ಕಾರಣವಾಗುತ್ತವೆ ಅಲ್ಲದೇ ಇವು ಸಂಸ್ಕೃತಿಯನ್ನು ಕಟ್ಟುತ್ತವೆ. ಇದು ಬಹಳ ದೊಡ್ಡದೆನಿಸಿಕೊಳ್ಳುವುದು ಈ ಕಾರಣಕ್ಕೆ. ಇಲ್ಲಿ ಸ್ವಾತಂತ್ರ್ಯಕ್ಕೆ ಮಿತಿ ಇರುತ್ತದೆ. ಅದನ್ನು ಯಾರೂ ಪ್ರಶ್ನಿಸಲಾಗದು. ಆದ್ದರಿಂದ ಎಲ್ಲಿ ಎಷ್ಟು ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂಬ ವಿವೇಕ ಇರಬೇಕಾಗುತ್ತದೆ. ಇದು ಇಲ್ಲದಿದ್ದರೆ¸ ಸ್ವಾತಂತ್ರ್ಯಕ್ಕೆ ಬೆಲೆಯೂ ಇರುವುದಿಲ್ಲ. ಸ್ವಾತಂತ್ರ್ಯ ಕೇಳುವ ಮತ್ತು ಪಡೆಯುವ ಸ್ಥಳಗಳಿಗೂ ಸಂಬಂಧವಿದೆ, ಅದನ್ನು ಮೀರಲಾಗದು. ಸಾಮಾಜಿಕ ಶಿಷ್ಟಾಚಾರಗಳಲ್ಲಿ ಕುಟುಂಬದ ಒಳಗೆ ಮತ್ತು ಹೊರಗೆ ವ್ಯಕ್ತಿ ಹೇಗೆ ವರ್ತಿಸಬೇಕು ಎಂಬುದನ್ನು ಸಮಾಜ ಕಲಿಸುತ್ತದೆ, ಸಮಾಜದ ರೀತಿ ನೀತಿಯಂತೆಯೇ ಗಂಡು ಹೆಣ್ಣು ಗಂಡ ಹೆಂಡತಿಯರಾದ ಮೇಲೆ ಕೂಡ ಅವರು ಅದಾದ ಮೇಲಿನ ರೀತಿ ನೀತಿಗಳನ್ನು ಅನುಸರಿಸಬೇಕಾಗುತ್ತದೆ, ತಾವಿಬ್ಬರೂ ಗಂಡ ಹೆಂಡತಿಯರೆಂದ ಮಾತ್ರಕ್ಕೆ ಅವರು ಎಲ್ಲೆಂದರಲ್ಲಿ ಇಷ್ಟಬಂದಂತೆ ವರ್ತಿಸಲಾಗದು. ಅದಕ್ಕ ಹಿರಿಯ ಸಾಹಿತಿಗಳಾಗಿದ್ದ ಎ ಆರ್ ಕೃಷ್ಣಶಾಸ್ತ್ರಿಗಳು ಎಲ್ಲೇ ಮದುವೆ ಕಾರ್ಯಕ್ರಮಕ್ಕೆ ಹೋದರೂ ನವ ಜೋಡಿಯನ್ನು ಕುರಿತು ನೋಡ್ರಪ್ಪಾ, ನೀವಿಬ್ಬರೂ ಇಂದಿನಿಂದ ಗಂಡ ಹೆಂಡತಿ ಎಂದು ಸಮಾಜ ಒಪ್ಪಿದೆ, ಹಾಗಂತ ಬೆಡ್ ರೂಮಿನ ಹಾಸಿಗೆಯನ್ನು ಬೀದಿಗೆ ತರಬೇಡಿ ಎಂದು ಹಿತವಚನ ಹೇಳುತ್ತಿದ್ದರಂತೆ, ಇದು ಶಿಷ್ಟಾಚಾರ, ಏನೀಗ ಎಂದು ಇದನ್ನು ಕೇಳುವಂತಿಲ್ಲ, ಇಂಥ ವಿಷಯಗಳಲ್ಲಿ ಸೂಕ್ಷ್ಮಗಳಿರುತ್ತವೆ, ಸಾಂಸ್ಕೃತಿಕವಾಗಿ ಮಹತ್ವ ಪಡೆದ ಬಾಹುಬಲಿ ವಿಗ್ರಹ ಬೆತ್ತಲು ನಿಂತಿದೆ, ಪ್ರಪಂಚಾದ್ಯಂತ ಜನ ಬಂದು ಅದನ್ನು ನೋಡಿ ಹೋಗುತ್ತಾರೆಂದು ಹಾದಿ ಬೀದಿಯಲ್ಲಿ ಹೋಗುವವರು ಬೆತ್ತಲೆಯಾಗಿ ನಿಲ್ಲಲಾಗದು, ಇವನ್ನೇ ಶಿಷ್ಟಾಚಾರ ಅನ್ನುವುದು. ಹಾಗೆಯೇ ಊಟ ತನ್ನ ಇಷ್ಟ. ನೋಟ ಪರರ ಇಷ್ಟ ಅನ್ನುವ ಗಾದೆ ಇದೆ, ಹಾಗೆಂದು ಇದನ್ನು ನನ್ನಿಷ್ಟ ಅನ್ನುತ್ತಾ ನನ್ನ ಬಟ್ಟೆ ನನ್ನುಷ್ಟ ಅನ್ನುತ್ತಾ ಎಲ್ಲ ವನ್ನೂ ಬಿಚ್ಚಿ ನಿಲ್ಲಲಾಗದು. ಇಂಥ ಕಡೆ ಸ್ವಾತಂತ್ರ್ಯ ಅಥವಾ ಹಕ್ಕಿನ ಪ್ರಶ್ನೆ ಬರುವ ಪ್ರಶ್ನೆಯೇ ಬರುವುದಿಲ್ಲ, ಹಾಗಾಗಿ ನಮಗಿರುವ ಸ್ವಾತಂತ್ರ್ಯಕ್ಕೆ ಜವಾಬ್ದಾರಿಯ ಕಾರಣಕ್ಕೆ ವ್ಯಾಪ್ತಿಯೂ ಮಿತಿಯೂ ಇದೆ. ಇದರಿಂದಾಗಿಯೇ ಸ್ವಾತಂತ್ರ್ಯಕ್ಕೆ ಮೌಲ್ಯ ಬರುತ್ತದೆ. ಸ್ವಾತಂತ್ರ್ಯದ ಜೊತೆಗೆ ವ್ಯಕ್ತಿಗೆ ಜವಾವ್ದಾರಿಯನ್ನೂ ಕಲಿಸುವ ಸದಾಶಯ ಇದರಲ್ಲಿದೆ. ಇವೆಲ್ಲ ನಾಗರಿಕ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತವೆ. ನಾನು ನನ್ನ ಇಷ್ಟದಂತೆ ಇರುತ್ತೇನೆಂದರೆ ಅದು ಆರೋಗ್ಯದ ವ್ಯಾಪ್ತಿಗೆ ಬರುತ್ತದೆಯೇ ವಿನಾಸ್ವಾತಂತ್ರö್ಯದ ವ್ಯಾಪ್ತಿಗೆ ಬರುವುದಿಲ್ಲಒಟ್ಟಿನಲ್ಲಿ ಆದರ್ಶಪ್ರಾಯವಾದ ಸ್ವಾತಂತ್ರ್ಯದ ಅರ್ಥದಲ್ಲಿ ಅನ್ಯ ಸಹಜೀವಿಗೆ ಯಾವುದೇ ಮಾತು ಮತ್ತು ಕೃತಿಯಿಂದ ಯಾವುದೇ ನೋವು ಅಥವಾ ಹಿಂಸೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ, ಆಗಲೇ ಅಂಥ ಸ್ವಾತಂತ್ರö್ಯಕ್ಕೆ ಬೆಲೆ ಅನ್ನಬಹುದು. ಅದನ್ನು ನಾಗರಿಕ ಸಮಾಜದ ಸದಸ್ಯರಾಗಿ ನಾವು ನೆನಪಿನಲ್ಲಿಟ್ಟೊಕೊಳ್ಳಬೇಕು, ಇಷ್ಟನ್ನು ಮಾತ್ರ ಇಲ್ಲಿ ಹೇಳಲು ಸಾಧ್ಯ, ಉಳಿದಂತೆ ಇರುವ ಸಂಗತಿಗಳು ಎಲ್ಲರಿಗೂ ತಿಳಿದಿವೆ.
Tuesday, 12 August 2025
ಬೀದಿ ನಾಯಿಗಳ ಕಾಟ - ಪರಿಹಾರವೇನು?
ಬೆಂಗಳೂರಿನಲ್ಲಿ ಕೆಲವು ಜನರಿದ್ದಾರೆ, ಕೆಲವು ಸಂಘಟನೆಗಳಿವೆ. ರಸ್ತೆ ವಿಸ್ತರಣೆ, ಮೆಟ್ರೋ ರೈಲು ಕಾಮಗಾರಿ, ವಿಮಾನ ನಿಲ್ದಾಣ ಮೊದಲಾದ ಮೂಲಸೌರ‍್ಯ ಅಭಿವೃದ್ಧಿ ಕೆಲಸ ಕೈಗೊಂಡಾಗ ಕೆಲವು ಮರಗಳನ್ನು ಕಡಿಯಬೇಕಾಗಿ ಬಂದಾಗ ಒಂದೆರಡು ಘೋಷಣಾ ಪತ್ರ ಹಿಡಿದು ಮಾಧ್ಯಮಗಳಿಗೆ ಪೋಸು ನೀಡುವುದು ಇವರ ನಿತ್ಯ ಕೆಲಸ. ಬಾರ್ ರ‍್ತನ ನಿಷೇಧಿಸಿದಾಗ ರ‍್ತಕಿಯರ ಪರ ಹೋರಾಡುವ ಇವರು ಬೀದಿ ನಾಯಿ ಕಾಟ ತಾಳಲಾರದ ಸರ‍್ವಜನಿಕರು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಒತ್ತಡ ಹೇರಿದಾಗ ನಾಯಿ ಪರ ನಿಲ್ಲುತ್ತಾರೆ. ಚುನಾವಣೆಗಳು ನಡೆದಾಗ ಮಾತ್ರ ಮತಗಟ್ಟೆಯ ಬಳಿ ಸುಳಿಯುವ ಕನಿಷ್ಠ ಕೆಲಸವನ್ನೂ ಇವರು ಮಾಡುವಂತೆ ಕಾಣುವುದಿಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ದತ್ತವಾದ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ತಮಗೆ ಎಲ್ಲಿ ಯಾವಾಗ ಬೇಕೋ ಆಗ ಮಾತ್ರ ಪ್ರರ‍್ಶಿಸುವ ಕೌಶಲ ಇವರಿಗಿದೆ. ಇವರ ಸಂಖ್ಯೆ ಬೆರಳೆಣಿಕೆಯನ್ನೇನೂ ಮೀರದು. ಆದರೆ ಇವರ ಕಾಟ ಮಾತ್ರ ಸಮಸ್ತ ನಾಗರಿಕರಿಗೆ ತಪ್ಪದು. ಬೀದಿ ನಾಯಿ ಕಾಟವೇ ಇದಕ್ಕೆ ನಿದರ್ಶನ.
ಕರ್ನಾಟಕದಲ್ಲಿ ಆನಿಮಲ್ ರೈಟ್ ಕಂಟ್ರೋಲ್ ಆಕ್ಟ್ ೨೦೦೧ರಲ್ಲಿ ಜಾರಿಗೆ ಬಂದಿದೆ. ೧೯೬೯ರ ಪ್ರಾಣಿ ರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು ಜಾರಿಯಾದ ಕಾನೂನು ಇದು. ಇದರ ಪ್ರಕಾರ ಬೀದಿ ನಾಯಿಗಳು ತೀವ್ರ ಅನಾರೋಗ್ಯದಿಂದ ಬಳಲುವಾಗ, ವಾಸಿಯಾಗದ ತೀವ್ರ ಗಾಯವಾದಾಗ ಮಾತ್ರ ಅವುಗಳ ಹತ್ಯೆಗೆ ಅವಕಾಶ ಕೊಡುತ್ತದೆ. ಉಳಿದಂತೆ ಅವುಗಳ ಪೀಡೆಯಿಂದ ತಪ್ಪಿಸಿಕೊಳ್ಳಲು ಸಂತಾನ ನಿಯಂತ್ರಣ ಮಾಡಬೇಕು ಎಂದು ಹೇಳುತ್ತದೆ. ಈ ಕಾನೂನು ಜನರ ಪ್ರಾಣ ರಕ್ಷಣೆಗಿಂತ ಕೆಲವು ಹಿತಾಸಕ್ತಿಗಳ ಹೊಟ್ಟೆಪಾಡಿಗೆ ಅದ್ಭುತ ಮರ‍್ಗ ಕಲ್ಪಿಸಿದೆ.
ಕೆಂಪೇಗೌಡ ವೈದ್ಯಕೀಯ ಸಂಸ್ಥೆಯ (ಕಿಮ್ಸ್) ಪ್ರಕಾರ ಬೆಂಗಳೂರಿನಲ್ಲಿ ನಾಯಿ ಕಡಿತದ ಪ್ರಕರಣ ನಿತ್ಯವೂ ಸರಾಸರಿ ೧೦೦ ರಷ್ಟು ದಾಖಲಾಗುತ್ತದೆ. ೨೦೦೬-೦೭ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆಗೊಳಿಸಿದ ಅಂಕಿಅಂಶಗಳು ಹೇಳುವಂತೆ ೨೦೦೦-೨೦೦೬ರ ಅವಧಿಯಲ್ಲಿ ದಾಖಲಾದ ನಾಯಿ ಕಡಿತದ ಪ್ರಕರಣ ೨೮,೦೦೦ಕ್ಕೂ ಹೆಚ್ಚು! ನಾಯಿ ಕಡಿತದಿಂದ ಸತ್ತವರೂ ಕಡಿಮೆಯಲ್ಲ.
ಬೆಂಗಳೂರಿನಲ್ಲಿ ಜನರ ಸಂಖ್ಯೆ ಏರುತ್ತಿರುವಂತೆಯೇ ಬೀದಿ ನಾಯಿ ಸಂಖ್ಯೆಯೂ ಏರುತ್ತಿದೆ. ಹಸಿದ ಜನರಿಗೆ ಆಹಾರ ಒದಗಿಸಲು ಹಾದಿ ಬೀದಿಯಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿದ ಗಾಡಿ ಅಂಗಡಿ, ಗೂಡಂಗಡಿಗಳ ವ್ರ‍್ಥ ಆಹಾರ, ತ್ಯಾಜ್ಯಗಳೇ ಬೀದಿ ನಾಯಿಗಳ ಸಮೃದ್ಧ ಆಹಾರ ಮೂಲ. ಈ ಅಂಗಡಿಗಳು ವಿಶೇಷವಾಗಿ ಸಂಜೆ ವೇಳೆ ಆಹಾರ ಮಾರಾಟ ಕೆಲಸ ಮಾಡುತ್ತವೆ. ಹೊಟೇಲ್ ಬಾಗಿಲು ಹಾಕುವ ಸಮಯದಲ್ಲಿ ಊರಿಗೆ ಬರುವ ಪ್ರಯಾಣಿಕರು, ರಾತ್ರಿ ಪಾಳಿ ನೌಕರರು ಈ ಅಂಗಡಿಗಳ ಪ್ರಮುಖ ಗಿರಾಕಿಗಳು. ಬೆಂಗಳೂರಿನಲ್ಲಿ ರಾತ್ರಿ ಪಾಳಿ ಕೆಲಸ ಮಾಡುವ ಸುಮಾರು ಮೂರು ಲಕ್ಷ ಜನರಿದ್ದಾರೆ. ಇವರಲ್ಲಿ ಪತ್ರರ‍್ತರು, ಸಾಫ್ಟ್‍ವೇರ್ ನೌಕರರು, ಬಿಪಿಒ ನೌಕರರು, ವಿವಿಧ ಉತ್ಪಾದಕ ಕಂಪನಿ ಕೆಲಸಗಾರರು, ಸೆಕ್ಯೂರಿಟಿ ಗಾರ್ಡ್ ಗಳು, ಕ್ಯಾಬ್ ನೌಕರರು, ಆಟೋ ಮತ್ತಿತರ ವಾಹನ ಚಾಲಕರು ಸೇರಿದ್ದಾರೆ. ಈ ಜನರಲ್ಲಿ ರ‍್ಧಕ್ರ‍್ಧ ಜನ ಸ್ವಂತ ವಾಹನದಲ್ಲಿ ಓಡಾಡುತ್ತಾರೆ. ಇವರಲ್ಲಿ ದ್ವಿಚಕ್ರ ವಾಹನ ಬಳಸುವವರು ಅಧಿಕ. ರಾತ್ರಿ ಹನ್ನೊಂದುವರೆ ಗಂಟೆಯ ನಂತರ ಬೆಂಗಳೂರಿನ ಯಾವುದೇ ಬೀದಿಯಲ್ಲಿ ಓಡಾಡುವುದು ಅಪಾಕಾರಿಯೇ ಹೌದು. ಇದಕ್ಕೆ ಕಳ್ಳಕಾಕರ ಭಯ ಕಾರಣವಲ್ಲ, ಕಳ್ಳರಿಗೂ ಭಯ ಹುಟ್ಟಿಸಿದ ಬೀದಿ ನಾಯಿ ಕಾಟ ಕಾರಣ! ಪ್ರಮುಖ ರಾಜ ಮರ‍್ಗಗಳನ್ನು ಬಿಟ್ಟರೆ ಬೇರೆ ಉಪ ರಸ್ತೆಗಳಲ್ಲಿ ರಾತ್ರಿ ಹನ್ನೆರಡ ನಂತರ ಚಲಿಸುವ ಯಾವುದೇ ವಾಹನವನ್ನೂ ಈ ನಾಯಿಗಳು ಬೆನ್ನಟ್ಟದೇ ಬಿಡುವುದಿಲ್ಲ. ಇನ್ನು ದ್ವಿಚಕ್ರ ವಾಹನದಲ್ಲಿ ಓಡಾಡಲು ಎಂಟೆದೆಯೇ ಬೇಕು. ಒಂದೊಂದು ಬೀದಿಯಲ್ಲಿ ಐದರಿಂದ ಆರು ಅಥವಾ ಕೆಲವೊಮ್ಮೆ ಐವತ್ತರವರೆಗೂ ಗುಂಪಾಗಿ ಇವು ಇರುತ್ತವೆ. ವಾಹನ ಹತ್ತಿರ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಮೇಲೆರಗುತ್ತವೆ, ಕೆಲವು ವಾಹನದ ಮುಂದೆ ಹೋದರೆ ಉಳಿದವು ಚಾಲಕರ ಬಳಿ ಧಾವಿಸುತ್ತವೆ. ಚಾಲಕ ಕಕ್ಕಾಬಿಕ್ಕಿಯಾಗಿ ಸಮತೋಲ ತಪ್ಪಿದರೆ ಅಪಘಾತ ತಪ್ಪಿದ್ದಲ್ಲ. ನಿತ್ಯ ಓಡಾಡುವ ಪರಿಚಿತ ವಾಹನವಾದರೆ ಅವು ಸ್ವಲ್ಪ ವಿನಾಯ್ತಿ ತೋರಿಸುವುದುಂಟು. ಈ ಕಾಟವನ್ನು ಅನುಭವಿಸಿಯೇ ನೋಡಬೇಕು. ನಾಲ್ಕು ಗೋಡೆ ಮಧ್ಯೆ ನಾಯಿ ರ‍್ತನೆ ಅಧ್ಯಯನ ಮಾಡಿ ರಕ್ಷಣಾ ತಂತ್ರಗಳನ್ನು ಹೇಳುವವರು ಹಾಗೂ ಬೀದಿ ನಾಯಿ ಪರ ಘೋಷಣಾ ಪತ್ರ ಹಿಡಿದು ಮುಖದ ಮೇಲಿನ ಕೂದಲು ಹಿಂದೆ ತಳ್ಳುತ್ತ, ಮುಖಕ್ಕೆ ಮೆತ್ತಿಕೊಂಡ ಬಣ್ಣ ಮಾಸದಂತೆ ಎಚ್ಚರಿಕೆ ವಹಿಸುತ್ತ ಪ್ರತಿಭಟಿಸಿ ನಂತರ ಮೆಲ್ಲಗೆ ಕಾರು ಹತ್ತಿ ಸಂಜೆ ಎಂಟರೊಳಗೆ ಮನೆಯೋ ಕ್ಲಬ್ಬೋ ಸೇರುವ ಜನ “ಪ್ರಚೋದನೆ ಇಲ್ಲದೇ ನಾಯಿ ದಾಳಿ ಮಾಡುವುದಿಲ್ಲ’’ ಎಂಬ ಮಹಾನ್ ಸಂಶೋಧನಾ ಮಾತನ್ನು ತಪ್ಪದೇ ಉಲ್ಲೇಖಿಸುತ್ತಾರೆ. ರಾತ್ರಿ ಪಾಳಿಯ ಜನ ಒಂದೋ ಕೆಲಸದ ಸ್ಥಳಕ್ಕೆ ಅಥವಾ ಮನೆಗೆ ಕ್ಷೇಮವಾಗಿ ಸೇರಿದರೆ ಸಾಕಪ್ಪಾ ಎಂಬ ಧಾವಂತದಲ್ಲೇ ಇರುತ್ತಾರೆ. ಇದಕ್ಕೆ ಕಾರಣಗಳು ಹಲವು. ಇದರ ಜೊತೆ ಬೀದಿ ನಾಯಿಗಳನ್ನು ಪ್ರಚೋದಿಸುತ್ತ, ಅವುಗಳನ್ನು ಮೈಮೇಲೆ ಆಹ್ವಾನಿಸಿಕೊಳ್ಳುವವರು ಯಾರಿದ್ದಾರೋ ರ‍್ಥವಾಗದು. ಬೀದಿ ನಾಯಿ ದಾಳಿ ವಿರುದ್ಧ ರಕ್ಷಣೆಗೆ ಇವರು “ನಾಯಿಗಳು ಬೆನ್ನಟ್ಟಿದರೆ ಕಲ್ಲಿನಂತೆ ನಿಂತು ಬಿಡಿ, ಓಡಬೇಡಿ, ನಿಮ್ಮನ್ನು ಮೂಸಲು ಬಿಡಿ, ಅದನ್ನೇ ದಿಟ್ಟಿಸಿ ನೋಡಬೇಡಿ, ಅಷ್ಟಾಗಿಯೂ ಮೇಲೆ ಬಿದ್ದರೆ ಮಲಗಿ ಮುಖ ಮುಚ್ಚಿಕೊಂಡು ಹೊರಳಾಡಿ’’ ಎಂದೆಲ್ಲ ಹಿತೋಪದೇಶವನ್ನೂ ಜನರಿಗೆ ನೀಡಿದ್ದಾರೆ.
ಸಾಮಾನ್ಯವಾಗಿ ಆರು ತಿಂಗಳಿಗೊಮ್ಮೆ ಬೆದೆಗೆ ಬರುವ ನಾಯಿಗಳು ಆ ಸಂರ‍್ಭದಲ್ಲಿ ಹೆಚ್ಚು ಕಿರಿಕಿರಿ ಅನುಭವಿಸುತ್ತವೆ, ಆಕ್ರಮಣಕಾರಿಯಾಗಿ ರ‍್ತಿಸುತ್ತವೆ. ಇಂಥ ಸಂರ‍್ಭದಲ್ಲಿ ಅವು ದಾಳಿ ನಡೆಸುವ ಸಂಭವ ಹೆಚ್ಚು. ಈ ಸಂರ‍್ಭ ಅಲ್ಲದೆಯೂ ಅವುಗಳ ದಾಳಿ ಪ್ರಮಾಣವೇನೂ ಕಡಿಮೆಯಲ್ಲ. ಪ್ರತಿ ಬೀದಿಯಲ್ಲಿ ಹೆಚ್ಚಿದ ನಾಯಿಗಳು ತಮ್ಮ ಗಡಿ ಪ್ರಭುತ್ವ ಉಳಿಸಿಕೊಳ್ಳಲು ದಿನವಿಡೀ ಆಕ್ರಮಣಕಾರಿಯಾಗಿಯೇ ಇರಬೇಕಾಗಿದೆ. ಇದರ ನೇರ ಪರಿಣಾಮ ಎದುರಿಸಬೇಕಿರುವುದು ಸರ‍್ವಜನಿಕರು.
೨೦೦೧ರಲ್ಲಿ ನಾಯಿ ಸಂತಾನ ನಿಯಂತ್ರಣ (ಆನಿಮಲ್ ರೈಟ್ ಕಂಟ್ರೋಲ್ - ಎಬಿಸಿ) ಕಾಯ್ದೆ ಜಾರಿಗೆ ಬಂದ ಮೇಲೆ ಬಿಬಿಎಂಪಿ ಹೆಚ್ಚಿದ ಬೀದಿ ನಾಯಿಗಳನ್ನು ಹಿಡಿದು ಅವುಗಳ ಸಂಖ್ಯೆಯನ್ನು ನಿಯಂತ್ರಿಸುವ ಕೆಲಸ ಕೈಬಿಟ್ಟಿದೆ. ಈಗ ನಾಯಿ ನಿಯಂತ್ರಣ ಎಬಿಸಿಯಿಂದಲೇ ಆಗಬೇಕು. ಈ ಉಸ್ತುವಾರಿಯನ್ನು ಬೆಂಗಳೂರಿನ ಸಿಯುಪಿಎ (ಕ್ಯುಪಾ), ಎಸ್.ಪಿ.ಸಿ.ಎ., ಎ.ಆರ್.ಎಫ್, ಕರುಣಾ ಮತ್ತಿತರ ಸರ್ಕಾರೇತರ ಸಂಸ್ಥೆಗಳು ವಹಿಸಿಕೊಂಡಿವೆ. ಹಳ್ಳಿಗಳಲ್ಲಿ ಹೋರಿ, ಗಂಡು ನಾಯಿಯ ಬೀಜ ತೆಗೆಯುವ ಕೆಲಸವನ್ನೇ ಹೆಚ್ಚು ವೈಜ್ಞಾನಿಕವಾಗಿ, ನಾಜೂಕಾಗಿ ಇವು ಬೆಂಗಳೂರಿನ ಬೀದಿ ನಾಯಿಗಳಿಗೆ ಮಾಡುತ್ತಿವೆ ಅಷ್ಟೆ. ಹೆಣ್ಣು ನಾಯಿ ರ‍್ಭಧರಿಸದಂತೆಯೂ ಸಂತಾನ ಹರಣ ಚಿಕಿತ್ಸೆ ಮಾಡಿ ಅದರ ಕಿವಿಯ ಮೇಲೆ ಗುರುತನ್ನೂ ಮಾಡುತ್ತವೆ. ಹೀಗೆ ಗುರುತಾದ ನಾಯಿಗಳೂ ಸಾಕಷ್ಟು ಮರಿ ಹಾಕಿದ ದಾಖಲೆಯೂ ಇದೆ ಎಂಬುದು ಬೇರೆ ಮಾತು. ಈ ಸಂತಾನ ನಿಯಂತ್ರಣ ಎಂಬುದು ಎನ್‍ಜಿಒಗಳ ಪಾಲಿಗೆ ಪೊಗದಸ್ತಾದ ಕ್ಷೇತ್ರ. ಕೈತುಂಬ ಕೆಲಸ, ಹಣ “ನ್ಯಾಯಬದ್ಧವಾಗಿ’’ ಇದರಿಂದ ಬರುತ್ತದೆ. ಈ ದಂಧೆಯ ಬಗ್ಗೆ ಬಿಬಿಎಂಪಿ ಕಿಮ್ಸ್ ನೇತೃತ್ವದಲ್ಲಿ ಡಾ. ಸುರ‍್ಶನ್ ಉಸ್ತುವಾರಿಯಲ್ಲಿ ಲೆಕ್ಕಪತ್ರ ಶೋಧ ನಡೆಸಿದೆ. ಇದರಲ್ಲಿ ಈ ವ್ಯವಹಾರದ ಒಳಹೊರಗುಗಳೆಲ್ಲ ದಾಖಲಾಗಿವೆ.
ಪದೇ ಪದೇ ಬೀದಿ ನಾಯಿ ದಾಳಿ ನಡೆದಾಗ ಜನ ಆಕ್ರೋಶ ವ್ಯಕ್ತಪಡಿಸುವುದು ಬಿಬಿಎಂಪಿ ವಿರುದ್ಧ. ಆದರೆ ಬಿಬಿಎಂಪಿ ಕ್ರಮ ಕೈಗೊಳ್ಳಲು ಆಗದಂತೆ ಅಡ್ಡ ಹಾಕುವವರು ಇಂಥ ಎನ್‍ಜಿಒಗಳು. ಎನ್‍ಜಿಒಗಳು ಹೇಳುವ ಮಾತಿನಲ್ಲಿ ಸತ್ಯವೇ ಇದ್ದರೆ ಅದನ್ನು ಒಪ್ಪಲು ಅಡ್ಡಿ ಇಲ್ಲ. ಆದರೆ ಕಾಗದ ಪತ್ರಗಳ ದಾಖಲೆ ಹೇಳುವುದು ಒಂದಾದರೆ ವಾಸ್ತವ ಸತ್ಯವೇ ಬೇರೆ ಇದೆ. ಅಷ್ಟಕ್ಕೂ ಕಾಗದ ಪತ್ರಗಳೇ ಸುಳ್ಳು ಹೇಳುವುದೂ ಉಂಟು. ಇದಕ್ಕೆ ಇಲ್ಲಿದೆ ಸಣ್ಣ ಉದಾಹರಣೆ.
೨೦೦೦ದಲ್ಲಿ ಕ್ಯುಪಾ ಸಂಘ ಬೆಂಗಳೂರಿನ ಬೀದಿ ನಾಯಿ ಗಣತಿ ಮಾಡಿದೆ. ಅದರ ಪ್ರಕಾರ ಆಗ ಇದ್ದ ನಾಯಿ ಸಂಖ್ಯೆ ಕೇವಲ ೭೦,೦೦೦. ಅಲ್ಲದೇ ಬೆಂಗಳೂರಿನಲ್ಲಿ ಎಬಿಸಿ ಕರ‍್ಯಕ್ರಮದ ಯಶಸ್ವೀ ಜಾರಿಯಿಂದ ಬೀದಿ ನಾಯಿ ಸಂಖ್ಯೆಯೂ ಇಳಿಮುಖವಾಗುತ್ತಿದೆ, ದಾಳಿ ಪ್ರಕರಣವೂ ಕಡಿಮೆಯಾಗುತ್ತಿದೆ. ಹೀಗಾಗಿದ್ದರೆ ಎಲ್ಲರಿಗೂ ಸಂತೋಷವಾಗುತ್ತಿತ್ತು. ಆದರೆ ನಾಯಿ ದಾಳಿ ಮತ್ತೆ ಮತ್ತೆ ಹೆಚ್ಚಿದಾಗ, ಪ್ರತಿ ತಿಂಗಳ ಐದಾರು ಲಕ್ಷ ರೂ.ಗಳನ್ನು ಎಬಿಸಿ ಕರ‍್ಯಕ್ರಮಕ್ಕೆ ಈ ಸಂಘಗಳಿಗೆ ಕೊಡುವ ಬಿಬಿಎಂಪಿ ೨೦೦೭ ಜೂನ್ ೧೧ರಿಂದ ೨೦೦೭ಜುಲೈ ೬ರ ಅವಧಿಯಲ್ಲಿ ಮತ್ತೆ ನಾಯಿ ಗಣತಿ ನಡೆಸಿ ಅಂಕಿಅಂಶ ಕೊಟ್ಟಿದೆ. ಇದನ್ನು ನೋಡಿಬಿಟ್ಟರೆ ಎನ್‍ಜಿಒಗಳ ಕರ‍್ಯವೈಖರಿ ರ‍್ಥವಾಗುತ್ತದೆ. ಬಿಬಿಎಂಪಿ ಹೇಳುವಂತೆ ನಗರದ ಬೀದಿ ನಾಯಿ ಸಂಖ್ಯೆ ೧,೮೩,೭೫೮. ಇವುಗಳಲ್ಲಿ ೧,೦೫,೪೬೬ ಗಂಡು ನಾಯಿಗಳೂ ೭೮,೨೯೨ ಹೆಣ್ಣು ನಾಯಿಗಳೂ ಇವೆ. ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ನಾಯಿಗಳಿವೆ. (ಆಹಾರ ಮಾರುವ ಗಾಡಿ ಅಂಗಡಿ, ಗೂಡಂಗಡಿಗಳೂ ಇಲ್ಲೇ ಹೆಚ್ಚು) ಬೆಂಗಳೂರು ಪರ‍್ವದಲ್ಲಿ ೩೮,೦೬೬ ನಾಯಿಗಳೂ ದಾಸರಹಳ್ಳಿ ವಲಯದಲ್ಲಿ ೮,೭೫೦ ನಾಯಿಗಳೂ ಇವೆ.
ಇದು ೨೦೦೭ರ ಆರಂಭದ ನಾಯಿ ಲೆಕ್ಕ. ಈ ಎರಡು ರ‍್ಷದಲ್ಲಿ ಎಬಿಸಿ ಕರ‍್ಯಕ್ರಮದ ಯಶಸ್ವೀ ಪ್ರಯೋಗದಿಂದ ೨೦೧೩ರ ವೇಳೆಗೆ ಬೆಂಗಳೂರಿನ ಬೀದಿ ನಾಯಿಗಳ ಸಂಖ್ಯೆ ೨.೫ ಲಕ್ಷಕ್ಕೇರಿದೆ! ಒಂದು ನಾಯಿಯ ಸಂತಾನ ಹರಣ ಚಿಕಿತ್ಸೆಗೆ ಬಿಬಿಎಂಪಿ ಸುಮಾರು ೩೦೦ ರೂ. ಪಾವತಿಸುವುದರಿಂದ ಈ ಯೋಜನೆ ಎನ್‍ಜಿಒಗಳಿಗೆ ವರದಾನವೇ ಆಗಿಬಿಟ್ಟಿದೆ. ನಿಜಕ್ಕೂ ಎನ್‍ಜಿಒಗಳು ನಾಯಿ ಸಂತಾನ ನಿಯಂತ್ರಣ ಮಾಡುತ್ತಿವೆಯೋ ಅಥವಾ ಸಂತಾನ ಅಭಿವೃದ್ಧಿ ಮಾಡುತ್ತಿವೆಯೋ ಎಂಬ ಅನುಮಾನವೂ ಇದರಿಂದ ಉಂಟಾಗುತ್ತದೆ.
೨೦೦೭-೦೮ ರಲ್ಲಿ ಮಕ್ಕಳ ಮೇಲೆ ಬೀದಿ ನಾಯಿ ದಾಳಿ ನಿತ್ಯ ಸುದ್ದಿಯೇ ಆಗಿಬಿಟ್ಟಿತ್ತು. ಬಿಬಿಎಂಪಿ, ರ‍್ಕಾರಕ್ಕೆ ತಲೆನೋವಾದ ಬೀದಿ ನಾಯಿ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಬೇಕಾಯಿತು. ಸರ‍್ವಜನಿಕ ಸಂಕಟಕ್ಕೆ ಮರುಗಿದ ಲೋಕಾಯುಕ್ತ ನ್ಯಾಯಮರ‍್ತಿ ಸಂತೋಷ್ ಹೆಗ್ಡೆಯವರೂ ಸ್ವಯಂ ಪ್ರೇರಿತರಾಗಿ ಬೀದಿ ನಾಯಿ ಸಮಸ್ಯೆ ಬಗ್ಗೆ ಕಟುವಾಗಿ ಟೀಕಿಸಬೇಕಾಯಿತು. ಇಷ್ಟೆಲ್ಲ ಆದರೂ ಬೆಂಗಳೂರಿನ ನಾಗರಿಕರಿಗೆ ಬೀದಿ ನಾಯಿ ಉಪಟಳವಂತೂ ತಪ್ಪಲಿಲ್ಲ.
ನಾಯಿ ನಿಯಂತ್ರಣಕ್ಕೆ ಬೆಂಗಳೂರಿನ ಒಂದೊಂದು ವಿಭಾಗವನ್ನು ಒಂದೊಂದು ಸಂಸ್ಥೆಗಳು ಹಂಚಿಕೊಂಡಿವೆ. ಉದಾಹರಣೆಗೆ ಜಯನಗರ, ಭೈರಸಂದ್ರದ ನಾಯಿ ನಿಯಂತ್ರಣ ಹೆಬ್ಬಾಳದಲ್ಲಿರುವ ಸಂಸ್ಥೆಯೊಂದರ ವ್ಯಾಪ್ತಿಗೆ ಬರುತ್ತದೆ! ನಾಯಿ ಕಾಟದಿಂದ ಬೇಸತ್ತು ನಿತ್ಯ ಕರೆ ಮಾಡಿದರೆ ವಾರದೊಪ್ಪತ್ತಿಲ್ಲಿ ಹಗಲು ವೇಳೆ ನಾಲ್ಕಾರು ಜನ ನಾಯಿ ಹಿಡಿದು ಚಿಕಿತ್ಸೆ ನೀಡಲು ಬರುತ್ತಾರೆ. ದುರದೃಷ್ಟವಶಾತ್ ಇವರ ಆಗಮನದ ಸುಳಿವು ದೊರೆತ ನಾಯಿಗಳು ಪಲಾಯನಗೈಯುತ್ತವೆ. ಇಲ್ಲಿ ನಾಯಿಗಳೇ ಇಲ್ಲ ಎಂದು ಸಂಸ್ಥೆಗೆ ವರದಿ ಒಪ್ಪಿಸುತ್ತಾರೆ. ಇದೊಂದು ಅವ್ಯವಸ್ಥಿತ ವ್ಯವಸ್ಥೆ. ಸಮಸ್ಯೆ ಇರುವುದು ರಾತ್ರಿ ವೇಳೆ, ಪರಿಹಾರ ಹುಡುಕುವುದು ಮಧ್ಯಾಹ್ನದಲ್ಲಿ! ಪ್ರಾಣಿ ದಯೆಯ ಕಾರಣದಿಂದ ನಿಜಕ್ಕೂ ಈ ಸಂಸ್ಥೆಗಳಿಗೆ ನಾಯಿ ನಿಯಂತ್ರಣದ ಮೂಲಕವೇ ನಾಯಿ ಕಾಟಕ್ಕೆ ಪರಿಹಾರ ಕಾಣಿಸಬೇಕೆಂದಿದ್ದರೆ ಅವು ರಾತ್ರಿ ವೇಳೆ ಕರ‍್ಯನರ‍್ವಹಿಸಲಿ. ಇಲ್ಲದಿದ್ದರೆ ನಾಯಿ ಕಾಟ ಎಂದಿನಂತೆ ಕತ್ತಲಲ್ಲೇ ಇರುತ್ತದೆ. ಎಬಿಸಿ ಹೆಸರಿನ ದಂಧೆ ರಾಜಾರೋಷವಾಗಿ ಹಗಲಲ್ಲೇ ಮುಂದುವರೆಯುತ್ತದೆ.
Sunday, 10 August 2025
ಕಲಿಕೆ ಹಾಗೂ ಭಾಷಾ ಮಾಧ್ಯಮ
ಕೆಲವೊಮ್ಮೆ ಇದನ್ನು ತ್ರಿಭಾಷಾ ಸೂತ್ರದೊಂದಿಗೂ ತರಲಾಗುತ್ತದೆ. ನಮ್ಮ ದೇಶದ ಬಹುಭಾಷಿಕ ಸಮಾಜದೊಂದಿಗೆ ಮುಂದಿನ ತಲೆಮಾರು ಹೊಂದಿಕೊಳ್ಳಬೇಕು ಎಂಬ ಸದಾಶಯ ಇದರಲ್ಲಿದೆ. ಸರಿ, ಆದರೆ ಯಾವುದೇ ಭಾಷೆಯ ಕಲಿಕೆ ಆಯ್ಕೆ ಮಕ್ಕಳಿಗೂ ಪಾಲಕರಿಗೂ ಇರಬೇಕಾದುದು ಸರ್ಕಾರಗಳ ಕರ್ತವ್ಯ, ಇದಕ್ಕೆ ಹೊರತಾಗಿ ಇದನ್ನೇ ಕಲಿಯಿರಿ ಎಂದು ಒತ್ತಾಯಿಸುವುದು ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧ. ಯಾರಾದರೂ ಸಂಸ್ಕೃತ ಅಥವಾ ಉರ್ದು ಕಲಿಯುತ್ತೇನೆ ಅಂದರೆ ಅದಕ್ಕೆ ಶಿಕ್ಷಕರ ಹಾಗೂ ಅಂಥ ವಾತಾವರಣ ಮತ್ತು ಕಲಿಕಾ ವ್ಯವಸ್ಥೆಯನ್ನು ರೂಪಿಸಿಕೊಡಬೇಕಾದುದು ಮಾತ್ರ ಸರ್ಕಾರದ ಕೆಲಸವಾಗಬೇಕು, ಹೊರತಾಗಿ ಇಲ್ಲ, ಕನ್ನಡವನ್ನೋ ತಮಿಳನ್ನೋ ಇಲ್ಲಿ ಕಲಿಯತಕ್ಕದ್ದು, ಬೇರೆ ಭಾಷೆಗಳ ಕಲಿಕೆಗೆ ಅವಕಾಶವಿಲ್ಲ ಎಂದು ನಿರಾಕರಿಸುವುದು ನಮ್ಮ ವ್ಯವಸ್ಥೆಗೆ ಪೂರಕವಲ್ಲ, ಅದಾಗಬಾರದು, ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದಕ್ಕೆ ಸ್ವಲ್ಪ ಅವಕಾಶ ಕೊಟ್ಟಿದ್ದರೂ ಅದರಲ್ಲೂ ಮಿತಿಗಳಿವೆ.
ಆಗಾಗ ಕಾಣಿಸಿಕೊಳ್ಳುವ ನಮ್ಮ ದೇಶದಲ್ಲಿನ ಭಾಷಾ ಕಲಿಕೆಯ ಸಮಸ್ಯೆ ಇದೀಗ ಮತ್ತೆ ತಲೆ ಎತ್ತಿದೆ, ನಿಜವಾಗಿ ಈ ಸಮಸ್ಯೆ ಹುಟ್ಟಿದ್ದು ನಮ್ಮ ದೇಶವನ್ನು ರಾಜ್ಯಗಳಾಗಿ ವಿಂಗಡಿಸುವ ಸಂದರ್ಭದಲ್ಲಿ ಭಾಷೆಯನ್ನು ಆಧರಿಸಿ ರಾಜ್ಯಗಳ ವಿಂಗಡಣೆ ಮಾಡಿದಾಗಿನಿಂದ, ಆಗ ನೆಹರು ಮೊದಲಾದವರು ಪ್ರಾದೇಶಿಕ ಭಾಷೆಗಳಿಗೂ ಮಹತ್ವ ಇರಬೇಕು, ಜಾಗತಿಕ ಭಾಷಾ ಕಲಿಕೆಯಲ್ಲೂ ನಮ್ಮ ಮಕ್ಕಳು ಹಿಂದೆ ಉಳಿಯಬಾರದು ಎಂಬ ಕಾರಣಕ್ಕೆ ಶಾಲಾ ಕಲಿಕೆಯಲ್ಲಿ ಭಾಷೆಗಳನ್ನು ನಿಗದಿಪಡಿಸಿದರು, ಆಗ ಪ್ರಾದೇಶಿಕ ಭಾಷೆಯ ಜೊತೆಗೆ ಮಾತೃ ಭಾಷೆ, ಜಾಗತಿಕ ಭಾಷೆ ಎಂದು ಪರಿಗಣಿಸಿ ತ್ರಿಭಾಷಾ ಸೂತ್ರವನ್ನು ಎಲ್ಲರನ್ನೂ ಸಮಾಧಾನಪಡಿಸುವಂತೆ ರೂಪಿಸಿತು, ಸ್ವಲ್ಪ ಕಾಲ ಆದ ಮೇಲೆ ೧೯೬೫-೬೬ರಲ್ಲಿ ಇದರ ವಿರುದ್ಧ ಮೊದಲು ತಮಿಳುನಾಡು ದನಿ ಎತ್ತಿ ಹಿಂದಿ ಹೇರಲಾಗುತ್ತಿದೆ ಎಂದು ವಿರೋಧಿಸಿತು, ಜೊತೆಗೆ ದ್ರಾವಿಡ ಭಾಷೆಗಳನ್ನು ಒಗ್ಗೂಡಿಸಲು ದ್ರಾವಿಡರ ಮೇಲೆ ಉತ್ತರದ ಆರ್ಯರ ಯತ್ನವೆಂದು ಬಿಂಬಿಸಲಾಯಿತು, ಅದರ ಪರಿಣಾಮವಾಗಿ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳು ಇದಕ್ಕೆ ಹೌದೆಂದು ತಲೆ ಹಾಕಿದವು. ಇದಕ್ಕೆ ಪೂರಕವಾಗಿ ಪೆರಿಯಾರ್ ಮೊದಲಾದವರ ರಾಜಕೀಯ ಆಸೆ ಮತ್ತು ನಿಲುವುಗಳು ಸೇರಿಕೊಂಡವು, ಇಲ್ಲಿಂದ ಭಾಷೆಯ ಜೊತೆಗೆ ರಾಜಕೀಯ ಬೆರೆತಿತು. ಅದಾದ ಮೇಲೆ ಈಗ ೨೦೨೫ರಲ್ಲಿ ಮೋದಿ ಸರ್ಕಾರ ಮಾತೃಭಾಷೆ, ಪ್ರಾದೇಶಿಕ ಭಾಷೆ ಹಾಗೂ ಜಾಗತಿಕ ಭಾಷೆ ಎಂಬ ತ್ರಿಭಾಷೆಗಳ ಕಲಿಕೆಗೆ ಮತ್ತೆ ಎನ್ ಇಪಿ ಹೆಸರಲ್ಲಿ ಯತ್ನಿಸಿ, ಯಾರು ಈ ಸೂತ್ರ ಒಪ್ಪುತ್ತಾರೋ ಆ ರಾಜ್ಯಗಳಿಗೆ ಅನುದಾನ ಕೊಡುವ ಯೋಜನೆ ಹಾಕಿದೆ, ಇದರಂತೆ ಉತ್ತರ ಪ್ರದೇಶ ಹೆಚ್ಚು ಅನುದಾನ ಪಡೆಯುತ್ತಿದ್ದರೆ ಇದರ ಬದಲಾಗಿ ಹಿಂದಿ ಕೈಬಿಟ್ಟ ತಮಿಳುನಾಡು ಮತ್ತು ಕರ್ನಾಟಕಗಳಿಗೆ ಅನುದಾನ ಸಿಗುತ್ತಿಲ್ಲ, ಜೊತೆಗೆ ಸದ್ಯ ನಮ್ಮ ದೇಶದಲ್ಲಿ ಭಾಷೆಯ ಗೊಂದಲ ಹೆಚ್ಚಾಗಿಯೇ ಇದೆ, ಒಂದೆಡೆ ಶಾಸ್ತ್ರೀಯ ಭಾಷೆಯಾಗಿ ಕೆಲವನ್ನು ಗುರುತಿಸಿ ಅವುಗಳ ಬೆಳವಣಿಗೆಯ ಹೆಸರಲ್ಲಿ ಅನುದಾನ ಕೊಡಲಾಗುತ್ತಿದೆ, ಆಡುವ ಭಾಷೆಗಳೆಲ್ಲ ಶಾಸ್ತ್ರೀಯವೇ ಎಂದು ಒಂದೆಡೆ ಇದಕ್ಕೆ ವಿರೋಧವಿದೆ, ಇನ್ನೊಂದೆಡೆ ಸಂವಿಧಾನ ೨೨ ಭಾಷೆಗಳನ್ನು ಅಧಿಕೃತ ಭಾರತೀಯ ಭಾಷೆಗಳಾಗಿ ಪರಿಗಣಿಸಿದೆ, ಆದರೆ ಶಾಲೆಗಳಲ್ಲಿ ಭಾರತದಲ್ಲಿ ೧೨೦ಕ್ಕೂ ಹೆಚ್ಚು ಭಾಷೆಗಳನ್ನು ಕಲಿಸಲಾಗುತ್ತಿದೆ, ಈ ಮಾತೃ ಭಾಷೆ ಹಾಗೂ ಪ್ರಾದೇಶಿಕ ಭಾಷೆ ಅನ್ನುವುದರಲ್ಲೇ ಗೊಂದಲ ಬೇಕಾದಷ್ಟಿದೆ. ಈಗ ಕರ್ನಾಟಕವನ್ನೇ ನೋಡಿ ಮೇಲ್ನೋಟಕ್ಕೆ ನಾನು ಕನ್ನಡಿಗ, ಕನ್ನಡದ ಹುಡುಗ. ನನ್ನ ಪ್ರಾದೇಶಿಕ ಭಾಷೆ ಕನ್ನಡ ಆದರೆ ಮಾತೃಭಾಷೆಯ ಪ್ರಶ್ನೆ ಬಂದರೆ ನನ್ನದು ಹವ್ಯಕ ಎಂಬ ಕನ್ನಡದ ಸಾಮಾಜಿಕ ಉಪಭಾಷೆ, ಹೀಗೆ ಕರ್ನಾಟಕದಲ್ಲಿರುವ ಸಾಮಾಜಿಕ ಉಪಭಾಷೆಗಳೇ ಮಾತೃ ಭಾಷೆಗಳಾದ ಜನಸಂಖ್ಯೆ ಕೋಟಿಗಳನ್ನು ದಾಟುತ್ತದೆ. ಹೀಗಿರುವಾಗ ಮಾತೃಭಾಷೆ ಎಂದು ಕಲಿಯುವ ವಿಧಾನ ಹೇಗೆ? ಎಲ್ಲಿ ಕಲಿಸಲು ಸಾಧ್ಯ? ಅದನ್ನು ಮನೆಯಲ್ಲೇ ಕಲಿಯಬೇಕು, ಇದನ್ನೆಲ್ಲ ಸರ್ಕಾರದ ಆದೇಶದ ಮೂಲಕ ಕಲಿಸಲು ಮುಂದಾದರೆ ಎದುರಾಗುವ ಸಮಸ್ಯೆಗಳಿಗೆ ಆದಿ ಅಂತ್ಯ ಇರುವುದಿಲ್ಲ, ಕೆಲವರು ನಮ್ಮದು ಕೊಡಗು ಕನ್ನಡ ಅಂದರೆ ಇನ್ನು ಕೆಲವರು ಮಳವಳ್ಳಿ ಕನ್ನಡ ಅಂತಾರೆ, ಇನ್ನು ಧಾರವಾಡ, ಮಲೆನಾಡು, ಕರಾವಳಿ, ಬೀದರ್ ಹೀಗೆ ಪ್ರಾದೇಶಿಕದಲ್ಲೂ ಒಳವಿಂಗಡಣೆಗೆ ಅವಕಾಶವಿದೆ, ಮಾತೃಭಾಷೆ ಇದೆಂದು ಗುರುತಿಸಲು ಹೊರಟರೆ ಅದು ಕಗ್ಗಂಟಾಗುತ್ತದೆ, ಈಗ ನೋಡಿ ಕನ್ನಡದ ಪತ್ರಿಕೆಗಳು, ಶಾಲಾ ಪಠ್ಯಗಳು ಸಾಮಾನ್ಯವಾಗಿ ಬಳಸುವ ಹಳೆಯ ಮೈಸೂರು ಮತ್ತು ಬೆಂಗಳೂರು ಕನ್ನಡವನ್ನು ರಾಜ್ಯದಲ್ಲಿ ಕನ್ನಡವೆಂದು ಪರಿಗಣಿಸಿ ಅದನ್ನೇ ಶಾಲೆಗಳ ಪಠ್ಯದಲ್ಲಿ ಕಲಿಸಲಾಗುತ್ತಿದೆ, ಇದರ ವಿರುದ್ಧವೂ ಕೂಗು ತುಳು, ಕೊಡವ, ಇತ್ಯಾದಿ ಸಮುದಾಯಗಳು ಪ್ರಶ್ನಿಸುತ್ತಿವೆ, ಸಾಮಾಜಿಕ ಉಪಭಾಷೆಗಳೆಲ್ಲ ಇದನ್ನೇ ಕೇಳಬಹುದು, ಹೀಗೆ ಭಾರತದಲ್ಲಿ ಒಂದು ಅಂದಾಜಿನಂತೆ ಇರುವ ಭಾಷೆಗಳ ಸಂಖ್ಯೆ ಮೂರು ಸಾವಿರಕ್ಕೂ ಹೆಚ್ಚು, ಇವುಗಳಲ್ಲಿ ಲಿಪಿ ಇರುವ ಹಾಗೂ ಇಲ್ಲದ ಭಾಷೆ, ಅವುಗಳ ಪ್ರಾಚೀನತೆಯ ಆಧಾರದ ವಿಂಗಡಣೆ ಇತ್ಯಾದಿ ಸಮಸ್ಯೆಗಳಿವೆ, ಇವಕ್ಕೆಲ್ಲ ನಿಯಮಗಳ ಮೂಲಕ ಪರಿಹಾರ ಎಂದಿಗೂ ಸಿಗಲು ಸಾಧ್ಯವಿಲ್ಲ. ಯಾವುದೇ ಭಾಷೆಯನ್ನು ಅದೊಂದು ಸಂವಹನ ಮಾಧ್ಯಮ ಎಂದು ಪರಿಗಣಿಸಿ ಎಲ್ಲಿ ಯಾವುದಕ್ಕೆ ಮಹತ್ವ ಅಗತ್ಯ ಎಂಬುದರ ಆಧಾರದಲ್ಲಿ ವ್ಯಕ್ತಿಗೆ ಕಲಿಯುವ ವಾತಾವರಣ ರೂಪಿಸಿ ಕೊಡುವ ಕೆಲಸವನ್ನು ಸರ್ಕಾರಗಳು ಮಾಡಿದರೆ ಸಕು. ಆಗ ಜನತೆ ತಮ್ಮ ಅಗತ್ಯ ಎಷ್ಟಿದೆ ಅನ್ನುವ ಆಧಾರದಲ್ಲಿ ಬೇಕಾದ ಭಾಷೆಗಳನ್ನು ಕಲಿತುಕೊಳ್ಳುತ್ತಾರೆ, ಇದನ್ನು ಬಿಟ್ಟು ಇದನ್ನೇ ಕಲಿಯಿರಿ, ಕಲಿಯಬೇಕು ಅಂದಾಗ ಸಮಸ್ಯೆ ಉಲ್ಬಣಿಸುತ್ತದೆ, ಇದಕ್ಕೆ ಭಾವನಾತ್ಮಕ ಅಂಶಗಳು ಸೇರಿ ಇಲ್ಲದ ಕಗ್ಗಂಟು ಸೃಷ್ಟಿಯಾಗುತ್ತದೆ. ಈಗ ತಮಿಳುನಾಡು ಮತ್ತು ಕರ್ನಾಟಕಗಳಲ್ಲಿ ಆಗಿರುವುದು ಇದೇ. ಭಾಷೆಗಳ ವಿಷಯದಲ್ಲಿ ನಮ್ಮ ಪೂರ್ವಿಕರಾದ ಹಿರಿಯರು ಹಾಕಿದ ಸಮನ್ವಯ ಮಾರ್ಗ ನೋಡಿ, ದೇಶದ ಎಲ್ಲ ಪ್ರದೇಶಗಳಲ್ಲೂ ನಾವು ಕನಿಷ್ಠ ಎರಡು ಭಾಷೆ ಮಾತನಾಡುವವರನ್ನು ಕಾಣುವುದು ಸಹಜ, ಕೆಲವೆಡೆ ಈಗಲೂ ಮೂರು ನಾಲ್ಕನ್ನೂ ಮಾತನಾಡುತ್ತಾರೆ, ಒಂದೇ ಮನೆಯಲ್ಲಿ ನಾಲ್ಕಾರು ಭಾಷೆ ಮಾತನಾಡುವ ಒಂದೇ ಕುಟುಂಬದ ಸದಸ್ಯರು ಖುಷಿಯಾಗಿರುತ್ತಾರೆ, ಅಲ್ಲಿ ಯಾವುದೇ ಬಗೆಯ ಭಾಷಿಕ ಸಮಸ್ಯೆ ಹಬ್ಬ ಆಚರಣೆ ಇತ್ಯಾದಿ ಸಂದರ್ಭದಲ್ಲಿ ಎಂದಿಗೂ ಎದುರಾಗುವುದಿಲ್ಲ, ಹೇಗೆ? ಏಕೆ, ಮನೆಯವರೆಲ್ಲ ಭಾಷೆಯನ್ನು ಸಂವಹನ ಸಾಧನ ಎಂದು ಮಾತ್ರ ಪರಿಗಣಿಸುತ್ತಾರೆ. ಯಾವುದೇ ಭಾಷೆಯನ್ನು ಕಲಿಯುವ ಅಥವಾ ಬಿಡುವ ಆಯ್ಕೆಯನ್ನು ಜನತೆಗೆ ಬಿಡಬೇಕು, ಸರ್ಕಾರ ಇಂಥ ವಿಷಯಗಳಲ್ಲಿ ಕೈಹಾಕಿದಷ್ಟೂ ಸಮಸ್ಯೆ ಹೆಚ್ಚು. ಜನರಿಗೆ ಭಾಷೆ ಕಲಿಯಲು ಅಹತ್ಯ ಅನುಕೂಲ ಕಲ್ಪಿಸಿಕೊಡುವ ಕೆಲಸವನ್ನು ಮಾತ್ರ ಅದು ಕೈಗೊಂಡರೆ ಸಮಸ್ಯೆ ಆಗುವುದಿಲ್ಲ, ಆದರೆ ಇದು ನಮ್ಮ ರಾಜ್ಯ ಇಲ್ಲೇನಿದ್ದರೂ ನಮ್ಮ ಭಾಷೆಯನ್ನು ಮಾತ್ರವೇ ಆಡಬೇಕು ಅನ್ನುವುದಕ್ಕೆ ಮಿತಿ ಇದೆ. ಏಕೆಂದರೆ ಇದನ್ನು ಹೆಚ್ಚು ಎಳೆಯಲು ಆಗುವುದಿಲ್ಲ, ಕಾರಣ ನಮ್ಮದು ನಮ್ಮ ಸಂವಿಧಾನ ಹೇಳುವಂತೆ ಒಕ್ಕೂಟ ರಾಷ್ಟ್ರ ಇಲ್ಲಿ ಅಸಂಖ್ಯ ಭಾಷೆಗಳಿವೆ, ಸಮುದಾಯಗಳಿವೆ. ಇವೆಲ್ಲ ದೇಶವಾಗಿ ಕೂಡಿರಬೇಕಾದ ಅಗತ್ಯ ಯಾವಾಗಲೂ ಇದೆ, ಇದಕ್ಕೆ ಧಕ್ಕೆ ಆಗದಂತೆ ನಾವೆಲ್ಲ ಎಚ್ಚರದಿಂದ ಸಂವಿಧಾನಕ್ಕೆ ಸರ್ವೋಚ್ಚ ಗೌರವ ಕೊಡುವ ಕೆಲಸವನ್ನು ಮೊದಲು ಮಾಡಬೇಕು, ಇದಕ್ಕೆ ಕೇವಲ ಸಂವಹನ ಮಾಧ್ಯಮವಾಗಿಯಷ್ಟೇ ಕೆಲಸ ಮಾಡಬೇಕಾದ ಭಾಷೆಯನ್ನು ಭವನಾತ್ಮಕ ದೃಷ್ಟಿಯಿಂದ ದೊಡ್ಡದು ಮಾಡುವ, ಅದಕ್ಕೆ ಆಯಾ ಸರ್ಕಾರಗಳು ಒತ್ತು ಕೊಡದೇ ಸಂವಿಧಾನದ ಆಶಯ ಕಾಯುವ ಕೆಲಸಕ್ಕೆ ಮಾತ್ರ ಆದ್ಯತೆ ಕೊಡಬೇಕು.
ಭಾಷೆಯ ಪ್ರಾಚೀನತೆಯನ್ನು ಹೇಳಿಕೊಂಡು ಸಂಭ್ರಮಿಸುವ ಜನರಿದ್ದಾರೆ. ಆದರೆ ಯಾವ ಭಾಷೆ ಎಷ್ಟು ಹಳೆಯದಾದರೆ ಏನು? ಅದನ್ನು ಹೇಗೆ ಉಳಿಸಿ ಬೆಳೆಸುತ್ತೇವೆ ಎಂಬುದು ಮುಖ್ಯ. ಆದರೆ ನಮ್ಮ ಜನರಿಗೆ ಭಾಷೆಯ ಹೆಸರಲ್ಲಿ ರಾಜಕೀಯ ಮಾಡುವುದರಲ್ಲಿ ಇರುವ ಆಸಕ್ತಿ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಕಾಣುವುದಿಲ್ಲ, ಸಾಲದ್ದಕ್ಕೆ ಭಾಷೆ ಉಳಿಸುವುದು ಎಂದರೆ ಬೇರೆ ಭಾಷೆಯವರ ಮೇಲೆ ಬಲಾತ್ಕಾರ ಮಾಡುವುದು, ಹಲ್ಲೆ ಮಾಡಿ ಹೆಚ್ಚುಗಾರಿಕೆ ಮೆರೆಯುವುದು, ಅನ್ಯ ಭಾಷೆಯ ಫಲಕಗಳಿಗೆ ಮಸಿ ಬಳಿಯುವುದು ಎಂಬ ಪರಿಕಲ್ಪನೆ ಬೆಳೆದುಬಿಟ್ಟಿದೆ. ಇದು ಸರಿಯಲ್ಲ, ಹೌದು, ದೇಶದ ಬೇರೆ ಯಾವುದೇ ಸಮುದಾಯಕ್ಕೆ ಹೋಲಿಸಿದರೆ ಕನ್ನಡ ಸಮುದಾಯದ ಜನ ಬಹಳ ಹಿಂದಿನಿಂದಲೂ ಉದಾರಿಗಳು. ಇದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ, ಇದರಲ್ಲಿ ಸತ್ಯಾಂಶ ಇಲ್ಲದಿಲ್ಲ, ಕೆಲವು ಕಡೆ ಭಾಷೆ ಕಲಿಕೆ ಕಡ್ಡಾಯ ಮಾಡದಿದ್ದರೆ ಆಗುವುದೇ ಇಲ್ಲ ಎಂಬ ವಾತಾವರಣವಿದೆ. ಉದಾಹರಣೆಗೆ ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯವೆಂಬ ನಿಯಮ ಇಲ್ಲದಿದ್ದರೆ ಕನ್ನಡ ಎಂದೋ ಕಳೆದುಹೋಗಿರುತ್ತಿತ್ತು, ಇನ್ನು ಕೂಡ ಕೆಲವು ಕಲಿಕೆಗಳಲ್ಲಿ ಕನ್ನಡದ ಗಂಧವೇ ಇಲ್ಲ, ಇದು ಯಾಕೋ ಸರ್ಕಾರದ ಗಮನಕ್ಕೂ ಬಂದಿಲ್ಲ. ಉದಾಹರಣೆಗೆ ಬೆಂಗಳೂರು ಒಂದರಲ್ಲೇ ದೈಹಿಕ ಚಿಕಿತ್ಸಾ ಕ್ರಮ ಕಲಿಸುವ ಪಿಸಿಯೋತೆರಪಿಯ ೫೦ ಕ್ಕೂ ಹೆಚ್ಚು ಕಾಲೇಜುಗಳಿವೆ, ಇವುಗಳಲ್ಲಿ ಕನ್ನಡದವರಿಗಿಂತ ಹೊರ ರಾಜ್ಯ ಅದರಲ್ಲೂ ಕೇರಳ ಹಾಗೂ ಬಿಹಾರಗಳ, ಉತ್ತರ ಭಾರತ, ಅಸ್ಸಾಂ ಕಡೆಯ ವಿದ್ಯಾರ್ಥಿಗಳು ಶೇ. ೯೦ರಷ್ಟಿದ್ದಾರೆ. ಇವರಿಗೆ ಕನ್ನಡ ಅನಿವಾರ್ಯ ಅನಿಸುವುದು ಅವರಿಗೆ ಕಾಲೇಜು ವಹಿಸುವ ನಿಯೋಜಿತ ಕಾರ್ಯ ಪೂರೈಸುವಾಗ ಮಾತ್ರ. ಏಕೆಂದರೆ ಅವರು ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿ ರೋಗಿಗಳಿಗೆ ನಿಗದಿತ ಅರ್ಜಿ ನಮೂನೆ ಕೊಟ್ಟು ಮಾಹಿತಿ ಪಡೆಯ ಬೇಕಾಗುತ್ತದೆ, ಆಗ ಮಾತ್ರ, ಇವರಲ್ಲಿ ಬಹುತೇಕರು ಕನ್ನಡ ಬಲ್ಲ ಜನರಿಂದ ಕೆಲಸ ಮಾಡಿಸಿಕೊಂಡು ಹಣ ಕೊಡುತ್ತಿದ್ದಾರೆ, ಅವರಿಗೆ ಕನ್ನಡ ಕಡ್ಡಾಯವಾಗಿಲ್ಲ. ಭಾಷೆ ತಾನೇ ಯಾವುದಾದರೂ ಕಲಿಯಲಿ ಎಂದು ಹೇಳುವಂತಿಲ್ಲ, ಈ ಪಿಸಿಯೋತೆರಪಿ ಕಾಲೇಜುಗಳನ್ನೇ ನೋಡಿ. ಈಚೆಗೆ ಈ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ವೈದ್ಯರೆಂದು ಐಐಎಂ ಘೋಷಿಸಿದೆ. ಇದರಿಂದ ಮುಖ್ಯಧಾರೆಯಲ್ಲಿ ನೀಟ್ ಪಾಸಾಗದವರು ಆರಾಮವಾಗಿ ಇಂಥ ಕಾಲೇಜುಗಳ ಫೀಸು ಕಟ್ಟಿ ಪ್ರವೇಶಪಡೆದು ವೈದ್ಯರೆನಿಸಿಕೊಳ್ಳುತ್ತಾರೆ, ಇಲ್ಲೇ ನೆಲೆಯೂರುತ್ತಾರೆ, ನಮ್ಮ ನೆಲ, ಜಲ, ಜನ, ಆದರೆ ಭಾಷೆ ಕಲಿಯುವ ಅವಶ್ಯಕತೆ ಇರುವುದೇ ಇಲ್ಲ, ವೈದ್ಯರೆಂಬ ಹೆಗ್ಗಳಿಕೆ ಬೇರೆ. ಇಷ್ಟಾದರೆ ನಷ್ಟ ಯಾರಿಗೆ? ನನಗೆ ಅರ್ಥವಾಗದ ವಿಷಯವೆಂದರೆ ಹಿಂದೆ ಎಂಜಿನಿಯರಿಂಗ್ ನಂಥ ಬಿ ಇ, ವೃತ್ತಿಪರ ಕೋರ್ಸ್ಗಳಲ್ಲಿ ಕನ್ನಡ ಭಾಷೆ ಜಡ್ಡಾಯವೆಂದು ಸಮಿತಿಯ ಮೂಲಕ ಶಿಫಾರಸು ಕೊಡಲಾಗಿತ್ತು. ಅದು ನಮ್ಮ ರಾಜ್ಯದ ವಿಟಿಯು ಅಡಿ ಬರುವ ಕಾಲೇಜುಗಳಲ್ಲಿ ಅಳವಡಿಸಲಾಗಿದೆ.ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿ ಬರಲಿದೆ, ಆ ಪದವಿಗಳ ಪಠ್ಯ ಕೂಡ ಅನುವಾದವಾಗಿವೆ, ಲಭ್ಯವಿವೆ, ಆದರೆ ಈ ವೈದ್ಯಕೀಯ ಹಾಗೂ ಪೂರಕ ವೈದ್ಯಕೀಯ ವೃತ್ತಿಪರ ಕೋರ್ಸಗಳಲ್ಲಿ ಕನ್ನಡ ಭಾಷೆಯನ್ನು ಯಾಕೆ ಕಡ್ಡಾಯಗೊಳಿಸಲಾಗಿಲ್ಲ ಎಂಬುದು. ಇದು ಕೂಡಲೇ ಆಗದಿದ್ದರೆ ನಮ್ಮ ಜನರಿಗೆ, ಕನ್ನಡ ಪದವೀಧರರಿಗೆ ಅನ್ಯಾಯವಾಗುತ್ತಲೇ ಇರುತ್ತದೆ, ಇಲ್ಲಿ ಕಲಿಯಲು ಬರುವವರು ಮೊದಲು ಕನಿಷ್ಠ ನಿತ್ಯ ಬಳಕೆಯ ಭಾಷೆಯನ್ನಾದರೂ ಕಲಿಯಲಿ, ಇಲ್ಲವಾದಲ್ಲಿ ಹೊಗಿನಿಂದ ಬರುವವರು ತಮ್ಮ ಭಾಷೆಯಲ್ಲಿ ಮಾತನಾಡಿ ವ್ಯವಹಾರ ಮುಗಿಸಿ ಹೋಗುತ್ತಾರೆ, ವ್ಯಾಪಾರಿಗಳಿಗೆ ವ್ಯಾಪಾರ ಮುಖ್ಯವೇ ವಿನಾ ಅವರು ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾಲೇಜುಗಳು ವಿದ್ಯಾರ್ಥಿಗಳಿಂದ ಲಕ್ಷಾಂತರ ಸುಲಿಯುತ್ತವೆ, ಕನ್ನಡವೆಂದರೆ "ಆ" "ಊ" ಅನ್ನದೇ ಅವರೆಲ್ಲ ವೈದ್ಯ ಪದವಿ ಪಡೆದು ಹೋಗುತ್ತಾರೆ, ಈ ಬಗ್ಗೆ ಸರ್ಕಾರಮ ಸಾಹಿತ್ಯ ಪರಿಷತ್ತು ಆದಷ್ಟು ಬೇಗ ಗಮನಹರಿಸಿ ಕ್ರಮ ಕೈಗೊಳ್ಳಬೇಕು.
Friday, 8 August 2025
ಟಿಪ್ಪೂ ಕೊಡುಗೆ
ಆ ಕಾಲಕ್ಕೆ ಇದರ ನಿರ್ಮಾಣ ವೆಚ್ಚ ೨.೫ ಕೋಟಿ ರೂಗಳು. ಇದನ್ನು ಭರಿಸಲು ರಾಜರು ಹರಸಾಹಸ ಪಟ್ಟಿದ್ದಾರೆ, ಬ್ರಿಟಿಷರು ಮತ್ತು ತಮಿಳುನಾಡು ನೀಡಿದ ಕಾಟವನ್ನು ಸಹಿಸಿಕೊಂಡು ಸಾಧಿಸಿದ್ದಾರೆ. ಇದನ್ನು ನಿರ್ಮಿಸುವ ಮೊದಲು ಮೈಸೂರು ಸುತ್ತ ಕಾವೇರಿ ನದಿಗೆ ೩೬ ಒಡ್ಡುಗಳಿದ್ದವು. ಅವುಗಳ ಸಾಮರ್ಥ್ಯ ಬಹಳ ಕಡಿಮೆ, ಅಷ್ಟಾಗಿ ಕೃಷಿಗೆ ಅನುಕೂಲವಾಗ್ತಿಲ್ಲ ಎಂದು ತಿಳಿದ ರಾಜರು ನೀರಿನ ಬವಣೆ ನೀಗಿಸುವ ಹಠ ತೊಟ್ಟು ಇದರ ನಿರ್ಮಾಣಕ್ಕೆ ಕೈ ಹಾಕುತ್ತಾರೆ, ಆಗ ತಾನೆ ತಂತ್ರಜ್ಞರಾಗಿ ಪದವಿ ಪಡೆದು ಬಂದಿದ್ದ ವಿಶ್ವೇಶ್ವರಯ್ಯ ಇದರ ಹೊಣೆ ಹೊರುತ್ತಾರೆ, ರಾಜರು ದೊಡ್ಡ ಜವಾಬ್ದಾರಿ ವಹಿಸಿದ್ದನ್ನು ಅರಿತ ಇದಕ್ಕೆ ಪೂರ್ವತಯಾರಿ ಎಂಬಂತೆ ವಿಶ್ವೇಶ್ವರಯ್ಯನವರು ಮೈಸೂರಿನ ಕೆ ಆರ್ ಎಸ್ ಕಟ್ಟುವ ಮುಂಚೆ ಚಿತ್ರದುರ್ಗದ ಮಾರಿಕಣಿವೆಯ ಅಣೆಕಟ್ಟು ರಚಿಸಿ ಅನುಭವ ಗಳಿಸಿದ್ದರು. ಅದನ್ನು ವೇದವತಿ ನದಿಗೆ ೧೯೦೭ರಲ್ಲಿ ಕಟ್ಟಲಾಗಿದೆ. ಅನಂತರ ೧೯೩೮ರಲ್ಲಿ ಅವರು ತುಮಕೂರಿನ ಮಾರ್ಕೋನಹಳ್ಳಿ ಎಂಬಲ್ಲಿ ಒಂದು ದೊಡ್ಡ ಅಣೆಕಟ್ಟು ನಿರ್ಮಿಸುತ್ತಾರೆ, ಅದು ಸುಮ್ಮನೇ ನಿರ್ಮಿಸಿದ್ದಲ್ಲ, ಅದರ ಉಪಯೋಗ ಇಂದಿಗೂ ತುಮಕೂರಿಗೆ ಅಪಾರವಾಗಿದೆ. ಅದರ ಸ್ವರೂಪ ಕೃಷ್ಣರಾಜಸಾಗರದ ಪ್ರತಿರೂಪದಂತೆ ಇದೆ. ಅಲ್ಲಿನ ಉದ್ಯಾನ ಕೂಡ. ಆದರೇನು ಅದರ ನಿರ್ವಹಣೆ ಸರಿಯಾಗಿಲ್ಲದ ಕಾರಣ ಅದು ಸೊರಗಿದೆ ಅಷ್ಟೇ. ಅಲ್ಲಿ ಕಸ ತೆಗೆಯುವವರೂ ಇಲ್ಲ, ಜನ ಅಲ್ಲಿ ತೊಳೆದುಕೊಳ್ಳಲು ಬರುವಂತಾಗಿದೆ. ಅದಕ್ಕೂ ತುಮಕೂರಿನ ಅರಣ್ಯ ಇಲಾಖೆ, ತೋಟಗಾರಿಕೆ ಅಥವಾ ಜಿಲ್ಲಾಡಳಿತ ಎಲ್ಲಕ್ಕೂ ಮುಖ್ಯವಾಗಿ ನೇತಾಗಳು ಅನಿಸಿಕೊಂಡವರು ಆಸಕ್ತಿ ತೋರಿಸಿದರೆ ಅಲ್ಲೊಂದು ಮಿನಿ ಸುಂದರ ಉದ್ಯಾನ ನಿರ್ಮಾಣವಾಗಿ ಜನರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ, ಆದರೆ ಇದಕ್ಕೆ ಯಾರೊಬ್ಬರೂ ಆಸಕ್ತಿ ತೋರಿಸದಿರುವುದು ತುಮಕೂರಿನ ದುರಂತ. ಇದು ಈಗಲೂ ೪ ಸಾವಿರ ಹಳ್ಳಿಗಳ ಬಾಯಾರಿಕೆ ನೀಗಿಸುತ್ತಿದೆ. ಇದನ್ನು ಸಮೀಪದ ಯೆಡೆಯೂರಿನ ಸಿದ್ದಲಿಂಗೇಶ್ವರ ದೇವಾಲಯಕ್ಕೆ ಬರುವ ಪ್ರವಾಹ ನಿಯಂತ್ರಿಸಲು ಕಾವೇರಿಯ ಉಪನದಿ ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಪ್ರಪಂಚದಲ್ಲಿ ಮೊದಲ ಬಾರಿಗೆ ಅಟೋಮೆಟಿಕ್ ರೀತಿಯಲ್ಲಿ ನೀರು ಹೊರಹೋಗುವಂತೆ ಸಿಪೋನ್ ವ್ಯವಸ್ಥೆಯಲ್ಲಿ ರೂಪಿತವಾದ ಅಣೆಕಟ್ಟು ಎಂಬ ಹೆಗ್ಗಳಿಕೆ ಇದಕ್ಕಿದೆ. ನಿಜವಾಗಿ ವಿಜಯನಗರ ಸಾಮ್ರಾಜ್ಯ ಬಿಟ್ಟರೆ ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿದವರೆಂದರೆ ಮೈಸೂರು ಅರಸರು. ಆದ್ದರಿಂದಲೇ ಮೈಸೂರು ಸುತ್ತಮುತ್ತಲಿನ ಜನ ನಿತ್ಯ ಬೆಳಗಾದರೆ ಮನೆ ದೇವರ ಜೊತೆಗೆ ಅರಸರಿಗೆ ಅದರಲ್ಲೂ ನಾಲ್ವಡಿಯವರಿಗೆ ಒಂದು ನಮಸ್ಕಾರ ಹಾಕಲು ಮರೆಯುವುದಿಲ್ಲ, ಇತಿಹಾಸದಲ್ಲಿ ದಾಖಲಾಗಲಿ, ಯಾರದೋ ಪಿತೂರಿಯಿಂದ ದಾಖಲಾಗದಿದ್ದರೂ ಟಿಪ್ಪೂ ಅಂಥ ಕೆಲಸವನ್ನು ಒಂದಾದರೂ ಮಾಡಿದ್ದಿದ್ದರೆ ಅಲ್ಲಿನ ಅಥವಾ ಅವನ ಆಡಳಿತದೊಳಗಿದ್ದ ಜನ ಇಂದಿಗೂ ಖಂಡಿತ ದೇವರ ಮನೆಯಲ್ಲಿ ಅವನ ಚಿತ್ರವನ್ನು ಇಟ್ಟುಕೊಳ್ಳುತ್ತಿದ್ದರು, ನೆನೆಯುತ್ತಿದ್ದರು, ಅಲ್ಲವೇ?
ಜನಪದರು ನೆರವನ್ನು ಮರೆಯುವವರಲ್ಲ ಎಂಬುದು ನಮಗೆ ನೆನಪಿರಲಿ. ಅಂಥದ್ದೊಂದು ನಿದರ್ಶನ ಕೂಡ ಟಿಪ್ಪೂ ವಿಷಯದಲ್ಲಿ ಎಲ್ಲಿಯೂ ಸಿಗುವುದಿಲ್ಲ ಅಂದರೆ ಆತ ಎಂಥ ಮಹಾರಾಜನಾಗಿದ್ದಿರಬಹುದೆಂದು ಊಹಿಸಬಹುದು. ಒಂದೆರಡು ವರ್ಷಗಳ ಹಿಂದೆ ಜನಪದ ತಜ್ಞರಾದ ಹನೂರು ಕೃಷ್ಣಮೂರ್ತಿ ಅವರು ಟಿಪ್ಪೂ ಕುರಿತು ಜನಪದರಿಂದ ದೊರೆತ ಮಾಹಿತಿಯ ಆಧಾರದಲ್ಲಿ ' ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಸುಂದರ ಕಾದಂಬರಿ ರಚಿಸಿಕೊಟ್ಟಿದ್ದಾರೆ, ಟಿಪ್ಪೂ ಜೀವನ ಹಾಗೂ ಅವನ ಅದ್ಭುತ ಕಾರ್ಯ ಯೋಜನೆಗಳು ಅದರಲ್ಲಿ ಇತಿಹಾಸದಂತೆ ದಾಖಲಾಗಿವೆ, ಆಸಕ್ತರು ಗಮನಿಸಿ. ಇಷ್ಟಲ್ಲದೇ ಅವನ ಭೀಕರ ಆಡಳಿತ ಜನಪದರ ಬಾಯಲ್ಲಿ ಇಂದಿಗೂ ಕೊಡಗು, ಮೇಲುಕೋಟೆಗಳಲ್ಲಿದೆ, ಕೇಳಿ ಆನಂದಿಸಬಹುದು. ಹೊರತಾಗಿ ಯಾರನ್ನೋ ಮೆಚ್ಚಿಸಲು ಇದ್ದಬಿದ್ದ ಜನೋಪಯೋಗಿ ಕಾರ್ಯಗಳ ಋಣವನ್ನು ಆತನಿಗೆ ಆರೋಪಿಸಬಹುದು, ಇವೆಲ್ಲ ನಿಜವಲ್ಲ.
Thursday, 7 August 2025
ತಿಕ್ಕಲು ಅಧ್ಯಕ್ಷ
ಭಾರತದ ಆರ್ಥಿಕತೆ ಸಾಯುತ್ತಿದೆ ಎನ್ನುವ ಅವನ ಹೇಳಿಕೆ ಎಷ್ಟು ಮೂರ್ಖತನದ್ದು ನೋಡಿ - ಭಾರತದ ಆರ್ಥಿಕತೆ ಕಳೆದ ಹತ್ತು ವರ್ಷಗಳಲ್ಲಿ ಹೇಗೆ ಬೆಳೆದಿದೆ ಎಂಬುದನ್ನು ಸ್ಚತಃ ವಿಶ್ವ ಬ್ಯಾಂಕ್ ವರದಿ ಮಾಡಿದ್ದನ್ನು ನೋಡಿದ್ದರೂ ತಿಳಿಯುತ್ತಿತ್ತು, ಇಲ್ಲ, ಆತನಿಗೆ ತನ್ನ ಮೂರ್ಖತನವೇ ದೊಡ್ಡದು. ಸದ್ಯ ಭಾರತ ವಿಶ್ವದ ನಾಲ್ಕನೆಯ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಸದ್ಯದಲ್ಲೇ ಇದು ಮೂರನೆಯ ಆರ್ಥಿಕತೆಯಾಗಲಿದೆ, ಈ ಅರಿವಿಲ್ಲದ ಆತ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಇಲ್ಲಿನ ರಾಹುಲ್ ಗಾಂಧಿ ಅದನ್ನು ಬೆಂಬಲಿಸುತ್ತಿದ್ದಾನೆ. ಆದರೆ ಕಾಂಗ್ರೆಸ್ ಆಡಳಿತವಿದ್ದ ೬೦ ಮತ್ತು ೭೦ ರ ದಶಕದ ಭಾರತದ ಆರ್ಥಿಕತೆ ಗಮನಿಸಿ, ಆಗ ಭಾರತ ಶೇ. ೪ ಬೆಳವಣಿಗೆಯನ್ನು ದಾಟಿಯೇ ಇರಲಿಲ್ಲ, ಜಿಡಿಪಿ ೩೫ ರೂ ಆಗಿತ್ತು, ಇಂಥ ಲೆಕ್ಕಾಚಾರವನ್ನು ರಾಹುಲ್ ತಿಳಿಯಲು ಸಿದ್ಧವಿಲ್ಲ.
ಅಮೆರಿಕದ ಮಾರುಕಟ್ಟೆ ಟ್ರಂಪನ ಹುಚ್ಚು ನಿರ್ಧಾರದಿಂದ ಒಂದೇ ದಿನದಲ್ಲಿ ೧.೧ ಟ್ರಿಲಿಯನ್ ಡಾಲರ್ ನಷ್ಟವಾಗಿದೆ. ಸದ್ಯ ರಷ್ಯಾ ರಷ್ಯಾದಿಂದ ಅಮೆರಿಕಕ್ಕೆ ಹೋಗುವ ತೈಲ ಮಾರ್ಗ (ಸಿಪಿಸಿ- ಕ್ಯಾಸ್ಪಿಯನ್ ಪೈಪ್ ಲೈನ್)ವನ್ನು ನಿಲ್ಲಿಸುವುದಾಗಿ ಹೇಳಿದೆ, ಹೀಗಾದರೆ ನಿಜಕ್ಕೂ ಅಮೆರಿಕದ ಆಕ್ಸಿಜನ್ ವಿತರಣೆ ನಿಲ್ಲುತ್ತದೆ, ಒಟ್ಟಿನಲ್ಲಿ ಇನ್ನೊಂದು ವರ್ಷವಿರುವ ತನ್ನ ಅಧಿಕಾರಾವಧಿಯಲ್ಲಿ ಆತ ಅಮೆರಿಕದ ಆರ್ಥಿಕತೆಯನ್ನು ಗುಡಿಸಿ ಗುಡ್ಡೆ ಹಾಕುವುದಂತೂ ಖಚಿತ, ಆದರೆ ಆತ ಅಷ್ಟೇ ಪ್ರಮಾಣದಲ್ಲಿ ಭ್ರಷ್ಟಚಾರದಲ್ಲಿ ತೊಡಗಿದ್ದಾನೆಂದು ಹೇಳಲಾಗುತ್ತಿದೆ, ಇಷ್ಟಾದರೆ ಮುಂಬರುವ ಅಧಶ್ಯಕ್ಷ ಈತನ ಮೇಲೆ ಕ್ರಮ ಕೈಗೊಳ್ಳುವ ಎಲ್ಲ ಸಾಧ್ಯತೆಯೂ ಇದೆ. ಇಂಥ ದುರ್ದಿನವನ್ನು ಆತ ಬರಮಾಡಿಕೊಳ್ಳುತ್ತಿದ್ದಾನೆ.
ಹುಚ್ಚುದೊರೆಯ ಆರ್ಥಿಕ ನೀತಿಗಳು
Tuesday, 5 August 2025
ಭಾರತ-ರಷ್ಯಾ-ಅಮೇರಿಕ: ಆರ್ಥಿಕತೆ, ವಹಿವಾಟುಗಳ ತಿಕ್ಕಾಟ
ತಮಾಷೆಯ ಸಂಗತಿ ಎಂದರೆ ಅತ್ತ ಟ್ರಂಪ್ ಹಾಗೂ ಇತ್ತ ನಮ್ಮ ದೇಶದ ಟ್ರಂಪ್ ತಾಳಕ್ಕೆ ಕುಣಿಯುವ ಜನ ಭಾರತದ ಅರ್ಥ ವ್ಯವಸ್ಥೆ ಕುಸಿಯುತ್ತಿದೆ ಅನ್ನುತ್ತಿದ್ದರೆ ಸದ್ಯ ಟ್ರಂಪ್ ಆಘಾತ ಪಡುವಂತೆ ಭಾರತದ ವಿದೇಶೀ ವಿನಿಮಯ ಕಾದಿಟ್ಟ ಮೊತ್ತ ಇಪರೀತ ಹೆಚ್ಚಳ ಕಾಣುತ್ತಿದೆ, ಇದಕ್ಕೆ ಮಹಾತ್ಮ ಗಾಂಧಿಯವರು ಹೇಳಿಕೊಟ್ಟ ಮಂತ್ರವನ್ನು ಮೋದಿ ಅನುಷ್ಠಾನಕ್ಕೆ ತರುತ್ತಿರುವ ಕ್ರಮ ಹಾಗೂ ವಿದೇಶೀ ಭಾರತೀಯರು ತಾಯ್ನಾಡಿನ ಪರ ತೋರುತ್ತಿರುವ ನಿಷ್ಠೆಗಳು ಕಾರಣವಾಗಿವೆ, ಅಮೆರಿಕ ತೆರಿಗೆ ಹೊಡೆತ ಬೀಳುವ ಮೊದಲು ೬೯೮ ಬಿಲಿಯನ್ ಡಾಲರ್ ನಷ್ಟಿದ್ದ ಭಾರತದ ವಿದೇಶೀ ವಿನಿಮಯ ಕಾದಿಟ್ಟ ನಿಧಿ ಈಗ ದಾಖಲೆಯ ೭೨೦ ಬಿಲಿಯನ್ ಡಾಲರ್ ಗಳಿಗೆ ಏರಿ ಬೆರಗು ಮೂಡಿಸಿದೆ, ಕಿರುಚುವವರು ಏನಾದರೂ ಕಿರುಚಲಿ, ಆದರೆ ಇದೇ ಸತ್ಯ, ಇದನ್ನು ಭಾರತದ ರಿಸರ್ವ್ ಬ್ಯಾಂಕ್ ಸ್ಪಷ್ಟ ಮಾಡಿದೆ. ಇಂಥ ಬೆಳವಣಿಗೆಗೆ ಮುಖ್ಯ ಕಾರಣ ಬಹುತೇಕ ದೇಶಗಳು ಅಮೆರಿಕ ಸಹವಾಸದಿಂದ ದೂರವಾಗುತ್ತಿದ್ದು ಅಮೆರಿಕದ ಡಾಲರ್ ಬದಲು ಬೇರೆ ನಾಣ್ಯಗಳಿಗೆ ಬೆಲೆ ಕೊಡುತ್ತಿರುವುದು, ಭಾರತ ಅಮೆರಿಕದ ಬದಲಾಗಿ ದಕ್ಷಿಣ ಏಷ್ಯಾ , ಅರಬ್ ದೇಶಗಳು, ಆಫ್ರಿಕಾ ಮತ್ತು ಮೆಕ್ಸಿಕೋದಂಥ ದೇಶಗಳ ಜೊತೆಗೆ ಹೆಚ್ಚಿನ ವಹಿವಾಟು ಹೊಂದಿರುವುದು ಪ್ರಮುಖ ಕಾರಣವಾಗಿದೆ. ಜೊತೆಗೆ ತೆರಿಗೆ ಹೆಚ್ಚಿಸಿದರೆ ಭಾರತದಲ್ಲಿರುವ ಕಂಪನಿಗಳು ತಮ್ಮ ದೇಶಕ್ಕೆ ಬಂದು ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಟ್ರಂಪನ ಹುಂಬ ನಿರ್ಧಾರ ಕೂಡ, ಅಮೆರಿಕದ ಉತ್ಪನ್ನಗಳಲ್ಲಿ ಬಹುತೇಕ ಸಾಮಗ್ರಿಗಳ ಬಿಡಿ ಭಾಗಗಳು ತಯಾರಾಗುವುದು ಭಾರತ ಚೀನದಂಥ ದೇಶಗಳಲ್ಲಿ, ಅಮೆರಿಕದಲ್ಲಿ ಆಗುವುದು ಅವುಗಳ ಅಸೆಂಬಲ್ ಮಾತ್ರ, ಬಿಡಿ ಭಾಗಗಳ ಉತ್ಪಞಸದನೆ ಅಮೆರಿಕದಲ್ಲಿ ಆದರೆ ಅದರ ವೆಚ್ಚ, ನೌಕಕರ ಸಂಬಳ ಸಾರಿಗೆಯನ್ನು ಕಂಪನಿಗಳು ಪೂರೈಸಲಾರವು, ಹೀಗಾಗಿ ಕಂಪನಿಗಳು ಭಾರತದಲ್ಲೇ ಉಳಿದವು, ಉದಾಹರಣೆಗೆ ಟೆಸ್ಲಾ ಕಾರು ಅಮೆರಿಕದ ಬ್ರಾಂಡ್ ಹೊತ್ತಿದ್ದರೂ ಅದರ ಎಲ್ಲ ಭಾಗಗಳ ತಯಾರಿಕೆ ಭಾರತದಲ್ಲೇ ಆಗುತ್ತದೆ, ಇದರ ತಳ ಬುಡ ತಿಳಿಯದ ಟ್ರಂಪ್ ಅವಿವೇಕತನದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾನೆ, ಇದನ್ನು ಪ್ರಶ್ನಿಸಿಯೇ ಮಸ್ಕ್ ಟ್ರಂಪನ ಸಹವಾಸ ಬಿಟ್ಟದ್ದು. ಒಂದು ರೀತಿಯಲ್ಲಿ ಆ ಅವಿವೇಕಿಯ ನಿರ್ಧಾರದಿಂದ ಉಳಿದ ದೇಶಗಳಿಗೆ ಒಳಿತೇ ಆಗುತ್ತಿದೆ ಅನ್ನಿ. ಭಾರತವಂತೂ ದೇಸೀ ಉತ್ಪನ್ನ ಬಳಸುವ ಸ್ವದೇಶೀ ಅಭಿಯಾನಕ್ಕೆ ಹೆಚ್ಚಿನ ಗಮನ ಕೊಡುವಂತಾಗಿ ಆರ್ಥಿಕತೆಯನ್ನು ವೇಗವಾಗಿ ಬೆಳೆಸುತ್ತಿದೆ, ಉಳಿದ ದೇಶಗಳು ಈ ಹುಚ್ಚನ ನಿರ್ಧಾರಕ್ಕೆ ಬೇಸತ್ತು ದೂರ ಹೋಗುತ್ತಿವೆ, ಇದರ ಫಲವಾಗಿ ಅಮೆರಿಕದ ಆರ್ಥಿಕತೆ ಕುಸಿಯುತ್ತ ಸದ್ಯದಲ್ಲೇ ಅದು ದಿವಾಳಿ ಆಗದಿದ್ದರೂ ಸರ್ವ ಪತನದ ಅಂಚಿಗೆ ಬರುವಂತಾಗಿದೆ. ಈಗಾಗಲೇ ಅದು ಪತನದ ಹಾದಿ ಹಿಡಿದಿದೆ ಅನ್ನುತ್ತಾರೆ ತಜ್ಞರು, ಮೂರ್ಖ ಟ್ರಂಪ್ ಗೆ ಇವೆಲ್ಲ ಅರ್ಥವಾಗುತ್ತಿಲ್ಲ, ಅಮೆರಿಕದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಿದೆ, ಸದ್ಯ ಅದರ ಬೆಲೆ ಒಂದೂವರೆ ಪಟ್ಟು ಏರಿದೆ ಅಬ್ಬಲಾಗುತ್ತಿದೆ, ಹೀಗಾದರೆ ಅಮೆರಿಕದ ಅರ್ಥ ವ್ಯವಸ್ಥೆಯ ಪತನವನ್ನು ತಡೆಯಲಾಗದು ಎಂದು ಜೆಪಿ ಮಾರ್ಗನ್ ಸಂಸ್ಥೆ ಎಚ್ಚರಿಸಿದೆ. ಹಾಳಾಗಿ ಹೋಗಲಿ, ಮೂರ್ಖರೆಲ್ಲ ಅಂತಿಮವಾಗಿ ಕಾಣುವ ತಾಣವನ್ನೇ ಟ್ರಂಪ್ ಆಯ್ಕೆ ಮಾಡಿಕೊಂಡಿದ್ದಾನೆ, ಅವನಿಗೆ ಅದರಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ. ಬೇಕಾದರೆ ಆತ ನಮ್ಮಲ್ಲೂ ಇರುವ ಅವನ ಕಟ್ಟಾ ಅಭಿಮಾನಿಗಳನ್ನೂ ಜೊತೆಗೆ ತೆಗೆದುಕೊಂಡು ಹೋಗಲಿ.
Sunday, 3 August 2025
ಒಂದು ಸಂಗ್ರಹಯೋಗ್ಯ ಕೃತಿ
ಇದನ್ನು ಹಿರಿಯ ಸಾಹಿತ್ಯ, ಸಂಗೀತ ಪ್ರಿಯರಾದ ಶ್ರೀ ರಘುಪತಿ ತಮನ್ ಕರ್ ಮತ್ತು ಹಿರಿಯ ಪತ್ರಕರ್ತ ಗಣೇಶ ಅಮೀನಗಢ ಅವರು ಸಂಕಲಿಸಿಕೊಟ್ಟಿದ್ದಾರೆ. ಇದರಲ್ಲಿ ಸಂಕಲಿತವಾದ ೩೫ಕ್ಕೂ ಹೆಚ್ಚಿನ ಅಧ್ಯಾಯಗಳು ಕೃತಿಯ ಓದಿಗೆ ಪೂರಕವಾಗಿ ಒಬ್ಬರೇ ಬರೆದ ಲೇಖನಗಳಂತೆ ಓದಿಸಿಕೊಳ್ಳುತ್ತವೆ. ತಾರಾನಾಥರ ಬದುಕು ಮತ್ತ ಸರೋದ್ ಜೊತೆಯಾದ ಬಗೆಯನ್ನು ಬಣ್ಣಿಸುತ್ತವೆ. ಪ್ರತೀ ಅಧ್ಯಾಯದ ಶೀರ್ಷಿಕೆಗಳು ಕಾವ್ಯಾತ್ಮಕವಾಗಿದ್ದು ಮನ ಸೆಳರಯುತ್ತವೆ.
ಇದರಲ್ಲಿ ಕನ್ನಡದ ಹಿರಿ ಕಿರಿಯ ಲೇಖಕರು ಬರೆದ ಲೇಖನಗಳ ಸಂಕಲನವಿದೆ, ಹಿರಿಯರಾದ ಚಂದ್ರಶೇಖರ ಕಂಬಾರ, ರಹಮತ್ ತರೀಕೆರೆ, ನ. ರತ್ನ, ಜಯಂತ್ ಕಾಯ್ಕಿಣಿ, ಗಿರೀಶ್ ಕಾಸರವಳ್ಳಿ, ಕಿರಿಯರಾದ ಶ್ರೀದೇವಿ ಕಳಸದ, ಕತೆಗಾರ್ತಿ ಸುಮಂಗಲಾ ಅವರು ಸಂಕಲಿಸಿ, ರಚಿಸಿದ ತಾರಾನಾಥರನ್ನು ಕುರಿತ ಕೃತಿ ಭಾಗಗಳು. ಮಾತುಕತೆಗಳ ಸಂದರ್ಶನಗಳ ರೂಪದಲ್ಲಿ ದಾಖಲಾಗಿದೆ. ಪ್ರಶ್ನೆಗಳ ಪುನರುಕ್ತಿ ಇದರಲ್ಲಿ ಸಹಜವಾಗಿ ಸೇರಿದೆ, ಒಬ್ಬ ವ್ಯಕ್ತಿಯನ್ನೇ ಕುರಿತು ಹಲವರು ಪಡೆದ ಒಂದೇ ಬಗೆಯ ಪ್ರಶ್ನೆಗಳಲ್ಲಿ ಇದು ಸಹಜ. ಆದರೆ ಇಲ್ಲಿರುವ ಮಾಹಿತಿಗಳ ವಿವರ ಭಿನ್ನವಾಗಿದೆ. ತಮಗೆ ಸಂಗೀತ ಜೀವವಿದ್ದಂತೆ, ಅದೊಂದು ಬಗೆಯ ತುರಿಸು ಅನ್ನುತ್ತಾರೆ.ಅದನ್ನು ಬಿಟ್ಟು ಇರಲಾಗದು ಎಂಬುದು ಅವರ ಅಂಬೋಣ. ಅದೇ ರೀತಿ ಅವರು ತಮ್ಮ ಜೀವನದ ಕೊನೆಯ ಕ್ಷಣದವರೆಗೆ ಸರೋದ್ ನಲ್ಲೇ ಮುಳುಗಿದ್ದರು. ಈ ಕೃತಿಯನ್ನು ಹಾಗೂ ಇಲ್ಲಿನ ಲೇಖನಗಳನ್ನು ಸಂಕಲಿಸಲು ಸಂಪಾದಕರಾದ ಗಣೇಶ್ ಅಮೀನಗಢ ಹಾಗೂ ರಘುಪತಿ ತಮನ್ ಕರ್ ಅವರು ಬಹಳ ಎಚ್ಚರಿಕೆಯಿಂದ ಲೇಖನಗಳ ಆಯ್ಕೆ ಮಾಡಿ ಇವುಗಳಲ್ಲಿ ಒಂದು ಏಕಸೂತ್ರ ಇರುವಂತಾಗಿದೆ. ಭಿನ್ನ ಲೇಖಕರು ವಿವಿಧ ಸಂದರ್ಭಗಳಲ್ಲಿ ಬರೆದ ವಿವಿಧ ಬಿಡಿ ಲೇಖನಗಳನ್ನು ಒಗ್ಗೂಡಿಸಿ ಒಂದೇ ಸೂತ್ರದಲ್ಲಿರುವಂತೆ ಮಾಡುವುದು ಸುಲಭವಲ್ಲ, ಈ ಕಷ್ಟವನ್ನು ಸಂಪಾದಕರು ತೆಗೆದುಕೊಂಡು ಯಶಸ್ಸು ಸಾಧಿಸಿದ್ದಾರೆ. ಈ ಸಂಕಲನದಿಂದ ರಾಜೀವ್ ತಾರಾನಾಥರ ಜೀವನ ವೈವಿಧ್ಯ ಓದುಗರಿಗೆ ಲಭಿಸುತ್ತದೆ. ಇದನ್ನು ಓದಿದಾಗ ಒಂದು ಆನೆಯನ್ನು ಬೇರೆ ಬೇರೆ ಕೋನದಿಂದ ನೋಡಿದಾಗ ಅನಿಸುವ ಭಾವದಂತಿರುತ್ತದೆ. ಒಂದು ರೀತಿಯಲ್ಲಿ ಇದು ಸಾಮಾನ್ಯ ಓದುಗರಿಗೆ ಮಾತ್ರವಲ್ಲ, ಸ್ವತಃ ಸಂಗೀತಗಾರರಿಗೆ, ಸಂಗೀತ ಪ್ರಿಯರಿಗೆ ಆಕರದಂತಿದೆ. ರಾಜೀವರ ಜೀವನದ ಖಾಸಗಿ ವಿವತರಗಳ ಜೊತೆಗೆ ಅವರ ಸಂಗೀತ ಯಾತ್ರೆಯ ಸಾಧನೆಯನ್ನೂ ಚಿತ್ರಿಸುತ್ತ ಹೋಗುತ್ತದೆ, ಸುಮ್ಮನೇ ರಾಜೀವರು ಎಲ್ಲಿ ಹುಟ್ಟಿದರು, ಎಲ್ಲಿ ಉದ್ಯೋಗ ಮಾಡಿದರು, ಮದುವೆ ಯಾರೊಂದಿಗೆ ಆಯ್ತು, ಮನೆ ಎಲ್ಲಿ, ಯಾವ ಪ್ರಶಸ್ತಿ ಪಡೆದರು ಇತ್ಯಾದಿ ಕೇವಲ ಒಣ ಮಾಹಿತಿಗಳಿಗೆ ಈ ಕೃತಿ ಮೀಸಲಾಗಿಲ್ಲ, ಬದಲಾಗಿ ಅವರ ಸಂಗೀತಯಾನವನ್ನು ಚಿತ್ರಿಸುವಲ್ಲಿ ಹೆಚ್ಚಿನ ಗಮನ ನೀಡಿದೆ, ರಾಜೀವರು ತಮ್ಮ ಪ್ರೀತಿಯ ಇಂಗ್ಲಿಷ್ ಅಧ್ಯಾಪಕ ವೃತ್ತಿಯ ಜೊತೆ ಸಂಗೀತಯಾನವನ್ನು ಸರಿದೂಗಿಸಿಕೊಳ್ಳಲು ಎಷ್ಟು ಪರಿಶ್ರಮ ಪಟ್ಟರು, ಸಂಗೀತ ಕಲಿಯಲು ಏನೆಲ್ಲ ಶ್ರಮ ಪಡಬೇಕಾಯಿತು ಎಂಬುದು ಇಲ್ಲಿ ಕಣ್ಣಿಗೆ ಕಟ್ಟಿದಂತೆ ಚಿತ್ರಿತವಾಗಿದೆ, ರಾಜೀವರ ಗುರು ಉಸ್ತಾದ್ ಅಲಿ ಅಕ್ಬರ್ ಖಾನ್. ಆದರೆ ಅವರ ತಂದೆ ತಾರಾನಾಥರು ವೈದ್ಯದಲ್ಲಿ ಮಾತ್ರವಲ್ಲ, ಸಂಗೀತದಲ್ಲೂ ಪಂಡಿತರಾಗಿದ್ದರು, ಅವರೇ ರಾಜೀವರಿಗೆ ಆರಂಭದಲ್ಲಿ ಸಂಗೀತ ಕಲಿಸಿದರು. ಮೊದಲು ಸಂಗೀತ ಹಾಡುಗಾರಿಕೆಗೆ ತೊಡಗಿದ್ದ ರಾಜೀವರು ನಿಧಾನವಾಗಿ ಸರೋದ್ ವಾದನದ ಕಡೆ ತಿರುಗಿದರು, ಸರೋದ್ ನುಡಿಸುವಾಗಲೂ ಅವರು ನಡುನಡುವೆ ಆ ರಾಗವನ್ನು ಗುನುಗುತ್ತಿದ್ದರು. ಒಂಬತ್ತು ವರ್ಷವಿದ್ದಾಗ ಮೊದಲ ಕಚೇರಿ ನೀಡಿದರು. ಇಪ್ಪತ್ತು ವರ್ಷಸವರೆಗೆ ಅಖಿಲ ಭಾರತೀಯ ಆಕಾಶವಾಣಿಯಲ್ಲಿ ಹಾಡುತ್ತಿದ್ದರು. ಅವರ ಸಂಗೀತದ ಆಸಕ್ತಿ ಎಷ್ಟಿತ್ತು ಎಂದರೆ ಅವರ ಸಾಹಿತ್ಯದ ಸೆಳೆತವೂ ಅಷ್ಟೇ ಗಾಢವಾದುದು, ತಿರುಚರಾಪಲ್ಲಿಯ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿದ್ದರೂ ಪಿ.ಎಚ್.ಡಿ. ಪದವಿ ಪಡೆದಿದ್ದರೂ ಅದನ್ನು ನಡುವೆ ಕೈಬಿಟ್ಟು ಸಂಗೀತಕ್ಕೆ ಜೀವನವನ್ನು ಒಡ್ಡಿಕೊಂಡರು. ಅವರ ಸಂಗೀತ ಸಾಧನೆಯ ಆಸಕ್ತಿ ಯಾವ ಪ್ರಮಾಣದ್ದು ಅಂದರೆ ಗುರು ಅಲಿ ಖಾನರು ೨೦೦೯ರಲ್ಲಿ ನಿಧನರಾಗುವವರೆಗೆ ಅವರ ಬಳಿ ಕಲಿಯುತ್ತಲೇ ಇದ್ದರು, ಕಲಿಕೆಗೆ ಕೊನೆ ಇಲ್ಲ ಎಂಬುದನ್ನು ತಮ್ಮ ಸಾವಿನವೆರೆಗೂ ತೋರಿಸಿದವರು ರಾಜೀವರು, ಅವರಿಗೆ ಸಂಗೀತ ಮತ್ತು ಸಾಹಿತ್ಯಗಳೆರಡರ ಒಡನಾಟದಿಂದ ಎರಡೂ ಕ್ಷೇತ್ರದ ದಿಗ್ಗಜರ ಸ್ನೇಹ, ಒಡನಾಟ ಲಭಿಸಿತ್ತು. ರಾಜೀವರು ಕೊನೆಯ ದಿನಗಳವರೆಗೂ ಸಂಗೀತ ಕಲಿಕೆ ಬಿಟ್ಟವರಲ್ಲ, ಗುರುತ್ವ ಇರುವಲ್ಲೆಲ್ಲ ಹುಡುಕಿ ಹೋಗಿ ಕಲಿಯುತ್ತಿದ್ದರು ಹಾಗಾಗಿ ಅವರು ಪಂಡಿತ್ ರವಿಶಂಕರ್, ಅನ್ನಪೂರ್ಣದೇವಿ, ನಿಖಿಲ್ ಬ್ಯಾಮರ್ಜಿ ಹಾಗೂ ಅಶಿಶ್ ಖಾನ್ ಅವರಿಂದ ಸತತ ಪಾಠ ಹೇಳಿಸಿಕೊಂಡರು, ಇದು ಅವರ ವಿಶೇಷ ಗುಣ. ಇದರಿಂದ ಸಾಮಾನ್ಯರಾದ ನಾವು ಕಲಿಯುವುದಿದೆ. ತಾರಾನಾಥರಂಥವರು ಕಲಿಕೆಗೆ ಕೊಟ್ಟ ಮಹತ್ವ ನಮಗೆ ಮಾದರಿ. ಇದು ಅವರ ನಯವಿನಯಗಳಿಗೆ ಕಾರಣವಾಯ್ತು. ಇಂಥ ಕಲಿಕೆಯೇ ಜೀವನ ಸಂಗೀತಯಾನದಲ್ಲಿ ಸಾಧಿಸಿದ ರಾಜೀವರ ಜೀವನ ಯಾನವನ್ನು ಇಲ್ಲಿ ಸಂಪಾದಕರು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ, ಓದುಗರ ಮನಕ್ಕೆ ಇದನ್ನು ತಲುಪಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಬೇರೆ ಯಾವುದೇ ಕ್ಷೇತ್ರಗಳಿಗಿಂತಲೂ ಸಂಗೀತ ಕ್ಷೇತ್ರದಲ್ಲಿ ಇಂದಿಗೂ ಶಾಸ್ತ್ರೀಯ ರೀತಿಯಲ್ಲಿ ಪಡೆಯುವ ಅವಕಾಶವಿದೆ, ನಮ್ಮ ಸಂಪ್ರದಾಯದಲ್ಲಿ ಕಲಿಯುವ ರೀತಿಯೇ ಭಿನ್ನ, ಅದು ಇಂದಿನ ಆಧುನಿಕ ಶಿಕ್ಷಣ ಕ್ರಮದಂತೆ ತರಗತಿಯಲ್ಲಿ ಕಲಿಯಯುವುದಲ್ಲ, ಶಿಷ್ಯನ ಆಸಕ್ತಿ, ಗುರುವಿನ ಮನೋಭಾವಗಳು ಕೂಡಿ ತಾಳ ಮೇಳ ಸಂಭವಿಸಿದಾಗ ಅಲ್ಲಿ ಕಲಿಕೆ ಘಟಿಸುತ್ತದೆ. ಅಂಥ ಅಪರೂಪದ ಘಟನೆ ನಡೆದಾಗ ಒಬ್ಬ ಅಸಾಧಾರಣ ಸಂಗೀತಗಾರನ ಉದಯವಾಗುತ್ತದೆ, ರಾಜೀವರಸರೋದ್ ವಾದಕನ ಸಂಭವವಾದುದೂ ಹೀಗೆಯೇ.
ಒಟ್ಟಿನಲ್ಲಿ ಯಾವುದೇ ಕ್ಷೇತ್ರದ ಸಾಧಕರ ಜೀವನ ಚರಿತ್ರೆಯನ್ನು ರಚಿಸುವಾಗ ಅನುಸರಿಸಬೇಕಾದ ಮಾನದಂಡ ಏನೆಂದರೆ ಅವರ ವೈಯಕ್ತಿಕ ಬದುಕಿನ ಘಟನೆಗಳನ್ನು ಬರೀ ದಾಖಲಿಸುವುದಷ್ಟೇ ಅಲ್ಲ, ಅವರ ಸಾಧನೆಯ ಹಾದಿ ಹೇಗಿತ್ತು ಎಂಬುದನ್ನು ಎಳೆ ಎಳೆಯಾಗಿ ಚಿತ್ರಿಸುವುದು, ಈ ಕೆಲಸವನ್ನು ಪ್ರಸ್ತುತ ಕೃತಿ ಸಾರ್ಥಕವಾಗಿ ಮಾಡಿದೆ. ಸಂಗೀತದ ಗುರು ಪರಂಪರೆಗೆ ಯಾವುದೇ ಜಾತಿ ಮತ್ತೊಂದರ ಭೇದವಿಲ್ಲ. ಅಲ್ಲಿ ಬೇಕಾದುದು ಸಮಾನ ಆಸಕ್ತಿ, ಶ್ರದ್ಧೆ ಮಾತ್ರ. ಇದು ರಾಜೀವರಿಗೆ ಗುರುಗಳಾಗಿದ್ದ ಅಕ್ಬರ್ ಅಲಿಖಾನ್ ಹಾಗೂ ಅನ್ನಪೂರ್ಣ ಇಬ್ಬರಲ್ಲೂ ನೋಡಬಹುದು, ಈ ಕಾರಣಕ್ಕಾಗಿ ಈ ಗುರುಪರಂಪರೆ ಶ್ರೇಷ್ಠವಾಗುಳಿದಿದೆ, ಅದರ ಚಿತ್ರಣ ಈ ಕೃತಿಯಲ್ಲಿ ಎದ್ದು ಕಾಣುತ್ತದೆ.
ಈ ಕಾರಣಕ್ಕಾಗಿ ಕನ್ನಡದಲ್ಲಿ ಹೊರಬಂದ ಸಾಧಕರ ಜೀವನ ಚಿತ್ರಣ ಕೃತಿಯಲ್ಲಿ ಇದು ಗಮನಾರ್ಹವಾಗಿದೆ. ಈ ದೃಷ್ಟಿಯಿಂದ ಇದು ಅಕ್ಷರ ಬಲ್ಲ ಎಲ್ಲ ಕನ್ನಡಿಗರ ಬಳಿ ಇರಬೇಕಾದ ಸಂಗ್ರಹಯೋಗ್ಯ ಕೃತಿಯಾಗಿದೆ. ಇದನ್ನು ಆಗುಮಾಡಿದ ಸಂಪಾದಕ ದ್ವಯರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸಬೇಕಿದೆ. ಗಮನಿಸಬೇಕಾದ ಸಂಗತಿ ಎಂದರೆ ೨೦೨೧ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ ಮತ್ತೆ ೨೦೨೨ರಲ್ಲಿ ಎರಡನೆಯ ಮುದ್ರಣವನ್ನು ಕಂಡಿರುವುದು, ಕನ್ನಡಿಗರು ಪ್ರೀತಿಯಿಂದ ಇದನ್ನು ಬರಮಾಡಿಕೊಂಡಿದ್ದಾರೆಂಬುದಕ್ಕೆ ಇದು ಸಾಕ್ಷಿ.
ಕೃತಿ ವಿವರ -
ಸರೋದ್ ಸ್ವರಯಾನ, ಗಣೇಶ್ ಅಮೀನಗಢ ಮತ್ತು ರಘುಪತಿ ತಾಮನ್ ಕರ್(ಸಂಪಾದಕರು) ೨೦೨೩, ಕವಿತಾ ಪ್ರಕಾಶನ, ಮೈಸೂರು, ಎರಡನೆಯ ಮುದ್ರಣ-೨೦೨೨
ಪುಟಗಳು-೧೯೮, ೭೦ ಜಿ ಎಸ್ ಎಂ,ಎನ್ ಎಸ್ ಮ್ಯಾಪ್ಲಿತೋ, ಬೆಲೆ, ರೂ-೩೦೦ ಆಕಾರ-ಕ್ರೌನ್ ೧/೪
ಸಂಪರ್ಕ- ೯೮೮೦೧೦೫೫೩೬











